Tag: Katta Subramanya Naidu

  • ಪಕ್ಷ ವಿರೋಧಿಗಳನ್ನ ಉಚ್ಚಾಟನೆ ಮಾಡಲಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಪಕ್ಷ ವಿರೋಧಿಗಳನ್ನ ಉಚ್ಚಾಟನೆ ಮಾಡಲಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.

    ಯತ್ನಾಳ್ ಟೀಂ ವಿರುದ್ಧ ಸಭೆ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ವಿರೋಧ ಚಟುವಟಿಕೆ ಮಾಡುವವರನ್ನ ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಎಷ್ಟು ಪಾರ್ಟಿ ಬದಲಾವಣೆ ಮಾಡಿಕೊಂಡು ಬಂದರು ಇವತ್ತು ಮಾತಾಡುತ್ತಾರೆ. ಬಿಜೆಪಿ ಬಗ್ಗೆ ನಿಯತ್ತು ಇಲ್ಲದೇ ಜೆಡಿಎಸ್‌ಗೆ ಹೋಗಿದ್ದರು. ಯಡಿಯೂರಪ್ಪ ಅವರನ್ನ ಇಳಿಸಿ ಯಡಿಯೂರಪ್ಪ ಬೇರೆ ಪಕ್ಷ ಮಾಡಿದಾಗ ಬಿಜೆಪಿ ಪಕ್ಷ ನಡೆಸಲು ಆಗಲಿಲ್ಲ. ಪಕ್ಷ ಶಕ್ತಿ ಕಳೆದುಕೊಂಡಿತ್ತು. ಮತ್ತೆ ಯಡಿಯೂರಪ್ಪ ಬಂದರು ಅಧಿಕಾರಕ್ಕೆ ಮತ್ತೆ ಪಕ್ಷ ಬಂತು. ಇದು ಯಡಿಯೂರಪ್ಪನವರ ಶಕ್ತಿ. ಯಡಿಯೂರಪ್ಪ ಇನ್ನು ಶಕ್ತಿ ಉಳಿಸಿಕೊಂಡಿದ್ದಾರೆ. ವಿಜಯೇಂದ್ರ ಪಕ್ಷ ಸಂಘಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

    ಎಲ್ಲರನ್ನು ಪದಾಧಿಕಾರಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಪಾರ್ಟಿ ನಿಯಮಾನುಸಾರ ಯಾರನ್ನು ಮಾಡಲು ಸಾಧ್ಯವೋ ಅವರನ್ನು ಮಾಡುತ್ತಾರೆ. ಕಾಂಗ್ರೆಸ್ ರೀತಿ ದೊಡ್ಡದಾಗಿ ಪದಾಧಿಕಾರಿಗಳು ಮಾಡಲು ಆಗುವುದಿಲ್ಲ. ಕೇಂದ್ರದ ಸೂಚನೆ ಪ್ರಕಾರ ಮಾಡಿದ್ದೇವೆ. ಶಕ್ತಿ ಇರೋರು ಎಲ್ಲಿ ಇದ್ದರೆ ಏನು. ಅವರನ್ನ ಮಾಡಿದ್ರು, ಇವರನ್ನು ಮಾಡಿದ್ರು ಅಂದರೆ ಹೇಗೆ. ಸಮಯ ಅನುಕೂಲ, ಸಂದರ್ಭದಲ್ಲಿ ಪದಾಧಿಕಾರಿಗಳನ್ನ ಮಾಡುತ್ತಾರೆ. ನಾವು ಪಕ್ಷದ ಪರವಾಗಿ ನಿಲ್ಲುತ್ತೇವೆ. ವಿಜಯೇಂದ್ರ ಅಧ್ಯಕ್ಷರಾಗಿರೋವರೆಗೂ ನಾವು ಪಕ್ಷದ ಪರ ಇರುತ್ತೇವೆ. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರಕ್ಕೆ ನಾನು ಆಕಾಂಕ್ಷಿ ಆಗಿದ್ದೆ. ಟಿಕೆಟ್ ಸಿಕ್ಕಿಲ್ಲ. ಆದರೆ ಪಕ್ಷ ಹೇಳಿತು ನಾವು ಪಕ್ಷದ ಕೆಲಸ ಮಾಡಿದೆವು. ಇದು ಪಕ್ಷ ನಿಷ್ಠೆ. ಪಕ್ಷ ವಿರೋಧಿ ಚಟುವಟಿಕೆ ಯಾರೇ ಮಾಡಿದರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

    ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದು ಹೇಳುವುದಕ್ಕೆ ಅವರೇನು ಹೈಕಮಾಂಡಾ? ಹೈಕಮಾಂಡ್ ಹೇಳಿದರೆ ವಿಜಯೇಂದ್ರ ಅಧ್ಯಕ್ಷರಾಗಿ ಇರೊದಿಲ್ಲ. ಈಗ ಯಾರು ಮಾತಾಡುತ್ತಿದ್ದಾರೆ ಅವರು ಮಾತಾಡೋದು ಜಾಸ್ತಿ ಕೆಲಸ ಕಡಿಮೆ. ವಿಜಯೇಂದ್ರ ಇಳಿಯಲ್ಲ. ಪಕ್ಷ ಕಟ್ಟುತ್ತಾರೆ. ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಈಗಾಗಲೇ ಹೈಕಮಾಂಡ್ ಯಾರಿಗೆ ಸೂಚನೆ ಕೊಡಬೇಕೋ ಕೊಟ್ಟಿದೆ. ಯಾವುದೋ ಆರ್‌ಸಿಬಿ, ಎಲ್‌ಬಿಸಿ ಅಂತೆಲ್ಲ ಹೊರಟಿದ್ದಾರೆ. ಅದು ಹೇಗೆ ಮಾಡುತ್ತಾರೋ ಮಾಡಲಿ. ಹಿಂದೆ ಹೀಗೆ ಮಾಡಿದವರು ಕೈ ಸುಟ್ಟಿಕೊಂಡು ಮನೆಗೆ ಹೋದರು ಮತ್ತೆ ಅದೇ ಆಗುತ್ತೆ ಎಂದು ಯತ್ನಾಳ್ ಟೀಂ ವಿರುದ್ಧ ಕಟ್ಟಾ ವಾಗ್ದಾಳಿ ನಡೆಸಿದರು.

  • ಬೈರತಿ ಸುರೇಶ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೈರತಿ ಸುರೇಶ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು: ನಗರದ ಹೆಬ್ಬಾಳ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ವಿರುದ್ಧ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ದಾಖಲೆ ಸಮೇತ ಭ್ರಷ್ಟಾಚಾರದ ಗಂಭೀರ ಆರೋಪ ಹೊರಿಸಿದ್ದಾರೆ.

    katta subramanya naidu

    ಮೊಯ್ಲಿಗಿಂತ ಅತಿದೊಡ್ಡ ಸುಳ್ಳುಗಾರ ಸುರೇಶ್. ನನ್ನ ಕೆಲಸಗಳನ್ನು ತನ್ನ ಕೆಲಸ ಅಂತ ಬಿಂಬಿಸುತ್ತಿದ್ದಾರೆ. 4 ವರ್ಷದಲ್ಲಿ ಭ್ರಷ್ಟಾಚಾರವೇ ಇವರ ಸಾಧನೆ. ಬಿಜೆಪಿ ಸರ್ಕಾರ ನೀಡಿರುವ ಎಲ್ಲಾ ಕಾಮಗಾರಿಗಳಲ್ಲಿ ಸುರೇಶ್ ಅವರಿಗೆ 20-30 ಪರ್ಸೆಂಟ್ ಕಮಿಷನ್ ಕೊಡ್ಬೇಕು ಅಂತ ಗುತ್ತಿಗೆದಾರರು ಹೇಳ್ತಿದ್ದಾರೆ. ನಗರೋತ್ಥಾನ ಅನುದಾನದಲ್ಲಿ 450 ಕೋಟಿ ಕಮಿಷನ್ ಹೊಡೆದಿದ್ದಾರೆ. 650 ಕೋಟಿ ರೂ. ಕಾಮಗಾರಿಗಳಲ್ಲಿ ಶೇ.60ರಷ್ಟು ಕೆಲಸ ಆಗಿಲ್ಲ ಬಗ್ಗೆ ಎಸಿಬಿ ತನಿಖೆ ನಡೆಸಬೇಕು ಎಂದು ಸಿಎಂಗೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಹಿಜಬ್ ಕಿಚ್ಚು – ವಿವಾದಿತ ವಿದ್ಯಾರ್ಥಿನಿಯರ ಮೂಲಕ CFI ಗರ್ಲ್ಸ್‌ ಕಾನ್ಫರೆನ್ಸ್

    ಲಡ್ಡು ತಿಂದಂಗೆ ಕಮಿಷನ್ ತಿಂದಿರೋ ಸುರೇಶ್‍ಗೆ ಈ ಬಾರಿ ಜನ ಬೇವಿನ ಲಡ್ಡು ತಿನ್ನಿಸ್ತಾರೆ ಅಂತ ಏಕವಚನದಲ್ಲೇ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಆ ಬಳಿಕ 15 ಪ್ರಶ್ನೆ ಮುಂದಿಟ್ಟು ಮಾಧ್ಯಮ ಪ್ರಕಟಣೆ ಹೊರಡಿಸಿದ ಬೈರತಿ ಸುರೇಶ್, ನಿಮ್ಮ ವಿರುದ್ಧದ ಕೇಸ್‍ಗಳು ಏನಾಗಿವೆ? ಎಂದು ಕೇಸ್‍ಗಳ ಡೀಟೇಲ್ಸ್ ಹಾಕಿದ್ದಾರೆ. ಇದಕ್ಕೆ ಕಿಡಿಕಾರಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ನಾನು ಮಾತ್ರ ಬೇಲ್ ಮೇಲಿಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆಶಿ ಎಲ್ಲರೂ ಬೇಲ್ ಮೇಲೆ ಇಲ್ವಾ? ಸುರೇಶ್ ನನ್ನ ಎಷ್ಟು ಕೇಸ್‍ಗೆ ಬೇಲ್ ಕೊಟ್ಟಿದ್ದಾನೆ ಅಂತ ಏಕವಚನದಲ್ಲಿ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‍ಐಆರ್

    ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಎಫ್‍ಐಆರ್

    ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ವಂಚನೆ ಆರೋಪದಡಿ ಎಫ್‍ಐಆರ್ ದಾಖಲಾಗಿದೆ.

    2004ರಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಶಾಸಕರಾಗಿದ್ದಂತಹ ಸಂದರ್ಭದಲ್ಲಿ ಇಂಡ್ ಸಿಂಡ್ ಕಂಪನಿಯಿಂದ ಸೈಟ್ ಹಾಗೂ ಫ್ಲಾಟ್ ಕೊಡಿಸುವುದಾಗಿ 2.85 ಕೋಟಿ ರೂ. ಹಣ ಪಡೆದಿದ್ದರು. ಈ ಹಣವನ್ನು ನಗದು ಹಾಗೂ ಚೆಕ್ ಮೂಲಕ ಪಡೆಯಲಾಗಿತ್ತು. ಇದನ್ನೂ ಓದಿ: ಮಗನ ಆರೋಗ್ಯ ವಿಚಾರಿಸುತ್ತಾ ರಾತ್ರಿಯಿಡೀ ನಿದ್ದೆಗೆಟ್ಟ ಶಾರೂಖ್ ದಂಪತಿ!

    katta subramanya naidu

    ಈ ಬಗ್ಗೆ ಹಲವು ಬಾರಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ವಿಚಾರಿಸಿದಾಗ ಸರಿಯಾಗಿ ಪ್ರತಿಕ್ರಿಯಿಸಿರಲಿಲ್ಲ. ಹೀಗಾಗಿ ಇಂಡ್ ಸಿಂಡ್ ಡೆಲವಪರ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರು ಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    ಅರ್ಜಿ ವಿಚಾರಣೆ ನಡೆಸಿದ್ದ ಎಸಿಎಂಎಂ ಕೋರ್ಟ್ ಕಟ್ಟಾ ಸುಬ್ರಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಇದೀಗ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಎಫ್‍ಐಆರ್ ದಾಖಲಿಸಲಾಗಿದೆ.

  • ರಾಸಲೀಲೆ ಪ್ರಕರಣಗಳು ಎಲ್ಲಾ ಸರ್ಕಾರದಲ್ಲಿಯೂ ಕೇಳಿ ಬಂದಿವೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ರಾಸಲೀಲೆ ಪ್ರಕರಣಗಳು ಎಲ್ಲಾ ಸರ್ಕಾರದಲ್ಲಿಯೂ ಕೇಳಿ ಬಂದಿವೆ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು: ನಕಲಿ ಸಿಡಿ ತಯಾರಿಸಿ ನಿಮ್ಮ ಸಿಡಿ ಇದೆ ಎಂದು ಯಾರಾದರೂ ಬ್ಲ್ಯಾಕ್ ಮೇಲ್ ಮಾಡಿರುತ್ತಾರೆ. ಹೀಗಾಗಿ ರಕ್ಷಣೆಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

    ರಾಸಲೀಲೆ ಪ್ರಕರಣ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕಲಿ ಸಿಡಿ ಯಾವುದು.? ಅಸಲಿ ಯಾವುದು ಎನ್ನು ಡೌಟ್ ಇದೆ. ನಕಲಿ ಸಿಡಿಗಳನ್ನು ತಯಾರಿಸಿ ಯಾವ ಸಿಡಿ ಎಲ್ಲಿಟ್ಟಿದ್ದಾರೆ ಎಂದು 6 ಸಚಿವರಿಗೆ ಭಯ ಇದೆ. ಹೀಗಾಗಿ ಕೋರ್ಟ್ ಮೋರೆ ಹೋಗಿರಬಹುದು.

    ಈ ಹಿಂದೆ ಹಲವು ರೀತಿಯ ಆರೋಪಿಗಳು ಬಂದಿವೆ ಅವರೆಲ್ಲ ದೋಷ ಮುಕ್ತರಾಗಿದ್ದಾರೆ. ಹೀಗೆ ಈ ಪ್ರಕರಣದಿಂದಲೂ ಹೊರಗೆ ಬರುತ್ತಾರೆ. ಯಾರು ಬೇಕಾದರೂ ಸಿಡಿ ತಯಾರಿಸುತ್ತಾರೆ. ನಕಲಿ ಸಿಡಿ ಯಾರಾದರೂ ಮಾಡಿರಬಹುದುದು ಹೀಗಾಗಿ ಅವರ ರಕ್ಷಣೆಗೆ ಕೋರ್ಟ್ ಹೋಗಿದ್ದಾರೆ.

    ಷಡ್ಯಂತ್ರ ಮಾಡುವವರು, ವಿರೋಧಿಗಳು ಇಂತಹ ಕೆಲಸ ಮಾಡುತ್ತಾರೆ. ಎಲ್ಲಾ ಕಾಲದಲ್ಲಿಯೂ ಸರ್ಕಾರದಲ್ಲಿ ಇಂತಹ ಆರೋಪಗಳು ಕೇಳಿಬಂದಿವೆ. ಆದರೆ ನಂತರ ಅವರೆಲ್ಲ ನಿರ್ದೋಷಿಗಳು ಎಂದು ಸಾಬೀತು ಪಡಿಸಿದ್ದಾರೆ. ಈ ಪ್ರಕರಣವು ಹಾಗೆ ಆಗುತ್ತದೆ ಎಂದು ಹೇಳಿದ್ದಾರೆ.

  • ಕಾಂಗ್ರೆಸ್ಸಿನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ರೆ, ನಮ್ಮಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ: ಕೆ.ಎಸ್ ನಾಯ್ಡು

    ಕಾಂಗ್ರೆಸ್ಸಿನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ರೆ, ನಮ್ಮಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ: ಕೆ.ಎಸ್ ನಾಯ್ಡು

    ರಾಮನಗರ: ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಬಿಜೆಪಿಯ ಕಟ್ಟಾ ಸುಬ್ರಮಣ್ಯಂ ನಾಯ್ಡು ಮಾಜಿ ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.

    ಮಾಗಡಿ ತಾಲೂಕಿನ ಸುಗ್ಗನಹಳ್ಳಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವೊಂದರಲ್ಲಿ ಕಟ್ಟಾ ಸುಬ್ರಮಣ್ಯಂ ನಾಯ್ಡು ಅವರು ಭಾಗವಹಿಸಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕೆಲವರಿಗೆ ಅಜೀರ್ಣ, ಆಸೂಹೆ, ಅಸಂತೃಪ್ತಿ ಕೂಡ ಬಂದಿದೆ. ಜೆಡಿಎಸ್ ಹಾಗು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಅಲ್ಲಿನ ಅಸಂತೃಪ್ತಿಯಿಂದ ಪಕ್ಷ ಬಿಟ್ಟು ಹೊರ ಬಂದಿದ್ದಾರೆ. ಈ ಹಿಂದೆ ಸಮಾಧಾನವಾಗಿದ್ದ ಆ ಶಾಸಕರುಗಳ ಮೇಲೆ ಯಾವ ಟೀಕೆಯೂ ಇರಲಿಲ್ಲ. ಆದ್ರೆ ಪಕ್ಷ ಬಿಟ್ಟ ಮೇಲೆ ಟೀಕೆ ವ್ಯಕ್ತವಾಗುತ್ತಿದೆ ಎಂದರು. ಬಳಿಕ ಕಾಂಗ್ರೆಸ್ಸಿಗರ ಬಳಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ನಮ್ಮ ಬಳಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ ಎಂದು ಟಾಂಗ್ ಕೊಟ್ಟರು.

    ಪಕ್ಷ ಶಾಸಕರನ್ನು ನಡೆಸಿಕೊಂಡಿರುವ ನಡವಳಿಕೆಯಿಂದ ಅವರಿಗೆ ಅಸಮಧಾನವಾಗಿದೆ. ಹೀಗಾಗಿ ಪಕ್ಷ ಬಿಟ್ಟಿದ್ದಾರೆ. ಆದರೆ ಈಗ ಅಂತಹ ಶಾಸಕರನ್ನು ದುಷ್ಟರು, ಭ್ರಷ್ಟರು, ಭೂತಗಳು ಎಂದು ಸಮಾಜದಲ್ಲಿ ಬಿಂಬಿಸುತ್ತಿರುವುದು ಸರಿಯಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಬಳಿ ಇದ್ದಾಗ ಶಾಸಕರು ಸರಿಯಿದ್ದರು. ಈಗ ಅವರು ಭ್ರಷ್ಟರಾಗಿದ್ದಾರಾ ಎಂದು ಪ್ರಶ್ನಿಸಿ ಅನರ್ಹಗೊಂಡ ಶಾಸಕರ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಅತೃಪ್ತ ಶಾಸಕರು ನಿಮ್ಮನ್ನು ತಿಂದುಬಿಡುತ್ತಾರೆ ಎಂಬ ಕೈ-ದಳ ನಾಯಕರ ಮಾತಿಗೆ ಪ್ರತಿಕ್ರಿಯಿಸಿ, ನಾವೇನು ಬಿರಿಯಾನಿನಾ ತಿಂದು ಬಿಡಲು ಎಂದು ಕಿಡಿಕಾರಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸುಳ್ಳಿನ ಸೌಧ ಕಟ್ಟುತ್ತಿದ್ದಾರೆ. ಅವರ ಈ ಬುದ್ಧಿಯಿಂದಲೇ ಇಂದು ಕಾಂಗ್ರೆಸ್ ಸರ್ವನಾಶವಾಗಿದೆ. ಅತೃಪ್ತ ಶಾಸಕರು ನಮ್ಮ ಬಳಿ ಸಂಪರ್ಕಿಸಿದ್ದರು ಎಂಬುದು ಸುಳ್ಳು ಸುದ್ದಿ ಎಂದು ತಿಳಿಸಿದರು. ಹಾಗೆಯೇ ಅತೃಪ್ತ ಶಾಸಕರನ್ನು ಅನರ್ಹ ಮಾಡಲು ಸ್ಪೀಕರ್ ಗೆ ಹಕ್ಕಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

  • ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇವೆ. ಆ ಅಭ್ಯರ್ಥಿ ರಾಮನಗರ ಜಿಲ್ಲೆಯವರೇ ಆಗಿರುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್‍ಮಟ್ಟದ ಕಾರ್ಯಕರ್ತರ, ಮುಖಂಡರ ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್‍ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ. ಜೆಡಿಎಸ್‍ಗೆ ಬಿಟ್ಟುಕೊಟ್ಟ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ. ಮತ್ತೆ ಕೆಲವು ಕಡೆ ಹೊಂದಾಣಿಕೆಯೇ ಇಲ್ಲ ಎಂದು ಲೇವಡಿ ಮಾಡಿದರು.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಭ್ಯರ್ಥಿಯೇ ಇಲ್ಲ. ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್‍ನ ವಿರೋಧ ವ್ಯಕ್ತವಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿಯು 13 ಸೀಟಿಗಿಂತ ಹೆಚ್ಚು ಗೆಲ್ಲಲ್ಲ ಎಂದು ಈಗಾಗಲೇ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯೇ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಟ್ಟಿ ಬಿಡುಗಡೆಗೂ ಮುನ್ನ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ತಮಗೆ ಸಾಕಷ್ಟು ಕಹಿ ಅನುಭವವಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ಇಂದು ಸಾಯಂಕಾಲ ಇಲ್ಲವೇ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು, ದೇಶವನ್ನು ಮುನ್ನಡೆಸಲು ಅವರೇ ಸಮರ್ಥ ವ್ಯಕ್ತಿ ಎಂದು ಯುವಜನತೆ ಬಯಸುತ್ತಿದ್ದಾರೆ ಎಂದ ಅವರು, ಪಕ್ಷ ಟಿಕೆಟ್ ಯಾರಿಗೆ ಕೊಡುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಪಟ್ಟಿಬಿಡುಗಡೆಯಾದ ಮೇಲೆ ಯಾರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ತಿಳಿಯುತ್ತದೆ ಎಂದರು.