ಹಿಂದಿಯ ಬಿಗ್‌ಶೋ ಕೌನ್ ಬನೆಗಾ ಕರೋಡ್‌ಪತಿ (Kaun Banega Crorepati) ಶೋನಲ್ಲಿ ಡಿವೈನ್‌ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಭಾಗವಹಿಸಿದ್ದಾರೆ. ಬಿಗ್‌ಬಿ ಅಮಿತಾಬ್ (Amitabh Bachchan) ಜೊತೆ ಎರಡು ದಿನದ ಹಿಂದೆ ಕಾರ್ಯಕ್ರಮದ ಶೂಟಿಂಗ್‌ನಲ್ಲಿ ರಿಷಬ್ ಶೆಟ್ಟಿ ಭಾಗವಹಿಸಿದ್ದಾರಂತೆ. ಇಂದು (ಅ.11) ರಂದು ಅಮಿತಾಬ್ ಬಚ್ಚನ್ ಅವರಿಗೆ ಹುಟ್ಟುಹಬ್ಬ ಹೀಗಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಫೋಟೋ ಜೊತೆಗೆ ವಿಶ್ ಮಾಡಿದ್ದಾರೆ ರಿಷಬ್ ಶೆಟ್ಟಿ. ಜೊತೆಗೆ ಮುಂಬರುವ ಎಪಿಸೋಡ್‌ಗಾಗಿ ಕಾಯ್ತಿರುತ್ತೇನೆ ಅಂತಾ ಬರೆದುಕೊಂಡಿದ್ದಾರೆ.
ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವದಾದ್ಯಂತ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ತೆರೆಕಂಡ ಕಡೆಗೆಲ್ಲ ಪ್ರೇಕ್ಷಕರ ಮನಸೂರೆ ಮಾಡಿದೆ. ಬಾಕ್ಸಾಫೀಸ್‌ನಲ್ಲಿ 500 ಕೋಟಿ ಕ್ಲಬ್ ಸೇರಿರುವ ಕಾಂತಾರ ಚಾಪ್ಟರ್-1 ಚಿತ್ರ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿರುವ ಕಾಂತಾರ ಚಾಪ್ಟರ್-1 ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ಶುರುವಾಗಿವೆ. ಸಿನಿಮಾ ತಂಡ ದೇವರ ಸನ್ನಿಧಾನದಲ್ಲಿ ಪೂಜಾ ಕಾರ್ಯಗಳನ್ನ ನಿರ್ವಹಿಸುತ್ತಿದೆ. ಜೊತೆಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮುಂಬೈನಲ್ಲಿ `ಕೌನ್ ಬನೆಗಾ ಕರೋಡ್‌ಪತಿ’ ಶೋನಲ್ಲಿ ಭಾಗಿಯಾಗಿದ್ದಾರೆ. `ಕೌನ್ ಬನೆಗಾ ಕರೋಡ್‌ಪತಿ’ ಶೋನಲ್ಲಿ ರಿಷಬ್ ಭಾಗಿಯಾದ ಎಪಿಸೋಡ್ ಸದ್ಯದಲ್ಲಿಯೇ ಪ್ರಸಾರವಾಗಲಿದೆ.
ಬಾಗಲಕೋಟೆ: ವಿಶಿಷ್ಟ ರಿಯಾಲಿಟಿ ಶೋ ಆಗಿರುವ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ಕಾರ್ಯಕ್ರಮದಲ್ಲಿ ಬಾಗಲಕೋಟೆ (Bagalkot) ಜಿಲ್ಲೆಯ ಯುವ ವಿದ್ಯಾರ್ಥಿ 50 ಲಕ್ಷ ರೂ. ಗೆದ್ದು ಬೀಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.
ಮಹಾಲಿಂಗಪುರ ಪಟ್ಟಣದ ರಂಜಾನ್ ಮಲಿಕ್ ಸಾಬ್ ಫೀರಜಾದೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಅವರ ಪ್ರಶ್ನೆಗಳಿಗೆ ಉತ್ತರಿಸಿ 50 ಲಕ್ಷ ತನ್ನದಾಗಿಸಿಕೊಂಡಿದ್ದಾರೆ.
ರಮ್‌ಜಾನ್ ಮಲಿಕ್ ಸಾಬ್ ಫೀರಜಾದೆ ಮೊದಲು ತನ್ನ ತಂದೆಯ ವೆಲ್ಡಿಂಗ್ ಅಂಗಡಿಯಲ್ಲಿ(Welding Shop) ಕೆಲಸ ಮಾಡಿದ್ದರು. ನಂತರ ಚಹಾ, ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ವಾಚ್ ಮನ್ ಆಗಿ ಕೆಲಸ ಮಾಡಿದ್ದರು. ಇದನ್ನೂ ಓದಿ: BBK 11: ಅದಿತಿ ಹನುಮಂತುಗೆ ಹೇಳಿದ ಮಾತಿಗೆ ನೆಟ್ಟಿಗರ ಚಪ್ಪಾಳೆ
ಬಿಎ ಪದವಿ ಮುಗಿಸಿರುವ ಮಲೀಕ್ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಕೆಬಿಸಿ ರಸಪ್ರಶ್ನೆಗೆ ಆಯ್ಕೆಯಾಗಿದ್ದ ಜಟಿಲ ಪ್ರಶ್ನೆಗಳಿಗೆ ಉತ್ತರಿಸಿ ಅಮಿತಾಬ್ ಬಚ್ಚನ್ ಅವರಿಂದ ಶಹಬ್ಬಾಸ್ ಗಿರಿ ಪಡೆದಿದ್ದಾರೆ.
ಈಗ ಮಲೀಕ್ ಕರ್ನಾಟಕ ಹಾಗೂ ಬಾಗಲಕೋಟೆ ಜಿಲ್ಲೆಯ ಹೆಸರು ತಂದಿದ್ದಾರೆ. ಮಲೀಕ್ ಸಾಧನೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ (Amitabh Bachchan) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ‘ಕೌನ್ ಬನೇಗಾ ಕರೋಡ್ ಪತಿ’ ಕಾರ್ಯಕ್ರಮವನ್ನು ನಿರೂಪಣೆ ಮಾಡುವ ಬಿಗ್‌ಬಿ ಸ್ಪರ್ಧಿಯೊಬ್ಬರ ಮಾತಿಗೆ ಖಡಕ್ ಆಗಿ ಉತ್ತರ ಕೊಟ್ಟಿದ್ದಾರೆ. ಮದುವೆಯಾಗದ ಹೆಣ್ಣು ಮನೆಗೆ ಭಾರ ಎಂದ ಸ್ಪರ್ಧಿಗೆ ನಟ ಕ್ಲಾಸ್ ತೆಗೆದುಕೊಂಡಿದ್ದಾರೆ.
‘ಕೌನ್ ಬನೇಗಾ ಕರೋಡ್ ಪತಿ’ ಸೀಸನ್ 16ಕ್ಕೆ (Kaun Banega Crorepati- 16) ಕೃಷ್ಣ ಸುಲೇಖರ್ ಎಂಬುವವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ತಮ್ಮ ಬದುಕಿನ ಕರಾಳ ಅಧ್ಯಾಯದ ಕುರಿತು ಮಾತನಾಡುತ್ತಿದ್ದರು. ಕರೋನಾ ಸಮಯದಲ್ಲಿ ಕೆಲಸವನ್ನು ಕಳೆದುಕೊಂಡಾಗ ತಾವು ಅನುಭವಿಸಿದ ಸಂಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ. ನಾನು ಕೆಲಸ ಕಳೆದುಕೊಂಡಾಗ ನನಗೆ ಅರ್ಥವಾಗಿದ್ದು, ಏನೆಂದರೆ ಸರ್ ಹೇಗೆ ಮದುವೆಯಾಗದ ಹೆಣ್ಣು ಮಕ್ಕಳು ಮನೆಗೆ ಭಾರವಾಗಿರುತ್ತಾರೋ ಅದೇ ರೀತಿ ಕೆಲಸ ಇಲ್ಲದ ಗಂಡು ಮಕ್ಕಳು ಕೂಡ ಮನೆಗೆ ಭಾರ ಆಗುತ್ತಾರೆ ಎಂದು ಮಾತನಾಡಿದ್ದಾರೆ.
ಕೃಷ್ಣ ಸುಲೇಖರ್ ಅವರು ಆಡಿದ ಮಾತಿಗೆ ಬಿಗ್‌ಬಿ ಸೈಲೆಂಟ್ ಆದರು. ಆ ನಂತರ ಅಸಮಾಧಾನ ವ್ಯಕ್ತಪಡಿಸಿದರು. ನಾನು ನಿಮಗೆ ಒಂದು ಮಾತು ಹೇಳಲು ಬಯಸುತ್ತೇನೆ ಕೃಷ್ಣ. ಹೆಣ್ಣುಮಕ್ಕಳು ಯಾವತ್ತೂ ಕೂಡ ಮನೆಗೆ ಭಾರವಲ್ಲ ಎಂದರು. ಹೆಣ್ಣು ಮಕ್ಕಳು ಮನೆಯ ಭಾಗ್ಯ ಎಂದು ಹೇಳುವ ಮೂಲಕ ಕೃಷ್ಣ ಸುಲೇಖರ್‌ಗೆ ತಕ್ಕ ಉತ್ತರ ನೀಡಿದರು. ಬಿಗ್‌ಬಿ ಆಡಿದ ಈ ಮಾತು ಅಭಿಮಾನಿಗಳ ಮನಗೆದ್ದಿದೆ. ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ (Amitabh Bachchan) ಅವರಿಗೆ ಊಟ ಮಾಡೋಕೂ ಟೈಮಿಲ್ಲ. ಅಷ್ಟೊಂದು ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದಾರಂತೆ. ಈ ಮಾಹಿತಿಯನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದಿನದ ಒಂಬತ್ತು ಗಂಟೆ ಕೆಲಸ ಮಾಡುವೆ. ಕಾರಲ್ಲೇ ಊಟ ಮಾಡಿದೆ ಎಂದೆಲ್ಲ ಅವರು ಬರೆದುಕೊಂಡಿದ್ದಾರೆ.
ಸದ್ಯ ಅಮಿತಾಬ್ ಕಿರುತೆರೆಯ ಅತ್ಯಂತ ಜನಪ್ರಿಯ ಶೋ ಕೌನ್ ಬನೇಗಾ ಕರೋಡ್ಪತಿ ಸೀಸನ್ (Kaun Banega Crorepati) 16ರ ಚಿತ್ರೀಕರಣದಲ್ಲಿ (Shooting) ತೊಡಗಿಸಿಕೊಂಡಿದ್ದಾರೆ. ಇದರ ವೇಳಾ ಪಟ್ಟಿಯ ಪ್ರಕಾರ 81ನೇ ವಯಸ್ಸಲ್ಲೂ ಬಿಗ್ ಬಾಸ್ ಸರಿ ಸುಮಾರು ಒಂಬತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಈ ಮಾಹಿತಿಯನ್ನೂ ಅವರೇ ಹೇಳಿದ್ದಾರೆ.
ಕರೋಡ್ಪತಿ ಸೆಟ್ ನಲ್ಲಿರುವ ಫೋಟೋವನ್ನೂ ಅವರು ಶೇರ್ ಮಾಡಿಕೊಂಡಿದ್ದು, ಕಾರಿನಲ್ಲೇ ಪ್ರಶ್ನೆಗಳನ್ನು ಓದುತ್ತಿದ್ದಾರೆ. ಅಲ್ಲಿಯೇ ಊಟ ಮಾಡುತ್ತಿದ್ದಾರೆ. ಜೊತೆಗೆ ಟ್ರಾವೆಲ್ ಮಾಡ್ತಾ, ಕಾರ್ಯಕ್ರಮದ ವಿವರವನ್ನೂ ಪಡೆದುಕೊಂಡಿದ್ದಾರೆ.
ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ (Kaun Banega Crorepati) ಶೋ ಇದೀಗ 15ನೇ ಆವೃತ್ತಿ ಪ್ರಸಾರವಾಗಿದೆ. ಇದೇ ಮೊದಲ ಬಾರಿಗೆ ಈ ಶೋನಲ್ಲಿ 14 ವರ್ಷದ ಹುಡುಗನ ಕೋಟಿ ರೂಪಾಯಿ ಸಿಕ್ಕಿದೆ. 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸುವ ಮೂಲಕ ಒಂದು ಕೋಟಿ ರೂಪಾಯಿ ಪಡೆದಿದ್ದಾನೆ ಹರಿಯಾಣದ ಮಹೇಂದ್ರ ಗಡ್ ಮಾಯಾಂಕ್.
ಮಾಯಾಂಕ್ (Mayank) ಸದ್ಯ 8ನೇ ತರಗತಿ ಓದುತ್ತಿದ್ದಾನೆ. ಈ ಸೀಸನ್ ನಲ್ಲಿ ಒಂದು ಕೋಟಿ ರೂಪಾಯಿ ಪಡೆಯುವ ಮೂಲಕ ದಾಖಲೆ ಬರೆದಿದ್ದಾನೆ. ಒಂದು ಕೋಟಿ ರೂಪಾಯಿ ಪಡೆದ ಅತ್ಯಂತ ಕಿರಿಯ ವಯಸ್ಸಿನ ಸ್ಪರ್ಧಿ ಅವನಾಗಿದ್ದಾನೆ. ಲೀಲಾ ಜಾಲವಾಗಿ 15 ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಕೇವಲ ಒಂದು ಕೋಟಿಗೆ ಮಾತ್ರವಲ್ಲ, ಏಳು ಕೋಟಿಗೂ ಗುರಿಯಿಟ್ಟು ಆಟವಾಡಲು ಮುಂದಾದ. ಆದರೆ, ಏಳು ಕೋಟಿ ಪ್ರಶ್ನೆಗೆ ಉತ್ತರಿಸೋಕೆ ಆಗದೇ ಆಟದಿಂದ ವಾಪಸ್ಸಾದ. ಈ ಹುಡುಗನ ಸಾಧನೆಗೆ ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅಭಿನಂದಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಹೈದರಾಬಾದ್: ನಟ ಅಮಿತಾಬ್ ಬಚ್ಚನ್ ನಿರೂಪಣೆಯ ‘ಕೌನ್ ಬನೇಗಾ ಕರೋಡ್‍ಪತಿ’ 11ನೇ ಸೀಸನ್ ಮುಕ್ತಾಯವಾಗಿದೆ. ಶೋನ ಕೊನೆಯ ಎಪಿಸೋಡ್‍ನಲ್ಲಿ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಪಾಲ್ಗೊಂಡಿದ್ದರು. ಇವರು ಈ ಶೋನಲ್ಲಿ ಬರೋಬ್ಬರಿ 25 ಲಕ್ಷ ಹಣವನ್ನು ಗೆದ್ದಿದ್ದಾರೆ. ಆದರೆ 50 ಲಕ್ಷದ ಪ್ರಶ್ನೆಗೆ ಸುಧಾಮೂರ್ತಿ ಅವರು ಉತ್ತರಿಸದ್ದಕ್ಕೆ ಬಿಗ್ ಬಿ ಬೇಸರ ವ್ಯಕ್ತಪಡಿಸಿದ್ದಾರೆ.
‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಸುಧಾಮೂರ್ತಿ ಅವರು ತಮ್ಮ ಹಿನ್ನೆಲೆ, ಶಿಕ್ಷಣ ಮತ್ತು ಜೀವನದ ಹಾದಿಯ ಬಗ್ಗೆ ವಿವರಿಸಿದ್ದಾರೆ. “ನಾನು ಎಂಜಿನಿಯರಿಂಗ್ ಓದಬೇಕು ಎಂದಾಗ ನಮ್ಮ ತಂದೆ ಒಪ್ಪಿಕೊಂಡಿರಲಿಲ್ಲ. ಕೊನೆಗೆ ಅವರನ್ನು ಒಪ್ಪಿಸಿ ಹುಬ್ಬಳ್ಳಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿಗೆ ಸೇರಿದೆ. ಆದರೆ 599 ವಿದ್ಯಾರ್ಥಿಗಳಿರುವ ಆ ಕಾಲೇಜಿನಲ್ಲಿ ನಾನೊಬ್ಬಳೇ ವಿದ್ಯಾರ್ಥಿನಿ. ಆಗ ಪ್ರಾಂಶುಪಾಲರು ನನಗೆ ಪ್ರತಿದಿನ ಸೀರೆಯುಟ್ಟು ಬರಬೇಕು, ಕಾಲೇಜಿನ ಕ್ಯಾಂಟೀನ್‍ಗೆ ಹೋಗಬಾರದು ಮತ್ತು ಯಾವುದೇ ಕಾರಣಕ್ಕೂ ಹುಡುಗರ ಬಳಿ ಮಾತನಾಡಬಾರದು ಎಂದು ಮೂರು ಷರತ್ತುಗಳನ್ನು ವಿಧಿಸಿದ್ದರು. ನಾನು ಕಾಲೇಜಿಗೆ ಟಾಪರ್ ಆಗಿದ್ದ ಕಾರಣ ಹುಡುಗರು ಬಂದು ಮಾತನಾಡಿಸುತ್ತಿದ್ದರು ಎಂದು ಕಾಲೇಜು ಜೀವನದ ಬಗ್ಗೆ ವಿವರಿಸಿದರು.
ನಾನು ಶಿಕ್ಷಣ ಪಡೆದ ಕಾಲೇಜಿನಲ್ಲಿ ಶೌಚಾಲಯ ವ್ಯವಸ್ಥೆ ಕೂಡ ಇರಲಿಲ್ಲ. ಇದರಿಂದ ಮುಂದೆ ಇನ್ಫೋಸಿಸ್ ಪರವಾಗಿ ಸುಮಾರು 16 ಸಾವಿರ ಟಾಯ್ಲೆಟ್‍ಗಳನ್ನು ನಿರ್ಮಿಸಿದೆವು ಎಂದು ಹೇಳಿದ್ದಾರೆ. ನಂತರ ತಾವು ದೇವದಾಸಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದ್ದಾರೆ. ಹೀಗೆ ತಮ್ಮ ಜೀವನದ ವಿವಿಧ ಘಟನೆಗಳು ಬಗ್ಗೆ ಮಾತನಾಡುತ್ತಾ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಾ ಬಂದರು. 11ನೇ ಪ್ರಶ್ನೆಗೆ ಆಡಿಯನ್ಸ್ ಸಹಾಯ ಪಡೆದು, 50:50 ಆಯ್ಕೆ ಮಾಡಿಕೊಂಡು 6 ಲಕ್ಷದ 40 ಸಾವಿರ ಗೆದ್ದರು. ನಂತರ ಮುಂದಿನ ಪ್ರಶ್ನೆಗೆ ತಾವೇ ಉತ್ತರಿಸಿ 12 ಲಕ್ಷದ 50 ಸಾವಿರ ರೂ. ಗೆದ್ದುಕೊಂಡಿದ್ದಾರೆ.
ಅಂತಿಮವಾಗಿ 25 ಲಕ್ಷ ರೂ. ವನ್ನು ಸುಧಾಮೂರ್ತಿ ಗೆದ್ದಿದ್ದಾರೆ. 50 ಲಕ್ಷ ರೂ.ಗೆ “ಸತತ ಎರಡು ವರ್ಷಗಳ ಕಾಲ ಫಿಲಂ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ತಾರೆ ಯಾರು?” ಎಂಬ ಪ್ರಶ್ನೆ ಬಂದಿತ್ತು. ಇದಕ್ಕೆ ಶರ್ಮಿಳಾ ಠಾಗೋರ್, ಕಂಗನಾ ರಣಾವತ್, ಕಾಜೋಲ್ ಹಾಗೂ ಜಯಾ ಬಚ್ಚನ್ ಎಂಬ ಆಯ್ಕೆಗಳನ್ನು ಕೊಟ್ಟಿದ್ದರು. ಆದರೆ 50 ಲಕ್ಷದ ಪ್ರಶ್ನೆಗೆ ಉತ್ತರ ಗೊತ್ತಿಲ್ಲದೇ ಆಟವನ್ನು ಕ್ವಿಟ್ ಮಾಡಿದ್ದಾರೆ.
ಕ್ವಿಟ್ ಮಾಡಿದ ಬಳಿಕ ಸುಧಾಮೂರ್ತಿ ಅವರು ಕಾಜೋಲ್ ಹೆಸರನ್ನು ತಿಳಿಸಿದರು. ಸರಿಯಾದ ಉತ್ತರ ಜಯಾ ಬಚ್ಚನ್ ಆಗಿತ್ತು. ಹೀಗಾಗಿ ಈ ಪ್ರಶ್ನೆಗೆ ಸುಧಾಮೂರ್ತಿ ಉತ್ತರಿಸದ ಕಾರಣ ಸ್ವಲ್ಪ ಬೇಸರಗೊಂಡ ಬಿಗ್ ಬಿ, ಮನೆಗೆ ಹೋದ ಬಳಿಕ ನನಗೆ ಸಿಕ್ಕಾಪಟ್ಟೆ ಏಟುಗಳು ಬೀಳುವ ಸಾಧ್ಯತೆಗಳಿವೆ ಎಂದು ತಮಾಷೆ ಮಾಡಿದ್ದಾರೆ.
ಮುಂಬೈ: ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ತಾವು ನಿರೂಪಣೆ ಮಾಡುತ್ತಿರುವ ಕೌನ್ ಬನೇಗಾ ಕರೋಡ್‌ಪತಿ ‘(ಕೆಬಿಸಿ) ಕಾರ್ಯಕ್ರಮದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.
ಖಾಸಗಿ ಚಾನೆಲ್‍ನಲ್ಲಿ ಅಮಿತಾಬ್ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ನಾಳೆ ಅಂದರೆ ಅಕ್ಟೋಬರ್ 11ರಂದು ಅಮಿತಾಬ್ 75ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಈ ಸಂಬಂಧ ಕೆಬಿಸಿ ಕಾರ್ಯಕ್ರಮದ ಆಯೋಜಕರು ಅಮಿತಾಬ್ ಅವರು ಕಲಿತಿರುವ ಶಾಲಾ ದಿನಗಳ ವಿಡಿಯೋ ಕ್ಲಿಪ್ ನ್ನು ತೋರಿಸುವ ಮೂಲಕ ಸರಪ್ರೈಸ್ ಗಿಫ್ಟ್ ನೀಡಿದ್ದಾರೆ. ಈ ಕ್ಲಿಪ್ ನ್ನು ನೋಡಿದ ಅಮಿತಾಬ್ ಅವರು ಕಣ್ಣು ತೇವಗೊಂಡಿತು.
ವಿಡಿಯೋ ಕ್ಲಿಪ್ ನಲ್ಲಿ ಅಮಿತಾಬ್ ಕಾಲೇಜು ದಿನಗಳ ಕ್ಷಣಗಳ ಫೋಟೋಗಳನ್ನು ನೋಡಬಹುದಾಗಿದೆ. ಅಮಿತಾಬ್ ವಿಡಿಯೋ ನೋಡಿದ ಬಳಿಕ ತಮ್ಮ ತಂದೆಯ ಹಾಗು ತಾವು ಶಾಲೆಯಲ್ಲಿ ನಾಟಕ ಮಾಡುತ್ತಿರುವ ನೆನಪುಗಳನ್ನು ಹಂಚಿಕೊಂಡು, ಕಾರ್ಯಕ್ರಮದ ಆಯೋಜಕರಿಗೂ ಧನ್ಯವಾದ ತಿಳಿಸಿದ್ದಾರೆ. ಈ ಕಾರ್ಯಕ್ರಮ ಮಂಗಳವಾರ ಪ್ರಸಾರವಾಗಲಿದ್ದು, ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೆಬಿಸಿ ಇದು 9ನೇ ಆವೃತ್ತಿಯಾಗಿದ್ದು, ಈ ಕಾರ್ಯಕ್ರಮವನ್ನು ದೇಶದಲ್ಲಿಯೇ ಅತಿ ಹೆಚ್ಚು ಜನರು ನೋಡುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಬರುವ ಸ್ಪರ್ಧಿಗಳು ಕೇಳುವ ಸಾಮಾನ್ಯ ಜ್ಞಾನದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದಂತೆ ಬಹುಮಾನವಾಗಿ ಭಾರೀ ಹಣವನ್ನು ಪಡೆಯುತ್ತಾರೆ. ಈ ಆವೃತ್ತಿಯಲ್ಲಿ ಬಹುಮಾನವು 7 ಕೋಟಿ ರೂ. ಅಂತಿಮ ಮೊತ್ತವಾಗಿದ್ದು, ಇದೂವರೆಗೂ ಯಾರು ಈ ಮೊತ್ತವನ್ನು ಜಯಿಸಿಲ್ಲ. ಅಕ್ಟೋಬರ್ 2ರಂದು ನಡೆದ ಶೋನಲ್ಲಿ ಜಾರ್ಖಂಡ್ ರಾಜ್ಯದ ಸಾಮಾಜಿಕ ಕಾರ್ಯಕರ್ತೆಯಾಗಿರುವ ಅನಾಮಿಕ ಮಜುಂದಾರ್ 1 ಕೋಟಿ ರೂ. ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದರು.