Tag: Kathmandu

  • ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ನೇಪಾಳದಲ್ಲಿ ಸಿಲುಕಿರುವ ಹುಬ್ಬಳ್ಳಿಯ ಐವರು – ಭಾರತಕ್ಕೆ ಮರಳಲಾಗದೇ ಪರದಾಟ

    ಹುಬ್ಬಳ್ಳಿ: ನೇಪಾಳಕ್ಕೆ (Nepal) ತೀರ್ಥಯಾತ್ರೆಗೆಂದು ತೆರಳಿದ್ದ ಹುಬ್ಬಳ್ಳಿಯ (Hubballi) ಐವರು ಕಠ್ಮಂಡುವಿನಲ್ಲಿ ಸಿಲುಕಿದ್ದು, ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಲು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.

    ಹುಬ್ಬಳ್ಳಿ ಕೇಶ್ವಪುರದ ಗಾಡಸನ್ ಅಪಾರ್ಟ್ಮೆಂಟ್ ನಿವಾಸಿಗಳು ಆ.31 ರಂದು ಖಾಸಗಿ ಕಂಪನಿಯ ಟೂರ್ ಪ್ಯಾಕೇಜ್ ಮೂಲಕ ಹುಬ್ಬಳ್ಳಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿದ್ದರು. ಬಿಂದುಮಾಧವ ಕುಲಕರ್ಣಿ (70), ಸುಂದರಾ ಕುಲಕರ್ಣಿ (65), ವಿದ್ಯಾ ಜೋಶಿ (65), ನರೇಂದ್ರ ಜೋಶಿ (70) ನೇಪಾಳ ಗಲಭೆಗೂ ಮುನ್ನ ಮಾನಸ ಸರೋವರಕ್ಕೆ ತೆರಳಿದ್ದರು. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ನರೇಂದ್ರ ಜೋಶಿ ಅವರಿಗೆ ಸರೋವರದ ಸಮೀಪದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಮಾನಸ ಸರೋವರದ ಬಳಿಯೇ ಮಾಡಿದ್ದ ಉಳಿದವರು, ಅಲ್ಲಿಂದ ಮರು ಪ್ರಯಾಣ ಬೆಳೆಸಿ ಗಲಭೆಗೂ ಮುನ್ನ ನೇಪಾಳದ ಕಠ್ಮಂಡುಗೆ ತಲುಪಿದ್ದರು.

    ಇದೇ ವೇಳೆ ನೇಪಾಳದಲ್ಲಿ ಉಗ್ರ ಹೋರಾಟ ಆರಂಭವಾಗಿತ್ತು. ಹೀಗಾಗಿ, ನೇಪಾಳದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವರಿಗೆ ಸಹಾಯ ಮಾಡಲು ಸತೀಶ್ ಕುಲಕರ್ಣಿ ಪುತ್ರ ಸಚಿನ್ ಕುಲಕರ್ಣಿ ನೇಪಾಳಕ್ಕೆ ತೆರಳಿದ್ದರು. ಇದೀಗ ಸಚಿನ್ ಕುಲಕರ್ಣಿ ಸೇರಿ ಐವರು ನೇಪಾಳದಲ್ಲಿ ಸಿಲುಕಿದ್ದಾರೆ.

    ಸದ್ಯ ಕಠ್ಮಂಡುವಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಶನಿವಾರ ಬೆಂಗಳೂರಿಗೆ ಬರಲು ಫ್ಲೈಟ್‌ ಟಿಕೆಟ್ ಬುಕ್ ಮಾಡಲಾಗಿದೆ. ಗುರುವಾರ ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕಾದರೂ, ಭಾರತಕ್ಕೆ ಮರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಸದ್ಯ ಇಲ್ಲಿ ಕರ್ಪ್ಯೂ ಜಾರಿ ಇರುವುದರಿಂದ ಹೊರಬರಲು ಆಗ್ತಿಲ್ಲ. ಶನಿವಾರ ನಾವೇ ಬೆಂಗಳೂರಿಗೆ ಬರ್ತಿದ್ದೇವೆ ಎಂದು ಸತೀಶ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.

  • ನೇಪಾಳದ ಪ್ರಧಾನಿ ರೇಸ್‌ನಲ್ಲಿ ಬೆಂಗ್ಳೂರು ನಂಟಿನ ಬಲೇನ್ ಶಾ ಹೆಸರು ಮುನ್ನಲೆಗೆ

    ನೇಪಾಳದ ಪ್ರಧಾನಿ ರೇಸ್‌ನಲ್ಲಿ ಬೆಂಗ್ಳೂರು ನಂಟಿನ ಬಲೇನ್ ಶಾ ಹೆಸರು ಮುನ್ನಲೆಗೆ

    ಬೆಂಗಳೂರು: ನೇಪಾಳದಲ್ಲಿ (Nepal) ಸರ್ಕಾರ ಪತನ ಆಗಿದ್ದು, ಮಧ್ಯಂತರ ಸರ್ಕಾರದ ರಚನೆಗೆ ತಯಾರಿ ನಡೆಯುತ್ತಿದೆ. ಪಿಎಂ ರೇಸ್‌ನಲ್ಲಿ ಬಲೇನ್ ಶಾ ಹೆಸರು ಮುನ್ನೆಲೆಗೆ ಬಂದಿದೆ. ಇವರು ಬೆಂಗಳೂರಿನ (Bengaluru) ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಜೆನ್ ಝೀ (Gen Z) ಯುವಕರ ಕಿಚ್ಚಿಗೆ ನೇಪಾಳ ಉದ್ವಿಗ್ನಗೊಂಡಿದೆ. ಬೆಂಕಿಯಲ್ಲಿ ಬೆಂದ ನೇಪಾಳದಲ್ಲಿ ಕೆಪಿ ಶರ್ಮಾ ಓಲಿ ಸರ್ಕಾರ ಪತನಗೊಂಡಿದೆ. ಮಧ್ಯಂತರ ಸರ್ಕಾರ ರಚನೆಯ ತಯಾರಿ ನಡೆಯುತ್ತಿದ್ದು, ಈ ನಡುವೆ ಯುವ ನಾಯಕ ಬಲೇನ್ ಶಾ ಹೆಸರು ಮುನ್ನೆಲೆಗೆ ಬಂದಿದೆ. ಈ ಬಲೇನ್ ಶಾ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ 2016 ರಿಂದ 2018ರ ಅವಧಿಯಲ್ಲಿ ಎರಡು ವರ್ಷ ಎಂಟೆಕ್ ವ್ಯಾಸಂಗ ಮಾಡಿದ್ದಾರೆ. ಪ್ರಧಾನಿ ರೇಸ್‌ನಲ್ಲಿ ಅವರ ಹೆಸರು ಕೇಳಿ ಕಾಲೇಜಿನ ಆಡಳಿತ ಮಂಡಳಿ, ಪಾಠ ಮಾಡಿದ ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ಬಲೇನ್ ಶಾ ಕ್ಲಾಸಿನಲ್ಲಿ ಚುರುಕಾಗಿದ್ದರಂತೆ. ರ‍್ಯಾಪ್ ಮ್ಯೂಸಿಕ್‌ನಲ್ಲಿ ಆಸಕ್ತಿ ಹೊಂದಿದ್ದ ಅವರು, ತರಗತಿಯಲ್ಲಿ 10ಕ್ಕೆ 9.43ರಷ್ಟು ಅಂಕ ಪಡೆದಿದ್ದರಂತೆ. 2018 ರಲ್ಲಿ ಎಂ ಟೆಕ್ ಕೋರ್ಸ್ ಮುಗಿಸಿ, 2022 ರಲ್ಲಿ ಕಂಠ್ಮಂಡು ಮೇಯರ್ ಆಗಿದ್ದಾರೆ. ಈ ವೇಳೆ ಕಾಲೇಜಿನಿಂದ ಅಭಿನಂಧನಾ ಪತ್ರ ಕಳುಹಿಸಲಾಗಿತ್ತಂತೆ. ಕಾಲೇಜಿನಲ್ಲಿ ಸಾಮಾನ್ಯ ವ್ಯಕ್ತಿಯಂತಿದ್ದ. ರಾಜಕೀಯದ ಆಸಕ್ತಿಯೂ ಇರಲಿಲ್ಲ. ಇವತ್ತು ಪ್ರಧಾನಿಯ ರೇಸ್‌ನಲ್ಲಿ ಹೆಸರು ಕೇಳಿದಾಗ ಖುಷಿಯಾಯ್ತು ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ. ಹೆಚ್.ಸಿ ನಾಗರಾಜ್ ಹೇಳಿದ್ದಾರೆ.

    ನೇಪಾಳದ ಮೂವರು ಯುವಕರು ಪ್ರತ್ಯೇಕ ಕೋಟಾದಡಿ ಎಂ ಟೆಕ್‌ಗೆ ಪ್ರವೇಶ ಪಡೆದಿದ್ದರು. ಇದರಲ್ಲಿ ಬಲೇನ್ ಶಾ ಒಬ್ಬರು. ಮೇಯರ್ ಆದ ಬಳಿಕವೂ ಕಾಲೇಜಿನ ಅಲ್ಯೂಮಿನಿ ಮೀಟ್ ಗೆ ಆಹ್ವಾನಿಸಲಾಗಿತ್ತಂತೆ. ಕೆಲಸದ ಒತ್ತಡದಿಂದ ಬರಲು ಆಗಿರಲಿಲ್ಲವಂತೆ. ಈ ಬಾರಿ ಮತ್ತೆ ಆಹ್ವಾನ ಮಾಡ್ತೇವೆ ಎಂದು ಕಾಲೇಜು ಆಡಳಿತ ಮಂಡಳಿ ಹೇಳಿದೆ. ಅದೇನೆ ಇರಲಿ ಎಂಟೊಂಬತ್ತು ವರ್ಷದ ಹಿಂದೆ ನಾಲ್ಕು ಗೋಡೆಗಳ‌ ಮಧ್ಯೆಯ ಬೇಂಚುಗಳ ಮೇಲೆ ಕೂತು ಪಾಠ ಕೇಳ್ತಿದ್ದ ಯುವಕ ನೇಪಾಳದ ಪ್ರಧಾನಿ ಹುದ್ದೆಯ ರೇಸ್‌ನಲ್ಲಿರೋದನ್ನು ನೋಡಿ ಕಾಲೇಜಿನ ಆಡಳಿತ ಮಂಡಳಿ ಹೆಮ್ಮೆಪಟ್ಟಿದೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

  • ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ

    ಕಠ್ಮಂಡು: ನೇಪಾಳದ (Nepal) ರಾಜಧಾನಿ ಕಠ್ಮಂಡುವಿನಲ್ಲಿ (Kathmandu) ಪ್ರತಿಭಟನಾಕಾರರು ಹೋಟೆಲ್‌ಗೆ ಬೆಂಕಿ ಹಚ್ಚಿದ್ದರಿಂದ ಉತ್ತರ ಪ್ರದೇಶದ (Uttar Pradesh) ಗಾಜಿಯಾಬಾದ್‌ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

    ಮೃತ ಮಹಿಖೆಯನ್ನು ರಾಜೇಶ್ ಗೋಲಾ (57) ಎಂದು ಗುರುತಿಸಲಾಗಿದೆ. ಅವರು ತಮ್ಮ ಪತಿ ರಾಮ್‌ವೀರ್ ಸಿಂಗ್ ಗೋಲಾ ಜೊತೆ ಸೆ.7 ರಂದು ನೇಪಾಳಕ್ಕೆ ತೆರಳಿದ್ದರು. ಈ ಸಮಯದಲ್ಲಿ ನೇಪಾಳದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಮನಸ್ಸಿಗೆ ಬಂದಂತೆ ಸಿಕ್ಕಸಿಕ್ಕ ಕಟ್ಟಡಗಳಿಗೆ ಹಾನಿ ಮಾಡಿದ್ದರು. ಅದೇ ರೀತಿ ರಾಮ್‌ವೀರ್‌ ಸಿಂಗ್‌ ಕುಟುಂಬ ತಂಗಿದ್ದ ಹೋಟೆಲ್‌ಗೆ ಸೆ.9 ರಂದು ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    ಹೊತ್ತಿ ಉರಿಯುತ್ತಿದ್ದ ಹೋಟೆಲ್‌ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಗೋಲಾ ದಂಪತಿ ಪರದಾಡಿದ್ದರು. ಈ ವೇಳೆ ರಾಜೇಶ್‌ ಗೋಲಾ ಪತಿಯಿಂದ ಬೇರ್ಪಟ್ಟು, ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದರು. ದುರಾದೃಷ್ಟವಶಾತ್‌ ಅವರು ಸಾವನ್ನಪ್ಪಿದ್ದಾರೆ.

    ನೇಪಾಳದಲ್ಲಿ ನಡೆಯುತ್ತಿರುವ ಯುವಜನರ ದಂಗೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 31ಕ್ಕೆ ಏರಿದೆ. ಶವಗಳನ್ನು ಇರಿಸಲಾಗಿರುವ ತ್ರಿಭುವನ್ ವಿಶ್ವವಿದ್ಯಾಲಯ ಬೋಧನಾ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಪ್ರಕಾರ ಮೃತಪಟ್ಟ 5 ಪುರುಷರು ಮತ್ತು ಒಬ್ಬ ಮಹಿಳೆಯ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಇದಲ್ಲದೇ ನೇಪಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮಂಗಳವಾರ ಮುಚ್ಚಲಾಗಿತ್ತು.

    ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಳ್ಳುವಂತಾಗಿತ್ತು. ಸದ್ಯ ತ್ರಿಭುವನ್ ವಿಮಾನ ನಿಲ್ದಾಣ ಪನರಾರಂಭಗೊಂಡಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ವಿಮಾನ ಕಂಪನಿಗಳು ನೇಪಾಳದಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಕರೆತರಲು ಹೆಚ್ಚುವರಿ ವಿಮಾನಗಳನ್ನ ವ್ಯವಸ್ಥೆ ಮಾಡಿವೆ. ಇದನ್ನೂ ಓದಿ: ನೇಪಾಳ ದಂಗೆ | Gen-Z ನಲ್ಲಿ ಬಿರುಕು – ಮಧ್ಯಂತರ ಪ್ರಧಾನಿ ಹುದ್ದೆಗೆ ಸುಶೀಲಾ ಕರ್ಕಿ Vs ಕುಲ್ಮನ್ ನಡ್ವೆ ಫೈಟ್‌

  • ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    – ಬೆಂಗಳೂರಿನ 50 ಜನರ ಜೊತೆ ನೇಪಾಳ ಪ್ರವಾಸ

    ರಾಮನಗರ: ನೇಪಾಳದಲ್ಲಿ (Nepal) ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪ್ರವಾಸಕ್ಕೆಂದು ತೆರಳಿದ್ದ ರಾಮನಗರದ (Ramanagara) 4 ಮಂದಿ ಪ್ರವಾಸಿಗರು ನೇಪಾಳದಲ್ಲಿ ಸಿಲುಕಿದ್ದಾರೆ.

    ಪ್ರವಾಸಿಗರು ಬೆಂಗಳೂರಿನ 50 ಜನರ ಜೊತೆ ನೇಪಾಳ ಪ್ರವಾಸ ಕೈಗೊಂಡಿದ್ದರು. ನೇಪಾಳದ ಕಠ್ಮಂಡುವಿನ ಹೋಟೆಲ್‌ನಲ್ಲಿ ಕರ್ನಾಟಕದ 50 ಮಂದಿ ಪ್ರವಾಸಿಗರು ಸಿಲುಕಿದ್ದಾರೆ. ಇಂದು ಕಠ್ಮಂಡುವಿನಿಂದ ಜನಕ್ ಪುರ್‌ದ ಡಿಯೊಗರ್ ವಿಮಾನ ನಿಲ್ದಾಣಕ್ಕೆ ಪ್ರವಾಸಿಗರು ಪ್ರಯಾಣಿಸಲಿದ್ದಾರೆ. ಇದನ್ನೂ ಓದಿ: ರಾಮನನ್ನು ವಿರೋಧಿಸಿದ್ದಕ್ಕೆ ಅಧಿಕಾರ ಹೋಯ್ತು: ಭಾರತದ ಮೇಲೆ ಗೂಬೆ ಕೂರಿಸಿದ ನೇಪಾಳದ ಮಾಜಿ ಪ್ರಧಾನಿ

    ಸೆ. 1ರಂದು ಬೆಂಗಳೂರಿನ ಏರ್‌ಪೋರ್ಟ್‌ನಿಂದ ಪ್ರವಾಸಿಗರು ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದರು. 13 ದಿನಗಳ ಪ್ರವಾಸಕ್ಕೆಂದು ತೆರಳಿದ್ದ ಕನ್ನಡಿಗರು, ಬೆಂಗಳೂರಿಂದ ವಾರಣಾಸಿ, ಅಯೋಧ್ಯೆ ಬಳಿಕ ನೇಪಾಳ ಬಾರ್ಡರ್ ತಲುಪಿದ್ದರು. ನೇಪಾಳದ ಸೋನಾಲಿ ಬಾರ್ಡರ್‌ಗೆ ತಲುಪಿ ಸೆ.8ರಂದು ಪೊಕ್ರಾದಿಂದ ಕಠ್ಮಂಡು ಕಡೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಮನೋಕಾಮನಾ ದೇವಿ ದರ್ಶನ ಮುಗಿಸಿ ಹೊರಟಾಗ ಅಲ್ಲಿನ ಗಲಾಟೆ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಕಠ್ಮಂಡುವಿನ ಪ್ರೈಮ್‌ಶೂಟ್ ಹೋಟೆಲ್‌ನಲ್ಲಿ ಕನ್ನಡಿಗರು ವಾಸ್ತವ್ಯ ಹೂಡಿದ್ದಾರೆ. ಕಠ್ಮಂಡುವಿನ ಪಶುಪತಿನಾಥ ದೇವರ ದರ್ಶನ ಪಡೆದು ಹೊರ ಬರುವಾಗ ಗಲಾಟೆ ಆರಂಭವಾಗಿದೆ. ಸೆ.9ರಂದು 11 ಗಂಟೆಗೆ ಗಲಾಟೆ ಆರಂಭವಾಗಿದ್ದು, ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಪರಿಸ್ಥಿತಿ ಸುಧಾರಿಸುತ್ತಿದ್ದು. ಸೆ.13ರಂದು ಪ್ರವಾಸಿಗರು ವಾಪಸ್ ಆಗಲಿದ್ದಾರೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

  • ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ನೇಪಾಳ ಹಿಂಸಾಚಾರಕ್ಕೆ ಸ್ಥಗಿತಗೊಂಡಿದ್ದ ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಓಪನ್

    ಕಠ್ಮಂಡು: ನೇಪಾಳದಲ್ಲಿ (Nepal) ಹಿಂಸಾತ್ಮಕ ಪ್ರತಿಭಟನೆಯು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ಕಠ್ಮಂಡುವಿನ (Kathmandu) ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (Tribhuvan International Airport) ಬುಧವಾರ ಮತ್ತೆ ತೆರಯಲಾಗಿದೆ.

    ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭದ್ರತಾ ಸಮಿತಿ ಸಭೆಯ ನಿರ್ಧಾರಕ್ಕೆ ಅನುಗುಣವಾಗಿ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಸ್ಥಗಿತಗೊಳಿಸಲಾದ ವಿಮಾನಯಾನ ಸೇವೆಗಳನ್ನು ಈಗ ತೆರೆಯಲಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ವಿಮಾನದ ಮಾಹಿತಿಗಾಗಿ ತಮ್ಮ ವಿಮಾನಯಾನ ಕಂಪನಿಗಳನ್ನು ಸಂಪರ್ಕಿಸಿ. ಅಲ್ಲದೇ ಅಧಿಕೃತ ವಿಮಾನಯಾನದ ಟಿಕೆಟ್‌ಗಳು ಮತ್ತು ಅಗತ್ಯ ದಾಖಲೆಗಳನ್ನು ತರುವಂತೆ ವಿನಂತಿಸಲಾಗಿದೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ನೇಪಾಳದ 18 ಜಿಲ್ಲೆಗಳ ಜೈಲಿನಿಂದ 6 ಸಾವಿರಕ್ಕೂ ಹೆಚ್ಚು ಕೈದಿಗಳು ಪರಾರಿ

    ಹಿಂಸಾತ್ಮಕ ಪ್ರತಿಭಟನೆಗೆ ತ್ರಿಭುವನ್ ಏರ್‌ಪೋರ್ಟ್ ಅನ್ನು ಬಂದ್ ಮಾಡಿದ್ದರಿಂದ ದೆಹಲಿಯಿಂದ ತೆರಳಬೇಕಿದ್ದ ಏರ್ ಇಂಡಿಯಾ, ಇಂಡಿಗೋ ಹಾಗೂ ನೇಪಾಳ ಏರ್‌ಲೈನ್ಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ನೇಪಾಳದಲ್ಲಿ ಸೋಶಿಯಲ್ ಮೀಡಿಯಾಗಳನ್ನು ನಿಷೇಧಿಸಿದ್ದರಿಂದ ಅಲ್ಲಿನ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿ 19ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ನೇಪಾಳ ಸೇನೆಯು ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿತ್ತು.

    ಪ್ರತಿಭಟನಾಕಾರರು ರೊಚ್ಚಿಗೆದ್ದು ರಾಜಕೀಯ ನಾಯಕರ ಮನೆಗಳನ್ನು ಸುಟ್ಟುಹಾಕಿದ ಬೆನ್ನಲ್ಲೇ ಸೇನೆಯು ಸರ್ಕಾರದ ಸಚಿವಾಲಯ ಕಟ್ಟಡ `ಸಿಂಹ ದರ್ಬಾರ್’ (Singha Durbar) ಅನ್ನು ತನ್ನ ನಿಯಂತ್ರಣಕ್ಕೆ ಪಡೆದಿತ್ತು. ಸೇನೆಯು ಮಧ್ಯೆ ಪ್ರವೇಶಿಸಿದ ಬೆನ್ನಲ್ಲೇ ಇದೀಗ ನೇಪಾಳ ಸಹಜ ಸ್ಥಿತಿಗೆ ಮರಳಿದೆ.

  • ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ: ಸಿಎಂ

    ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ: ಸಿಎಂ

    ಬೆಂಗಳೂರು: ನೇಪಾಳದಲ್ಲಿ (Nepal) ಸಿಲುಕಿರುವ ಕನ್ನಡಿಗರು (Kannadigas) ಸುರಕ್ಷಿತವಾಗಿ ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟಪಡಿಸಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಸಿಎಂ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ದೆಹಲಿಯ ಕರ್ನಾಟಕ ಭವನದ ನಿವಾಸಿ ಆಯುಕ್ತರು ವಿವಿಧ ತಂಡಗಳಲ್ಲಿ ಇರುವ ಕನ್ನಡಿಗರ ಸಂಪರ್ಕದಲ್ಲಿದ್ದಾರೆ ಎಂದು ಅಧಿಕೃತವಾಗಿ ಹೇಳಿದ್ದಾರೆ. ಇದನ್ನೂ ಓದಿ: Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    ರಾಜ್ಯ ಸರ್ಕಾರದ ಅಧಿಕಾರಿಗಳು ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಮುಖ್ಯಮಂತ್ರಿಗಳ ಸೂಚನೆ ಬಳಿಕ ಮುಖ್ಯಕಾರ್ಯದರ್ಶಿ ನಿರಂತರವಾಗಿ ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ

  • Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    Nepal | 120 ವರ್ಷಗಳಷ್ಟು ಹಳೆಯದಾದ, ಏಷ್ಯಾದ ಅತಿದೊಡ್ಡ ಅರಮನೆ ʻಸಿಂಹ ದರ್ಬಾರ್‌ʼ ಧಗಧಗ

    – ನೇಪಾಳದ ಆಡಳಿತ ವಹಿಸಿಕೊಂಡ ಸೇನೆ
    – ಅಧ್ಯಕ್ಷ, ಪ್ರಧಾನಿ, ಸಂಸತ್‌ಗೆ ದಾಳಿಯಿಟ್ಟು ಹಿಂಸಾಚಾರ

    ಕಠ್ಮಂಡು: ಭಾರತದ ನೆರೆಯ ರಾಷ್ಟ್ರ ನೇಪಾಳ (Nepal) ಯುವ ದಂಗೆಗೆ ಹೊತ್ತಿ ಉರಿಯುತ್ತಿದೆ. ಸತತ 3ನೇ ದಿನವೂ ನೇಪಾಳ ಕುದಿಯುತ್ತಿದೆ. ಆಂತರ್ಯುದ್ಧಕ್ಕೆ ಶ್ರೀಲಂಕಾ, ಬಾಂಗ್ಲಾದೇಶದಂತೆ ನೇಪಾಳವೂ ಬದಲಾಗಿದೆ. ರಾಜಧಾನಿ ಕಠ್ಮಂಡುವಿನಲ್ಲಿ (Kathmandu) ಭಾರೀ ಪ್ರತಿಭಟನೆ, ಯುವಕರ ಕೋಪತಾಪಕ್ಕೆ ನೇಪಾಳದ ಓಲಿ ಸರ್ಕಾರ ಮಂಡಿಯೂರಿದೆ.

    ಭುಗಿಲೆದ್ದ ʻಜೆನ್ ಝಡ್‌ʼ ರಣಕೋಪಕ್ಕೆ ಕೆಪಿ ಶರ್ಮಾ ಓಲಿ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿದ್ದಾರೆ. ಅಧ್ಯಕ್ಷ ರಾಮಚಂದ್ರ ಪೌಡೆಲ್ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾ ನಿಷೇಧ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ನಿಷೇಧ ಆದೇಶವನ್ನು ನಿನ್ನೆ ರಾತ್ರಿಯೇ ವಾಪಸ್ ಪಡೆದಿದ್ದರೂ, ಹಿಂಸಾಚಾರ ತಣ್ಣಗಾಗಿಲ್ಲ. ಪ್ರಧಾನಿ ಕೆ.ಪಿ ಶರ್ಮಾ ಓಲಿ ರಾಜೀನಾಮೆ ಯುವಕರು ಪಟ್ಟು ಹಿಡಿದು ಇಂದು ಕೂಡ ಗಲಭೆ ಸೃಷ್ಟಿಸಿದ್ರು. ಕಠ್ಮಂಡುವಿನಲ್ಲಿ ಕರ್ಫ್ಯೂ ಮೀರಿ ಯುವಕರು ದಂಗೆ ಎದ್ರು. ಇದನ್ನೂ ಓದಿ: ನೇಪಾಳ ಧಗ ಧಗ – ಉದ್ರಿಕ್ತರಿಂದ ಮನೆಗೆ ಬೆಂಕಿ, ಮಾಜಿ ಪ್ರಧಾನಿ ಪತ್ನಿ ಸಾವು

    ಅಧ್ಯಕ್ಷರ ಭವನ, ಪ್ರಧಾನಿ ನಿವಾಸ, ಸಂಸತ್ ಭವನ, ಮಾಜಿ ಪಿಎಂ ಪ್ರಚಂಡ್ ಮನೆ, ಸಚಿವರ ನಿವಾಸಗಳನ್ನ ಗುರಿಯಾಗಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಇದೇ ವೇಳೆ ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತಿದ್ದ ಏಷ್ಯಾದ ಅತಿದೊಡ್ಡ ಅರಮನೆ (Asias Largest Palace) ʻಸಿಂಹ ದರ್ಬಾರ್‌ʼಗೂ (Singha Durbar) ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಅರಮನೆ ಧಗಧಗಿಸಿದ್ದು, ಭಾರೀ ಪ್ರಮಾಣದ ಸಂಪತ್ತು ನಷ್ಟವಾಗಿದೆ. ಇದನ್ನೂ ಓದಿ: ನೇಪಾಳ ಧಗ ಧಗ – ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವಂತೆ ಸಿಎಂ ಸೂಚನೆ

    120 ವರ್ಷಗಳಷ್ಟು ಹಳೆಯದಾದ ಅರಮನೆ ಧಗಧಗ
    ಹೊಸ ವಿಡಿಯೋಗಳು ವೈರಲ್‌ ಆಗಿದ್ದು, ಸುಮಾರು 120 ವರ್ಷಗಳ ಇತಿಹಾಸ ಹೊಂದಿರುವ ಹಾಗೂ ಏಷ್ಯಾದ ಅತಿದೊಡ್ಡ ಅರಮನೆಯಾದ ʻಸಿಂಹ ದರ್ಬಾರ್‌ʼಗೂ ಬೆಂಕಿ ಹಚ್ಚಿದ್ದಾರೆ. 1903ರಲ್ಲಿ ನೇಪಾಳದ ಪ್ರಧಾನಿಯ ಅಧಿಕೃತ ನಿವಾಸವಾಗಿ ಈ ಅರಮನೆಯನ್ನ ನಿರ್ಮಿಸಲಾಗಿತ್ತು. ಬಳಿಕ ಐತಿಹಾಸಿಕ ಅರಮನೆಯಾಗಿ ಗುರುತಿಸಿಕೊಂಡಿದ್ದ ಈ ಅರಮನೆಯನ್ನ ಪ್ರವಾಸಿ ತಾಣವಾಗಿಯೂ ಮಾಡಲಾಗಿತ್ತು. ಇದೀಗ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದ್ದಲ್ಲದೇ ಇದ್ದಬದ್ದ ವಸ್ತುಗಳೆಲ್ಲವನ್ನು ಲೂಟಿ ಮಾಡಿದೆ. ಇದನ್ನೂ ಓದಿ: Video Viral | ಪ್ರೆಸ್‌ ಮೀಟ್‌ ನಡೆಯುತ್ತಿದ್ದಾಗಲೇ ಕುಸಿದು ಬಿದ್ದ ಸ್ವೀಡನ್‌ನ ನೂತನ ಆರೋಗ್ಯ ಸಚಿವೆ

    ನೇಪಾಳದಲ್ಲಿ ಅರಾಜಕತೆ ಸೃಷ್ಟಿಗೆ ಕಾರಣವೇನು?
    * ಸಾಮಾಜಿಕ ಜಾಲತಾಣಗಳ ನಿರ್ಬಂಧ ಹೋರಾಟ ನೆಪವಷ್ಟೇ
    * ಕೆಪಿ ಶರ್ಮಾ ಓಲಿ ಸಮ್ಮಿಶ್ರ ಸರ್ಕಾರ ವಿರುದ್ಧ ಇದ್ದ ಅಸಮಾಧಾನ
    * ಭ್ರಷ್ಟಾಚಾರ, ಪಾರದರ್ಶಕತೆ ಕೊರತೆ ಆರೋಪ
    * ಯುವಕರಿಗೆ ಉದ್ಯೋಗಾವಕಾಶಗಳ ಕೊರತೆ
    * ಆರ್ಥಿಕ ಅಭಿವೃದ್ಧಿಯಲ್ಲಿನ ಅಸಮಾನತೆ ಬಗ್ಗೆ ಟೀಕೆ

    ನೇಪಾಳದ ಆಡಳಿತ ವಹಿಸಿಕೊಂಡ ಸೇನೆ
    ಇನ್ನೂ ನೇಪಾಳದಲ್ಲಿ ಮೂರನೇ ದಿನವೂ ಪ್ರತಿಭಟನೆ ನಿಲ್ಲದ ಹಿನ್ನೆಲೆ ಸೇನೆಯು ಆಡಳಿತವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸೇನಾ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಶಿಗ್ಡೆಲ್ ಆಡಳಿತ ವಹಿಸಿಕೊಂಡಿದ್ದಾರೆ. ಹೊಸ ಸರ್ಕಾರ ರಚನೆಯಾಗುವವರೆಗೆ ಅಶೋಕ್ ರಾಜ್ ಶಿಗ್ಡೆಲ್ ನೇತೃತ್ವದಲ್ಲೇ ಆಡಳಿತ ನಡೆಯಲಿದೆ. ನೇಪಾಳದ ಸ್ವಾತಂತ್ರ್ಯ, ಸಾರ್ವಭೌಮತ್ವ, ರಾಷ್ಟ್ರೀಯ ಏಕತೆ, ನೇಪಾಳಿಗರ ಸುರಕ್ಷತೆ ಕಾಪಾಡಲು ಬದ್ಧ ಅಂತ ಅಶೋಕ್‌ ರಾಜ್‌ ಶಿಗ್ಡೆಲ್ ಹೇಳಿದ್ದಾರೆ.

  • ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ  ವಿಮಾನ – ಏರ್‌ ಇಂಡಿಯಾ, ಇಂಡಿಗೋ ಹಾರಾಟ ರದ್ದು

    ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ ವಿಮಾನ – ಏರ್‌ ಇಂಡಿಯಾ, ಇಂಡಿಗೋ ಹಾರಾಟ ರದ್ದು

    – ಭಾರತೀಯರಿಗೆ ಮನೆಯಿಂದ ಹೊರಬರದಂತೆ ಕೇಂದ್ರದ ಎಚ್ಚರಿಕೆ

    ನವದೆಹಲಿ: ನೇಪಾಳದಲ್ಲಿ (Nepal) ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಕಠ್ಮಂಡುವಿನ (Kathmandu) ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಇದರಿಂದಾಗಿ ದೆಹಲಿಯಿಂದ ತೆರಳಬೇಕಿದ್ದ ಏರ್‌ ಇಂಡಿಯಾ (Air India), ಇಂಡಿಗೋ (IndiGo) ಹಾಗೂ ನೇಪಾಳ ಏರ್‌ಲೈನ್ಸ್‌ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

    ನೇಪಾಳದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದ್ದಕ್ಕೆ ಜನ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, 19ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಕಠ್ಮಂಡುವಿನಲ್ಲಿ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ-ಕಠ್ಮಂಡು ಮಾರ್ಗದಲ್ಲಿ ಕಾರ್ಯನಿರ್ವಹಿಸುವ AI2231/2232, AI2219/2220, AI217/218 ಮತ್ತು AI211/212 ವಿಮಾನಗಳನ್ನು ಇಂದು (ಸೆ.9) ರದ್ದುಗೊಳಿಸಲಾಗಿದೆ. ಏನಾದರೂ ಬದಲಾವಣೆಗಳಾದರೆ ಮಾಹಿತಿ ಹಂಚಿಕೊಳ್ಳುವುದಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ. ಇದನ್ನೂ ಓದಿ: ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ

    ಇಂದು ವಿಮಾನ ಕಠ್ಮಂಡುವಿಗೆ ತೆರಳಿದ್ದ ಏರ್‌ ಇಂಡಿಯಾ ವಿಮಾನ, ನಿಲ್ದಾಣದ ಸಮೀಪ ಹೊಗೆ ಕಂಡುಬಂದ ಕಾರಣ ದೆಹಲಿಗೆ ವಾಪಸ್‌ ಆಗಿತ್ತು ಎಂದು ಮೂಲಗಳು ತಿಳಿಸಿವೆ. ದೆಹಲಿ ಮತ್ತು ಕಠ್ಮಂಡು ನಡುವೆ ದಿನಕ್ಕೆ ಆರು ಏರ್ ಇಂಡಿಯಾ ವಿಮಾನಗಳು ಸಂಚರಿಸುತ್ತವೆ.

    ಭಾರತ ನೇಪಾಳ ಗಡಿಯಲ್ಲಿ ಬಿಗಿ ಭದ್ರತೆ
    ಹಿಂಸಾಚಾರ ಹೆಚ್ಚಾಗುತ್ತಿದ್ದಂತೆ, ನೇಪಾಳದಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಅನಗತ್ಯವಾಗಿ ಹೊರಗೆ ಬರದಂತೆ ಸಲಹೆ ನೀಡಿದೆ. ಸರ್ಕಾರದ ಸೂಚನೆಗಳನ್ನು ಪಾಲಿಸಿ ಎಂದು ಸೂಚನೆ ನೀಡಿದೆ. ಇನ್ನೂ ಈ ಹಿಂಸಾಚಾರದಿಂದ ಪಶ್ಚಿಮ ಬಂಗಾಳದ ಬಳಿಯ ಪಣಿಟಾಂಕಿಯಲ್ಲಿ ಭಾರತ-ನೇಪಾಳ ಗಡಿಯಲ್ಲಿ ಅಶಾಂತಿ ಉಂಟಾಗಬಹುದೆಂದು ವರದಿಯಾಗಿದೆ. ಈ ಹಿನ್ನೆಲೆ ಗಡಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

    ನೇಪಾಳದಲ್ಲಿ (Nepal) ಯುವ ಜನತೆಯ ಪ್ರತಿಭಟನೆ (Protest) ತೀವ್ರಗೊಂಡಿದ್ದು ಪ್ರಧಾನಿ ನಿವಾಸಕ್ಕೆ ಬೆಂಕಿ ಇಟ್ಟಿದ್ದಾರೆ. ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್ ಪಡೆದರೂ ಹೋರಾಟಗಾರರು ಪ್ರಧಾನಿ ಕೆ.ಪಿ. ಶರ್ಮಾ ಓಲಿ (KP Sharma Oli) ರಾಜೀನಾಮೆಗೆ ಬಿಗಿಪಟ್ಟು ಹಿಡಿದಿದ್ದರು. ಬಿಗಿಪಟ್ಟು ಹಿಡಿದ ಬೆನ್ನಲ್ಲೇ ಕೆ.ಪಿ. ಶರ್ಮಾ ಓಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದನ್ನೂ ಓದಿ:  ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

  • ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

    ಪ್ರತಿಭಟನೆಯ ಬೆನ್ನಲ್ಲೇ ನೇಪಾಳದಲ್ಲಿ ಸಾಮಾಜಿಕ ಜಾಲತಾಣ ನಿಷೇಧ ವಾಪಸ್

    ಕಠ್ಮಂಡು: ನೇಪಾಳದಲ್ಲಿ (Nepal) ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿ 26 ಸಾಮಾಜಿಕ ಜಾಲತಾಣಗಳ (Social Media) ಮೇಲೆ ಅಲ್ಲಿನ ಸರ್ಕಾರ ಹೇರಿದ ನಿರ್ಬಂಧವನ್ನು ಹಿಂದಕ್ಕೆ ಪಡೆದಿದೆ. ನಿಷೇಧವನ್ನು ಹಿಂಪಡೆಯುವಂತೆ ಭಾರೀ ಪ್ರತಭಟನೆ ನಡೆದ ಬೆನ್ನಲ್ಲೇ ಸರ್ಕಾರ ಈ ಘೋಷಣೆ ಮಾಡಿದೆ.

    ಸಚಿವ ಸಂಪುಟದ ತುರ್ತು ಸಭೆ ಕರೆದು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧವನ್ನು ವಾಪಾಸ್ ಪಡೆಯಲಾಗಿದೆ. ಇನ್ನು ಮುಂದೆ ಎಂದಿನಂತೆ ಸೋಷಿಯಲ್ ಮೀಡಿಯಾ ಕಾರ್ಯನಿರ್ವಹಿಸುತ್ತದೆ. ಅಲ್ಲದೇ ಈ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ನೇಪಾಳದ ಸಂವಹನ, ಮಾಹಿತಿ ಮತ್ತು ಪ್ರಸಾರ ಸಚಿವ ಪೃಥ್ವಿ ಸುಬ್ಬಾ ಗುರುಂಗ್ (Prithvi Subba Gurung) ತಿಳಿಸಿದ್ದಾರೆ. ಇದನ್ನೂ ಓದಿ: ನೇಪಾಳದಲ್ಲಿ ಫೇಸ್‌ಬುಕ್‌, ಯೂಟ್ಯೂಬ್‌, ಎಕ್ಸ್‌ ನಿಷೇಧ – ಸರ್ಕಾರದ ವಿರುದ್ಧ ಸಿಡಿದೆದ್ದ ಜನರು; ಹಿಂಸಾಚಾರಕ್ಕೆ 9 ಬಲಿ

    ನೇಪಾಳ ಸರ್ಕಾರವು ಯೂಟ್ಯೂಬ್, ಫೇಸ್‌ಬುಕ್, ಎಕ್ಸ್ ಸೇರಿದಂತೆ 26 ಸಾಮಾಜಿಕ ತಾಣಗಳ ಮೇಲೆ ನಿಷೇಧ ಹೇರಿತ್ತು. ಸಾಮಾಜಿಕ ಜಾಲತಾಣಗಳ ನೋಂದಣಿ ಕಡ್ಡಾಯ ಎಂಬ ನಿರ್ಧಾರವನ್ನು ಸಚಿವ ಸಂಪುಟದಲ್ಲಿ ತೆಗೆದುಕೊಂಡಿತ್ತು. ಆದರೆ ಯಾವುದೇ ಸಾಮಾಜಿಕ ಜಾಲತಾಣಗಳು ನೋಂದಣಿಯಾಗದ ಹಿನ್ನೆಲೆ ನೇಪಾಳ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು.

    ಸರ್ಕಾರದ ಈ ನಿರ್ಧಾರದ ವಿರುದ್ಧ ಅಲ್ಲಿನ ಜನರು ಬೃಹತ್ ಪ್ರತಿಭಟನೆಯನ್ನು ನಡೆಸಿದ್ದರು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪ್ರತಿಭಟನಾಕಾರರ ಆಕ್ರೋಶ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ನೇಪಾಳ ಸರ್ಕಾರ ಈ ನಿಷೇಧವನ್ನು ವಾಪಾಸ್ ಪಡೆದಿದೆ.

  • ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ

    ನೇಪಾಳದ ಹೆದ್ದಾರಿಯಲ್ಲಿ ಭೂಕುಸಿತ – ಬಸ್‍ಗಳಲ್ಲಿದ್ದ 6 ಮಂದಿ ಭಾರತೀಯರು ಸೇರಿ 65 ಪ್ರಯಾಣಿಕರು ಕಣ್ಮರೆ

    ಕಾಠ್ಮಂಡು: ಮಧ್ಯ ನೇಪಾಳದ (Nepal) ಮದನ್-ಆಶ್ರಿತ್ ಹೆದ್ದಾರಿಯಲ್ಲಿ ಭೂಕುಸಿತ (Landslide) ಸಂಭವಿಸಿ 2 ಬಸ್‍ಗಳು ತ್ರಿಶೂಲಿ ನದಿಗೆ ಉರುಳಿ ಬಿದ್ದಿವೆ. ಬಸ್‍ನಲ್ಲಿದ್ದ 6 ಭಾರತೀಯರು ಸೇರಿದಂತೆ ಸುಮಾರು 65 ಪ್ರಯಾಣಿಕರು ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಸ್‍ಗಳು ನದಿಯಲ್ಲಿ ಮುಳುಗಿರುವುದರಿಂದ ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ ಬೆಳಗಿನ ಜಾವ 3:30 ರ ಸುಮಾರಿಗೆ ಈ ಭೂಕುಸಿತ ಸಂಭವಿಸಿದೆ. ಈ ವೇಳೆ ಎರಡೂ ಬಸ್‍ಗಳು ನದಿಗೆ ಉರುಳಿ ಬಿದ್ದಿವೆ. ಪರಿಣಾಮ ಇಬ್ಬರು ಬಸ್ ಚಾಲಕರು ಸೇರಿದಂತೆ ಒಟ್ಟು 65 ಜನ ಈ ದುರಂತದಲ್ಲಿ ಕಣ್ಮರೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎರಡೂ ಬಸ್‍ಗಳು ಕಠ್ಮಂಡುವಿನಿಂದ ರೌತಹತ್‍ನ ಗೌರ್‍ಗೆ ತೆರಳುತ್ತಿದ್ದವು. ಒಂದು ಬಸ್‍ನಲ್ಲಿ 24 ಜನ ಮತ್ತು ಇನ್ನೊಂದು ಬಸ್‍ನಲ್ಲಿ 41 ಜನ ಪ್ರಯಾಣಿಸುತ್ತಿದ್ದರು. ಘಟನಾ ಸ್ಥಳದಲ್ಲಿದ್ದು ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೇಪಾಳದಲ್ಲಿ ತೀವ್ರ ಮಳೆಯಿಂದಾಗಿ ಕಾಠ್ಮಂಡುವಿನಿಂದ (Kathmandu) ಚಿತ್ವಾನ್‍ನ ಭರತ್‍ಪುರಕ್ಕೆ ತೆರಳಲಿರುವ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.