Tag: kavitha gowda

  • ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ದಂಪತಿ

    ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ದಂಪತಿ

    ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ಗೌಡ (Kavitha Gowda) ಮುದ್ದು ಮಗನ (Son) ಆರೈಕೆಯಲ್ಲಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆ ಮಗನ ಜೊತೆಗಿನ ಕ್ಯೂಟ್ ಫೋಟೋವೊಂದನ್ನು ಕವಿತಾ ಹಾಗೂ ಚಂದನ್ (Chandan Kumar) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಹೊಸ ಜೀವನದ 6 ತಿಂಗಳುಗಳು. ಗುಂಡಪ್ಪ ಎಂದು ನಟಿ ಬರೆದುಕೊಂಡಿದ್ದಾರೆ. ಪೋಷಕರಾಗಲು ಅದೃಷ್ಟ ಮಾಡಿದ್ದೇವೆ. ನಿನ್ನೊಂದಿಗೆ ಅರ್ಧ ವರ್ಷ ಸಂತೋಷದಿಂದ ಕಳೆದಿರೋದು ಖುಷಿಯಿದೆ ಎಂದು ಕವಿತಾ ದಂಪತಿ ಮಗನ ಫೋಟೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್


    ಇನ್ನೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಜೊತೆಯಾಗಿ ನಟಿಸಿದ್ದರು. 2021ರಲ್ಲಿ ಮೇ 14ರಂದು ಹೊಸ ಬಾಳಿಗೆ ಕಾಲಿಟ್ಟರು. ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಜರುಗಿತ್ತು. ಇದನ್ನೂ ಓದಿ:‘ಟಾಕ್ಸಿಕ್’ನಲ್ಲಿ ಕೆಲಸ ಮಾಡಿದ್ದು, ನಿಜಕ್ಕೂ ಅದ್ಭುತ ಅನುಭವ- ಯಶ್‌ರನ್ನು ಕೊಂಡಾಡಿದ ಅಮೆರಿಕ ನಟ

     

    View this post on Instagram

     

    A post shared by K A V I T H A (@iam.kavitha_official)

    ಇನ್ನೂ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಟಿ ಗಂಡು ಮಗುವಿಗೆ ಜನ್ಮ ನೀಡಿದರು. ಮಗನ ಆಗಮನದಿಂದ ಕವಿತಾ ಹಾಗೂ ಚಂದನ್ ಮನೆಯಲ್ಲಿ ಸಂಭ್ರಮ ದುಪ್ಪಟ್ಟು ಮಾಡಿದೆ.

  • ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

    ಮಗುವಿನ ಮುಖ ರಿವೀಲ್ ಮಾಡಿದ ‘ಲಕ್ಷ್ಮಿ ಬಾರಮ್ಮ’ ನಟಿ ಕವಿತಾ

    ‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ (Kavitha Gowda) ಅವರು ಇಂದು (ಅ.11) ಆಯುಧ ಪೂಜೆಯ ದಿನದಂದು ಮಗನ ಮುಖವನ್ನು ರಿವೀಲ್ ಮಾಡಿದ್ದಾರೆ. ಮಗಳ ಜೊತೆಗಿನ ಮುದ್ದಾದ ಫೋಟೋವನ್ನು ಇದೀಗ ಕವಿತಾ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮಿಸ್ ಯು ಹೆಂಡ್ತಿ.. ಈ ಮೆಸೇಜ್ ದರ್ಶನ್ ಕಳಿಸಿದ್ದಾ or ಹೇಮಂತ್ ಮಾಡಿದ್ದಾ: ಎಸ್‌ಪಿಪಿ ಪ್ರಶ್ನೆ

    ಕಳೆದ ತಿಂಗಳು ಸೆಪ್ಟೆಂಬರ್‌ನಲ್ಲಿ ನಟಿ ಕವಿತಾ ಗೌಡ ಗಂಡು ಮಗುವಿಗೆ ಜನ್ಮ ನೀಡಿದರು. ಈ ಗುಡ್ ನ್ಯೂಸ್ ಅನ್ನು ಪತಿ ಚಂದನ್ (Chandan Kumar) ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು. ಇದೀಗ ಪುಟ್ಟು ಮಗುವನ್ನು ಹಿಡಿದು ಕವಿತಾ ದಂಪತಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮಗುವಿನ ಜೊತೆಗಿನ ಸುಂದರ ಫೋಟೋವನ್ನು ನಟಿ ರಿವೀಲ್ ಮಾಡಿದ್ದಾರೆ. ನಮ್ಮ ಲಿಟಲ್ ಸನ್‌ಶೈನ್ ಎಂದಿದ್ದಾರೆ.

     

    View this post on Instagram

     

    A post shared by K A V I T H A (@iam.kavitha_official)

    ಅಂದಹಾಗೆ, 2021ರಲ್ಲಿ ಮೇ 14ರಂದು ಕವಿತಾ ಮತ್ತು ಚಂದನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಲಾಕ್‌ಡೌನ್ ವೇಳೆ, ಮದುವೆ ಆದ ಹಿನ್ನೆಲೆ ಸರಳವಾಗಿ ನಡೆದಿತ್ತು.

  • ಮಗನೊಂದಿಗೆ ಮನೆಗೆ ಎಂಟ್ರಿ ಕೊಟ್ಟ ‌’ಲಕ್ಷ್ಮಿ ಬಾರಮ್ಮ’ ನಟಿ- ಖುಷಿಯಲ್ಲಿ ಚಂದನ್

    ಮಗನೊಂದಿಗೆ ಮನೆಗೆ ಎಂಟ್ರಿ ಕೊಟ್ಟ ‌’ಲಕ್ಷ್ಮಿ ಬಾರಮ್ಮ’ ನಟಿ- ಖುಷಿಯಲ್ಲಿ ಚಂದನ್

    ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಕವಿತಾ ಗೌಡ (Kavitha Gowda) ಸೆ.18ರಂದು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದರು. ಇದೀಗ ಮುದ್ದು ಮಗನೊಂದಿಗೆ ಬಾಣಂತಿ ಕವಿತಾ ಗೌಡ ಮನೆಗೆ ಮರಳಿದ್ದಾರೆ. ಮಗು ಹುಟ್ಟಿದ ಸಂಭ್ರಮದಲ್ಲಿ ನಟಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತು ವಿಡಿಯೋವೊಂದನ್ನು ನಟ ಚಂದನ್ ಕುಮಾರ್ (Chandan Kumar) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಸಮರ್ಜಿತ್: ಕರಣ್ ಜೋಹರ್ ಸಿನಿಮಾದಲ್ಲಿ ಇಂದ್ರಜಿತ್ ಪುತ್ರ

    ಚಂದನ್ ಕುಮಾರ್ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಮಗುವಿನ ಕಾಲಿನ ಮತ್ತು ಮಗುವಿನ ಕೈಹಿಡಿದಿರುವ ಫೋಟೋ ಶೇರ್ ಮಾಡಿ ನಟ ಖುಷಿ ಹಂಚಿಕೊಂಡಿದ್ದಾರೆ. ಇನ್ನೂ ಪತ್ನಿ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಿಸುವ ವೇಳೆ, ಕವಿತಾಗೆ ಚಂದನ್ ಗಿಡವನ್ನು ಕೊಟ್ಟಿದ್ದಾರೆ. ಹಾಗೆಯೇ ಮಗುವನ್ನು ಚಂದನ್ ಹಿಡಿದುಕೊಂಡು ಬಹಳ ಖುಷಿಯಿಂದ ಮನೆಯ ಕಡೆ ಹೆಜ್ಜೆ ಹಾಕಿದ್ದಾರೆ. ಹೀಗೆ ಆಸ್ಪತ್ರೆಯಿಂದ ಮನೆಗೆ ಎಂಟ್ರಿ ಕೊಟ್ಟಿರುವ ತನಕ ವಿಡಿಯೋ ತುಣುಕನ್ನು ಅವರು ಹಂಚಿಕೊಂಡಿದ್ದಾರೆ.

    ಮನೆಗೆ ಮಗುವನ್ನು ಹಿಡಿದುಕೊಂಡು ಚಂದನ್ ಮತ್ತು ಕವಿತಾ ಗೌಡ ಬಂದಿದ್ದಾರೆ. ಈ ವೇಳೆ, ಮನೆ ಮಂದಿ ಎಲ್ಲಾ ಸೇರಿ ಮನೆಯನ್ನು ಸಿಂಗಾರ ಮಾಡಿದ್ದಾರೆ ಹಾಗೆಯೇ ಮಗು ಹಿಡಿದು ನಿಂತ ಚಂದನ್ ದಂಪತಿಗೆ ಆರತಿ ಬೆಳಗಿದ್ದಾರೆ. ಬಳಿಕ ಮನೆಗೆ ಎಂಟ್ರಿ ಕೊಟ್ಟಿದ್ದು, ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

    ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು. ಇಬ್ಬರೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.

  • ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್

    ಗಂಡು ಮಗುವಿಗೆ ಜನ್ಮ ನೀಡಿದ ಕವಿತಾ ಗೌಡ- ತಂದೆಯಾದ ಖುಷಿಯಲ್ಲಿ ಚಂದನ್

    ಕಿರುತೆರೆ ನಟಿ ಕವಿತಾ ಗೌಡ (Kavitha Gowda) ಹಾಗೂ ಚಂದನ್ ಕುಮಾರ್ (Chandan Kumar) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕವಿತಾ ಗೌಡ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಿದ್ದು, ಚಂದನ್ ಕುಮಾರ್ ಅವರು ತಮ್ಮ ಅಭಿಮಾನಿಗಳೊಂದಿಗೆ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


    ಚಂದನ್ ಇದೀಗ ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಅನ್ನೋ ಮೂಲಕ ಮಗನ ಮೊದಲ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ಗೆ ಹೋಗ್ತಾರಾ ಅವಳಿ ಸಹೋದರಿಯರು?- ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ

    ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ `ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.

  • ಸೀಮಂತ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ಗೌಡ

    ಸೀಮಂತ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ಕವಿತಾ ಗೌಡ

    ‘ಬಿಗ್ ಬಾಸ್’, ‘ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ಚಿನ್ನು ಅಲಿಯಾಸ್ ನಟಿ ಕವಿತಾ ಗೌಡ (Kavitha Gowda) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಮಗುವಿನ ಆಗಮನಕ್ಕಾಗಿ ಎದುರು ನೋಡುತ್ತಿರುವ ನಟಿ ಕವಿತಾ ಸೀಮಂತ ಶಾಸ್ತ್ರ ಜರುಗಿದೆ. ಕಿರುತೆರೆಯ ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನಾಗ್ತಿರೋ ಕವಿತಾಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಲೈಂಗಿಕ ಕಿರುಕುಳ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಕೇಸ್

    ಕವಿತಾ ಮತ್ತು ನಟ ಚಂದನ್ ಕುಮಾರ್ (Chandan Kumar) ಮನೆಗೆ ಸದ್ಯದಲ್ಲೇ ಪುಟ್ಟ ಕಂದಮ್ಮನ ಆಗಮನವಾಗಲಿದೆ. ಇದೇ ಖುಷಿಯಲ್ಲಿ ತುಂಬು ಗರ್ಭಿಣಿ ಕವಿತಾಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಿದ್ದಾರೆ. ಈ ಸಮಾರಂಭಕ್ಕೆ ನಟಿ ನಮ್ರತಾ ಗೌಡ, ತನಿಷಾ ಕುಪ್ಪಂಡ, ಹಿರಿಯ ನಟಿ ಶ್ರುತಿ, ನಿಮಿಕಾ ರತ್ನಾಕರ್, ನೇಹಾ ಗೌಡ (Neha Gowda), ಅನುಪಮಾ ಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಅಂದಹಾಗೆ, ಲಾಕ್‌ಡೌನ್ ವೇಳೆ 2021ರ ಮೇ 14ರಂದು ಚಂದನ್ ಕುಮಾರ್ ಮತ್ತು ಕವಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಹೀರೋ, ಹೀರೋಯಿನ್ ಆಗಿ ನಟಿಸಿದ್ದರು.

  • ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು

    ಕಿರುತೆರೆಯ ಜನಪ್ರಿಯ ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿಯರಾದ ನೇಹಾ ಗೌಡ (Neha Gowda) ಮತ್ತು ಕವಿತಾ (Kavitha Gowda) ಇಬ್ಬರೂ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ತೋರಿಸಿ ಪರಸ್ಪರ ಶುಭಾಶಯಗಳನ್ನು ಹೇಳಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ಒಂದೇ ಧಾರಾವಾಹಿಯಲ್ಲಿ ನಟಿಸಿದ ಇಬ್ಬರೂ ನಟಿಯರು ಪ್ರೆಗ್ನೆಂಟ್ ಆಗಿದ್ದಾರೆ. ನೇಹಾ, ಕವಿತಾ ಗೌಡ ಮನೆಗೆ ಹೊಸ ಅತಿಥಿ ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ. ಹ್ಯಾಪಿ ಡೆಲಿವರಿ ಎಂದು ಈ ನಟಿಯರು ಪರಸ್ಪರ ಶುಭಹಾರೈಸಿದ್ದಾರೆ. ಸೀರಿಯಲ್‌ನಲ್ಲಿ ಸಹೋದರಿಯರಾಗಿ ನಟಿಸಿದ್ದ ಚಿನ್ನು ಮತ್ತು ಗೊಂಬೆ ರಿಯಲ್ ಲೈಫ್‌ನಲ್ಲಿಯೂ ಉತ್ತಮ ಒಡನಾಟ ಹೊಂದಿದ್ದಾರೆ. ಒಟ್ಟಿಗೆ ತಾಯಿಯಾಗುತ್ತಿರುವ ಸಂಭ್ರಮವನ್ನು ನಟಿಯರು ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Neha Ramakrishna (@neharamakrishna)

    ಇತ್ತೀಚೆಗೆ ನೇಹಾ ಗೌಡ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ಮಾಡಲಾಗಿತ್ತು. ಅದಷ್ಟೇ ಅಲ್ಲ, ವೆಸ್ಟ್‌ರ್ನ್‌ ಸ್ಟೈಲಿನಲ್ಲಿ ಬೇಬಿ ಶವರ್ ಕೂಡ ಆಚರಿಸಿದ್ದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ

    ಹಾಗೆಯೇ ಪತಿ ಚಂದನ್ ಜೊತೆ ಕವಿತಾ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಂಭ್ರಮಿಸಿದ್ದರು. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಟಿಮಣಿಯರು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಡುತ್ತಾ ಸದ್ದು ಮಾಡ್ತಿದ್ದಾರೆ.

  • ಪ್ರೆಗ್ನೆನ್ಸಿ ಬಗ್ಗೆ ಸಿಹಿಸುದ್ದಿ ಕೊಟ್ಟ ಕವಿತಾ, ಚಂದನ್ ದಂಪತಿ

    ಪ್ರೆಗ್ನೆನ್ಸಿ ಬಗ್ಗೆ ಸಿಹಿಸುದ್ದಿ ಕೊಟ್ಟ ಕವಿತಾ, ಚಂದನ್ ದಂಪತಿ

    ಬಿಗ್‌ ಬಾಸ್‌ (Bigg Boss), ‘ಲಕ್ಷ್ಮಿ ಬಾರಮ್ಮ’ (Lakshmi Baramma) ಸೀರಿಯಲ್ ಮೂಲಕ ಮೋಡಿ ಮಾಡಿರುವ ಕವಿತಾ ಗೌಡ ಮತ್ತು ಚಂದನ್ ಕುಮಾರ್ (Chandan Kumar) ದಂಪತಿ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ ಕವಿತಾ ತಾಯಿಯಾಗ್ತಿದ್ದಾರೆ. ಪ್ರೆಗ್ನೆನ್ಸಿ ಬಗ್ಗೆ ಚಂದನ್ ದಂಪತಿ ಅನೌನ್ಸ್ ಮಾಡಿದ್ದಾರೆ.

    ಇಮೋಜಿ ಒಳಗೆ ಸ್ಕ್ಯಾನಿಂಗ್ ಫೋಟೋ ಹಾಕಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋದಾಗಿ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಹೇಳುತ್ತಿದ್ದಂತೆ ಸ್ಯಾಂಡಲ್‌ವುಡ್ ಕಲಾವಿದರು, ಆಪ್ತರು, ಅಭಿಮಾನಿಗಳು ಶುಭಕೋರಿದ್ದಾರೆ.

     

    View this post on Instagram

     

    A post shared by K A V I T H A (@iam.kavitha_official)

    ಕವಿತಾ ಗೌಡ ಮತ್ತು ಚಂದನ್ ನಟನೆಯ ಜೊತೆಗೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದನ್ನೂ ಓದಿ:ಆನ್‌ಲೈನ್ ಮೂಲಕ ವೋಟ್ ಮಾಡಿದ್ದೇನೆ ಎಂದ ಜ್ಯೋತಿಕಾ- ಟ್ರೋಲ್‌ ಆದ ಸೂರ್ಯ ಪತ್ನಿ

    ಅಂದಹಾಗೆ, ‘ಲಕ್ಷ್ಮಿ ಬಾರಮ್ಮ’ ಸೀರಿಯಲ್‌ನಲ್ಲಿ ಜೋಡಿಯಾಗಿ ಕವಿತಾ(Kavitha Gowda), ಚಂದನ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಲಾಕ್‌ಡೌನ್ ವೇಳೆ, 2021ರಲ್ಲಿ ಇಬ್ಬರೂ ಹಸೆಮಣೆ ಏರಿದ್ದಾರೆ.

  • ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

    ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಚಿನ್ನು-ಗೊಂಬೆ

    ಸ್ಯಾಂಡಲ್‌ವುಡ್ ಬ್ಯೂಟಿಸ್ ನೇಹಾ ಗೌಡ- ಕವಿತಾ ಗೌಡ (Kavitha Gowda) ಮತ್ತೆ ಸುದ್ದಿಯಲ್ಲಿದ್ದಾರೆ. ಕಿರುತೆರೆ ಪ್ರೇಕ್ಷಕರ ಫೇವರೇಟ್ ಚಿನ್ನು ಮತ್ತು ಗೊಂಬೆ ಮತ್ತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ‘ಪುಣ್ಯವತಿ’ (Punyavathi Serial) ಸೀರಿಯಲ್‌ನಲ್ಲಿ ಅತಿಥಿ ಪಾತ್ರ ಮಾಡುವ ಮೂಲಕ ಹೀರೋ ನಂದನ್‌ಗೆ ಸಾಥ್ ನೀಡ್ತಿದ್ದಾರೆ.

    ಲಕ್ಷ್ಮಿ ಬಾರಮ್ಮ (Lakshmi Baramma) ಸೀರಿಯಲ್ ಮೂಲಕ ಚಿನ್ನು- ಗೊಂಬೆಯಾಗಿ ಕವಿತಾ ಮತ್ತು ನೇಹಾ (Neha Gowda) ಮೋಡಿ ಮಾಡಿದ್ದರು. ಚಂದನ್ ಮಡದಿಯರಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಈಗ ಅಂತಹದ್ದೇ ಟ್ರೈಯಾಂಗಲ್ ಲವ್ ಸ್ಟೋರಿ ಪುಣ್ಯವತಿ ಟ್ರ್ಯಾಕ್ ನಡೆಯುತ್ತಿದೆ. ನಂದನ್-ಪದ್ಮಿನಿ ಮತ್ತು ಪೂರ್ವಿ ಕಥೆ ನೋಡುಗರಿಗೆ ಥ್ರಿಲ್ ಕೊಡ್ತಿದೆ. ಇದನ್ನೂ ಓದಿ:ಗುರು ರಾಯರ ಸನ್ನಿಧಿಯಲ್ಲಿ ‘ಚಿನ್ನದ ಮಲ್ಲಿಗೆ ಹೂವೇ’ ಟೀಮ್

    ಪುಣ್ಯವತಿ ಕಥೆ ಕೂಡ ಅಕ್ಕ-ತಂಗಿಯಾಗಿದ್ದಾಗಿದ್ದು, ಅಕ್ಕ ಪದ್ಮಿನಿ ಮದುವೆ ಆಗಬೇಕಾದ ಹುಡಗನನ್ನ ಪರಿಸ್ಥಿತಿಗೆ ಕಟ್ಟು ಬಿದ್ದು ತಂಗಿ ಪೂರ್ವಿ ಮದುವೆ ಆಗಿದ್ದಾಳೆ. ಮೂವರ ಜೀವನ ಅತಂತ್ರ ಸ್ಥಿತಿಗೆ ತಲುಪುತ್ತೆ. ಎಲ್ಲ ಸರಿ ಮಾಡುವ ಪ್ರಯತ್ನದಲ್ಲಿದ್ದ ನಾಯಕ ನಂದನ್‌ನ ಮೇಲೆ ಅಕ್ಕ-ತಂಗಿ ಇಬ್ಬರಿಗೂ ಲವ್ ಆಗಿದೆ. ಈ ಕಥೆ ಟ್ರೈಯಾಂಗಲ್ ಲವ್ ಸ್ಟೋರಿ ಸಾಗುತ್ತಿದೆ. ನಂದನ್ ಬದುಕು ಯಾರ ಜೊತೆ ಎಂಬ ನಿರ್ಧಾರಕ್ಕೆ ಚಿನ್ನು ಮತ್ತು ಗೊಂಬೆ ಸಾಥ್ ನೀಡುತ್ತಿದ್ದಾರೆ.

    ಸದ್ಯ ಪದ್ಮಿನಿ-ಪೂರ್ವಿ ಇರುವ ಪರಿಸ್ಥಿತಿಯಲ್ಲಿ ಲಕ್ಷ್ಮೀ ಬಾರಮ್ಮ ಚಿನ್ನು-ಗೊಂಬೆ ಇದ್ದರು. ಹೀಗಾಗಿ ಪರಿಸ್ಥಿತಿಯನ್ನ ಅರಿತು ಇಬ್ಬರಿಗೂ ದಾರಿ ತೋರಿಸಲಿದ್ದಾರಂತೆ. ಈ ಮೂಲಕ ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಮತ್ತೊಮ್ಮೆ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳಲಿದ್ದು, ತೆರೆಮೇಲೆ ಪುಣ್ಯವತಿ ಜೊತೆ ಲಕ್ಷ್ಮಿ ಬಾರಮ್ಮದ ಲಕ್ಷ್ಮಿಯರು ಮಿಂಚಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಂಗಿ ಮದುವೆ ಮಾಡಿ ಮುಗಿಸಿದ ‌’ಬಿಗ್‌ ಬಾಸ್’ ಕವಿತಾ ಗೌಡ

    ತಂಗಿ ಮದುವೆ ಮಾಡಿ ಮುಗಿಸಿದ ‌’ಬಿಗ್‌ ಬಾಸ್’ ಕವಿತಾ ಗೌಡ

    ಟಿವಿ ಲೋಕದಲ್ಲಿ ಅಭಿಮಾನಿಗಳಿಗೆ ‘ಲಕ್ಷ್ಮಿ ಬಾರಮ್ಮ’ (Lakshmi Baramma) ಚಿನ್ನು ಎಂದೇ ಫೇಮಸ್ ಆಗಿದ್ದ ಕವಿತಾ ಗೌಡ (Kavitha Gowda) ಅವರು ತಮ್ಮ ಮುದ್ದಿನ ತಂಗಿ ಮೋನಿಷಾ (Monisha Gowda) ಅವರ ಮದುವೆ ಮಾಡಿ ಮುಗಿಸಿದ್ದಾರೆ.

    ಹಿರಿತೆರೆಯಲ್ಲಿ ಶ್ರೀನಿವಾಸ ಕಲ್ಯಾಣ, ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಗೋವಿಂದಾ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಸೇರಿದಂತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಚಂದನ್ ಗೌಡ ಜೊತೆ ಹೋಟೆಲ್ ಉದ್ಯಮದಲ್ಲೂ ಸಕ್ರಿಯರಾಗಿದ್ದಾರೆ.

    ಇದೀಗ ಕವಿತಾ ಗೌಡ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಮುದ್ದಿನ ತಂಗಿ ಮೋನಿಷಾ ಗೌಡ ಅವರ ಮದುವೆಯನ್ನ ಶೋಭಿತ್‌ (Shobith) ಎಂಬುವವರ ಸರಳವಾಗಿ ಬೆಂಗಳೂರಿನಲ್ಲಿ ಮಾಡಿ ಮುಗಿಸಿದ್ದಾರೆ. ನವಜೋಡಿಯ ಫೋಟೋವನ್ನ ನಟ ಚಂದನ್ ಕುಮಾರ್ ಶೇರ್ ಮಾಡಿ, ಶುಭಹಾರೈಸಿದ್ದಾರೆ.

  • `ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ -ಚಂದನ್ ಹೊಸ ಹೋಟೆಲ್ ಓಪನ್

    `ಬಿಗ್ ಬಾಸ್’ ಖ್ಯಾತಿಯ ಕವಿತಾ ಗೌಡ -ಚಂದನ್ ಹೊಸ ಹೋಟೆಲ್ ಓಪನ್

    `ಲಕ್ಷ್ಮಿ ಬಾರಮ್ಮ’ (Lakshmi Baramma) ಖ್ಯಾತಿಯ ಚಂದನ್ ಕುಮಾರ್ (Chandan Kumar) ಮತ್ತು ಕವಿತಾ (Kavitha Gowda) ತಮ್ಮ ಹೊಸ ಹೋಟೆಲ್‌ಗೆ ಚಾಲನೆ ನೀಡಿದ್ದಾರೆ. ಸೀರಿಯಲ್, ಸಿನಿಮಾ ಅಂತಾ ನಟನೆಯಲ್ಲಿ ಬ್ಯುಸಿಯಿರುವ ಜೋಡಿ ಇದೀಗ ಹೋಟೆಲ್ ಉದ್ಯಮದತ್ತ ಮುಖ ಮಾಡಿದ್ದಾರೆ.

    ರೀಲ್ ಮತ್ತು ರಿಯಲ್ ಕಪಲ್ ಆಗಿರುವ ಕವಿತಾ, ಚಂದನ್ ಈಗ ʻಮೈಸೂರು ರೋಡ್ ಮಂಡಿಪೇಟೆ ಪಲಾವ್ʼ ಎಂಬ ಹೊಸ ಹೋಟೆಲ್ ಉದ್ಘಾಟನೆ ಮಾಡಿದ್ದಾರೆ. ಒಬ್ಬರನೊಬ್ಬರು ಪ್ರೀತಿಸಿ, ಹಸೆಮಣೆ ಏರಿದ್ದ ಜೋಡಿ ನಟನೆ ಮತ್ತು ಉದ್ಯಮ ಎರಡಲ್ಲೂ ಒಬ್ಬರಿಗೊಬ್ಬರು ಸಾಥ್ ನೀಡುತ್ತಾ ಸಾಗುತ್ತಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

    ಕಳೆದ ಎರಡು ವರ್ಷಗಳ ಹಿಂದೆ ಬೆಂಗಳೂರು ಸಹಕಾರ ನಗರದಲ್ಲಿ ಬಿರಿಯಾನಿ ಹೋಟೆಲ್ ತೆರೆದಿದ್ದರು. ಇದೀಗ ಎರಡು ಹೋಟೆಲ್‌ನ ಜವಬ್ದಾರಿಯನ್ನ ಈ ಜೋಡಿಯ ಮೇಲಿದೆ.

    ಈ ಜೋಡಿಯ ಹೊಸ ಹೆಜ್ಜೆಗೆ ಆಪ್ತರು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]