Tag: kavitha

  • ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ದೆಹಲಿ ಅಬಕಾರಿ ನೀತಿ ಹಗರಣ- ಕೆಸಿಆರ್ ಪುತ್ರಿಯ ಮಾಜಿ ಆಡಿಟರ್ ಬಂಧನ

    ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ (Delhi excise policy case) ಸಂಬಂಧಿಸಿ ಹೈದರಾಬಾದ್ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ಕೇಂದ್ರ ತನಿಖಾ ದಳ (CBI) ಬಂಧಿಸಿದೆ.

    ಆರೋಪಿ ಬುಚ್ಚಿ ಬಾಬು ಗೋರಂಟ್ಲಾ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ( K Chandrashekar Rao) ಅವರ ಪುತ್ರಿ ಎಂಎಲ್‍ಸಿ ಕವಿತಾ (Kavitha) ಅವರ ಮಾಜಿ ಆಡಿಟರ್ ಆಗಿದ್ದ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಬುಚ್ಚಿ ಬಾಬು ಗೋರಂಟ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ವರದಿಗಳ ಪ್ರಕಾರ, ಗೋರಂಟ್ಲಾ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಗ್ರಾಮದೇವತೆಗಾಗಿ ಊರಿಗೆ ಊರೇ ಖಾಲಿ- ಕಲಘಟಗಿಯಲ್ಲಿ ವಿಶಿಷ್ಟ ಜಾತ್ರೆ

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಡಿ. 12ರಂದು ಕೆಸಿಆರ್ ಪುತ್ರಿ ಕವಿತಾ ಅವರನ್ನು ಹೈದರಾಬಾದ್‍ನಲ್ಲಿ ಸಿಬಿಐ ವಿಚಾರಣೆ ನಡೆಸಿತ್ತು. ಇದನ್ನೂ ಓದಿ: ಜಾತಕ ಹೊಂದಿಸಿ ಹಿಂದೂ ಸಂಪ್ರದಾಯದಂತೆ 2 ಗಿಳಿಗಳಿಗೆ ಅದ್ಧೂರಿ ವಿವಾಹ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೆಹಲಿ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್‌ ಆರೋಪ – ಕೆಸಿಆರ್ ಪುತ್ರಿ ಕವಿತಾಗೆ 10ಕ್ಕೂ ಹೆಚ್ಚು ಬಾರಿ ಕರೆ

    ದೆಹಲಿ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್‌ ಆರೋಪ – ಕೆಸಿಆರ್ ಪುತ್ರಿ ಕವಿತಾಗೆ 10ಕ್ಕೂ ಹೆಚ್ಚು ಬಾರಿ ಕರೆ

    ನವದೆಹಲಿ: ಆಪ್ ಸರ್ಕಾರದ ಹೊಸ ಮದ್ಯ ನೀತಿಯಲ್ಲಿ(Delhi Liquor Policy Scam) ನಡೆದಿದೆ ಎನ್ನಲಾದ ಅಕ್ರಮದಲ್ಲಿ(Scam) ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್(K Chandrashekar Rao) ಅವರ ಪುತ್ರಿ ಎಂಎಲ್‌ಸಿ ಕಲ್ವಕುಂಟ್ಲ ಕವಿತಾ(Kavitha) ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ED) ಹೇಳಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಕವಿತಾ ಹೆಸರು ಉಲ್ಲೇಖವಾಗಿದೆ.

    ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ, ಕಳೆದ ಒಂದು ವರ್ಷದಲ್ಲಿ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿದೆ.

    ಕೆ.ಕವಿತಾ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ನಂಬರ್‌ಗಳನ್ನು ಬಳಸಿದ್ದಾರೆ. ಪೈಕಿ ಎರಡು ಸಿಮ್‌ಗಳನ್ನು ಹೆಚ್ಚು ಬಳಸಿದ್ದು, ಈ ಬಗ್ಗೆ ಸಂಭಾಷಣೆ ನಡೆಸಲು ಅವರು ಹತ್ತಕ್ಕೂ ಹೆಚ್ಚು ಬಾರಿ IMEI ಅನ್ನು ಬದಲಾಯಿಸಿದ್ದಾರೆ. ತನಿಖೆ ವೇಳೆ ಫೋನ್‌ಗಳನ್ನು ಪರಿಶೀಲಿಸಿದಾಗ ಫೋನ್‌ಗಳಲ್ಲಿ ಡೇಟಾವನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

    ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಎಪಿ ನಾಯಕ ವಿಜಯ್ ನಾಯರ್ ಅವರು ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳ ನಿಯಂತ್ರಣದಲ್ಲಿರುವ ‘ದಕ್ಷಿಣ ಗುಂಪಿನಿಂದ’ 100 ಕೋಟಿ ರೂಪಾಯಿಗಳನ್ನು ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವಿದೆ. ಇದನ್ನೂ ಓದಿ: ಸರ್ಕಾರದಿಂದ ಪ್ರತ್ಯೇಕ ಮುಸ್ಲಿಂ ಕಾಲೇಜು ಸ್ಥಾಪನೆ ಇಲ್ಲ: ಶಶಿಕಲಾ ಜೊಲ್ಲೆ

    ಇಡಿ ಆರೋಪಗಳನ್ನು ಕೆ. ಕವಿತಾ ಬಲವಾಗಿ ತಳ್ಳಿಹಾಕಿದ್ದಾರೆ, ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್‌ಎಸ್(TRS) ಅನ್ನು ಅಸ್ಥಿರಗೊಳಿಸುವ ಪ್ರಯತ್ನವಲ್ಲದೆ ಮತ್ತೇನಲ್ಲ ಎಂದು ಕಿಡಿಕಾರಿದ್ದಾರೆ. ಚುನಾವಣಾ ರಾಜ್ಯಗಳಲ್ಲಿ ಬಿಜೆಪಿ ನಾಯಕರಿಗಿಂತ ಮುನ್ನ ಇಡಿ ಮೊದಲು ತಲುಪಲಿದ್ದು ನಾವು ಯಾವುದೇ ತನಿಖೆ ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.

    ಇಡಿ ಯಾವುದೇ ತನಿಖೆ ನಡೆಸಿದರೂ ವಿಚಾರಣೆಯಲ್ಲಿ ಭಾಗಿಯಾಗಿ ಉತ್ತರಿಸಲು ಸಿದ್ದವಿದ್ದೇವೆ ಆದರೆ ಮಾಧ್ಯಮಗಳಿಗೆ ಆಯ್ದ ಮಾಹಿತಿಯನ್ನು ಸೋರಿಕೆ ಮಾಡುವ ಮೂಲಕ ನಾಯಕರ ಇಮೇಜ್‌  ಹಾಳು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಜನರು ಒಪ್ಪುವುದಿಲ್ಲ ಎಂದು ಇಡಿ ವಿರುದ್ಧ ಸಿಟ್ಟು ಹೊರಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೆಸಿಆರ್, ಕವಿತಾರ ಬಗ್ಗೆ ಮಾತಾಡಿದ್ರೆ ನಾಲಿಗೆ ಕತ್ತರಿಸುತ್ತೇನೆ – ಅರವಿಂದ್ ವಿರುದ್ಧ ಎಂಎಲ್‍ಸಿ ಶಂಬಿಪುರ ಕಿಡಿ

    ಕೆಸಿಆರ್, ಕವಿತಾರ ಬಗ್ಗೆ ಮಾತಾಡಿದ್ರೆ ನಾಲಿಗೆ ಕತ್ತರಿಸುತ್ತೇನೆ – ಅರವಿಂದ್ ವಿರುದ್ಧ ಎಂಎಲ್‍ಸಿ ಶಂಬಿಪುರ ಕಿಡಿ

    ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮತ್ತು ಅವರ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರ ಬಗ್ಗೆ ಮಾತನಾಡಿದರೆ ನಾಲಿಗೆ ಕತ್ತರಿಸುತ್ತೇನೆ ಎಂದು ಬಿಜೆಪಿ ಸಂಸದ ಅರವಿಂದ್ ಧರಂಪುರಿ (Arvind Dharmapuri) ವಿರುದ್ಧ ಭಾರತ್ ರಾಷ್ಟ್ರ ಸಮಿತಿ (Bharat Rashtra Samithi) (ಬಿಆರ್‌ಎಸ್) ಎಂಎಲ್‍ಸಿ ಶಂಬಿಪುರ ರಾಜು (MLC Shambipur Raju) ಆಕ್ರೋಶ ಹೊರಹಾಕಿದ್ದಾರೆ.

    ಕವಿತಾ (MLC Kavitha) ಅವರನ್ನು ಸೆಳೆಯಲು ಬಿಜೆಪಿ (BJP) ಯತ್ನಿಸುತ್ತಿದೆ ಎಂದು ಸಿಎಂ ಹೇಳಿಕೆ ನೀಡಿದ ಬೆನ್ನಲ್ಲೇ ಅರವಿಂದ್ ಧರಂಪುರಿ ಅವರು, ಬಿಆರ್‌ಎಸ್ ಪಕ್ಷದಲ್ಲಿ ಎಂಎಲ್‍ಸಿ ಕವಿತಾ ಅವರು ಅತೃಪ್ತರಾಗಿದ್ದು, ಕಾಂಗ್ರೆಸ್ ಸೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನೂ ಓದಿ: ವೈಯಕ್ತಿಕ ಟೀಕೆ ಮಾಡುತ್ತಿದ್ರೆ ಚಪ್ಪಲಿಯಲ್ಲಿ ಹೊಡಿತೀನಿ – ಬಿಜೆಪಿ ಸಂಸದರಿಗೆ ಕವಿತಾ ವಾರ್ನ್

    ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶಂಬಿಪುರ ರಾಜು ಅವರು, ರಾಜಕೀಯ ಮೌಲ್ಯ ಮರೆತು ಮುಖ್ಯಮಂತ್ರಿ ಕೆಸಿಆರ್ ವಿರುದ್ಧ ಅಗೌರವವಾಗಿ ಮಾತನಾಡಿದರೆ ಅರವಿಂದ್ ಧರ್ಮಪುರಿ ಅವರ ನಾಲಿಗೆ ಕತ್ತರಿಸುತ್ತೇನೆ ಎಂದು ಅರವಿಂದ್ ಧರ್ಮಪುರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಸಂಸದರ ಮನೆಗೆ ನುಗ್ಗಿ TRS ಕಾರ್ಯಕರ್ತರಿಂದ ದಾಳಿ

    ದೊಡ್ಡವರ ಬಗ್ಗೆ ಮಾತನಾಡುವುದರಿಂದ ತಾನೂ ದೊಡ್ಡವನಾಗುತ್ತೇನೆ ಎಂದುಕೊಂಡಿದ್ದಾರೆ. ಬಿಜೆಪಿ ನಾಯಕರಾಗಿರುವ ನೀವೇ, ಕವಿತಾ ಅವರಿಗೆ ಕರೆ ಮಾಡಿದ್ದಾರೆ ಎಂದು ಕಾಂಗ್ರೆಸ್‍ನಿಂದ ಯಾರೋ ಕರೆ ಮಾಡಿ ತಿಳಿಸಿದರು ಎನ್ನುತ್ತಿದ್ದೀರಾ. ನೀವು ಬಿಜೆಪಿಯಲ್ಲಿಯೇ ಇದ್ದುಕೊಂಡು ಈ ಬಗ್ಗೆ ಹೇಳುವುದಕ್ಕೆ ನಿಮಗೆ ನಾಚಿಕೆಯಾಗುವುದಿಲ್ಲವೇ? ಬಿಜೆಪಿಯವರಾಗಿರುವ ನೀವೇ ಇತರ ಪಕ್ಷದ ಸದಸ್ಯರೊಂದಿಗೆ ಸಂಪರ್ಕ ಹೊಂದಿರುವುದನ್ನು ಬಹಿರಂಗವಾಗಿ ಹೇಳುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ನೀವು ಮತ್ತು ನಿಮ್ಮ ತಂದೆ ಪಕ್ಷಗಳನ್ನು ಬದಲಾಯಿಸುತ್ತಲೇ ಇರುತ್ತೀರಿ, ಆದರೆ ನೀವು ಸಾರ್ವಜನಿಕರಿಗೆ ಏನಾದರೂ ಪ್ರಯೋಜವಾಗುವಂತಹದ್ದನ್ನು ಏನಾದರೂ ಮಾಡಿದ್ದೀರಾ? ನಾವು ನಿಮಗೆ ಎಚ್ಚರಿಕೆ ನೀಡುತ್ತಿದ್ದೇವೆ. ಇನ್ನೊಮ್ಮೆ ನೀವು ನಮ್ಮ ಸಿಎಂ ಕೆಸಿಆರ್ ಅಥವಾ ಎಂಎಲ್‍ಸಿ ಕವಿತಾ ವಿರುದ್ಧ ಅಗೌರವವಾಗಿ ಮಾತನಾಡಿದರೆ ನಿಮ್ಮ ನಾಲಿಗೆ ಕತ್ತರಿಸುತ್ತೇವೆ. ಎಚ್ಚರಿಕೆಯಿಂದಿರಿ ಎಂದು ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ಸಂಸದರ ಮನೆಗೆ ನುಗ್ಗಿ TRS ಕಾರ್ಯಕರ್ತರಿಂದ ದಾಳಿ

    ಬಿಜೆಪಿ ಸಂಸದರ ಮನೆಗೆ ನುಗ್ಗಿ TRS ಕಾರ್ಯಕರ್ತರಿಂದ ದಾಳಿ

    ಹೈದರಾಬಾದ್: ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (K. Chandrasekhar Rao) (ಕೆಸಿಆರ್) ಮತ್ತು ಅವರ ಪುತ್ರಿ ಹಾಗೂ ಟಿಆರ್‌ಎಸ್ (Telangana Rashtra Samithi) ಎಂಎಲ್‍ಸಿ ಕೆ.ಕವಿತಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರು ಹೈದರಾಬಾದ್‍ನಲ್ಲಿಂದು (Hyderabad) ಬಿಜೆಪಿ ಸಂಸದರೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.

    ನಿಜಾಮಾಬಾದ್ (Nizamabad) ಕ್ಷೇತ್ರ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ (Dharmapuri Arvind) ಅವರ ಬಂಜಾರಾ ಹಿಲ್ಸ್ ನಿವಾಸದ ಮೇಲೆ ಟಿಆರ್‌ಎಸ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ ಪೀಠೋಪಕರಣಗಳನ್ನು ಹಾನಿಗೊಳಿಸಿದ್ದಾರೆ. ಕವಿತಾ ಅವರು ಈ ಹಿಂದೆ ನಿಜಾಮಾಬಾದ್ ಸಂಸದರಾಗಿದ್ದರು. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕವಿತ ಅವರನ್ನು ಅರವಿಂದ್ ಅವರು ಟಫ್ ಫೈಟ್ ನೀಡಿ ಸೋಲಿಸಿದ್ದರು.

    ಗುರುವಾರ ಅರವಿಂದ್ ಅವರು ಸುದ್ದಿಗೋಷ್ಠಿ ವೇಳೆ, ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಅವರು ಪಕ್ಷವನ್ನು ಬದಲಾಯಿಸದಿದ್ದರೆ ಅವರ ಮೇಲೆ ಇಡಿ ಮೂಲಕ ದಾಳಿ ನಡೆಸಲಾಗುತ್ತದೆ ಎಂಬ ಬೆದರಿಕೆ ಕುರಿತ ವರದಿಯೊಂದನ್ನು ಉಲ್ಲೇಖಿಸಿ ಮಾತನಾಡಿದ್ದರು. ಇದನ್ನೂ ಓದಿ: ಮತದಾರರ ಪಟ್ಟಿ ವಿವಾದ: ಕೆಜಿಎಫ್ ಸೇಡಿನ ಕಥೆಯೂ ಅಲ್ಲ, ಕಾಂತಾರ ದಂತಕಥೆಯೂ ಅಲ್ಲ ಎಂದ ಸಿದ್ದರಾಮಯ್ಯ

    ಈ ವರದಿ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆಯೇ ಬಿಜೆಪಿ ಕವಿತಾ ಅವರನ್ನು ಖರೀದಿ ಮಾಡಲಿದೆ ಎಂಬ ಸುದ್ದಿ ಹರಿದಾಡಲು ಪ್ರಾರಂಭವಾಗಿತ್ತು. ಸುದ್ದಿಗೋಷ್ಠಿಯಲ್ಲಿ ಕೆಸಿಆರ್ ಅವರನ್ನು “ಅತ್ಯಂತ ಮೂರ್ಖ ಮುಖ್ಯಮಂತ್ರಿ” ಎಂದು ಅರವಿಂದ್ ಟೀಕಿಸಿದ್ದರು.

    ಅಕ್ಟೋಬರ್ 5 ರಂದು ಟಿಆರ್‌ಎಸ್ ಪಕ್ಷದ ಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಕವಿತಾ ಕೋಪಗೊಂಡಿದ್ದಾರೆ. ಅಸಮಾಧಾನಗೊಂಡ ಕವಿತಾ ನಾನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಂಪರ್ಕಿಸಿದ್ದೇನೆ ಎಂದು ತಂದೆಗೆ ಸಂದೇಶವನ್ನು ಕಳುಹಿಸಿದ್ದರು. ಈ ರಾಜಕೀಯ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್‍ನ ಹಿರಿಯ ಪದಾಧಿಕಾರಿಯೊಬ್ಬರಿಂದ ನಾನು ಮಾಹಿತಿ ಪಡೆದಿದ್ದೇನೆ ಎಂದು ಅರವಿಂದ್ ಸ್ಫೋಟಕ ಆರೋಪ ಮಾಡಿದ್ದರು. ಅರವಿಂದ್ ಅವರ ಈ ಹೇಳಿಕೆಯಿಂದಾಗಿ ಟಿಆರ್‌ಎಸ್ ಕಾರ್ಯಕರ್ತರು ಸಿಟ್ಟಾಗಿ ಇಂದು ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಬುಲೆಟ್ ಪ್ರಕಾಶ್ ಜೊತೆಗಿನ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟ ನಿರ್ದೇಶಕ ವಿಜಯ್ ಪ್ರಸಾದ್

    Live Tv
    [brid partner=56869869 player=32851 video=960834 autoplay=true]

  • ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ

    ಹಿರಿಯ ನಟಿ ಕವಿತಾ ಅವರ ಪತಿ-ಪುತ್ರ ಇಬ್ಬರು ಸೋಂಕಿಗೆ ಬಲಿ

    ಬೆಂಗಳೂರು: ಬಹುಭಾಷಾ ನಟಿ ಕವಿತಾ ಅವರ ಮಗ, ಪತಿ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ.

    ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರು ಕೈ ಹಿಡಿದ ಪತಿ ದಶರಥ ರಾಜ್ ಮತ್ತು ಹೆತ್ತ ಮಗ ಸಂಜಯ್ ರೂಪ್ ಅವರನ್ನು ಕಳೆದುಕೊಂಡ ನಟಿ ಕವಿತಾ ದುಃಖದ ಮಡುವಿನಲ್ಲಿದ್ದಾರೆ. ಇದನ್ನೂ ಓದಿ: ಸಿಎಂ ಸ್ಥಾನ ಎಂಬ ವೈರಸ್‍ಗೆ ಕೈ ಹೈಕಮಾಂಡ್ ವ್ಯಾಕ್ಸಿನ್ ನೀಡಬೇಕು: ಶ್ರೀರಾಮುಲು

    ಮಗ ಸಂಜಯ್ ರೂಪ್ ಎರಡು ವಾರಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇದೇ ಸಂದರ್ಭದಲ್ಲಿ ಕವಿತಾ ಪತಿಗೂ ಕೊವಿಡ್ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪದಾಧಿಕಾರಿಗಳ ನೇಮಕಕ್ಕೆ ವೀಕ್ಷಕರ ನೇಮಕ: ಡಿ.ಕೆ. ಶಿವಕುಮಾರ್

    ಕವಿತಾ 11ನೇ ವಯಸ್ಸಿಗೆ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಅವರು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿದರು. 1977ರಲ್ಲಿ ತೆರೆಗೆ ಬಂದ ಸಹೋದರರ ಸವಾಲು ಸಿನಿಮಾ ಮೂಲಕ ಕವಿತಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ನಂತರ ಖಿಲಾಡಿ ಕಿಟ್ಟು ಸೇರಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದರು. 2009ರಲ್ಲಿ ತೆರೆಕಂಡ ಉಲ್ಲಾಸ ಉತ್ಸಾಹ ಅವರ ಕನ್ನಡದ ಕೊನೆಯ ಚಿತ್ರ. ಸದ್ಯ, ಕವಿತಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

    ಕೊವಿಡ್‍ನಿಂದ ಹಿಂದಿ, ಕನ್ನಡ, ತಮಿಳು, ತೆಲುಗು ಹಾಗೂ ಮಲಯಳಾಂ ಚಿತ್ರರಂಗದ ಸಾಕಷ್ಟು ಕಲಾವಿದರು, ನಿರ್ದೇಶಕರು ಹಾಗೂ ನಿರ್ಮಾಪಕರು ಕೊರೊನಾದಿಂದ ಮೃತಪಟ್ಟಿದ್ದಾರೆ.

  • ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್

    ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್

    – ಶೂ ಧರಿಸಿ ನಿಂತ ಫೋಟೋಗೆ ಭಾರೀ ವಿರೋಧ
    – ಸೂಕ್ತ ಕ್ರಮಕ್ಕೆ ನೆಟ್ಟಿಗರು ಒತ್ತಾಯ

    ನೆಲಮಂಗಲ: ಪ್ರವಾಸಿ ಸ್ಥಳಗಳನ್ನು ಉಳಿಸುವುದು ಹಾಗೂ ಆ ಕ್ಷೇತ್ರದ ಪಾವಿತ್ರತೆ ಕಾಪಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಆದರೆ ಇಂಥವುಗಳ ಬಗ್ಗೆ ಜಾಗೃತಿ ಮೂಡಿಸಬೇಕಾದವರೇ ಇಲ್ಲಿ ಸ್ವಲ್ಪ ಸಮಯದ ಮೋಜು ಮಸ್ತಿ ಮಾಡಿ ಎಲ್ಲವನ್ನೂ ಮಣ್ಣು ಪಾಲು ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಹೌದು. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶ್ರೀ ಕ್ಷೇತ್ರ ದಕ್ಷಿಣಕಾಶಿ ಶಿವಗಂಗೆಯ ಪವಿತ್ರ ಬೆಟ್ಟದ ತುತ್ತತುದಿಯ ತೀರ್ಥ ಕಂಬದ ಪ್ರಾಂಗಣವನ್ನು ಅಪವಿತ್ರ ಮಾಡಿದ ಆರೋಪ ಕಿರುತೆರೆ ನಟ ಹಾಗೂ ನಟಿ ಮೇಲೆ ಬಂದಿದೆ.

    ಕಿರುತೆರೆ ನಟಿ ಕವಿತಾ ಹಾಗೂ ನಟ ಚಂದನ್, ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆ ಬೆಟ್ಟದಲ್ಲಿ ತೀರ್ಥ ಕಂಬದ ಬಳಿ ಶೂ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋವನ್ನು ಚಂದನ್ ತಮ್ಮ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ಈ ಫೋಟೋ ಭಾರೀ ವಿವಾದಕ್ಕೆ ಕಾರಣವಾಗಿದೆ. ನೆಲಮಂಗಲ ತಾಲೂಕಿನ ಶಿವಗಂಗೆಯ ಬೆಟ್ಟದ ತುತ್ತ ತುದಿಯಲ್ಲಿ ಧಾರಾವಾಹಿ ನಟರ ಮೋಜುಮಸ್ತಿ ಭಕ್ತರಿಗೆ ಬೇಸರ ಮೂಡಿಸಿದೆ.

    ದಕ್ಷಿಣಕಾಶಿ ಪುರಾಣ ಪ್ರಸಿದ್ಧ ಶ್ರೀ ಗಂಗಾಧರೇಶ್ವರ ಸ್ವಾಮಿ ನೆಲೆಸಿರುವ ಪುಣ್ಯ ಕ್ಷೇತ್ರ ಶಿವಗಂಗೆ. ಜನವರಿ 15ರ ಮಕರ ಸಂಕ್ರಾಂತಿಯ ದಿನ ಈ ತೀರ್ಥ ಕಂಬದಲ್ಲಿ ಉದ್ಭವಾದ ಜಲದಿಂದ, ಪ್ರಸಿದ್ಧ ಗಿರಿಜಾ ಕಲ್ಯಾಣವಾಗುತ್ತದೆ. ತೀರ್ಥೋದ್ಭವವಾಗುವ ಸ್ಥಳದಲ್ಲಿ ಇದೀಗ ಅಪವಿತ್ರವಾಗಿದೆ. ಪವಾಡ ರೀತಿಯಲ್ಲಿ ಗಂಗೆ ಉತ್ಪತ್ತಿಯಾಗುವ ಪವಿತ್ರ ಕ್ಷೇತ್ರದಲ್ಲಿ ಇದೀಗ ಅಪಚಾರದ ಮಾತು ಕೇಳಿಬರುತ್ತಿದೆ.

    ಕೊರೊನಾ ಸಮಯದಲ್ಲೂ ಬೆಟ್ಟದ ಮೇಲೆ ತಾರಾ ಜೋಡಿ ಮಸ್ತ್ ಎಂಜಾಯ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನಟ ನಟಿಯ ವಿರುದ್ಧ ವ್ಯಾಪಕವಾಗಿ ಟೀಕೆ ವ್ಯಕ್ತವಾಗಿದೆ. ದೇವರ ಮಹಿಮೆ ತಿಳಿಯದೆ ಶೂ ಧರಿಸಿ ಫೋಟೋ ತೆಗೆದುಕೊಂಡಿದ್ದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸ್ಥಳೀಯ ದೇವಾಲಯದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆ ನಟ ನಟಿಯ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

  • ಆ್ಯಂಡಿ-ಕವಿತಾ ಡಿಶುಂ ಡಿಶುಂ ಸುಖಾಂತ್ಯ

    ಆ್ಯಂಡಿ-ಕವಿತಾ ಡಿಶುಂ ಡಿಶುಂ ಸುಖಾಂತ್ಯ

    ಬೆಂಗಳೂರು: ರಾಜ್ಯ ಮಹಿಳಾ ಆಯೋಗದಲ್ಲಿ ವಿಚಾರಣೆ ಮಾಡಿದ ನಂತರ ಬಿಗ್‍ಬಾಸ್ ಸೀಸನ್ 6ರ ಸ್ಪರ್ಧಿ ಕವಿತಾ ಗೌಡ ಮತ್ತು ಆ್ಯಂಡಿ ನಡುವಿನ ಜಗಳವೂ ಕೊನೆಗೊಂಡಿದೆ.

    ಕವಿತಾ ಸ್ಪರ್ಧಿ ಆ್ಯಂಡಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರಿಗೆ ವಿಚಾರಣೆಗೆ ಹಾಜರಾಗುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ನೋಟಿಸ್ ನೀಡಿದ್ದರು. ಇಬ್ಬರು ಶನಿವಾರ ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ಕವಿತಾಗೆ ಲೈಂಗಿಕ ಕಿರುಕುಳ ಪ್ರಕರಣ- ವಿಚಾರಣೆಗೆ ಹಾಜರಾದ ಆ್ಯಂಡಿ

    ಈ ಬಗ್ಗೆ ಪ್ರತಿಕ್ರಿಯಿಸಿದ ಕವಿತಾ, ಆಂಡ್ರ್ಯೂ ನನಗೆ ಕ್ಷಮೆ ಕೇಳಿದ್ದಾರೆ. ಕಿರುಕುಳ ಕೊಟ್ಟಿರುವ ಬಗ್ಗೆ ಅವರು ಒಪ್ಪಿಕೊಂಡಿದ್ದು, ಮತ್ತೆ ಈ ರೀತಿ ಮಾಡಲ್ಲ ಎಂದಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಇಲ್ಲಿಗೆ ಬಿಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ವಿಚಾರಣೆಯಲ್ಲಿ ಆಂಡ್ರ್ಯೂ, ಒಬ್ಬರಿಗೆ ಬೇಜಾರಾಗಿದೆ ಅಂದರೆ ಖಂಡಿತ ನಾನು ಕ್ಷಮೆ ಕೇಳುವೆ. ಈಗಲೂ ಕವಿತಾ ಮೇಲೆ ನನಗೆ ಗೌರವ ಇದೆ ಅಂತ ಮಹಿಳಾ ಆಯೋಗದ ಅಧ್ಯಕ್ಷರ ಮುಂದೆ ಒಪ್ಪಿಕೊಂಡಿದ್ದಾರೆ. ಗೇಮ್ ನಲ್ಲಿ ಆಗಿರುವ ಕಿರಿಕಿರಿಗೆ ನಾನು ಕವಿತಾಗೆ ಕ್ಷಮೆ ಕೇಳಿದ್ದೇನೆ ಎಂದು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕವಿತಾಗೆ ಲೈಂಗಿಕ ಕಿರುಕುಳ ಪ್ರಕರಣ- ವಿಚಾರಣೆಗೆ ಹಾಜರಾದ ಆ್ಯಂಡಿ

    ಕವಿತಾಗೆ ಲೈಂಗಿಕ ಕಿರುಕುಳ ಪ್ರಕರಣ- ವಿಚಾರಣೆಗೆ ಹಾಜರಾದ ಆ್ಯಂಡಿ

    ಬೆಂಗಳೂರು: ಬಿಗ್ ಬಾಸ್ ಸೀಸನ್ ಸ್ಪರ್ಧಿ ಕವಿತಾ ಗೌಡಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆ್ಯಂಡಿ ಇಂದು ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.

    ರಾಜ್ಯ ಮಹಿಳಾ ಆಯೋಗವು ಕವಿತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಆ್ಯಂಡಿ ಹಾಗೂ ಕವಿತಾರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಆ್ಯಂಡಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಕವಿತಾ ಹಾಜರಾಗಬೇಕಿದೆ.

    ಏನಿದು ಪ್ರಕರಣ?
    ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿ ವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟು ಮಾಡಿತು ಎಂದು ಕವಿತಾ ಅವರು ಆ್ಯಂಡಿ ಮೇಲೆ ಆರೋಪಿಸಿದ್ದರು.

    ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಆ್ಯಂಡಿ, “ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದ್ದವು. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿನ್ನು ಮದ್ವೆಗೆ ಅಮ್ಮ ಒಪ್ಪಿಗೆ

    ಚಿನ್ನು ಮದ್ವೆಗೆ ಅಮ್ಮ ಒಪ್ಪಿಗೆ

    ಬೆಂಗಳೂರು: ಕನ್ನಡ ಬಿಗ್‍ಬಾಸ್ 6ನೇ ಆವೃತ್ತಿ ಕೊನೆಯ ಹಂತ ತಲುಪಿದ್ದು, ಈ ಮಧ್ಯೆ ಬಿಗ್ ಮನೆಯಲ್ಲಿ ಕವಿತಾ ಮತ್ತು ರೈತ ಶಶಿಕುಮಾರ್ ನಡುವೆ ಪ್ರೀತಿ, ಪ್ರೇಮ ಇದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೆ ಕವಿತಾ ತಾಯಿ ಕೂಡ ಮಗಳಿಗೆ ಮದುವೆ ಮಾಡುವುದರ ಬಗ್ಗೆ ಹೇಳಿದ್ದಾರೆ.

    ಹೌದು..ಇತ್ತೀಚೆಗಷ್ಟೆ ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಪ್ರಥಮ್ ಅಂಡ್ ಗ್ಯಾಂಗ್ ರೊಮ್ಯಾಂಟಿಕ್ ಡಿನ್ನರ್ ಡೇಟ್ ಟಾಸ್ಕ್ ನಲ್ಲಿ ಕವಿತಾ ಮತ್ತು ಶಶಿ ಇಬ್ಬರನ್ನ ಚೆನ್ನಾಗಿ ಆಟ ಆಡಿಸಿದ್ದಾರೆ. ಕವಿತಾಗೆ ಇಯರ್ ಫೋನ್ ಕೊಟ್ಟು ತಮಗೆ ಬೇಕಾದ ಡೈಲಾಗ್‍ ಗಳನ್ನ ಕವಿತಾ ಬಾಯಿಯಲ್ಲಿ ಹೇಳಿಸಿದ್ದರು. ಕೊನೆಯಲ್ಲಿ ಇಯರ್ ಫೋನ್ ಶಶಿ ಕೈಗಿಟ್ಟ ಕವಿತಾ ಇದೆಲ್ಲಾ ಟಾಸ್ಕ್ ಅಂತ ಶಾಕ್ ಕೊಟ್ಟಿದ್ದರು.

    ಇತ್ತ ಬಿಗ್‍ಬಾಸ್ ಮನೆಯಾಚೆ ಕವಿತಾ ತಾಯಿ ಕೂಡ ಮಗಳು ಒಪ್ಪಿದರೆ ನನಗೇನೂ ಸಮಸ್ಯೆ ಇಲ್ಲ ಅಂತ ಮಗಳ ಮದುವೆ ಕುರಿತು ಗ್ರೀನ್‍ ಸಿಗ್ನಲ್ ಕೊಟ್ಟಿದ್ದಾರೆ. “ನನ್ನ ಮಗಳು ಬಿಗ್‍ಬಾಸ್ ಕೊಟ್ಟ ಟಾಸ್ಕ್ ನ ಚೆನ್ನಾಗಿ ನಿಭಾಯಿಸಿದ್ದಾಳೆ. ನಮ್ಮನ್ನ ಇಷ್ಟು ಜನ ನೋಡುತ್ತಿದ್ದಾರೆ. ಹಾಗಾಗಿ ಅವರಿಗೆ ಮನರಂಜನೆ ಕೊಡುವುದು ಕವಿತಾ ಕರ್ತವ್ಯ ಅಂತ ಮಗಳ ಆಟವನ್ನ ಒಪ್ಪಿಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ನನ್ನ ಮಗಳಿಗೆ ಇಪ್ಪತೈದು ವರ್ಷ ವಯಸ್ಸಾಗಿದೆ, ಮದುವೆ ಆಗುವುದು ಆಕೆಯ ಇಷ್ಟ. ಆದರೆ ಹುಡುಗನಿಗೆ ಯಾವುದೇ ಸಮಸ್ಯೆ ಇರಬಾದರು. ಅದು ಬಿಟ್ಟು ನನಗೇನು ತೊಂದರೆ ಇಲ್ಲ. ಕವಿತಾ ಯಾರನ್ನು ಇಷ್ಟಪಟ್ಟು ಕರೆದುಕೊಂಡು ನಮ್ಮ ಮುಂದೆ ನಿಲ್ಲಿಸಿದರೆ, ಅವರನ್ನು ಒಪ್ಪಿ ನಾವು ಮದುವೆ ಮಾಡಿಸುತ್ತೇವೆ” ಎಂದು ಕವಿತಾ ತಾಯಿ ಹೇಳಿದ್ದಾರೆ.

    ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಅಕ್ಷತಾ ನಡುವೆ ಪ್ರೀತಿ ಇತ್ತು ಎಂದು ಹೇಳಲಾಗುತ್ತಿತ್ತು. ಈಗ ಕವಿತಾ ಮತ್ತು ಶಶಿ ಮಧ್ಯೆ ಪ್ರೀತಿ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯಕ್ಕೆ ಈ ವಾರ ಅಂದರೆ ಶನಿವಾರದ ಸಂಚಿಕೆಯಲ್ಲಿ ರಾಕೇಶ್ ಎಲಿಮಿನೆಟ್ ಆಗಿ ಮನೆಯಿಂದ ಹೊರ ಬಂದಿದ್ದಾರೆ. ಇನ್ನೂ ಧನ್‍ರಾಜ್, ಕವಿತಾ, ರಶ್ಮಿ, ಆ್ಯಂಡಿ, ಶಶಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಆದರೆ ಸ್ಪರ್ಧಿ ನವೀನ್ ಈ ಮೊದಲೆ ಫಿನಾಲೆಗೆ ಆಯ್ಕೆಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಥಮ್ ಆರ್ಡರ್ ಕೇಳಿದ ಆ್ಯಂಡಿಯ ಮನಸ್ಸು ವಿಲವಿಲ

    ಪ್ರಥಮ್ ಆರ್ಡರ್ ಕೇಳಿದ ಆ್ಯಂಡಿಯ ಮನಸ್ಸು ವಿಲವಿಲ

    ಬೆಂಗಳೂರು: ಬಿಗ್ ಬಾಸ್ ಸೀಸನ್-6 ಮುಗಿಯಲು ಕೆಲವು ದಿನಗಳು ಮಾತ್ರ ಬಾಕಿ ಇದೆ. ಇಷ್ಟು ದಿನ ಆ್ಯಂಡಿ, ಕವಿತಾ ಮೇಲೆ ಒಂದು ಫೀಲಿಂಗ್ ಇದೆ ಎಂದು ಹೇಳುತ್ತಿದ್ದರು. ಆದರೆ ಈಗ ಕವಿತಾ ಅವರನ್ನು ತಂಗಿ ಎಂದು ಕರೆಯಬೇಕೆಂದು ಹೇಳಿದಕ್ಕೆ ಎಸ್ ಬಾಸ್ ಎಂದು ಆ್ಯಂಡಿ ಹೇಳಿದ್ದಾರೆ.

    ಬಿಗ್ ಬಾಸ್ ಮನೆಗೆ ಈ ವಾರದಲ್ಲಿ ಅತಿಥಿಗಳಾಗಿ ಪ್ರಥಮ್, ಕೀರ್ತಿ, ಸಂಜನಾ, ಕೃಷಿ ಮತ್ತು ಸಮೀರ್ ಆಚಾರ್ಯ ಅವರು ಆಗಮಿಸಿದ್ದಾರೆ. ಈ ಹಳೆಯ ಸ್ಪರ್ಧಿಗಳನ್ನು ವಿಶೇಷವಾದ ಕೋಣೆಯಲ್ಲಿರಿಸಿದ್ದು, ಟಿವಿ ಹಾಗೂ ಫೋನ್ ಮೂಲಕ ಬಿಗ್ ಬಾಸ್ ಹೇಳಿದಂತೆ ಸ್ಪರ್ಧಿಗಳಿಗೆ ವಿಶೇಷ ಚಟುವಟಿಕೆಗಳನ್ನು ನೀಡುತ್ತಿದ್ದಾರೆ.

    ಇಂದಿನ ಸಂಚಿಕೆಯಲ್ಲೂ ಪ್ರಥಮ್ ಅವರು ಇನ್ನು ಮುಂದೆ ನೀವು ಕವಿತಾ ಅವರನ್ನು ತಂಗಿ ಕವಿತಾ ಎಂದೇ ಕರೆಯಬೇಕೆಂದು ಆ್ಯಂಡಿಗೆ ಹೇಳಿದ್ದಾರೆ. ಈ ವೇಳೆ ಆ್ಯಂಡಿ ‘ಬಾಸ್’ ಎಂದು ರಾಗಾ ಎಳೆದಾಗ ಪ್ರಥಮ್ ‘ಆರ್ಡರ್ ಇಸ್ ಪಾಸ್’ ಎಂದು ಹೇಳಿದ್ದಾರೆ. ಆಗ ಆ್ಯಂಡಿ ‘ಎಸ್ ಬಾಸ್’ ಎಂದು ದಿಂಬಿನಿಂದ ತಮ್ಮ ತಲೆಯನ್ನು ಚಚ್ಚಿಕೊಂಡಿದ್ದಾರೆ.

    ಸೋಮವಾರ ಗಾರ್ಡನ್ ಏರಿಯಾದಲ್ಲಿ ಶಶಿ ಮತ್ತು ಕವಿತಾ ಕ್ಯಾಂಡಲ್ ಲೈಟ್ ಡಿನ್ನರ್ ನಲ್ಲಿ ಭಾಗಿಯಾಗಿದ್ದರು. ಆ್ಯಂಡಿ ಹೊರತುಪಡಿಸಿ ಉಳಿದೆಲ್ಲ ಸ್ಪರ್ಧಿಗಳು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆ್ಯಂಡಿ ಮಾತ್ರ ಬಾಗಿಲ ಬಳಿ ಬೆಡ್ ಶೀಟ್ ಹೊದ್ದುಕೊಂಡು ಇಬ್ಬರ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರು.

    ಕಳೆದ ವಾರ ಬಿಗ್ ಬಾಸ್ ಮನೆಗೆ ಆ್ಯಂಡಿ ಅವರ ತಂದೆ ಎಂಟ್ರಿ ನೀಡಿದ್ದರು. ಬಿಗ್ ಬಾಸ್ ಮನೆಗೆ ಬಂದು ಎಲ್ಲ ಸ್ಪರ್ಧಿಗಳು ಹಾಗೂ ತಮ್ಮ ಮಗ ಆ್ಯಂಡಿ ಜೊತೆ ಮಾತನಾಡಿ ಮನೆಯಿಂದ ಹೊರಡುವಾಗ ನಿನ್ನ ತಂಗಿ ಕವಿತಾರನ್ನು ಚೆನ್ನಾಗಿ ನೋಡಿಕೋ ಎಂದು ಹೇಳಿದ್ದಾರೆ.

    ಆ್ಯಂಡಿ ಅವರು ಪ್ರಥಮ್ ಅವರ ಆರ್ಡರ್ ರನ್ನು ಪಾಲಿಸುತ್ತಾರಾ? ಇಲ್ಲವಾ? ತಂಗಿ ಎಂದು ಕರೆದಾಗ ಕವಿತಾ ಹಾಗೂ ಮನೆಯ ಉಳಿದ ಸದಸ್ಯರ ಪ್ರತಿಕ್ರಿಯೆ ಹೇಗೆ ಇರಲಿದೆ ಎಂಬುದು ಇಂದಿನ (ಮಂಗಳವಾರ) ಸಂಚಿಕೆಯಲ್ಲಿ ತಿಳಿದು ಬರುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv