Tag: Kaup Marigudi

  • ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ

    ಕಾಪು ಮಾರಿಗುಡಿಗೆ ಪೂಜಾ ಹೆಗ್ಡೆ ಭೇಟಿ

    ಬಾಲಿವುಡ್ ಬೆಡಗಿ ಪೂಜಾ ಹೆಗ್ಡೆ (Pooja Hegde) ಅವರು ಉಡುಪಿಯ ಕಾಪು ಮಾರಿಗುಡಿಯ (Kapu Marigudi) ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕುಟುಂಬದ ಜೊತೆ ಭಾಗಿಯಾಗಿ ಕಾಪು ಮಾರಿಯಮ್ಮನ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ:40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ

    ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರು. ಹಾಗಾಗಿ ಆಗಾಗ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಫ್ಯಾಮಿಲಿ ಜೊತೆ ಕಾಪು ಮಾರಿಗುಡಿಗೆ ನಟಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಇನ್ನೂ ಕಾಪು ಮಾರಿಗುಡಿಗೆ ಶಿಲ್ಪಾ ಶೆಟ್ಟಿ, ಕಂಗನಾ ರಣಾವತ್‌, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಅನೇಕರು ಭೇಟಿ ನೀಡಿದ್ದರು. ಈಗ ಪೂಜಾ ಹೆಗ್ಡೆ ಭೇಟಿ ಕೊಟ್ಟಿದ್ದಾರೆ.

    ಅಂದಹಾಗೆ, ಸದ್ಯ ಪೂಜಾ ಅವರು ತೆಲುಗು, ತಮಿಳು, ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ತಮಿಳು ನಟ ಸೂರ್ಯ ಜೊತೆಗಿನ ಸಿನಿಮಾ, ದಳಪತಿ ವಿಜಯ್ ಮತ್ತು ಕೆವಿಎನ್ ಸಂಸ್ಥೆಯೊಂದಿಗಿನ ಚಿತ್ರ, ಸುನೀಲ್ ಶೆಟ್ಟಿ ಪುತ್ರನಿಗೆ ನಾಯಕಿಯಾಗಿ ಬಾಲಿವುಡ್ ಚಿತ್ರ, ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲಿದ್ದಾರೆ.

  • ಪರ ವಿರೋಧ ಬೆನ್ನಲ್ಲೇ ಡಿಸಿಎಂ ಟೆಂಪಲ್‌ ರನ್‌ – ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾಗಲಿರುವ ಡಿಕೆಶಿ

    ಪರ ವಿರೋಧ ಬೆನ್ನಲ್ಲೇ ಡಿಸಿಎಂ ಟೆಂಪಲ್‌ ರನ್‌ – ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗಿಯಾಗಲಿರುವ ಡಿಕೆಶಿ

    ಉಡುಪಿ: ಹಿಂದುತ್ವ ಜಪದ ಜೊತೆಗೆ ಡಿಸಿಎಂ ಡಿಕೆಶಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಇಂದು ಉಡುಪಿಗೆ ಭೇಟಿ ನೀಡಲಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಕಾಪು ಹೊಸ ಮಾರಿಗುಡಿ ಬ್ರಹ್ಮ ಕಲಶೋತ್ಸವದಲ್ಲಿ ಭಾಗವಹಿಸಲಿದ್ದಾರೆ.

    30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಆಗಿರುವ ಕಾಪು ಹೊಸ ಮಾರಿಗುಡಿ (Kaup Marigudi) ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಇಂದು ದೇವರ ಗದ್ದುಗೆಯ ಪ್ರತಿಷ್ಠಾಪನೆ ನಡೆಯಲಿದೆ. ಈ ಪರ್ವಕಾಲದಲ್ಲಿ ಡಿ.ಕೆ ಶಿವಕುಮಾರ್ ದೇಗುಲಕ್ಕೆ ಭೇಟಿ ಕೊಡಲಿದ್ದಾರೆ. ಉಡುಪಿ ಕಾಂಗ್ರೆಸ್ ಭವನದಲ್ಲಿ ನಾಯಕರ ಭೇಟಿಯಾಗಿ, ಕಾರ್ಕಳದಲ್ಲಿ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಭಾಗಿಯಾಗಲಿದ್ದಾರೆ.

    ಡಿಕೆಶಿ ದಕ್ಷಿಣ ಕನ್ನಡ -ಉಡುಪಿ ಪ್ರವಾಸದ ಬಗ್ಗೆ ಸುನಿಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ ಡಿಕೆಶಿ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ಭಾಗಿಯಾಗಿ, ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಸ್ವಾಗತ ಎಂದು ಬರೆದು ಟಾಂಗ್‌ ಕೊಟ್ಟಿದ್ದಾರೆ.

    ಫೆ.9 ರಂದು ಪ್ರಯಾಗ್ ರಾಜ್‍ನ ಮಹಾ ಕುಂಭ ಮೇಳದಲ್ಲಿ ಕುಟುಂಬ ಸಹಿತ ಭಾಗಿಯಾಗಿದ್ದು, ಫೆಬ್ರವರಿ 12ರ ಟಿ.ನರಸಿಪುರದ ಕುಂಭ ಮೇಳದಲ್ಲಿ ಭಾಗಿಯಾಗಿದ್ದರು. ಫೆಬ್ರವರಿ 26ರಂದು ಕೊಯಮುತ್ತೂರಿನಲ್ಲಿ ಅಮಿತ್ ಶಾ ಜೊತೆ ಮಹಾ ಶಿವರಾತ್ರಿ ಉತ್ಸವದಲ್ಲಿ ಭಾಗಿಯಾಗಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.