Tag: katriguppe

  • ಬೆಂಗಳೂರು ಮನೆಯಲ್ಲಿ ಗೋವಾ ಮದ್ಯ – 5 ಲಕ್ಷ ರೂ. ಮೌಲ್ಯದ 144 ಬಾಟಲಿ ಜಪ್ತಿ

    ಬೆಂಗಳೂರು ಮನೆಯಲ್ಲಿ ಗೋವಾ ಮದ್ಯ – 5 ಲಕ್ಷ ರೂ. ಮೌಲ್ಯದ 144 ಬಾಟಲಿ ಜಪ್ತಿ

    ಬೆಂಗಳೂರು: ನಗರದ ದಕ್ಷಿಣ ವಿಭಾಗ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 5 ಲಕ್ಷ ರೂ. ಮೌಲ್ಯದ 144 ಬಾಟಲಿ ಗೋವಾ (Goa) ಲಿಕ್ಕರ್ ಪತ್ತೆಯಾಗಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಕತ್ರಿಗುಪ್ಪೆ (Katriguppe) ನಿವಾಸಿ ಪುರುಷೋತ್ತಮ್ ಎಂದು ಗುರುತಿಸಲಾಗಿದೆ.

    ಆರೋಪಿ ಗೋವಾದಿಂದ ಕಡಿಮೆ ಬೆಲೆಗೆ ಮದ್ಯ ತರಿಸಿಕೊಳ್ಳುತ್ತಿದ್ದ. ಗೋವಾದಲ್ಲಿರುವ ಅಂಗಡಿಯವರ ಸಂಪರ್ಕದ ಮೇರೆಗೆ ಬೆಂಗಳೂರಿಗೆ ಮದ್ಯ ತರಿಸಿಕೊಳ್ಳುತ್ತಿದ್ದ. ತನಗೆ ಬೇಕಾದಾಗಲೆಲ್ಲಾ ತಿಳಿಸಿ ಬಸ್‌ನಲ್ಲಿ ಮದ್ಯದ ಬಾಟಲ್ ಇಡುವಂತೆ ಹೇಳುತ್ತಿದ್ದ. ಬಳಿಕ ಇಲ್ಲಿಗೆ ಬರುತ್ತಿದ್ದಂತೆ ಇಳಿಸಿಕೊಳ್ಳುತ್ತಿದ್ದ. ನಂತರ ಮನೆಗೆ ತೆಗೆದುಕೊಂಡು ಹೋಗಿ ಸ್ಟಾಕ್ ಮಾಡುತ್ತಿದ್ದ. ಇದನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ.ಇದನ್ನೂ ಓದಿ: ಸತತ 35 ಗಂಟೆಗಳ ಇಡಿ ದಾಳಿ ಅಂತ್ಯ – 2 ದಿನ, 5 ಅಧಿಕಾರಿಗಳಿಂದ ಮಹತ್ವದ ದಾಖಲೆ ಸಂಗ್ರಹ!

    ಅ.27 ರಂದು ಪುರುಷೋತ್ತಮ್ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಬನಶಂಕರಿ ಎರಡನೇ ಹಂತದಲ್ಲಿ ನಿಂತಿದ್ದ. ಆತನ ಚಲನವಲನ ಅಬಕಾರಿ ಅಧಿಕಾರಿಗಳಿಗೆ ಅನುಮಾನ ಹುಟ್ಟಿಸಿತ್ತು. ಈ ವೇಳೆ ಬ್ಯಾಗ್ ತೆಗೆದು ಪರಿಶೀಲಿಸಿದಾಗ ಮದ್ಯದ ಬಾಟಲ್ ಪತ್ತೆಯಾಗಿದೆ. ಬಾಟಲ್ ಮೇಲೆ ಫಾರ್ ಸೇಲ್ ಇನ್ ಗೋವಾ ಓನ್ಲಿ ಎಂದು ನಮೂದಾಗಿದ್ದು ಕಂಡು ಅವುಗಳು ಗೋವಾದಲ್ಲಿ ತಯಾರಿಸಲಾಗಿದ್ದ ಮದ್ಯದ ಬಾಟಲ್ ಎಂದು ತಿಳಿದಿದೆ.

    ಬಳಿಕ ಆತನ ಮೊಬೈಲ್ ಪರಿಶೀಲಿಸಿದಾಗ ಗೋವಾ ರಾಜ್ಯದ ಮದ್ಯದ ಅಂಗಡಿ ಜೊತೆಗಿನ ನಂಟು ಬಯಲಾಗಿದೆ. ಜೊತೆಗೆ ಮದ್ಯ ತರಿಸಿದ್ದ ಬಿಲ್ಲುಗಳು ಕೂಡ ಪತ್ತೆಯಾಗಿದೆ. ನಂತರ ಕತ್ರಿಗುಪ್ಪೆ ಮನೆಗೆ ಕರೆದೊಯ್ದು ಶೋಧಿಸಿದಾಗ ಅಕ್ರಮ ಮದ್ಯದ ಬಾಟಲ್‌ಗಳು ಇರುವುದು ತಿಳಿದುಬಂದಿದೆ. ಮನೆಯಲ್ಲಿದ್ದ ಮದ್ಯದ ಬಾಟಲ್‌ಗಳನ್ನು ನೋಡಿ ಅಬಕಾರಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

    ಸದ್ಯ ಅಬಕಾರಿ ಕಾಯ್ದೆ 1965ರ ಕಲಂ 11, 14, 15, 38(ಎ), 43(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.ಇದನ್ನೂ ಓದಿ: ಬೆಳಕಿನ ಹಬ್ಬ – ಶ್ರೀರಾಮನ ಪುನರಾಗಮನ!

  • ಪ್ರತಿಷ್ಠಿತ ಬಡಾವಣೆಯಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಉಪೇಂದ್ರ

    ಪ್ರತಿಷ್ಠಿತ ಬಡಾವಣೆಯಲ್ಲಿ ಐಷಾರಾಮಿ ಮನೆ ಖರೀದಿಸಿದ ನಟ ಉಪೇಂದ್ರ

    ಗಾಗಲೇ ಬೆಂಗಳೂರಿನ ಕತ್ರಿಗುಪ್ಪೆ (Katriguppe) ಏರಿಯಾದಲ್ಲಿ ಭವ್ಯವಾದ ಬಂಗಲೆ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ (Upendra), ಇದೀಗ ಮತ್ತೊಂದು ಪ್ರತಿಷ್ಠಿತ ಹಾಗೂ ದುಬಾರಿ ಏರಿಯಾದಲ್ಲಿ ಹೊಸ ಮನೆಯೊಂದನ್ನು (New House) ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರದಲ್ಲಿ(Sadashivnagar) ಅವರು ಹೊಸ ಮನೆ ಖರೀದಿಸಿದ್ದಾರೆ. ಈ ಏರಿಯಾದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಗಣ್ಯರ ಮನೆಗಳಿವೆ. ಹಾಗೂ ಅನೇಕ ರಾಜಕಾರಣಿಗಳ ನಿವಾಸಗಳು ಇದೇ ಏರಿಯಾದಲ್ಲಿವೆ.

    ಈಗಾಗಲೇ ಹೊಸ ಮನೆಯ ಗೃಹಪ್ರವೇಶ ಕೂಡ ಆಗಿದ್ದು, ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಹಾಗೂ ಗಣ್ಯರು ಭಾಗಿಯಾಗಿದ್ದಾರೆ. ಸ್ಯಾಂಕಿ ಟ್ಯಾಂಕ್ ಹತ್ತಿರದಲ್ಲೇ ಈ ನಿವಾಸವಿದ್ದು, ಶನಿವಾರ ಅಧಿಕೃತವಾಗಿ ಗೃಹಪ್ರವೇಶ ಮಾಡಿದ್ದಾರಂತೆ ಉಪ್ಪಿ ಮತ್ತು ಪ್ರಿಯಾಂಕಾ (Priyanka Upendra). ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಈ ಮನೆಗೆ ಶಿಫ್ಟ್ ಆಗಲಿದ್ದಾರೆ ರಿಯಲ್ ಸ್ಟಾರ್.

    ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ನಟಿ ಸರೋಜಾ ದೇವಿ ಸೇರಿದಂತೆ ಹಲವಾರು ನಟಿಯರು ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಆ ಫೋಟೋಗಳನ್ನು ಉಪ್ಪಿ ದಂಪತಿ ಹಂಚಿಕೊಂಡಿದ್ದಾರೆ. ಇದೊಂದು ಕುಟುಂಬದ ಕಾರ್ಯಕ್ರಮವಾಗಿದ್ದರಿಂದ ಆಪ್ತರಿಗಷ್ಟೇ ಆಹ್ವಾನ ನೀಡಿದ್ದರಂತೆ ಉಪ್ಪಿ ದಂಪತಿ. ಇದನ್ನೂ ಓದಿ:ಒಂದು ಇಡ್ಲಿ, ಒಂದು ವಡೆ ತಗೊಂಡು ಗಲಾಟೆ ಮಾಡಿದ ರಾಖಿ ಸಾವಂತ್

    2003ರಲ್ಲಿ ಕತ್ರಿಗುಪ್ಪೆ ಮನೆಯನ್ನು ಕಟ್ಟಿಸಿದ್ದ ಉಪೇಂದ್ರ, ಆ ಮನೆಯಲ್ಲೇ ಆಫೀಸು, ಜಿಮ್ ಹೊಂದಿದ್ದರು. ತಂದೆ ತಾಯಿ ಜೊತೆ ಅದೇ ಮನೆಯಲ್ಲೇ ವಾಸವಾಗಿದ್ದರು. ಹಲವು ವರ್ಷಗಳಿಂದ ಈ ಮನೆ ತೊರೆದು ರುಪ್ಪಿ ರೇಸಾರ್ಟ್ ಗೆ ಸ್ಥಳಾಂತರಗೊಳ್ಳಬೇಕು ಎಂಬ ಆಲೋಚನೆ ಮಾಡಿದ್ದರು. ಆದರೆ, ಆ ಯೋಚನೆ ಬಿಟ್ಟು ಸದಾಶಿವ ನಗರಕ್ಕೆ ಶಿಫ್ಟ್ ಆಗುತ್ತಿದ್ದಾರೆ.

  • ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಚಿತ್ರದ ನಿರ್ದೇಶಕ ಪ್ರಖ್ಯಾತ್ ಅರೆಸ್ಟ್

    ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಚಿತ್ರದ ನಿರ್ದೇಶಕ ಪ್ರಖ್ಯಾತ್ ಅರೆಸ್ಟ್

    ಬೆಂಗಳೂರು: ಸ್ನೇಹಿತನಿಂದ ಮನೆ ಪಡೆದು ಆಡಿಷನ್ ಹೆಸರಲ್ಲಿ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ ಕತ್ರಿಗುಪ್ಪೆ ಕಟ್ಟಿಂಗ್ ಶಾಪ್ ಸಿನಿಮಾ ನಿದೇರ್ಶಕನನ್ನು ಬಂಧಿಸಲಾಗಿದೆ.

    ಪ್ರಖ್ಯಾತ್ ಅಲಿಯಾಸ್ ಅಂತೋಣಿ ಪೌನ್ಸಿ ಬಂಧಿತ ನಿರ್ದೇಶಕ. ಸ್ನೇಹಿತ ಪುರುಷೋತ್ತಮ್‍ನಿಂದ ಮನೆ ಪಡೆದಿದ್ದ ಪ್ರಖ್ಯಾತ್ ಅದನ್ನೇ ಹುಡುಗಿಯರ ಅಡ್ಡೆ ಮಾಡಿಕೊಂಡಿದ್ದ. ಇದನ್ನ ಗಮನಿಸಿದ ಪುರುಷೋತ್ತಮ್ ಮನೆ ಖಾಲಿ ಮಾಡುವಂತೆ ಹೇಳಿದ್ರು. ಆಗ ಪ್ರಖ್ಯಾತ್ ಕೆಲ ರೌಡಿಗಳಿಂದ ಪುರುಷೋತ್ತಮ್‍ಗೆ ಬೆದರಿಕೆ ಹಾಕಿಸಿದ್ದ.

    ಈ ಬಗ್ಗೆ ಪುರುಷೋತ್ತಮ್‍ರಿಂದ ದೂರು ಪಡೆದಿದ್ದ ವಿಜಯನಗರ ಪೊಲೀಸರು ಇದೀಗ ಆರೋಪಿ ಪ್ರಖ್ಯಾತ್‍ನನ್ನು ಬಂಧಿಸಿದ್ದಾರೆ.