Tag: KB Colivada

  • ಮಾಜಿ ಸಿಎಂ ದೆಹಲಿ ರಾಜಕಾರಣಕ್ಕೆ ಹೋಗೋದು ಡೌಟ್!

    ಮಾಜಿ ಸಿಎಂ ದೆಹಲಿ ರಾಜಕಾರಣಕ್ಕೆ ಹೋಗೋದು ಡೌಟ್!

    ಮಂಡ್ಯ: ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ. ಹಾಗಂದ ಮಾತ್ರಕ್ಕೆ ತಕ್ಷಣವೇ ದೆಹಲಿ ರಾಜಕಾರಣಕ್ಕೆ ಹೋಗುತ್ತಾರೆ ಎನ್ನುವ ಅರ್ಥವಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

    ನಾಗಮಂಗಲ ತಾಲೂಕಿನ ಅದಿಚುಂಚನಗಿರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ಹೋಗುವ ಬಗ್ಗೆ ಅವರನ್ನೇ ಕೇಳಬೇಕು. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆಗೆ ಹೈಕಮಾಂಡ್ ಒಪ್ಪಿಗೆ ಅಗತ್ಯವಿಲ್ಲ. ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಸಭೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳುತ್ತಾರೆ. ಸಮನ್ವಯ ಸಮಿತಿ ಸಭೆ ಇದೇ ತಿಂಗಳಲ್ಲಿ ನಡೆಯಬಹುದು ಎಂದರು ತಿಳಿಸಿದರು.

    ಕಾಂಗ್ರೆಸ್ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೋಟಿಸ್ ನೀಡಿದ್ದಾರೆ. ಅವರು ಕೊಡುವ ಉತ್ತರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಮಂಡ್ಯ ಲಾಕಪ್ ಡೆತ್ ಪ್ರಕರಣ ತನಿಖೆ ಹಂತದಲ್ಲಿದ್ದು, ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

  • ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ, ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು: ಕೋಳಿವಾಡ

    ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ, ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು: ಕೋಳಿವಾಡ

    ಹಾವೇರಿ: ಸಿದ್ದರಾಮಯ್ಯ ನನಗಿಂತ 13 ವರ್ಷದ ಬಚ್ಚಾ, ಅವನಿಂದ ಕಾಂಗ್ರೆಸ್‍ಗೆ ಏನು ಅನುಕೂಲವಾಗಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

    ನಾನು ಸೋತಿದ್ದೇನೆ. ಆದರೆ, ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. 1996 ರಿಂದ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯನೇ ನೇರ ಕಾರಣ. ಇದು ಪಕ್ಷದ ಪ್ರತಿಯೊಬ್ಬರಿಗೂ ಗೊತ್ತು ಎಂದು ಅವರು ದೂರಿದ್ದಾರೆ.

    ನನ್ನ ಸೋಲಿಗೆ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡದಿರುವುದೇ ಕಾರಣ. ಅವರ ಮೇಲೆ ಯಾವ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ನಾನು ಹರಕೆಯೆ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು ಅಂತ ತಮ್ಮ ಪರ ಪ್ರಚಾರಕ್ಕೆ ಬಾರದ ಸಿಎಂ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಪರೋಕ್ಷ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.