ಗುರುವಾರ ಪತಿಯೊಂದಿಗೆ ಗರ್ಭಿಣಿ ಮಹಿಳೆ ಕೆ.ಸಿ.ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ತೆಗೆದುಕೊಳ್ಳಲು ಬಂದಿದ್ದಳು. ಈ ವೇಳೆ ಆಧಾರ್ ಕಾರ್ಡ್ ಪರಿಶೀಲನೆ ಮಾಡಿದಾಗ ಮಹಿಳೆಯ ವಯಸ್ಸು 18 ವರ್ಷ, 20 ದಿನ ಎಂದು ಗೊತ್ತಾಗಿದೆ. ಆದರೆ ಮಹಿಳೆ ಈಗ 4 ತಿಂಗಳ ಗರ್ಭಿಣಿಯಾಗಿದ್ದು, 18 ವರ್ಷಕ್ಕೂ ಮುಂಚೆಯೇ ಮದುವೆ ಮಾಡಿರುವುದಾಗಿ ತಿಳಿದುಬಂದಿದೆ.
ಇದರಿಂದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯರು ಶೇಷಾದ್ರಿಪುರಂ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಧ್ಯಾಹ್ನ 2 ಗಂಟೆಗೆ ಪತಿ, ಪತ್ನಿಯನ್ನ ಪೊಲೀಸರು ಶೇಷಾದ್ರಿಪುರಂ ಠಾಣೆಗೆ ಕರೆತಂದಿದ್ದಾರೆ. ನಿಯಮಗಳ ಪ್ರಕಾರ ಸಂಜೆ 6 ಗಂಟೆಯೊಳಗೆ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆದರೆ ರಾತ್ರಿ 10 ಗಂಟೆವರೆಗೆ ಗರ್ಭಿಣಿಯನ್ನು ಠಾಣೆಯಲ್ಲಿಯೇ ಇರಿಸಿಕೊಂಡು ಅಮಾನವೀಯತೆ ಮೆರೆದಿದ್ದಾರೆ. ಬಳಿಕ ಠಾಣೆಯ ಬಳಿ ಮಾಧ್ಯಮದವರು ಬಂದ ನಂತರ ಮಹಿಳೆಯನ್ನು ಸಖಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ.ಇದನ್ನೂ ಓದಿ: ಡೈವ್ ಮಾಡೋ ರೀಲ್ಸ್ ಹುಚ್ಚಿಗೆ ವೈದ್ಯೆ ಬಲಿ – ತುಂಗಭದ್ರಾ ನದಿಪಾಲಾಗಿದ್ದ ಯುವತಿಯ ಶವ ಪತ್ತೆ
– 5 ತಿಂಗಳ 38 ಲಕ್ಷ ಕರೆಂಟ್ ಬಿಲ್ ಬಾಕಿ – ಸರ್ಕಾರಿ ಆಸ್ಪತ್ರೆಗಳ ಬಿಲ್ ಕಟ್ಟದಷ್ಟು ಸರ್ಕಾರದ ಬೊಕ್ಕಸದಲ್ಲಿ ದುಡ್ಡು ಇಲ್ವಾ?
ಬೆಂಗಳೂರು: ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತೇವೆ ಎಂದು ರಾಜ್ಯದ ಮುಖ್ಯಮಂತ್ರಿಗಳು, ಸಚಿವರು ಸಾಲು ಸಾಲು ಭಾಷಣ ಮಾಡುತ್ತಾರೆ. ಆಸ್ಪತ್ರೆಗಳ (Hospital) ನಿರ್ವಹಣೆಗೆ ಎಂದು ಕೋಟಿ ಕೋಟಿ ದುಡ್ಡು ಮೀಸಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ ಆಸ್ಪತ್ರೆಗಳ ನಿರ್ವಹಣೆ ಮಾಡುವುದರಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಬೆಂಗಳೂರು (Bengaluru) ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಕೆಸಿ ಜನರಲ್ (KC General Hospital).
ಮಲ್ಲೇಶ್ವರಂನಲ್ಲಿ ಇರುವ ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ (BESCOM) ಪವರ್ ಕಟ್ ಮಾಡುವ ಶಾಕಿಂಗ್ ನೋಟಿಸ್ ನೀಡಿದೆ. ಕಳೆದ 3-4 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 38 ಲಕ್ಷ ರೂ. ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳ ಕರೆಂಟ್ ಬಿಲ್ ಕಟ್ಟದಷ್ಟು ಸರ್ಕಾರದ ಬೊಕ್ಕಸ ಖಾಲಿಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.
ಈ ಕರೆಂಟ್ ಬಿಲ್ ಪಾವತಿ ಮಾಡದೇ ಇರಲು ಕಾರಣ ಸರ್ಕಾರದಿಂದ ಅನುದಾನ ಬರದೇ ಇರುವುದು. ಸರ್ಕಾರದಿಂದ ಅನುದಾನ ಬರುತಿತ್ತು. ಆದರೆ ಈಗ ಕೆಲ ತಿಂಗಳಿಂದ ಬಂದಿಲ್ಲ. ಹೀಗಾಗಿ ಬಿಲ್ ಬಾಕಿ ಇದೆ. ಅನುದಾನ ಕೊಡಿ ಎಂದು ಪತ್ರ ಬರೆದಿದ್ದೆವೆ. ಆರೋಗ್ಯ ಇಲಾಖೆಯ ನಿರ್ದೇಶನಾಲಯದಿಂದ ಅನುದಾನ ಬಂದ ತಕ್ಷಣವೇ ನಾವು ವಿದ್ಯುತ್ ಬಿಲ್ ಅನ್ನು ಕಟ್ಟುತ್ತೆವೆ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಫೆ.6 ರಂದು ಮತ್ತೆ ರಾಜ್ಯಕ್ಕೆ ಮೋದಿ – ಎಲ್ಲಿ ಏನು ಕಾರ್ಯಕ್ರಮ?
ಒಟ್ಟಾರೆ ಆರೋಗ್ಯ ಸೇವೆಗೆ ಅಷ್ಟು ದುಡ್ಡು ಮೀಸಲಿಟ್ಟಿದ್ದೇವೆ, ಇಷ್ಟು ದುಡ್ಡು ಮೀಸಲಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸರ್ಕಾರ ಆಸ್ಪತ್ರೆಗಳಿಗೆ ಅನುದಾನ ಬಿಡುಗಡೆ ಮಾಡದೇ ಇರುವುದು ನಿಜಕ್ಕೂ ನಾಚಿಗೇಡಿನ ಸಂಗತಿ. ವರದಿ ಬಳಿಕವಾದರೂ ಎಚ್ಚೆತ್ತು ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳ ವಿದ್ಯುತ್ ಬಿಲ್ ಬಾಕಿಯನ್ನು ಕ್ಲಿಯರ್ ಮಾಡಿ ರೋಗಿಗಳಿಗೆ ಬೆಳಕಾಗುತ್ತಾ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಮಾರ್ಗಕ್ಕೆ ಸಿಗದ ಅನುಮತಿ
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ‘ವಾಣಿ ವಿಲಾಸ’ ಮಾದರಿಯಲ್ಲೇ ತಾಯಿ-ಶಿಶು ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ನಿರ್ಮಾಣ್ ಹಾಗೂ ಓಪನ್ ಟೆಕ್ಸ್ಟ್ ನೆರವಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಐಸಿಯು ಉನ್ನತೀಕರಣ ಹಾಗೂ ಹೊಸ ವೈದ್ಯಕೀಯ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡು ಮಾತನಾಡಿದರು. ಈ ವೇಳೆ ಅವರು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ತಾಯಿ-ಶಿಶು ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಇದನ್ನು ‘ವಾಣಿ ವಿಲಾಸ’ ಮಾದರಿಯಲ್ಲಿ ನಿರ್ಮಿಸಲಾಗುವುದು. ಈಗಾಗಲೇ ಆಯವ್ಯಯದಲ್ಲಿ ಘೋಷಿಸಿದಂತೆ, ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲಿ ಕನಿಷ್ಠ 500 ಹಾಸಿಗೆ ಸಾಮಥ್ರ್ಯ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲಾಗುತ್ತದೆ. ಈ ವರ್ಷದಲ್ಲೇ ಎಲ್ಲ ಪ್ರಸ್ತಾವಗಳು ಬರಲಿದ್ದು, ಜಾಗಗಳನ್ನು ಗುರುತಿಸಲಾಗುವುದು. ಶೀಘ್ರದಲ್ಲೇ ಶಿಲಾನ್ಯಾಸ ನೆರವೇರಲಿದೆ ಎಂದರು. ಇದನ್ನೂ ಓದಿ: ನಾಲ್ಕನೇ ಅಲೆ ಬಂದಿಲ್ಲ, ಪ್ರಕರಣ ಹೆಚ್ಚಳದಿಂದ ಮುನ್ನೆಚ್ಚರಿಕೆ ಅಗತ್ಯ: ಸುಧಾಕರ್
ಖಾಸಗಿ ಸಂಸ್ಥೆಗಳು ಕೆ.ಸಿ.ಜನರಲ್‍ನಲ್ಲಿ 10 ಹಾಸಿಗೆಗಳ ಐಸಿಯು ವ್ಯವಸ್ಥೆಯನ್ನು ಮಾಡಿಕೊಟ್ಟಿವೆ. ಜೊತೆಗೆ ಅದಕ್ಕೆ ಬೇಕಿರುವ ಉಪರಣಗಳನ್ನೂ ನೀಡಲಾಗಿದೆ. 5 ವರ್ಷದೊಳಗಿನ ಮಕ್ಕಳು ನ್ಯುಮೋನಿಯಾದಿಂದ ಸಾವಿಗೀಡಾಗುವುದನ್ನು ತಪ್ಪಿಸಲು ರಾಜ್ಯಮಟ್ಟದ ಅರಿವು ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತೆಯರು, ಇತರೆ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ. ಇದು ಶ್ಲಾಘನೀಯವಾಗಿದೆ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಬೇಟಿ ಬಚಾವೊ, ಬೇಟಿ ಪಡಾವೊ(ಹೆಣ್ಣು ಮಕ್ಕಳನ್ನು ಉಳಿಸಿ, ಓದಿಸಿ) ಎಂದು ಘೋಷಿಸಿ ಹೆಣ್ಣುಮಕ್ಕಳ ರಕ್ಷಣೆಗೆ ಒತ್ತು ನೀಡಿದ್ದಾರೆ. ಇದೇ ರೀತಿ ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುವುದನ್ನು ತಡೆಯಲು ಕಠಿಣ ಕಾನೂನು ಜಾರಿಯಲ್ಲಿದೆ. ಹೊಸ ಎನ್‍ಟಿಪಿ ಕಾನೂನಿನಲ್ಲಿ, ಆಪತ್ತು ಇರುವ ತಾಯಂದಿರು ಹಾಗೂ ಆರೋಗ್ಯಕರವಾಗಿ ಬೆಳೆಯದ ಭ್ರೂಣಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಗರ್ಭಪಾತ ಮಾಡಲು ಅವಕಾಶವಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.
ದೇಶದಲ್ಲಿ ಒಂದೂವರೆ ಲಕ್ಷದಷ್ಟು ಮಕ್ಕಳು 5 ವರ್ಷದೊಳಗೆ ನ್ಯುಮೋನಿಯಾಗೆ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ 1,000 ಶಿಶು ಜನನದಲ್ಲಿ 28 ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತಿವೆ. ಇದನ್ನು ನಾಲ್ಕು, ಐದಕ್ಕೆ ಇಳಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಗುರಿ ನೀಡಿದೆ. ಇದಕ್ಕಾಗಿ ಹೆಚ್ಚು ಅರಿವು ತರುವ ಕಾರ್ಯಕ್ರಮ ನಡೆಯಬೇಕಿದೆ. ಮುನ್ನೆಚ್ಚರಿಕೆಯಿಂದಲೇ ಅನೇಕ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ. ಮಕ್ಕಳ ಆರೋಗ್ಯ ರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದು ಕರೆಕೊಟ್ಟರು. ಇದನ್ನೂ ಓದಿ: ಕೋವಿಡ್ ಉಲ್ಬಣದಿಂದ ದೆಹಲಿಯಲ್ಲಿ ಶಾಲೆಗಳು ಬಂದ್? – ತಜ್ಞರ ಸಮಿತಿಯ ಸಲಹೆಗಳೇನು?
ಕೆ.ಸಿ.ಜನರಲ್‍ಗೆ ಉತ್ತಮ ಬದಲಾವಣೆ ಬೇಕಿದೆ. ಕೆ.ಸಿ.ಜನರಲ್ ಆಸ್ಪತ್ರೆ ನಗರದ ಹೃದಯಭಾಗದಲ್ಲಿದ್ದು, ಉತ್ತಮ ಆಸ್ಪತ್ರೆಯಾಗಿದೆ. ಇಲ್ಲಿಗೆ ಬರುವ ರೋಗಿಗಳನ್ನು ಮನೆಯವರಂತೆ ಆರೈಕೆ ಮಾಡುವ ಅಗತ್ಯವಿದೆ. ಆದರೆ ಅಂತಹ ನಿರೀಕ್ಷಿತ ಬದಲಾವಣೆ ಈ ಆಸ್ಪತ್ರೆಯಲ್ಲಿ ಕಂಡುಬಂದಿಲ್ಲ. ಜಯದೇವ, ವಾಣಿ ವಿಲಾಸ ಮೊದಲಾದ ಆಸ್ಪತ್ರೆಗಳಲ್ಲಿ ಖಾಸಗಿಗಿಂತ ಹೆಚ್ಚು ಗುಣಮಟ್ಟದ ಸೇವೆ ದೊರೆಯುತ್ತಿದೆ. ಇದೇ ರೀತಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲೂ ಏಕೆ ಸೇವೆ ದೊರೆಯುತ್ತಿಲ್ಲವೆಂದು ಚಿಂತಿಸಬೇಕಿದೆ ಎಂದರು.
ಆಸ್ಪತ್ರೆಯ ಎಲ್ಲರೂ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಬೇಕು. ಆಸ್ಪತ್ರೆಯ ಸಂಪೂರ್ಣ ವ್ಯವಸ್ಥೆಯನ್ನು ನಿರ್ವಹಣೆ ಮಾಡುವವರು ಉತ್ತಮವಾಗಿ ಕೆಲಸ ಮಾಡಬೇಕು. ಒಳ್ಳೆಯ ಸೇವೆ ನೀಡಿದರೆ ಜನರಿಗೆ ಒಳ್ಳೆಯದಾಗುತ್ತದೆ. ಇದರಿಂದ ಸರ್ಕಾರಕ್ಕೂ ಹೆಸರು ಬರುತ್ತದೆ ಎಂದು ಕಿವಿಮಾತು ಹೇಳಿದರು.
ಬೆಂಗಳೂರು: ಎಲ್ಲ ಬಗೆಯ ಮಾಧ್ಯಮಗಳ ಪ್ರತಿನಿಧಿಗಳು, ಪತ್ರಿಕೆಗಳ ವಿತರಕರು, ಕೇಬಲ್ ಆಪರೇಟರ್ ಗಳು ಸೇರಿ ವಿವಿಧ ವರ್ಗಗಳ ಮುಂಚೂಣಿ ಕಾರ್ಯಕರ್ತರು-ಆದ್ಯತಾ ಗುಂಪಿನ ಜನರಿಗೆ ವ್ಯಾಕ್ಸಿನ್ ನೀಡುವ ಅಭಿಯಾನಕ್ಕೆ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ಚಾಲನೆ ನೀಡಿದರು.
ನಗರದ ಮಲ್ಲೇಶ್ವರ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಈ ಲಸಿಕೆ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಈಗಾಗಲೇ ಫ್ರಂಟ್ ಲೈನ್ ಕಾರ್ಯಕರ್ತರಿಗೆ ಅದರಲ್ಲೂ ಮುಖ್ಯವಾಗಿ ಟೆಲಿಕಾಂ, ಇಂಟರ್ನೆಟ್ ಸಂಪರ್ಕ ಕಲ್ಪಿಸುವ ಸಿಬ್ಬಂದಿಯ ಜೊತೆಗೆ ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಸಿಬ್ಬಂದಿಗೆ ಕೇಂದ್ರದ ಮಾರ್ಗಸೂಚಿಯಂತೆ ಈ ಲಸಿಕೆ ಕೊಡಲಾಗುತ್ತಿದೆ ಎಂದರು.
ಇವರೆಲ್ಲರೂ ಜನರ ಸಂಪರ್ಕದಲ್ಲಿ ಹೆಚ್ಚು ಇರುತ್ತಾರೆ. ಹೀಗಾಗಿ ಇವರಿಗೆ ಸೋಂಕಿನ ಅಪಾಯ ಹೆಚ್ಚು. ಆದ್ದರಿಂದ ಆದ್ಯತೆಯ ಮೇಲೆ ಇವರೆಲ್ಲರಿಗೂ ಲಸಿಕೆ ಕೊಡಲಾಗುತ್ತಿದೆ. ರಾಜ್ಯಾದ್ಯಂತ ಈ ಗುಂಪಿಗೆ ಲಸಿಕಾ ಅಭಿಯಾನ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಇದನ್ನು ಓದಿ: ರಾಯಚೂರಿನಲ್ಲಿ 20 ಕೆ.ಎಲ್ ಆಮ್ಲಜನಕ ಪ್ಲಾಂಟ್ ಆರಂಭ: ಡಿಸಿಎಂ ಚಾಲನೆ
ಈ ವೇಳೆ ಶಾಸಕ ರವಿಕುಮಾರ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವನಾಂದ ತಗಡೂರು, ಕೇಬಲ್ ಆಪರೇಟರ್ಸ್ ಸಂಘದ ರಾಮ ಪ್ರಸಾದ್ ಮುಂತಾದವರು ಉಪಸ್ಥಿತರಿದ್ದರು.
ಬೆಂಗಳೂರು: ನಗರ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಲಸಿಕೆ ಹಾಕಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಇಂದಿನಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಸಿಗಲಿದೆ ಎಂದು ಪ್ರಕಟಿಸಿದ ಬೆನ್ನಲ್ಲೇ ಒಂದೇ ಬಾರಿಗೆ 800ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ಲಗ್ಗೆ ಇಟ್ಟಿದ್ದಾರೆ.
ಕೆಲವರು ಆನ್‍ಲೈನ್ ಮೂಲಕ ನೋಂದಣಿ ಮಾಡಿದ್ದರೆ ಇನ್ನು ಕೆಲವರು ಎರಡನೇ ಡೋಸ್ ಪಡೆಯಲು ಆಸ್ಪತ್ರೆಗೆ ಸೇರಿದ್ದರು. ಬೆಳಗ್ಗಯಿಂದಲೂ ಜನ ಲಸಿಕೆ ಹಾಕಿಸಿಕೊಳ್ಳಲು ಸರದಿಯಲ್ಲಿ ನಿಂತಿದ್ದರು. ಈ ಸಾಲಿನಲ್ಲಿ 45 ವರ್ಷ ಮೇಲ್ಪಟ್ಟವರು 60 ವರ್ಷ ಮೇಲ್ಪಟ್ಟವರು ಇದ್ದರು.
ಭಾರತದಲ್ಲಿ ಹಂತ ಹಂತವಾಗಿ ವಿತರಣೆ ಆರಂಭಿಸಿದ್ದರೂ ಲಸಿಕೆಗಳ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ಜನ ಹಿಂದೇಟು ಹಾಕಿದ್ದರು. ಆರಂಭದ ದಿನಗಳಲ್ಲಿ ಲಸಿಕೆ ವಿತರಣೆಯ ಟಾರ್ಗೆಟ್ ಪೂರ್ಣಗೊಳಿಸಲು ಬಿಬಿಎಂಪಿ ಹರಸಾಹಸಪಟ್ಟಿತ್ತು.
ಜನರಿಂದ ನೀರಸ ಪ್ರತಿಕಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಏ.11 ರಿಂದ 14 ರವರೆಗೆ ದೇಶಾದ್ಯಂತ ಲಸಿಕೆ ಉತ್ಸವ ಆಯೋಜಿಸಲಾಗಿತ್ತು. ಆದರೆ ಎರಡನೇ ಅಲೆ ಸುನಾಮಿಯಂತೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನ ಈಗ ಲಸಿಕೆ ಹಾಕಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದು, ಈ ಮಧ್ಯೆ ನಟಿಮಣಿಯರಿಬ್ಬರು ಅನಾರೋಗ್ಯದ ನೆಪ ಹೇಳಿಕೊಂಡು ತನಿಖೆಗೆ ಸರಿಯಾಗಿ ಸಹಕಾರ ನೀಡದ ಹಿನ್ನೆಲೆಯಲ್ಲಿ ಈಗ ಅವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.
ಹೌದು. ರಾಗಿಣಿ ಹಾಗೂ ಸಂಜನಾಳನ್ನು ಈಗಾಗಲೇ ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈ ಮೂಲಕ ಅನಾರೋಗ್ಯ ಇದೆಯಾ ಅಥವಾ ನಟಿಮಣಿಗಳಿಬ್ಬರು ಸುಳ್ಳು ಹೇಳುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಕೆಲಸಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.
ಅರೆಸ್ಟ್ ಆದ ಸಂದರ್ಭದಲ್ಲಿ ನಡೆದ ಟೆಸ್ಟ್ ನಲ್ಲಿ ರಕ್ತದ ಮಾದರಿ ತೆಗೆದುಕೊಂಡಿಲ್ಲ. ಹೀಗಾಗಿ ಇಂದು ರಕ್ತದ ಮಾದರಿಯನ್ನ ಪಡೆಯಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೊದಲು ನಾರ್ಮಲ್ ಚೆಕಪ್ ನಡೆಸಿ ನಂತರ ರಕ್ತದ ಮಾದರಿಯನ್ನ ಪಡೆಯಲಿದ್ದಾರೆ.
ರಕ್ತದ ಮಾದರಿ ಪಡೆಯಲು ಕೋರ್ಟಿನಿಂದ ಪರ್ಮೀಷನ್ ಪಡೆಯಬೇಕು. ನಿನ್ನೆ ಕೋರ್ಟಿನಿಂದ ಪರ್ಮೀಷನ್ ಸಿಕ್ಕಿತ್ತು. ಹೀಗಾಗಿ ಇವತ್ತು ರಕ್ತದ ಸ್ಯಾಂಪಲ್ ಪಡೆಯಲು ಸಿದ್ಧತೆ ನಡೆಸಲಾಗುತ್ತಿದೆ.
ಇಬ್ಬರ ರಕ್ತದ ಮಾದರಿ ಹಾಗೂ ಯೂರಿನ್ ಸ್ಯಾಂಪಲ್ ಸಂಗ್ರಿಹಸಲಾಗುತ್ತೆ. ಇಬ್ಬರು ನಟಿ ಮಣಿಯರ ಓವರ್ ಆ್ಯಕ್ಟಿಂಗ್ ಕೂಡ ಈ ಪರೀಕ್ಷೆಗೆ ಕಾರಣ ಎಂದು ಹೇಳಲಾಗುತ್ತಿದೆ. ಯಾಕೆಂದರೆ ತನಿಖೆ ನಡೆಸುವಾಗ ಪದೇ ಪದೇ ಅನಾರೋಗ್ಯದ ನೆಪವೊಡ್ಡಿ ನಟಿಯರು ನಾಟಕವಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರ ಸಂಪೂರ್ಣ ಆರೋಗ್ಯ ತಪಾಸಣೆಗೆ ನಿರ್ಧರಿಸಿದ್ದಾರೆ.
ಪರೀಕ್ಷೆಯ ವೇಳೆ ಇಬ್ಬರ ಬಿಪಿ ನಾರ್ಮಲ್ ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂಬುವುದು ಮೂಲಗಳಿಂದ ತಿಳಿದು ಬಂದಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ ಹೆಚ್ಚಾಗಿದ್ದು, ಸೋಂಕು ತಗುಲಿದ ರೋಗಿಗಗಳ ತಪಾಸಣೆಗೆ ನಗರದ ಆಸ್ಪತ್ರೆಗಳು ಫುಲ್ ಅಲಟ್9 ಆಗಿವೆ.
ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕ 2 ವಾಡ್9 ಗಳನ್ನು ಪ್ರಾರಂಭ ಮಾಡಲಾಗಿದ್ದು, ತಜ್ಞ ವೈದ್ಯರನ್ನು ನಿಯೋಜಿಸಲಾಗಿದೆ. ಒಂದು ವಾಡ್9 ನಲ್ಲಿ ನಾಲ್ಕು ಹಾಸಿಗೆಗಳಂತೆ ಎರಡು ವಾಡ್9 ಗಳಲ್ಲಿ ಎಂಟು ಹಾಸಿಗೆಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನು ಕೋವಿಡ್- 19 ಸೋಂಕು(ಕೊರೊನಾ) ಶಂಕಿತ ಹೊರರೋಗಿಗಳ ವಿಭಾಗ ಎಂದು ವಿಂಗಡಿಸಲಾಗಿದೆ.
ಕೆಮ್ಮು, ಶೀತ, ಗಂಟಲು ನೋವು ಕಾಣಿಸಿಕೊಂಡ ರೋಗಿಗಳಿಗೆ ಪ್ರತ್ಯೇಕ ಸಾಲಿನಲ್ಲಿ ಚಿಕಿತ್ಸೆಗೆ ಅವಕಾಶ ಮಾಡಿಕೊಳ್ಳಲಾಗಿದೆ. ಈ ಸ್ಪೇಷಲ್ ವಾಡ್9 ಪಕ್ಕದಲ್ಲಿಯೇ ಜನರಲ್ ವಾಡ್9 ಇದೆ. ಈ ವಾರ್ಡ್ ಗಳಲ್ಲಿ ಮಾಸ್ಕ್ ಹಾಕಿಕೊಂಡೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ರೋಗಿಗಳಿಗೂ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಆತಂಕದಿಂದ ಆಸ್ಪತ್ರೆಗೆ ಬರುವ ಜನರಿಗೆ ಇಲ್ಲಿನ ವೈದ್ಯರು ಜಾಗೃತಿ ಮೂಡಿಸಿ ಕಳುಹಿಸುತ್ತಿದ್ದಾರೆ. ಈ ವರೆಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸೋಂಕು ತಗುಲಿದ ಪ್ರಕರಣ ಒಂದೂ ದಾಖಲಾಗಿಲ್ಲ.
ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರೋ ಬಗ್ಗೆ ವರದಿಯಾಗಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಟಿ. ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ಈ ಘಟನೆ ವಿಜಯನಗರ ಬಳಿಯ ಚೋಲೂರುಪಾಳ್ಯದಲ್ಲಿ ನಡೆದಿದೆ.
ಮಹಾಲಕ್ಷ್ಮಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ ಕರ್ನಾಟಕ ದಕ್ಷಿಣ ವಲಯದ ಅಧ್ಯಕ್ಷೆಯಾಗಿದ್ದಾರೆ. ಮಹಾಲಕ್ಷ್ಮೀ ಅವರು ತಮ್ಮ ಕಚೇರಿಯಲ್ಲಿದ್ದ ಸಂದರ್ಭದಲ್ಲಿ ನವೀನ್, ರೋಹಿತ್ ಹಾಗೂ ಮತ್ತೋರ್ವ ಅಪರಿಚಿತ ಏಕಾಏಕಿ ಕಚೇರಿಗೆ ನುಗ್ಗಿದ್ದಾರೆ. ಬಳಿಕ ಮಹಾಲಕ್ಷ್ಮೀ ಅವರ ತಲೆ, ಬೆನ್ನು ಹಾಗೂ ಕೈಗೆ ರಾಡ್ ನಿಂದ ಹಲ್ಲೆ ಮಾಡಿದ್ದಾರೆ.
ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಹಲ್ಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಮಹಿಳೆ ಕಾಂಗ್ರೆಸ್ ಜೊತೆ ಗುರ್ತಿಸಿಕೊಂಡಿದ್ದಕ್ಕೆ ಮಾಜಿ ಕಾರ್ಪೋರೇಟರ್ ರವೀಂದ್ರ ಬೆಂಬಲಿಗರು ಹಲ್ಲೆ ನಡೆಸಿರುವ ಬಗ್ಗೆ ಶಂಕಿಸಲಾಗಿದೆ.
ಘಟನೆಯ ಬಳಿಕ ಗಾಯಾಳು ಮಹಾಲಕ್ಷ್ಮೀ ಅವರನ್ನು ನಗರದ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ವಿಷಾಹಾರ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.
ಮಂಗಳವಾರ ಸಂಜೆ ಸುಮಾರು 5.30ರ ಸಮಯದಲ್ಲಿ ಮಹಿಳೆಯೊಬ್ಬರು ಶೇಷಾದ್ರಿಪುರಂನ ಸಂಜಯ್ ನಗರದಲ್ಲಿ ಕಲ್ಯಾಣ ಮಂಟಪದಲ್ಲಿ ಉಳಿದಿದ್ದ ಸ್ವೀಟ್ ಮಾರಾಟ ಮಾಡ್ತಿದ್ರು. ಇದನ್ನು ಸಂಜಯ್ ನಗರದ ನಿವಾಸಿಗಳಾದ 13 ಮಂದಿ ಚಿಕ್ಕ ಮಕ್ಕಳು ಮತ್ತು ಇಬ್ಬರು ಮಹಿಳೆಯರು ಕೊಂಡು ತಿಂದಿದ್ದಾರೆ. ತಿಂದ 1.30 ಗಂಟೆಯಲ್ಲಿ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ.
ಸುಮಾರು 8.30ಕ್ಕೆ ಅಸ್ವಸ್ಥರನ್ನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದಾಗ ಫುಡ್ ಪಾಯ್ಸನ್ ಆಗಿರೋದಾಗಿ ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದು ಭಯ ಪಡುವಂತದ್ದು ಏನಿಲ್ಲ ಅಂತಾ ಆಸ್ಪತ್ರೆಯ ವೈದ್ಯರಾದ ಮೋಹನ್ ತಿಳಿಸಿದ್ದಾರೆ.