Tag: Kazakhstan

  • ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

    ಭಯೋತ್ಪಾದನೆ ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ – ವಿದೇಶಾಂಗ ಸಚಿವ ಜೈಶಂಕರ್

    ನವದೆಹಲಿ: ಭಯೋತ್ಪಾದನೆ (Terrorism) ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ಪ್ರಾಯೋಜಕರು ಮತ್ತು ಹಣಕಾಸುದಾರರನ್ನು ಪತ್ತೆ ಹಚ್ಚುವುದು ಹಾಗೂ ಅವರಿಗೆ ಕಠಿಣ ಶಿಕ್ಷೆ ನೀಡುವುದು ಬಹಳ ಮುಖ್ಯ ಎಂದು ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (S Jaishankar) ಹೇಳಿದ್ದಾರೆ.

    ಕಝಕಿಸ್ತಾನದ (Kazakhstan) ಅಸ್ತಾನಾದಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದ ತ್ರಿಭೂತಗಳು, ಇದರ ವಿರುದ್ಧ ಹೋರಾಡುವ ತುರ್ತು ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಪೂನಂ ಧಿಲ್ಲೋನ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಡೈಮಂಡ್‌ ನೆಕ್ಲೇಸ್‌ ಕಳ್ಳತನ

    ಭಯೋತ್ಪಾದನೆ ಇಂದು ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಜಾಗತಿಕ ಮತ್ತು ರಾಷ್ಟ್ರೀಯ ಶಾಂತಿಗೆ ಬೆದರಿಕೆಯಾಗಿ ಪರಿಣಮಿಸಿದೆ. ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ತಕ್ಷಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆ ವಿರುದ್ಧ ಹೋರಾಡಲು ಸಮಗ್ರ ವಿಧಾನದ ಅಗತ್ಯವಿದೆ. ಭಯೋತ್ಪಾದಕರು ಮಾತ್ರ ದುಷ್ಕರ್ಮಿಗಳಲ್ಲ, ಅವರಿಗೆ ಸಹಾಯ ಮಾಡುವ ಸಂಚಾಲಕರು, ಹಣಕಾಸುದಾರರು ಮತ್ತು ಪ್ರಾಯೋಜಕರ ವಿರುದ್ಧ ಜಂಟಿ ಕ್ರಮವಿರಬೇಕು. ಇವರನೆಲ್ಲವನ್ನೂ ಪತ್ತೆ ಹಚ್ಚಿ ಕಠಿಣ ಶಿಕ್ಷೆ ನೀಡುವ ಅಗತ್ಯವಿದೆ ಎಂದಿದ್ದಾರೆ. ಇದನ್ನೂ ಓದಿ:  ದೆಹಲಿ ನಾಗರಿಕರಿಗೆ 25 ಲಕ್ಷ ಆರೋಗ್ಯ ವಿಮೆ: ಪ್ಯಾರಿದೀದಿ ಬಳಿಕ ಕಾಂಗ್ರೆಸ್‌ನಿಂದ ಎರಡನೇ ಗ್ಯಾರಂಟಿ

    ಪ್ರಾದೇಶಿಕ ಭಯೋತ್ಪಾದನಾ ವಿರೋಧಿ ಚೌಕಟ್ಟಿನ (RATS) ಸಹಾಯದಿಂದ ಭಯೋತ್ಪಾದನೆಯ ವಿರುದ್ಧ ಬಲವಾದ ಕ್ರಮವನ್ನು SCO ತೆಗೆದುಕೊಳ್ಳಬಹುದು ಎಂಬ ವಿಶ್ವಾಸವಿದೆ. ಅಸ್ತಾನಾದಲ್ಲಿ ನಡೆದ ಶೃಂಗಸಭೆಯಲ್ಲಿ ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದದ ವಿರುದ್ಧ ಜಂಟಿ ಕ್ರಮದ ಕುರಿತು ಚರ್ಚಿಸಲಾಗಿದ್ದು, ಈ ಬಗ್ಗೆ ತುಂಬಾ ಸಂತೋಷವಾಗಿದೆ ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇದನ್ನೂ ಓದಿ: ಖನಿಜಗಳಿಗಾಗಿ ಚೀನಾದ ಮೇಲೆ ಅವಲಂಬನೆ – ಕಾಶ್ಮೀರದಲ್ಲಿ ನಿಕ್ಷೇಪ ಇದ್ರೂ ಯಾಕೆ ಗಣಿ ಸಾಧ್ಯವಾಗಿಲ್ಲ?

  • ಗುಂಡಿನ ದಾಳಿಯಿಂದಲೇ ವಿಮಾನ ಪತನ, ರಷ್ಯಾ ಸತ್ಯ ಒಪ್ಪಿಕೊಳ್ಳಲಿ: ಅಜರ್ಬೈಜಾನ್‌ ಅಧ್ಯಕ್ಷ ಆರೋಪ

    ಗುಂಡಿನ ದಾಳಿಯಿಂದಲೇ ವಿಮಾನ ಪತನ, ರಷ್ಯಾ ಸತ್ಯ ಒಪ್ಪಿಕೊಳ್ಳಲಿ: ಅಜರ್ಬೈಜಾನ್‌ ಅಧ್ಯಕ್ಷ ಆರೋಪ

    ಮಾಸ್ಕೋ: ರಷ್ಯಾದ (Russia) ನೆಲದಲ್ಲಿ ಗುಂಡಿನ ದಾಳಿಯಿಂದಲೇ ವಿಮಾನ ಪತನವಾಗಿದೆ ಎಂದು ಅಜರ್ಬೈಜಾನ್‌ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ದೂರಿದ್ದಾರೆ.

    ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್‌ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್‌ ಕ್ಷಮೆ ಕೇಳಿದ ಒಂದು ದಿನದ ನಂತರ ಅಜರ್ಬೈಜಾನ್‌ ಅಧ್ಯಕ್ಷ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:  ಅಜರ್ಬೈಜಾನ್‌ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್

    ರಷ್ಯಾದ ಗುಂಡಿನ ದಾಳಿಯಿಂದಲೇ ವಿಮಾನ ಪತನಗೊಂಡಿದೆ. ಆದ್ರೆ ಮಾರಣಾಂತಿಕ ಜೆಟ್‌ ಅಪಘಾತ ಪ್ರಕರಣವನ್ನು ಮರೆಮಾಚಲು ಮಾಸ್ಕೋ ಪ್ರಯತ್ನಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ರಷ್ಯಾದ ಕೆಲವು ವಲಯಗಳು ಅಪಘಾತದ ಪ್ರಕರಣದ ಬಗ್ಗೆ ಸತ್ಯ ಮುಚ್ಚಿಡಲು ಪ್ರಯತ್ನಿಸುತ್ತಿವೆ. ವಿಮಾನದಲ್ಲಿದ್ದ 67 ಪ್ರಯಾಣಿಕರಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಅಪಘಾತದ ಕಾರಣಗಳ ಬಗ್ಗೆ ಸುಳ್ಳು ನಿರೂಪಣೆಯನ್ನು ರಷ್ಯಾ ಬಿತ್ತರಿಸುತ್ತಿದೆ ಎಂದರಲ್ಲದೇ ರಷ್ಯಾ ತನ್ನ ತಪ್ಪನ್ನು ಒಪ್ಪಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕೊರಿಯಾ | ಲ್ಯಾಂಡಿಂಗ್ ಗೇರ್‌ ವೈಫಲ್ಯದಿಂದ ವಿಮಾನ ಪತನ – 179 ಮಂದಿ ದುರ್ಮರಣ

    ಕ್ಷಮೆ ಕೇಳಿದ ಪುಟಿನ್‌:
    38 ಜನ ಸಾವನ್ನಪ್ಪಿದ ದುರಂತ ನೆನೆದು ಅಜರ್ಬೈಜಾನ್‌ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದರು. ದೊಂದು ಘೋರ ದುರಂತ ಎಂದು ಸಹ ಕರೆದಿದ್ದರು.

    ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್‌ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್‌ನ ಡೋನ್‌ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್‌ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.

    ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.

  • ಅಜರ್ಬೈಜಾನ್‌ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್

    ಅಜರ್ಬೈಜಾನ್‌ ವಿಮಾನ ಪತನದಿಂದ 38 ಸಾವು – ʻದುರಂತʼಕ್ಕೆ ಕ್ಷಮೆ ಕೋರಿದ ಪುಟಿನ್

    ಮಾಸ್ಕೋ: ರಷ್ಯಾದ ವಾಯು ಪ್ರದೇಶದಲ್ಲಿ ಅಜರ್ಬೈಜಾನ್‌ ವಿಮಾನ ಪತನಗೊಂಡು (Azerbaijan Plane Crash) 38 ಜನರ ಸಾವಿಗೆ ಕಾರಣವಾದ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕ್ಷಮೆ ಕೋರಿದ್ದಾರೆ. ಅಜರ್ಬೈಜಾನ್‌ ಅಧ್ಯಕ್ಷ ಇಲ್‌ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ (Vladimir Putin’s Apology) ಎಂದು ವರದಿಯಾಗಿದೆ.

    ಕಝಾಕಿಸ್ತಾನದಲ್ಲಿ (Kazakhstan) ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡೋನ್‌ಗಳ (Ukraine Drone) ವಿರುದ್ಧ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್‌ಗಳನ್ನು ಹಾರಿಸಿದ ಬಳಿಕ ಕಝಾಕಿಸ್ತಾನ್‌ನ ಅಕ್ಟೌ ನಗರದ ಬಳಿಕ ಅಜರ್ಬೈಜಾನ್‌ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾವನ್ನಪ್ಪಿದ್ದು, ಉಳಿದ 29 ಮಂದಿ ಗಾಯಗೊಂಡು, ಬದುಕುಳಿದಿದ್ದಾರೆ. ಈ ದುರಂತ ನೆನೆದು ಪುಟಿನ್‌ ಕ್ಷಮೆ ಕೋರಿದರಲ್ಲದೇ ಇದೊಂದು ಘೋರ ದುರಂತ ಎಂದು ಸಹ ಕರೆದಿದ್ದಾರೆ.

    ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್‌ ವರದಿ ಮಾಡಿದೆ.

    ವಿಮಾನ ದುರಂತಕ್ಕೂ ಮುನ್ನ ಅಜರ್ಬೈಜಾನ್‌ ಏರ್‌ಲೈನ್ಸ್‌ಗೆ ಸೇರಿದ ವಿಮಾನವು ಗೋಝಿ ಪ್ರಾಂತ್ಯದ ಬಳಿ ಲ್ಯಾಂಡಿಂಗ್‌ ನಡೆಸಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಉಕ್ರೇನ್‌ನ ಡೋನ್‌ಗಳು ಹಾಗೂ ರಷ್ಯಾದ ವಾಯು ಸೇನೆ ನಡುವೆ ಯುದ್ಧ ನಡೆಯುತ್ತಿತ್ತು. ಇದರಲ್ಲಿ ಪ್ರಯಾಣಿಕರಿದ್ದ ಈ ವಿಮಾನ ಪತನಗೊಂಡಿತು. ವಿಮಾನ ಪತನಕ್ಕೆ ಯಾರು ಕಾರಣ ಎಂಬ ವಿಷಯದಲ್ಲಿ ರಷ್ಯಾ ಮತ್ತು ಉಕ್ರೇನ್ ಪರಸ್ಪರ ಆರೋಪ ಹಾಗೂ ಪ್ರತ್ಯಾರೋಪ ನಡೆಸಿದ್ದವು. ಅಜರ್ಬೈಜಾನ್‌ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಹೊರಗಿನ ದಾಳಿಯಿಂದ ವಿಮಾನ ಪತನಗೊಂಡಿದೆ ಎಂದು ವರದಿಯಾಗಿತ್ತು.

    ರಷ್ಯಾದ ಕ್ಷಿಪಣಿ ದಾಳಿಯಲ್ಲಿ ಈ ವಿಮಾನ ಪತನಗೊಂಡಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಇನ್ನೂ ಕೆಲವು, ಉಕ್ರೇನ್ ನಡೆಸಿದ ದಾಳಿಯಿಂದ ದುರಂತ ಸಂಭವಿಸಿದೆ ಎಂದೆನ್ನಲಾಗಿತ್ತು.

  • ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ – 32 ಮಂದಿ ಸಜೀವ ದಹನ

    ಕಲ್ಲಿದ್ದಲು ಗಣಿಯಲ್ಲಿ ಅಗ್ನಿ ಅವಘಡ – 32 ಮಂದಿ ಸಜೀವ ದಹನ

    ಅಸ್ತಾನ(ಕಜಕಿಸ್ತಾನ್): ಕಲ್ಲಿದ್ದಲು ಗಣಿಯಲ್ಲಿ (Coal Mine) ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident )ಕನಿಷ್ಠ 32 ಜನರು ಸಾವನ್ನಪ್ಪಿದ್ದು, 14 ಮಂದಿ ನಾಪತ್ತೆಯಾದ ಘಟನೆ ಕಜಕಿಸ್ತಾನದಲ್ಲಿ (Kazakhstan) ನಡೆದಿದೆ.

    ಲಕ್ಸೆಂಬರ್ಗ್ ಮೂಲದ ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಕಂಪನಿಯ ಕಲ್ಲಿದ್ದಲು ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಗಣಿಯಲ್ಲಿ 252 ಜನ ಕೆಲಸ ಮಾಡುತ್ತಿದ್ದರು. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ 206 ಜನರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ. ಮೀಥೇನ್ ಅನಿಲ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ. ಈ ದುರಂತ ಬಹಳ ದುರಾದೃಷ್ಟಕರವಾದದ್ದು ಎಂದು ಕಜಕಿಸ್ತಾನದ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪು ಅಗಲಿ ಇಂದಿಗೆ 2 ವರ್ಷ- ಪುನೀತ್ ಸಮಾಧಿಗೆ ದೊಡ್ಮನೆ ಕುಟುಂಬಸ್ಥರಿಂದ ಪೂಜೆ

    ದುರಂತದ ಬಳಿಕ, ಮಿತ್ತಲ್ ಸಂಸ್ಥೆಯೊಂದಿಗಿನ ಸರ್ಕಾರದ ಹೂಡಿಕೆಯನ್ನು ವಾಪಸ್ ಪಡೆಯಲು ಆದೇಶಿಸಲಾಗಿದೆ. ಅಲ್ಲದೇ ಕಂಪನಿಯ ಘಟಕಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಕಳೆದ ಆಗಸ್ಟ್‌ನಲ್ಲೂ ಅಗ್ನಿ ಅವಘಡ ಸಂಭವಿಸಿ 9 ಜನ ಸಾವನ್ನಪ್ಪಿದ್ದರು. ಈ ವೇಳೆ ಪರಿಸರ ನಿಯಮಗಳ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಲಕ್ಸೆಂಬರ್ಗ್ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದು ವಿಶ್ವದ ಎರಡನೇ ಅತಿ ದೊಡ್ಡ ಉಕ್ಕನ್ನು ಉತ್ಪಾದಿಸುತ್ತದೆ. ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ ನಡೆಸಿದ್ದ ಶೂಟರ್ 2 ದಿನಗಳ ಬಳಿಕ ಶವವಾಗಿ ಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಇದು ಯುದ್ಧದ ಸಮಯವಲ್ಲ – ಪುಟಿನ್‌ಗೆ ಪ್ರಧಾನಿ ಮೋದಿ ಸಲಹೆ

    ಸಮರ್‌ಕಂಡ್: ಉಜ್ಬೇಕಿಸ್ತಾನ ಶಾಂಘೈ ಸಹಕಾರ ಸಂಘಟನೆ (SCO) ದೇಶಗಳ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಉಲ್ಲೇಖಿಸಿ, ಪುಟಿನ್ (Vladimir Putin) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

    ಮಾಸ್ಕೋದ ಪಡೆಗಳು ಉಕ್ರೇನ್ (Russia Vs Ukraine War) ಅನ್ನು ಆಕ್ರಮಿಸಿದ ನಂತರ ಉಭಯ ನಾಯಕರು ಮೊದಲಬಾರಿಗೆ ಮುಖಾಮುಖಿಯಾಗಿ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಪ್ರಧಾನಿ ಅವರು `ಇದು ಯುದ್ಧದ ಸಮಯವಲ್ಲ’ ಎಂದು ಪುಟಿನ್‌ಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Breaking: ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ

    ಬಳಿಕ ಪ್ರತಿಕ್ರಿಯಿಸಿದ ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್, ಕಳೆದ ಫೆಬ್ರುವರಿಯಲ್ಲಿ ಪ್ರಾರಂಭವಾದ ಉಕ್ರೇನ್ (Ukraine) ವಿರುದ್ಧದ ಸಂಘರ್ಷವನ್ನು ಆದಷ್ಟು ಬೇಗ ಕೊನೆಗೊಳಿಸಲು ಬಯಸಿದ್ದೇನೆ. ಈ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತದ ಕಳವಳ ಅರ್ಥವಾಗುತ್ತಿದೆ. ಉಕ್ರೇನ್‌ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವು, ನಿಮ್ಮ ಕಾಳಜಿಗಳು ನನಗೆ ಅರ್ಥವಾಗುತ್ತಿದೆ. ಇದನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

    ಎದುರಾಳಿ ತಂಡ, ಉಕ್ರೇನ್ ನಾಯಕತ್ವ, ಸಂಧಾನ ಪ್ರಕ್ರಿಯೆಯನ್ನು ತಿರಸ್ಕರಿಸುವುದಾಗಿ ಘೋಷಿಸಿತು ಮತ್ತು ಯುದ್ಧಭೂಮಿಯಲ್ಲಿ ಮಿಲಿಟರಿ ವಿಧಾನಗಳ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಬಯಸುವುದಾಗಿ ಹೇಳಿದೆ ಎಂದು ಪುಟಿನ್ ತಿಳಿಸಿದ್ದಾರೆ.

    ಬಳಿಕವೇ ಮಾತನಾಡಿದ ಪ್ರಧಾನಿ ಮೋದಿ `ಇದು ಯುದ್ಧದ ಸಮಯವಲ್ಲ’ ಎಂದು ಮನವರಿಕೆ ಮಾಡಿಕೊಟ್ಟದ್ದಾರೆ. ಇದನ್ನೂ ಓದಿ: ಎಲಿಜಬೆತ್ ಅಂತಿಮ ದರ್ಶನಕ್ಕೆ ಚೀನಾ ನಿಯೋಗಕ್ಕಿಲ್ಲ ಅನುಮತಿ

    SCO ಅಧ್ಯಕ್ಷ ಸ್ಥಾನ ಭಾರತಕ್ಕೆ ಹಸ್ತಾಂತರ: ಉಜ್ಬೇಕಿಸ್ತಾನ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಇಂದು ಭಾರತಕ್ಕೆ ಹಸ್ತಾಂತರಿಸಲಾಯಿತು. ಉಜ್ಬೇಕಿಸ್ತಾನ ಅಧ್ಯಕ್ಷ ಶವ್ಕತ್ ಮಿರ್ಜಿಯೋವ್ ಅವರು ಸಮರ್ಕಂಡ್‌ನಲ್ಲಿ 22ನೇ ಎಸ್‌ಸಿಒ ಶೃಂಗಸಭೆ ಅಧ್ಯಕ್ಷತೆ ವಹಿಸಿದ್ದರು. 2023ರಲ್ಲಿ ಭಾರತ ಎಸ್‌ಸಿಒ ಶೃಂಗಸಭೆ ಆಯೋಜಿಸುತ್ತದೆ. ಈ ಜವಾಬ್ದಾರಿಯುತ ಕಾರ್ಯಕ್ರಮ ಅನುಷ್ಠಾನದಲ್ಲಿ ಭಾರತಕ್ಕೆ ಸಹಾಯ ಮಾಡಲು ಕೈಲಾದಷ್ಟು ಪ್ರಯತ್ನಿಸುತ್ತೇವೆ ಎಂದು ಉಜ್ಬೇಕಿಸ್ತಾನ ವಿದೇಶಾಂಗ ಸಚಿವ ವ್ಲಾಡಿಮಿರ್ ನೊರೊವ್ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವ ಪವರ್ ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಉಡುಪಿಯ ಅಕ್ಷತಾ

    ವಿಶ್ವ ಪವರ್ ಲಿಫ್ಟಿಂಗ್‍ನಲ್ಲಿ ಭಾರತಕ್ಕೆ ಪದಕ ತಂದು ಕೊಟ್ಟ ಉಡುಪಿಯ ಅಕ್ಷತಾ

    ಉಡುಪಿ: ಕಜಕಿಸ್ತಾನದಲ್ಲಿ ನಡೆದ ವಿಶ್ವ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್‍ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಲಭಿಸಿದೆ. ದೇಶವನ್ನು ಪ್ರತಿನಿಧಿಸಿದ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಕ್ಷತಾ ಪೂಜಾರಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ.

    ಉಡುಪಿಯ ಅಕ್ಷತಾ ಪೂಜಾರಿ ಬೋಳ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವು ಚಿನ್ನದ ಪದಕ ಗೆದ್ದಿದ್ದಾರೆ. ಕಳೆದ ಬಾರಿಯ ಏಕಲವ್ಯ ಪ್ರಶಸ್ತಿ ಸಹ ಪಡೆದುಕೊಂಡಿದ್ದಾರೆ. ಈ ವರ್ಷ ಕಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್‍ನಲ್ಲಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿ ಜೊತೆ ಲಕ್ಕಿ ಕಾರಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ ಹೊರಟ್ಟಿ

    ಅಕ್ಷತಾ ಅವರು ರಾಜ್ಯ ಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 5 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿಗೆ ಭಾಜನರಾಗಿದ್ದರು. ರಾಷ್ಟ್ರಮಟ್ಟದಲ್ಲಿ 10 ಚಿನ್ನ, 2 ಬೆಳ್ಳಿ ಪದಕಗಳೊಂದಿಗೆ 4 ಬಾರಿ ಸ್ಟ್ರಾಂಗ್ ವುಮನ್ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾ ಮಟ್ಟದಲ್ಲೂ 4 ಬಾರಿ ಚಿನ್ನ, ಕಾಮನ್ ವೆಲ್ತ್ ಕೂಟದಲ್ಲಿ 8 ಚಿನ್ನ, ವಿಶ್ವ ಮಟ್ಟದಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಏಕಾಂಗಿಯಾಗಿ ಬಾವಿ ತೋಡಿದ್ದ ಅಕ್ಷತಾ
    ಮಹಾಮಾರಿ ಕೊರೊನಾ ಬಂದ ಸಂದರ್ಭದಲ್ಲಿ ಇಡೀ ದೇಶ ಸ್ತಬ್ಧವಾಗಿತ್ತು. ಈ ಸಂದರ್ಭ ಜನ ಮನೆಯಿಂದಲೇ ಹೊರಗೆ ಬರುತ್ತಿರಲಿಲ್ಲ. ಆಗ ಅಕ್ಷತಾ ಪೂಜಾರಿ ಏಕಾಂಗಿಯಾಗಿ ತನ್ನ ಮನೆಯಲ್ಲಿ ಬಾವಿಯನ್ನು ತೋಡಿ ಸಾಧನೆ ಮಾಡಿದ್ದರು. ಇದನ್ನೂ ಓದಿ: 75 ಲಕ್ಷ ಲಂಚ ಕೊಟ್ಟಿದ್ದೇನೆ, ಬ್ಲೂಟೂತ್‍ನಲ್ಲಿ ಪರೀಕ್ಷೆ ಬರೆದಿದ್ದೇನೆ – ತನಿಖೆಗೆ ಡಿಜಿಗೆ ಪತ್ರ ಬರೆದ ಅಭ್ಯರ್ಥಿ

  • ಕಜಕಿಸ್ತಾನದಲ್ಲಿ ಹಿಂಸಾಚಾರ – ರಷ್ಯಾ ಮಿಲಿಟರಿ ಸಹಾಯದಿಂದ 8000 ಪ್ರತಿಭಟನಾಕಾರರ ಬಂಧನ!

    ಕಜಕಿಸ್ತಾನದಲ್ಲಿ ಹಿಂಸಾಚಾರ – ರಷ್ಯಾ ಮಿಲಿಟರಿ ಸಹಾಯದಿಂದ 8000 ಪ್ರತಿಭಟನಾಕಾರರ ಬಂಧನ!

    ನೂರ್-ಸುಲ್ತಾನ್: ಇಂಧನಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 8000 ಜನರನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿಂಸಾಚಾರದಲ್ಲಿ ಮೂವರು ಮಕ್ಕಳು ಸೇರಿದಂತೆ 164 ಜನರು ಸಾವನ್ನಪ್ಪಿದ್ದಾರೆ.

    ದೇಶಾದ್ಯಂತ ಒಟ್ಟು 7,939 ಜನರನ್ನು ಬಂಧಿಸಲಾಗಿದೆ ಎಂದು ಕಜಕಿಸ್ತಾನದ ಆಂತರಿಕ ಸಚಿವಾಲಯ ವರದಿ ಮಾಡಿದೆ. 30 ವರ್ಷಗಳ ಹಿಂದಿನ ಸೋವಿಯತ್ ರಾಷ್ಟ್ರ ಎದುರಿಸಿದ್ದ ಅಶಾಂತಿ ಮತ್ತೆ ಮರುಕಳಿಸಿದಂತಹ ಸ್ಥಿತಿ ಎದುರಾಗಿದೆ ಎಂದು ಕಜಕಿಸ್ತಾನದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

    ರಾಷ್ಟ್ರೀಯ ಭದ್ರತಾ ಸಮಿತಿ, ಕಜಕಿಸ್ತಾನ ಗುಪ್ತಚರ ಹಾಗೂ ಭಯೋತ್ಪಾದನಾ ವಿರೋಧಿ ಏಜೆನ್ಸಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದೆ. ಹಿಂಸಾಚಾರದಲ್ಲಿ ಬಲಿಯಾದ 164 ಜನರಿಗೆ ಶೋಕಾಚರಣೆ ನಡೆಸುವ ದಿನಾಂಕವನ್ನು ಘೋಷಿಸಿದೆ. ಇದನ್ನೂ ಓದಿ: ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

    ಪ್ರತಿಭಟನೆ ಹೇಗಾಯಿತು?
    ಇಂಧನ ಬೆಲೆಯನ್ನು ದ್ವಿಗುಣಗೊಳಿಸಿದ ಕಾರಣ ಜನವರಿ 2ರಂದು ಪ್ರತಿಭಟನೆ ಪ್ರಾರಂಭವಾಗಿತ್ತು. ತೀವ್ರಗತಿಯಲ್ಲಿ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗಿತ್ತು. ದೇಶದಲ್ಲಿ ಅಶಾಂತಿ ಹೆಚ್ಚಿದಂತೆ ಮಂತ್ರಿ ಕ್ಯಾಬಿನೆಟ್ ರಾಜೀನಾಮೆ ನೀಡಿದ್ದು, ಮಂತ್ರಿ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಅವರು ನುರ್ಸುಲ್ತಾನ್ ನಜರ್ಬಯೇವ್ ಅವರನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿದರು. ಸರ್ಕಾರ ರಿಯಾಯಿತಿಯಾಗಿ ವಾಹನ ಇಂಧನದ ಮೇಲೆ 180 ದಿನಗಳ ಬೆಲೆಮಿತಿಯನ್ನು ಹಾಗೂ ಯುಟಿಲಿಟಿ ದರದ ಹೆಚ್ಚಳವನ್ನು ತೆಗೆದು ಹಾಕಿತ್ತು. ರಿಯಾಯಿತಿಯ ಬಳಿಕವೂ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಇದನ್ನೂ ಓದಿ: ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ

    ಸರ್ಕಾರಿ ಕಟ್ಟಡಗಳನ್ನು ಸುಟ್ಟು ಹಾಕಲಾಯಿತು. ಕಜಕಿಸ್ತಾನದ ಅತೀ ದೊಡ್ಡ ನಗರವಾದ ಅಲ್ಮಾಟಿಯಲ್ಲಿ ಪ್ರತಿಭಟನಾಕಾರರು ದಾಳಿ ನಡೆಸಿ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡರು. ಹಲವು ದಿನಗಳವರೆಗೆ ಬೀದಿಗಳಲ್ಲಿ ಆಗಾಗ ಗುಂಡಿನ ಚಕಮಕಿಗಳು ನಡೆಯುತ್ತಲೇ ಇದ್ದವು. ಘಟನೆಯಲ್ಲಿ ನೂರಾರು ಜನರು ಸಾವನ್ನಪ್ಪಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ತೀವ್ರವಾದ ಅಶಾಂತಿಯನ್ನು ಅಧಿಕಾರಿಗಳು ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ತುರ್ತು ಪರಿಸ್ಥಿತಿ ಘೋಷಿಸಿದರು. ರಷ್ಯಾ ನೇತೃತ್ವದ ಮಿಲಿಟರಿ ಒಕ್ಕೂಟವಾದ ಕಲೆಕ್ಟಿವ್ ಸೆಕ್ಯೂರಿಟಿ ಟ್ರೀಟಿ ಆರ್ಗನೈಸೇಶನ್‌ನಿಂದ ಸಹಾಯ ಕೋರಲಾಯಿತು. ಸುಮಾರು 2,500 ರಷ್ಯಾದ ಸೈನಿಕರನ್ನು ಕಜಕಿಸ್ತಾನಕ್ಕೆ ಕಳುಹಿಸಲಾಯಿತು. ಹೀಗೆ ಸುಮಾರು 8 ಸಾವಿರ ಪ್ರತಿಭಟನಾಕಾರರನ್ನು ಬಂಧಿಸಲು ಸಾಧ್ಯವಾಯಿತು ಎಂದು ಕಜಕಿಸ್ತಾನದ ಅಧಿಕಾರಿಗಳು ತಿಳಿಸಿದರು.

  • ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ

    ಕಜಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಪ್ರತಿಭಟನೆಗೆ 18 ಅಧಿಕಾರಿಗಳು ಬಲಿ

    ಕಜಕಿಸ್ತಾನ: ಇಂಧನ ಬೆಲೆ ಏರಿಕೆ ಹಿನ್ನೆಲೆ ಕಜಕಿಸ್ತಾನಲ್ಲಿ ಜನ ನಡೆಸುತ್ತಿರುವ ಪ್ರತಿಭಟನೆಗೆ 18 ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

    ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ.

    ಈ ಪರಿಣಾಮ ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಪರಿಣಾಮ ಗಲಾಟೆ ಉಲ್ಬಣಗೊಂಡಿದ್ದು, ಈ ಘರ್ಷಣೆಯಲ್ಲಿ 18 ಅಧಿಕಾರಿಗಳು ಸಾವನ್ನಪ್ಪಿದ್ದು, 748 ಮಂದಿಗೆ ಗಾಯಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2,298 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:  ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

    2021ರಲ್ಲಿ ಎಲ್‍ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಗಿದೆ. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

    ತೈಲ ಬೆಲೆ ಭಾರೀ ಏರಿಕೆ, ಕಜಕಿಸ್ತಾನದಲ್ಲಿ ಹಿಂಸಾಚಾರ – ಸರ್ಕಾರ ಪತನ

    ಕಜಕಿಸ್ತಾನ: ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಕಜಕಿಸ್ತಾನ ಸರ್ಕಾರದ ಕ್ಯಾಬಿನೆಟ್‌ ರಾಜೀನಾಮೆ ನೀಡಿದೆ.

    ತೈಲ ಉತ್ಪಾದನೆಯ ಮಧ್ಯ ಏಷ್ಯಾದ ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಇದನ್ನು ಖಂಡಿಸಿ ಜನರು ತೀವ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಹಿಂಸಾಚಾರಕ್ಕೆ ಸಿಲುಕಿದ್ದು, 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ಗಾಯಗೊಂಡಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಅದಕ್ಕೂ ಬಗ್ಗದ ಜನತೆ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜೀನಾಮೆ ನೀಡಿದೆ. ಅಧ್ಯಕ್ಷ ಕಸ್ಸಿಮ್-ಜೊಮಾರ್ಟ್‌ ಟೊಕಾಯೆವ್‌ ಅವರು ಸರ್ಕಾರದ ರಾಜೀನಾಮೆ ಅಂಗೀಕರಿಸಿದ್ದಾರೆ. ಇದನ್ನೂ ಓದಿ: ಬಿಪಿನ್‌ ರಾವತ್‌ ಇದ್ದ ಹೆಲಿಕಾಪ್ಟರ್‌ ದುರಂತಕ್ಕೆ ಪೈಲಟ್‌ ದೋಷವೇ ಕಾರಣ

     

    ಬುಧವಾರ ಸರ್ಕಾರ ರಾಜೀನಾಮೆ ನೀಡಿದರೂ ಘರ್ಷಣೆ ನಿಂತಿಲ್ಲ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಕ್ಷಣ ಕ್ಷಣವೂ ಪ್ರತಿಭಟನೆ ಹಿಂಸಾತ್ಮಕವಾಗಿ ಪರಿಣಮಿಸುತ್ತಿದೆ. ಬ್ಯಾಂಕ್, ಅಂಗಡಿ, ರೆಸ್ಟೋರೆಂಟ್‌ಗಳ ಮೇಲೆ ದಾಳಿಯಾಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ.

    ಈ ವರ್ಷದ ಆರಂಭದಲ್ಲಿ ಸರ್ಕಾರವು ಎಲ್‌ಪಿಜಿ ಮೇಲಿನ ಬೆಲೆ ಹೆಚ್ಚಳ ಮಾಡಿದ್ದರಿಂದ ಪ್ರತಿಭಟನೆ ಶುರುವಾಯಿತು. ಎಲ್‌ಪಿಜಿ ಮೇಲಿನ ಬೆಲೆ ನಿಯಂತ್ರಣವನ್ನು ಮರುಸ್ಥಾಪಿಸಲು ಹಾಗೂ ಅದನ್ನು ಗ್ಯಾಸೋಲಿನ್‌, ಡೀಸೆಲ್‌ ಮತ್ತು ಇತರೆ ಗ್ರಾಹಕ ಸರಕುಗಳಿಗೆ ವಿಸ್ತರಿಸಲು ಪ್ರಾಂತೀಯ ಗವರ್ನರ್‌ಗಳಿಗೆ ಕಜಕಿಸ್ತಾನ ಅಧ್ಯಕ್ಷ ಆದೇಶಿಸಿದ್ದಾರೆ.

    ಕಜಕಿಸ್ತಾನದ ದಕ್ಷಿಣದ ನಗರಗಳಾದ ಶೈಮ್ಕೆಂಟ್‌ ಮತ್ತು ತಾರಾಜ್‌ನಲ್ಲಿ ಮಂಗಳವಾರ ರಾತ್ರಿಯಿಡೀ ಸರ್ಕಾರಿ ಕಟ್ಟಡಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಈ ಘರ್ಷಣೆಯಲ್ಲಿ 95 ಪೊಲೀಸ್‌ ಅಧಿಕಾರಿಗಳು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಮೋದಿಗೆ ಭದ್ರತಾ ಲೋಪ – ಪಂಜಾಬ್ ತನ್ನ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ: ಬೊಮ್ಮಾಯಿ

    2021ರಲ್ಲಿ ಎಲ್‌ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಯಿತು. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

  • ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ

    ನೂರ್ ಸುಲ್ತಾನ್: ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವೊಂದು ಕಟ್ಟಡಕ್ಕೆ ಡಿಕ್ಕಿ ಹೊಡೆದು 14 ಸಾವನ್ನಪ್ಪಿದ ದುರಂತ ಕಝಾಕಿಸ್ತಾನದ ಅಲ್ಮಾಟಿ ಪ್ರದೇಶದಲ್ಲಿ ಸಂಭವಿಸಿದೆ.

    ಸುಮಾರು 100 ಮಂದಿ ಪ್ರಯಾಣಿಸುತ್ತಿದ್ದ ವಿಮಾನ ಕಝಾಕಿಸ್ತಾನದ ಅಲ್ಮಾಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೂರ್ ಸುಲ್ತಾನ್‍ಗೆ ಹೊರಟಿತ್ತು. 95 ಪ್ರಯಾಣಿಕರು ಹಾಗೂ 5 ಮಂದಿ ವಿಮಾನ ಸಿಬ್ಬಂದಿಯನ್ನು ಹೊತ್ತು ಈ ವಿಮಾನ ನೂರ್ ಸುಲ್ತಾನ್‍ಗೆ ಹೊರಟಿತ್ತು. ಆದರೆ ಏರ್‌ಪೋರ್ಟ್‌ನಿಂದ ವಿಮಾನ ಟೇಕಾಪ್ ಆದ ಕೆಲವೇ ಕ್ಷಣದಲ್ಲಿ ಈ ದುರ್ಘಟನೆ ಘಟಿಸಿದೆ.

    ಏರ್‌ಪೋರ್ಟ್‌ ಸಮೀಪವಿದ್ದ ಎರಡು ಅಂತಸ್ತಿನ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ 14 ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗೆ 22ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದು, ಗಾಯಗೊಂಡವರನ್ನು ವಿಮಾನ ನಿಲ್ದಾಣದ ಆಸ್ಪತ್ರೆಗೆ ರವಾನಿಸಲಾಗಿದೆ.

    ಪೈಲೆಟ್ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಆದರೆ ವಿಮಾನ ಪತನಕ್ಕೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ.

    ಈ ಅಪಘಾತದಲ್ಲಿ ವಿಮಾನವು ಎರಡು ಭಾಗವಾಗಿದದ್ದು, ಅರ್ಧದಷ್ಟು ಕಟ್ಟಡ ನೆಲಸಮವಾಗಿದೆ. ಈ ಬಗ್ಗೆ ಕಝಾಕಿಸ್ತಾನ ಅಧ್ಯಕ್ಷ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಅಪಘಾತಕ್ಕೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗುತ್ತದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.