Tag: KC Narayana Gowda

  • ದೋಸ್ತಿ ಕಾರ್ಯಕರ್ತರ ನಡುವೆ ಕ್ರೆಡಿಟ್ ಫೈಟ್

    ದೋಸ್ತಿ ಕಾರ್ಯಕರ್ತರ ನಡುವೆ ಕ್ರೆಡಿಟ್ ಫೈಟ್

    ಮಂಡ್ಯ: ಕಳೆದ ಹಲವು ದಿನಗಳಿಂದ ಒಂದಲ್ಲ ಒಂದು ಕಾರಣಕ್ಕೆ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹಾಗೂ ರಾಜ್ಯ ಕೃಷಿ ಸಚಿವ ಚಲುವರಾಯಸ್ವಾಮಿ ನಡುವೆ ಟಾಕ್‌ಫೈಟ್ ನಡೆಯುತ್ತಲೆ ಇದೆ.

    ಮುಂದುವರಿದು ಅಭಿವೃದ್ಧಿ ಕಾರ್ಯಕ್ರಮಗಳ ಕ್ರೆಡಿಟ್ ಪಡೆಯಲು ಪೈಪೋಟಿಗೆ ಬಿದ್ದಿದ್ದ ಉಭಯ ನಾಯಕರು ಶ್ರೀರಂಗಪಟ್ಟಣ-ಜೇವರ್ಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಎರಡೆರಡು ಬಾರಿ ಗುದ್ದಲಿ ಪೂಜೆ ಮಾಡಿ ಸುದ್ದಿಯಾಗಿದ್ರು. ಆದ್ರೀಗ ಕ್ರೆಡಿಟ್ ವಾರ್ ಮೈತ್ರಿ ನಾಯಕರು ನಡುವೆ ಶುರುವಾಗಿದ್ದು. ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿಸುವ ವಿಚಾರದಲ್ಲಿ ಮಾಜಿ ಸಚಿವ ಕೆ.ಸಿ ನಾರಾಯಣಗೌಡ (KC Narayanagowda) ಹಾಗೂ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಬೆಂಬಲಿಗರೂ ಜಟಾಪಟಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ: ರಾಹುಲ್‌ ಗಾಂಧಿ

    ಅಂದಹಾಗೇ ಕೆಸಿಎನ್ ಹಾಗೂ ಹೆಚ್‌ಡಿಕೆ ಬೆಂಬಲಿಗರ ನಡುವಿನ ಈ ಕ್ರೆಡಿಟ್ ಫೈಟ್‌ಗೆ ಕಾರಣವಾಗಿರೋದು ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿ. ಈ ರಾಜ್ಯ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಹೆಚ್‌.ಡಿ ಕುಮಾರಸ್ವಾಮಿ ಮನವಿ ಸಲ್ಲಿಸಿದ್ರು. ಈ ಬಗ್ಗೆ ಜೆಡಿಎಸ್ ಸೋಷಿಯಲ್ ಮೀಡಿಯಾಗಳಲ್ಲೂ ಪೋಸ್ಟ್ ಹಾಕಲಾಗಿತ್ತು. ಇದರಿಂದ ಕೆರಳಿ ಕೆಂಡವಾದ ಕೆ.ಸಿ ನಾರಾಯಣಗೌಡ ಬೆಂಬಲಿಗರು, ಹೆಚ್ಡಿಕೆಗೂ ಮೊದಲೆ ಹೆದ್ದಾರಿ ಅಭಿವೃದ್ಧಿಗೆ ನಾರಾಯಣಗೌಡರು ನಿತಿನ್ ಗಡ್ಕರಿ ಬಳಿ ಚರ್ಚಿಸಿದ್ದಾರೆ. ಭಾರತ್ ಮಾಲಾ ಯೋಜನೆಯಡಿ ಶ್ರೀರಂಗಪಟ್ಟಣ-ಅರಸೀಕೆರೆ ರಸ್ತೆಯನ್ನ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ನೋಂದಣಿ ಸಹ ಆಗಿದೆ. ಹೆದ್ದಾರಿ ಅಭಿವೃದ್ಧಿ ವಿಚಾರದಲ್ಲಿ ನಾರಾಯಣಗೌಡರ ಪಾತ್ರ ಮಹತ್ವದ್ದಾಗಿದೆ ಎಂದು ಈ ಹಿಂದೆ ನಾರಾಯಣಗೌಡರು ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ್ದ ದಾಖಲೆ ಬಿಡುಗಡೆ ಮಾಡಿದ್ದಾರೆ.

    ಒಟ್ಟಾರೆ ಅಭಿವೃದ್ಧಿ ಕಾರ್ಯಕ್ರಮಗಳ ಕ್ರೆಡಿಟ್ ಪಡೆಯಲು ಮಂಡ್ಯದ ಜನಪ್ರತಿನಿಧಿಗಳು ತಾ ಮುಂದು ನಾ ಮುಂದು ಎನ್ನುತ್ತಿದ್ದು. ಮಂಡ್ಯ ಜನ ಮಾತ್ರ ಯಾರಾದ್ರು ಹೆಸರು ತಗೋಳ್ಳಿ ಅಭಿವೃದ್ಧಿ ಮಾಡಿ ಅಂತಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್‌

  • ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಥಾಮಸ್ ಕಪ್ ಚಾಂಪಿಯನ್ಸ್ ಟೀಂನಲ್ಲಿದ್ದ ಬೆಂಗಳೂರಿನ ಲಕ್ಷ್ಯ ಸೇನ್‌ಗೆ ರಾಜ್ಯ ಸರ್ಕಾರದ ಗೌರವ

    ಬೆಂಗಳೂರು: ಇದೇ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅಭಿನಂದನೆ ಸಲ್ಲಿಸಿದ್ದಾರೆ.

    KCN

    14 ಬಾರಿ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಮಣಿಸಿರುವ ಭಾರತ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ತಂಡದಲ್ಲಿ ಬೆಂಗಳೂರಿನ ಆಟಗಾರ ಇರುವುದು ಕರ್ನಾಟಕಕ್ಕೆ ಮತ್ತಷ್ಟು ಹೆಮ್ಮೆ ತರಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸದ್ಯ ಬೆಂಗಳೂರಿನ ದ್ರಾವಿಡ್ ಪಡುಕೊಣೆ ಸ್ಪೋರ್ಟ್ಸ್ ಸೆಂಟರ್‌ನಲ್ಲಿ ಲಕ್ಷ್ಯ ಸೇನ್ ತರಬೇತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಥಾಮಸ್ ಕಪ್ ಗೆದ್ದ ಭಾರತ ತಂಡದೊಂದಿಗೆ ಇಡೀ ದೇಶವೇ ಸಂಭ್ರಮಿಸಿದೆ: ಮೋದಿ

    THOMAS (1)

    ಭಾರತದ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯವಾಗಿದ್ದು, ಈ ಐತಿಹಾಸಿಕ ಗೆಲುವು ನಮ್ಮ ದೇಶದ ಯುವಜನತೆಗೆ ಸ್ಫೂರ್ತಿ ನೀಡಲಿದೆ. ಭಾರತದ ಗೆಲುವಿಗೆ ತಮ್ಮದೇ ಕೊಡುಗೆ ನೀಡಿರುವ ಬೆಂಗಳೂರಿನ ಲಕ್ಷ್ಯ ಸೇನ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ಲಕ್ಷ್ಯ ಸೇನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮಂಡ್ಯದಲ್ಲಿ ಆಪರೇಷನ್ ಕಮಲದ ಸುಳಿವು ಕೊಟ್ಟ ನಾರಾಯಣಗೌಡ

    ಮಂಡ್ಯದಲ್ಲಿ ಆಪರೇಷನ್ ಕಮಲದ ಸುಳಿವು ಕೊಟ್ಟ ನಾರಾಯಣಗೌಡ

    ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಸಂಪೂರ್ಣ ಕಮಲ ಅರಳಿಸಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಆಪರೇಷನ್ ಕಮಲದ ಕಾರ್ಯಾಚರಣೆ ಬಗ್ಗೆ ಬಿಜೆಪಿ ನಾಯಕರು ಮತ್ತಷ್ಟು ಸುಳಿವು ಬಿಟ್ಟುಕೊಟ್ಟಿದ್ದಾರೆ.

    ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾತಾಡಿದ ಸಚಿವ ಕೆ.ಸಿ.ನಾರಾಯಣಗೌಡ, ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ರೂಪುರೇಷೆಯ ಒಂದು ಝಲಕ್ ಬಹಿರಂಗಗೊಳಿಸಿದರು. ಇದನ್ನೂ ಓದಿ: ಕೊಡಗಿನ ದುಬಾರೆಯಲ್ಲಿ ಪ್ರವಾಸಿ ಬಾಲಕ ಸಾವು

    NARAYANAGOWDA
    ಸಾಂದರ್ಭಿಕ ಚಿತ್ರ

    3ರಷ್ಟು ಜನ ಬರ್ತಾರೆ: ಹಳೇ ಮೈಸೂರು ಭಾಗದಲ್ಲಿರೋ ನಾಯಕರನ್ನ ಬಿಜೆಪಿಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಮ್ಮ ಪಕ್ಷದ ನಿರ್ಧಾರವಾಗಿದೆ. ಹಳೆ ಮೈಸೂರು ಭಾಗದಲ್ಲಿ ಕೆಲವು ಶಾಸಕರನ್ನ ಪಕ್ಷಕ್ಕೆ ಕರೆ ತರ್ತೀವಿ. ಮಂಡ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕರಾಗಿ 4-5 ಜನರನ್ನು ಹಾಗೂ ಸಂಸದನಾಗಿ ಒಬ್ಬರನ್ನು ಗೆಲ್ಲಿಸುತ್ತೇವೆ. ಈಗ ಬಿಜೆಪಿಗೆ ನಾವು 17 ಜನ ಬಂದಿದೀವಿ. ನಾವು 17 ಜನರಲ್ಲಿ ಯಾರೂ ವಾಪಸ್ ಹೋಗುವ ಪ್ರಮೇಯ ಇಲ್ಲ. ಇದರ ಮೂರರಷ್ಟು ಜನರನ್ನು ಬಿಜೆಪಿಗೆ ಕರೆತರ್ತೇವೆ. ಕೆಲವರು 6 ತಿಂಗಳಲ್ಲಿ ಬರ್ತಾರೆ, ಕೆಲವರು ನಿಧಾನವಾಗಿ ಬರ್ತಾರೆ ಅಂತ ಸಚಿವ ನಾರಾಯಣ ಗೌಡ ತಿಳಿಸಿದರು. ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ – ಸೌಮ್ಯಾಗೆ 13 ದಿನ ಪೊಲೀಸ್ ಕಸ್ಟಡಿ

    narayanagowda

    ಈಗಲೇ ಹೆಸರು ಹೇಳಲ್ಲ: ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದೇ ಫೈನಲ್ ಆಗಿರಲಿದೆ. ನಮ್ಮ ಜೊತೆ ಹಲವರು ಸಂಪರ್ಕದಲ್ಲಿ ಇದ್ದಾರೆ, ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಯಾರೆಲ್ಲ ಬರ್ತಾರೆ, ಎಷ್ಟು ಜನ ಬರ್ತಾರೆ ಅಂತ ನಾನು ಈಗಲೇ ಹೇಳಲಾಗುವುದಿಲ್ಲ. ನಮ್ಮ ಪಕ್ಷ 140 ರಿಂದ 150 ಸ್ಥಾನ ಗೆದ್ದೇ ಗೆಲ್ಲುತ್ತದೆ. ನಾನು ಈಗ ಪಕ್ಷಕ್ಕೆ ಬರೋರ ಹೆಸರು ಹೇಳಿದ್ರೆ, ಅವರ ಪಕ್ಷದವರು ಅವರಿಗೆ ನಿದ್ದೆ ಮಾಡೋಕೆ ಬಿಡಲ್ಲ. ಹಾಗಾಗಿ ನಾನು ಪಕ್ಷ ಸೇರೋರ ಹೆಸರು ಹೇಳಲ್ಲ ಎಂದು ಹೇಳಿದರು.

  • ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪ ಕಾರಣ: ನಾರಾಯಣ ಗೌಡ

    ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪ ಕಾರಣ: ನಾರಾಯಣ ಗೌಡ

    ಮಂಡ್ಯ: ಜಿಲ್ಲೆಯಲ್ಲಿ ನಿಖಿಲ್ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ ಎಂದು ಸಚಿವ ಕೆ.ಸಿ ನಾರಾಯಣ ಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

    ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಸಿಂಧಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಬಗ್ಗೆ ಗೌರವ ಇದೆ, ಅವರು ಸುಮ್ಮನೆ ಮಾತಾಡೋದು ತಪ್ಪು. ನಿಖಿಲ್ ಚಿಕ್ಕ ರಾಜಕಾರಣಿ ಅವರು, ಕುಮಾರಸ್ವಾಮಿ ಸುಪುತ್ರ. ಪ್ರತಿಯೊಂದು ಮಾಹಿತಿ ಪಡೆದು ಮಾತನಾಡಬೇಕು ಎಂದರು.

    ಒಂದೂವರೆ ವರ್ಷ ಸರ್ಕಾರ ಇದ್ದಂತಹ ಸಂದರ್ಭದಲ್ಲಿ ಅವರ ದೊಡ್ಡಪ್ಪನೇ ಎನರ್ಜಿ ಮಿನಿಸ್ಟರ್ ಆಗಿದ್ದರು. ಸಾವಿರಾರು ಸಬ್ ಸ್ಟೇಷನ್ ಕೊಟ್ಟಿದ್ದೇವೆ ಅಂತ ಹೇಳುತ್ತಿದ್ದಾರೆ . ಕೆ.ಆರ್.ಪೇಟೆಗೆ ಒಂದೇ ಒಂದು ಕೊಟ್ಟಿದ್ದಾರಾ..? ಒಂದೇ ಒಂದು ತೋರಿಸಲಿ ಎನರ್ಜಿ ಮಿನಿಸ್ಟರ್ ಆಗಿ ಎಂದು ಸವಾಲೆಸೆದರು. ಇದನ್ನೂ ಓದಿ: ಮೈಸೂರು ವಿವಿಯಿಂದ ಪುನೀತ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್

    ಚನ್ನರಾಯಪಟ್ಟಣ ತಾಲೂಕು- ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ಅನುದಾನ ಹಾಕೊಂಡಿದ್ದಾರೆ. ನಮ್ಮ ತಾಲೂಕಿಗೆ ಎಷ್ಟು ಕೊಟ್ಟಿದ್ದಾರೆ ಅವರ ದೊಡ್ಡಪ್ಪನ್ನೇ ಕೇಳಲಿ ಫಸ್ಟ್. ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡಪ್ಪನನ್ನ ಕೇಳಲಿ, ಇಲ್ಲ ಮಾಹಿತಿ ಹಕ್ಕಿನಲ್ಲಿ ಕೇಳಲಿ. ಅವರಿಗೆ ವಿಷಯ ಗೊತ್ತಿಲ್ಲ ಪಾಪ. ಅವರ ದೊಡ್ಡಪ್ಪ ಬಂದ ಅನುದಾನವನ್ನ ಹಾಸನಕ್ಕೆ ಹಾಕೊಂಡ್ರು. ಮಂಡ್ಯನ ಖಾಲಿ ಬಿಟ್ರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತಾಯಿಗಾಗಿ ಔಷಧಿ ಹುಡುಕುತ್ತಾ ಹೊರಟ ಮಗಳು- ರಷ್ಯಾ ದಾಳಿಗೆ ಬಲಿ

    ನಿಖಿಲ್ ಕುಮಾರಸ್ವಾಮಿ ಸೋಲಬೇಕಾದ್ರೆ ಕೆಲಸಗಳು ಕಾರಣ. ಕುಮಾರಸ್ವಾಮಿ ಖಾಲಿ ಪೇಪರ್ ನಲ್ಲಿ ಹೇಳ್ಕೊಂಡು ಬಂದ್ರು, ಇಷ್ಟು ಸಾವಿರ ಕೋಟಿ ಕೊಡ್ತೀವಿ ಅಂತ. ರೇವಣ್ಣ ಅವರು ಲೆಟರ್ ಹೆಡ್ ನಲ್ಲಿ ಹಣ ಹೊಡ್ಕೊಂಡು ಹೋಗಿ ಅವರ ಜಿಲ್ಲೆ ಅಭಿವೃದ್ಧಿ ಮಾಡ್ಕೊಂಡ್ರು. ಅಲ್ಲಿ ಅವರ ಮಗನ ಗೆಲ್ಲಿಸಿಕೊಂಡ್ರು, ನಿಖಿಲ್ ನ ಸೋಲಿಸಿದ್ರು. ಅದಕ್ಕಿಂತ ಪಾಠ ಬೇಕಾ ನಮ್ಮ ನಿಖಿಲ್ ಕುಮಾರಣ್ಣಂಗೆ. ನಿಖಿಲ್ ಸ್ವಲ್ಪ ತಿಳಿದುಕೊಂಡು ಮಾತನಾಡಲಿ ಎಂದು ಸಲಹೆಯಿತ್ತರು.

  • ‘ಫಸಲ್ ಭೀಮಾ ಯೋಜನೆ’ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ: ಕೆ.ಸಿ.ನಾರಾಯಣಗೌಡ

    ‘ಫಸಲ್ ಭೀಮಾ ಯೋಜನೆ’ ಲಾಭ ಹೆಚ್ಚಿನ ರೈತರಿಗೆ ದೊರೆಯಲು ಕ್ರಮ ಕೈಗೊಳ್ಳಿ: ಕೆ.ಸಿ.ನಾರಾಯಣಗೌಡ

    ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಪ್ರಯೋಜನೆ ಪಡೆಯುತ್ತಿರುವ ರೈತರ ಸಂಖ್ಯೆ ಕಡಿಮೆಯಿದ್ದು, ಎಲ್ಲ ರೈತರು ಇದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

    ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಬ್ಯಾಂಕ್‍ನಲ್ಲಿ 96 ಸಾವಿರಕ್ಕೂ ಅಧಿಕ ರೈತರು ಖಾತೆಯನ್ನು ಹೊಂದಿದ್ದರೂ, ಫಸಲ್ ಭೀಮಾ ಯೋಜನೆಯಡಿ ನೋಂದಾಯಿಸಿರುವ ರೈತರ ಸಂಖ್ಯೆ ಕೇವಲ 19 ಸಾವಿರ ಮಾತ್ರ. ಬೆಳೆ ಹಾನಿ ಸಂಭವಿಸಿದ ಸಂದರ್ಭದಲ್ಲಿ ವಿಮಾ ಹಣವನ್ನು ನೀಡುವ ಈ ಮಹತ್ವದ ಯೋಜನೆ ಬಗ್ಗೆ ರೈತರಿಗೆ ಮಾಹಿತಿಯನ್ನು ಒದಗಿಸಿ, ಯೋಜನೆಯ ಲಾಭವನ್ನು ಹೆಚ್ಚಿನ ರೈತರು ಪಡೆಯುವಂತೆ ಮನವೊಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:  ತುಂಗಾಭದ್ರಾ ಆರತಿಯಿಂದ ಹರಿಹರದ ಗತವೈಭವ ಮರಳಿ ಪಡೆಯುವ ಗುರಿ: ವಚನಾನಂದ ಸ್ವಾಮೀಜಿ

    ರೈತರಿಗೆ ನೀಡಲಾಗುತ್ತಿರುವ ಬೆಂಬಲ ಬೆಲೆಯ ಸಂಪೂರ್ಣ ಲಾಭ ರೈತರಿಗೆ ದೊರೆಯುವಂತೆ ನೋಡಿಕೊಳ್ಳಬೇಕು. ಮಧ್ಯವರ್ತಿ ವ್ಯಾಪಾರಿಗಳಿಗೆ ಇದರ ಪ್ರಯೋಜನ ಪಡೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು. ರೈತರು ಭತ್ತವನ್ನು ಪಕ್ಕದ ಜಿಲ್ಲೆಯ ಅಕ್ಕಿ ಗಿರಣಿಗಳಿಗೆ ಸಾಗಾಣಿಕೆ ಮಾಡಿದ್ದಲ್ಲಿ, ಅದಕ್ಕೆ ತಗಲುವ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುತ್ತಿದ್ದು, ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಕಳೆದ ಮುಂಗಾರು ಹಂಗಾಮಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆಹಾನಿ ಸಂಭವಿಸಿರುವ ಪ್ರಕರಣಕ್ಕೆ ಹೆಚ್ಚಿನ ಪರಿಹಾರವನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ತಾಲೂಕುವಾರು ಬೆಳೆಹಾನಿ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದರು.

    ಬಿಎಸ್​ವೈ ಸೈನ್ಯ ಸೇರಲಿರೋ ಕೆ.ಸಿ.ನಾರಾಯಣಗೌಡ ಹಿನ್ನೆಲೆ

    ಸಭೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕರಾದ ಕುಮಾರ ಬಂಗಾರಪ್ಪ, ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಬೋಜೇಗೌಡ, ಡಿ.ಎಸ್.ಅರುಣ್, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಜಿ.ಪಂ.ಸಿಇಒ ಎಂ.ಎಲ್.ವೈಶಾಲಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ:  ಪಂಜಾಬ್ ಚುನಾವಣೆಗೂ ಮುನ್ನಾ ದಿನ 12,430 ಹೊಸ ಸ್ಮಾರ್ಟ್ ತರಗತಿ ಉದ್ಘಾಟಿಸಿದ ಕೇಜ್ರಿವಾಲ್

  • ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    ಅನರ್ಹ ಶಾಸಕ ನಾರಾಯಣಗೌಡರನ್ನ ಹಾಡಿ ಹೊಗಳಿದ ಬಿಎಸ್‍ವೈ

    – ನಾರಾಯಣಗೌಡ ಸಜ್ಜನ, ಪ್ರಾಮಾಣಿಕ ವ್ಯಕ್ತಿ

    ಮಂಡ್ಯ: ಕೆ.ಆರ್.ಪೇಟೆಯಲ್ಲಿ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಡಿ ಹೊಗಳಿದ್ದಾರೆ.

    ಕೆ.ಆರ್.ಪೇಟೆಯ ಕೆಪಿಎಸ್ ಶಾಲೆಯ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉಚಿತ ಆರೋಗ್ಯ ಮೇಳ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಆರ್.ಅಶೋಕ್, ಸಂಸದೆ ಸುಮಲತಾ, ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಭಾಗವಹಿಸಿದ್ದರು. ಸಿಎಂ ಯಡಿಯೂರಪ್ಪ ಅವರು ತಮ್ಮ ಭಾಷಣದಲ್ಲಿ ನಾರಾಯಣಗೌಡ ಅವರ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ರಾಜೀನಾಮೆ ಕೊಡೋಕೆ ಹೇಳಿದ್ದೇ ಬಿಎಸ್‌ವೈ- ಸ್ಫೋಟಕ ರಹಸ್ಯ ಬಿಚ್ಚಿಟ್ಟ ನಾರಾಯಣಗೌಡ

    ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ನಾನು ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಬರುವ ಹಾಗೆ ಇರಲಿಲ್ಲ. ಆದರೆ ಕೆ.ಸಿ.ನಾರಾಯಣಗೌಡ ಅವರಿಗೆ ಭರವಸೆ ನೀಡಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅನೇಕ ಶಾಸಕರನ್ನು, ಮುಖಂಡರನ್ನು ನೋಡಿದ್ದೇನೆ. ಆದರೆ ನಾರಾಯಣಗೌಡ ಅವರಂತಹ ಸಜ್ಜನ, ಪ್ರಾಮಾಣಿಕ ವ್ಯಕ್ತಿ ರಾಜಕೀಯ ಕ್ಷೇತ್ರದಲ್ಲಿ ಸಿಗುವುದು ಅಪರೂಪ. ಇಂತಹ ವ್ಯಕ್ತಿಯನ್ನು ನಿಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ರಿ. ಆದರೆ ಬೇರೆ ಕಾರಣಗಳಿಗೆ ವ್ಯತ್ಯಾಸಗಳಾಗಿರಬಹುದು. ಮುಂಬರುವ ದಿನಗಳಲ್ಲೂ ಇವರಿಗೆ ನೀವು ಆಶೀರ್ವಾದ ಮಾಡಬೇಕು ಎಂದು ಮತದಾರರಿಗೆ ಮನವಿ ಮಾಡಿಕೊಂಡರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಾರಾಯಣಗೌಡ ಕಂಕಣ ತೊಟ್ಟಿದ್ದಾರೆ. ಕೆಆರ್ ಪೇಟೆ ಅಭಿವೃದ್ಧಿಗೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡಿದ್ದಾರೆ. ಈ ಬಗ್ಗೆ ಮಂತ್ರಿ ಮಂಡಲದಲ್ಲಿ ಚರ್ಚೆ ಮಾಡುತ್ತೇನೆ. ಏನು ಮಾಡಲು ಸಾಧ್ಯವೋ ಎಲ್ಲವನ್ನೂ ನಾನು ಮಾಡಲು ಸಿದ್ಧ ಎಂದು ಭರವಸೆ ನೀಡಿದರು.

    ಬಳಿಕ ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಆಯಿತು, ಈಗ ಕೆಆರ್ ಪೇಟೆಗೆ ಆಗಬೇಕು. ನಿಮ್ಮ ತಂದೆ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಕೊಡಬೇಕು ಎಂದು ಸಿಎಂಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಿದರು.

  • ಸಂಸದೆ ಸುಮಲತಾ ಮುಂದೆ ಅಳಲು ತೋಡಿಕೊಂಡ ಜೆಡಿಎಸ್ ಅನರ್ಹ ಶಾಸಕ

    ಸಂಸದೆ ಸುಮಲತಾ ಮುಂದೆ ಅಳಲು ತೋಡಿಕೊಂಡ ಜೆಡಿಎಸ್ ಅನರ್ಹ ಶಾಸಕ

    ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರನ್ನು ಜೆಡಿಎಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಭೇಟಿಯಾಗಿದ್ದು, ಅವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ನಾರಾಯಣಗೌಡ ಅವರು ಸುಮಲತಾ ಅವರನ್ನು ಗುರುವಾರ ಮಂಡ್ಯದ ಕೆಆರ್‍ಎಸ್‍ನ ಖಾಸಗಿ ಹೋಟೆಲ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ 1996 ರ ಕೆ.ಆರ್.ಪೇಟೆ ಉಪ ಚುನಾವಣೆ ಸನ್ನಿವೇಶವನ್ನು ಪ್ರಸ್ತಾಪಿಸಿ ಜೆಡಿಎಸ್ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

    1996 ರಲ್ಲಿ ಕೆ.ಆರ್.ಪೇಟೆ ಶಾಸಕರಾಗಿದ್ದ ಕೃಷ್ಣ ಲೋಕಸಭೆಗೆ ಹೋದ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು. ಆಗ ಜವರಾಯಿಗೌಡ ಎಂಬವರಿಗೆ ದೇವೇಗೌಡರು ಟಿಕೆಟ್ ಕೊಟ್ಟಿದ್ದರು. ಬಿ.ಪ್ರಕಾಶ್ ಜನತಾದಳದ ಬಂಡಾಯ ಅಭ್ಯರ್ಥಿ ಆಗಿ ಸ್ಪರ್ಧಿಸಿದ್ದರು. ಆದರೆ ದಳಪತಿಗಳು ಬಿ.ಪ್ರಕಾಶ್‍ಗೆ ಚುನಾವಣೆಯಲ್ಲಿ ಸಪೋರ್ಟ್ ಮಾಡಿ ಟಿಕೆಟ್ ಕೊಟ್ಟಿದ್ದ ಜವರಾಯಿಗೌಡರನ್ನು ಸೋಲಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಟ್ಟು ಜೆಡಿಎಸ್ ನವರು ನನ್ನ ಸೋಲಿಸಲು ಹುನ್ನಾರ ನಡೆಸಿದ್ದರು. ಆದರೆ ದೇವರ ಆಶೀರ್ವಾದ ಇತ್ತು, ಹೀಗಾಗಿ ನಾನು ಗೆದ್ದೆ ಎಂದು ಸಂಸದೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಒಂದು ವೇಳೆ ನಾರಾಯಣಗೌಡ ಬಿಜೆಪಿ ಅಭ್ಯರ್ಥಿ ಆದರೆ ಅವರ ಪರ ಸುಮಲತಾ ಚುನಾವಣೆಯಲ್ಲಿ ಪ್ರಚಾರ ಮಾಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೆ.ಆರ್.ಪೇಟೆ ರಾಜಕೀಯ ಕಥೆಯನ್ನ ನಾರಾಯಣಗೌಡ ಸುಮಲತಾ ಜೊತೆ ಚರ್ಚಿಸಿದ್ದಾರೆ.

  • ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮಂಡ್ಯ: ಮೈತ್ರಿ ಸರ್ಕಾರ ಅಂತ್ಯ ಆಗುವುದು ಪಕ್ಕಾ. ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಭವಿಷ್ಯ ನುಡಿದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಪಕ್ಷದಲ್ಲಿ 125 ಶಾಸಕರು ಇರೋ ಹಾಗೇ ಸರ್ಕಾರ ನಡೆಸಲು ಮುಂದಾಗಿದ್ದು ತಪ್ಪು. ಹೆಚ್ಚು ಶಾಸಕರಿರುವ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳದೇ ಆಡಳಿತ ನಡೆಸಿದ್ದಕ್ಕೆ ಸಿಟ್ಟಾಗಿ ನಮ್ಮ ಶಾಸಕರು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಸಹವಾಸ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.

    ಕೆ.ಆರ್ ಪೇಟೆ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ನಾರಾಯಣಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಆತ ಮಾರಾಟವಾಗಿದ್ದಾನೆ. ಕುಣಿಯಲಾರದ ವೇಶ್ಯೆ ನೆಲ ಡೊಂಕು ಎಂಬಂತೆ ನಾರಾಯಣಗೌಡ ಮಾತನಾಡ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.

    ನಾನು ಈ ಹಿಂದೆಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ಅವನು ಪಕ್ಷ ಬಿಡುತ್ತಾನೆ ಎಂದು ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಆತ ಹಣ ಮಾಡಲು ಕೆ.ಆರ್ ಪೇಟೆಗೆ ಬಂದಿದ್ದ. ಮುಖ್ಯಮಂತ್ರಿ ಹಾಗೂ ಬಿಜೆಪಿ ಅವರ ಹತ್ತಿರ ಹಣ ಮಾಡಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾನೆ. ಆತ ಮತ್ತೆ ರಾಜಕೀಯಕ್ಕೆ ಬರಲ್ಲ ಮುಂಬೈನಲ್ಲೇ ನೆಲೆಯಾಗುತ್ತಾನೆ. ಕೆ.ಸಿ.ನಾರಾಯಣಗೌಡ ಒಬ್ಬ ನಾಯಿ. ನನ್ನ ಒಂದು ಕೂದಲಿಗೂ ಆತ ಸಮವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆಯಿಂದ ಚುನಾವಣೆಗೆ ಸ್ಪರ್ಧೆ ವಿಚಾರ ಕೇಳಿದಾಗ, ಹಾಗಾದರೆ ಮಂಡ್ಯದಲ್ಲಿ ಬಂದ ಫಲಿತಾಂಶ ಕೆ.ಆರ್ ಪೇಟೆಯಲ್ಲಿ ರಿಪೀಟ್ ಆಗುತ್ತೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಲಿ. ನಿಖಿಲ್ ಬೇಕಂದರೆ ಹಾಸನದಲ್ಲಿ ಹೋಗಿ ಸ್ಪರ್ಧೆ ಮಾಡಲಿ ಎಂದು ಹೇಳಿದರು.