Tag: Kaviya Maran

  • Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ

    ಜೋಹನ್ಸ್ ಬರ್ಗ್: ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ಫ್ರಾಂಚೈಸ್ ಮಾಲೀಕರಾದ ಕಲಾನಿಧಿ ಮಾರನ್ ಅವರ ಮಗಳು ಕಾವ್ಯ ಮಾರನ್ (Kaviya Maran) ಐಪಿಎಲ್‍ನ (IPL) ಬಿಡ್ಡಿಂಗ್ ವೇಳೆ ಕಾಣಿಸಿಕೊಂಡು ಗಮನಸೆಳೆದಿದ್ದರು. ಆ ಬಳಿಕ ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 (SA20) ಲೀಗ್‍ನಲ್ಲಿ ಕಾವ್ಯ ಮಾರನ್‍ಗೆ ಪ್ರೇಕ್ಷಕನೋರ್ವ ಮದುವೆ ಪ್ರಸ್ತಾಪವಿಟ್ಟಿದ್ದಾನೆ.

    ದಕ್ಷಿಣ ಆಫ್ರಿಕಾ ಟಿ20 ಲೀಗ್‍ನಲ್ಲಿ ಆಡುತ್ತಿರುವ ತಂಡ ಸನ್‍ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಸಹಮಾಲೀಕರಾದ ಕಾವ್ಯ ಮಾರನ್‍ರನ್ನು ನೋಡಿ ಪಂದ್ಯ ವೀಕ್ಷಿಸಲು ಬಂದಿದ್ದ ಪ್ರೇಕ್ಷಕನೋರ್ವ Will You Marry Me ಎಂಬ ಪೋಸ್ಟರ್ ಹಿಡಿದು ಮದುವೆ ಪ್ರಸ್ತಾಪವಿಟ್ಟಿದ್ದಾನೆ. ಈ ಮೂಲಕ ಐಪಿಎಲ್‍ನಲ್ಲಿ ಲಕ್ಷಾಂತರ ಹುಡಗರ ಮನಸ್ಸು ಕದ್ದಿದ್ದ ಚೆಲುವೆ ಇದೀಗ ಇಂಟರ್‌ನ್ಯಾಷನಲ್‌ ಕ್ರಶ್ ಆಗಿದ್ದಾರೆ. ಇದನ್ನೂ ಓದಿ: Hockey World Cup: ವೇಲ್ಸ್ ವಿರುದ್ಧ ಭಾರತಕ್ಕೆ 4-2 ಅಂತರದ ಗೆಲುವು – ಕ್ವಾರ್ಟರ್ ಫೈನಲ್ ಆಸೆ ಜೀವಂತ

    ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾವ್ಯ ಮಾರನ್ ಕಾಣಿಸಿಕೊಂಡಿದ್ದರು. ಜೊತೆಗೆ ಐಪಿಎಲ್ ಹರಾಜು ವೇಳೆ ಕೂಡ ಕಾವ್ಯ ಮಾರನ್ ಆ್ಯಕ್ಟಿವ್ ಆಗಿದ್ದರು. ಇದನ್ನೂ ಓದಿ: ಪಾಂಡ್ಯ ವಿವಾದಾತ್ಮಕ ಔಟ್ – ತೀರ್ಪಿನ ವಿರುದ್ಧ ಕಿಡಿಕಾರಿದ ಪತ್ನಿ ನತಾಶಾ

    ಯಾರು ಕಾವ್ಯ ಮಾರನ್?
    ಕಾವ್ಯ ಮಾರನ್ ಅವರ ತಂದೆ ಕಲಾನಿಧಿ ಮಾರನ್ ಅವರು ಸನ್ ಟಿವಿ ನೆಟ್‍ವರ್ಕ್‍ನ ಮಾಲೀಕರಾಗಿದ್ದು, ಟಿವಿ ಚಾನೆಲ್ ಮತ್ತು ಎಫ್‍ಎಂ ಚಾನೆಲ್ ಹೊಂದಿದ್ದಾರೆ. ಕಾವ್ಯ ಮಾರನ್ ಚೆನ್ನೈನ ಸ್ಟೆಲಿಯಾ ಮಾರಿಸ್ ಕಾಲೇಜಿನಲ್ಲಿ ಬಿಕಾಂ ಪದವಿ ಬಳಿಕ ನ್ಯೂಯಾರ್ಕ್ ಯುನಿವರ್ಸಿಟಿಯಲ್ಲಿ ಎಂಬಿಎ ಮುಗಿಸಿದ್ದಾರೆ. ಆ ನಂತರ ತಮ್ಮ ಸನ್ ಟಿವಿಯಲ್ಲೇ ಒಂದು ವರ್ಷ ಕೆಲಸ ಮಾಡಿ, ಸನ್ ಟಿವಿ ನೆಟ್‍ವರ್ಕ್ ಬೋರ್ಡಿನ ನಿರ್ದೇಶಕರಾಗಿದ್ದಾರೆ. ಐಪಿಎಲ್ ಫ್ರಾಂಚೈಸ್‍ನ ಸಹಮಾಲೀಕರಾದ ಉದ್ಯಮ ಜೊತೆ ಕ್ರೀಡಾ ರಂಗದಲ್ಲಿ ಮಿಂಚುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ವಾರ್ನರ್ ಬಿಂದಾಸ್ ಬ್ಯಾಟಿಂಗ್ – ಟ್ರೋಲ್ ಕ್ವೀನ್ ಆದ ಕಾವ್ಯಾ ಮಾರನ್

    ಮುಂಬೈ: ಹೈದರಾಬಾದ್ ಮತ್ತು ಡೆಲ್ಲಿ ನಡುವಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ ಬ್ಯಾಟಿಂಗ್ ಬಳಿಕ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ನೆಟ್ಟಿಗರಗೆ ಆಹಾರವಾಗಿದ್ದಾರೆ.

    ಹೌದು ನಿನ್ನೆ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಬ್ಯಾಟಿಂಗ್ ಬಿರುಗಾಳಿ ಎಬ್ಬಿಸಿದರು. ಹೈದರಾಬಾದ್ ಬೌಲರ್‌ಗಳನ್ನು ಹೈರಾಣಾಗಿಸಿದ ವಾರ್ನರ್ ತಮ್ಮ ಈ ಹಿಂದಿನ ಫ್ರಾಂಚೈಸ್ ವಿರುದ್ಧ ಸೇಡಿಗೆ ಬಿದ್ದಂತೆ ಬ್ಯಾಟಿಂಗ್ ನಡೆಸಿದರು. ಇದನ್ನೂ ಓದಿ: ವಾರ್ನರ್, ಪೊವೆಲ್ ಪರಾಕ್ರಮ – ಹೈದರಾಬಾದ್ ಹೈರಾಣ

    ವಾರ್ನರ್ ಬೌಂಡರಿ, ಸಿಕ್ಸರ್ ಸಿಡಿಸುತ್ತ ಹಾರಿ, ಚೀರಿ ಅಜೇಯ 92 ರನ್ (58 ಎಸೆತ, 12 ಬೌಂಡರಿ, 3 ಸಿಕ್ಸ್) ಚಚ್ಚಿ ಆರಂಭದಿಂದ ಕೊನೆಯ ಎಸೆತದವರೆಗೆ ಕಾಡಿದರು. ಈ ಪ್ರದರ್ಶನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗೆ ಪ್ರಪೋಸ್ ಮಾಡಿ ಮನಗೆದ್ದ ಹುಡುಗಿ – ನೆಟ್ಟಿಗರು ಫುಲ್ ಆಕ್ಟಿವ್

    14ನೇ ಆವೃತ್ತಿ ಐಪಿಎಲ್‍ನಲ್ಲಿ ವಾರ್ನರ್ ಕಳಪೆ ಪ್ರದರ್ಶನ ತೋರಿದ ಬಳಿಕ ನಾಯಕತ್ವದಿಂದ ಕೆಳಗಿಳಿಸಿ ಕೆಲ ಪಂದ್ಯಗಳಿಂದ ವಾರ್ನರ್‌ಗೆ ಕೊಕ್ ನೀಡಲಾಗಿತ್ತು. ಆ ಬಳಿಕ 15ನೇ ಆವೃತ್ತಿ ಐಪಿಎಲ್ ಮೆಗಾ ಹರಾಜಿನಲ್ಲಿ ಹೈದರಾಬಾದ್ ತಂಡ ವಾರ್ನರ್‌ರನ್ನು ರಿಟೈನ್ ಮಾಡಿಕೊಳ್ಳದೆ ಹರಾಜಿಗೆ ಬಿಟ್ಟು ಕೊಟ್ಟಿತು. ಹರಾಜಿನಲ್ಲಿ ಡೆಲ್ಲಿ ತಂಡ ವಾರ್ನರ್‌ರನ್ನು ಖರೀದಿಸಿತು. ಇದೀಗ ವಾರ್ನರ್ ಡೆಲ್ಲಿ ಪರ ಅಬ್ಬರಿಸುತ್ತಿದ್ದಾರೆ. ಇದನ್ನೂ ಓದಿ: 10 ವಿಕೆಟ್ ಕಿತ್ತು ಇತಿಹಾಸ ಬರೆದ ಪಂದ್ಯದ ಜೆರ್ಸಿಯನ್ನು ಹರಾಜಿಗಿಟ್ಟ ಅಜಾಜ್ ಪಟೇಲ್

    ಕರ್ಮ ರೀಟರ್ನ್ ಹೊಡೆದಿದೆ. ಹೈದರಾಬಾದ್ ತಂಡ ವಾರ್ನರ್‌ಗೆ ಮಾಡಿದ ಅವಮಾನಕ್ಕೆ ಇದೀಗ ಸರಿಯಾದ ಶಿಕ್ಷೆ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿವಿಧ ಕಾಮೆಂಟ್‍ಗಳ ಮೂಲಕ ಹೈದರಾಬಾದ್ ತಂಡದ ಕಾಲೆಳೆದಿದ್ದಾರೆ.