Tag: kaveri

  • ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

    – ಕಾವೇರಿ ಆರತಿ ಒಮ್ಮೆ ಶುರು ಮಾಡಿದ್ರೆ ನಿಲ್ಲಿಸುವಂತಿಲ್ಲ

    ಲಕ್ನೋ: ದಸರಾದಲ್ಲಿ (Mysuru Dasara) ಗಂಗಾರತಿಯಂತೆ (Gangarathi) ಕಾವೇರಿ ಆರತಿ ಮಾಡಬೇಕು ಎನ್ನುವುದು ಆಸೆ ಇದೆ. ಸಾಂಕೇತಿಕವಾಗಿ ಮಾಡುವ ಬಗ್ಗೆ ಚಿಂತಿಸಲಾಗುವುದು. ನಮ್ಮಲ್ಲಿ ಸರ್ಕಾರದಿಂದ ಮಾಡಬೇಕು ಅಂದುಕೊಂಡಿದ್ದೇವೆ. ಕಾವೇರಿ ಆರತಿ ಮಾಡುವ ಬಗ್ಗೆ ಚರ್ಚಿಸಿದಾಗ ಇಲ್ಲಿ ಗಂಗಾರತಿ ಆಯೋಜಕರು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧ್ಯಯನ ವರದಿ ನೀಡಲಾಗುವುದು ಎಂದು ವಾರಣಾಸಿಯಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy) ಹೇಳಿಕೆ ನೀಡಿದ್ದಾರೆ.

    ವಾರಣಾಸಿಯಲ್ಲಿ (Varanasi) ಕಾವೇರಿ ಆರತಿ ಅಧ್ಯಯನ ತಂಡದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿದ್ವಾರ ಮತ್ತು ವಾರಣಾಸಿಯಲ್ಲಿ ಭಿನ್ನ ಅನುಭವವಾಗಿದೆ. ಗಂಗಾ ಮಹಾ ಸಭಾ ಸೊಸೈಟಿ ಅಡಿಯಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿದೆ. ಹರಿದ್ವಾರದಲ್ಲಿ ನೂರಕ್ಕೂ ಅಧಿಕ ವರ್ಷದ ಅನುಭವ ಇದೆ. ವಾರಣಾಸಿಯಲ್ಲಿ 35 ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಗಂಗಾನದಿಯಂತೆ ಕಾವೇರಿ ಕೂಡಾ ಅತಿ ಮುಖ್ಯವಾದ ನದಿ. ಪ್ರವಾಹ ಬಂದು ಜನರು ಸಾವನ್ನಪ್ಪುತ್ತಿದ್ದ ಸಂದರ್ಭದಲ್ಲಿ ಅದು ನಿಯಂತ್ರಣಕ್ಕೆ ಬರಲಿ ಎಂದು ಆರತಿ ಶುರು ಮಾಡಿದ ಪ್ರತಿತಿ ಇದೆ. ರಾಜ್ಯದಲ್ಲಿ ಒಳ್ಳೆ ಮಳೆಯಾಗಲಿ, ನದಿ ಸಮಸ್ಯೆ ಇತ್ಯರ್ಥವಾಗಲಿ ಎಂದು ನಾವು ಮಾಡಲಿದ್ದೇವೆ ಎಂದರು. ಇದನ್ನೂ ಓದಿ: ದೇಹವನ್ನ ಪೀಸ್‌ ಪೀಸ್‌ ಮಾಡಿ ತರಕಾರಿ ಜೋಡಿಸಿದಂತೆ ಫ್ರಿಡ್ಜ್‌ನಲ್ಲಿ ತುಂಬಿಟ್ಟಿದ್ದ ಹಂತಕ; ಕ್ರೂರತೆಗೆ ಕೊನೆ ಇಲ್ವಾ?

    ರಾಜ್ಯದಲ್ಲಿ ಒಳ್ಳೆ ಮಳೆಯಾದಲಿ, ನದಿ ಸಮಸ್ಯೆ ಇತ್ಯರ್ಥ ವಾಗಲಿ ಅಂತಾ ನಾವು ಮಾಡಲಿದ್ದೇವೆ. ಆರತಿ ಎಲ್ಲಿ ಮಾಡಬೇಕು, ಹೇಗೆ ಮಾಡಬೇಕು ಸಿಎಂ, ಡಿಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೇವೆ. ಅಧಿಕಾರಿಗಳನ್ನು ಕಳುಹಿಸಿ ಇನ್ನು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ. ಒಮ್ಮೆ ಶುರು ಮಾಡಿದ ಮೇಲೆ ನಿಲ್ಲಿಸಬಾರದು. ಯಾರೇ ಬಂದರು ಇದನ್ನ ಮುಂದುವರಿಸಿಕೊಂಡು ಹೋಗಬೇಕು. ಅದಕ್ಕಾಗಿ ಇನ್ನಷ್ಟು ಪರಿಶೀಲನೆ ಮಾಡಲಾಗುವುದು. ಬಳಿಕ ಸೂಕ್ತ ತಿರ್ಮಾನ ಬೆಂಗಳೂರಿನಲ್ಲಿ (Bengaluru) ತಿರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ನೇತೃತ್ವದ ಸುಮಾರು 25ಕ್ಕೂ ಹೆಚ್ಚು ಶಾಸಕರಿರುವ ನಿಯೋಗ ವಾರಣಾಸಿಗೆ ಭೇಟಿ ನೀಡಿದೆ. ಹರಿದ್ವಾರದಲ್ಲಿ ಗಂಗಾರತಿ ಬಗ್ಗೆ ಅಧ್ಯಯನ ಮಾಡಿದ ತಂಡ ವಾರಣಾಸಿಗೆ ತೆರಳಿ ವ್ಯವಸ್ಥೆಯನ್ನು ಅಧ್ಯಯನ ನಡೆಸಿದೆ. ಇದನ್ನೂ ಓದಿ: ತಿರುಪತಿ ಲಡ್ಡು ವಿವಾದ; ಸರ್ಕಾರದ ಸ್ವಾಧೀನದಿಂದ ದೇಗುಲ ಮುಕ್ತಗೊಳಿಸಿ – ಪೇಜಾವರ ಶ್ರೀ

    ಮಾಗಡಿ ಶಾಸಕ ಬಾಲಕೃಷ್ಣ ಮಾತನಾಡಿ, ನಾವು ಇದನ್ನು ರಾಜಕೀಯ ಕಾರಣಕ್ಕೆ ಮಾಡುತ್ತಿಲ್ಲ, ಕಾವೇರಿ ನದಿಗೆ ತನ್ನದೇಯಾದ ಇತಿಹಾಸವಿದೆ ಹೀಗಾಗೀ ಆರತಿ ಮಾಡುವ ಚಿಂತನೆ ಮಾಡಿದೆ. ಕಾಂಗ್ರೇಸ್ (Congress) ಸರ್ವ ಧರ್ಮಗಳನ್ನು ಒಂದೇ ರೀತಿಯಲ್ಲಿ ನೋಡುತ್ತದೆ. ಯಾವುದೇ ಸರ್ಕಾರ ಬಂದರು ಇದನ್ನು ಮುಂದುವರಿಸಬೇಕು ಎಂದರು. ಇದನ್ನೂ ಓದಿ: ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ಗಂಗಾನದಿಗೆ ತನ್ನದೇ ಆದ ಇತಿಹಾಸವಿದೆ. ಅದೇ ರೀತಿ ಕಾವೇರಿಗೂ ತನ್ನದೇ ಇತಿಹಾಸ ಇದೆ. ಕಾವೇರಿ ಲಕ್ಷಾಂತರ ರೈತರಿಗೆ ಕೃಷಿಗೆ ಅನುಕೂಲವಾಗಿದೆ. ಕೊಟ್ಯಾಂತರ ಜನರಿಗೆ ಜೀವ ಜಲವಾಗಿದೆ. ಇದಕ್ಕೆ ಕೃತ್ಯಜ್ಞತೆ ಸಲ್ಲಿವುದು ಎನ್ನುವುದು ನನ್ನ ಉದ್ದೇಶ ಹೀಗಾಗೀ ನಾನು ಡಿಸಿಎಂ ಡಿ.ಕೆ ಶಿವಕಿಮಾರ್ (DK Shivakumar) ಜೊತೆಗೆ ಚರ್ಚಿಸಿದೆ ಅವರು ಸಕಾರಾತ್ಮವಾಗಿ ಸ್ಪಂಧಿಸಿದರು. ತಂಡ ಬಂದು ಅಧ್ಯಯನ ಮಾಡಿದ್ದು ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ರಾಜ್ಯಪಾಲರೇ ವಿರೋಧ ಪಕ್ಷದ ನಾಯಕನಂತೆ ನಡೆದುಕೊಳ್ಳುತ್ತಿದ್ದಾರೆ: ದಿನೇಶ್ ಗುಂಡೂರಾವ್

  • ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಆರತಿ – ಹರಿದ್ವಾರದಲ್ಲಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ

    -ದಸರಾ ವೇಳೆಗೆ ಕಾವೇರಿ ಆರತಿ ಶುರು ಮಾಡುವ ಪ್ರಯತ್ನ

    ಬೆಂಗಳೂರು: ಉತ್ತರ ಭಾರತದಲ್ಲಿ (North India) ನಡೆಯುವ ಗಂಗಾರತಿ (Gangarathi) ಮಾದರಿಯಲ್ಲಿಯೇ ರಾಜ್ಯದಲ್ಲಿ ಕಾವೇರಿ ಆರತಿ ನಡೆಸಲು ತಯಾರಿ ಆರಂಭವಾಗಿದೆ. ಸಂಬಂಧ ಅಧ್ಯಯನ ನಡೆಸಲು ಸಚಿವ ಚಲುವರಾಯಸ್ವಾಮಿ (Cheluvarayaswamy) ನೇತೃತ್ವದ ನಿಯೋಗ ಹರಿದ್ವಾರ ಮತ್ತು ವಾರಾಣಾಸಿಗೆ ತೆರೆಳಿದೆ. ನಿನ್ನೆ ಹರಿದ್ವಾರಕ್ಕೆ ತೆರಳಿರುವ ನಿಯೋಗ ವಿಶೇಷ ಗಂಗಾರತಿಯಲ್ಲಿ ಭಾಗಿಯಾಗಿ ಪೂಜೆ ನಡೆಸಿತು ಮತ್ತು ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಜೊತೆ ಸಭೆ ನಡೆಸಿದ್ದು, ಹಲವು ಅನುಮಾನಗಳಿಗೆ ಸ್ಪಷ್ಟನೆ ಪಡೆದುಕೊಂಡಿದೆ.

    ಗಂಗೆಯಷ್ಟೇ ಪವಿತ್ರ ನದಿ ಕಾವೇರಿ (Kaveri) ಎಂಬ ನಿಟ್ಟಿನಲ್ಲಿ ಕಾವೇರಿ ಆರತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹಾಗಾಗಿ ಸಚಿವ ಚಲುವರಾಯಸ್ವಾಮಿ ನೇತೃತ್ವದ ನಿಯೋಗ ಕಾವೇರಿ ಆರತಿಯ ರೂಪುರೇಷೆ ತಯಾರಿಸಲಿದೆ. ಇದಕ್ಕಾಗಿ ನಿಯೋಗ ಹರಿದ್ವಾರ ಹಾಗೂ ವಾರಣಾಸಿಯಲ್ಲಿ ಅಧ್ಯಯನ ನಡೆಸಿ ವರದಿ ತಯಾರಿಸಲಿದ್ದು, ಇದರ ಭಾಗವಾಗಿ ಮೊದಲು ಹರಿದ್ವಾರಕ್ಕೆ ಭೇಟಿ ನೀಡಿತು. ಹರ್ ಕೀ ಪೌಡಿ ಘಾಟ್‌ನಲ್ಲಿ ನಡೆಯುವ ಆರತಿ ಕಾರ್ಯಕ್ರಮದಲ್ಲಿ ನಿಯೋಗ ಭಾಗಿಯಾಯಿತು. ಸಚಿವ ಚಲುವರಾಯಸ್ವಾಮಿ ಆದಿಯಾಗಿ ಎಲ್ಲ ಸದಸ್ಯರು ವಿಶೇಷ ಆರತಿ ಮಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿದರು. ಬಳಿಕ ಆರತಿ ನಡೆಯುವ ರೀತಿ ರಿವಾಜುಗಳನ್ನು ಪರಿಶೀಲಿಸಿದರು.ಇದನ್ನೂ ಓದಿ: ‘ದಳಪತಿ 69’ ಅಸಲಿ ಸ್ಟೋರಿ ರಿವೀಲ್- ಕಮಲ್ ಹಾಸನ್‌ಗೆ ಹೇಳಿದ್ದ ಕಥೆಯಲ್ಲಿ ವಿಜಯ್?

    ಬಳಿಕ ಆರತಿ ಮೇಲುಸ್ತುವಾರಿ ನೋಡಿಕೊಳ್ಳುವ ಹಿಂದೂ ಸಭಾ ಆಡಳಿತ ಸಮಿತಿ ಜೊತೆಗೆ ಮಾತುಕತೆ ನಡೆಸಿದ ನಿಯೋಗ ಕರ್ನಾಟಕ ಸರ್ಕಾರದ ಪ್ರಸ್ತಾವನೆ ಬಗ್ಗೆ ತಿಳಿಸಿದರು. ಇದಕ್ಕೆ ಖುಷಿ ವ್ಯಕ್ತಪಡಿಸಿದ ಆಡಳಿತ ಸಮಿತಿ ಕಾರ್ಯದರ್ಶಿ ತನ್ಮಯ ವಶಿಷ್ಠ, ಗಂಗಾರತಿ ರೀತಿಯಲ್ಲಿ ಕಾವೇರಿ ಆರತಿ ಮಾಡುವುದು ಖುಷಿಯ ಸಂಗತಿ ಎಂದರು.

    ಗಂಗಾರತಿ ಬಳಿಕ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಗಂಗಾನದಿಯಂತೆ ಕಾವೇರಿ ನದಿ ಕೂಡಾ ಜೀವ ನದಿಯಾಗಿದೆ. ಅದಕ್ಕಾಗಿ ಇಲ್ಲಿಯೂ ಆರತಿ ಮಾಡಲು ನಿರ್ಧರಿಸಿದ್ದು, ಡಿಸಿಎಂ ಶಿ.ಕೆ ಶಿವಕುಮಾರ್ ನಿರ್ದೇಶನದ ಮೇರೆಗೆ ಈ ಬಗ್ಗೆ ನಮ್ಮ ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಅಧ್ಯಯನಕ್ಕೆ ಬಂದಿದ್ದೇವೆ. ಸಾಧ್ಯವಾದಷ್ಟು ಬೇಗ ಆರತಿ ಶುರು ಮಾಡಬೇಕು ಅಂದುಕೊಂಡಿದ್ದು, ದಸರಾದೊಳಗೆ ನಾವು ಶುರು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಮ್ಮೆ ಆರತಿಯನ್ನು ಶುರು ಮಾಡಿದರೆ ನಿಲ್ಲಿಸುವ ಮಾತಿಲ್ಲ ಎಂದಿದ್ದಾರೆ.

    ಇನ್ನು ಸಮಿತಿಯೂ ಶನಿವಾರ ವಾರಣಾಸಿಗೆ ತೆರಳಲಿದ್ದು, ಅಲ್ಲೂ ಗಂಗಾರತಿಯನ್ನು ನೋಡಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಬರಲಿದ್ದಾರೆ. ಬಳಿಕ ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಿದೆ.ಇದನ್ನೂ ಓದಿ: ಬೆಳ್ತಂಗಡಿ: ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ

  • ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಥಿಯೇಟರ್ ಬಂದ್

    ಬೆಂಗಳೂರಿನ (Bangalore) ಒಂದೊಂದೇ ಚಿತ್ರಮಂದಿರಗಳ ಬಾಗಿಲು ಹಾಕುತ್ತಿವೆ. ಒಟಿಟಿ, ಕಡಿಮೆ ಸಂಖ್ಯೆಯಲ್ಲಿ ಸಿನಿಮಾ ನಿರ್ಮಾಣ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಕೆಂಪೇಗೌಡ ರಸ್ತೆ ಅನೇಕ ಚಿತ್ರಮಂದಿಗಳು (Theatre) ಬಂದ್ ಆಗಿವೆ. ಆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಗಳು ತಲೆಯೆತ್ತಿವೆ. ಈಗ ಕಾವೇರಿ (Cauvery) ಚಿತ್ರಮಂದಿರದ ಸರದಿ.

    ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಯಲ್ಲಿ ಒಂದಾಗಿರುವ ಸ್ಯಾಂಕಿ ರಸ್ತೆಯ, ಪ್ಯಾಲೇಸ್ ಗುಟ್ಟಳ್ಳಿಯಲ್ಲಿರುವ ಕಾವೇರಿ ಚಿತ್ರಮಂದಿರ ತನ್ನ ಶಾಶ್ವತ ಪ್ರದರ್ಶನವನ್ನು ನಿಲ್ಲಿಸಲಿಲ್ಲ. ಕಳೆದ ಜನವರಿ 11ಕ್ಕೆ ಕಾವೇರಿಗೆ ಭರ್ತಿ 50 ವರ್ಷ ತುಂಬಿತ್ತು. ಗೋಲ್ಡನ್ ಜ್ಯುಬಿಲಿ ಆಚರಣೆಯನ್ನೂ ಮಾಡಲಾಗಿತ್ತು.

    ನಾನಾ ಕಾರಣಗಳಿಂದಾಗಿ ಕಾವೇರಿ ಥಿಯೇಟರ್ ಇತಿಹಾಸದ ಪುಟದಲ್ಲಿ ದಾಖಲಾಗಿತ್ತು. ಮೆಜೆಸ್ಟಿಕ್ ಏರಿಯಾದಲ್ಲಿದ್ದ ಕಪಾಲಿ ಚಿತ್ರಮಂದಿರ ಹೊರತು ಪಡಿಸಿದರೆ, ಅತೀ ಹೆಚ್ಚು ಹಾಸನಗಳುಳ್ಳ ಚಿತ್ರಮಂದಿರ ಇದಾಗಿತ್ತು. 1300ರಷ್ಟು ಸೀಟುಗಳು ಈ ಚಿತ್ರಮಂದಿರದಲ್ಲಿದ್ದವು. ಜೊತೆಗೆ ಸಾಕಷ್ಟು ಚಿತ್ರಗಳು ಇಲ್ಲಿ ಶತದಿನ ಪ್ರದರ್ಶನ ಕೂಡ ಕಂಡಿವೆ.

    ಕಾವೇರಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದು 1974 ಜನವರಿ 11ರಂದು. ಮೊದಲ ಚಿತ್ರ ಪ್ರದರ್ಶನವಾಗಿದ್ದ ಡಾ.ರಾಜ್ ಕುಮಾರ್ ಅಭಿನಯದ ಬಂಗಾರದ ಪಂಜರ. ಕಮಲ್ ಹಾಸನ್ ನಟನೆಯ ಶಂಕರಾಭರಣಂ ಸಿನಿಮಾ ದಾಖಲೆ ರೀತಿಯಲ್ಲಿ ಪ್ರದರ್ಶನವಾಗಿತ್ತು. ಕನ್ನಡ, ತಮಿಳು, ಹಿಂದೆ, ಮಲಯಾಳಂ ಜೊತೆಗೆ ಹಾಲಿವುಡ್ ನ ಅನೇಕ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ.

    ಜನರು ಥಿಯೇಟರ್ ಬರುತ್ತಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ನಿಭಾಯಿಸೋದು ಕಷ್ಟ. ಹಾಗಾಗಿ ಥಿಯೇಟರ್ ಬಂದು ಮಾಡಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲು ಚಿತ್ರಮಂದಿರದ ಮಾಲೀಕರು ನಿರ್ಧಾರ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ.

  • ‘ಅಸ್ಥಿರ’ ಪಯಣದಲ್ಲಿ ಹೊಸ ಹುಡುಗರ ಥ್ರಿಲ್ಲರ್ ಸ್ಟೋರಿ

    ‘ಅಸ್ಥಿರ’ ಪಯಣದಲ್ಲಿ ಹೊಸ ಹುಡುಗರ ಥ್ರಿಲ್ಲರ್ ಸ್ಟೋರಿ

    ನಿರ್ದೇಶಕ ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಅಸ್ಥಿರ’ (Asthira) ಚಿತ್ರದ ಟೀಸರ್, ಎರಡು ಲಿರಿಕಲ್ ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಪೋಸ್ಟರ್ ಅನಾವರಣಗೊಳಿಸಿ ತಂಡಕ್ಕೆ ಶುಭಹಾರೈಸಿದರು.

    ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಲಾಗಿದೆ. ತ್ರಿಕೋನ ಪ್ರೇಮ ಕಥೆಯು ಬನ್ನೂರುನಿಂದ ಕುಮುಟಾ, ಹೊನ್ನಾವರ ತನಕ ಪಯಣದಲ್ಲಿ ಸಾಗಿ ಕಾಡಿನಲ್ಲಿ ಕೊನೆಗೊಳ್ಳುವುದನ್ನು ಥ್ರಿಲ್ಲರ್, ಸೆಸ್ಪೆನ್ಸ್ ಮಾದರಿಯಲ್ಲಿ ತೋರಿಸಲಾಗಿದೆ. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರಮೋದ್.ಎಸ್.ಆರ್ (Pramod)ಆ್ಯಕ್ಷನ್ ಕಟ್ ಹೇಳುವ ಜತೆಗೆ ಉಪನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹತ್ತು ವರ್ಷಗಳ ಪರಿಣತಿ ಪಡೆದುಕೊಂಡಿರುವ ಅನಿಲ್.ಸಿ.ಆರ್ (Anil) ಕಥೆ ಮತ್ತು ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಹೆಸರಿನಲ್ಲಿ ಬಂಡವಾಳ ಹೂಡಿದ್ದು, ಹಾಗೂ ನಾಯಕನಾಗಿ ಬಣ್ಣ ಹಚ್ಚಿರುವುದು ಹೊಸ ಪ್ರಯತ್ನ. ಕಾಲೇಜು ಹುಡುಗಿಯಾಗಿ ಕಾವೇರಿ (Kaveri) ನಾಯಕಿ. ಗೆಳತಿಯರಾಗಿ  ಹುಬ್ಬಳಿ ಮೂಲದ ಭುವನ, ಗುಬ್ಬಿ ಕಡೆಯ ಹರಿಣಿ ಮುಂತಾದವರು ನಟಿಸಿದ್ದಾರೆ. ಕಲಾವಿದರ ಮೂಲ ಹೆಸರನ್ನು ಆಯಾ ಪಾತ್ರಕ್ಕೆ ಬಳಸಲಾಗಿದೆ.

    ಸಿದ್ದುಅರಸು ಸಾಹಿತ್ಯದ ನಾಲ್ಕು ಹಾಡುಗಳಿಗೆ ನಿತಿನ್‌ರಾಜ್ (Nitin Raj) ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್.ಆರ್, ಸಂಕಲನ ಅಯುರ್‌ಸ್ವಾಮಿ, ಸಾಹಸ ಗಣೇಶ್ ಅವರದಾಗಿದೆ. ಕುಮುಟ, ಹೊನ್ನಾವರ, ಬನ್ನೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರವು ಪೋಸ್ಟ್‌ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದ್ದು ನವೆಂಬರ್‌ದಲ್ಲಿ ತೆರೆ ಕಾಣಿಸಲು ತಂಡವು ಯೋಜನೆ ರೂಪಿಸಿಕೊಂಡಿದೆ. ಸುಂದರ ಸಮಯದಲ್ಲಿ ವಾಣಿಜ್ಯ ಮಂಡಳಿ ಪದಾಧಿಕಾರಿ ನಿತ್ಯಾನಂದಪ್ರಭು, ನಿರ್ಮಾಪಕರುಗಳಾದ ಸೆಬಾಸ್ಟಿನ್‌ಡೇವಿಡ್, ಕೆ.ಎನ್.ನಾಗೇಗೌಡ್ರು ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

  • 3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್ – ಪ್ರವಾಹದ ಭೀತಿ

    3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್ – ಪ್ರವಾಹದ ಭೀತಿ

    ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಈ ಹಿನ್ನೆಲೆ 3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಇದರಿಂದ ಪ್ರವಾಹದ ಭೀತಿ ಎದುರಾಗಿದೆ.

    ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟಿರುವ ಕಾರಣ ಕಾವೇರಿ ಕೊಳ್ಳದ ಜನರು ಪ್ರವಾಹದ ಭೀತಿಯನ್ನು ಎದುರಿಸುವ ಸ್ಥಿತಿ ಬಂದೊದಗಿದೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಕಾರೇಕುರ, ಮಜ್ಜಿಗೆ ಪುರ, ಬಲಮುರಿ, ಹೊಂಗಹಳ್ಳಿ, ಪಾಲಹಳ್ಳಿ, ಶ್ರೀರಂಗಪಟ್ಟಣ, ಎಣ್ಣೆಹೊಳೆ ಕೊಪ್ಪಲು, ರಾಮಪುರ, ಮೇಳಾಪುರ, ಚಂದಗಾಲು, ಹಂಗರಹಳ್ಳಿ, ಮರಳಗಾಲ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮಹದೇವಪುರ ಸೇರಿದಂತೆ 40ಕ್ಕೂ ಅಧಿಕ ಗ್ರಾಮಗಳ ಜಮೀನುಗಳು ಜಲಾವೃತವಾಗಿವೆ. ಇದನ್ನೂ ಓದಿ: ಪಾಕಿಸ್ತಾನಿ ಸಹೋದರಿಯಿಂದ ಮೋದಿಗೆ ಬಂತು ರಕ್ಷಾ ಬಂಧನ – 2024ರ ಚುನಾವಣೆಗೆ ಹಾರೈಕೆ

    ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ್, ಬಿಜಿ ಹೊಳೆ ಸಮೀಪದ ದೇವಸ್ಥಾನಗಳು, ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟಗಳು ಜಲಾವೃತವಾಗಿವೆ. ಇದಲ್ಲದೇ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆಯ ಅಂಚಿಗೆ ಬಂದಿದೆ. 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಬರುತ್ತಿರುವ ಕಾರಣ 200 ವರ್ಷಗಳ ಇತಿಹಾಸವಿರುವ ವೆಲ್ಲೆಸ್ಲಿ ಸೇತುವೆ ಅಪಾಯದ ಅಂಚಿನಲ್ಲಿದೆ. ಹೀಗಾಗಿ ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದು 1,837 ಮಂದಿಗೆ ಕೊರೊನಾ ಸೋಂಕು – 4 ಸಾವು

    ಕಾವೇರಿ ನದಿ ಪಾತ್ರದ ಎಲ್ಲಾ ಪ್ರವಾಸಿ ಸ್ಥಳಗಳು ಬಂದ್ ಆಗಿದ್ದು, ನದಿಯಿಂದ 1 ಕಿ.ಮೀ ವ್ಯಾಪ್ತಿಯ ವರೆಗೆ ನಿಷೇಧ ಹೇರಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ

    16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ

    ಮೈಸೂರು:  ಮೊದಲು 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಕೆಆರ್‌ಎಸ್ ಬಾಗಿನ ಕಾರ್ಯಕ್ರಮದ ವೇದಿಕೆಯಲ್ಲಿ ಬೊಮ್ಮಾಯಿ ಅವರು ಮಾತನಾಡಿದ್ದು, ಆಷಾಢದಲ್ಲಿ ಕಾವೇರಿ ಜಲಾನಯನದ 4 ಡ್ಯಾಂಗಳು ತುಂಬಿರುವುದು ಸಂತಸದ ವಿಷಯವಾಗಿದೆ. ಕಾವೇರಿ ಹಳೇ ಮೈಸೂರು ಭಾಗದ ಜೀವನದಿ. ಪವಿತ್ರವಾದ ನದಿಯ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಾಗಿ ರನಿಲ್‌ ವಿಕ್ರಮಸಿಂಘೆ ಆಯ್ಕೆ

    ಮೊದಲು 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದೆ. ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ. ಒಂದೂವರೆ ವರ್ಷದಲ್ಲಿ ಈ ಕಾಮಗಾರಿ ಮುಗಿಯಬೇಕು. ಗೇಟ್ ಕಾಮಗಾರಿಗೆ 160 ಕೋಟಿ ರೂ. ನೀಡಲಾಗಿದೆ. ಎಲ್ಲ ಗೇಟ್ ಬದಲಿಸಿದ ಬಳಿಕ ಕೆಆರ್‌ಎಸ್‍ನಲ್ಲಿ ದೊಡ್ಡ ಹಬ್ಬ ಮಾಡೋಣ ಎಂದು ವಿವರಿಸಿದರು. ಇದನ್ನೂ ಓದಿ: ಮೇಕೆದಾಟು ಆಣೆಕಟ್ಟು ನಿರ್ಮಾಣ ಯೋಜನೆ- ಜು. 26ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

    ಮೈಸೂರು ಮಹಾರಾಜರು ಡ್ಯಾಂ ಕಟ್ಟಲು ಮಾಡಿದ ತ್ಯಾಗ ಮರೆಯಲು ಸಾಧ್ಯವಿಲ್ಲ. 2008 ರಲ್ಲಿ ನಾನು ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್ ಗೇಟ್ ರಂಧ್ರಗಳಾಗಿ ನೀರು ಸೋರುತ್ತಿತ್ತು. ಆ ಪರಿಸ್ಥಿತಿಯಲ್ಲಿ 300 ಕ್ಯೂಸೆಕ್ ನೀರು ಹರಿದು ಹೋಗುತ್ತಿತ್ತು. ಪ್ರತಿ ಹನಿಯನ್ನು ಉಳಿಸಿಕೊಳ್ಳಲು ಸಂಕಲ್ಪ ಮಾಡಿದ್ದೆವು. ಆ ಸಂದರ್ಭದಲ್ಲಿ ಗೇಟ್ ರಿಪೇರ್ ಮಾಡದಂತೆ ಒತ್ತಡಗಳು ಬಂತು. ಅವತ್ತು ರಾತ್ರಿ ನನಗೆ ನಿದ್ದೆ ಬರಲಿಲ್ಲ. ಮಾರನೇ ದಿನ ಬೆಳಗ್ಗೆ ಅಧಿಕಾರಿಗಳನ್ನ ಕರೆದು ಗೇಟ್ ಬದಲಿಸಲು ಹೇಳಿದೆ ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಬಾಕಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ

    ಕೆಆರ್‌ಎಸ್‌ ಡ್ಯಾಂ ಭರ್ತಿಗೆ 1 ಅಡಿ ಬಾಕಿ – ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ

    ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್‌ ಡ್ಯಾಂ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದೆ. ಈ ಸುದ್ದಿ ಈ ಭಾಗದ ರೈತರಿಗೆ ಸಂತಸ ತಂದಿದ್ರೆ ಮತ್ತೊಂದೆಡೆ ಕಾವೇರಿ ಕೊಳ್ಳದ ಜನರಿಗೆ ಪ್ರವಾಹದ ಭೀತಿ ಎದುರಾಗಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಅಣೆಕಟ್ಟಿಗೆ 30,216 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಇದರಿಂದ ಡ್ಯಾಂ ಸಂಪೂರ್ಣ ಭರ್ತಿಗೆ ಇನ್ನೊಂದು ಅಡಿಯಷ್ಟೇ ಬಾಕಿ ಇದೆ. 124.80 ಅಡಿಗಳಷ್ಟು ಇರುವ ಕೆಆರ್‌ಎಸ್‌ ಡ್ಯಾಂ ಸದ್ಯ 123.20 ಅಡಿಗಳಷ್ಟು ಭರ್ತಿಯಾಗಿದೆ. ಡ್ಯಾಂ ಭರ್ತಿಗೆ ಇನ್ನೂ ಕ್ಷಣಗಣನೆ ಇರುವ ಕಾರಣ ಡ್ಯಾಂನಿಂದ ನದಿಗೆ 106 ಅಡಿ ಮಟ್ಟದ 15 ಗೇಟ್‍ಗಳ ಮೂಲಕ 25,000 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 49.452 ಟಿಎಂಸಿ ಸಾಂದ್ರತೆ ಇರುವ ಕೆಆರ್‌ಎಸ್‌ ಡ್ಯಾಂನಲ್ಲಿ 47.800 ಟಿಎಂಸಿ ನೀರು ಇದೆ. ಇದನ್ನೂ ಓದಿ: ಕೊಡಗಿನ ಕೊಯಿನಾಡಿನಲ್ಲಿ ಕಣ್ಣೆದುರೇ ಕುಸಿದು ಬಿದ್ದ ಗುಡ್ಡ – ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ

    ಒಂದು ಕಡೆ ಕೆಆರ್‌ಎಸ್‌ ಡ್ಯಾಂ 25,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಹರಿಬಿಟ್ಟಿದ್ರೆ, ಇನ್ನೊಂದೆಡೆ ಕೆಆರ್‌ಎಸ್‌ ಡ್ಯಾಂ ಸಮೀಪದಲ್ಲೇ ಇರುವ ರಂಗನತಿಟ್ಟು ಪಕ್ಷಿಧಾಮ ಮುಳುಗಡೆಯ ಭೀತಿಯಲ್ಲಿ ಇದೆ. ಹೀಗಾಗಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ಬೋಟಿಂಗ್‍ನ್ನು ಬಂದ್ ಮಾಡಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಕೆಆರ್‌ಎಸ್‌ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದ ಕಾರಣ ಇಲ್ಲಿನ 40ಕ್ಕೂ ಹೆಚ್ಚು ನಡುಗಡ್ಡೆಗಳು ಹಾನಿಯಾಗಿದ್ದವು. ಇದಾದ ನಂತರ ಅರಣ್ಯ ಇಲಾಖೆ ಇಲ್ಲಿನ ನಡುಗಡ್ಡೆಗಳನ್ನು ಮತ್ತೆ ನಿರ್ಮಾಣ ಮಾಡಿತ್ತು. ಇದೀಗ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೆಆರ್‌ಎಸ್‌ ಡ್ಯಾಂನಿಂದ ನೀರು ಹರಿಬಿಟ್ಟರೆ ಮತ್ತೆ ಅದೇ ರೀತಿಯ ವಾತಾವರಣ ನಿರ್ಮಾಣವಾಗುತ್ತದೆ. ಅಲ್ಲದೇ ಕಾವೇರಿ ಕೊಳ್ಳದ ಜನರಿಗೂ ಸಹ ಪ್ರವಾಹದ ಭೀತಿ ಎದುರಾಗಿದ್ದು, ಈಗಾಗಲೇ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆಯನ್ನು ಸಹ ನೀಡಿದೆ. ಇದನ್ನೂ ಓದಿ: ಮೈದುಂಬಿ ಧುಮ್ಮುಕ್ಕುತ್ತಿರುವ ಗೋಕಾಕ್ ಫಾಲ್ಸ್‌ನಲ್ಲಿ ಪ್ರವಾಸಿಗರ ಹುಚ್ಚಾಟ

    Live Tv
    [brid partner=56869869 player=32851 video=960834 autoplay=true]

  • ಕೊಡಗಿನ ಕೊಯಿನಾಡಿನಲ್ಲಿ ಕಣ್ಣೆದುರೇ ಕುಸಿದು ಬಿದ್ದ ಗುಡ್ಡ – ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ

    ಕೊಡಗಿನ ಕೊಯಿನಾಡಿನಲ್ಲಿ ಕಣ್ಣೆದುರೇ ಕುಸಿದು ಬಿದ್ದ ಗುಡ್ಡ – ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕಾವೇರಿ

    ಮಡಿಕೇರಿ: ಜಿಲ್ಲೆಯಲ್ಲಿ ಮಳೆಯ ಆರ್ಭಟ ಇಂದು ಕೊಡ ಮುಂದುವರಿದಿದೆ. ಕಾವೇರಿ ನದಿ ಸೇರಿದಂತೆ ಹಲವು ಹೊಳೆಗಳು ಉಕ್ಕಿ ಹರಿಯುತ್ತಿದೆ. ಕೊಯಿನಾಡಿನಲ್ಲಿ ಜನರ ಕಣ್ಣೇದುರೇ ಕುಸಿದು ಬಿದ್ದ ಗುಡ್ಡ ನೋಡಿ ಜನ ಆತಂಕದಿಂದ ಓಡಿದ್ದಾರೆ.

    ಮಡಿಕೇರಿ ತಾಲೂಕಿನ ಕೊಯಿನಾಡು ಗ್ರಾಮದಲ್ಲಿರುವ ಶಾಲೆಯೊಂದರ ಹಿಂಭಾಗದಲ್ಲಿ ಇದ್ದಂತಹ ಬೆಟ್ಟ ಏಕಾಏಕಿ ಕುಸಿದು ಬಿದ್ದಿದೆ. ಈ ವೇಳೆ ಸ್ಥಳದಲ್ಲಿದ್ದ ಜನರು ಹೆದರಿ ಕಿರುಚಾಡಿ ಓಡಿದ್ದಾರೆ. ಬೆಟ್ಟ ಕುಸಿತದ ಪರಿಣಾಮ ಶಾಲೆಯ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ಇದನ್ನೂ ಓದಿ: ಚಾರ್ಮಾಡಿ ಘಾಟ್‌ನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರ – ಟ್ರಾಫಿಕ್ ಜಾಮ್

    ಇತ್ತ ಬ್ರಹ್ಮಗಿರಿ ತಪ್ಪಲಲ್ಲಿ ಮಳೆ ಹೆಚ್ಚಾದ ಪರಿಣಾಮ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಭಾಗಮಂಡಲ-ನಾಪೋಕ್ಲು ರಸ್ತೆ ಸಂಪೂರ್ಣ ಬಂದ್ ಆಗಿದ್ದು ರಸ್ತೆಯ ಮೇಲೆ 2 ಅಡಿಗೂ ಹೆಚ್ಚು ನೀರು ನಿಂತಿದೆ. ಸಾರ್ವಜನಿಕರಿಗೆ ಪರ್ಯಾಯವಾಗಿ ಜಿಲ್ಲಾಡಳಿತ ಬೋಟ್ ವ್ಯವಸ್ಥೆ ಕಲ್ಪಿಸಿದೆ. ಮುಕ್ಕೋಡ್ಲಿನಲ್ಲಿ ಮುಕ್ಕೋಡ್ಲು ಹೊಳೆ ಉಕ್ಕಿ ಹರಿದ ಪರಿಣಾಮ ಹೊಲ ಗದ್ದೆಗಳಿಗೆ ಪ್ರವಾಹ ನೀರು ನುಗ್ಗಿದೆ. ಮುಕ್ಕೋಡ್ಲು ಹಮ್ಮಿಯಾಲ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಇದನ್ನೂ ಓದಿ: ಕೊಡಗಿನ ಚೆಂಬುವಿನಲ್ಲಿ ಇಂದೂ ಭೂಕಂಪನ- ಆತಂಕಕ್ಕೀಡಾದ ಜನ

    ಕೊಡಗು-ದಕ್ಷಿಣಕನ್ನಡ ಗಡಿಯಲ್ಲಿ ಭಾರೀ ಮಳೆಯಿಂದಾಗಿ ಕೊಯಿನಾಡು ಸಮೀಪ ಪಯಸ್ವಿನಿ ನದಿ ಉಕ್ಕಿ ಹರಿದು ಗ್ರಾಮದ ನಾಲ್ಕು ಮನೆಗಳಿಗೆ ನೀರು ನುಗ್ಗಿದೆ. ನದಿಗೆ ಅಡ್ಡಲಾಗಿ ಕಟ್ಟಿದ್ದ ಕಿಂಡಿ ಅಣೆಕಟ್ಟು ಬಳಿ ಮರ ಬ್ಲಾಕ್ ಆಗಿರುವ ಪರಿಣಾಮ ಗ್ರಾಮದ 4 ಮನೆಗಳಿಗೆ ನೀರು ನುಗ್ಗಿದು, ಮನೆಯಲ್ಲಿ ಇದ್ದ ವಸ್ತುಗಳಿಗೆ ಹಾನಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೆಆರ್‌ಎಸ್ ಜಲಾಶಯ ಸತತ 53 ದಿನಗಳವರೆಗೆ ಸಂಪೂರ್ಣ ಭರ್ತಿ – 90 ವರ್ಷಗಳ ಇತಿಹಾಸದಲ್ಲೇ ದಾಖಲೆ

    ಕೆಆರ್‌ಎಸ್ ಜಲಾಶಯ ಸತತ 53 ದಿನಗಳವರೆಗೆ ಸಂಪೂರ್ಣ ಭರ್ತಿ – 90 ವರ್ಷಗಳ ಇತಿಹಾಸದಲ್ಲೇ ದಾಖಲೆ

    ಮಂಡ್ಯ: ಜೀವಧಾರೆ ಕೆಆರ್‌ಎಸ್‌ ಜಲಾಶಯ 90 ವರ್ಷಗಳ ಇತಿಹಾಸದಲ್ಲೇ ಅಪರೂಪದ ಸಾಧನೆ ಮಾಡಿದೆ. ಸತತವಾಗಿ 53 ದಿನಗಳ ಕಾಲ ಸಂಪೂರ್ಣ ತುಂಬಿ ಹರಿಯುವ ಮೂಲಕ ಕೆಆರ್‌ಎಸ್‌ ದಾಖಲೆ ನಿರ್ಮಿಸಿದೆ.

    ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಜಲಾಶಯ ತುಂಬಿ ಹರಿಯುತ್ತಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಕಾವೇರಿ ಉಕ್ಕಿ ಹರಿದಿದ್ದಾಳೆ. ಆದರೆ ಸತತವಾಗಿ 53 ದಿನಗಳ ಕಾಲ ಸಂಪೂರ್ಣವಾಗಿ ತುಂಬಿ ಹರಿದ ಇತಿಹಾಸ ಮರುಕಳಿಸಿರಲಿಲ್ಲ. 90 ವರ್ಷಗಳ ದಾಖಲೆಯನ್ನು ಕೆಆರ್‌ಎಸ್‌ ಈ ವರ್ಷ ಸರಿಗಟ್ಟಿದೆ.

    ಅಕ್ಟೋಬರ್ 29ರಿಂದ ಡಿಸೆಂಬರ್ 23ರ ತನಕ ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಒಟ್ಟು 53 ದಿನಗಳ ವರೆಗೆ 124.80 ಅಡಿ ಎಂದರೆ ಗರಿಷ್ಠ ಮಟ್ಟ ಇತ್ತು. ಈ ದಾಖಲೆಯಿಂದ ಬೇಸಿಗೆ ಸಮಯದಲ್ಲಿ ಜಿಲ್ಲೆಯ ಹಾಗೂ ಕಾವೇರಿಯನ್ನು ಅವಲಂಬಿಸಿರುವ ಜನರು ಚಿಂತಿಸುವ ಅಗತ್ಯ ಇಲ್ಲ. ಈ ಕಾರಣ ಹಳೇ ಮೈಸೂರು ಭಾಗದ ರೈತರಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಕ್ರಿಸ್‌ಮಸ್‌ ವಿಶೇಷ – ಸಮುದ್ರ ತೀರದ ಮರಳಿನಲ್ಲಿ 5,400 ಗುಲಾಬಿ ಹೂಗಳಿಂದ ಅರಳಿದ ಸಂತಾ ಕ್ಲಾಸ್‌ ಕಲಾಕೃತಿ

    ಕೆಆರ್‌ಎಸ್ ಜಲಾಶಯದ ಗರಿಷ್ಠ ನೀರಿನ ಮಟ್ಟ 124.80 ಅಡಿ. ಇಂದು ಜಲಾಶಯದಲ್ಲಿ 124.28 ಅಡಿ ಇದೆ. 2,299 ಕ್ಯೂಸೆಕ್ ನೀರು ಇಂದಿನ ಜಲಾಶಯದ ಒಳ ಹರಿವಿನ ಪ್ರಮಾಣವಾಗಿದ್ದು, 4,467 ಕ್ಯೂಸೆಕ್ ಹೊರ ಹರಿವಿನ ಪ್ರಮಾಣವಾಗಿದೆ. ಹಾಗೆಯೇ ಜಲಾಶಯದ ಗರಿಷ್ಠ ನೀರಿನ ಸಂಗ್ರಹ 49.452 ಟಿಎಂಸಿ ಹಾಗೂ ಇಂದಿನ ಸಂಗ್ರಹ 48.728 ಟಿಎಂಸಿ ಇದೆ. ಇದನ್ನೂ ಓದಿ: ಭೂಕಂಪನ ಪೀಡಿತ ಪ್ರದೇಶಗಳಿಗೆ ಹಿರಿಯ ವಿಜ್ಞಾನಿಗಳ ಭೇಟಿ ಅಧ್ಯಯನ

    ಕೆಆರ್‌ಎಸ್‌ನ ಇಂದಿನ ನೀರಿನ ಮಟ್ಟ

    ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳು.
    ಜಲಾಶಯದ ಇಂದಿನ ನೀರಿನ ಮಟ್ಟ 124.28 ಅಡಿಗಳು.
    ಇಂದಿನ ಒಳಹರಿವಿನ ಪ್ರಮಾಣ 2,299 ಕ್ಯೂಸೆಕ್.
    ಇಂದಿನ ಹೊರ ಹರಿವಿನ ಪ್ರಮಾಣ 4,467 ಕ್ಯೂಸೆಕ್.
    ಜಲಾಶದ ಗರಿಷ್ಠ ನೀರಿನ ಸಂಗ್ರಹ – 49.452 ಟಿಎಂಸಿ.
    ಇಂದಿನ ಸಂಗ್ರಹ- 48.726 ಟಿಎಂಸಿ.

  • ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

    ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡ ಸಾವಿರಾರು ಭಕ್ತರು

    ಮಡಿಕೇರಿ: ಕನ್ನಡ ನಾಡಿನ ಜೀವನದಿ, ಕೊಡಗಿನ ಕಾವೇರಿ ಮಕರ ಲಗ್ನದಲ್ಲಿ ತೀರ್ಥರೂಪಿಣಿಯಾಗಿ  ದರ್ಶನ ನೀಡಿದ್ದಾಳೆ. ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥೋದ್ಭವಾಗಿದ್ದು, ಸಾವಿರಾರು ಭಕ್ತರು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು.

    ಇಂದು ಮಧ್ಯಾಹ್ನ 1 ಗಂಟೆ 11 ನಿಮಿಷಕ್ಕೆ ಸರಿಯಾಗಿ ತೀರ್ಥೋದ್ಭವಾಗಿದೆ. ಮುಖ್ಯ ಅರ್ಚಕ ಗುರುರಾಜ್ ಆಚಾರ್ ಅವರ ನೇತೃತ್ವದಲ್ಲಿ 12 ಅರ್ಚಕರ ತಂಡ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ ಬಳಿಕ ತೀರ್ಥೋದ್ಭವವಾಗಿದೆ. ಈ ಮೊದಲು ಬ್ರಹ್ಮಕುಂಡಿಕೆ ಬಳಿ ಪುಷ್ಪಾರ್ಚನೆ, ಕುಂಕುಮಾರ್ಚನೆ ಮತ್ತು ಮಹಾಮಂಗಳಾರತಿಗಳನ್ನು ನೆರವೇರಿಸಿದರು. ಪವಿತ್ರ ತೀರ್ಥ ಕುಂಡಿಕೆಯ ಸಮೀಪ ಪುಷ್ಪಲಂಕಾರ ಮಾಡಲಾಗಿತ್ತು. ತೀರ್ಥೋದ್ಭವದ ಬಳಿಕ ಸಹಸ್ರಾರು ಮಂದಿ ತೀರ್ಥ ಪಡೆದು ಪುನೀತರಾದರು. ಇದನ್ನೂ ಓದಿ: RSS ಒಂದು ಕೋಮುವಾದಿ ಸಂಘಟನೆ- ಸಿದ್ದರಾಮಯ್ಯ

    ತೀರ್ಥೋದ್ಭವದಲ್ಲಿ ಭಾಗವಹಿಸಲು ಎಲ್ಲಾ ಭಕ್ತರಿಗೆ ಮುಕ್ತ ಅವಕಾಶ ನೀಡಿರುವುದರಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದಾರೆ. ಹೀಗಾಗಿ ಯಾವುದೇ ನೂಕು ನುಗ್ಗಲು ಆಗದಂತೆ ತಡೆಯುವುದಕ್ಕಾಗಿ ಜಿಲ್ಲಾಡಳಿತ ಬ್ಯಾರಿಕೇಡ್ ಗಳನ್ನು ಹಾಕಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಕೋವಿಡ್ ಇರುವುದರಿಂದ ತೀರ್ಥ ಕುಂಡಿಕೆಯ ಪಕ್ಕದಲ್ಲೇ ಇರುವ ಪವಿತ್ರ ಕೊಳದಲ್ಲಿ ಯಾರಿಗೂ ಹೋಗಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಅಲ್ಲಿ ಪುಣ್ಯ ಸ್ನಾನಕ್ಕೂ ಅವಕಾಶ ನಿರಾಕರಿಸಲಾಗಿತ್ತು.

    ದೊಡ್ಡ ಕೊಳಾಯಿಗಳನ್ನು ಇರಿಸಿ ಅಲ್ಲಿಂದಲೇ ಎಲ್ಲಾ ಭಕ್ತರಿಗೆ ತೀರ್ಥ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ತಲಕಾವೇರಿಗೆ ಬರುವ ಭಕ್ತರಿಗೆ ಕೊಡಗು ಏಕೀಕರಣ ರಂಗವು ಪ್ರತೀ ವರ್ಷದಂತೆ ಈ ವರ್ಷವೂ ಊಟದ ವ್ಯವಸ್ಥೆ ಮಾಡಿತ್ತು. ತೀರ್ಥೋದ್ಭವದ ದಿನವಾದ ಭಾನುವಾರ ಮತ್ತು ಸೋಮವಾರ ಎರಡು ದಿನ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಆದರೆ ಕೋವಿಡ್-19 ಆತಂಕ ಇರುವುದರಿಂದ ಸೀಮಿತ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದೆ. ಇದನ್ನೂ ಓದಿ: ಬೊಮ್ಮಾಯಿ ಆರ್‌ಎಸ್‍ಎಸ್‍ನವರು ಅಲ್ಲ: ಸಿದ್ದರಾಮಯ್ಯ