Tag: KB Chandrasekhar

  • ಮಾಜಿ MLA ಪುತ್ರನಿಗೆ ಸಪೋರ್ಟ್ ಆರೋಪ – CPI ಸಸ್ಪೆಂಡ್

    ಮಾಜಿ MLA ಪುತ್ರನಿಗೆ ಸಪೋರ್ಟ್ ಆರೋಪ – CPI ಸಸ್ಪೆಂಡ್

    ಮಂಡ್ಯ: ಮಾಜಿ ಎಂಎಲ್‍ಎ ಪುತ್ರನಿಗೆ ಬೆಂಬಲ ನೀಡಿದ ಹಿನ್ನೆಲೆ ಸಿಪಿಐ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವ ಸುದ್ದಿ ಮಂಡ್ಯದ ಮಳವಳ್ಳಿಯಲ್ಲಿ ಬೆಳಕಿಗೆ ಬಂದಿದೆ.

    ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪುತ್ರನನ್ನು ರಕ್ಷಣೆ ಮಾಡಲು ಪ್ರಯತ್ನ ಮಾಡಿದ ಆರೋಪದ ಮೇಲೆ ಮಂಡ್ಯ ಜಿಲ್ಲೆಯ ಮಳವಳ್ಳಿ ಉಪವಿಭಾಗದ ಸಿಪಿಐ ಡಿ.ಪಿ.ಧನರಾಜು ಅವರನ್ನು ಅಮಾನತು ಮಾಡಲಾಗಿದೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ. ಇದನ್ನೂ ಓದಿ: 31 ತಿಂಗಳ ಕಾಲ ಮುಚ್ಚಿದ್ದ ಕಾಶ್ಮೀರ ಶಾಲೆಗಳು ಮತ್ತೆ ಆರಂಭ!

    ಆದ್ರೆ ಈ ಕುರಿತು ಅಧಿಕೃತ ಆದೇಶ ಪ್ರತಿ ನೀಡಲು ಎಸ್‍ಪಿ ನಿರಾಕರಿಸಿದ್ದಾರೆ. ರೈಸ್ ಪುಲ್ಲಿಂಗ್ ದಂಧೆಕೋರ ಸಲೀಂ ಹತ್ಯೆ ಆರೋಪದ ಮೇಲೆ ಕೆ.ಬಿ ಚಂದ್ರಶೇಖರ್ ಪುತ್ರ ಶ್ರೀಕಾಂತ್ ಜೈಲು ಸೇರಿದ್ದಾರೆ. ಈ ವಿಷಯದಲ್ಲಿ ಧನರಾಜು ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಪ್ರಸ್ತುತ ಅವರನ್ನು ಕೆಲಸದಿಂದ ಅಮಾನತು ಮಾಡಲು ಆದೇಶ ಹೊರಡಿಸಲಾಗಿದೆ.

  • “BSPಯಿಂದ JDSಗೆ ಅಲ್ಲಿಂದ BJP, ನಾರಾಯಣ ಗೌಡರಿಗೆ ಉಳಿದಿರೋದು ಕಾಂಗ್ರೆಸ್ ಮಾತ್ರ”

    “BSPಯಿಂದ JDSಗೆ ಅಲ್ಲಿಂದ BJP, ನಾರಾಯಣ ಗೌಡರಿಗೆ ಉಳಿದಿರೋದು ಕಾಂಗ್ರೆಸ್ ಮಾತ್ರ”

    – ಕಾಂಗ್ರೆಸ್ ಕಡೆ ಬಂದಾಗ ಜಾಗ ಕೊಡದೇ ಓಡಿಸಿದ್ದೆ

    ಮಂಡ್ಯ: ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನಲ್ಲಿ ಸ್ಥಾನ ಮಾನ ಸಿಗಲಿಲ್ಲ ಎಂದು ಬಿಜೆಪಿಗೆ ಹೋಗಿದ್ದಾರೆ. ಅಲ್ಲಿಯೂ ಸ್ಥಾನಮಾನ ಸಿಗಲಿಲ್ಲ ಎಂದರೆ ಅವರಿಗೆ ಉಳಿದಿರೋದು ಒಂದೇ ಒಂದು ಅದು ಕಾಂಗ್ರೆಸ್ ಎಂದು ಕೆಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಎಂದಿದ್ದಾರೆ.

    ಕೆಆರ್ ಪೇಟೆಯಲ್ಲಿ ಮಾತನಾಡಿದ ಕೆ.ಬಿ.ಚಂದ್ರಶೇಖರ್, ನಾರಾಯಣಗೌಡ ಮೊದಲು ಕಾಂಗ್ರೆಸ್ ಕಡೆ ಬಂದಿದ್ದರು, ಆಗ ನಾನು ಜಾಗ ಕೊಡದೇ ಓಡಿಸಿದ್ದೆ. ನಂತರ ಅವರು ಬಿಎಸ್‍ಪಿ ಪಕ್ಷಕ್ಕೆ ಹೋಗಿದ್ದರು, ಅಲ್ಲಿ ಪ್ರಯೋಜನವಿಲ್ಲ ಎಂದು ತಿಳಿದ ಮೇಲೆ ಜೆಡಿಎಸ್‍ಗೆ ಹೋದರು. ಜೆಡಿಎಸ್‍ನವರು ಏನು ಮಾಡಿದ್ರು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ಈಗ ನಾರಾಯಣಗೌಡ ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿ ಅವರು ಸಹ ಸರಿಯಾದ ಸ್ಥಾನಮಾನ ನೀಡದೆ ಇದ್ದರೇ ಅವರಿಗೆ ಉಳಿದಿರೋದು ಒಂದೇ ಅದು ಕಾಂಗ್ರೆಸ್.

    ನಾರಾಯಣಗೌಡ ಕಾಂಗ್ರೆಸ್‍ಗೆ ಬರಲಿ, ಆಗ ಆಟ ಇರೋದು. ಇಲ್ಲಿಗೆ ಬಂದ ಮೇಲೆ ನಮಗೂ ಆತನಿಗೂ ಆಟ ಶುರುವಾಗುತ್ತೆ. ಯಾವ ರೀತಿಯ ಆಟ ಅಂದರೆ ಅದನ್ನ ಪರೆದೆ ಮೇಲೆ ನೋಡಿ ಎಂದು ನಾರಾಯಣಗೌಡ ವಿರುದ್ಧ ವಾಗ್ದಾಳಿ ಮಾಡಿದರು.

    ಸಿಎಂ ಯಡಿಯೂರಪ್ಪರ ಶಕ್ತಿಯನ್ನು ಕುಂದಿಸಬೇಕೆಂದು ಬಿಜೆಪಿ ಕೇಂದ್ರ ಮತ್ತು ರಾಜ್ಯದ ಕೆಲ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಎಲ್ಲ ಪ್ರಯತ್ನಗಳನ್ನು ಕೇಂದ್ರದ ನಾಯಕರು ಮಾಡುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪನವರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಅವರ ಹೆಸರು ನಿರ್ನಾಮ ಮಾಡಲಾಗುತ್ತದೆ ಎಂದರು.

  • ಜೆಡಿಎಸ್ ಸತ್ತು ಹೋಗಿದೆ, ಇನ್ನೇನಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ಫೈಟ್- ‘ಕೈ’ ಟಿಕೆಟ್ ಆಕಾಂಕ್ಷಿ

    ಜೆಡಿಎಸ್ ಸತ್ತು ಹೋಗಿದೆ, ಇನ್ನೇನಿದ್ದರೂ ಕಾಂಗ್ರೆಸ್, ಬಿಜೆಪಿ ನಡುವೆ ಫೈಟ್- ‘ಕೈ’ ಟಿಕೆಟ್ ಆಕಾಂಕ್ಷಿ

    – ಜೆಡಿಎಸ್ ಪಕ್ಷವೇ ಅಲ್ಲ, ಅದು ಒಂದು ಕುಟುಂಬದ ಪಕ್ಷ

    ಮಂಡ್ಯ: ಜೆಡಿಎಸ್ ಸತ್ತು ಹೋಗಿದೆ, ರಾಜ್ಯದಲ್ಲಿ ಇನ್ನು ಮುಂದೆ ಜೆಡಿಎಸ್ ಇಲ್ಲ. ಇನ್ನೇನಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಅಷ್ಟೆ. ಮಧ್ಯಂತರ ಚುನಾವಣೆ ಬಂದರೆ, ಜೆಡಿಎಸ್ ಕಣ್ಮರೆಯಾಗುತ್ತದೆ ಎಂದು ಮಾಜಿ ಶಾಸಕ, ಉಪಚುನಾವಣೆಯ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಜೆಡಿಎಸ್ ವಿರುದ್ಧ ಗುಡುಗಿದ್ದಾರೆ.

    ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಒಂದು ಪಕ್ಷವೇ ಅಲ್ಲ. ಒಂದು ಕುಟುಂಬದ ಪಕ್ಷ ಮಾತ್ರ, ಅದು ಈಗಾಗಲೇ ಸತ್ತು ಹೋಗಿದೆ. 37 ಶಾಸಕರ ಪೈಕಿ ಈಗಾಗಲೇ ಮೂವರು ಪಕ್ಷ ಬಿಟ್ಟಿದ್ದಾರೆ. ಇನ್ನೊಂದು ತಿಂಗಳಲ್ಲಿ 20 ಶಾಸಕರು ಕಾಂಗ್ರೆಸ್ ಅಥವಾ ಬಿಜೆಪಿ ಸೇರುತ್ತಾರೆ. ಜೆಡಿಎಸ್ ಪಕ್ಷವೇ ಅಲ್ಲ. ಒಂದು ಕುಟುಂಬಕಷ್ಟೇ ಸೀಮಿತವಾಗಿದೆ ಎಂದು ಹರಿಹಾಯ್ದಿದ್ದಾರೆ.

    ಕಳೆದ ಚುನಾವಣೆಯಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರು ಹಾಗೂ ರೈತರಿಗೆ ಆಸೆ ತೋರಿಸಿದ್ದರು. ಕುಮಾರಸ್ವಾಮಿ ಸುಳ್ಳು ಭರವಸೆಯಿಂದ ಮೋಸ ಮಾಡಿದ್ದಾರೆ. ಅದರಲ್ಲೂ ಮಂಡ್ಯದಲ್ಲಿ ಒಕ್ಕಲಿಗ ಎಂಬ ಕಾರಣಕ್ಕಾಗಿ ನಂಬಿ ಮತ ಹಾಕಿದರು. ಜನ ಒಂದು ಸಾರಿ ನಂಬುತ್ತಾರೆ, ಮತ್ತೊಮ್ಮೆ ನಂಬುವುದಿಲ್ಲ. ಜೆಡಿಎಸ್ ಯಾವುದೇ ಕ್ಷೇತ್ರದಲ್ಲೂ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಜೆಡಿಎಸ್ ಗೆದ್ದಿದ್ದ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಚಂದ್ರಶೇಖರ್ ಭರವಸೆ ವ್ಯಕ್ತಪಡಿಸಿದರು.

    ಕೋಡಿ ಮಠದ ಸ್ವಾಮೀಜಿಗಳು ಹೇಳಿದ ಮೇಲೆ ಬಹಳಷ್ಟು ಸ್ವಾಮೀಜಿಗಳು ಕುಗ್ಗಿ ಹೋಗಿದ್ದಾರೆ. ಸ್ವಾಮೀಜಿಗಳು ಹೇಳಿದ್ದು ಇದುವರೆಗೂ 100ಕ್ಕೆ 60 ರಷ್ಟು ಸತ್ಯವಾಗಿದೆ. ಮಧ್ಯಂತರ ಚುನಾವಣೆಯ ಹೇಳಿಕೆ ವಿಚಾರದಲ್ಲೂ ನಿಜ ಆಗಬಹುದು. ಈ ಉಪಚುನಾವಣೆ ಬರುವ ಬದಲು ಮಧ್ಯಂತರ ಚುನಾವಣೆ ಬಂದಿದ್ದರೆ ಚೆನ್ನಾಗಿತ್ತು. ಉಪಚುನಾವಣೆ ಕುರಿತು ಬೆಸರ ವ್ಯಕ್ತಪಡಿಸಿದ್ದಾರೆ.

  • ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತೆ – ಚಂದ್ರಶೇಖರ್ ಭವಿಷ್ಯ

    ಮಂಡ್ಯ: ಮೈತ್ರಿ ಸರ್ಕಾರ ಅಂತ್ಯ ಆಗುವುದು ಪಕ್ಕಾ. ಮೈತ್ರಿ ಮುರಿದ ಬಳಿಕ ಜೆಡಿಎಸ್ ಸತ್ತು ಹೋಗುತ್ತದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಭವಿಷ್ಯ ನುಡಿದಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ತಮ್ಮ ಪಕ್ಷದಲ್ಲಿ 125 ಶಾಸಕರು ಇರೋ ಹಾಗೇ ಸರ್ಕಾರ ನಡೆಸಲು ಮುಂದಾಗಿದ್ದು ತಪ್ಪು. ಹೆಚ್ಚು ಶಾಸಕರಿರುವ ಕಾಂಗ್ರೆಸ್ ಪಕ್ಷದ ಮಾತನ್ನು ಕೇಳದೇ ಆಡಳಿತ ನಡೆಸಿದ್ದಕ್ಕೆ ಸಿಟ್ಟಾಗಿ ನಮ್ಮ ಶಾಸಕರು ರಾಜೀನಾಮೆ ನೀಡಿದ್ದಾರೆ. ಜೆಡಿಎಸ್ ಸಹವಾಸ ಬಿಟ್ಟರೆ ರಾಜ್ಯದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸ್ಪರ್ಧೆ ನಡೆಯುತ್ತದೆ ಎಂದು ಹೇಳಿದರು.

    ಕೆ.ಆರ್ ಪೇಟೆ ಅಭಿವೃದ್ಧಿಗೆ ರಾಜೀನಾಮೆ ಕೊಟ್ಟಿದ್ದೇನೆ ಎಂಬ ನಾರಾಯಣಗೌಡರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿಗೆ ಆತ ಮಾರಾಟವಾಗಿದ್ದಾನೆ. ಕುಣಿಯಲಾರದ ವೇಶ್ಯೆ ನೆಲ ಡೊಂಕು ಎಂಬಂತೆ ನಾರಾಯಣಗೌಡ ಮಾತನಾಡ್ತಿದ್ದಾನೆ ಎಂದು ಏಕವಚನದಲ್ಲೇ ಕಿಡಿಕಾರಿದರು.

    ನಾನು ಈ ಹಿಂದೆಯೇ ಲೋಕಸಭಾ ಚುನಾವಣೆ ಮುಗಿದ ಬಳಿಕ ಅವನು ಪಕ್ಷ ಬಿಡುತ್ತಾನೆ ಎಂದು ಹಿಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ. ಆತ ಹಣ ಮಾಡಲು ಕೆ.ಆರ್ ಪೇಟೆಗೆ ಬಂದಿದ್ದ. ಮುಖ್ಯಮಂತ್ರಿ ಹಾಗೂ ಬಿಜೆಪಿ ಅವರ ಹತ್ತಿರ ಹಣ ಮಾಡಿಕೊಂಡು ಮುಂಬೈಗೆ ವಾಪಸ್ಸಾಗಿದ್ದಾನೆ. ಆತ ಮತ್ತೆ ರಾಜಕೀಯಕ್ಕೆ ಬರಲ್ಲ ಮುಂಬೈನಲ್ಲೇ ನೆಲೆಯಾಗುತ್ತಾನೆ. ಕೆ.ಸಿ.ನಾರಾಯಣಗೌಡ ಒಬ್ಬ ನಾಯಿ. ನನ್ನ ಒಂದು ಕೂದಲಿಗೂ ಆತ ಸಮವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

    ನಿಖಿಲ್ ಕುಮಾರಸ್ವಾಮಿ ಕೆ.ಆರ್.ಪೇಟೆಯಿಂದ ಚುನಾವಣೆಗೆ ಸ್ಪರ್ಧೆ ವಿಚಾರ ಕೇಳಿದಾಗ, ಹಾಗಾದರೆ ಮಂಡ್ಯದಲ್ಲಿ ಬಂದ ಫಲಿತಾಂಶ ಕೆ.ಆರ್ ಪೇಟೆಯಲ್ಲಿ ರಿಪೀಟ್ ಆಗುತ್ತೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಲಿ. ನಿಖಿಲ್ ಬೇಕಂದರೆ ಹಾಸನದಲ್ಲಿ ಹೋಗಿ ಸ್ಪರ್ಧೆ ಮಾಡಲಿ ಎಂದು ಹೇಳಿದರು.