Tag: Kavyashree Gowda

  • ಮಾಡರ್ನ್ ಲುಕ್‌ನಲ್ಲಿ ಮಿಂಚಿದ ಬಿಗ್ ಬಾಸ್ ಖ್ಯಾತಿಯ ಕಾವ್ಯಶ್ರೀ ಗೌಡ

    ಮಾಡರ್ನ್ ಲುಕ್‌ನಲ್ಲಿ ಮಿಂಚಿದ ಬಿಗ್ ಬಾಸ್ ಖ್ಯಾತಿಯ ಕಾವ್ಯಶ್ರೀ ಗೌಡ

    ಕಿರುತೆರೆಯ ಮಂಗಳಗೌರಿ ಮದುವೆ, ಬಿಗ್ ಬಾಸ್ (Bigg Boss) ಮೂಲಕ ಮೋಡಿ ಮಾಡಿದ್ದ ಚೆಲುವೆ ಕಾವ್ಯಶ್ರೀ ಗೌಡ (Kavyashree Gowda) ಸಿನಿಮಾರಂಗಕ್ಕೆ ಬರಲು ಸಕಲ ತಯಾರಿ ಮಾಡ್ತಿದ್ದಾರೆ. ಸದ್ಯ ಅಳುಮುಂಜಿ ಮಂಗಳಗೌರಿ ಮಾಡರ್ನ್ ಲುಕ್‌ನಲ್ಲಿ ಮಿಂಚಿರುವ ಹೊಸ ಫೋಟೋಶೂಟ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ಮಂಗಳಗೌರಿಯಾಗಿ ಅಪಾರ ಅಭಿಮಾನಿಗಳ ಮನಗೆದ್ದ ನಟಿ ಕಾವ್ಯಶ್ರೀ, ತಮ್ಮ ಮುಗ್ಧ ನಟನೆಯ ಮೂಲಕ ಸೈ ಎನಿಸಿಕೊಂಡಿದ್ದರು. ಬಿಗ್ ಬಾಸ್ ಸೀಸನ್ 9ಕ್ಕೂ (Bigg Boss Kannada 9) ಕಾಲಿಟ್ಟು ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡರು.

    ಆರೆಂಜ್ ಕಲರ್ ಟಾಪ್, ವೈಟ್ ಮತ್ತು ನೀಲಿ ಮಿಕ್ಸ್ ಜೀನ್ಸ್‌ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಕರ್ಲಿ ಫ್ರಿ ಹೇರ್ಸ್ ಬಿಟ್ಟು ಕ್ಯಾಮೆರಾ ಕಣ್ಣಿಗೆ ಮುದ್ದಾಗಿ ಪೋಸ್ ನೀಡಿದ್ದಾರೆ. ಸದಾ ಟ್ರಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಈಗ ಮಾಡರ್ನ್ ಅವತಾರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಂಗಳಗೌರಿಯ ನಯಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

    ದೊಡ್ಮನೆಯಿಂದ ಹೊರ ಬಂದ ಮೇಲೆ ಚಿತ್ರರಂಗದಲ್ಲಿ ಮಿಂಚಲು ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಕಾವ್ಯಶ್ರೀ ರೆಡಿಯಿದ್ದಾರೆ. ಸಿನಿಮಾಗಾಗಿ ಕಥೆಗಳನ್ನ ನಟಿ ಕೇಳುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಕುರಿತ ಅಪ್‌ಡೇಟ್‌ ಹೊರಬೀಳಲಿದೆ. ಕಿರುತೆರೆಯಲ್ಲಿ  ಕಾವ್ಯಶ್ರೀ ಯಶಸ್ಸು ಗಿಟ್ಟಿಸಿಕೊಂಡ ಹಾಗೆ ಹಿರಿತೆರೆಯಲ್ಲೂ ಅದೃಷ್ಟ ಖುಲಾಯಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ಮಂಗಳಗೌರಿ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಹಾಕಿದ ಬಿಗ್ ಬಾಸ್

    ಮಂಗಳಗೌರಿ ಮದುವೆ’ ಸೀರಿಯಲ್ ಮೂಲಕ ಮನೆ ಮಾತಾದ ನಟಿ ಕಾವ್ಯಶ್ರೀ ಗೌಡ (Kavyashree Gowda) ಬಿಗ್ ಬಾಸ್ ಮನೆಗೆ (Bigg Boss House) ಕಾಲಿಟ್ಟಿದ್ದರು. ಇದೀಗ ಈ ವಾರ ಕಾವ್ಯಶ್ರೀ ಆಟಕ್ಕೆ ಬ್ರೇಕ್ ಬಿದ್ದಿದೆ.

    ನಿರೂಪಕಿಯಾಗಿ ವೃತ್ತಿ ಜೀವನ ಶುರು ಮಾಡಿದ್ದ ನಟಿ ಕಾವ್ಯಶ್ರೀ ಮಂಗಳಗೌರಿಯಾಗಿ ಮೋಡಿ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮನರಂಜನೆ, ಟಾಸ್ಕ್ ಎಲ್ಲದರಲ್ಲೂ ಸೈ ಎನಿಸಿಕೊಂಡಿದ್ದ ಸ್ಪರ್ಧಿ ಕಾವ್ಯಶ್ರೀ ಈ ವಾರ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

    ಸಾನ್ಯ ಅಯ್ಯರ್, ವಿನೋದ್ ಗೊಬ್ಬರಗಾಲ, ಎಲಿಮಿನೇಷನ್ ನಂತರ ಇದೀಗ ಕಾವ್ಯಶ್ರೀ ಔಟ್ ಆಗಿರೋದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ‌‌. ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ನಟಿಯ ಬಿಗ್ ಬಾಸ್ ಆಟ ಕೊನೆಯಾಗಿದೆ‌. ಇದನ್ನೂ ಓದಿ: ಕೆನಡಾ ಟಿಕ್ ಟಾಕ್ ತಾರೆ ಮೇಘಾ ಠಾಕೂರ್ ನಿಧನ

    ಒಟ್ನಲ್ಲಿ ಸಿನಿಮಾ ನಾಯಕಿಯಾಗಬೇಕೆಂದು ಕನಸು ಹೊತ್ತ ಕಾವ್ಯಶ್ರೀ ಅವರ ಸಿನಿಪಯಣಕ್ಕೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿಯ ಆಟ ಕೊನೆಯಾಗಲಿದೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಮೂಡ್‌ನಲ್ಲಿ `ಸಿಂಹಪ್ರಿಯ’

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ : ರೂಪೇಶ್ ರಾಜಣ್ಣ ಕಳಪೆ, ಕಾವ್ಯಶ್ರೀ ಗೌಡ ಕ್ಯಾಪ್ಟನ್

    ಬಿಗ್ ಬಾಸ್ (Bigg Boss) ಸೀಸನ್ 9 ಕಾರ್ಯಕ್ರಮ ಇದೀಗ ಏಳನೇ ವಾರದಲ್ಲಿ ಮುನ್ನುಗ್ಗುತ್ತಿದೆ. ಈ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ವಿಚಾರದಲ್ಲಿ ನಾನಾ ರೀತಿಯ ವಾಗ್ವಾದಗಳೇ ನಡೆದಿದ್ದರೂ, ಕೊನೆಗೂ ಕ್ಯಾಪ್ಟನ್ ಆಗಿ ಕಾವ್ಯಶ್ರೀ ಗೌಡ (Kavyashree Gowda) ಆಯ್ಕೆಯಾಗಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಕ್ಯಾಪ್ಟನ್ ಆಗಲು ನಾನಾ ಕಸರತ್ತುಗಳನ್ನು ಮಾಡಿದ್ದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna), ಕಳಪೆ ಹಣೆಪಟ್ಟಿ ಪಡೆದಿದ್ದಾರೆ.

    ರೂಪೇಶ್ ರಾಜಣ್ಣಗೆ ಕಳಪೆ ಹಣೆಪಟ್ಟಿ ಕಟ್ಟಲು ಕಾರಣ, ಅವರು ಈ ವಾರ ಮನೆಯಲ್ಲಿ ಆಡಿದ ಮಾತು. ತೀರಾ ಒರಟು ಒರಟಾಗಿ ಎಲ್ಲರೊಂದಿಗೆ ಮಾತನಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಇಂಥದ್ದೊಂದು ಸ್ಥಾನ ಅವರಿಗೆ ಸಿಕ್ಕಿದೆ. ಕಳಪೆ ಸಿಕ್ಕ ಕಾರಣಕ್ಕಾಗಿ ಜೈಲಿಗೂ ಕಳುಹಿಸಲಾಗಿದೆ. ವಿನೋದ್ ಗೊಬ್ಬರಗಾಲ, ಅರುಣ್ ಸಾಗರ್, ಅನುಪಮಾ ಗೌಡ, ಕಾವ್ಯಶ್ರೀ ಗೌಡ, ದಿವ್ಯಾ, ದೀಪಿಕಾ ದಾಸ್, ರಾಕೇಶ್ ಅಡಿಗ ಸೇರಿದಂತೆ ಬಹುತೇಕರು ರೂಪೇಶ್ ರಾಜಣ್ಣನ ಕುರಿತಾದ ಮಾತಿನಲ್ಲೇ ಇದನ್ನೇ ವಿವರಿಸಿದರು. ಇದನ್ನೂ ಓದಿ: ವ್ಯಾಯಾಮ ಮಾಡುತ್ತಿದ್ದಾಗ ಜಿಮ್ ನಲ್ಲಿ ಕುಸಿದು ಬಿದ್ದು ನಟ ಸಿದ್ಧಾಂತ್ ನಿಧನ

    ದಿವ್ಯಾ ಉರುಡುಗ ಅಂತೂ ರೂಪೇಶ್ ರಾಜಣ್ಣನ ಮೇಲೆ ಆರೋಪಗಳ ಸುರಿಮಳೆಯನ್ನೂ ಸುರಿಸಿದರು. ನನ್ನೊಂದಿಗೆ ರೂಪೇಶ್ ರಾಜಣ್ಣ ಫೇಕ್ ರೀತಿಯಲ್ಲಿ ನಡೆದುಕೊಂಡರು. ಹಾಗಾಗಿ ನಾನು ಕಳಪೆ ಕೊಡುತ್ತಿದ್ದೇನೆ ಎಂದು ನೇರವಾಗಿಯೇ ತಿಳಿಸಿದರು. ಈ ಎಲ್ಲರ ಮಾತಿಗೆ ಪ್ರತಿಕ್ರಿಯೆ ನೀಡಿರುವ ರೂಪೇಶ್ ರಾಜಣ್ಣ, ‘ಈ ಮನೆಯಲ್ಲಿ ಯಾವ ರೀತಿ ಮಾತನಾಡಬೇಕು, ಎಷ್ಟು ಟೋನ್ ನಲ್ಲಿ ಮಾತನಾಡಬೇಕು ಎಂದು ಯಾವ ರೂಲ್ಸೂ ಇಲ್ಲ. ನನ್ನ ಸ್ಟೈಲ್ ನಲ್ಲೇ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಸಿ ನೀಡಿದರು.

    Live Tv
    [brid partner=56869869 player=32851 video=960834 autoplay=true]

  • ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ನಗೋದಕ್ಕೂ ನಿನ್ನ ಪರ್ಮಿಷನ್ ಕೇಳಬೇಕಾ ಎಂದು ರಾಕಿ ವಿರುದ್ಧ ಕಾವ್ಯ ಗರಂ

    ದೊಡ್ಮನೆಯ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾಕಷ್ಟು ರೋಚಕ ತಿರುವುಗಳನ್ನು ಪಡೆದುಕೊಂಡು 5ನೇ ವಾರದತ್ತ ಮುನ್ನುಗ್ಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) ಆತ್ಮೀಯರಾಗಿ ಗುರುತಿಸಿಕೊಂಡಿದ್ದ ಕಾವ್ಯಶ್ರೀ (Kavyashree) ಮತ್ತು ರಾಕೇಶ್ ಅಡಿಗ (Rakesh Adiga) ಮಧ್ಯೆ ಅಸಮಾಧಾನದ ಹೊಗೆಯಾಡುತ್ತಿದೆ. ಕಾವ್ಯ ವಿರುದ್ಧ ರಾಕೇಶ್ ಫುಲ್ ಗರಂ ಆಗಿದ್ದಾರೆ.

    ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ರಾಕೇಶ್ ಸ್ಮಾರ್ಟ್ ಗೇಮ್‌ನಿಂದ ಗಮನ ಸೆಳೆಯುತ್ತಿದ್ದಾರೆ. ಸದಾ ಮಹಿಳಾ ಸ್ಪರ್ಧಿಗಳ ಜೊತೆಯಿರುವ ರಾಕೇಶ್, ಮನೆಯ ಮಹಿಳಾ ಮಣಿಯರ ಫೇವರೇಟ್ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಅಮೂಲ್ಯ(Amulya Gowda) ಜೊತೆ ರಾಕಿ ಇರೋದನ್ನ ನೋಡಿ, ನನ್ನ ಅಣ್ಣ ಕೈತಪ್ಪಿ ಹೋದ ಎಂದು ಹಾಸ್ಯಮಯವಾಗಿ ಎಲ್ಲರನ್ನೂ ಕಾವ್ಯ ರಂಜಿಸಿದ್ದರು. ಇಷ್ಟೇಲ್ಲಾ ಆತ್ಮೀಯತೆ ಕಾವ್ಯ ಮತ್ತು ರಾಕಿ ನಡುವೆ ಇತ್ತು. ಈಗ ಕಾವ್ಯ ವಿರುದ್ಧ ರಾಕೇಶ್ ಸಿಡಿದೆದಿದ್ದಾರೆ.

    ಈ ವಾರದ ಅನುಪಮಾ ಗೌಡ (Anupama Gowda) ಮನೆಯ ಕ್ಯಾಪ್ಟನ್ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ನೀಡಿರುವ ಟಾಸ್ಕ್ ಓದುವ ಸಮಯದಲ್ಲಿ ಕಾವ್ಯಶ್ರೀ ನಕ್ಕಿದ್ದಾರೆ. ಈ ವೇಳೆ ರಾಕೇಶ್, ಕಾವ್ಯಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಟಾಸ್ಕ್ ವಿಷ್ಯ ಹೇಳುವಾಗ ನಗಬಾರದು ಎಂದು ತಿಳಿಯುವುದಿಲ್ಲಲ್ವಾ. ಸ್ಪಲ್ವ ಸಮಯದ ಮುಂಚೆ ಪಾತ್ರೆ ತೊಳೆಯಲು ಮೂರು ಬಾರಿ ಕರೆದೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈಗ ಇಲ್ಲಿ ಕೂತು ನಗುತ್ತೀರಾ ಎಂದು ರಾಕೇಶ್ ಕಾವ್ಯಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ:ಕಾಂತಾರ ‘ವರಾಹ ರೂಪಂ’ ಹಾಡಿಗೆ ಕೊಯಿಕ್ಕೋಡು ಕೋರ್ಟ್ ತಡೆಯಾಜ್ಞೆ

    ರಾಕಿ ಮಾತಿಗೆ ಕಾವ್ಯಶ್ರೀ ಕೂಡ ಖಾರವಾಗಿಯೇ ಉತ್ತರ ನೀಡಿದ್ದಾರೆ. ನಾನು ನಗೋದಕ್ಕೂ ನಿಮ್ಮ ಪರ್ಮಿಷನ್ ಕೇಳಬೇಕಾ ಎಂದು ಕಾವ್ಯಶ್ರೀ ಮಾತನಾಡಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ನಾಲ್ಕನೇ ಎಲಿಮಿನೇಷನ್ ಭಿನ್ನವಾಗಿ ನಡೆದಿತ್ತು. ಮಯೂರಿ ಮನೆಯಿಂದ ಹೊರಬಂದಿದ್ದರು. ಈ ವಾರ ಯಾವ ಸ್ಪರ್ಧಿಗೆ ಆಟ ಕೊನೆಯಾಗುತ್ತೇ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಾನು ಸಿಂಗಲ್, ನಂಗೂ ಜೋಡಿ ಬೇಕು ಎಂದು ಬಿಗ್ ಬಾಸ್‌ಗೆ ಕಾವ್ಯಶ್ರೀ ಬೇಡಿಕೆ

    ನಾನು ಸಿಂಗಲ್, ನಂಗೂ ಜೋಡಿ ಬೇಕು ಎಂದು ಬಿಗ್ ಬಾಸ್‌ಗೆ ಕಾವ್ಯಶ್ರೀ ಬೇಡಿಕೆ

    ಕಿರುತೆರೆಯ ಬ್ಯೂಟಿ ಕಾವ್ಯಶ್ರೀ, ಮಂಗಳಗೌರಿ(Mangalagowri) ಆಗಿ ಮೋಡಿ ಮಾಡಿದ್ದರು. ಇದೀಗ ದೊಡ್ಮನೆಯಲ್ಲಿ ಕಮಾಲ್ ಮಾಡುತ್ತಿರುವ ಕಾವ್ಯ ಬಿಗ್ ಬಾಸ್‌ಗೆ(Bigg Boss) ಬಹುದೊಡ್ಡ ಬೇಡಿಕೆ ಇಟ್ಟಿದ್ದಾರೆ. ಎಲ್ರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಜೋಡಿ ಬೇಕು ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ.

    ಕಾವ್ಯಶ್ರೀ ಗೌಡ(Kavyashree Gowda) ತಮ್ಮದೇ ಶೈಲಿಯಲ್ಲಿ ದೊಡ್ಮನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಎಲ್ಲರ ಜೊತೆ ಬರೆಯುತ್ತಾ ಹಾಸ್ಯಪ್ರಜ್ಞೆಯಿಂದ ಮನೆಯವರ ಮನಗೆದ್ದಿದ್ದಾರೆ. ಇತ್ತೀಚೆಗೆ ಕಾವ್ಯ ಆಡಿರುವ ಮಾತು ಕೇಳಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಸಾಮಾನ್ಯವಾಗಿ ಸ್ಪರ್ಧಿಗಳ ಮಧ್ಯೆ ಕಂಫರ್ಟ್ ಜೋನ್ ಇದ್ದ ಕಡೆ ಜೋಡಿಯಾಗಿ ಕಾಲ ಕಳೆಯುತ್ತಾರೆ. ಈ ವಿಷ್ಯವಾಗಿ ಇದೀಗ ರಾಕೇಶ್‌, ಕಾಲೆಳೆದು ಕಾಮಿಡಿ ಮಾಡಿದ್ದಾರೆ. ಇದನ್ನೂ ಓದಿ:ಭಾರತ್ ಜೋಡೋ ಪಾದಯಾತ್ರೆ – ಕೈ-ಕೈ ಹಿಡಿದು ಹೆಜ್ಜೆ ಹಾಕಿದ ರಾಹುಲ್, ರಮ್ಯಾ

    ಕಾವ್ಯಶ್ರೀ ಮತ್ತು ರಾಕೇಶ್ ನಡುವೆ ಒಳ್ಳೆಯ ಬಾಂದವ್ಯವಿತ್ತು. ರಾಕಿ ಅನ್ನು ಅಣ್ಣ ಎಂದು ಕರೆಯುತ್ತಿದ್ದರು. ಆದರೆ ಈಗ ರಾಕೇಶ್ ಹೆಚ್ಚಾಗಿ ಅಮೂಲ್ಯ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ ಇದೇ ವಿಷಯದ ಬಗ್ಗೆ ಕಾವ್ಯಶ್ರೀ(Kavyashree Gowda) ಹಾಸ್ಯಮಯವಾಗಿ ಮಾತನಾಡಿ ಎಲ್ಲರನ್ನೂ ನಗಿಸಿದ್ದಾರೆ.

    ಇಲ್ಲಿ ಎಲ್ಲರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು. ಆಟ ಆಡುವಾಗಲೂ ನಾನು ಸಿಂಗಲ್. ಗ್ರೂಪಲ್ಲಿ ಇದ್ದರೂ ನಾನು ಸಿಂಗಲ್ ಎಂದು ತಮ್ಮ ಬೇಡಿಕೆಯನ್ನ ಹಾಸ್ಯದ ರೂಪದಲ್ಲಿ ನಟಿಸಿ, ಎಲ್ಲರನ್ನೂ ನಗಿಸಿದ್ದಾರೆ. ನನಗೂ ಒಬ್ಬ ಜೋಡಿ ಬೇಕು ಎಂದು ಕಾವ್ಯ ಹೊಸ ಬೇಡಿಕೆಯನ್ನ ಇಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ನನ್ನ ಕ್ರಶ್ ಯಶ್ ತರಹನೇ ಇದ್ದ: ಬಿಗ್ ಬಾಸ್ ಮನೆಯಲ್ಲಿ ಕಾವ್ಯಶ್ರೀ ಗೌಡ ಬಹಿರಂಗ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬಹಿರಂಗಗೊಳ್ಳುತ್ತಿವೆ. ಅದರಲ್ಲಿ ಬಹುಪಾಲು ಪ್ರೀತಿ, ಪ್ರೇಮ, ಬ್ರೇಕ್ ಅಪ್, ಕ್ರಶ್ ಕುರಿತದ್ದೇ ಆಗಿರುತ್ತವೆ. ಬಿಗ್ ಬಾಸ್ ಓಟಿಟಿ ನಡೆದ ಸಂದರ್ಭದಲ್ಲಂತೂ ದೊಡ್ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳಿಗೆ ಲವ್ ಫೆಲ್ಯುವರ್ ಆಗಿತ್ತು. ಎರಡನೇ ಸಂಬಂಧವನ್ನೂ ಇಟ್ಟುಕೊಂಡವರಿದ್ದರು. ತಮ್ಮ ಜೀವನದಲ್ಲಾದ ಘಟನೆಗಳನ್ನು ಕ್ಯಾಮೆರಾ ಮುಂದೆ ಬಿಚ್ಚಿಟ್ಟು ನೋಡುಗರು ಆಡಿಕೊಂಡು ನಗುವಂತೆ ಮಾಡಿದ್ದರು. ಇದೀಗ ಬಿಗ್ ಬಾಸ್ ಸೀಸನ್ 9ರಲ್ಲೂ ಅದು ಮುಂದುವರೆದಿದೆ.

    ಮಂಗಳಗೌರಿ ಮದುವೆ ಧಾರಾವಾಹಿಯಲ್ಲಿ ಡಿಗ್ಲಾಮ್ ಪಾತ್ರ ಮಾಡಿದ್ದ, ಅಳುಮುಂಜಿ ಹುಡುಗಿ ಎಂದೇ ಖ್ಯಾತರಾಗಿದ್ದ ಕಾವ್ಯಶ್ರೀ ಗೌಡ (Kavyashree Gowda) ತಮ್ಮ ಕ್ರಶ್ ಬಗ್ಗೆ ಹೇಳಿಕೊಂಡಿದ್ದಾರೆ. ಅದು ಒಂದಲ್ಲ, ಎರಡೆರಡು ಕ್ರಶ್ ಗಳ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಹಂಚಿಕೊಳ್ಳುವಾಗ ಅವರು ರಾಕಿಂಗ್ ಸ್ಟಾರ್ ಯಶ್ (Yash) ಅವರನ್ನೂ ನೆನಪಿಸಿಕೊಂಡಿದ್ದಾರೆ. ಎರಡು ಕ್ರಶ್ ಗಳಲ್ಲಿ ಒಂದಕ್ಕೆ ಯಶ್ ಸ್ಪೂರ್ತಿ ಎಂದು ಹೇಳಿದ್ದಾರೆ. ಇದನ್ನೂ ಓದಿ:ಸಮಂತಾ ಬದುಕಿನಲ್ಲಿ ಮತ್ತೆ ಬ್ರೇಕಪ್ ಬಿರುಗಾಳಿ

    ಇವರಿಗೆ ಪ್ರಪ್ರಥಮ ಬಾರಿಗೆ ಕ್ರಶ್ (Crush) ಆಗಿದ್ದು ಅಜ್ಜಿ ಊರಿಗೆ ಜಾತ್ರೆಗೆ ಹೋದಾಗಂತೆ. ಅಜ್ಜಿ ಊರಿಗೆ ಜಾತ್ರೆಗೆಂದು ಹೋಗಿದ್ದೆ. ಅಲ್ಲೊಂದು ಗುಂಪಿತ್ತು. ಆ ಗುಂಪಿನಲ್ಲಿದ್ದ ಒಬ್ಬ ಹುಡುಗ ಥೇಟ್ ಯಶ್ ತರಹವೇ ಇದ್ದ. ಹಾಗಾಗಿ ಅವನ ಮೇಲೆ ಮೊದಲ ಬಾರಿಗೆ ಕ್ರಶ್ ಆಯಿತು. ಆ ಹುಡುಗರ ಗುಂಪು ನನ್ನನ್ನೇ ಫಾಲೋ ಮಾಡುತ್ತಿತ್ತು. ತೀರಾ ಹತ್ತಿರ ಬರೋಕೆ ಶುರುವಾಯಿತು. ನನಗೆ ಭಯನೋ ಭಯ. ಯಶ್ ರೀತಿಯಲ್ಲೇ ಕಾಣುತ್ತಿದ್ದ ಆ ಹುಡುಗ ತೀರಾ ಸಮೀಪಕ್ಕೆ ಬಂದು ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ತನ್ನ ಫೋನ್ ನಂಬರ್ ಇರುವ ಚೀಟಿ ಹಾಕಿದ್ದ ಎಂದು ನೆನಪಿಸಿಕೊಂಡಿದ್ದಾರೆ ಕಾವ್ಯಶ್ರೀ ಗೌಡ.

    ಮತ್ತೊಮ್ಮೆ ಕ್ರಶ್ ಆಗಿದ್ದು ಕೂಡ ದೇವಸ್ಥಾನದಲ್ಲೇ ಎಂದಿದ್ದಾರೆ ನಟಿ. ಇವರು ತಿರುಪತಿ ಬೆಟ್ಟ ಹತ್ತುವಾಗ ಇವರನ್ನೇ ಫಾಲೋ ಮಾಡುತ್ತಿದ್ದ ಹುಡುಗನ ಮೇಲೆ ಕ್ರಶ್ ಆಗಿತ್ತಂತೆ. ‘ನಾನು ಮತ್ತು ನನ್ನ ತಾಯಿ ತಿರುಪತಿ ಬೆಟ್ಟ ಏರುತ್ತಿದ್ದವು. ಆ ಹುಡುಗ, ನಮ್ಮನ್ನೇ ಫಾಲೋ ಮಾಡಿಕೊಂಡು ಬರುತ್ತಿದ್ದ. ಬೆಟ್ಟ ಹತ್ತುವಾಗ ನಮಗಿಂತ ಮುಂಚೆ ಇರುತ್ತಿದ್ದ, ನಂತರ ಮತ್ತೆ ಹಿಂದುಳಿಯುತ್ತಿದ್ದ. ಅವನು ಯಾಕೆ ಹಾಗೆ ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುವ ಹೊತ್ತಿಗೆ ನನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಅವನು ಲಡ್ಡು ಇಟ್ಟುಬಿಟ್ಟಿದ್ದ. ಜೊತೆಗೆ ಫೋನ್ ನಂಬರ್ ಇರುವ ಚೀಟಿನೂ ಇತ್ತು’ ಎಂದು ಎರಡನೇ ಕ್ರಶ್ ಬಗ್ಗೆ ನೆನಪಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ (Bigg Boss House) ಮನೆಯಲ್ಲಿ ಸಂಖ್ಯೆ ನೋಡಿ ಭವಿಷ್ಯ ಹೇಳುವ ಮೂಲಕ ಹೈಲೆಟ್ ಆಗಿದ್ದ ಆರ್ಯವರ್ಧನ್ ಗುರೂಜಿ ನಂತರ ತುಟಿ, ಹಲ್ಲು, ಮೂಗು ನೋಡಿಯೂ ಭವಿಷ್ಯ ಹೇಳುತ್ತಿದ್ದರು. ಇದೀಗ ಮುಖದ ಮೇಲಿನ ಕಾವ್ಯಶ್ರೀ ಮಚ್ಚೆ ನೋಡಿ, ಗುರೂಜಿ ಭವಿಷ್ಯ ನುಡಿದಿದ್ದಾರೆ.

    ದೊಡ್ಮನೆಯಲ್ಲಿ ಅಡುಗೆ, ಟಾಸ್ಕ್, ತಮ್ಮ ನೇರವಾದ ಮಾತಿನಿಂದ ಈಗಾಗಲೇ ಹೈಲೆಟ್ ಆಗಿರುವ ಗುರೂಜಿ(Aryavardhan Guruji) ಆಗಾಗ ಸ್ಪರ್ಧಿಗಳಿಗೆ ಭವಿಷ್ಯ ನುಡಿಯುತ್ತಾರೆ. ಕಳೆದ ಬಾರಿ ಅಮೂಲ್ಯಗೆ (Amulya Gowda) ತುಟಿ ನೋಡಿ ಭವಿಷ್ಯ ಹೇಳಿದ್ದರು ಇದೀಗ ಮಚ್ಚೆ ನೋಡಿ ಕಾವ್ಯಶ್ರೀ (Kavyashree Gowda) ಭವಿಷ್ಯ ಹೇಳಿರೋದು ನೋಡುಗರ ಗಮನ ಸೆಳೆಯುತ್ತಿದೆ.

    ಬಿಗ್ ಬಾಸ್ (Bigg Boss Kannada)  ಮನೆಯಲ್ಲಿ ಮಚ್ಚೆ ವಿಚಾರವಾಗಿ ಗುರೂಜಿ ಮತ್ತು ಕಾವ್ಯಶ್ರೀ (Kavyashree) ಮಧ್ಯೆ ದೊಡ್ಡ ಚರ್ಚೆ ನಡೆದಿದೆ. ತನ್ನ ಮುಖದ ಮೇಲೆ ಮಚ್ಚೆ ಬಂದಿದೆ ಅಂತಾ ಹೇಳಿದ್ದಕ್ಕೆ ನಿಮ್ಮನ್ನ ತುಂಬಾ ಜನ ಲೈನ್ ಹೊಡೀತಾರೆ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ. ಎಷ್ಟು ಜನಕ್ಕಾದರೂ ನೀನು ಬೀಳಬಹುದು ಅಥವಾ ನೀನು ಬೀಳಿಸಿಕೊಳ್ಳಬಹುದು. ಅದು ನಿನ್ನ ವೈಯಕ್ತಿಕ ಎಂದು ಗುರೂಜಿ ಹೇಳಿದ್ದಾರೆ. ಇದನ್ನೂ ಓದಿ:‘ಕಾಂತಾರ’ದ ಮೂಗುತಿ ಸುಂದರಿಗೆ ಮೂಗು ಚುಚ್ಚಲು ಹೇಳಿದ್ದು ಅದೇ ಶೆಟ್ರು

    ಓಹ್, ಹೌದಾ ಆಗಲಿ ಬಿಡಿ. ಚೆನ್ನಾಗಿರೋರನ್ನ ನೋಡಿ ಮದುವೆ ಆಗುತ್ತೇನೆ ಎಂದು ಭವಿಷ್ಯ ನುಡಿದಿದ್ದಾರೆ. ಗುರೂಜಿ ಅವರ ಮಚ್ಚೆ ಶಾಸ್ತ್ರಕ್ಕೆ ಕಾವ್ಯಶ್ರೀ ಖುಷಿಯಿಂದಲೇ ಪ್ರತಿಯುತ್ತರ ನೀಡಿದ್ದಾರೆ. ಇನ್ನೂ ಈ ವಾರದ ಟಾಸ್ಕ್‌ನಲ್ಲಿ ನಿಧಿ ಶೋಧಕಿಯಾಗಿ ಕಾವ್ಯಶ್ರೀ ಗುರುತಿಸಿಕೊಂಡಿದ್ದರು. ಟಾಪ್ 3 ಹಂತದವರೆಗೂ ಕ್ಯಾಪ್ಟೆನ್ಸಿಗೆ ಪೈಪೋಟಿ ಕೊಟ್ಟಿದ್ದರು. ಆದರೆ ಕಡೆಯ ಹಂತದಲ್ಲಿ ರೇಸ್‌ನಿಂದ ಹೊರಬಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮೊದಲು ಕಳ್ಳತನ ಮಾಡ್ತಿದ್ರಾ? ಕಾವ್ಯಶ್ರೀ ಖತರ್ನಾಕ್‌ ಕೆಲಸಕ್ಕೆ ಅಚ್ಚರಿಗೊಂಡ ಅರುಣ್‌ ಸಾಗರ್

    ಮೊದಲು ಕಳ್ಳತನ ಮಾಡ್ತಿದ್ರಾ? ಕಾವ್ಯಶ್ರೀ ಖತರ್ನಾಕ್‌ ಕೆಲಸಕ್ಕೆ ಅಚ್ಚರಿಗೊಂಡ ಅರುಣ್‌ ಸಾಗರ್

    ಬಿಗ್ ಬಾಸ್(Bigg Boss) ಮನೆಯಲ್ಲಿ `ಮಂಗಳಗೌರಿ’ (Mangala Gowri) ಕಾವ್ಯಶ್ರೀ ಕಾಲಿಟ್ಟಿದ್ದಾರೆ. ಚೆನ್ನಾಗಿ ಆಟವಾಡುತ್ತ ಆಗಾಗ ತಮ್ಮ ಹುಸಿಕೋಪದಿಂದ ಹೈಲೆಟ್ ಆಗುತ್ತಿದ್ದಾರೆ. ಸದ್ಯ ಪ್ರಶಾಂತ್ ಸಂಬರ್ಗಿ ಅವರ ಸೂಟ್‌ಕೇಸ್‌ನ ಗೊತ್ತಿಲ್ಲದ ಪಾಸ್‌ವರ್ಡ್ ಟಕ್ಕನೇ ತೆಗೆದು ಕಾವ್ಯಶ್ರೀ ಅಚ್ಚರಿ ಮೂಡಿಸಿದ್ದಾರೆ.

    `ಮಂಗಳಗೌರಿ ಮದುವೆ’ ಸೀರಿಯಲ್ ಮೂಲಕ ಮನೆಮಾತಾದ ನಟಿ ಕಾವ್ಯಶ್ರೀ ಇದೀಗ ಬಿಗ್ ಬಾಸ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಸಂಬರ್ಗಿ ಅವರ ಸೂಟ್‌ಕೇಸ್ ಲಾಕ್ ಓಪನ್ ಮಾಡಿ ಎಲ್ಲರಿಗೂ ಕಾವ್ಯಶ್ರೀ ಶಾಕ್ ಕೊಟ್ಟಿದ್ದಾರೆ. ಗೊತ್ತಿಲ್ಲದ ಪಾಸ್‌ವರ್ಡ್‌ ಟಕ್ಕನೇ ಓಪನ್ ಮಾಡಿ, ತಮ್ಮ ಕೈಚಳಕ ತೋರಿಸಿದ್ದಾರೆ.

    ಟಾಸ್ಕ್‌ ನಂತರ ಸಂಬರ್ಗಿ ತಮ್ಮ ಸೂಟ್‌ಕೇಸ್ ಪಾಸ್ ವರ್ಡ್ ಮರೆತಿದ್ದರು. ಅದನ್ನ ಓಪನ್ ಮಾಡಲಾಗದೇ ಪರಡಾಡುತ್ತಿದ್ದರು. ಈ ವೇಳೆ ಕಾವ್ಯಶ್ರೀ ಸೂಟ್‌ಕೇಸ್ ಓಪನ್ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಕಾವ್ಯಶ್ರೀ ಕೈಚಳಕ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಜೊತೆಗೆ ಸಂಬರ್ಗಿಗೆ ಕಾವ್ಯಳನ್ನ ಅಸಿಸ್ಟೆಂಟ್ ಮಾಡಿಕೋ ಎಂದು ಅರುಣ್ ಸಾಗರ್ (Arun Sagar) ರೇಗಿಸಿದ್ದಾರೆ. ಸಂಬರ್ಗಿ ಅವರು ಎರಡು ಬ್ಯಾಗ್‌ಗಳನ್ನು ಕಾವ್ಯ ಓಪನ್ ಮಾಡಿ ಕೊಟ್ಟಿದ್ದಾರೆ. ಕಾವ್ಯ ಕೈಚಳಕ ನೋಡಿ, ಮನೆಯಲ್ಲಿ ಏನಾದ್ರೂ ಕದಿಯುತ್ತಿದ್ರಾ ಎಂದು ಅರುಣ್ ಸಾಗರ್ ಕೇಳಿದ್ದಾರೆ. ಇದನ್ನೂ ಓದಿ:ಗಲ್ಲಾಪೆಟ್ಟಿಗೆಗೆ ಕನ್ನಾ ಹಾಕಿದ ʻಕಾಂತಾರʼ: 2ನೇ ವಾರವೂ ಯಶಸ್ವಿ ಪ್ರದರ್ಶನ

    ಇನ್ನೂ ಕಾವ್ಯಶ್ರೀ ಅವರನ್ನ ಕಳ್ಳತನಕ್ಕೆ ಕರೆದುಕೊಂಡು ಹೋದರೆ ವರ್ಕೌಟ್ ಆಗುತ್ತದೆ ಎಂದು ಅರುಣ್ ಸಾಗರ್ ಕಾವ್ಯಶ್ರೀ ಅವರ ಕಾಲೆಳೆದಿದ್ದಾರೆ. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿರುವ ಕಾವ್ಯಶ್ರೀ ಈ ವಾರ ನಾಮಿನೇಷನ್‌ನಿಂದ ಬಚಾವ್ ಆಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾವ್ಯಶ್ರೀಗೆ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ ಆರ್ಯವರ್ಧನ್ ಗುರೂಜಿ

    ಕಾವ್ಯಶ್ರೀಗೆ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ ಆರ್ಯವರ್ಧನ್ ಗುರೂಜಿ

    ಬಿಗ್ ಬಾಸ್ ಮನೆ(Bigg Boss House) ಸಾಕಷ್ಟು ವಿಚಾರವಾಗಿ ಹೈಲೆಟ್ ಆಗುತ್ತಿದೆ. 13ನೇ ದಿನಕ್ಕೆ ಕಾಲಿಟ್ಟಿರುವ ದೊಡ್ಮನೆ ಈಗ ರಣರಂಗವಾಗಿದೆ. ಮೊದಲನೇ ದಿನವಿದ್ದ ನಗು, ಶಾಂತಿ, ಶಿಸ್ತು ಇದೀಗ ಮರೆಯಾಗಿದೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ (Aryavardhan Guruji) ಮೇಲೆ ಆಗಾಗ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಇದರಿಂದ ರೋಸಿ ಹೋಗಿರುವ ಗುರೂಜಿ ತಮ್ಮ ಕೋಪವನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಮಾತನಾಡಿಸಿರುವ ಕಾವ್ಯಶ್ರೀಗೆ ಚಾಕು ತೋರಿಸಿ ಕೈ ಕೊಯ್ದುಕೊಳ್ತೀನಿ ಎಂದು ಹೆದರಿಸಿದ್ದಾರೆ.

    ದೊಡ್ಮನೆಯಲ್ಲಿ ತಮ್ಮ ಚಾಣಾಕ್ಷತನ, ಅಡುಗೆ, ಟಾಸ್ಕ್ ಆಡುವ ವೈಖರಿಯಿಂದ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಹಾಗೆಯೇ ತಮ್ಮ ನೇರ ಮಾತುಗಳಿಂದ ಕೆಲ ಸ್ಪರ್ಧಿಗಳ ಮುಂದೆ ನಿಷ್ಠುರ ಕೂಡ ಆಗಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮೇಲೆ ಪ್ರ್ಯಾಂಕ್‌ಗಳು ಆಗುತ್ತಲೇ ಇರುತ್ತದೆ. ಈ ಪರಿಣಾಮ ಸಿಟ್ಟಿನಲ್ಲಿದ್ದ ವೇಳೆಯಲ್ಲಿ ಕಾವ್ಯಶ್ರೀ ಗೌಡ (Kavyashree Gowda) ಕೂಡ ಗುರೂಜಿ ಅನ್ನು ಕೆಣಕಿದ್ದಾರೆ. ಈ ವೇಳೆ ಗುರೂಜಿ ಕಾವ್ಯಗೆ ಕೈ ಕೊಯ್ದುಕೊಳ್ತೀನಿ ಎಂದು ಬೆದರಿಸಿದ್ದಾರೆ.

    ಮನೆಯಲ್ಲಿ ಕ್ಯಾಪ್ಟೆನ್ಸಿ ವಿಚಾರವಾಗಿ ಗುರೂಜಿ ಮೇಲೆ ಪ್ರ್ಯಾಂಕ್ ನಡೆದ ಬಳಿಕ ಹತಾಶರಾಗಿದ್ದರು. ಈ ವೇಳೆ ನಾಟಕೀಯವಾಗಿ ಮಾತನಾಡುತ್ತಾರೆ, ಚುಚ್ಚಿ ಮಾತನಾಡಿದ್ದು, ಬೇಸರವಾಯಿತು ಎಂದು ಪದೇ ಪದೇ ಕಾವ್ಯಶ್ರೀ ವಿರುದ್ಧ ಗುರೂಜಿ ಮಾತನಾಡಿದ್ದಾರೆ. ಈ ಪರಿಣಾಮ ನಾಟಕೀಯವಾಗಿ ಎಲ್ಲಿ ಮಾತನಾಡಿದೆ ಎಂದು ಕಾವ್ಯ ಮರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ ಕಾವ್ಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈ ವಿಷ್ಯ ಬಿಡು ಇಲ್ಲಾಂದ್ರೆ ನಾನು ಕೈ ಕೊಯ್ದುಕೊಳ್ಳುತ್ತೇನೆ ಎಂದು ಕಾವ್ಯ ವಿರುದ್ಧ ಗುರೂಜಿ ಫುಲ್ ರಾಂಗ್ ಆಗಿದ್ದಾರೆ.‌ ಇದನ್ನೂ ಓದಿ:ಸಿಮ್ ಖರೀದಿಸಲು ಬಂದ ನಟಿಯನ್ನು ಕೂಡಿ ಹಾಕಿದ ಕಚೇರಿ ಸಿಬ್ಬಂದಿ

    ಇನ್ನೂ ವಿನೋದ್ ಗೊಬ್ಬರಗಾಲ ಕ್ಯಾಪ್ಟನ್ಸಿ ನಂತರ 3ನೇ ವಾರದ ಕ್ಯಾಪ್ಟನ್ ಆಗಿ ಆರ್ಯವರ್ಧನ್ ಆಯ್ಕೆ ಆಗಿದ್ದಾರೆ. ಟಾಸ್ಕ್‌ನಲ್ಲಿ ದರ್ಶ್, ದಿವ್ಯಾ, ಅಮೂಲ್ಯ ಅವರನ್ನ ಸೋಲಿಸಿ ಕ್ಯಾಪ್ಟನ್ ಆಗಿದ್ದಾರೆ. ವಾರದ ಕಳಪೆ ಹಣೆಪಟ್ಟಿ ಪಡೆದು ರಾಕೇಶ್ ಅಡಿಗ ಜೈಲು ಸೇರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ: ಗೊಬ್ಬರಗಾಲಗೆ ಕಾವ್ಯಶ್ರೀ ವಾರ್ನಿಂಗ್

    ದೊಡ್ಮನೆ ಇದೀಗ ಒಂಭತ್ತು ದಿನಗಳನ್ನ ಪೂರೈಸಿ 10ನೇ ದಿನದತ್ತ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್(Bigg Boss House) ಮನೆಯ ಆಟ ಹಲವು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಪ್ರೀತಿ ,ಕೋಪ,ಜಗಳ ಎಲ್ಲವೂ ಹೈಲೆಟ್ ಆಗುತ್ತಿದೆ. ಇದೀಗ ವಿನೋದ್ ಗೊಬ್ಬರಗಾಲ(Vinod Gobbaragala) ಮಾತಿಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ ಎಂಬ ಖಡಕ್ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ(Bigg Boss) ಕಳೆದಿರುವ ಒಂದೇ ವಾರಕ್ಕೆ ಅಸಮಾಧಾನದ ಹೊಗೆಯಾಡುತ್ತಿದೆ. ಅದರಲ್ಲೂ ಕಾವ್ಯಶ್ರೀ ಗೌಡ, ವಿನೋದ್ ಗೊಬ್ಬರಗಾಲಾ ತಮಾಷೆ ಮಾಡಲು ಹೋಗಿ, ಹೋಗಿ ಜಗಳ ಆಡ್ತಾ ಇದ್ದಾರೆ. ಕಾವ್ಯಶ್ರೀ(Kavyashree) ಕಣ್ಣೀರು ಹಾಕಿದ್ದಾರೆ. ಮನೆಮಂದಿಗೆ ರಂಜಿಸಲು ನಾಟಕ ಮಾಡುವಾಗ ಮುಸರೆ ತಿಕ್ಕುವವಳು, ಕಸ ಗುಡಿಸುವವಳನ್ನು ಯಾಕೆ ರಾಣಿ ಮಾಡಿದ್ದೀರಾ ಎಂದು ಗೊಬ್ಬರ ಹೇಳಿರುವ ಮಾತು ಕಾವ್ಯಶ್ರೀಗೆ ಬೇಸರವಾಗಿದೆ.

    ಬಳಿಕ ಊಟ ಮಾಡುವಾಗ ಕೂಡ ಈ ಜಟಾಪಟಿ ಮುಂದುವರೆದಿದೆ. ಬಾ ಅನ್ನ ಹಾಕು ಎಂದು ಗೊಬ್ಬರಗಾಲ ಆಡಿರುವ ಮಾತು ಕಾವ್ಯಶ್ರೀ ಕಣ್ಣೀರಿಗೆ ಕಾರಣವಾಗಿದೆ. ಗೌರವ ಕೊಡದೇ ಗೊಬ್ಬರಗಾಲ ಮಾತನಾಡುತ್ತಾರೆ. ನಾನು ಅವರಿಗೆ ಅಷ್ಟು ಸಲುಗೆ ಕೊಟ್ಟಿಲ್ಲ ಎಂದು ಮನೆಯವರ ಮುಂದೆ ಕಾವ್ಯಶ್ರೀ ಅಳಲು ತೋಗಿಕೊಂಡಿದ್ದಾರೆ. ಇದನ್ನೂ ಓದಿ:ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಮೂರು ದಿನದ ಗಳಿಕೆ 230 ಕೋಟಿಗೂ ಅಧಿಕ

    ಬಳಿಕ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ದುಷ್ಟ ಗುಣ ಬಗ್ಗೆ ಟ್ಯಾಗ್ ಲೈನ್ ವಿವರಣೆ ಕೊಡುವ ಟಾಸ್ಕ್ ಇತ್ತು. ಈ ವೇಳೆ ಕಾವ್ಯ ಕೋಪ ಮತ್ತು ಅಹಂಕಾರದ ಬೋರ್ಡ್ ಅನ್ನು ಗೊಬ್ಬರಗಾಲಗೆ ಕೊಟ್ಟು ವಿವರಿಸಿದ್ದರು. ಒಬ್ಬ ವ್ಯಕ್ತಿಗೆ ಮರ್ಯಾದೆ ಕೊಟ್ಟು ಮಾತನಾಡುವ ಗುಣವಿಲ್ಲ. ಕೇಳುವ ಪರಿಜ್ಞಾನವೂ ಇಲ್ಲ. ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಬಂದಿದ್ದೇನೆ. ನನಗೆ ಬದಕಲು ಬಿಡಿ ಎಂದು ವಿನೋದ್‌ಗೆ ಕಾವ್ಯಶ್ರೀ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]