Tag: kavitha gowda

  • ಹೊಸ ಮನೆಯ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಕವಿತಾ ಗೌಡ- ಚಂದನ್

    ಹೊಸ ಮನೆಯ ಹೊಸ್ತಿಲಲ್ಲಿ ಬಿಗ್‌ ಬಾಸ್‌ ಖ್ಯಾತಿಯ ಕವಿತಾ ಗೌಡ- ಚಂದನ್

    ಸ್ಯಾಂಡಲ್‌ವುಡ್‌ನ ರಿಯಲ್ ಕಪಲ್ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಹೊಸ ಮನೆಯ ಹೊಸ ಬದುಕಿನ ಹೊಸ್ತಿಲಲ್ಲಿದ್ದಾರೆ. ಕಳೆದ ವರ್ಷ ಹಸೆಮಣೆ ಏರಿದ್ದ ಈ ಜೋಡಿ, ಇದೀಗ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    ಕಿರುತೆರೆಯ `ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಮೂಲಕ ಮನೆಮಾತಾಗಿದ್ದ ಚಿನ್ನು ಮತ್ತು ಚಂದನ್ ಜೋಡಿ, ರಿಯಲ್ ಲೈಫ್‌ನಲ್ಲೂ ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ಕಳೆದ ವರ್ಷ ಮೇ 14ರಂದು ಸರಳವಾಗಿ ಮದುವೆಯಾಗಿದ್ದರು. ಇಬ್ಬರು ಕಲಾವಿದರಾಗಿರುವುದರಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಾಥ್ ನೀಡುತ್ತಾ ಜೊತೆಯಾಗಿ ಸಾಗುತ್ತಿದ್ದಾರೆ. ಇದೀಗ ಬಿಗ್ ಬಾಸ್ ಖ್ಯಾತಿಯ ಕವಿತಾ ಮತ್ತು ಚಂದನ್ ಹೊಸ ಜೀವನದ ಜತೆ ಹೊಸ ಮನೆಯ ಹೊಸ್ತಿಲಲ್ಲಿದ್ದಾರೆ. ಇದನ್ನೂ ಓದಿ: ಪ್ರಾಣಿ, ಪಕ್ಷಿಗಳ ಜೊತೆ ರಾಕಿಭಾಯ್ ಕುಟುಂಬ: ವಿಡಿಯೋ ಹಂಚಿಕೊಂಡ ಯಶ್

    ಬೆಂಗಳೂರಿನ ನಾಯಂಡಹಳ್ಳಿಯ ಬಳಿ ನಿನ್ನೆಯಷ್ಟೇ (ಜೂ.18) ಕವಿತಾ ಮತ್ತು ಚಂದನ್ ಗೃಹಪ್ರವೇಶ ಮಾಡಿದ್ದಾರೆ. ಇದೇ ಖುಷಿಯಲ್ಲಿ ಹೊಸ ಮನೆಯ, ಹೊಸ ಬದುಕಿನ ಹೊಸ್ತಿಲಲ್ಲಿ ಎಂದು ಅಡಿಬರಹ ನೀಡಿ ವಿಶೇಷ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ನೆಚ್ಚಿನ ಜೋಡಿಯ ಸಂತಸ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸುತ್ತಿದ್ದಾರೆ.

    Live Tv

  • ಮಾಸ್ಕ್ ಧರಿಸಿ ಮದುವೆಯಾದ ಚಂದನ್, ಕವಿತಾ ಗೌಡ

    ಮಾಸ್ಕ್ ಧರಿಸಿ ಮದುವೆಯಾದ ಚಂದನ್, ಕವಿತಾ ಗೌಡ

    ಬೆಂಗಳೂರು: ನಟ ಚಂದನ್ ಕುಮಾರ್, ನಟಿ ಕವಿತಾ ಗೌಡ ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಏಪ್ರಿಲ್ ಒಂದರಂದು ಈ ಜೋಡಿ ಎಂಗೇಜ್‍ಮೆಂಟ್ ಕೂಡ ಮಾಡಿಕೊಂಡಿತ್ತು. ಇದೀಗ ಸರಳವಾಗಿ ಚಂದನ್ ಮತ್ತು ಕವಿತಾ ಸಪ್ತಪದಿ ತುಳಿದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇಂದು ನೂತನ ದಂಪತಿಗಳು ಮಾಸ್ಕ್ ಧರಿಸಿಯೇ ಮದುವೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ. ಬೆಂಗಳೂರಿನ ಸಹಕಾರ ನಗರದಲ್ಲಿರುವ ಚಂದನ್ ಮನೆಯಲ್ಲಿ ಈ ಮದುವೆ ನೆರವೇರಿದೆ.

     

    View this post on Instagram

     

    A post shared by K A V I T H A (@iam.kavitha_official)

    ಏಪ್ರಿಲ್ ಒಂದರಂದು ಬೆಂಗಳೂರಿನ ಖಾಸಗಿ ಹೋಟೆಲ್‍ವೊಂದರಲ್ಲಿ ಚಂದನ್ ಮತ್ತು ಕವಿತಾ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ನೆರವೇರಿತ್ತು. ಆನಂತರ ಮೇ 13-14ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ಈ ಜೋಡಿ ಹೇಳಿಕೊಂಡಿತ್ತು. ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಯಲ್ಲಿ ಚಂದು ಮತ್ತು ಚಿನ್ನು ಪಾತ್ರಗಳಲ್ಲಿ ಮಿಂಚಿದವರು ಚಂದನ್ ಕುಮಾರ್ ಮತ್ತು ಕವಿತಾ ಗೌಡ. ಧಾರಾವಾಹಿಯಲ್ಲಿ ಯಶಸ್ವಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಸೆಲೆಬ್ರಿಟಿಗಳು ಈಗ ನಿಜಜೀವನದಲ್ಲೂ ಜೋಡಿಯಾಗಿದ್ದಾರೆ.

     

    View this post on Instagram

     

    A post shared by K A V I T H A (@iam.kavitha_official)

    ಪ್ರಸ್ತುತ ಕೊರೊನಾ ಲಾಕ್‍ಡೌನ್ ಇರುವುರಿಂದ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ, ಕೋವಿಡ್ ನಿಯಮಗಳ ಅನ್ವಯದಂತೆ ಚಂದನ್ ಮತ್ತು ಕವಿತಾ ಅವರ ವಿವಾಹವು ಸರಳವಾಗಿ ನಡೆದಿದೆ. ಚಂದನ್ ಮತ್ತು ಕವಿತಾ ಮಾಸ್ಕ್ ಧರಿಸಿಯೇ ಮದುವೆಯಾಗಿದ್ದು ವಿಶೇಷವಾಗಿತ್ತು. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಇದೀಗ ತಮ್ಮ ಪ್ರೀತಿಗೆ ಮದುವೆಯ ಮುದ್ರೆಯನ್ನು ಒತ್ತಿದೆ.

  • ನಾವಿಬ್ಬರು ಜೀವನದ ಬೆಸ್ಟ್ ಪಾರ್ಟ್ನರ್ಸ್: ಚಂದನ್ ಕುಮಾರ್

    ನಾವಿಬ್ಬರು ಜೀವನದ ಬೆಸ್ಟ್ ಪಾರ್ಟ್ನರ್ಸ್: ಚಂದನ್ ಕುಮಾರ್

    ಬೆಂಗಳೂರು: ಮದುವೆಯ ಬಗ್ಗೆ ಭಾರೀ ಗಾಸಿಪ್ ಎದ್ದಿದ್ದ ನಟ ಚಂದನ್ ಕುಮಾರ್ ಹಾಗೂ ನಟಿ ಕವಿತಾ ಗೌಡ ಕೊನೆಗೂ ಎಂಗೇಜ್ ಆಗುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಹೌದು. ಇಂದು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ನಿಶ್ಚಿತಾರ್ಥ ನಡೆದಿದೆ. ಈ ಮೂಲಕ ಇಬ್ಬರೂ ಹೊಸ ಬಾಳಿಗೆ ಅಡಿ ಇಡಲು ಮುನ್ನುಡಿ ಬರೆದಿದ್ದಾರೆ.  ಆದರೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ  ದಿನಾಂಕವನ್ನು ಬಹಿರಂಗಪಡಿಸಿಲ್ಲ.

    ಈ ಸಂಬಂಧ ನಿಶ್ಚಿತಾರ್ಥದ ಕೆಲ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಚಂದನ್, ಜೀವನ ಸಂಗಾತಿ ಒಬ್ಬ ಉತ್ತಮ ಗೆಳೆಯ/ಗೆಳತಿಯಂತಿರಬೇಕು ಎಂಬುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮ ಜೀವನದಲ್ಲಿ ಅದು ರಿವರ್ಸ್ ಆಗಿದೆ. ನಾವಿಬ್ಬರೂ ಜೀವನದ ಉತ್ತಮ ಪಾರ್ಟ್ನರ್ಸ್ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ನಿನ್ನೆಯಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಾವಿಬ್ಬರು ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆಂದು ಬಹಿರಂಗಪಡಿಸಿದ್ದರು. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷೀ ಬಾರಮ್ಮ’ ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ಈ ಜೋಡಿ ಪ್ರೀತಿಯ ಬಲೆಗೆ ಬಿದ್ದಿದೆ ಎಂಬ ಗುಮಾನಿ ಹರಿದಾಡುತ್ತಿತ್ತು. ಆದರೆ ಚಂದನ್ ಮತ್ತು ಕವಿತಾ ನಾವಿಬ್ಬರೂ ಉತ್ತಮ ಸ್ನೇಹಿತರು ಎಂಬ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಆದರೆ ಚಂದನ್ ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡು ಕವಿತಾ ಗೌಡ ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇವರಿಬ್ಬರೂ ನಿಜಕ್ಕೂ ಏಪ್ರಿಲ್ 1 ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿತ್ತು. ಈ ಕುತೂಹಲಗಳಿಗೆ ಜೋಡಿ ಇದೀಗ ಫುಲ್ ಸ್ಟಾಪ್ ಹಾಕಿದ್ದು, ಶೀಘ್ರವೇ ಹಸೆಮಣೆ ಏರಲಿದೆ.

  • ನಿಜಜೀವನದಲ್ಲೂ ಚಂದನ್‍ಗೆ ‘ಲಕ್ಷ್ಮೀ’ಯಾದ ಕವಿತಾ ಗೌಡ

    ನಿಜಜೀವನದಲ್ಲೂ ಚಂದನ್‍ಗೆ ‘ಲಕ್ಷ್ಮೀ’ಯಾದ ಕವಿತಾ ಗೌಡ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷೀ ಬಾರಮ್ಮ’ ಧಾರವಾಹಿಯಲ್ಲಿ ನಟ ಹಾಗೂ ನಟಿಯಾಗಿ ಒಟ್ಟಿಗೆ ಅಭಿನಯಿಸಿರುವ ಚಂದನ್ ಕುಮಾರ್ ಮತ್ತು ಕವಿತಾ ಗೌಡ ತಮ್ಮ ನಿಜಜೀವನದಲ್ಲಿ ಒಂದಾಗುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

    ಈ ಕುರಿತು ಚಂದನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ನಾವಿಬ್ಬರು ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದೇವೆಂದು ತಿಳಿಸಿದ್ದಾರೆ.

    ಧಾರವಾಹಿಯಲ್ಲಿ ನಟಿಸುತ್ತಿರುವಾಗಲೇ ಈ ಜೋಡಿ ಪ್ರೀತಿಯ ಬಲೆಗೆ ಬಿದ್ದಿದೆ ಎಂಬ ಗುಮಾನಿ ಹರಿದಾಡುತ್ತಿತ್ತು. ಆದರೆ ಚಂದನ್ ಮತ್ತು ಕವಿತಾ ನಾವಿಬ್ಬರೂ ಉತ್ತಮ ಸ್ನೇಹಿತರು ಎಂಬ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಆದರೆ ಇದೀಗ ಚಂದನ್ ಕುಮರ್ ‘ಏಪ್ರಿಲ್ 1ಕ್ಕೆ ನಾವು ಮೂರ್ಖರಾಗುತ್ತಿದ್ದೇವೆ’ ಎಂದು ಬರೆದುಕೊಂಡು ಕವಿತಾ ಗೌಡ ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇವರಿಬ್ಬರೂ ನಿಜಕ್ಕೂ ಏಪ್ರಿಲ್ 1 ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆಯೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

    ಧಾರವಾಹಿಗಳಲ್ಲಿ ಎಲ್ಲರ ಮನೆಮನಗಳಲ್ಲಿ ಸ್ಥಾನ ಪಡೆದಿರುವ ಈ ಜೋಡಿ ಕೆಲದಿನಗಳ ಹಿಂದೆ ಫೋಟೋಶೂಟ್ ಕೂಡ ಮಾಡಿಸಿಕೊಂಡಿಸಿಕೊಂಡಿತ್ತು. ಹಾಗೂ ಒಟ್ಟಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಮಾರಂಭಗಳಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಅಭಿಮಾನಿಗಳಲ್ಲಿ ಇವರಿಬ್ಬರು ಪ್ರೀತಿಮಾಡುತ್ತಿದ್ದಾರೆ ಎಂಬ ಅನುಮಾನವು ಮೂಡಿತ್ತು.

    ಇದಕ್ಕೆ ಪುಷ್ಟಿ ಕೊಡುವಂತೆ ಚಂದನ್ ಕುಮಾರ್, ಕವಿತಾ ಅವರ ಹುಟ್ಟುಹಬ್ಬದಂದು ಮಧ್ಯರಾತ್ರಿ ಕವಿತಾ ಮನೆಗೆ ತೆರಳಿ ಸರ್ಪ್ರೈಸ್ ನೀಡಿದ್ದರು. ಹಾಗೆ ಹಲವು ಟ್ರಿಪ್‍ಗಳನ್ನೂ ಹೋಗಿ ಎಂಜಾಯ್ ಮಾಡಿದ್ದರು ಇದನ್ನೇಲ್ಲ ಗಮನಿಸಿದಾಗ ಇವರಿಬ್ಬರ ನಡುವೆ ಪ್ರೀತಿಯ ಬಂಧ ಬೆಸೆದಿದೆ ಎಂಬ ಸಂದೇಹ ಕಾಡುತ್ತಿತ್ತು ಇದೀಗ ಈ ಸಂದೇಹ ಬಗೆಹರಿಯುವ ಹಂತಕ್ಕೆ ಬಂದು ನಿಂತಿದೆ.

    ಚಂದನ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಕವಿತಾ ಅವರ ಫೋಟೋ ಹಂಚಿಕೊಂಡು ಪೋಸ್ಟ್ ಹಾಕುತ್ತಿದ್ದಂತೆ ಹಲವು ನಟ-ನಟಿಯರು ಈ ಜೋಡಿಗೆ ಶುಭಹಾರೈಸಿದ್ದಾರೆ. ಈ ಎಲ್ಲಾ ಶುಭಾಶಯಗಳಿಗೆ ಚಂದನ್ ಧನ್ಯವಾದ ತಿಳಿಸಿದ್ದು, ಏಪ್ರಿಲ್ 1 ರಂದು ಯಾವ ರೀತಿ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡುತ್ತಾರೆ ಎಂದು ಕಾದು ನೋಡಬೇಕಾಗಿದೆ.

  • ಮಧ್ಯರಾತ್ರಿ ‘ಬಿಗ್‍ಬಾಸ್’ ಖ್ಯಾತಿಯ ಕವಿತಾ ಗೌಡ ಮನೆಗೆ ಹೋಗಿ ಚಂದನ್ ಸರ್ಪ್ರೈಸ್

    ಮಧ್ಯರಾತ್ರಿ ‘ಬಿಗ್‍ಬಾಸ್’ ಖ್ಯಾತಿಯ ಕವಿತಾ ಗೌಡ ಮನೆಗೆ ಹೋಗಿ ಚಂದನ್ ಸರ್ಪ್ರೈಸ್

    ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ ಮನೆಗೆ ಮಧ್ಯರಾತ್ರಿ ನಟ ಚಂದನ್ ಹೋಗಿ ಸರ್ಪ್ರೈಸ್ ಕೊಟ್ಟಿದ್ದಾರೆ.

    ಭಾನುವಾರ ಕವಿತಾ ಗೌಡ ಹುಟ್ಟುಹಬ್ಬ ಇತ್ತು. ಕೊರೊನಾ ಇರುವುದರಿಂದ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಟ ಚಂದನ್ 12 ಗಂಟೆಗೆ ಸರಿಯಾಗಿ ಕವಿತಾ ಗೌಡ ಮನೆಗೆ ಹೋಗಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ.

    ಅಷ್ಟೇ ಅಲ್ಲದೇ ಕವಿತಾ ಗೌಡ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಕೊಟ್ಟಿದ್ದಾರೆ. “ಸ್ನೇಹಿತರ ಹುಟ್ಟುಹಬ್ಬದ ಪ್ರಯುಕ್ತ ಸರ್ಪ್ರೈಸ್ ಆಗಿ ಭೇಟಿ ನೀಡಿದ್ದೆ. ಎಷ್ಟೋ ವರ್ಷಗಳ ಬಳಿ ಭೇಟಿ ಆದಂತೆ ಎನಿಸಿತು” ಎಂದು ಬರೆದು,  ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಕವಿತಾ ಗೌಡ ಮತ್ತು ಚಂದನ್ ಕುಮಾರ್ ಇಬ್ಬರು ಸ್ನೇಹಿತರಾಗಿದ್ದಾರೆ. ಇವರಿಬ್ಬರು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀಬಾರಮ್ಮ’ ಧಾರಾವಾಹಿಯಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಚಿನ್ನು ಪಾತ್ರದಲ್ಲಿ ಕವಿತಾ ಗೌಡ, ಚಂದು ಪಾತ್ರದಲ್ಲಿ ಚಂದನ್ ಅಭಿನಯಿಸಿದ್ದರು. ಈ ಮೂಲಕ ಪ್ರೇಕ್ಷಕರಿಗೆ ಇವರಿಬ್ಬರು ಪರಿಚಿತರಾಗಿದ್ದಾರೆ.

    ರಿಯಾಲಿಟಿ ಶೋ ಬಿಗ್‍ಬಾಸ್ ಮನೆಗೂ ಇವರಿಬ್ಬರು ಹೋಗಿದ್ದರು. ಆದರೆ ಬೇರೆ ಬೇರೆ ಸೀಸನ್‍ನಲ್ಲಿ ಹೋಗಿದ್ದಾರೆ. ಕಿರುತೆರೆ ಮಾತ್ರವಲ್ಲದೇ ಸಿನಿಮಾದಲ್ಲೂ ಕವಿತಾ ಗೌಡ ಮತ್ತು ಚಂದನ್ ಕುಮಾರ್ ಗುರುತಿಸಿಕೊಂಡಿದ್ದಾರೆ.

    https://www.instagram.com/p/CDGN9CvAPe3/?utm_source=ig_embed

  • ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು

    ಬಿಗ್‍ಬಾಸ್ ಸ್ಪರ್ಧಿ ಆ್ಯಂಡಿ ವಿರುದ್ಧ ಕವಿತಾ ಗೌಡ ದೂರು

    – ಖಾಸಗಿ ವಾಹಿನಿಯ ಶೋನಲ್ಲಿಯೂ ಆ್ಯಂಡಿಯಿಂದ ಕಿರುಕುಳ

    ಬೆಂಗಳೂರು: ಬಿಗ್ ಬಾಸ್ ಸೀಸನ್- 6ರ ಸ್ಪರ್ಧಿ ಕವಿತಾ ಗೌಡ ಅವರು ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

    ನಗರದ ಕೆ.ಜಿ.ರಸ್ತೆಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಚೇರಿಗೆ ತಾಯಿಯ ಜೊತೆಗೆ ಹೋಗಿ ಕವಿತಾ ಅವರು ದೂರು ನೀಡಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದೆ ಎಂದರು.

    ಪ್ರೋಗ್ರಾಂ ಪ್ರೊಡ್ಯೂಸರ್ ಗುರುದಾಸ್ ಶಣೈ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಉಂಟಾಗಿದ್ದ ಅಹಿತಕರ ಘಟನೆಯ ಕುರಿತು ಹೇಳಿಕೊಂಡು ದೂರು ನೀಡುವ ವಿಚಾರವನ್ನು ಗುರುದಾಸ್ ಶಣೈ ತಿಳಿಸಿದ್ದೆ. ಅವರು ಕೂಡ ಬೆಂಬಲ ಕೊಡುತ್ತೇವೆಂದು ತಿಳಿಸಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಬಂದು ಯೋಜನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿರುವೆ ಎಂದು ಸ್ಪಷ್ಟನೆ ನೀಡಿದರು.

    ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟುಮಾಡಿತು ಎಂದರು.

    ಬಿಗ್‍ಬಾಸ್ ಮನೆಯಲ್ಲಿ ದೂರು ನೀಡದ ಕುರಿತು ಪ್ರತಿಕ್ರಿಯೆ ನೀಡಿದ ಕವಿತಾ, ಸ್ಪರ್ಧಿಗಳ ಪ್ರತಿ ಚಲನವಲವನ್ನು ನಟ ಸುದೀಪ್, ಗುರುದಾಸ್ ಶಣೈ, ಪರಮೇಶ್ ಗುಂಡಕಲ್ ಅವರನ್ನು ಒಳಗೊಂಡಂತೆ ಬಿಗ್‍ಬಾಸ್ ಮನೆ ಸಿಬ್ಬಂದಿ ನೋಡುತ್ತಿರುತ್ತಾರೆ. ಕೆಲವು ಬಾರಿ ಕನ್ಫೆಷನ್ ರೂಮ್‍ಗೆ ಹೋಗಿ ಆ್ಯಂಡಿ ವಿರುದ್ಧ ದೂರು ನೀಡಿದ್ದೇನೆ. ಅವರು ಕ್ರಮ ಕೈಗೊಂಡರೋ ಬಿಟ್ಟರೋ ನನಗೆ ಗೊತ್ತಿಲ್ಲ. ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ಬಳಿಕ ಮತ್ತೆ ಕನ್ಫೆಷನ್ ರೂಮ್‍ಗೆ ಹೋಗಿ ಮನೆಯಿಂದ ಹೊರಗೆ ಹೋದ ಮೇಲೆ ಆ್ಯಂಡಿ ವಿರುದ್ಧ ದೂರು ನೀಡುತ್ತೇವೆ ಎಂದು ತಿಳಿಸಿದ್ದೆ. ಅವರು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು ಎಂದು ಕವಿತಾ ಹೇಳಿದರು.

    ಬಿಗ್‍ಬಾಸ್ ಮನೆಗೆ ಹೋದ ಕೆಲವೇ ದಿನಗಳಲ್ಲಿ ಆ್ಯಂಡಿ ಬಗ್ಗೆ ಗೊತ್ತಾಯಿತು. ಹೀಗಾಗಿ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇರುತ್ತಿದ್ದೆ. ಆದರೂ ಅವರೇ ಬಂದು ಮಾತನಾಡಿಸುತ್ತಿದ್ದರು. ಟಾಸ್ಕ್ ಹೆಸರಿನಲ್ಲಿ ಕಿರುಕುಳ ಕೊಡುತ್ತಿದ್ದರು. ಹೀಗಾಗಿ ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಅವರು ಬರುತ್ತಿದ್ದ ಕಾರ್ಯಕ್ರಮಕ್ಕೆ ಗೈರು ಆಗುತ್ತಿದೆ ಎಂದರು.

    ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಹೋಗಲೆಬೇಕಾದ ಅನಿವಾರ್ಯತೆ ಇತ್ತು. ಅಷ್ಟೇ ಅಲ್ಲದೆ ನನಗೆ ಪರಿಚಿತರು ಬರುವಂತೆ ಒತ್ತಾಯ ಮಾಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆ ನೀಡಿದ್ದರು. ಆದರೆ ಆ್ಯಂಡಿ ಮೈಕ್ ಅನ್ನು ಪಕ್ಕಕ್ಕೆ ಇಟ್ಟು ಬೈದರು ಎಂದು ಕವಿತಾ ದೂರಿದರು.

    ಮುಂದಿನ ಸೀಸನ್‍ನಲ್ಲಿ ಇಂತಹ ಅಹಿತಕರ ಘಟನೆಗಳು ಮರುಕಳಿಸಬಾರದು ಎನ್ನುವ ಕಾಳಜಿ ಇದೆ. ಜೊತೆಗೆ ಆ್ಯಂಡಿ ಬಿಗ್‍ಬಾಸ್ ಮನೆಯಿಂದ ಹೊರಬಂದರೂ ಬದಲಾಗಿಲ್ಲ. ಬಿಗ್‍ಬಾಸ್ ಮನೆಯಲ್ಲಿ ಮೈಕ್ ಅನ್ನು ಹಿಡಿದು, ಯಾರಿಗೂ ಕೇಳದಂತೆ ಆ್ಯಂಡಿ ಬೈಯುತ್ತಿದ್ದರು. ಇದು ಎಲ್ಲಾ ಸ್ಪರ್ಧಿಗಳ ಅನುಭವಕ್ಕೆ ಬಂದಿದೆ. ಆದರೆ ಇಲ್ಲಿ ನಾನು ನನಗೆ ಆಗಿರುವ ಸಮಸ್ಯೆ ಬಗ್ಗೆ ಮಾತ್ರ ದೂರು ನೀಡಲು ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv