Tag: Katrina

  • ಡೀಪ್‍ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್

    ಡೀಪ್‍ಫೇಕ್ ವಿಡಿಯೋದಲ್ಲಿ ಬಾಲಿವುಡ್ ನಟಿ ಕಾಜೋಲ್

    ಬಾಲಿವುಡ್ ಖ್ಯಾತ ನಟಿ ಕಾಜೋಲ್ (Kajol)ಅವರ ಡೀಪ್‍ಫೇಕ್ ವಿಡಿಯೋ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ, ಕತ್ರಿನಾ (Katrina) ನಂತರ ಮತ್ತೋರ್ವ ನಟಿ ಇಂಥದ್ದೊಂದು ಕುತಂತ್ರಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ಡೀಪ್‍ಫೇಕ್ ವಿಡಿಯೋ ಕಂಡು ನಟಿ ಗರಂ ಆಗಿದ್ದಾರೆ. ಕೂಡಲೇ ದುರುಳರಿಗೆ ಹೆಡೆಮುರಿ ಕಟ್ಟುವಂತೆ ಅವರು ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚೆಚ್ಚು ಇಂತಹ ವಿಡಿಯೋಗಳು ಹರಿದಾಡುತ್ತಿವೆ. ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲದೇ ಆಕ್ರೋಶ ಕೂಡ ಹೊರ ಹಾಕುತ್ತಿದ್ದಾರೆ.

    ಬೆನ್ನುಬಿದ್ದ ದೆಹಲಿ ಪೊಲೀಸ್

    ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ಡೀಪ್‍ಫೇಕ್ (Deepfake) ವೀಡಿಯೋ ವಿಚಾರವಾಗಿ ದೆಹಲಿ (Delhi) ಪೊಲೀಸರು (Police) ಬಿಹಾರ ಮೂಲದ 19 ವರ್ಷದ ಯುವಕನನ್ನು ವಿಚಾರಣೆ ನಡೆಸಿದ್ದಾರೆ.

    ಶಂಕಿತ ಯುವಕ ಮೊದಲು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಅಪ್‍ಲೋಡ್ ಮಾಡಿದ್ದಾನೆ. ಅಲ್ಲದೇ ನಂತರ ಅದನ್ನು ಇತರ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಯುವಕನ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವನ್ನು ಮೊದಲು ಅಪ್‍ಲೋಡ್ ಮಾಡಿದ್ದರಿಂದ ತನಿಖೆಗೆ ಹಾಜರಾಗುವಂತೆ ಯುವಕನಿಗೆ ನೋಟಿಸ್ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಹಾರ ಮೂಲದ ಯುವಕನಿಗೆ ಐಎಫ್‍ಎಸ್‍ಒ ಘಟಕದ ಮುಂದೆ ಹಾಜರಾಗಲು ಮತ್ತು ತನ್ನ ಮೊಬೈಲ್ ಫೋನ್ ತರಲು ಸೂಚಿಸಲಾಗಿತ್ತು. ಎಫ್‍ಐಆರ್ ದಾಖಲಿಸಿದ ಕೂಡಲೇ ಐಎಫ್‍ಎಸ್‍ಒ ಘಟಕವು ಆರೋಪಿಯನ್ನು ಗುರುತಿಸಲು ಯುಆರ್‍ಎಲ್ ಮತ್ತು ಇತರ ವಿವರಗಳನ್ನು ಪಡೆಯಲು ಮೆಟಾಗೆ ಪತ್ರ ಬರೆದಿತ್ತು. ಆ ಮಾಹಿತಿ ಆಧಾರದ ಮೇಲೆ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

     

    ಈ ಪ್ರಕರಣ ಸಂಬಂಧ ನ.10 ಐಪಿಸಿ ಸೆಕ್ಷನ್ 465 ಮತ್ತು 469 (ಗೌರವಕ್ಕೆ ಹಾನಿ ಮಾಡುವ ಉದ್ದೇಶದಿಂದ ನಕಲು ಮಾಡುವುದು) ಮತ್ತು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಸಿ ಮತ್ತು 66ಇ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು.

  • ಟಿಪ್ ಟಿಪ್ ಸಾಂಗ್‍ನಲ್ಲಿ ಕತ್ರಿನಾ ಮಸ್ತ್, ಮಸ್ತ್ ಸ್ಟೆಪ್ಸ್ – ರವೀನಾ ಟಂಡನ್ ಹೇಳಿದ್ದೇನು ಗೊತ್ತಾ?

    ಟಿಪ್ ಟಿಪ್ ಸಾಂಗ್‍ನಲ್ಲಿ ಕತ್ರಿನಾ ಮಸ್ತ್, ಮಸ್ತ್ ಸ್ಟೆಪ್ಸ್ – ರವೀನಾ ಟಂಡನ್ ಹೇಳಿದ್ದೇನು ಗೊತ್ತಾ?

    ಮುಂಬೈ: ಸೂರ್ಯವಂಶಿ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿ ಸಾಂಗ್‍ನಲ್ಲಿ ಕತ್ರಿನಾ ಡ್ಯಾನ್ಸ್ ಮಾಡಿರುವುದನ್ನು ನೋಡಿ ನಟಿ ರವೀನಾ ಟಂಡನ್ ಫಿದಾ ಆಗಿದ್ದಾರೆ.

    ಇತ್ತೀಚೆಗಷ್ಟೇ ಸೂರ್ಯವಂಶಿ ಸಿನಿಮಾ ಬಿಡುಗಡೆಗೊಂಡಿದ್ದು, ಈ ಸಿನಿಮಾದ ಟಿಪ್ ಟಿಪ್ ಸಾಂಗ್‍ನಲ್ಲಿ ಕತ್ರಿನಾ ಕೈಫ್ ಮೈಚಳಿ ಬಿಟ್ಟು ಮಸ್ತ್, ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ ಮತ್ತು ಸಖತ್ ಸೆಕ್ಸಿ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಕತ್ರಿನಾ ಹಾಟ್ ಅವತಾರ ಪಡ್ಡೆ ಹುಡುಗರು ನಿದ್ದೆಗೇಡಿಸುವಂತಿದೆ. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಗೆದ್ದು ಬಂದವರು ತಮ್ಮ ಕಥೆಗಳನ್ನು ಹೇಳಬೇಕು: ಮನಿಷಾ ಕೊಯಿರಾಲಾ

    1994ರಲ್ಲಿ ನಟ ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಅಭಿನಯಿಸಿದ್ದ ಮೊಹ್ರಾ ಸಿನಿಮಾದ ಹಾಡು ಇದಾಗಿದ್ದು, ಈ ಹಾಡು ಅಂದಿನ ದಿನದಲ್ಲಿ ಸೂಪರ್ ಡೂಪರ್ ಹಿಟ್ ಆಗುವುದರ ಜೊತೆಗೆ ಅಕ್ಷಯ್ ಹಾಗೂ ರವೀನಾ ಟಂಡನ್‍ಗೆ ನೇಮ್ ಫ್ರೇಮ್, ಯಶಸ್ಸು ಹಾಗೂ ಕೀರ್ತಿಯನ್ನು ತಂದು ಕೊಟ್ಟಿತ್ತು. ಇದನ್ನೂ ಓದಿ:  ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

    ಇದೀಗ ಈ ಹಾಡನ್ನು ಸೂರ್ಯವಂಶಿ ಸಿನಿಮಾಕ್ಕಾಗಿ ಮರುಸೃಷ್ಟಿಗೊಳಿಸಲಾಗಿದ್ದು, ಈ ಹಾಡನ್ನು ವೀಕ್ಷಿಸಿದ ರವೀನಾ ಟಂಡನ್, ನಿರ್ದೇಶಕ ರೋಹಿತ್ ಶೆಟ್ಟಿ ಅವರಿಗೆ ಕರೆ ಮಾಡಿ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಕತ್ರಿನಾ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ.

    ಈ ಹಿಂದೆ ಅಕ್ಷಯ್ ಕುಮಾರ್ ಹಾಗೂ ಕತ್ರಿನಾ ಕೈಫ್ ಕಾಂಬೀನೇಷನ್‍ನಲ್ಲಿ ಗಳೆ ಲಗ್ ಜಾ, ಶೀಲಾ ಕಿ ಜವಾನಿ ಸಾಂಗ್ ಮೂಡಿ ಬಂದಿತ್ತು. ಇದೀಗ ಮತ್ತೆ ಇವರಿಬ್ಬರ ಕಾಂಬೀನೇಷನ್‍ನಲ್ಲಿಯೇ ಈ ರೋಮ್ಯಾಂಟಿಕ್ ಸಾಂಗ್ ಮೂಡಿಬಂದಿದೆ.

  • ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಫಿಟ್ನೆಸ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಅಲಿಯಾ ಭಟ್ ಸ್ಪೋಟ್ಸ್ ಬ್ರಾ ಧರಿಸಿ ಅದಕ್ಕೆ ಮ್ಯಾಚ್ ಆಗುವಂತಹ ಟೈಟ್ಸ್ ತೊಟ್ಟು ಸೈಡ್ ಲುಕ್‍ನಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಆಲಿಯಾ ಭಟ್ ಸಾಮಾನ್ಯವಾಗಿ ತಮ್ಮ ದಿನಚರಿಯ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

    ಇದೀಗ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ 40 ದಿನದ ಫಿಟ್ನೆಸ್ ಚಾಲೆಂಜ್‍ನನ್ನು ಸ್ವೀಕರಿಸಿದ್ದು, ಅದರಲ್ಲಿ 20 ದಿನ ಪೂರೈಸಿದ್ದಾರೆ. ಹೀಗಾಗಿ ತಮ್ಮ ಫಿಟ್ನೆಸ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, 20 ಮುಗಿದಿದೆ, 20 ಇದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ನಟಿ ಕತ್ರಿನಾ ಕೈಫ್, ಮಲೈಕಾ ಆರೋರಾ ಕಾಮೆಂಟ್ ಮಾಡಿದ್ದು, ಉಹ್ ಉಹ್ ಎಂದು ಕತ್ರಿನಾ ಮಾಡಿರುವ ಕಾಮೆಂಟ್‍ಗೆ ಒಎಂಜಿ ನನಗೆ ಕತ್ರಿನಾರಿಂದ ಅನುಮೋದನೆ ಸಿಕ್ಕಿತು ಎಂದು ಆಲಿಯಾ ಭಟ್ ಮರು ಟ್ವೀಟ್ ಮಾಡಿದ್ದಾರೆ. ಇನ್ನೂ ನಟಿ ಮೈಲಕಾ ಅರೋರಾ ಬೆಂಕಿಯ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಆಲಿಯಾ ಭಟ್ ಹಾಗೂ ರಣಬೀರ್ ಸಿಂಗ್ ಬ್ರಹ್ಮಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಸಿನಿಮಾದ ಬಾಕಿ ಕೆಲಸಗಳು ಭರದಿಂದ ಸಾಗುತ್ತಿದೆ. ಅಲ್ಲದೇ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸಿದ್ದು, ಈ ಎರಡು ಅಲಿಯಾ ಭಟ್ ಅಭಿನಯದ ಬಹುನೀರಿಕ್ಷಿತ ಸಿನಿಮಾವಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

     

    View this post on Instagram

     

    A post shared by Alia Bhatt ☀️ (@aliaabhatt)