Tag: Kaveri Water Issue

  • ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ

    ಶಾಂತಿಯುತ ಬಂದ್‌ಗೆ ಸರ್ಕಾರ ಅಡಚಣೆ ಮಾಡಲ್ಲ: ಡಿಕೆಶಿ

    ಬೆಂಗಳೂರು: ಶಾಂತಿಯುತವಾಗಿ, ಜನರಿಗೆ ತೊಂದರೆ ಆಗದಂತೆ ಬಂದ್ ಮಾಡಿದ್ರೆ ಸರ್ಕಾರ ಅದಕ್ಕೆ ಅಡಚಣೆ ಮಾಡುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಮಂಗಳವಾರ ಬೆಂಗಳೂರು ಬಂದ್ (Bengaluru Bandh) ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಪ್ರತಿಭಟನೆ ಮಾಡಲು, ರಾಜ್ಯದ ಹಿತ ಕಾಪಾಡಲು ನಾವು ಎಲ್ಲಾ ರೀತಿಯ ಸಹಕಾರ ಕೊಡುತ್ತೇವೆ. ನಮ್ಮ ನೆಲ, ಜಲ, ಭಾಷೆ ಎಲ್ಲರೂ ಉಳಿಸಿಕೊಳ್ಳಬೇಕು. ಯಾವುದೇ ಪಾರ್ಟಿ ಆದರೂ ಉಳಿಸಿಕೊಳ್ಳಬೇಕು. ನಮ್ಮ ಪಕ್ಷದವರು ಏನು ಮಾಡುವುದು ಎಂದು ನನಗೆ ಕರೆ ಮಾಡಿದ್ದರು. ನಿಮ್ಮ ರಕ್ಷಣೆ, ಯಾರು ತಪ್ಪಬೇಡಿ ಎಂದು ಹೇಳಿದ್ದೇನೆ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ. ಆದರೆ ಎಲ್ಲರೂ ಶಾಂತಿ ಕಾಪಾಡಬೇಕು. ಜನರಿಗೆ ತೊಂದರೆ ಆಗಬಾರದು. ಹೋರಾಟ ಮಾಡಲಿ, ಅದು ಅವರ ಹಕ್ಕು. ಆದರೆ ಶಾಂತಿ ಕಾಪಾಡಬೇಕು. ಯಾವ ಪಕ್ಷದವರಿಗೂ, ಯಾರಿಗೂ ನಾವು ತೊಂದರೆ ಕೊಡಲು ಹೋಗಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಬಿಜೆಪಿ-ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದಾರೆ: ಡಿಕೆಶಿ

    ನಾವು ನಮ್ಮ ರಾಜ್ಯದ ಹಕ್ಕು ಉಳಿಸಲು ಕೆಲಸ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪು ಇದೆ. ಅದನ್ನು ಅರಿತುಕೊಳ್ಳಬೇಕು. ಟಿವಿಯವರು ಕರೆಯುತ್ತಾರೆ ಹೆಸರು ಕೊಡುತ್ತಾರೆ ಎಂದು ಮಾತನಾಡಿ ನಾಳೆ ಕೋರ್ಟ್‌ನಲ್ಲಿ ಸಮಸ್ಯೆ ಆಗೋದು ಬೇಡ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬಂದ್ ಮಾಡುವವರು ತೀರ್ಮಾನ ಮಾಡಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯಾದ್ಯಂತ ಏಕಕಾಲಕ್ಕೆ ಜನತಾ ದರ್ಶನ

    ನಿನ್ನೆ-ಮೊನ್ನೆ ಮಳೆ ಆಗಿ ಒಳ ಹರಿವು ಉತ್ತಮವಾಗಿ ಆಗಿದೆ. ಮೋಡ ಬಿತ್ತನೆ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಏನಾದರೂ ಮಾಡಲು ಸಾಧ್ಯವಿದೆಯಾ ಎಂದು ಚರ್ಚೆ ಮಾಡಿದ್ದೇವೆ. ಎರಡು-ಮೂರು ಅಭಿಪ್ರಾಯ ಅದಕ್ಕೆ ಬಂದಿದೆ. ಈಗ ಇರುವ ಪರಿಸ್ಥಿತಿಯಲ್ಲಿ ಮುಂದೆ ನೀರು ಬಿಡೋದು ಕಷ್ಟ ಆಗುತ್ತದೆ. ನಾನು ಒಬ್ಬ ಮಂತ್ರಿಯಾಗಿ ಏನೂ ಮಾತನಾಡಲು ಆಗುತ್ತಿಲ್ಲ. ನಾನು ಕೋರ್ಟ್‌ಗೂ ಗೌರವ ಕೊಡಬೇಕು. ಜನರನ್ನೂ ಉಳಿಸಿಕೊಳ್ಳಬೇಕು. ಡೆವಿಲ್ ಅಂಡ್ ದಿ ಡೀಪ್ ಸೀ ಅನ್ನೋ ರೀತಿ ನನ್ನ ಮತ್ತು ನಮ್ಮ ಸರ್ಕಾರದ ಪರಿಸ್ಥಿತಿ ಆಗಿದೆ. ಏನೇ ಆದರೂ ನಮ್ಮ ರಾಜ್ಯದ ಹಿತ ನಾವು ಕಾಪಾಡಬೇಕು. ಇದು ನಮ್ಮ ಡ್ಯೂಟಿ ಎಂದು ತಿಳಿಸಿದರು. ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಚುನಾವಣೆಗೆ ನಿಂತು ನನ್ನ ವಿರುದ್ಧ ಹೋರಾಡಿ: ರಾಹುಲ್‌ಗೆ ಓವೈಸಿ ಚಾಲೆಂಜ್

    ಒಂದೇ ವಾರ ಎರೆಡೆರಡು ಬಂದ್ ವಿಚಾರವಾಗಿ ಮಾತನಾಡಿದ ಅವರು, ನಾವು ನಿಮ್ಮ ಜೊತೆ ಇದ್ದೇವೆ. ಜನಕ್ಕೆ ತೊಂದರೆ ಆಗಬಾರದು. ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ. ಅವರಲ್ಲೆ ಚರ್ಚೆಗಳು ಆಗುತ್ತದೆ. ಅದರಲ್ಲಿ ನಾವು ಮಧ್ಯಪ್ರವೇಶ ಮಾಡಲ್ಲ. ಕೋರ್ಟ್ ವಿಚಾರವೂ ಅವರಿಗೆ ಗೊತ್ತಿದೆ. ಅದನ್ನು ಅವರು ನೋಡಲಿ ಎಂದು ಬಂದ್ ಮಾಡುವವರಿಗೆ ಸಲಹೆ ನೀಡಿದರು. ಇದನ್ನೂ ಓದಿ: ತಮಿಳುನಾಡಿಗೆ ನೀರು ಬಿಡುಗಡೆ ಭಾರೀ ಪ್ರಮಾಣದಲ್ಲಿ ಹೆಚ್ಚಳ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರ ನೀರಿನ ಗ್ಯಾರಂಟಿ ಕೊಡಲಿ, ಶನಿವಾರ ಬೃಹತ್ ಪ್ರತಿಭಟನೆ ಮಾಡ್ತೇವೆ: ಬೊಮ್ಮಾಯಿ

    ಸರ್ಕಾರ ನೀರಿನ ಗ್ಯಾರಂಟಿ ಕೊಡಲಿ, ಶನಿವಾರ ಬೃಹತ್ ಪ್ರತಿಭಟನೆ ಮಾಡ್ತೇವೆ: ಬೊಮ್ಮಾಯಿ

    ಬೆಂಗಳೂರು: ಕಾವೇರಿ (Kaveri) ವಿಚಾರದಲ್ಲಿ ರಾಜ್ಯ ಸರ್ಕಾರ ಉಡಾಫೆಯಾಗಿ ನಡೆದುಕೊಳ್ಳುತ್ತಿದೆ. ಇವರು ಹೀಗೆ ನಿರ್ಲಕ್ಷ್ಯ ಮಾಡಿದರೆ ಸ್ವಾಮೀಜಿಗಳು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಕಾವೇರಿ ವಿಚಾರದಲ್ಲಿ ಬಿಜೆಪಿಯ (BJP) ಮುಂದಿನ ಹೋರಾಟದ ಕುರಿತು ಪಕ್ಷದ ಕಚೇರಿಯಲ್ಲಿ ತಮ್ಮ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕಾವೇರಿ ವಿಚಾರದಲ್ಲಿ ಈ ಸರ್ಕಾರ ತೀವ್ರವಾದ ಗಂಡಾಂತರ ತಂದಿದೆ. ಮೊದಲಿನಿಂದಲೂ ಎಡವಟ್ಟು ಮಾಡಿಕೊಂಡು ಬಂದಿದೆ. ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಸರಿಯಾಗಿ ವಾದ ಮಾಡದೇ ಮತ್ತೆ 7.5 ಟಿಎಂಸಿ ನೀರು ಬಿಡುವ ಪರಿಸ್ಥಿತಿಗೆ ತಂದಿದೆ. ಇಷ್ಟೆಲ್ಲಾ ಆದರೂ ರಾಜ್ಯದ ಜನರಿಗೆ ಸರ್ಕಾರ ಮುಂದೇನು ಮಾಡುತ್ತದೆ ಎಂದು ಹೇಳಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ಕಾವೇರಿ ವಿಷಯ ಉಲ್ಬಣವಾಗಲು ಡಿಕೆಶಿ ಕಾರಣ, ತಕ್ಷಣ ರಾಜೀನಾಮೆ ನೀಡಲಿ: ಈಶ್ವರಪ್ಪ ಆಗ್ರಹ

    ರಾಜ್ಯ ಸರ್ಕಾರ ಆರಂಭದಿಂದಲೂ ಗ್ಯಾರಂಟಿ ಹೆಸರು ಹೇಳಿ ಈಗ ಕಂಡೀಷನ್ ಹಾಕಿ ಅರ್ಧಂಬರ್ಧ ಜಾರಿ ಮಾಡುತ್ತದೆ. ಬೆಂಗಳೂರು (Bengaluru) ಅಂತರಾಷ್ಟ್ರೀಯ ನಗರ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಾತೆತ್ತಿದರೆ ಬ್ರ್ಯಾಂಡ್ ಬೆಂಗಳೂರು ಎಂದು ಹೇಳುತ್ತಾರೆ. ಆದರೆ, ಬೆಂಗಳೂರಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಿಲ್ಲ. ನಮಗೆ ಬೇಕಿರುವುದು ನೀರಿನ ಗ್ಯಾರಂಟಿ. ಬೆಂಗಳೂರಿಗೆ ಪ್ರತ್ಯೇಕವಾಗಿ 4.5 ಟಿಎಂಸಿ ನೀರು ಕೊಡಲು ಟ್ರಿಬ್ಯುನಲ್ ಹೇಳಿದೆ. ಈ ಬಗ್ಗೆ ರಾಜ್ಯ ಸರ್ಕಾರ ಎಲ್ಲಿಯೂ ಪ್ರಸ್ತಾಪ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾವೇರಿ ಸಮಸ್ಯೆ ಪರಿಹಾರಕ್ಕೆ ಕೂಡಲೇ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು: ಹೆಚ್‌ಡಿ ರೇವಣ್ಣ

    ತಮಿಳುನಾಡು (Tamil Nadu) ಹೆಚ್ಚುವರಿ ನೀರು ಬಳಕೆ ಮಾಡಿ ಅಕ್ರಮವಾಗಿ ಬೆಳೆ ಬೆಳೆದಿದ್ದು, ಅದರ ಬಗ್ಗೆ ರಾಜ್ಯ ಸರ್ಕಾರ ಮಾತನಾಡಿಲ್ಲ. ನಮಗೆ ಮುಂಗಾರು ಮುಕ್ತಾಯವಾಗಿದೆ. ತಮಿಳುನಾಡಿಗೆ ಮುಂದಿನ ದಿನಗಳಲ್ಲಿ ಮಳೆ ಬರಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕು. ಈ ವಿಷಯ ಹೇಳಿದರೆ ನಾವು ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆ. ಇದರ ಮೇಲೆ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ರಾಜಕಾರಣ ಮಾಡುತ್ತಾರೆ. ತಮಿಳುನಾಡು ಸಿಎಂ ಜೊತೆ ಮಾತನಾಡಿ ಅಂದರೆ ಮಾತನಾಡುವುದಿಲ್ಲ. ಅದರ ಬದಲು ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಅದರಲ್ಲಿ ಸಿದ್ದರಾಮಯ್ಯ ಪರಿಣಿತರು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ಸರ್ಕಾರದ ವಿರುದ್ಧ ಪ್ರತಿಭಟನೆ:
    ಬರ ಬಂದರೆ ಕೇಂದ್ರದ ಕಡೆ ತೋರಿಸುತ್ತಾರೆ. ರಾಜ್ಯ ಸರ್ಕಾರ ಪರಿಹಾರ ಕೊಡಬಾರದು ಎಂದು ಏನೂ ನಿಯಮ ಇಲ್ಲ. ನಾವು ಪ್ರವಾಹ ಬಂದಾಗ ಕೇಂದ್ರದ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ. ಆದರೆ ನೀವು ಜನರಿಗೆ ದ್ರೋಹ ಮಾಡಿದ್ದೀರಿ. ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಶನಿವಾರ ಪ್ರತಿಭಟನೆ (Protest) ಮಾಡಲಾಗುವುದು. ಮುಂದಿನ ದಿನಗಳಲ್ಲಿ 28 ಲೋಕಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ

    ಕಾವೇರಿ ನೆಲ-ಜಲ ವಿಚಾರ ಬಂದಾಗ ನಾವು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಆ ದೃಷ್ಟಿಯಿಂದ ನಾವು ಸಹಕಾರ ಕೊಡುತ್ತೇವೆ. ಸರ್ವಪಕ್ಷದ ಸಭೆಯಲ್ಲಿ ನೀರು ಬಿಡುವುದಿಲ್ಲ ಎಂದು ತೆಗೆದುಕೊಂಡ ತೀರ್ಮಾನ ಪಾಲನೆ ಮಾಡದಿದ್ದರೆ ನಾವು ಮಾತನಾಡುತ್ತೇವೆ. ಸುಪ್ರೀಂ ಕೋರ್ಟ್‌ನಲ್ಲಿ ಇವರು ಮಧ್ಯಂತರ ಅರ್ಜಿ ಹಾಕಲಿಲ್ಲ ಎಂದರು.

    ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತರಬೇಕಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ತಂದಾಗ ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ. ಅದರ ಬದಲು ಈಗಲಾದರೂ ಸರ್ಕಾರ ಮೇಲ್ಮನವಿ ಸಲ್ಲಿಸಿ ಇದುವರೆಗೂ ವಿಚಾರಣೆಯಲ್ಲಿ ಚರ್ಚೆಗೆ ಬಾರದ ಬೆಂಗಳೂರಿನ ಕುಡಿಯುವ ನೀರು, ತಮಿಳುನಾಡು ಹೆಚ್ಚಿಗೆ ನೀರು ಬಳಕೆ ಮಾಡಿಕೊಂಡಿದ್ದು, ನಮ್ಮಲ್ಲಿ ಮುಂಗಾರು ಮುಕ್ತಾಯವಾಗಿದ್ದು, ತಮಿಳುನಾಡಿಗೆ ಹಿಂಗಾರು ಮಳೆ ಬರುವ ವಿಚಾರಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಕಬೇಕು. ಅದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ

    ಪರಿಹಾರ ನೀಡಲಿ:
    ರಾಜ್ಯ ಸರ್ಕಾರ ಕ್ಯಾಬಿನೆಟ್‌ನಲ್ಲಿ ಈಗ ಬಿಟ್ಟಿರುವ ನೀರಿನ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು. ಬರ ತಾಲೂಕಿನ ಕಾರ್ಯಕ್ರಮದ ಬಗ್ಗೆ ಘೋಷಣೆ ಮಾಡಬೇಕು. ಕಾವೇರಿ ಕೊಳ್ಳದ ತಾಲೂಕುಗಳ ರೈತರಿಗೆ ಪರಿಹಾರ (Relief) ನೀಡಬೇಕು. ನಗರಗಳ ನೀರಿಗೆ ಮುಂದಿನ ಯೋಜನೆ ಏನು ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಜೆಡಿಎಸ್ (JDS) ಜೊತೆಗಿನ ಮೈತ್ರಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೈತ್ರಿ ಬಗ್ಗೆ ಹೈಕಮಾಂಡ್ ನಾಯಕರು ಮಾತುಕತೆ ನಡೆಸುತ್ತಾರೆ. ಆ ನಂತರ ರಾಜ್ಯದ ನಾಯಕರ ಜೊತೆ ಮಾತನಾಡುತ್ತಾರೆ ಎಂದರು. ಇದನ್ನೂ ಓದಿ: ಮಂಡ್ಯ ಬಂದ್‌ಗೆ ಕರೆ – ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾವೇರಿ ವಿಷಯ ಉಲ್ಬಣವಾಗಲು ಡಿಕೆಶಿ ಕಾರಣ, ತಕ್ಷಣ ರಾಜೀನಾಮೆ ನೀಡಲಿ: ಈಶ್ವರಪ್ಪ ಆಗ್ರಹ

    ಕಾವೇರಿ ವಿಷಯ ಉಲ್ಬಣವಾಗಲು ಡಿಕೆಶಿ ಕಾರಣ, ತಕ್ಷಣ ರಾಜೀನಾಮೆ ನೀಡಲಿ: ಈಶ್ವರಪ್ಪ ಆಗ್ರಹ

    ಶಿವಮೊಗ್ಗ: ಕಾವೇರಿ ನದಿ (Kaveri River) ಕಾಂಗ್ರೆಸ್ (Congress) ಹಾಗೂ ಡಿಕೆಶಿ ಸ್ವತ್ತಲ್ಲ. ಬದಲಿಗೆ ಇದು ರಾಜ್ಯದ ಜನರ ಸ್ವತ್ತು. ಕಾವೇರಿ ವಿಷಯ ಇಷ್ಟೊಂದು ಉಲ್ಬಣವಾಗಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರಣ. ಹೀಗಾಗಿ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆಶಿ (DK Shivakumar) ಅವರ ರಾಜೀನಾಮೆ (Resignation) ಪಡೆಯಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಆಗ್ರಹಿಸಿದರು.

    ಶಿವಮೊಗ್ಗದಲ್ಲಿ (Shivamogga) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಅವರು INDIA ತೃಪ್ತಿಪಡಿಸಲು, ಸ್ಟಾಲಿನ್ ತೃಪ್ತಿಪಡಿಸಲು, ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸುವ ಸಲುವಾಗಿ ಯಾರನ್ನೂ ಕೇಳದೇ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಟ್ಟರು. ನೀರು ಬಿಡುವ ಮುಂಚೆ ಏನು ಮಾಡಿದರು? ಯಾರನ್ನಾದರೂ ಕೇಳಿದ್ರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ನೀರು ಬಿಡುವ ಮೊದಲು ಸರ್ವಪಕ್ಷ ಸಭೆ, ನೀರಾವರಿ ತಜ್ಞರ ಜೊತೆ, ಕಾನೂನು ತಜ್ಞರ ಜೊತೆ, ರಾಜ್ಯದ ಸಂಸದರ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆಯಬೇಕಿತ್ತು. ಅದು ಯಾವುದನ್ನೂ ಮಾಡದೇ ಮುಠ್ಠಾಳತನ ಮಾಡಿದರು ಎಂದರು. ರಾಜ್ಯದ ರೈತರು ಸಮಾಧಾನದಿಂದ ಇದ್ದಾರೆ. ರೈತರ ತಾಳ್ಮೆ ಯಾವಾಗ ಕೆಡುತ್ತದೆಯೋ ಗೊತ್ತಿಲ್ಲ. ರೈತರ ಪರಿಸ್ಥಿತಿ ಏನು? ಯಾವ ಬೆಳೆ ಬೆಳೆದಿದ್ದಾರೆ? ಜಲಾಶಯದ ಪರಿಸ್ಥಿತಿ ಏನು ಎಂಬುದರ ಬಗ್ಗೆ ಯಾವುದೇ ಅವಲೋಕನ ನಡೆಸಿಲ್ಲ. ಮಳೆ ಇಲ್ಲದೇ ರೈತರು ಈಗಾಗಲೇ ಕಂಗೆಟ್ಟು ಹೋಗಿದ್ದಾರೆ. ಸದ್ಯಕ್ಕೆ ರೈತರು ಸಮಾಧಾನದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೆಯೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ನೋಟಿಸ್

    ಕಾಂಗ್ರೆಸ್ ಮಾಡಿದ ತಪ್ಪನ್ನು ಮುಚ್ಚಲು ಪ್ರಧಾನಮಂತ್ರಿ ಅವರನ್ನು ಮಧ್ಯ ತರುತ್ತಿದ್ದಾರೆ. ತಜ್ಞರ ಜೊತೆ ಸಭೆ ನಡೆಸಿದ್ದರೆ ನಮ್ಮ ರಾಜ್ಯಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ರಾಜ್ಯದ ಜನರಿಗೆ ಅನ್ಯಾಯ ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜಲಾಶಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಸ್ತು ಸ್ಥಿತಿ ಅರಿತುಕೊಳ್ಳಲಿ. ಕರ್ನಾಟಕ ಸದ್ಯಕ್ಕೆ ಶಾಂತಿಯಿಂದ ಇದೆ. ಮುಂದೆ ಶಾಂತಿಯಿಂದ ಇರುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಂಗಾರಪ್ಪ ಸಿಎಂ ಆಗಿದ್ದಾಗ ಚಿಟಿಕೆ ಹೊಡೆಯುವುದರಲ್ಲಿ ಕಾವೇರಿ ಸಮಸ್ಯೆಗೆ ಉತ್ತರ ಕೊಟ್ಟಿದ್ದರು: ಮಧು ಬಂಗಾರಪ್ಪ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]