Tag: Kaviraj

  • ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ವರ್ತೂರ್‌ ಪ್ರಕಾಶ್‌ ಕಿಡ್ನ್ಯಾಪ್‌ ಕೇಸಲ್ಲಿ ಆರೋಪಿಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ಬಂಧನ

    ಕೋಲಾರ: ಭೂಗತ ಪಾತಕಿ ರವಿ ಪೂಜಾರಿ (Ravi Pujari) ಸಹಚರನನ್ನು ಕೋಲಾರ ಪೊಲೀಸರ ತಂಡ ಉತ್ತರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

    ಆರೋಪಿ ಕವಿರಾಜ್‌ನನ್ನು ಯುಪಿಯ ನೋಯ್ಡಾ ನಗರದಲ್ಲಿ ಬಂಧಿಸಲಾಗಿದೆ. ದೇಶಾದ್ಯಂತ ವಿವಿಧ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ. ಇದನ್ನೂ ಓದಿ: ಜಮ್ಮು ಕಾಶ್ಮೀರ ಭೂಕುಸಿತ – ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌, ಪುತ್ರ ಸಾವು

    ​ಮಾಜಿ ಸಚಿವ ವರ್ತೂರ್ ಪ್ರಕಾಶ್​ ಕಿಡ್ನ್ಯಾಪ್​ ಪ್ರಕರಣ ಸೇರಿ 14 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ದೆಹಲಿ, ಉತ್ತರಾಖಂಡ​, ಉತ್ತರ ಪ್ರದೇಶದಲ್ಲಿ ಹುಡುಕಾಡಿ ಆರೋಪಿಯನ್ನು ಬಂಧಿಸಲಾಗಿದೆ.

    ಕೋಲಾರ ಸೆನ್​ ಸಿಪಿಐ ಎಸ್​.ಆರ್.ಜಗದೀಶ್​ ನೇತೃತ್ವದ ತಂಡದಿಂದ ಕವಿರಾಜ್​ ಬಂಧನವಾಗಿದೆ. ಬಂಧಿತ ಆರೋಪಿಯನ್ನು ಕೋಲಾರ ಸತ್ರ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ಇದನ್ನೂ ಓದಿ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆ

  • ‘ಭೀಮ’ನಿಗಾಗಿ ಮತ್ತೆ ಒಂದಾದ ಕವಿರಾಜ್-ದುನಿಯಾ ವಿಜಯ್

    ‘ಭೀಮ’ನಿಗಾಗಿ ಮತ್ತೆ ಒಂದಾದ ಕವಿರಾಜ್-ದುನಿಯಾ ವಿಜಯ್

    ರಿಗೊಬ್ಳೆ ಪದ್ಮಾಪತಿ…’ ಸಾಂಗ್ ಯಾರು ತಾನೆ ಕೇಳಿಲ್ಲ. ಸ್ಯಾಂಡಲ್‌ವುಡ್ ಕ್ವೀನ್, ಮೋಹಕತಾರೆ ರಮ್ಯಾ ಪದ್ಮಾವತಿಯಾಗಿ ಹಾಡಿಗೆ ಹೆಜ್ಜೆ ಹಾಕಿದ್ದರು. ರಮ್ಯಾಗೆ ದುನಿಯಾ ವಿಜಿ (Duniya Vijay) ಸಾಥ್ ನೀಡಿದ್ದರು. ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಸಿನಿಮಾದ ಹಾಡು ಇದಾಗಿದ್ದು ಇಬ್ಬರೂ ಸಖತ್ ಆಗಿ  ಹೆಜ್ಜೆ ಹಾಕಿದ್ದರು. ವಿ ಹರಿಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಸುಂದರ ಹಾಡಿಗೆ (Song) ಸಾಹಿತ್ಯ ರಚಿಸಿದ್ದು ಖ್ಯಾತ ಚಿತ್ರಸಾಹಿತಿ ಕವಿರಾಜ್ (Kaviraj). ಈ ಹಾಡಿನ ಬಳಿಕ ರಮ್ಯಾ ಸ್ಯಾಂಡಲ್‌ವುಡ್ ಪದ್ಮಾವತಿ ಅಂತಾನೇ ಖ್ಯಾತಿಗಳಿಸಿದರು. ಅಷ್ಟರ ಮಟ್ಟಿಗೆ ಈ ಹಾಡು ಹಿಟ್ ಆಗಿತ್ತು.

    ಆ ಹಾಡಿನ ನಂತರ ಕವಿರಾಜ್ ಮತ್ತು ದುನಿಯ ವಿಜಿ ಕಾಂಬಿನೇಷ್‌ನಲ್ಲಿ ಮತ್ತೊಂದು ವಿಶೇಷ ಹಾಡು ಮೂಡಿ ಬರುತ್ತಿದೆ. ‘ಪದ್ಮಾವತಿ’ ಹಾಡಿನ ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಹಿಟ್‌ಗೆ ಸಜ್ಜಾಗಿದೆ ಈ ಜೋಡಿ. ದುನಿಯಾ  ವಿಜಿಯ್ ಸದ್ಯ ‘ಭೀಮ’ (Bheem) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿರುವ ವಿಜಿ ರಿಲೀಸ್ ತಯಾರಿಯಲ್ಲಿದ್ದಾರೆ. ‘ಭೀಮ’ ಸಿನಿಮಾಗಾಗಿ ಕವಿರಾಜ್ ವಿಶೇಷ ಹಾಡೊಂದನ್ನು ಬರೆದಿದ್ದಾರೆ. ಅಂದು ‘ಪದ್ಮಾವತಿ’ ಅಂತ ಮೋಡಿ ಮಾಡಿದ್ದ ಕವಿರಾಜ್ ಇದೀಗ, ‘ಬೇಡ ಬೇಡ ದೊಡ್ಡ ಪಾರ್ಟಿ…’ ಎನ್ನುತ್ತಾ ಮತ್ತೆ ಗಾಯನಪ್ರಿಯರ ಮುಂದೆ ಬರುತ್ತಿದ್ದಾರೆ. ಈ ಬಗ್ಗೆ ಕವಿರಾಜ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ‘ಬೇಡ ದೊಡ್ಡ ದೊಡ್ಡ ಪಾರ್ಟಿ.. ಕುಡಿಸು ನೀ ಸಾಕು ಬೈ ಟೂ ಟೀ…’ ಸಾಲುಗಳಿಂದ ಪ್ರಾರಂಭವಾಗುವ ಈ ಹಾಡು ಭೀಮ ಸಿನಿಮಾದ ಹೈ ವೋಲ್ಟೇಜ್ ಹಾಡು ಆಗಿರಲಿದೆ. ಅಂದಹಾಗೆ ಭೀಮ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚರಣ್ ರಾಜ್ ಸಂಗೀತ, ಕವಿರಾಜ್ ಸಾಹಿತ್ಯ ಹಾಗೂ ದುನಿಯಾ ವಿಜಯ್ ನಟನೆ. ಈ ಮೂವರ ಕಾಂಬಿನೇಷನ್‌ನಲ್ಲಿ ಬರ್ತಿರುವ ಹಾಡಿನ ಮೇಲೆ ನಿರೀಕ್ಷೆ ಈಗಾಗಲೇ ಹೆಚ್ಚಾಗಿದ್ದು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

    ‘ಭೀಮನ ಟೀಮ್ ನಿಂದ ಚರಣ್ ರಾಜ್ ಸಂಗೀತದಲ್ಲಿ ಒಂದು ಖಡಕ್ ಸಾಂಗ್ ಲೋಡಿಂಗ್. ಬೇಡ ಬೇಡವೆಂದರೂ ಚೇರ್ ಮೇಲೆ ನನ್ನ ಕೂರಿಸಿ , ತಾವು ಹಿಂದೆ ನಿಂತು ಒಬ್ಬ ತಂತ್ರಜ್ಞರಿಗೆ ಗೌರವ ನೀಡಿದ್ದು ಹೃದಯವಂತ ವಿಜಯ್ ಸರ್’ ಎಂದು ಬರೆದುಕೊಂಡಿದ್ದಾರೆ. ದುನಿಯಾ ವಿಜಯ್ ತಂತ್ರಜ್ಞರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಅಷ್ಟೆಯಲ್ಲದೇ ಅವರಿಗೆ ಸಲ್ಲ ಬೇಕಾದ ಗೌರವವನ್ನು ನೀಡುತ್ತಾರೆ. ಹಾಗಾಗಿಯೇ ವಿಜಿ ಎಂದರೆ ತಂತ್ರಜ್ಞರಿಗೆ ಇಷ್ಟ. ಚಿತ್ರಸಾಹಿತಿ ಕವಿರಾಜ್ ಕೂಡ ಇದನ್ನೆ ಹೇಳಿದ್ದಾರೆ. ಸುಂದರ ಸಾಲುಗಳ ಜೊತೆಗೆ ಕವಿರಾಜ್ ಚೇರ್ ಮೇಲೆ ಕುಳಿತಿದ್ದು ಸುತ್ತ ಭೀಮ ಟೀಮ್ ನಿಂತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ‘ಭೀಮ’ ಸಿನಿಮಾದ ಬಗ್ಗೆ ಹೇಳುವುದಾದರೆ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರೆ ನಾಯಕಿಯಾಗಿ ರಂಗಭೂಮಿ ಕಲಾವಿದೆ ಅಶ್ವಿನಿ ಕಾಣಿಸಿಕೊಂಡಿದ್ದಾರೆ. ಕೃಷ್ಣ  ಸಾರ್ಥಕ್  ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಲಗ ಬಳಿಕ ದುನಿಯ ವಿಜಯ್ ಆಕ್ಷನ್ ಕಟ್ ಹೇಳುತ್ತಿರುವ 2ನೇ ಸಿನಿಮಾ ಇದಾಗಿದೆ.  ಸಲಗ ಸಕ್ಸಸ್‌ನಲ್ಲಿರುವ ವಿಜಿ ಭೀಮ ಮೂಲಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಸೋಲು: ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಬರೆದ ಪೋಸ್ಟ್ ವೈರಲ್

    ಬಿಜೆಪಿ ಸೋಲು: ನಿರ್ದೇಶಕ, ಚಿತ್ರಸಾಹಿತಿ ಕವಿರಾಜ್ ಬರೆದ ಪೋಸ್ಟ್ ವೈರಲ್

    ಸಿನಿಮಾ ನಿರ್ದೇಶಕ ಹಾಗೂ ಚಿತ್ರ ಸಾಹಿತಿ ಕವಿರಾಜ್ (Kaviraj) ಬಿಜೆಪಿಯ (BJP) ಸೋಲನ್ನು ವಿಭಿನ್ನವಾಗಿ ವಿಶ್ಲೇಷಿಸಿದ್ದಾರೆ. ಬಿಜೆಪಿ ಸೋಲಿಗೆ ಕಾರಣ ಏನು ಎನ್ನುವುದರ ಕುರಿತು ಅವರು ಫೇಸ್ ಬುಕ್ (Facebook) ನಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸಾಕಷ್ಟು ವೈರಲ್ (Viral) ಆಗಿದೆ ಮತ್ತು ನಾನಾ ರೀತಿಯ ಕಾಮೆಂಟ್ ಗಳು ಕೂಡ ಬಂದಿವೆ. ಬಿಜೆಪಿ ಸೋಲಿಗೆ ಕವಿರಾಜ್ ಕೊಟ್ಟ ಕಾರಣ ಇಲ್ಲಿದೆ.

    ಪದೇ ಪದೇ ನಾಡಿನ ಶಾಂತಿ ಕದಡಿದ್ದು, ಶಾಲೆ – ಪಠ್ಯಪುಸ್ತಕಗಳಲ್ಲೂ ರಾಜಕೀಯ  ತಂದು ಮಲೀನಗೊಳಿಸಿದ್ದು, ಕುವೆಂಪು , ಬಸವಣ್ಣ, ಅಂಬೇಡ್ಕರ್,  ಅವರಂತಹ ಮಹನೀಯರನ್ನು ಅವಮಾನಿಸಿದ್ದು. ಧರ್ಮ – ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು, ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದು , ಹಿಂದಿ ಹೇರಿಕೆ ಬೆಂಬಲಿಸಿದ್ದು, ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿ  , ಶಿವಾಜಿ, ಸಾವರ್ಕರ್ ಅಂತಹಾ ಉತ್ತರದ ಹೋರಾಟಗಾರರನ್ನು ಮೆರೆಸಿದ್ದು. ಇದನ್ನೂ ಓದಿ:ಬಂದೂಕಿನೊಂದಿಗೆ ಆಟವಾಡಿದ ‘ಬಿಗ್ ಬಾಸ್’ ಅಬ್ದು ರೋಜಿಕ್‌ ವಿರುದ್ಧ ಪ್ರಕರಣ ದಾಖಲು

    ಹಿಂದೆಂದು ಕಂಡಿರದ ಭ್ರಷ್ಟಾಚಾರ -ಅಹಂಕಾರದ ಅಡಳಿತ, ಬೆಲೆ ಏರಿಕೆಗಳಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು, ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜನ ಉಗಿದ ನಂತರ ಯೂ ಟರ್ನ್ ಹೊಡೆದಿದ್ದು, ಕರೋನಾದಂತ ವಿಕೋಪದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು, ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು.


    ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು, ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದ್ದು, ವಿರೋಧಿಸಿದವರನ್ನು ಹೆದರಿಸಲು ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡಿದ್ದು ಇವೆಲ್ಲವುಗಳ ವಿರುದ್ಧ ಕರ್ನಾಟಕದ ಮತದಾರರು ಜಾಗೃತನಾಗಿ ತೀರ್ಪು ನೀಡಿದ್ದಾರೆ.

    ಕೇಂದ್ರ ನಾಯಕರ ಅಬ್ಬರದ ರ್‍ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆ, ಹಣ ಬಲದ ಧಿಮಾಕು , ಜಾತಿ ರಾಜಕೀಯ , ದ್ವೇಷ ಭಾಷಣ ಇವಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಅತಂತ್ರ ಫಲಿತಾಂಶ ಕೊಟ್ಟರೇ ಅನೈತಿಕ ರಾಜಕಾರಣದ ರೂವಾರಿಗಳು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡು ಹಣಬಲ , ಅಧಿಕಾರ ಬಲದಿಂದ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುತ್ತಾರೆ ಎಂಬ ಸ್ಪಷ್ಟ ಅರಿವು ಮತದಾರ ಪ್ರಭುಗಳಿಗೆ ಇದೆ. ಹಾಗಾಗಿಯೇ ನಿರ್ಣಾಯಕ ಫಲಿತಾಂಶ ನೀಡಿ ಯಾರ್ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿರುವ ಮತದಾರರು ಅಭಿನಂದನಾರ್ಹರು. ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತ ಚಿರಾಯುವಾಗಲಿ.

  • ಬ್ಯೂಟಿಫುಲ್ ಹುಡುಗಿಯರ ಜೊತೆ ಬಾನ ದಾರಿಯಲ್ಲಿ ಕುಣಿದ ಗೋಲ್ಡನ್ ಸ್ಟಾರ್

    ಬ್ಯೂಟಿಫುಲ್ ಹುಡುಗಿಯರ ಜೊತೆ ಬಾನ ದಾರಿಯಲ್ಲಿ ಕುಣಿದ ಗೋಲ್ಡನ್ ಸ್ಟಾರ್

    ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ  ‘ಬಾನದಾರಿಯಲ್ಲಿ’ ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗಷ್ಟೇ ಈ ಚಿತ್ರಕ್ಕಾಗಿ ಕವಿರಾಜ್ ಬರೆದಿರುವ ‘ನಿನ್ನನ್ನು ನೋಡಿದ ನಂತರ’ ಎಂಬ ಗೀತೆ ಬಿಡುಗಡೆಯಾಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಸಿನಿಮಾ ಬಗ್ಗೆ ಮಾತನಾಡಿದರು.

    ‘ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ರಾಜ್ಯದ ನಾನಾ ಭಾಗಗಳಲ್ಲಿ ಶೂಟಿಂಗ್ ಮಾಡಿ ಇದೀಗ ಸಂಪೂರ್ಣ ಚಿತ್ರೀಕರಣ ಮುಗಕ್ತಾಯವಾಗಿದೆ. ನಾವು ಅಂದುಕೊಂಡಿದ್ದಕ್ಕಿಂತಲೂ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಈ ಸಿನಿಮಾದ ಮೊದಲ ಹಾಡನ್ನು ಈಗ ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು’ ನಿರ್ದೇಶಕ  ಪ್ರೀತಂ ಗುಬ್ಬಿ. ಇದನ್ನೂ ಓದಿ: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಬ್ಬರಿಸಲಿದ್ದಾರೆ ಆಮೀರ್ ಖಾನ್

    ನಾಯಕನ ನಟ ಗಣೇಶ್ ಮಾತನಾಡಿ, ‘ ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಹುಡುಗಾಟ ಚಿತ್ರದ ಮಂದಾಕಿನಿಯೇ ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ. ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಕೀನ್ಯಾ ಭಾಗದ  ಚಿತ್ರೀಕರಣವನ್ನು  ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ’ ಎಂದಿದ್ದಾರೆ ಗಣೇಶ್.

    ಚಿತ್ರ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದು ನಾಯಕಿ ರುಕ್ಮಿಣಿ ವಸಂತ್ ಹೇಳಿದರೆ, ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ.  ಕಳೆದ ವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿವೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ ಬಾನದಾರಿಯಲ್ಲಿ ಚಿತ್ರವೂ ಇರಲಿ ಎನ್ನುತ್ತಾರೆ ಚಿತ್ರದ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.

    ಬಾನದಾರಿಯಲ್ಲಿ ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ  ಗೀತರಚನೆಕಾರ ಕವಿರಾಜ್, ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು.  ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ರಸ್ತೆ ಒಂದೇ ಜಾಗದಲ್ಲಿ 30 ಗುಂಡಿಗಳು : ಸರಕಾರಕ್ಕೆ ಛೀಮಾರಿ ಹಾಕಿದ ಸಿನಿ ಸಿಲೆಬ್ರಿಟಿಗಳು

    ಬೆಂಗಳೂರು ರಸ್ತೆ ಒಂದೇ ಜಾಗದಲ್ಲಿ 30 ಗುಂಡಿಗಳು : ಸರಕಾರಕ್ಕೆ ಛೀಮಾರಿ ಹಾಕಿದ ಸಿನಿ ಸಿಲೆಬ್ರಿಟಿಗಳು

    ಬೆಂಗಳೂರು ರಸ್ತೆಗಳು ಬೆಂಗಳೂರಿನ ಮರ್ಯಾದೆಯನ್ನೇ ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕುತ್ತಿವೆ ಎನ್ನುವ ಸುದ್ದಿಯನ್ನು ನಿನ್ನೆಯಿಂದ ಪಬ್ಲಿಕ್ ಟಿವಿ ಬಿತ್ತರಿಸುತ್ತಿದೆ. ಅದರಲ್ಲೂ ಬೆಂಗಳೂರು ಮೈಸೂರು ರಸ್ತೆಯ ಒಂದೇ ಜಾಗದಲ್ಲಿ ಸುಮಾರು 30ಕ್ಕೂ ಅಧಿಕ ಗುಂಡಿಗಳು ಬಿದ್ದಿರುವ ಕುರಿತು ಸತತವಾಗಿ ಪಬ್ಲಿಕ್ ಟಿವಿ ವರದಿ ಮಾಡುತ್ತಿದೆ. ಇದನ್ನೂ ಓದಿ : ನಯನತಾರಾ ಮದುವೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಜರ್?

    ರಸ್ತೆಯ ಗುಂಡಿಗಳನ್ನು ಮುಚ್ಚಿ, ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಿ ಎನ್ನುವ ಪಬ್ಲಿಕ್ ಟಿವಿಯ ಕಳಕಳಿಗೆ ಸ್ಯಾಂಡಲ್ ವುಡ್ ನಟರಾದ ಡಾ.ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ, ನಟಿಯರಾದ ಸಂಯುಕ್ತ ಹೊರನಾಡು, ಮಯೂರಿ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಸರಕಾರ ಕೂಡಲೇ ರಸ್ತೆಗಳನ್ನು ಸರಿ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸನ್ನಿ ಲಿಯೋನ್ ಫುಲ್ ಗರಂ: ಓರ್ವ ವ್ಯಕ್ತಿಗೆ ಸನ್ನಿ ಕೊಟ್ರು ಚಪ್ಪಲಿ ಏಟು

    ಒಂದೇ ಜಾಗದಲ್ಲಿ 30 ಗುಂಡಿಗಳನ್ನು ಕಂಡ ಖ್ಯಾತ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ಕೂಡ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ತಗೊಳ್ಳೊ ಪ್ರತೀ ವಾಹನದ ಮೇಲೆ ಡಿಸೈನ್ ಡಿಸೈನ್ ಟ್ಯಾಕ್ಸ್ . ಪೆಟ್ರೋಲ್ ಡಿಸೇಲ್ ಮೇಲಂತು ಮೂಲಬೆಲೆಗೂ ಮೂರುಪಟ್ಟು ಟ್ಯಾಕ್ಸ್, ಹೆಲ್ಮೆಟ್ ಹಾಕದಿದ್ರೆ ಇಷ್ಟು , ಇನ್ಶೂರೆನ್ ಇಲ್ಲಾಂದ್ರೆ ಅಷ್ಟು , ಬೆಲ್ಟ್ ಹಾಕದಿದ್ರೆ ಇಷ್ಟು ಇತ್ಯಾದಿ ಇತ್ಯಾದಿ ಫೈನ್ ಗಳನ್ನು ರಸ್ತೇಲಿ ಅಡ್ಡಗಟ್ಟಿ ವಸೂಲಿ ಮಾಡಲಾಗುತ್ತೆ.  ಇಷ್ಟೆಲ್ಲಾ ಕಿತ್ತು ತಿಂದ ಮೇಲೆ ನಮಗೆ ಕನಿಷ್ಠ ಮೂಲಭೂತ ಸೌಲಭ್ಯ ಕೊಡದ ಆಳುವವರ ಮೇಲೆ ನಾವು ಯಾವ ದಂಡ ವಿಧಿಸಬೇಕು ? ಎಷ್ಟು ದಂಡ ವಿಧಿಸಬೇಕು ಹಾಗಾದರೆ ?  ರಸ್ತೆ ಗುಂಡಿಗೆ ಬಿದ್ದು ಮೂಳೆ ಮುರಿದು ಕೊಳ್ಳುವವರೆಷ್ಟೋ? ಪ್ರಾಣ ತೆತ್ತವರೆಷ್ಟೋ? ಅದರ ಹೊಣೆಯೆಲ್ಲಾ ಹೊರುವವರು ಯಾರು?  ಎಂದು ಕೇಳಿದ್ದಾರೆ.

    ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಈಗಾಗಲೇ ವ್ಯಾಪಾಕವಾಗಿ ಟೀಕೆ ವ್ಯಕ್ತವಾಗುತ್ತಿದ್ದು, ಸರಕಾರಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ಈ ಕುರಿತು ಕೂಡಲೇ ಕ್ರಮ ತಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಗುಂಡಿಗೆ ಬಿದ್ದ ರಸ್ತೆಗಳನ್ನು ಟ್ರೋಲ್ ಮಾಡಲಾಗುತ್ತಿದೆ.

  • ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ – ಜಗ್ಗೇಶ್ ಕಂಬನಿ

    – ಸಾರಾ ಗೋವಿಂದ್, ಕವಿರಾಜ್ ಸಂತಾಪ

    ಬೆಂಗಳೂರು: ಯಾವ ತಪ್ಪಿಗೆ ನಿಮಗೆ ಈ ಶಿಕ್ಷೆ ಎಂದು ಟ್ವೀಟ್ ಮಾಡುವ ಮೂಲಕ ನಟ ಜಗ್ಗೇಶ್ ಅವರು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಸ್ವರಭಾಸ್ಕರ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತನ್ನ ಗಾಯನವನ್ನು ನಿಲ್ಲಿಸಿದ್ದಾರೆ. ಈ ಮೂಲಕ 50ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಜಗ್ಗೇಶ್ ಗೌರವಾನ್ವಿತ ವಿದಾಯ ನಿಮ್ಮಧ್ವನಿ ತಮ್ಮದಾಗಿಸಿ ನಟಿಸಿ ಚಪ್ಪಾಳೆ ಪಡೆದ ಅದೃಷ್ಟವಂತ ನಟರ ಸಾಲಲ್ಲಿ ನಾನು ಒಬ್ಬ. ನೀವು ಕಾಯಕದಲ್ಲಿ ಗಾಯಕ ಆದರೆ ನಿಮ್ಮಲ್ಲಿ ಒಬ್ಬ ಮಾತೃಹೃದಯದ ಭಾವನಾಜೀವಿ ಇದ್ದ. ಮದ್ರಾಸ್ ನಲ್ಲಿ ನಿಮ್ಮಜೊತೆ ಕಳೆದ ಆ ದಿನಗಳು ಮತ್ತೆ ಬರದು. ಮರೆಯಲಾಗದು. ಹೋದಿರಿ ಮತ್ತೆ ಬೇಗ ಬನ್ನಿ ಎಂದಿದ್ದಾರೆ.

    ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದು, ಯಾರ ಕಣ್ಣು ತಾಕಿತು. ಇನ್ನು ಎಷ್ಟು ಸಾಧಕರು ಈ ಸಾವಿನ ಶಿಕ್ಷೆಗೆ ಸಾಲು ನಿಂತಿಹರು. ವಿಶ್ವಶಾಂತಿ ಭಂಗಕ್ಕೆ ಕೊರೊನಾ ಹರಡಿ ಮಳ್ಳಿಯಂತ ದರಿದ್ರ ದೇಶ ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು. ನನ್ನ ನೆಚ್ಚಿನ ಹೃದಯವನ್ನು ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

    ಎಸ್.ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಸಂತಾಪ ಸೂಚಿಸಿದ ಸಾರಾ ಗೋವಿಂದ್ ಅವರು, ಕನ್ನಡ ಚಿತ್ರೋದ್ಯಮಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನ ಸುದ್ದಿ ತಿಳಿದು ದುಃಖವಾಗುತ್ತಿದೆ. ನಟನಾಗಿ ರಾಜಕುಮಾರ್ ಹೇಗೆ ಹೆಸರು ಮಾಡಿದರು ಅದೇ ರೀತಿ ಗಾಯಕರಾಗಿ ಅವರು ಸಹ ದೊಡ್ಡ ಮಟ್ಟಕ್ಕೆ ಹೆಸರು ಮಾಡಿದರು. ಇವತ್ತು ನಮ್ಮನ್ನ ಆಗಲಿದ್ದಾರೆ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

    https://www.facebook.com/kavi.raj.376258/posts/3715760768457932

    ಜೊತೆಗೆ ಕವಿರಾಜ್ ಅವರು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು, ನೆಟ್ ವರ್ಕ್ ಇಲ್ಲದ ಜಾಗದಲ್ಲಿದ್ದು ಬೆಳಗ್ಗೆಯಿಂದ ಡ್ರೈವಿಂಗಿನಲ್ಲಿದ್ದೆ. ದಾರಿಯಲ್ಲಿ ಮೂರು ಟಿವಿಯವರು ಎಸ್‍ಪಿಬಿ ಸಾರ್ ಬಗ್ಗೆ ಬೈಟ್ಸ್ ಕೇಳಿದರು. ಪರಿಸ್ಥಿತಿ ಗಂಭೀರವಾಗಿದೆ ಅಂತಷ್ಟೇ ಗೊತ್ತಿತ್ತು. ಅವರು ಗುಣಮುಖರಾಗಲಿ ಅಂತ ಹಾರೈಸುವ ರೀತಿಯಲ್ಲೇ ಮಾತಾಡಿದೆ. ಟಿವಿಯವರು ವಿಷಯ ಹೇಳಲಿಲ್ಲ. ಸ್ವಲ್ಪ ಹೊತ್ತಿಗೆ ಮೊದಲು ವಿಷಯ ಗೊತ್ತಾಯಿತು. ಅವರಿಲ್ಲ ಅಂತಾ ಈಗಲೂ ಒಪ್ಪಲಾಗುತ್ತಿಲ್ಲ. ಭೂಮಿ ಮೇಲೆ ಹಾಡುಗಳಿರೋವರೆಗೂ ಅವರು ಇರುತ್ತಾರೆ. ಅವರು ಅಜರಾಮರ ಎಂದು ಕಂಬನಿಮಿಡಿದಿದ್ದಾರೆ.

  • ಕಾಳಿದಾಸ ಕನ್ನಡ ಮೇಷ್ಟ್ರು: ಟ್ರೈಲರ್ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ಕಾಳಿದಾಸ ಕನ್ನಡ ಮೇಷ್ಟ್ರು: ಟ್ರೈಲರ್ ಲಾಂಚ್ ಮಾಡಿದ ಚಾಲೆಂಜಿಂಗ್ ಸ್ಟಾರ್!

    ದುವರೆಗೂ ನೂರಾರು ಹಾಡುಗಳನ್ನು ಬರೆಯುವ ಮೂಲಕ ಯಶಸ್ವಿ ಗೀತ ಸಾಹಿತಿಯಾಗಿ ಗುರುತಿಸಿಕೊಂಡಿರುವವರು ಕವಿರಾಜ್. ಸದಾ ನೆನಪಿಟ್ಟುಕೊಳ್ಳುವ, ಗುನುಗುನಿಸಿಕೊಳ್ಳುವ ಹಾಡುಗಳೊಂದಿಗೆ ಕನ್ನಡಿಗರನ್ನೆಲ್ಲ ಆವರಿಸಿಕೊಂಡಿರೋ ಅವರು ನಿರ್ದೇಶಕರಾಗಿಯೂ ಅವತಾರವೆತ್ತಿ ವರ್ಷಗಳು ಕಳೆದಿವೆ. ಇದೀಗ ನಿರ್ದೇಶಕರಾಗಿ ಅವರ ಎರಡನೇ ಪ್ರಯತ್ನವೆಂಬಂತೆ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ರೆಡಿಯಾಗಿದೆ. ನವರಸ ನಾಯಕ ಜಗ್ಗೇಶ್ ಅಭಿನಯದ ಈ ಸಿನಿಮಾದ ಟೀಸರೊಂದು ಈ ಹಿಂದೆ ಲಾಂಚ್ ಆಗಿತ್ತು. ಅದರ ಬಿಸಿಯಿನ್ನೂ ಯಥಾ ರೀತಿಯಲ್ಲಿರುವಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರನ್ನು ಬಿಡುಗಡೆಗೊಳಿಸಿದ್ದಾರೆ.

    ಈ ಹಿಂದೆ ತೂಗುದೀಪ ಪ್ರೊಡಕ್ಷನ್ ನಿರ್ಮಾಣದಲ್ಲಿ ಮದುವೆಯ ಮಮತೆಯ ಕರೆಯೋಲೆ ಎಂಬ ಚಿತ್ರವನ್ನು ಕವಿರಾಜ್ ನಿರ್ದೇಶನ ಮಾಡಿದ್ದರು. ಈ ಮೂಲಕ ದರ್ಶನ್, ಕವಿರಾಜ್ ಅವರ ಮೊದಲ ಹೆಜ್ಜೆಗೆ ಸಾಥ್ ಕೊಟ್ಟಿದ್ದರು. ಇದೀಗ ಎರಡನೇ ಪ್ರಯತ್ನವಾದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕೂ ಅವರು ಬೆಂಬಲವಾಗಿ ನಿಂತಿದ್ದಾರೆ. ಈ ಟ್ರೈಲರ್ ಬಿಡುಗಡೆಗೊಳಿಸಿರೋ ದರ್ಶನ್ ಸದರಿ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಇಲ್ಲಿ ನವರಸ ನಾಯಕ ಜಗ್ಗೇಶ್ ಅವರಿಗೆಂದೇ ಹೇಳಿ ಮಾಡಿಸಿದ ಕಥೆ ಇದ್ದಂತಿದೆ. ಎಲ್ಲ ರಸಗಳನ್ನೂ ಸೇರಿಸಿ ಮಾಡಿರುವಂತಿರೋ ಈ ಸಿನಿಮಾಗೆ ಒಳಿತಾಗಲಿ, ಇದುವೇ ಕನ್ನಡ ಪ್ರೇಮವನ್ನು ಮತ್ತಷ್ಟು ತೀವ್ರವಾಗಿಸುವಂತಾಗಲೆಂದು ಹಾರೈಸಿದ್ದಾರೆ.

    ಖುದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಬೆಂಬಲ ನೀಡಿರೋದರಿಂದ ಕವಿರಾಜ್ ಅವರ ಎರಡನೇ ಹೆಜ್ಜೆಗೆ ಮತ್ತಷ್ಟು ಬಲ ಬಂದಂತಾಗಿದೆ. ಕನ್ನಡದ ಮಟ್ಟಿಗೆ ಮೇಷ್ಟ್ರು ಎಂಬ ಗುರು ಪರಂಪರೆಗೊಂದು ಇತಿಹಾಸವೇ ಇದೆ. ಅದರ ಭಾಗವಾಗಿ ರೂಪುಗೊಂಡ ಮನಸುಗಳೇ ಇಂದು ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುತ್ತಿವೆ. ಆ ಪರಂಪರೆ ಇಂದು ಸವಕಲಾಗುತ್ತಿದೆ. ಇಂಥಾ ಸೂಕ್ಷ್ಮ ಕಥಾನಕವನ್ನು ಕಾಮಿಡಿ ಟಚ್‍ನೊಂದಿಗೆ, ಆಕ್ಷನ್ ಸನ್ನಿವೇಶಗಳನ್ನೂ ಬೆರೆಸಿ ಹೇಳೋ ವಿನೂತನ ಪ್ರಯತ್ನಕ್ಕೆ ಕವಿರಾಜ್ ಕೈ ಹಾಕಿದ್ದಾರೆ. ಈ ಟ್ರೈಲರ್ ಗೆ ಸಿಗುತ್ತಿರೋ ವ್ಯಾಪಕ ಮೆಚ್ಚುಗೆಯೇ ಗೆಲುವಿನ ಸೂಚನೆಯಂತಿದೆ.

  • ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ತಂದೆ ವಿಧಿವಶ

    ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ತಂದೆ ವಿಧಿವಶ

    ಶಿವಮೊಗ್ಗ: ಖ್ಯಾತ ಸಿನಿಮಾ ಸಾಹಿತಿ ಕವಿರಾಜ್ ಅವರ ತಂದೆ ಸಮಾಜವಾದಿ ಹೋರಾಟಗಾರರಾಗಿದ್ದ ಹರಿಯಪ್ಪ ನಾಯ್ಕ್(65) ಅವರು ನಿಧನರಾಗಿದ್ದಾರೆ.

    ಹರಿಯಪ್ಪ ಅವರು ಕಳೆದ ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ. ಹರಿಯಪ್ಪ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಶಿಷ್ಯರಾಗಿ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದರು.

    ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಸೇರಿ ಕುಟುಂಬ, ಅಭಿಮಾನಿಗಳನ್ನು ಸಮಾಜವಾದಿ ಹೋರಾಟಗಾರನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಶಿವಮೊಗ್ಗದ ಮಂಡಗದ್ದೆ ಬಳಿಯ ಇರುವತ್ತಿ ಗ್ರಾಮದಲ್ಲಿ ಹರಿಯಪ್ಪ ಅವರ ಅಂತ್ಯ ಸಂಸ್ಕಾರ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.