Tag: Kavach

  • ಒಂದೇ ಹಳಿಯಲ್ಲಿ ಎರಡು ರೈಲು – ಅಪಾಯದಿಂದ ಪಾರಾಗುವ ಹೊಸ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

    ಲಕ್ನೋ: ಭಾರತೀಯ ರೈಲ್ವೇ ಅಭಿವೃದ್ಧಿ ಪಡಿಸಿದ ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆ(ಎಟಿಪಿ)ಯ ಹೊಸ ‘ಕವಚ’ ತಂತ್ರಜ್ಞಾನವನ್ನು ಶುಕ್ರವಾರ ಪರೀಕ್ಷಿಸಲಾಯಿತು. ಪರೀಕ್ಷೆಯನ್ನು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಶ್ಣವ್ ಕೂಲಂಕುಶವಾಗಿ ವೀಕ್ಷಿಸಿ ತಂತ್ರಜ್ಞಾನವನ್ನು ಶ್ಲಾಘಿಸಿದ್ದಾರೆ.

    ಒಂದೇ ಹಳಿಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚಲಿಸುತ್ತಿರುವ ರೈಲುಗಳನ್ನು ಹೇಗೆ ಸ್ವಯಂ ಚಾಲಿತವಾಗಿ ನಿಯಂತ್ರಣಕ್ಕೆ ತರಬಹುದು ಎಂಬುದನ್ನು ಅಶ್ವಿನಿ ವೈಶ್ಣವ್ ವೀಕ್ಷಿಸಿದ್ದು, ಅದರ ವೀಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಇನ್ನಿಲ್ಲ

    ಶೂನ್ಯ ಅಪಘಾತಗಳ ಗುರಿಯೊಂದಿಗೆ ನಿರ್ಮಿಸಲಾದ ಕವಚ ತಂತ್ರಜ್ಞಾನವನ್ನು ಶುಕ್ರವಾರ ಸಿಕಂದರಾಬಾದ್‍ನಲ್ಲಿ ನೇರ ಪರೀಕ್ಷೆಗೆ ಒಳಪಡಿಸಲಾಯಿತು. ಅಶ್ವಿನಿ ವೈಷ್ಣವ್ ಅವರಿಗೆ ರೈಲಿನ ಚಾಲಕ ಹಾಗೂ ಸಿಬ್ಬಂದಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಿದರು.

    ಕೇಂದ್ರ ರೈಲ್ವೇ ಸಚಿವ ಇದ್ದ ರೈಲಿನ ಹಳಿಯ ವಿರುದ್ಧ ದಿಕ್ಕಿನಲ್ಲಿ ಇನ್ನೊಂದು ರೈಲು ಬರುತ್ತಿದ್ದು, ಈ ಸಂದರ್ಭದಲ್ಲಿ ರೈಲಿನ ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನ ಪಟ್ಟಿಲ್ಲವೆಂದಾದರೂ ರೈಲು ತಾನಾಗೇ ನಿಲ್ಲುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದನ್ನೂ ಓದಿ: ರಾಯರ ಪಟ್ಟಾಭಿಷೇಕ: ಮಂತ್ರಾಲಯಕ್ಕೆ ಭೇಟಿ ಕೊಟ್ಟ ಸುದೀಪ್

    ಅಶ್ವಿನಿ ವೈಶ್ಣವ್ ಟ್ವಿಟ್ಟರ್‍ನಲ್ಲಿ ಎಸ್‍ಪಿಎಡಿ ಪರೀಕ್ಷೆ, ರೈಲು ಕೆಂಪು ಸಿಗ್ನಲ್ ದಾಟಲು ಪ್ರಯತ್ನಿಸಿದೆ. ಆದರೆ ಕವಚ ರೈಲನ್ನು ತಡೆಯುತ್ತದೆ ಎಂದು ಬರೆದಿದ್ದಾರೆ.