Tag: kc general

  • ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    ಕೆಸಿ ಜನರಲ್ ಆಸ್ಪತ್ರೆ ಎಡವಟ್ಟಿನಿಂದ ಮಗು ಸಾವು- ಮಗು ಸತ್ತೋದ ಮೇಲೆ ಬಿಲ್ ಕೇಳಿದ ಆರೋಪ

    – ಸಿಜೇರಿಯನ್‍ಗೆ ವೈದ್ಯರ ವಿಳಂಬ ಆರೋಪ

    ಬೆಂಗಳೂರು: ನಗರದ ಕೆಸಿ ಜನರಲ್ (KC General) ಅಸ್ಪತ್ರೆಯ ವೈದ್ಯರ ಎಡವಟ್ಟಿನಿಂದಾಗಿ ಜಗತ್ತಿಗೆ ಬರುವ ಮುಂಚೆಯೇ ಕಂದಮ್ಮ ಕಣ್ಣು ಮುಚ್ಚಿದ ಘಟನೆಯೊಂದು ನಡೆದಿದೆ.

    ಚೊಕ್ಕಸಂದ್ರದ ದೇವಿಕಾ ಎಂಬವರಿಗೆ 9 ತಿಂಗಳು ಭರ್ತಿಯಾಗಿ 12 ದಿನದ ಬಳಿಕ ಆಸ್ಪತ್ರೆ ವೈದ್ಯರು ಡೆಲಿವರಿಗೆ ಡೇಟ್ ಕೊಟ್ಟರು. ಆದರೆ ಡೇಟ್ ಮೀರಿದೆ ಸಿಜೇರಿಯನ್ ಮಾಡಿ ಅಂತಾ ಕುಟುಂಬಸ್ಥರು ಮನವಿ ಮಾಡಿದರೂ ವೈದ್ಯರು ಒಪ್ಪದೇ ನಾರ್ಮಲ್ ಗೆ ರೆಡಿ ಮಾಡಿದ್ದಾರೆ. ಬಳಿಕ ನಾರ್ಮಲ್ ಆಗಲ್ಲ ಸಿಜೇರಿಯನ್ ಮಾಡ್ತೀವಿ ಅಂತಾ ಹೇಳಿದ್ದಾರೆ. ಕೊನೆಗೆ ಮಗು ಗಲೀಜು ನೀರು ಕುಡಿದಾಗಿದ್ದು, ಮಗು ಸತ್ತು ಹೋಗಿದೆ ಎಂದು ತಿಳಿಸಿದ್ದಾರೆ.

    ಇದಾದ ಬಳಿಕ ಆಸ್ಪತ್ರೆಯಲ್ಲಿ ಕುಟುಂಬಸ್ಥರು ಗಲಾಟೆ ನಡೆಸಿದ್ದು, ಆಕ್ರೋಶ ಹೊರಹಾಕಿ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಮಗು ಸತ್ತು ಹೋದ ಮೇಲೆಯೂ ದುಡ್ಡು ಕೊಡಿ ಎಂದು ಆಸ್ಪತ್ರೆಯವರು ಕೇಳಿದ್ದಾರೆ. ಭಾನುವಾರ 10 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿದ್ದಾರೆ. ಆದರೆ ಸಂಜೆ 7 ಗಂಟೆಯವರೆಗೆ ಆಸ್ಪತ್ರೆಯವರು ಕಾಯಿಸಿದ್ದಾರೆ. ಒಂದು ವಾರದ ಹಿಂದೆ ನಾರ್ಮಲ್ ಆಗಲ್ಲ, ಸಿಜೇರಿಯನ್ ಆಗುತ್ತೆ ಎಂದಿದ್ದರು. ಆದರೆ ನಿನ್ನೆ ಬಂದ ಬಳಿಕ ನಾರ್ಮಲ್ ಆಗುತ್ತೆ ಎಂದು ಅಸ್ಪತ್ರೆಯವರು ಹೇಳಿದ್ದಾರೆ. ಕುಟುಂಬಸ್ಥರು ದಿನ ತುಂಬಿದೆ ಕಾಯಬೇಡಿ ಅಂದ್ರೂ ಆಸ್ಪತ್ರೆಯವರು ಕೇಳಲಿಲ್ಲ ಎಂದು ದೇವಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ. ಲಂಚ ಲಂಚ ಅಂತಾ ಸಾಯ್ತಾ ಇದ್ದಾರೆ. ವೈದ್ಯರನ್ನು ಹೊರಗೆ ಕರೆಸುವಂತೆ ಗಲಾಟೆ ಮಾಡಿ ಆಕ್ರೋಶ ಹೊರಹಾಕಿದ ಕುಟುಂಬಸ್ಥರು, ಆಸ್ಪತ್ರೆಯೊಳಗೆ ನುಗ್ಗಲು ಯತ್ನಿಸಿದ್ದಾರೆ. ವೈದ್ಯರನ್ನು ಸಸ್ಪೆಂಡ್ ಮಾಡಿ ಅಂತಾ ಕಿಡಿಕಾರಿದ್ದಾರೆ.

    ಇತ್ತ ಈ ಸಂಬಂಧ ಜನರಲ್ ಮೆಡಿಕಲ್ ಆಫೀಸರ್ ಡಾ ಮೋಹನ್ ಕೆಸಿ ಪ್ರತಿಕ್ರಿಯಿಸಿ, ಡಾ. ವಿಜಯಲಕ್ಷ್ಮಿ ವೈದ್ಯೆ ಇವರನ್ನು ನೋಡುತ್ತಿದ್ರು. ಡಿಸೆಂಬರ್ 10ಕ್ಕೆ ಡೆಲಿವರಿ ಡೇಟ್ ಇತ್ತು. ಸಿಜೇರಿಯನ್ ಅಗತ್ಯವಿಲ್ಲ ಅಂತಾ ನಿರ್ಧಾರಕ್ಕೆ ಬಂದಿದ್ರು. ಆದರೆ ನಾರ್ಮಲ್ ಆಗದೇ ಇರೋದ್ರಿಂದ ಸಿಜೇರಿಯನ್ ಮಾಡಿದ್ದಾರೆ. ಹಾರ್ಟ್ ಬೀಟ್ ಕಡಿಮೆ ಇತ್ತು, ಎನ್ ಐ ಸಿಯು ಗೆ ಶಿಫ್ಟ್ ಮಾಡಿದ್ದಾರೆ. ವೈದ್ಯೆ ನನ್ನ ಕಡೆಯಿಂದ ತಪ್ಪಾಗಿಲ್ಲ ಅಂತಾ ಹೇಳಿದ್ದಾರೆ. ಆದರೆ ವೈದ್ಯೆಯ ನಿರ್ಲಕ್ಷ್ಯ ಇದ್ರೆ ಖಂಡಿತಾ ಕ್ರಮ ಕೈಗೊಳ್ಳುತ್ತೇವೆ. ಆಂತರಿಕ ತನಿಖೆ ಮಾಡುತ್ತೇವೆ. ವರದಿ ತಯಾರಿ ಮಾಡಿದ ಬಳಿಕ ಕೇಸ್ ಶೀಟ್ ತಗೊಂಡು ನಿರ್ಧಾರ ಮಾಡ್ತೇವೆ. ವೈದ್ಯರ ನಿರ್ಲಕ್ಷ್ಯ ದಾಖಲೆಯಲ್ಲಿ ಬಂದ್ರೇ ಖಂಡಿತಾ ಕ್ರಮ ತೆಗೆದುಕೊಳ್ಳುತ್ತೇವೆ. ದೂರು ಕೊಟ್ಟ ಮೇಲೆ ತನಿಖೆ ಮಾಡೇ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮಲ್ಲೇಶ್ವರ ಠಾಣೆಯಲ್ಲಿ ಕುಟುಂಬಸ್ಥರು ವೈದ್ಯೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆ!

    ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ಐಸಿಯು ವೈದ್ಯರ ಕೊರತೆ!

    ಬೆಂಗಳೂರು: ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಎದುರಾಗಿದೆ. 50 ಐಸಿಯು ಬೆಡ್ (ICU Bed) ಇದ್ದರೂ ವರ್ಕ್ ಆಗ್ತಾ ಇರೋದು ಮಾತ್ರ 20 ಅಷ್ಟೇ. ವೈದ್ಯರ ಕೊರತೆಯಿಂದ ಐಸಿಯು ಚಿಕಿತ್ಸೆ ಕಷ್ಟ ಆಗ್ತಾ ಇದೆ. ವೈದ್ಯರ ಕೊರತೆ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತರಲಾಗಿದೆ. ವೈದ್ಯರ ಕೊರತೆ ಬಗ್ಗೆ ಸರ್ಕಾರಿ ಆಸ್ಪತ್ರೆ ವೈದ್ಯರೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

    ಹೌದು. ಕೆ.ಸಿ ಜನರಲ್ ಆಸ್ಪತ್ರೆಗೆ (K.C General Hospital) ದಿನಕ್ಕೆ ಸಾವಿರಾರು ರೋಗಿಗಳು ಬರುತ್ತಾರೆ. ಬೇರೆ ಬೇರೆ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರೋದು ಬಯಲಾಗಿದೆ. ಒಟ್ಟು 50 ಐಸಿಯು ಬೆಡ್ ಇದ್ದು ಅದರಲ್ಲಿ 15 ರಿಂದ 20 ಬೆಡ್ ವರ್ಕ್ ಆಗ್ತಿದೆ. ವೆಂಟಿಲೇಟರ್ ಬೆಡ್ ಇರುವ 30 ಬೆಡ್‍ಗಳಲ್ಲಿ ಚಿಕಿತ್ಸೆ ಸರಿಯಾಗಿ ಸಿಗ್ತಿಲ್ಲ ಕಾರಣ ವೈದ್ಯರ ಕೊರತೆ. ಈ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

    ಐಸಿಯು ಪೇಷೆಂಟ್‍ಗಳ ಸಂಖ್ಯೆ ಹೆಚ್ಚಾದ್ರೆ ಸಿವಿ ರಾಮನ್ ನಗರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡುತ್ತಾರಂತೆ. ಇರುವ ಸಿಬ್ಬಂದಿಯಲ್ಲೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿ ಕೊರತೆ ಇರೋದನ್ನ ಬಹಿರಂಗವಾಗಿ ಒಪ್ಪಿಕೊಳ್ತಿದ್ದು ಸಮಸ್ಯೆ ಶೀಘ್ರದಲ್ಲೇ ಕ್ಲಿಯರ್ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ – ಉದ್ದೇಶ ಒಳ್ಳೆಯದಿದ್ದರೆ ಬೆಂಬಲ ಎಂದ ಪ್ರಶಾಂತ್ ಕಿಶೋರ್

    ಒಟ್ಟಾರೆ ಕೆಸಿ ಜನರಲ್ ಆಸ್ಪತ್ರೆ ಬೆಂಗಳೂರಿನಲ್ಲಿ ಪ್ರಮುಖ ಆಸ್ಪತ್ರೆ. ಸರ್ಕಾರ ಕೂಡಲೇ ಈ ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳನ್ನ ಸರಿಪಡಿಸುತ್ತಾ ಕಾದು ನೋಡಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕೆ.ಸಿ.ಜನರಲ್‍ನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ 50 ಹಾಸಿಗೆಗಳ ಘಟಕ ಆಗಸ್ಟ್‌ಗೆ ಆರಂಭ: ಡಿಸಿಎಂ

    ಕೆ.ಸಿ.ಜನರಲ್‍ನಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ 50 ಹಾಸಿಗೆಗಳ ಘಟಕ ಆಗಸ್ಟ್‌ಗೆ ಆರಂಭ: ಡಿಸಿಎಂ

    – ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ಆಸ್ಪತ್ರೆಗಳ ಮುಖ್ಯಸ್ಥರು

    ಬೆಂಗಳೂರು: ಪ್ರತಿಷ್ಠಿತ ಜಯದೇವ ಹೃದ್ರೋಗ ಆಸ್ಪತ್ರೆಯ ಇನ್ನೊಂದು ಘಟಕ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಥಾಪನೆಯಾಗಲಿದ್ದು, ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಮಂಗಳವಾರ ಒಪ್ಪಂದ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ತಿಳಿಸಿದರು.

    ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ವೆಂಕಟೇಶಯ್ಯ ಅವರು ಒಪ್ಪಂದಕ್ಕೆ ಅಂಕಿತ ಹಾಕಿದ್ದು, ಇದೇ ಅಗಸ್ಟ್ ತಿಂಗಳ ಹೊತ್ತಿಗೆ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಡಿಸಿಎಂ ಹೇಳಿದರು.

    ಬೆಂಗಳೂರು ಉತ್ತರದ ಜನರಿಗೆ ಅನುಕೂಲ: ಮಲ್ಲೇಶ್ವರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳೂ ಸೇರಿದಂತೆ ಬೆಂಗಳೂರು ಉತ್ತರ ಭಾಗದ ಜನರಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಸ್ಥಾಪನೆ ಆಗುತ್ತಿರುವ ಹೃದ್ರೋಗ ಘಟಕ ಹೆಚ್ಚು ಉಪಯುಕ್ತವಾಗುತ್ತಿದೆ. ಜಯದೇವ ಹೃದ್ರೋಗ ಘಟಕದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ಇಲ್ಲಿಯೂ ಲಭ್ಯ ಇರುತ್ತವೆ ಎಂದು ಅವರು ಮಾಹಿತಿ ನೀಡಿದರು.

    ಕೆ.ಸಿ.ಜನರಲ್ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ 20,000 ಚದರ ಅಡಿ ಜಾಗದಲ್ಲಿ ತಲೆ ಎತ್ತಲಿರುವ ಈ ಘಟಕದಲ್ಲಿ 50 ಸುಸಜ್ಜಿತ ಬೆಡ್‍ಗಳಿರುತ್ತವೆ. ಹೃದಯದ ಸಮಸ್ಯೆ ಕಂಡುಬಂದಾಗ ಈ ಭಾಗದ ಜನರು ಜಯದೇವ ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ. ಟ್ರಾಫಿಕ್ ಮತ್ತಿತರೆ ಸಮಸ್ಯೆಗಳನ್ನು ಎದುರಿಸುವ ಅಗತ್ಯವಿಲ್ಲ. ಮಲ್ಲೇಶ್ವರದಲ್ಲಿ ಜಯದೇವ ಆಸ್ಪತ್ರೆಯ ಘಟಕವನ್ನು ಸ್ಥಾಪಿಸಬೇಕು ಎಂಬುದು ನನ್ನ ಬಹುದಿನಗಳ ಕನಸಾಗಿತ್ತು. ಈ ಘಟಕ ಸ್ಥಾಪಿಸಲು ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ, ಸೂಕ್ತ ಸಹಕಾರ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೂ ನನ್ನ ಕೃತಜ್ಞತೆಗಳು ಎಂದು ಡಿಸಿಎಂ ಹೇಳಿದರು.

    ಒಪ್ಪಂದದ ಪ್ರಕಾರ, ಜಯದೇವ ಹೃದ್ರೋಗ ಘಟಕಕ್ಕೆ ಅಗತ್ಯವಾದ ಜಾಗ, ನೀರು ಮತ್ತಿತರೆ ಮೂಲಸೌಕರ್ಯಗಳನ್ನು ಕೆ.ಸಿ.ಜನರಲ್ ಆಸ್ಪತ್ರೆ ಒದಗಿಸುತ್ತದೆ. ಉಳಿದಂತೆ ವೈದ್ಯಕೀಯ ಪರಿಕರಗಳು, ಯಂತ್ರೋಪಕರಣಗಳು, ಸಿಬ್ಬಂದಿ ಇತ್ಯಾದಿಗಳನ್ನು ಜಯದೇವ ಆಸ್ಪತ್ರೆ ವ್ಯವಸ್ಥೆ ಮಾಡಿಕೊಳ್ಳಲಿದೆ ಎಂದು ಅವರು ತಿಳಿಸಿದರು.

    ಕೆಸಿಜೆಯಲ್ಲಿ ಇನ್ನಷ್ಟು ಸೌಲಭ್ಯ: ಈಗಾಗಲೇ ಆಸ್ಪತ್ರೆಯಲ್ಲಿ 100 ಹಾಸಿಗೆಗಳ ಸುಸಜ್ಜಿತ ಮಾಡ್ಯುಲರ್ ತುರ್ತು ನಿಗಾ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇದರ ಜತೆಗೆ, ಟ್ರಾಮಾ ಕೇಂದ್ರವನ್ನು ಸ್ಥಾಪನೆ ಮಾಡುವ ಉದ್ದೇಶವೂ ಇದೆ. ಇವುಗಳ ಜತೆಗೆ, ಕೆಸಿ ಜನರಲ್ ಆಸ್ಪತ್ರೆಯನ್ನು ಇನ್ನೂ ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

  • ರಾತ್ರೋರಾತ್ರಿ ವೈದ್ಯಕೀಯ ಸಚಿವರ ಹಾಸ್ಪಿಟಲ್ ರೌಂಡ್ಸ್

    ರಾತ್ರೋರಾತ್ರಿ ವೈದ್ಯಕೀಯ ಸಚಿವರ ಹಾಸ್ಪಿಟಲ್ ರೌಂಡ್ಸ್

    ಬೆಂಗಳೂರು: ಸಚಿವ ಸುಧಾಕರ್ ರಾತ್ರೋರಾತ್ರಿ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದು, ಆಸ್ಪತ್ರೆಗಳ ಅವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದ್ದಾರೆ.

    ಆಸ್ಪತ್ರೆ ಅವ್ಯವಸ್ಥೆ ಕುರಿತು ದೂರು ಹೆಚ್ಚಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಸುಧಾಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಸುಧಾಕರ್, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಡಿ ಗ್ರೂಪ್ ನೌಕರರು ಕೂಡ ಕಡಿಮೆ ಜನ ಇದ್ದಾರೆ. ಇದರ ಬಗ್ಗೆ ಕ್ರಮ ತೆಗೆದು ಕೊಳ್ಳಬೇಕಾಗಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಕೆಸಿ ಜನರಲ್‍ನಲ್ಲಿ ಇರುವುದು 6 ವೆಂಟಿಲೇಟರ್‌ಗಳು ಮಾತ್ರ ಎಂದು ತಿಳಿಸಿದರು.

    ಕೆಸಿ ಜನರಲ್ ಆಸ್ಪತ್ರೆಯಲ್ಲಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ವಿಚಾರ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ಆಸ್ಪತ್ರೆಗೆ ಭೇಟಿ ಮಾಡಿ ಸೊಂಕಿತರ ಜೊತೆ ಮಾತನಾಡಿದೆ. ಅಲ್ಲದೇ ಚಿಕಿತ್ಸೆ, ಸ್ವಚ್ಛತೆ, ಊಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.

    ಕೆಸಿ.ಜನರಲ್ ಆಸ್ಪತ್ರೆಯ ನಂತ್ರ ವಿಕ್ಟೋರಿಯಾ ಸೇರಿದಂತೆ ಇನ್ನೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

  • ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ದೊಡ್ಡ ಹಗರಣ – ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ

    ಬೆಂಗಳೂರು: ಒಂದೇ ಆಸ್ಪತ್ರೆ ನಿರ್ವಹಣೆ ಮತ್ತು ರಿಪೇರಿಗೆ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆಸ್ಪತ್ರೆಯೇ ಕಟ್ಟಬಹುದಾದ ಹಣದಲ್ಲಿ ರಿಪೇರಿ ಕೆಲಸದ ಲೆಕ್ಕ ತೋರಿಸಲಾಗಿದೆ. ಕೆಲಸ ಆಗದಿದ್ರೂ ಬಿಲ್ ಮಾತ್ರ ರಿಲೀಸ್ ಆಗಿದೆ. ಆರೋಗ್ಯ ಇಲಾಖೆಯ ಕರ್ಮಕಾಂಡದ ಸ್ಟೋರಿ ಇದು.

    ಹೌದು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಇಂತಹದ್ದೊಂದು ದೊಡ್ಡ ಹಗರಣ ನಡೆದಿದೆ. ಆಸ್ಪತ್ರೆಯ ರಿಪೇರಿ ಹಾಗೂ ವಿವಿಧ ಕಾಮಗಾರಿಗೆ ಖರ್ಚಾಗಿರೋದು ಬರೋಬ್ಬರಿ 4.50 ಕೋಟಿ ರೂ. ಅಲ್ಲದೆ ನಿಯಮಗಳೆಲ್ಲ ಗಾಳಿಗೆ ತೂರಿ ಬೇಕಾದವರಿಗೆ ಟೆಂಡರ್ ನೀಡಲಾಗಿದೆ.

    ಬಣ್ಣ ಬಳಿಯೋಕೆ 35 ಲಕ್ಷ ರೂ., ಸ್ಟೀಲ್ ಕಂಬಿಗಳ ಅಳವಡಿಕೆಗೆ 25 ಲಕ್ಷ ರೂ., ಮೇಚ್ಛಾವಣಿ ರಿಪೇರಿಗೆ ಲಕ್ಷ ಲಕ್ಷ ಹಣ ಖರ್ಚಾಗಿದೆ. ಗೋಡೆ ಕಿತ್ತು ಹೋಗಿದ್ರು ಅದಕ್ಕೆ ಲಕ್ಷ ಲಕ್ಷ ದುಡ್ಡು ಖರ್ಚು ಮಾಡಿ ರಿಪೇರಿ ಮಾಡಿದ್ದಾಗಿ ಲೆಕ್ಕ ನೀಡಿದ್ದಾರೆ. ವಾರ್ಡ್‍ಗಳು ಹಾಗೇ ಇದ್ರು ವಾರ್ಡ್ ರಿಪೇರಿ ಹೆಸರಲ್ಲಿ 50 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಕೆಲಸವೇ ಆಗಿಲ್ಲವಾದ್ರೂ ದುಡ್ಡು ಮಾತ್ರ ರಿಲೀಸ್ ಆಗಿದೆ. ಹೀಗೆ ಕೆಸಿ ಜನರಲ್ ಆಸ್ಪತ್ರೆ ರಿಪೇರಿ ಖರ್ಚಿಗೆ ಆಗಿರೋದು ನಾಲ್ಕೂವರೆ ಕೋಟಿ ರೂ. RTI ನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯ ಈ ಕರ್ಮಕಾಂಡ ಬಯಲಾಗಿದೆ.

    ಅತೀ ತುರ್ತು ಕೆಲಸ ಅಂತ ಟೆಂಡರ್ ಕರೆಯದೇ ಕಾಮಗಾರಿ ನೀಡಲಾಗಿದೆ. ಬೇಕಾದವರಿಗೆ ಕೆಲಸ ಕೊಟ್ಟು ಕೋಟಿ ಕೋಟಿ ಹಣ ಗುಳುಂ ಮಾಡಿರೋ ಆರೋಪ ಕೇಳಿಬಂದಿದೆ.