Tag: Kayadu Lohar

  • ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ಕೇವಲ ಒಂದೇ ಒಂದು ಹಿಟ್ ಸಿನಿಮಾ, ನಟಿ ಕಯಾದು ಲೋಹರ್ (Kayadu Lohar) ಅವರ ವೃತ್ತಿ ಜೀವನವನ್ನೇ ಬದಲಾಯಿಸಿದೆ. ತಮಿಳಿನ ʻಡ್ರ್ಯಾಗನ್ʼ (Dragon) ಚಿತ್ರ ಈ ಸುಂದರಿಯನ್ನು ರಾತ್ರೋರಾತ್ರಿ ತಾರೆಯನ್ನಾಗಿಸಿತು. ಈಗ ಸುಮಾರು ಆರು ಚಿತ್ರಗಳು ಅವರ ನಟನೆಯನ್ನು ಬಯಸಿ ಕ್ಯೂ ನಿಂತಿವೆ!

    ಕಯಾದುಗೆ ಕಾಲಿವುಡ್‌ನಲ್ಲಿ ಮಾತ್ರವಲ್ಲ, ಟಾಲಿವುಡ್‌ನಲ್ಲೂ ಅದೃಷ್ಟದ ಬಾಗಿಲು ತೆರೆದಿದೆ. ಶ್ರೀ ವಿಷ್ಣು ಮತ್ತು ಅಲ್ಲೂರಿ ಚಿತ್ರಗಳ ಮೂಲಕ ತೆಲುಗು ಚಿತ್ರರಂಗಕ್ಕೆ (Telugu Cinima) ಪಾದಾರ್ಪಣೆ ಮಾಡಿದಾಗ ಇವರ ಕಡೆ ಯಾರೂ ಹೆಚ್ಚು ಗಮನ ಹರಿಸಿರಲಿಲ್ಲ. ಡ್ರ್ಯಾಗನ್ ಸೂಪರ್ ಹಿಟ್ ಆದ ನಂತರ ಕಯಾದು ಹಾಟ್ ಫೇವರಿಟ್ ಹೀರೋಯಿನ್ ಆಗಿದ್ದು, ತೆಲುಗು ಚಿತ್ರಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ನಟ ವಿಶ್ವಕ್ ಸೇನ್ ನಟನೆಯ ‘ಫಂಕಿ’ ಚಿತ್ರಕ್ಕೂ ಕಯಾದು ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.

    ಜಿ.ವಿ. ಪ್ರಕಾಶ್ ಕುಮಾರ್ ಮತ್ತು ಕಯಾದು ಅಭಿನಯದ ಮುಂಬರುವ ಚಿತ್ರ ‘ಇಮ್ಮಾರ್ಟಲ್’ನ (Immortal) ಫಸ್ಟ್-ಲುಕ್ ಪೋಸ್ಟರ್ ಈಗಾಗಲೇ ಅಧಿಕೃತವಾಗಿ ಅನಾವರಣಗೊಳಿಸಲಾಗಿದೆ. ಮರಿಯಪ್ಪನ್ ಚಿನ್ನಾ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಪೋಸ್ಟರ್ ಯುವ ಜನರನ್ನು ಆಕರ್ಷಿಸುತ್ತಿದೆ. ಈ ಪೋಸ್ಟರ್‌ನಲ್ಲೂ ʻಡ್ರ್ಯಾಗನ್ʼನ ಚಿತ್ರವಿದ್ದು, ನಟಿಯ ಯಶಸ್ಸಿನ ಛಾಯೇ ಎದ್ದು ಕಾಣುತ್ತಿದೆ.

    ಸಧ್ಯ ತಮಿಳಿನಲ್ಲಿ ‘ಇದಯಂ ಮುರಳಿ’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾ ಜೂನ್‌ ಇಲ್ಲವೇ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇವುಗಳ ಜೊತೆಗೆ ಇನ್ನೂ ಆರು ಚಿತ್ರಗಳಲ್ಲಿ ನಟಿಸಲು ಕಯಾದು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

    2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರದಲ್ಲಿ ಕಯಾದು ನಾಯಕಿಯಾಗಿ ನಟಿಸಿದ್ದರು.

  • ‌’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ

    ‌’ಡ್ರ್ಯಾಗನ್’ ಸಕ್ಸಸ್ ಬೆನ್ನಲ್ಲೇ ಸ್ಟಾರ್ ನಟನಿಗೆ ಕಯಾದು ಲೋಹರ್ ಜೋಡಿ

    ‌’ಡ್ರ್ಯಾಗನ್’ (Dragon) ಚಿತ್ರದ ಸಕ್ಸಸ್ ಬಳಿಕ ಕಯಾದು ಲೋಹರ್‌ಗೆ ಬೇಡಿಕೆ ಹೆಚ್ಚಾಗಿದೆ. ತೆಲುಗು, ತಮಿಳಿನಿಂದಲೂ ನಟಿಗೆ ಅವಕಾಶಗಳು ಹರಿದು ಬರುತ್ತಿವೆ. ಇದೀಗ ಹೊಸ ಸಿನಿಮಾಗೆ ಕಾಲಿವುಡ್ ಸ್ಟಾರ್ ನಟ ಸಿಂಬುಗೆ ಕಯಾದು ನಾಯಕಿಯಾಗಿದ್ದಾರೆ. ಇದನ್ನೂ ಓದಿ:ಸತತ 7 ಸಿನಿಮಾಗಳು ಫ್ಲಾಪ್- ಗೆಲುವಿಗಾಗಿ ಕಾಯ್ತಿದ್ದಾರೆ ಪೂಜಾ ಹೆಗ್ಡೆ

    ಸಿಂಬು (Simbu) ನಟನೆಯ 49ನೇ ಚಿತ್ರಕ್ಕೆ (STR 49) ಕಯಾದು ಹೀರೋಯಿನ್ ಆಗಿದ್ದಾರೆ. ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ಜರುಗಿದೆ. ಹೊಸ ಪಾತ್ರದ ಮೂಲಕ ಮೋಡಿ ಮಾಡಲು ಕನ್ನಡದ ‘ಮುಗಿಲ್‌ಪೇಟೆ’ ನಟಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ- ಮೊದಲ ಮಗುವಿನ ನಿರೀಕ್ಷೆಯಲ್ಲಿ ವರುಣ್ ತೇಜ್ ದಂಪತಿ

    ರಾಮ್ ಕುಮಾರ್ ಬಾಲಕೃಷ್ಣ ನಿರ್ದೇಶನದ ಹೊಸ ಚಿತ್ರದಲ್ಲಿ ಸಿಂಬು ಮತ್ತು ಕಯಾದು ಕಾಣಿಸಿಕೊಳ್ತಿದ್ದಾರೆ. ವಿಭಿನ್ನವಾಗಿರೋ ಕಥೆಯನ್ನೇ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ.

     

    View this post on Instagram

     

    A post shared by kayadulohar (@kayadu_lohar_official)

    ‌’ಡ್ರ್ಯಾಗನ್’ ಫೆ.25ರಂದು ರಿಲೀಸ್ ಆಗಿತ್ತು. ಪ್ರದೀಪ್ ರಂಗನಾಥನ್, ಅನುಪಮಾ ಪರಮೇಶ್ವರನ್ ಜೊತೆ ಕಯಾದು ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿ ಒಟಿಟಿಯಲ್ಲೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

     

    View this post on Instagram

     

    A post shared by Dawn Pictures (@dawn.picture)

    ಅಂದಹಾಗೆ, ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರದ ನಾಯಕಿಯಾಗಿ ಕಯಾದು ಸಿನಿ ಪಯಣ ಶುರು ಮಾಡಿದರು. 2021ರಲ್ಲಿ ಚಿತ್ರ ರಿಲೀಸ್ ಆಗಿತ್ತು.

  • ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್

    ನ್ನಡದ ‘ಮುಗಿಲ್‌ಪೇಟೆ’ (Mugilpete Kannada) ಚಿತ್ರದ ನಟಿ ಕಯಾದು ಲೋಹರ್ (Kayadu Lohar) ಇದೀಗ ಸೌತ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಯಾದು ನಟಿಸಿದ ತಮಿಳಿನ ‘ಡ್ರ್ಯಾಗನ್’ (Dragon Film) ಸಿನಿಮಾ ಸಕ್ಸಸ್ ಕಂಡಿದೆ. ಈ ಬೆನ್ನಲ್ಲೇ ಹಲವಾರು ಸಿನಿಮಾ ಅವಕಾಶಗಳು ಅವರನ್ನು ಅರಸಿ ಬಂದಿವೆ. ಸ್ಟಾರ್ ನಟನ ಜೊತೆ ನಟಿಸುವ ಚಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಜಾನ್ವಿ ಕಪೂರ್‌ಗೆ ವಿಶೇಷ ಉಡುಗೊರೆ ನೀಡಿದ ರಾಮ್ ಚರಣ್ ಪತ್ನಿ

    ಫೆ.21ರಂದು ರಿಲೀಸ್ ಆದ ತಮಿಳಿನ ‘‌ಡ್ರ್ಯಾಗನ್’ ಸಿನಿಮಾದಲ್ಲಿ ಪ್ರದೀಪ್ ರಂಗನಾಥನ್‌ಗೆ ನಾಯಕಿಯಾಗಿ ಗಮನ ಸೆಳೆದಿದ್ದಾರೆ. ಈ ಸಿನಿಮಾ ಯಶಸ್ವಿಯಾಗಿದೆ. ಈ ಬೆನ್ನಲ್ಲೇ ತಮಿಳಿನ ಖ್ಯಾತ ನಟ ಸಿಂಬು (Simbu) ನಟನೆಯ ಹೊಸ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾದ ವಿಚಾರವೊಂದು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರವನ್ನು ರಾಮ್ ಕುಮಾರ್ ಎಂಬುವವರು ನಿರ್ದೇಶನ ಮಾಡ್ತಿದ್ದಾರೆ.

    ಇನ್ನೂ ತೆಲುಗಿನ ನಟ ವಿಶ್ವಕ್ ಸೇನ್ ನಟನೆಯ ‘ಫಂಕಿ’ ಚಿತ್ರಕ್ಕೂ ಕಯಾದು ಅವರನ್ನೇ ನಾಯಕಿಯಾಗಿ ಸೆಲೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಎರಡು ಪ್ರಾಜೆಕ್ಟ್‌ಗಳ ಬಗ್ಗೆ ಅಧಿಕೃತವಾಗಿ ಘೋಷಣೆ ಆಗುವವರೆಗೂ ಕಾದುನೋಡಬೇಕಿದೆ.

    ಸದ್ಯ ಕಯಾದು ತಮಿಳಿನ ‘ಹೃದಯಂ ಮುರಳಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಥರ್ವಗೆ ನಾಯಕಿಯಾಗಿ ಸಾಥ್ ನೀಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

    2021ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ‘ಮುಗಿಲ್‌ಪೇಟೆ’ ಚಿತ್ರಕ್ಕೆ ನಾಯಕಿಯಾಗಿ ಕಯಾದು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಆ ನಂತರ ಮಲಯಾಳಂ, ತೆಲುಗು, ಮರಾಠಿ ಸಿನಿಮಾಗಳಲ್ಲಿ ನಟಿಸಿದರು. ಈಗ ತೆಲುಗಿನಿಂದಲೂ ಅವಕಾಶಗಳು ಸಿಗುತ್ತಿವೆ.

  • ಬೀಚ್‍ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮುಗಿಲ್ ಪೇಟೆ ಬೆಡಗಿ

    ಬೀಚ್‍ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮುಗಿಲ್ ಪೇಟೆ ಬೆಡಗಿ

    – ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ

    ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್ ಪೇಟೆ ಸಿನಿಮಾ ಸದ್ದು ಮಾಡುತ್ತಿದ್ದು, ಭಾರೀ ನಿರೀಕ್ಷೆ ಮೂಡಿಸಿದೆ. ಇದೇ ವೇಳೆ ಮನೋರಂಜನ್‍ಗೆ ಜೋಡಿಯಾಗಿ ಹೊಸ ನಟಿ ಕಯಾದು ಲೋಹರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಅವರಿಗೆ ಇದು ಮೊದಲ ಸಿನಿಮಾ ಆಗಿದೆ.

     

    View this post on Instagram

     

    A post shared by kayadulohar (@kayadu_lohar)

    ರವಿಚಂದ್ರನ್ ರೀತಿಯಲ್ಲೇ ಮನೋರಂಜನ್ ಸಹ ಕ್ರಿಯೇಟಿವಿಟಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದೀಗ ಮುಗಿಲ್ ಪೇಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಆದರೆ ಈ ಸಿನಿಮಾದ ನಾಯಕಿಯ ಕುರಿತು ಇದೀಗ ಚರ್ಚೆ ಶುರುವಾಗಿದ್ದು, ಇದಕ್ಕೆ ಕಾರಣ ಕಯಾಲು ಹಾಕಿರುವ ಹಾಟ್ ಫೋಟೋಗಳು. ಹೌದು ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿರುವ ಚಿತ್ರಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಪಡ್ಡೆ ಹುಡುಗರು ನಿಬ್ಬೆರಗಾಗಿದ್ದಾರೆ.

     

    View this post on Instagram

     

    A post shared by kayadulohar (@kayadu_lohar)

    ಪುಣೆ ಮೂಲದ ಕಯಾದು, ಇತ್ತೀಚೆಗೆ ಚೀಚ್‍ಗೆ ತೆರಳಿದ ಫೋಟೋಗಳನ್ನು ಹಂಚಿಕೊಂಡಿದ್ದು, ಬಿಕಿನಿ ತೊಟ್ಟು ಸೂರ್ಯನ ಕಿರಣಗಳಿಗೆ ಮೈವೊಡ್ಡಿದ್ದಾರೆ. ಈ ಫೋಟೋಗಳನ್ನು ಕಂಡ ಪಡ್ಡೆ ಹುಡುಗರು, ಪುಳಕಿತರಾಗಿದ್ದಾರೆ, ಕಣ್ಣರಳಸಿ ನೋಡುತ್ತಿದ್ದಾರೆ. ಮಾಡೆಲ್ ಆಗಿರುವ ಕಯಾದು ಅವರಿಗೆ ಮುಗಿಲ್ ಪೇಟೆ ಚೊಚ್ಚಲ ಸಿನಿಮಾ ಆಗಿದೆ. ಹೀಗಾಗಿ ಸಂಪೂರ್ಣವಾಗಿ ಸಿನಿಮಾ ತೊಡಗಿಸಿಕೊಂಡಿದ್ದಾರೆ.

    ಮುಗಿಲ್ ಪೇಟೆ ಸಿನಿಮಾ ಚಿತ್ರೀಕಣ ಅಂತಿಮ ಹಂತ ತಲುಪಿದ್ದು, ಕೊನೇ ಹಂತದ ಕೆಲಸಗಳಲ್ಲಿ ತೊಡಗಿದೆ. ಇನ್ನೇನು ಬಿಡುಗಡೆ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ನಟಿ ಕಯಾದು ಅವರು ಸಖತ್ ಹಾಟ್ ಫೊಟೋಗಳನ್ನು ಹಾಕಿದ್ದಾರೆ.