Tag: Kavita Gowda

  • Exclusive-ಚಂದನ್ ಹಲ್ಲೆಗೆ ನಾನು ನ್ಯಾಯ ಕೇಳುತ್ತೇನೆ : ನಟಿ, ಚಂದನ್ ಪತ್ನಿ ಕವಿತಾ ಗೌಡ

    Exclusive-ಚಂದನ್ ಹಲ್ಲೆಗೆ ನಾನು ನ್ಯಾಯ ಕೇಳುತ್ತೇನೆ : ನಟಿ, ಚಂದನ್ ಪತ್ನಿ ಕವಿತಾ ಗೌಡ

    ತಿ, ನಟ ಚಂದನ್ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ. ಚಂದನ್ ಬರುತ್ತಾರೋ ಇಲ್ಲವೋ ಅದಕ್ಕಾಗಿ ನಾನು ಕಾಯುವುದಿಲ್ಲ. ನನ್ನ ಪತಿ ಮೇಲಿನ ಹಲ್ಲೆ ಎನ್ನುವುದಕ್ಕಿಂತ, ಒಬ್ಬ ಕಲಾವಿದನ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ ಎಂದು ನಟಿಯೂ ಆಗಿರುವ ಚಂದನ್ ಪತ್ನಿ ಕವಿತಾ ಗೌಡ ಹೇಳಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ಈ ವಿಷಯ ನಿನ್ನೆಯಷ್ಟೇ ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ.

    ‘ನಾನು ಯಾರಿಗೂ ಹೊಡೆದಿಲ್ಲ. ಚಿಕ್ಕ ಹುಡುಗನ ಮೇಲೆ ಕೈ ಮಾಡುವವನೂ ನಾನಲ್ಲ. ಆ ಹುಡುಗನನ್ನು ಎಡಗೈಯಿಂದ ಜಸ್ಟ್ ತಟ್ಟಿದೆ. ಅದನ್ನೇ ಹೊಡೆದ್ರು ಅಂತ ಹೇಳ್ತಿದ್ದಾರೆ ಎಂದು ಚಂದನ್ ನನಗೆ ಹೇಳಿದರು. 10 ವರ್ಷದಿಂದ ಇರುವ ನಟನನ್ನ ಅವರು ಹಾಗೆ ಟ್ರೀಟ್ ಮಾಡಿದ್ದು ಸರಿ ಅಲ್ಲ. ಮೊದಲು ಅಲ್ಲಿ ಮೂರು ಜನ ಮಾತ್ರ ಇದ್ರಂತೆ. ಆಮೇಲೆ ಎಲ್ಲರನ್ನೂ ಕರೆಸಿ ಗಲಾಟೆ ಮಾಡಿದ್ದಾರೆ. ಇದು ಸರಿಯಾದ ಕ್ರಮವಲ್ಲ’ ಎನ್ನುತ್ತಾರೆ ಕವಿತಾ ಗೌಡ. ಇದನ್ನೂ ಓದಿ:ಡಿವೋರ್ಸ್‌ ನಂತರ ಮತ್ತೆ ಒಟ್ಟಿಗೆ ನಟಿಸಲಿದ್ದಾರೆ ನಾಗಚೈತನ್ಯ- ಸಮಂತಾ

    ನಡೆದಿರೋದು ನಡೆದೋಗಿದೆ. ಆದರೂ, ಯಾರೂ ಅಲ್ಲ ಸಂಯಮ ತಗೆದುಕೊಂಡಿಲ್ಲ. ಕೆಟ್ಟದ್ದಾಗಿಯೇ ಮಾತನಾಡುತ್ತಾ ಕೇಳೋ ಸ್ವಾರಿ ಕೇಳೋ ಅಂತ ಟ್ರೀಟ್ ಮಾಡಿದ್ದಾರೆ. ಆ ವಿಡಿಯೋ ನೋಡಿ ನನಗಂತೂ ಬೇಸರವಾಯಿತು. ಕೆಲವರು ಕನ್ನಡದವರೂ ಅಲ್ಲಿದ್ದರು. ಅವರು ಯಾರೂ ಸಹಾಯಕ್ಕೆ ಬಂದಿಲ್ಲ. ನಾನೂ ತೆಲುಗು ಸೀರಿಯಲ್ ನಲ್ಲಿ ಆಕ್ಟ್ ಮಾಡಿದ್ದೀನಿ. ಆದರೆ, ಇಂತಹ ಘಟನೆಯನ್ನು ಯಾವತ್ತೂ ಕಂಡಿಲ್ಲ ಎನ್ನುವುದು ಕವಿತಾ ಗೌಡ ಮಾತು.

    Live Tv
    [brid partner=56869869 player=32851 video=960834 autoplay=true]

  • ತಂದೆಯಾಗೋ ಖುಷಿಯಲ್ಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ತಂದೆಯಾಗೋ ಖುಷಿಯಲ್ಲಿದ್ದಾರೆ ಬಿಗ್‍ಬಾಸ್ ಸ್ಪರ್ಧಿ

    ಬೆಂಗಳೂರು: ‘ಬಿಗ್‍ಬಾಸ್ ಕನ್ನಡ ಸೀಸನ್ 6’ ಸ್ಪರ್ಧಿ ಧನರಾಜ್ ತಂದೆಯಾಗುವ ಸಂತಸದಲ್ಲಿದ್ದಾರೆ. ಇತ್ತೀಚೆಗೆ ಧನರಾಜ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಪತ್ನಿ ಶಾಲಿನಿಗೆ ಸೀಮಂತ ಕಾರ್ಯ ನಡೆದಿದೆ.

    ಧನರಾಜ್ ತಾವು ತಂದೆಯಾಗುತ್ತಿರುವ ವಿಚಾರವನ್ನು ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ನಟಿ ಕವಿತಾ ಗೌಡ ಧನರಾಜ್ ಪತ್ನಿಯ ಸೀಮಂತ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ಧನರಾಜ್ ತಂದೆಯಾಗುವ ಖುಷಿಯಲ್ಲಿದ್ದಾರೆ.

    ಬೆಂಗಳೂರಿನಲ್ಲಿಯೇ ಸೀಮಂತ ಕಾರ್ಯಕ್ರಮ ನಡೆದಿದ್ದು, ಧನರಾಜ್ ಕುಟುಂಬಸ್ಥರು, ಸ್ನೇಹಿತರು ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಕವಿತಾ ಮತ್ತು ಅವರ ತಾಯಿ, ತಂಗಿ  ಸೀಮಂತದಲ್ಲಿ ಭಾಗಿಯಾಗಿ ಶಾಲಿನಿಗೆ ಶುಭಹಾರೈಸಿದ್ದಾರೆ.

    ಧನರಾಜ್ ಮತ್ತು ಶಾಲಿನಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಧನರಾಜ್ ತುಂಬಾ ಚೆನ್ನಾಗಿ ಮಿಮಿಕ್ರಿ ಮಾಡುತ್ತಾರೆ. ಸಾಮಾನ್ಯ ವ್ಯಕ್ತಿಯಾಗಿ ಧನರಾಜ್ ‘ಬಿಗ್‍ಬಾಸ್ ಕನ್ನಡ ಸೀಸನ್ 6’ ರಲ್ಲಿ ಬಿಗ್ ಮನೆಯೊಳಗೆ ಎಂಟ್ರಿ ನೀಡಿದ್ದು, ಖ್ಯಾತಿ ಪಡೆದುಕೊಂಡಿದ್ದರು. ಈ ವೇಳೆ ಕವಿತಾ ಗೌಡ ಮತ್ತು ಶಶಿ, ಧನರಾಜ್ ಉತ್ತಮ ಸ್ನೇಹಿತರಾಗಿದ್ದರು.

    ಧನರಾಜ್ ಕೆಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಶಿವರಾಜ್ ಕುಮಾರ್ ನಟನೆಯ ‘ರುಸ್ತುಂ’ ಸಿನಿಮಾದಲ್ಲಿ ಧನರಾಜ್ ಅಭಿನಯಿಸಿದ್ದಾರೆ.

  • ಅಂತದೇನಾಯ್ತು..?- ಬಿಗ್‍ಬಾಸ್ ಶೋನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ

    ಅಂತದೇನಾಯ್ತು..?- ಬಿಗ್‍ಬಾಸ್ ಶೋನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಆಡಂ ಪಾಶಾ

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‍ಬಾಸ್. ಅಭಿನಯ ಚಕ್ರವರ್ತಿ ಸುದೀಪ್ ಸಾರಥ್ಯದಲ್ಲಿ ಮೂಡಿ ಬರುವ ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಪ್ರತಿದಿನ ಮನರಂಜನೆಯನ್ನು ನೀಡುತ್ತಿರುತ್ತಾರೆ. ಐದು ಸರಣಿಗಳನ್ನು ಯಶಸ್ವಿಯಾಗಿ ಪೂರ್ಣ ಮಾಡಿರುವ ಬಿಗ್‍ಬಾಸ್ ಈ ಬಾರಿ ಸ್ಪೆಶಲ್ ವ್ಯಕ್ತಿ ಆಡಂ ಪಾಶಾ ಮನೆಗೆ ಪ್ರವೇಶ ಮಾಡುವ ಅವಕಾಶವನ್ನು ನೀಡಿದೆ. ಕಳೆದು ಮೂರು ವಾರಗಳಿಂದಲೂ ಒಮ್ಮೆಯೂ ಭಾವುಕರಾಗದ ಆಡಂ ಪಾಶಾ ಶುಕ್ರವಾರ ಪ್ರಸಾರವಾದ ಸಂಚಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮೂರು ದಿನಗಳಿಂದ ಬಿಗ್‍ಬಾಸ್ ಮನೆಯಲ್ಲಿ ದೀಪಾವಳಿ ಆಚರಿಸಲಾಗುತ್ತಿತ್ತು. ಹಬ್ಬದ ಪ್ರಯುಕ್ತ ವಿಶೇಷ ಟಾಸ್ಕ್ ಗಳನ್ನು ನೀಡುವ ಮೂಲಕ ಮನೆಯಲ್ಲಿ ದೀಪಾವಳಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಪ್ರತಿ ಟಾಸ್ಕ್ ಗೆಲುವಿಗಾಗಿ ಎಲ್ಲ ಸ್ಪರ್ಧಿಗಳಿಗೆ ಹೊಸ ಬಟ್ಟೆ, ಹಬ್ಬದೂಟ ಮತ್ತು ಪಟಾಕಿಗಳನ್ನು ನೀಡಲಾಗಿತ್ತು. ಸಂಜೆ ಎಲ್ಲರು ಹೊಸ ಬಟ್ಟೆ ತೊಟ್ಟಿದ್ದ ಸ್ಪರ್ಧಿಗಳಿಗೆ ವಿಶೇಷ ಸಂದೇಶಗಳು ಬಂದಿದ್ದವು. ಈ ಸಂದೇಶ ನನಗೆ ಬಂದಿದೆ ಅಂತ ಊಹಿಸಿ ಸರಿಯಾಗಿದ್ದವರಿಗೆ ಅವರ ಪ್ರೀತಿ ಪಾತ್ರರಿಂದ ಬಂದಿರುವ ಉಡೂಗೊರೆಯನ್ನ ಸಹ ಪಡೆದುಕೊಂಡರು.

    ಆಡಂ ಕಣ್ಣೀರಿಗೆ ಕಾರಣವೇನು?
    ಎಲ್ಲ ಅಭ್ಯರ್ಥಿಗಳಿಗೆ ಸಂದೇಶ ಕಳುಹಿಸಲಾಗಿತ್ತು. ಅದ್ರೆ ಆಡಂ ಪಾಶಾರಿಗೆ ಯಾರು ದೀಪಾವಳಿಯ ಸಂದೇಶ ಕಳುಹಿಸಿರಲಿಲ್ಲ. ಹೀಗಾಗಿ ಎಲ್ಲ ಸ್ಪರ್ಧಿಗಳು ತಮ್ಮ ಕುಟುಂಬಸ್ಥರು ನೀಡಿದ ಗಿಫ್ಟ್ ನಿಂದ ಸಂತೋಷದಲ್ಲಿದ್ದ ಕ್ಷಣದಲ್ಲಿ ಆಡಂ ಒಂದು ಕ್ಷಣ ಭಾವುಕರಾದರು. ಈ ವೇಳೆ ಸಹ ಸ್ಪರ್ಧಿ ನಟಿ ಕವಿತಾ ಗೌಡ ತಮಗೆ ಬಂದಿರುವ ಗಿಫ್ಟ್ ನೀಡುವ ಮೂಲಕ ಆಡಂ ದುಃಖದಲ್ಲಿ ಭಾಗಿಯಾದರು.

    ಏನದು ಗಿಫ್ಟ್:
    ಕವಿತಾರ ಬೆಸ್ಟ್ ಫ್ರೆಂಡ್ ನೂತನ್ ಎಂಬವರು ಇಸ್ರೇಲ್ ನಿಂದ ತಂದಿರುವ ಲಾಕೆಟ್ ನ್ನು ಬಿಗ್‍ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದೇ ಲಾಕೆಟ್ ನ್ನು ಕವಿತಾ ಆಡಂಗೆ ನೀಡಿದರು. ನಾನು ಈ ಲಾಕೆಟ್ ಬಹಳ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೇನೆ. ಆಡಂಗೆ ಕುಟುಂಬಸ್ಥರು ಎಲ್ಲಿದ್ದಾರೆ? ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಆಡಂಗಾಗಿ ಯಾವ ಸಂದೇಶ ಅಥವಾ ಗಿಫ್ಟ್ ಬಂದಿಲ್ಲ. ಹಾಗಾಗಿ ನನ್ನ ಅದೃಷ್ಟದ ಲಾಕೆಟ್ ಆಡಂಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.

    ಗಿಫ್ಟ್ ಪಡೆದ ಆಡಂ, ಬಿಗ್‍ಬಾಸ್ ಮನೆಗೆ ಬರುವಾಗ ಎಮೆರ್ಜೆನ್ಸಿ ನಂಬರ್ ಕೊಡಿ ಅಂದಾಗ ನಾನು ನನ್ನ ಅಕ್ಕನ ನಂಬರ್ ಕೊಟ್ಟು ಬಂದೆ. ಆದ್ರೆ ಈವರೆಗೂ ನನ್ನನ್ನು ಕುಟುಂಬಸ್ಥರು ಒಪ್ಪಿಕೊಂಡಿಲ್ಲ. ಎಲ್ಲರಿಗೂ ಗಿಫ್ಟ್ ಸಿಗುತ್ತಿರುವಾಗ ನನಗೆ ಸಣ್ಣ ಜಲಸ್ ಆಯಿತು. ನಾನು ಎಂದೂ ಹೊರಗಡೆ ಇರುವ ನನ್ನ ಕುಟುಂಬದ ಬಗ್ಗೆ ಮಾತಾಡಿಲ್ಲ. ಇಂದು ಈ ಕಾರ್ಯಕ್ರಮದಿಂದ ಹೊಸ ಕುಟುಂಬ ನನಗೆ ಸಿಕ್ಕಿದೆ ಎಂದು ಆಡಂ ಖುಷಿ ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews