Tag: Katera

  • Katera: ದರ್ಶನ್‌ಗೆ ಶುಭಕೋರಲು 460 ಕಿ.ಮೀ ಪಾದಯಾತ್ರೆ ಹೊರಟ ಅಭಿಮಾನಿ

    Katera: ದರ್ಶನ್‌ಗೆ ಶುಭಕೋರಲು 460 ಕಿ.ಮೀ ಪಾದಯಾತ್ರೆ ಹೊರಟ ಅಭಿಮಾನಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಹುಟ್ಟುಹಬ್ಬದಲ್ಲಿ ಭಾಗವಹಿಸಲು ಸುಮಾರು 460 ಕಿ.ಮೀ ಪಾದಯಾತ್ರೆ ಹೊರಟಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರಗುಂಟಾದಿಂದ ಬೆಂಗಳೂರಿಗೆ ದರ್ಶನ್ ಅಭಿಮಾನಿ (Fan) ವೀರಭದ್ರ ಪಾದಯಾತ್ರೆ ಮಾಡುತ್ತಿದ್ದಾರೆ.

    ಲಿಂಗಸುಗೂರು ತಾಲೂಕಿನ ಗೌಡೂರು ಗ್ರಾಮದ ದರ್ಶನ್ ಅಭಿಮಾನಿ ವೀರಭದ್ರ ‘ಕಾಟೇರ’ (Katera Film) ಸಿನಿಮಾ ಸಕ್ಸಸ್ ಆಗಲಿ, ಅಂತ ಈ ಹಿಂದೆ ಗುರಗುಂಟಾ ಅಮರೇಶ್ವರ ದೇವರಿಗೆ ಹರಕೆ ಹೊತ್ತಿದ್ದ ಹರಕೆ ತೀರಿಸಲು ಈಗ ಪಾದಯಾತ್ರೆ ಹೊರಟಿದ್ದಾರೆ. ದರ್ಶನ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತ ಅಮರೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಪೂಜೆ ನೆರವೇರಿಸಿ ಪಾದಯಾತ್ರೆ ಆರಂಭಿಸಿದ್ದಾನೆ.

    ಈಗಾಗಲೇ ಬದ್ರಿ ಬಳ್ಳಾರಿ ದಾಟಿದ್ದು, ತುಮಕೂರು ಮಾರ್ಗವಾಗಿ ತೆರಳಿ ಫೆ.16ರಂದು ದರ್ಶನ ಹುಟ್ಟುಹಬ್ಬದ ದಿನ ಅವರ ಮನೆಗೆ ತೆರಳಿ ಕೇಕ್ ಕತ್ತರಿಸುವ ಆಸೆ ಇಟ್ಟುಕೊಂಡಿದ್ದಾನೆ. ಮಾರ್ಗ ಮಧ್ಯೆ ದರ್ಶನ ಅಭಿಮಾನಿಗಳು ಶುಭಾಶಯ ಕೋರಿ ಪಾದಯಾತ್ರೆ ಯಶಸ್ವಿಯಾಗಲಿ ಅಂತ ಹಾರೈಸಿದ್ದಾರೆ. ಇದನ್ನೂ ಓದಿ:Devara: ಜ್ಯೂ.ಎನ್‌ಟಿಆರ್ ಚಿತ್ರಕ್ಕೆ ಮರಾಠಿ ನಟಿ ಎಂಟ್ರಿ

    ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಸಿನಿಮಾ ಗೆದ್ದಿದೆ. ಸದ್ಯ ಒಟಿಟಿಗೂ ಸಿನಿಮಾ ಲಗ್ಗೆ ಇಟ್ಟಿದೆ. ‘ಕಾಟೇರ’ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ‘ಕಾಟೇರ’ ದೊಡ್ಡ ಹಿಟ್ ನೀಡಿದೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ. ಈ ನಡುವೆಯೂ ರಾಜ್ಯದ 196 ಚಿತ್ರಮಂದಿರಗಳಲ್ಲಿ ಭರ್ಜರಿ ಓಟ ಮುಂದುವರಿಸಿದೆ.

  • ‘ಕಾಟೇರ’ ಟೀಮ್ ಟೆಂಪಲ್ ರನ್ : ತಿರುಪತಿಯಲ್ಲಿ ದರ್ಶನ್

    ‘ಕಾಟೇರ’ ಟೀಮ್ ಟೆಂಪಲ್ ರನ್ : ತಿರುಪತಿಯಲ್ಲಿ ದರ್ಶನ್

    ಕಾಟೇರ (Katera) ಸಿನಿಮಾದ ಸಕ್ಸಸ್ ಬೆನ್ನಲ್ಲೇ ಕಾಟೇರ ಟೀಮ್ ದೇವಸ್ಥಾನಗಳಿಗೆ ಭೇಟಿ ನೀಡಿ, ಭಗವಂತನ ದರ್ಶನ ಮಾಡುತ್ತಿದೆ. ಮೊನ್ನೆಯಷ್ಟೇ ನಿರ್ದೇಶಕ ತರುಣ್ ಸುಧೀರ್ ಕೊರಗಜ್ಜನ ದೇವಸ್ಥಾನಕ್ಕೆ ಮತ್ತು ಧರ್ಮಸ್ಥಳದ ಮಂಜುನಾಥ ಟೆಂಪಲ್ ಗೆ ಭೇಟಿ ನೀಡಿ, ದೇವರ ದರ್ಶನ ಪಡೆದುಕೊಂಡಿದ್ದರು. ಇದೀಗ ದರ್ಶನ್ (Darshan) ಕೂಡ ತಿರುಪತಿಯಲ್ಲಿ (Tirupati Thimmappa) ಕಾಣಿಸಿಕೊಂಡಿದ್ದಾರೆ.

    ಮುಂದಿನ ವಾರದ ದರ್ಶನ್ ಅವರ ಹುಟ್ಟು ಹಬ್ಬ. ಅದಕ್ಕೂ ಮುನ್ನ ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಹುಟ್ಟು ಹಬ್ಬ ಮತ್ತು ಕಾಟೇರ ಸಿನಿಮಾದ ಸಕ್ಸಸ್ ಪ್ರಯುಕ್ತವಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ ಎನ್ನುವ ಮಾಹಿತಿ ಇದೆ.

    ಈಗಾಗಲೇ ಹುಟ್ಟು ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾಣಿಸಿದ್ದಾರೆ ದರ್ಶನ್. ಕೇಕ್, ಹಾರು, ತುರಾಯಿ ಬದಲು ದವಸ ಧಾನ್ಯಗಳನ್ನು ನೀಡುವಂತೆ ಕೇಳಿದ್ದಾರೆ. ಅನಾಥಾಶ್ರಮಗಳಿಗೆ ಅಕ್ಕಿ, ಬೆಳೆ, ಆಹಾರ ಪದಾರ್ಥಗಳನ್ನು ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

     

    ಪ್ರತಿ ಬಾರಿಯೂ ತಮ್ಮ ಅಭಿಮಾನಿಗಳಿಗೆ ಈ ಸಂದೇಶವನ್ನು ಕೊಡುತ್ತಾ ಬಂದಿದೆ. ನೆಚ್ಚಿನ ನಟನ ಮಾತಿನಂತೆ ಅಭಿಮಾನಿಗಳು ಕೂಡ ಆ ಕೆಲಸವನ್ನು ಮಾಡುತ್ತಾ ಬಂದು, ಮಾದರಿಯಾಗಿದ್ದಾರೆ.

  • ಕೊರಗಜ್ಜನ ಆಶೀರ್ವಾದ ಪಡೆದ ‘ಕಾಟೇರ’ ಡೈರೆಕ್ಟರ್ ತರುಣ್

    ಕೊರಗಜ್ಜನ ಆಶೀರ್ವಾದ ಪಡೆದ ‘ಕಾಟೇರ’ ಡೈರೆಕ್ಟರ್ ತರುಣ್

    ರ್ಶನ್ ನಟನೆಯ ಕಾಟೇರ ಅದ್ಭುತವಾಗಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ದೇಶಕ ತರುಣ್ ಸುಧೀರ್ ಆದಿಸ್ಥಳ ಸ್ವಾಮಿ ಕೊರಗಜ್ಜ ಸನ್ನಿಧಾನಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. ಚಿತ್ರ ಯಶಸ್ಸುಗಳಿಸಿದ್ದಕ್ಕಾಗಿ ಅವರು ಪೂಜೆ ಸಲ್ಲಿಸಿದ್ದಾರೆ.

    ಕೇವಲ ಮಂಗಳೂರಿನಲ್ಲಿರುವ ಕೊರಗಜ್ಜನ ದೇವಸ್ಥಾನಕ್ಕೆ ಮಾತ್ರವಲ್ಲ, ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ. ಮುಂದಿನ ತಮ್ಮ ಕಾರ್ಯಗಳಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥನೆ ಮಾಡಿದ್ದಾರೆ.

     

    ಕಾಟೇರ ಸಿನಿಮಾ ವರ್ಷದ ಹಿಟ್ ಚಿತ್ರಗಳ ಸಾಲಿನಲ್ಲಿದೆ. ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಈ ಮಧ್ಯೆ ತರುಣ್ ಮತ್ತ್ಯಾವ ಚಿತ್ರ ಮಾಡಲಿದ್ದಾರೆ ಎನ್ನುವ ಕುತೂಹಲ ಕೂಡ ಮೂಡಿದೆ. ಅವರು ಮಾಡಿದ್ದೇ ಮೂರು ಸಿನಿಮಾಗಳು. ಮೂರು ಹಿಟ್ ಆಗಿವೆ. ಹಾಗಾಗಿ ಇವರ ಚಿತ್ರಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

  • ‘ಕಾಟೇರ’ ಒಟಿಟಿ ಆಗಮನಕ್ಕೆ ದಿನಾಂಕ ಫಿಕ್ಸ್ : ದಚ್ಚು ನೋಡಲು ಫ್ಯಾನ್ಸ್ ರೆಡಿ

    ‘ಕಾಟೇರ’ ಒಟಿಟಿ ಆಗಮನಕ್ಕೆ ದಿನಾಂಕ ಫಿಕ್ಸ್ : ದಚ್ಚು ನೋಡಲು ಫ್ಯಾನ್ಸ್ ರೆಡಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ಕಾಟೇರ (Katera) ಸಿನಿಮಾ ಆರನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ. 196 ಚಿತ್ರಮಂದಿರ ಹಾಗೂ 63 ಮಲ್ಟಿಫ್ಲೆಕ್ಸ್ ಗಳಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಡಿಬಾಸ್ ಚಿತ್ರ ಈಗ ಒಟಿಟಿಗೆ (OTT) ಬರಲು ದಿನಾಂಕ ನಿಗದಿಯಾಗಿದೆ.

    ದರ್ಶನ್ ಸಿನಿಕರಿಯರ್ ನಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ್ದ ಕಾಟೇರ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಪ್ಯಾನ್ ಇಂಡಿಯಾ ಚಿತ್ರಗಳ ಅಬ್ಬರದ ನಡುವೆಯೂ  ನಮ್ಮ ನೆಲದ ಕಥೆಗೆ ಪ್ರೇಕ್ಷಕ ಜೈಕಾರ ಹಾಕಿದ್ದರು. ರಾಕ್ಲೈನ್ ವೆಂಕಟೇಶ್ ನಿರ್ಮಿಸಿರುವ ಈ ಸಿನಿಮಾ ಈಗಾಗಲೇ Zee5 ಜೊತೆ ವ್ಯಾಪಾರ ವಹಿವಾಟು ಮುಗಿಸಿದೆ.  ನಿರ್ಮಾಪಕರು ಹಾಗೂ ಓಟಿಟಿ ವೇದಿಕೆ ಜೊತೆ ಮಾಡಿಕೊಂಡ ಒಡಂಬಡಿಕೆಯಂತೆ ‘ಕಾಟೇರ’ ಮುಂದಿನ ವಾರ ಪ್ರೀಮಿಯರ್ ಆಗುತ್ತಿದೆ.

    Zee5 ತಾನು ಖರೀದಿಸಿದ ಹೊಸ ಸಿನಿಮಾಗಳನ್ನು ಪ್ರತಿ ಶುಕ್ರವಾರ ಬಿಡುಗಡೆ ಮಾಡುತ್ತೆ. ಅಲ್ಲದೆ ನಿರ್ಮಾಪಕರು ಹಾಗೂ ಓಟಿಟಿ ಸಂಸ್ಥೆಯೊಂದಿಗೆ ಸಿನಿಮಾ ಬಿಡುಗಡೆಯಾದ 30 ರಿಂದ 40 ದಿನಗಳ ಅಂತರದಲ್ಲಿ ಓಟಿಟಿಯಲ್ಲಿ ಪ್ರೀಮಿಯರ್ ಮಾಡುವ ಬಗ್ಗೆ ಸಹಜವಾಗಿ ಒಪ್ಪಂದ ಆಗುತ್ತೆ. ‘ಕಾಟೇರ’ ಬಿಡುಗಡೆಯಾದ 40 ದಿನಗಳ ಬಳಿಕ ಓಟಿಟಿಯಲ್ಲಿ ರಿಲೀಸ್ ಮಾಡುವ ಮಾತುಕತೆ ನಡೆದಿದ್ದು, ಅದರಂತೆಯೇ ಫೆಬ್ರವರಿ 9ರಂದು  ಸಿನಿಮಾ ಪ್ರೀಮಿಯರ್ ಆಗಲಿದೆ.

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿದೆ. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿದೆ. ಈ ನಡುವೆಯೂ ರಾಜ್ಯದ 196 ಚಿತ್ರಮಂದಿರಗಳಲ್ಲಿ ಭರ್ಜರಿ ಓಟ ಮುಂದುವರಿಸಿದೆ. ಈ ಬೆನ್ನಲ್ಲೇ ಒಟಿಟಿ ಆಗಮನಕ್ಕೂ ದಿನಾಂಕ ನಿಗದಿಯಾಗಿದೆ.

  • ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರೈತ ಸಂಘ ಕಡೆಯಿಂದ ದರ್ಶನ್‌ಗೆ ‘ಭೂಮಿ ಪುತ್ರ’ ಬಿರುದು

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿದೆ. ಇದೇ ಖುಷಿಯಲ್ಲಿ ಪಾಂಡವಪುರದಲ್ಲಿ ‘ಕಾಟೇರ’ ಚಿತ್ರದ ಸಕ್ಸಸ್ ಕಾರ್ಯಕ್ರಮ ನಡೆದಿದೆ. ರೈತರ ಕುರಿತು ‘ಕಾಟೇರ’ ಚಿತ್ರದ ಮೂಲಕ ತಿಳಿಸಿದಕ್ಕೆ ದರ್ಶನ್‌ಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿದ್ದಾರೆ. ಇದನ್ನೂ ಓದಿ:ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರಿ, ಗಾಯಕಿ ವಿಧಿವಶ

    ದರ್ಶನ್, ಆರಾಧನಾ ರಾಮ್ ನಟನೆಯ ‘ಕಾಟೇರ’ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಪಾಂಡವಪುರದಲ್ಲಿ ಕಾಟೇರ ಸಿನಿಮಾ ಸಕ್ಸಸ್ ಅನ್ನು ಚಿತ್ರತಂಡ ಅದ್ಧೂರಿಯಾಗಿ ಆಚರಿಸಿದೆ. ಈ ಚಿತ್ರದಲ್ಲಿ ರೈತರ ಬಗ್ಗೆ ಹಲವು ವಿಚಾರಗಳನ್ನು ದರ್ಶನ್ ಮಾತನಾಡಿದ್ದಾರೆ.

    ರೈತರ ಕುರಿತು ಜನರಿಗೆ ಹಲವು ವಿಷಯಗಳನ್ನು ತಲುಪಿಸಿದಕ್ಕೆ ಮತ್ತು ನಟನೆಗೆ ದರ್ಶನ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ಪರವಾಗಿ ‘ಭೂಮಿ ಪುತ್ರ’ ಎಂದು ಬಿರುದು ನೀಡಿ ಸನ್ಮಾನ ಮಾಡಲಾಗಿದೆ.

    ಈ ಸಮಾರಂಭದಲ್ಲಿ ದರ್ಶನ್ ಜೊತೆ ರೈತ ಮುಖಂಡ ಕೆ.ಎಸ್ ಪುಟ್ಟಣ್ಣಯ್ಯ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಟಿ ಆರಾಧನಾ ರಾಮ್ ಸೇರಿದಂತೆ ಇಡೀ ಚಿತ್ರತಂಡ ಭಾಗಿಯಾಗಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತುಂಬಿದ್ದು, `ಬಿಗ್ ಬಾಸ್’ ಖ್ಯಾತಿಯ ನಮ್ರತಾ ಗೌಡ, ಮಾನ್ವಿತಾ ಕಾಮತ್ (Manvitha Kamath), ಹರ್ಷಿಕಾ ಪೂಣಚ್ಚ ಭಾಗಿಯಾಗಿ ತಮ್ಮ ನೃತ್ಯದ ಮೂಲಕ ಮನರಂಜನೆ ನೀಡಿದ್ದರು.

  • ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಮನವಿ ಮಾಡಿದ ದರ್ಶನ್

    ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಮನವಿ ಮಾಡಿದ ದರ್ಶನ್

    ಪ್ರತಿ ವರ್ಷದಂತೆ ಈ ವರ್ಷವೂ ನಟ ದರ್ಶನ್ ತಮ್ಮ ಹುಟ್ಟು ಹಬ್ಬದ ಕುರಿತಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಈ ಸಂದರ್ಭದಲ್ಲಿ  ಅಭಿಮಾನಿಗಳು ಯಾರು ಸಹ ಬ್ಯಾನರ್, ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ. ಅದೇ ಹಣದಲ್ಲಿ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರೆ ದವಸ-ಧಾನ್ಯಗಳನ್ನು ದಾನ ನೀಡಿ  ಎಂದು ವಿನಂತಿ ಮಾಡಿಕೊಂಡಿದ್ದಾರೆ.

    ಈ ಬಾರಿ ಹುಟ್ಟು ಹಬ್ಬವು ವಿಶೇಷವಾಗಿ ಇರಲಿದೆ. ಯಾಕೆಂದರೆ ದರ್ಶನ್ ನಟನೆಯ ಕಾಟೇರ ಸಿನಿಮಾಗೆ ಭಾರೀ ಯಶಸ್ಸು ಸಿಕ್ಕಿದೆ. ಜೊತೆಗೆ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಕೊಳ್ಳೆ ಹೊಡೆದಿದೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಈ ನಡುವೆ ಸುದೀಪ್ ಮತ್ತೊಂದು ಸಂಭ್ರಮದ ಸುದ್ದಿ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

     

    ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

  • ಮತ್ತೊಂದು ದಾಖಲೆ ಬರೆದ ಕಾಟೇರ: 200 ಕೋಟಿ ರೂ. ಕ್ಲಬ್ ಸೇರಿದ ಸಂಭ್ರಮ

    ಮತ್ತೊಂದು ದಾಖಲೆ ಬರೆದ ಕಾಟೇರ: 200 ಕೋಟಿ ರೂ. ಕ್ಲಬ್ ಸೇರಿದ ಸಂಭ್ರಮ

    ರ್ಶನ್ ನಟನೆ ಕಾಟೇರ ಸಿನಿಮಾ ಮತ್ತೊಂದು ದಾಖಲೆ ಬರೆದಿದೆ. ಒಂದು ಕೋಟಿಗೂ ಅಧಿಕ ಟಿಕೆಟ್ ಮಾರಾಟವಾಗುವ ಮೂಲಕ 206 ಕೋಟಿ ರೂಪಾಯಿಯನ್ನು ಬಾಕ್ಸ್ ಆಫೀಸಿನಿಂದ (Box Office) ಕೊಳ್ಳೆ ಹೊಡೆದಿದೆ. 200 ಕೋಟಿ ರೂಪಾಯಿ ಕ್ಲಬ್ ಸೇರಿದ ಪೋಸ್ಟರ್ ಅನ್ನು ದರ್ಶನ್ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಈ ನಡುವೆ ಸುದೀಪ್ ಮತ್ತೊಂದು ಸಂಭ್ರಮದ ಸುದ್ದಿ ಕೊಟ್ಟಿದ್ದಾರೆ. ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

     

    ಒಂದು ಕಡೆ ಸೆಲೆಬ್ರಿಟಗಳು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಗಳಿಕೆಯೂ ಭರ್ಜರಿಯಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್ (Darshan) ಅಭಿಮಾನಿಗಳು ಪೋಸ್ಟ್ ಮಾಡಿದ್ದರು. ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದರು.

  • ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್

    ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ವೀಕ್ಷಿಸಿದ ಕಿಚ್ಚ ಸುದೀಪ್

    ಕೆಲವು ದಿನಗಳಿಂದ ಕಾಟೇರ (Katera) ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಜೊತೆ ಸುದೀಪ್ ಮಾತನಾಡಿ, ಅತೀ ಶೀಘ್ರದಲ್ಲೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಅದೀಗ ನಿಜವಾಗಿದೆ. ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿದ್ದಾರೆ. ಈ ಮಾಹಿತಿಯನ್ನು ಸ್ವತಃ ಸುದೀಪ್ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

    ಈ ಹಿಂದೆ ನಡೆದ ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ತಂಡದಿಂದ ಕರೆ ಹೋಗಿತ್ತು. ಕಿಚ್ಚ ಶೂಟಿಂಗ್ ನಲ್ಲಿ ಇರುವ ಕಾರಣದಿಂದಾಗಿ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಇದೀಗ ಕೊಟ್ಟ ಮಾತಿನಂತೆ ಸಿನಿಮಾ ವೀಕ್ಷಣೆ ಮಾಡಿದ್ದಾರೆ.

    ಒಂದು ಕಡೆ ಸೆಲೆಬ್ರಿಟಗಳು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದರೆ, ಮತ್ತೊಂದು ಕಡೆ ಕಾಟೇರ ಸಿನಿಮಾ ರಿಲೀಸ್ ಗಳಿಕೆಯೂ ಭರ್ಜರಿಯಾಗಿದೆ. ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿತ್ತು. ಈ ಕುರಿತಂತೆ ದರ್ಶನ್ (Darshan) ಅಭಿಮಾನಿಗಳು ಪೋಸ್ಟ್ ಮಾಡಿದ್ದರು. ‘ನಮ್ಮ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ, ಮತ್ತು  ಕರುನಾಡೆ ಮೆಚ್ಚಿದ ನಮ್ಮ ಕಾಟೇರ ಕೇವಲ ಒಂದು ವಾರದಲ್ಲಿ, 52 ಲಕ್ಷಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ ಔಟ್ ಆಗಿ, 104 ಕೋಟಿಗೂ ಅಧಿಕ ಹಣವನ್ನುಗಳಿಸಿ ಎಲ್ಲಾ ದಾಖಲೆಗಳನ್ನು ಮುರಿದು. ಹೊಸ ದಾಖಲೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ’ ಎಂದು ಬರೆದುಕೊಂಡಿದ್ದರು.

    ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದುಬೈನಲ್ಲೂ (Dubai) ಕಾಟೇರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಿತ್ರತಂಡ ಭಾಗಿಯಾಗಿತ್ತು. ಅಭಿಮಾನಿಗಳ ಜೊತೆ ಸಿನಿಮಾ ನೋಡಿ ದರ್ಶನ್ ಸಂಭ್ರಮಿಸಿದ್ದರು.

     

    ರಾಜ್ಯದಲ್ಲಿ ಕಾಟೇರ ಹವಾ ಜೋರಾಗಿದೆ. ಕರ್ನಾಟಕದಲ್ಲೇ ಬಾಕ್ಸ್ ಆಫೀಸಿಗೆ ಕೋಟಿ ಕೋಟಿ ರೂಪಾಯಿ ಹಣ ಹರಿದು ಬರುತ್ತಿದೆ. ಜೊತೆಗೆ ನೆರೆಯ ರಾಜ್ಯದಲ್ಲೂ ಕಾಟೇರ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೋವಾ, ಆಂಧ್ರಪ್ರದೇಶ, ತಮಿಳು ನಾಡಿನಲ್ಲೂ ಕಾಟೇರ ಬಿಡುಗಡೆ ಆಗಿದ್ದು, ಅಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಥಿಯೇಟರ್ ಆಗಮಿಸಿದ್ದಾರೆ.

  • ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ದರ್ಶನ್ ಟಾರ್ಗೆಟ್: ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

    ನ್ನಡದ ಹೆಸರಾಂತ ನಟ ದರ್ಶನ್ (Darshan) ಅವರನ್ನು ಟಾರ್ಗೆಟ್ (Target) ಮಾಡಲಾಗ್ತಿದೆಯಾ? ಇಂಥದ್ದೊಂದು ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಕಾಟೇರ (Katera) ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೊಕೆ ಆಗದೇ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ (RockLine Venkatesh) ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆಯೇ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರೋದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ.

    ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿ ಒಂಥರಾ ಇಡೀ ಸಿನಿಮಾ ಟೀಂಗೆ ತೊಂದರೆ ತಂದೊಡ್ಡಿತ್ತು. ಬೆಳಗಿನಜಾವದವರೆಗೂ ಪಾರ್ಟಿ ಮಾಡಿದ್ರು ಅಂತಾ‌ ನಟ ದರ್ಶನ್ ಸೇರಿ 8 ಸ್ಟಾರ್ ಗಳಿಗೆ ನೊಟೀಸ್ ನೀಡಿದ್ದ ಪೊಲೀಸರ ಮುಂದೆ ಎಂಟೂ ಸ್ಟಾರ್ ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ರು.

    ಜನವರಿ ಮೂರನೇ ತಾರೀಖಿನ ರಾತ್ರಿ ಜೆಟ್ಲಾಗ್ ಪಬ್ ನಲ್ಲಿ ನಲ್ಲಿ ಕಾಟೇರ ಸಿನಿಮಾ‌ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸ್ಟಾರ್ಸ್ ಗಳು  ಮುಂಜಾನೆ 3-4ಗಂಟೆವರೆಗೂ ಪಬ್ ನಲ್ಲಿದ್ರು ಅನ್ನೋ ವಿಷ್ಯ ಹೊರಗೆ ಬಂದಿತ್ತು. ಮರುದಿನ ದಾಳಿ ಮಾಡಿದ್ದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪಾರ್ಟಿಯಲ್ಲಿದ್ದ ನಟ ದರ್ಶನ್ ಸೇರಿ ಎಂಟು ಸ್ಟಾರ್ ಗಳಿಗೆ ನೊಟೀಸ್ ನೀಡಿದ್ರು.

    ನಟ ದರ್ಶನ್, ಡಾಲಿ ಧನಂಜಯ್, ಚಿಕ್ಕಣ್ಣ, ನೀನಾಸಂ ಸತೀಶ್, ಅಭಿಶೇಕ್ ಅಂಬರೀಶ್, ನಿರ್ದೇಶಕ‌ ತರುಣ್ ಸುದೀರ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಸಂಗೀತ ನಿರ್ದೇಶಕ ಹರಿಕೃಷ್ಣ ಎಂಟೂ ಜನ ನಿನ್ನೆ ಸಂಜೆ ನಾಲ್ಕು ಗಂಟೆಗೆ ಸುಬ್ರಮಣ್ಯ ನಗರ ಠಾಣೆಗೆ ಹಾಜರಾಗಿದ್ರು. ಸುಮಾರು ಒಂದುಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರ ಬಂದ್ಮೇಲೆ ಮಾತನಾಡಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ದರ್ಶನ್ ನ ಟಾರ್ಗೆಟ್ ಮಾಡಲಾಗಿದೆ ಅಂದ್ರು. ಯಾರು ಮಾಡ್ತಿದ್ದಾರೆ ಅಂತಾನು ಗೊತ್ತು. ಸಿನಿಮಾ ಸಕ್ಸೆಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡ್ತಿದ್ದಾರೆ. ಊಟಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವೆ ಹೊರತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತಾ ಆರೋಪ ತಳ್ಳಿ ಹಾಕಿದ್ರು.

     

    ಸ್ಟಾರ್ ನಟರ ಪರ ವಕೀಲ ನಾರಾಯಣಸ್ವಾಮಿ ಮಾತಾಡಿ ಪೊಲೀಸರ ವಿರುದ್ಧ ಅಸಮಧಾನ ತೋರಿದ್ರು. ದರ್ಶನ್ ರನ್ನ ಟಾರ್ಗೆಟ್ ಮಾಡಲಾಗಿದೆ. ಇವ್ರೆಲ್ಲಾ ಊಟಕ್ಕೆ ಹೋಗಿದ್ದು. ಗ್ರಾಹಕರಿಗೆ ನೊಟೀಸ್ ಕೊಡೋಹಾಗಿಲ್ಲ. ಇದು ಕಾನೂನು ವಿರುದ್ಧದ ನೊಟೀಸ್ ಅಂತಾ ಅಸಮಧಾನ ಹೊರ ಹಾಕಿದ್ರು. ಲಾಯರ್ ಮತ್ತು ರಾಕ್ ಲೈನ್ ವೆಂಕಟೇಶ್ ಆಡಿದ ಮಾತುಗಳು ಇದೀಗ ಭಾರೀ ಚರ್ಚೆಯನ್ನು ಹುಟ್ಟು ಹಾಕಿವೆ.

  • ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟರು

    ಸುಬ್ರಮಣ್ಯನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟರು

    ಡರಾತ್ರಿ ಪಾರ್ಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟರಾದ ದರ್ಶನ್ (Darshan), ಚಿಕ್ಕಣ್ಣ, ಡಾಲಿ ಧನಂಜಯ್ಯ,  ನೀನಾಸಂ ಸತೀಶ್, ಅಭಿಷೇಕ್ ಅಂಬರೀಶ್, ನಿರ್ದೇಶಕ ತರುಣ್ ಸುಧೀರ್ ಹಾಗು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಸುಬ್ರಮಣ್ಯ ನಗರ ಪೊಲೀಸ್ (Police) ಠಾಣೆಗೆ ಹಾಜರಾಗಿದ್ದಾರೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ ಮಾಲೀಕರು ಹಾಗೂ ಮ್ಯಾನೇಜರ್ ಮೇಲೆ ಎಫ್.ಐ. ಆರ್ ದಾಖಲಾಗಿತ್ತು. ಪಾರ್ಟಿ ಮಾಡಿದ ನಟರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು ಪೊಲೀಸರು. ಇಂದು ಎಲ್ಲರೂ ಒಟ್ಟಾಗಿ ಸುಬ್ರಮಣ್ಯ ನಗರ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

    ಪಬ್ ವೊಂದರಲ್ಲಿ ತಡರಾತ್ರಿವರೆಗೂ ಪಾರ್ಟಿ ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಇತರ ನಟರಿಗೆ ಪೊಲೀಸರು ನೋಟಿಸ್ ನೀಡಿದ್ದರು. ದುಬೈ ಪ್ರವಾಸದ ನಿಮಿತ್ತ ವಿಚಾರಣೆಗೆ ದರ್ಶನ್ ಹಾಜರಾಗಿರಲಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಚಿತ್ರತಂಡ ಹಾಗೂ ಇತರ ನಟರು ವಿಚಾರಣೆಗಾಗಿ ಇಂದು ಸ್ಟೇಶನ್ ಗೆ ಬಂದಿದ್ದಾರೆ.