Tag: katera film

  • ಸರ್ಕಾರಿ ಶಾಲೆಯ ಸಾವಿರ ಮಕ್ಕಳಿಗೆ ಪರೀಕ್ಷಾ ಸಾಮಗ್ರಿ ವಿತರಿಸಿದ ಡಿಬಾಸ್ ಫ್ಯಾನ್ಸ್

    ಸರ್ಕಾರಿ ಶಾಲೆಯ ಸಾವಿರ ಮಕ್ಕಳಿಗೆ ಪರೀಕ್ಷಾ ಸಾಮಗ್ರಿ ವಿತರಿಸಿದ ಡಿಬಾಸ್ ಫ್ಯಾನ್ಸ್

    ಸ್ಯಾಂಡಲ್‌ವುಡ್ ಡಿಬಾಸ್ (Darshan) ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಆನೇಕಲ್ ತಾಲೂಕಿನ ಅತ್ತಿಬೆಲೆ ಗಡಿಭಾಗದಲ್ಲಿ ಡಿಬಾಸ್ ಅಭಿಮಾನಿಗಳ (Darshan Fans) ಸಂಘದಿಂದ 1800 ಮಕ್ಕಳಿಗೆ ಪರೀಕ್ಷಾ ಸಾಮಗ್ರಿಗಳನ್ನು ವಿತರಣೆ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಣೆಯನ್ನು ಮಾಡಿದ್ದಾರೆ.

    ಡಿಬಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ್ ಹಾಗೂ ಸಂಗಡಿಗರ ಸಹಕಾರದಿಂದ ಅತ್ತಿಬೆಲೆಯ ಶಿಡ್ಲಬಸಪ್ಪ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಪೆನ್ನು ಬುಕ್ಸ್ ಜೊತೆ ದರ್ಶನ್ ಫೋಟೋ ಇರುವ ಪರೀಕ್ಷೆ ಪ್ಯಾಡ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ನೀಡಲಾಯಿತು. ಇದನ್ನೂ ಓದಿ:ಡಿಬಾಸ್‌ ಹುಟ್ಟುಹಬ್ಬಕ್ಕೆ ಶುಭಕೋರಿದ ಸ್ಯಾಂಡಲ್‌ವುಡ್ ತಾರೆಯರು

    ಮಕ್ಕಳೊಂದಿಗೆ ಡಿಬಾಸ್ ಹೆಸರಿನ ಕೇಕ್ ಕಟ್ ಮಾಡಿ ದರ್ಶನ್ ಅಭಿನಯದ ಸಾಂಗ್‌ಗಳನ್ನು ಹಾಕಿ ನೃತ್ಯ ಮಾಡಿ ಎಂಜಾಯ್ ಮಾಡಿದ್ದರು. ಅಲ್ಲದೇ ಕಲ್ಯಾಣ ಮಂಟಪ ಸುತ್ತಲೂ ದರ್ಶನ್ ಚಿತ್ರಗಳನ್ನು ಮತ್ತು ಕಟೌಟ್‌ಗಳನ್ನು ಹಾಕಿ ಸಂಭ್ರಮಾಚರಣೆಯನ್ನು ಮಾಡಲಾಯಿತು. ಸುಮಾರು 2000ಕ್ಕೆ ಹೆಚ್ಚು ಮಕ್ಕಳಿಗೆ ಊಟದ ವ್ಯವಸ್ಥೆ ಸಹ ಮಾಡಲಾಗಿತ್ತು. ಜೊತೆಗೆ ಮಧ್ಯಾಹ್ನ 3 ಗಂಟೆ ನಂತರ ಅತ್ತಿಬೆಲೆ ಸರ್ಕಲ್‌ನಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರಿಗೆ ಅತ್ತಿಬೆಲೆ ಫ್ಲೈ ಓವರ್ ಕೆಳಗೆ ಊಟದ ವ್ಯವಸ್ಥೆ ಮಾಡಲಾಗಿದೆ.

    ಪ್ರತಿ ವರ್ಷ ಡಿಬಾಸ್ ಹೆಸರಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಸೇವೆ ಮಾಡಬೇಕಂತ ಆಶಯ ಕೂಡ ಇದೆ ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ದರ್ಶನ್ ಅವರಿಗೆ ಆರೋಗ್ಯ ಸಿಗಲಿ ಇನ್ನು ಎತ್ತರಕ್ಕೆ ಬೆಳೆಯಲಿ ಅಂತ ಫ್ಯಾನ್ಸ್ ಶುಭಕೋರಿದರು.

  • Katera: ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಧಕ್ಕೆ ಬರಬಾರದು- ದರ್ಶನ್

    Katera: ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು, ಕನ್ನಡ ಭಾಷೆಗೆ ಧಕ್ಕೆ ಬರಬಾರದು- ದರ್ಶನ್

    ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಕೂಡ ಸಕ್ಸಸ್ ಮೀಟ್ ಸಂಭ್ರಮವನ್ನು ಆಚರಿಸಿದೆ. ಈ ವೇಳೆ, ಮಾಧ್ಯಮಕ್ಕೆ ದರ್ಶನ್ ಸಿನಿಮಾ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ಸಕ್ಸಸ್ ಕಂಡಿರೋ ಬೆನ್ನಲ್ಲೇ ಮಾಧ್ಯಮದ ಜೊತೆ ದರ್ಶನ್ ಮಾತನಾಡಿದ್ದಾರೆ. ಜಾತಿ ಒಳಗೊಂಡಂತೆ ಸಿನಿಮಾದ ಒಳಗೆ ಮತ್ತಷ್ಟು ಭಿನ್ನ ಕಥೆ ಇದೆ. ಕಥೆ ಸೆಲೆಕ್ಷನ್ ಹೇಗೆ ಮಾಡಿದ್ರಿ ಎಂದು ದರ್ಶನ್‌ಗೆ (Darshan) ಕೇಳಲಾಯಿತು.

    ‘ಕಾಟೇರ’ (Katera Film) ಕಥೆ ಕೇಳುವಾಗ ಚಂದಮಾಮನ ಕಥೆ ಕೇಳಿದಂತೆ ಕೇಳಿದ್ದೀನಿ. ಸಿನಿಮಾದಲ್ಲಿ ಒಳ್ಳೆಯ ಮೆಸೇಜ್ ಇದೆ. ಇವತ್ತು ಜನ ಮಾತನಾಡೋದೇನು? ಗಂಡಸು ಬೆವರು ಸುರಿಸಬೇಕು. ಜೊಲ್ಲು ಸುರಿಸಬಾರದು ಅಂತಾರೆ. ಇದರಲ್ಲಿ ಅದೆಷ್ಟು ಅರ್ಥ ಇದೆ. ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಥೆನೇ ಇದು ಎಂದು ದರ್ಶನ್ ಮಾತನಾಡಿದ್ದಾರೆ.

    ಕಥೆ ಕೇಳುವಾಗ ನಟನೆಗೆ ಜಾಗ ಇದೆ ಅನಿಸ್ತು. ಖುಷಿ ಆಗುತ್ತದೆ. ನಾನು ಸಿನಿಮಾ ಕಥೆ ಆಯ್ಕೆ ಮಾಡುವಾಗ ಮೂರು ರೀತಿ ಯೋಚನೆ ಮಾಡುತ್ತೇನೆ. ಹೆಣ್ಣನ್ನು ಕೆಟ್ಟದಾಗಿ ತೋರಿಸಬಾರದು. ಕನ್ನಡ ಭಾಷೆಗೆ ಅವಮಾನವಾಗುವಂತೆ ಇರಬಾರದು. ಅನ್ನದಾತರಿಗೆ ನಷ್ಟ ಆಗಬಾರದು ಎಂದು ದರ್ಶನ್ ಮಾತನಾಡಿದ್ದಾರೆ.

    ಬಳಿಕ ನಾನು ಯಾವತ್ತಿಗೂ ರಾಷ್ಟ್ರ ಪ್ರಶಸ್ತಿ ಬರೋಕೆ ಅಂತ ಸಿನಿಮಾ ಮಾಡಲ್ಲ. ಹಾಗಿದ್ರೆ ಆರ್ಟ್ ಮೂವಿನೇ ಮಾಡುತ್ತಿದ್ದೆ ಎಂದು ಡಿಬಾಸ್ ‘ಕಾಟೇರ’ ಸಕ್ಸಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದನ್ನೂ ಓದಿ:ನಟ ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ ಸಿದ್ಧತೆ

    ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ (Katera Film) ಸಿನಿಮಾದಲ್ಲಿ ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ (Aradhana Ram) ದರ್ಶನ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

  • ‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

    ‘ಕಾಟೇರ’ ಸಿನಿಮಾ ನೋಡಿ ಹಾಡಿಹೊಗಳಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ

    ರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾ ಡಿ.29ರಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ರಿಲೀಸ್‌ಗೂ ಮುನ್ನವೇ ಸಿನಿಮಾ ನೋಡಿ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi) ರಿಯಾಕ್ಟ್ ಮಾಡಿದ್ದಾರೆ. ‘ಕಾಟೇರ’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದಾರೆ.

    ನಾನು ‘ಕಾಟೇರ’ (Katera) ಸಿನಿಮಾ ವೀಕ್ಷಿಸಿದೆ. ಅನುಭವ ಅದ್ಭುತವಾಗಿತ್ತು. ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ನಾನು ಕಣ್ಣೀರು ಸುರಿಸಿದ್ದೇನೆ. ಸಿನಿಮಾ ನೋಡಿ ಹೊರನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಆವರಿಸಿತು ಎಂದು ದರ್ಶನ್ ಪತ್ನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Vijayalakshmi darshan (@viji.darshan)

    ಬಳಿಕ ‘ಕಾಟೇರ’ ಸಿನಿಮಾ, ನೀವು ನಿರ್ದೇಶಿಸಿದ ಬೆಸ್ಟ್ ಚಿತ್ರ ಎಂದು ನಿರ್ದೇಶಕ ತರುಣ್‌ ಸುಧೀರ್‌ಗೆ ವಿಜಯಲಕ್ಷ್ಮಿ ಹೊಗಳಿದ್ದಾರೆ. ‘ಕಾಟೇರ’ ನಿಜಕ್ಕೂ ನನ್ನ ಅಚ್ಚುಮೆಚ್ಚಿನ ಸಿನಿಮಾ. ಇಂತಹ ಸಿನಿಮಾವನ್ನು ದರ್ಶನ್ ಫ್ಯಾನ್ಸ್‌ಗೆ ತೋರಿಸಲು ಕಾತರದಲ್ಲಿದ್ದೇವೆ. ನಿಜಕ್ಕೂ ಕಾಟೇರ ಮಾಸ್ಟರ್‌ಪೀಸ್ ಸಿನಿಮಾ ಎಂದಿದ್ದಾರೆ. ಕಾಟೇರ ಇಡೀ ತಂಡಕ್ಕೆ ಶುಭಹಾರೈಸಿದ್ದಾರೆ.

    ಚಿತ್ರದ ನಾಯಕಿ ಆರಾಧನಾ ರಾಮ್ (Aradhanaa Ram) ಚೊಚ್ಚಲ ಸಿನಿಮಾಗೆ ಬೆಸ್ಟ್ ವಿಶ್ಸ್ ದರ್ಶನ್ ಪತ್ನಿ ತಿಳಿಸಿದ್ದಾರೆ. ದರ್ಶನ್ (Darshan) ಸಹೋದರಿ ಮಗ ಚಂದ್ರ ಕುಮಾರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಕುಟುಂಬದ ಆಪ್ತ ಸೂರಜ್‌ಗೆ ಶುಭಕೋರಿದ್ದಾರೆ. ಇದನ್ನೂ ಓದಿ:ಇಶಾ ಕೊಪ್ಪಿಕರ್ ಬಗ್ಗೆ ಕೇಳಿದ ಸುದ್ದಿ ಸುಳ್ಳಾಗಲಿ ಅಂತಿದ್ದಾರೆ ಫ್ಯಾನ್ಸ್

    ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ‘ಕಾಟೇರ’ ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಕ್ರಾಂತಿ ನಂತರ ಕಾಟೇರ ಚಿತ್ರಕ್ಕೆ ಹೇಗೆ ರೆಸ್ಪಾನ್ಸ್ ಸಿಗಲಿದೆ ಎಂಬುದನ್ನ ಕಾಯಬೇಕಿದೆ.

  • Darshan: ನನ್ನ ಮಣ್ಣು, ನನ್ನ ಹಕ್ಕು- ‘ಕಾಟೇರ’ ಸಾಂಗ್ ಔಟ್

    Darshan: ನನ್ನ ಮಣ್ಣು, ನನ್ನ ಹಕ್ಕು- ‘ಕಾಟೇರ’ ಸಾಂಗ್ ಔಟ್

    ಡಿಬಾಸ್ ದರ್ಶನ್ (Darshan) ನಟನೆಯ ‘ಕಾಟೇರ’ (Katera) ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಮಂಡ್ಯದ ಜನತೆಯ ಎದುರು ‘ಕಾಟೇರ’ ಥೀಮ್ ಸಾಂಗ್ ಅನ್ನು ಸುಮಲತಾ ಅಂಬರೀಶ್ ರಿಲೀಸ್ ಮಾಡಿದ್ದಾರೆ. ಇದನ್ನೂ ಓದಿ: 11 ವರ್ಷಗಳ ಪ್ರೀತಿಗೆ ಫುಲ್‌ ಸ್ಟಾಪ್- ತಾನಿಯಾ ಜೊತೆ ಅಹಾನ್ ಶೆಟ್ಟಿ ಬ್ರೇಕಪ್

    ನೆತ್ತರಲ್ಲಿ ನೆಂದ ಭೂಮಿ ಎಂದು ಶುರುವಾಗುವ ಸಾಂಗ್ ಸಖತ್ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ. ನನ್ನ ಮಣ್ಣು, ನನ್ನ ಹಕ್ಕು ಮೊದಲಾದ ರೈತರ ಭಾವನೆಗಳನ್ನ ಈ ಹಾಡು ಒಳಗೊಂಡಿದೆ. ವಿಶೇಷ ಅಂದರೆ, ರೈತರ ದಿನದಂದೇ ಈ ಹಾಡನ್ನ ರಿಲೀಸ್ ಮಾಡಲಾಗಿದೆ.

    ನನ್ನ ಮಣ್ಣು, ನನ್ನ ಹಕ್ಕು ಹಾಡಿಗೆ ಪುನೀತ್ ಆರ್ಯ ಸಾಹಿತ್ಯ ಬರೆದಿದ್ದಾರೆ. ವಿ ಹರಿಕೃಷ ‘ಕಾಟೇರ’ ಹಾಡುಗಳನ್ನ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಕಾಟೇರ’ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದೆ. ಮಂಡ್ಯದಲ್ಲಿ ಅದ್ದೂರಿಯಾಗಿ ಇಂದು (ಡಿ.23) ಸಾಂಗ್ ರಿಲೀಸ್ ಕಾರ್ಯಕ್ರಮ ನಡೆದಿದೆ. ದರ್ಶನ್ & ಟೀಮ್‌ಗೆ ನಟಿ ಸುಮಲತಾ ಕೂಡ ಸಾಥ್ ನೀಡಿದ್ದಾರೆ.

    ದರ್ಶನ್‌ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಇದೇ ಡಿ.29ಕ್ಕೆ ‘ಕಾಟೇರ’ ಸಿನಿಮಾ ರಿಲೀಸ್ ಆಗುತ್ತಿದೆ.

  • ಒಂದೇ ಸಿನಿಮಾದಲ್ಲಿ ಅಪ್ಪ, ಮಗಳು- ‘ಕಾಟೇರ’ ರೈಟರ್ ಆ್ಯಕ್ಷನ್ ಕಟ್

    ಒಂದೇ ಸಿನಿಮಾದಲ್ಲಿ ಅಪ್ಪ, ಮಗಳು- ‘ಕಾಟೇರ’ ರೈಟರ್ ಆ್ಯಕ್ಷನ್ ಕಟ್

    ಸ್ಯಾಂಡಲ್‌ವುಡ್ (Sandalwood) ಸಲಗ ದುನಿಯಾ ವಿಜಯ್ (Duniya Vijay) ಅವರು ‘ಭೀಮ’ನಾಗಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳಿಗೆ ವಿಜಯ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಒಂದೇ ಸಿನಿಮಾದಲ್ಲಿ ದುನಿಯಾ ವಿಜಯ್ ಮತ್ತು ಮಗಳು ಮೋನಿಕಾ(Monica Vijay) ನಟಿಸುತ್ತಿದ್ದಾರೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

    ಇತ್ತೀಚೆಗೆ ದೊಡ್ಡ ಮಗಳು ಮೋನಿಕಾ ಸಿನಿಮಾರಂಗಕ್ಕೆ ಬರೋದಾಗಿ ದುನಿಯಾ ವಿಜಯ್ ಅನೌನ್ಸ್ ಮಾಡಿದ್ದರು. ಅದರಂತೆ ಇದೀಗ ಮೋನಿಕಾ ವಿಜಯ್ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ದರ್ಶನ್ ನಟನೆಯ ‘ಕಾಟೇರ’ (Katera) ಚಿತ್ರದ ರೈಟರ್ ಜಡೇಶ್ ಕುಮಾರ್ (Jadesh Kumar) ಅವರ ನಿರ್ದೇಶನದಲ್ಲಿ ದುನಿಯಾ ವಿಜಯ್-ಮೋನಿಕಾ ಜೊತೆಯಾಗಿ ನಟಿಸುತ್ತಿದ್ದಾರೆ.

    ಸಂಬಂಧಗಳ ಕುರಿತು ಬಾಂಧವ್ಯ ಸಾರುವ ಸಿನಿಮಾದಲ್ಲಿ ದುನಿಯಾ ವಿಜಯ್- ಮಗಳು ಮೋನಿಕಾ ಒಟ್ಟಾಗಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಇಬ್ಬರ ಪಾತ್ರ ಕೂಡ ಡಿಫರೆಂಟ್ ಆಗಿದೆ. ತೆರೆಯ ಮೇಲೂ ಕೂಡ ತಂದೆ-ಮಗಳಾಗಿಯೇ ನಟಿಸುತ್ತಿದ್ದಾರಾ ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ಹೇಗೆ ವರ್ಕ್ ಆಗಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಇದನ್ನೂ ಓದಿ:ಪಡ್ಡೆಹುಡುಗರ ಎದೆಬಡಿತ ಹೆಚ್ಚಿಸಿದ ತೃಪ್ತಿ ದಿಮ್ರಿ ನಯಾ ಫೋಟೋಶೂಟ್

    ಮೋನಿಕಾ (Monica Vijay) ಅವರು ನಟನೆಗೆ ಬರೋದ್ದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಂಡು ಬಂದಿದ್ದಾರೆ. ಡ್ಯಾನ್ಸ್, ಫಿಟ್‌ನೆಸ್ ಹೀಗೆ ಸಾಕಷ್ಟು ವಿಚಾರಗಳಿಗೆ ಒತ್ತು ಕೊಟ್ಟು ಅಪ್ಪನ ಹಾದಿಯಲ್ಲಿ ಮಗಳು ಹೆಜ್ಜೆ ಇಡ್ತಿದ್ದಾರೆ. ಮೋನಿಕಾ ವಿಜಯ್‌ ಕೂಡ ನಟಿಯಾಗಿ ಗೆದ್ದು ಬೀಗುತ್ತಾರಾ ಕಾದುನೋಡಬೇಕಿದೆ.

  • ‘ಕಾಟೇರ ಕ್ವೀನ್’ ಬೋಲ್ಡ್ ಅವತಾರಕ್ಕೆ ಪಸಂದಾಗವ್ಳೆ ಎಂದ ಫ್ಯಾನ್ಸ್

    ‘ಕಾಟೇರ ಕ್ವೀನ್’ ಬೋಲ್ಡ್ ಅವತಾರಕ್ಕೆ ಪಸಂದಾಗವ್ಳೆ ಎಂದ ಫ್ಯಾನ್ಸ್

    ಡಿಬಾಸ್ ಹೀರೋಯಿನ್ ಆರಾಧನಾ ರಾಮ್ (Aradhanaa Ram) ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಆರಾಧನಾ ನಯಾ ಲುಕ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:2ನೇ ಮದುವೆ ಬಗ್ಗೆ ಮಾತಾಡಿದ ನಟಿ ಸಮಂತಾ

    ಮಾಲಾಶ್ರೀ (Malashree) ಪುತ್ರಿ ಆರಾಧನಾ ರಾಮ್ ಅವರು ಕೆಂಪು ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಆರಾಧನಾ ಮಾದಕ ನೋಟಕ್ಕೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಡಿಬಾಸ್ (Darshan) ನಾಯಕಿ ಪಸಂದಾಗವ್ಳೆ ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

    ನಿರ್ಮಾಪಕ ರಾಮು- ಮಾಲಾಶ್ರೀ ದಂಪತಿ ಪುತ್ರಿ ಆರಾಧನಾ ರಾಮ್ ಅವರು ದರ್ಶನ್‌ಗೆ ನಾಯಕಿಯಾಗುವ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಸದ್ಯ ಕಾಟೇರ (Katera Film) ಚಿತ್ರದ ‘ಪಸಂದಾಗವ್ನೆ’ ಎಂಬ ಸಾಂಗ್‌ನಲ್ಲಿ ಆರಾಧನಾ ಸಖತ್ ಆಗಿ ಡಿಬಾಸ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಟ್ರೈಲರ್ ಕೂಡ ಫ್ಯಾನ್ಸ್ ಮೆಚ್ಚುಗೆಗೆ ಪಾತ್ರವಾಗಿದೆ.

    ‘ಟಗರು ಪಲ್ಯ’ ಚಿತ್ರದ ಮೂಲಕ ಪ್ರೇಮ್ ಪುತ್ರಿ ಅಮೃತಾ ನಾಯಕಿಯಾಗಿ ನಟಿಸಿ ಗೆದ್ದರು. ಈಗ ಆರಾಧನಾ ರಾಮ್ ಕಾಟೇರ ಚಿತ್ರದ ಮೂಲಕ ನಾಯಕಿಯಾಗಿ ಗೆಲ್ಲುತ್ತಾರಾ? ಡಿ.29ಕ್ಕೆ ‘ಕಾಟೇರ’ ಸಿನಿಮಾ ರಿಲೀಸ್ ಆಗ್ತಿದೆ. ಅಂದು ಆರಾಧನಾ ಸಿನಿಮಾ ಭವಿಷ್ಯಕ್ಕೆ ಉತ್ತರ ಸಿಗಲಿದೆ.

  • ‘ಕಾಟೇರ’ ಸ್ಪೆಷಾಲಿಟಿ ಬಗ್ಗೆ ಅಪ್‌ಡೇಟ್‌ ಕೊಟ್ಟ ದರ್ಶನ್

    ‘ಕಾಟೇರ’ ಸ್ಪೆಷಾಲಿಟಿ ಬಗ್ಗೆ ಅಪ್‌ಡೇಟ್‌ ಕೊಟ್ಟ ದರ್ಶನ್

    ರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾದ ರಿಲೀಸ್ ಆಗೋಕೆ ಕೆಲವೇ ಕೆಲವು ದಿನಗಳು ಬಾಕಿಯಿದೆ. ಈ ಚಿತ್ರದ ಟ್ರೈಲರ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದೀಗ ಸುದ್ದಿಗೋಷ್ಠಿಯಲ್ಲಿ ‘ಕಾಟೇರ’ ಚಿತ್ರದ ಸ್ಪೆಷಾಲಿಟಿ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

    ಎಲ್ಲರೂ ಯಾರನ್ನೋ ಮೆಚ್ಚಿಸೋಕೆ ಮಾತಾಡಿಲ್ಲ. ಪ್ರತಿಯೊಬ್ಬರು ಪ್ರೀತಿಯಿಂದ ಟೀಮ್ ವರ್ಕ್‌ನಿಂದ ಸಿನಿಮಾ ಮಾಡಿದ್ವಿ. ಈ ಥರ ಸ್ಟ್ರೈಟ್ ಸಬ್ಜೆಕ್ಟ್ ಮಾಡೋದೇ ರಿಸ್ಕ್ ಎಂದಿದ್ದಾರೆ. ಸಿನಿಮಾ ಬಗ್ಗೆ ನಮ್ಮ ನಿರ್ಮಾಪಕರಿಗೆ ಫ್ಯಾಷನ್ ಇದೆ. ಕಥೆ ಕೂಡಲೇ ಇಷ್ಟವಾಯ್ತು ಎಂದು ದರ್ಶನ್ ಮಾಹಿತಿ ಬಿಚ್ಚಿಟ್ಟರು. ಎಲ್ಲರಿಗೂ ಸಿನಿಮಾ ಮೇಲಿನ ಪ್ರೀತಿ ಇಲ್ಲಿಗೆ ಕರೆದುಕೊಂಡು ಬಂದಿದೆ. ಬೀರಾದಾರ್ ಸರ್ ಪಾತ್ರ ತುಂಬಾ ಚೆನ್ನಾಗಿದೆ ಎಂದು ದರ್ಶನ್ ಹೊಗಳಿದ್ದಾರೆ.

    ಅದೆಷ್ಟೋ ಕಲಾವಿದರು ಡೈಲಾಗ್ ಹೇಳಿದ್ದರೆ ಅರ್ಥವಾಗಲ್ಲ. ಆದರೆ ಶ್ರುತಿ ಮೇಡಂ ಕಣ್ಣಲ್ಲೇ ಹೆಣ್ಣಿನ ಭಾವನೆ ತೋರಿಸ್ತಾರೆ. ಅಂತಹ ಕಲಾವಿದೆ ಶ್ರುತಿ ಅವರು ಎಂದು ದರ್ಶನ್ ಮೆಚ್ಚಿ ಮಾತನಾಡಿದ್ದರು. ಹೀರೋಯಿನ್ ನೀವು ತುಂಬಾ ಚೆನ್ನಾಗಿ ಅಭಿನಯಿಸಿದ್ದೀರಿ. ಒನ್ ಟೇಕ್ ಆರ್ಟಿಸ್ಟ್ ಎಂದು ಮಾಲಾಶ್ರೀ ಪುತ್ರಿ ಆರಾಧನಾ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ವಿಷ್ಣುವರ್ಧನ್ ಪುಣ್ಯಭೂಮಿ ಉಳಿವಿನ ಹೋರಾಟಕ್ಕೆ ಕಿಚ್ಚನ ಬೆಂಬಲ

    ತಂದೆ ಒಂದು ಮಾತು ಆಗಾಗ ಹೇಳುತ್ತಿದ್ದರು. ಯಾರ ಜೊತೆ ಆಕ್ಟ್ ಮಾಡೋಕೂ ಭಯ ಆಗಲ್ಲ ಈ ಅಮ್ಮ ಮಾಲಾಶ್ರೀ ಜೊತೆ ಮಾಡುವಾಗ ಭಯ ಆಗುತ್ತೆ ಅಂದಿದ್ದರು ಎಂದು ದರ್ಶನ್ ಸ್ಮರಿಸಿದ್ದಾರೆ. ‘ಕಾಟೇರ’ (Katera) ಸಿನಿಮಾದಲ್ಲಿ ಮೂರು ಫೈಟ್ ಇದೆ. ಒಂದು ಫೈಟ್‌ನಲ್ಲಿ ಎರಡೂ ಕೈ ಇದೆ. ಇನ್ನೊಂದು ಫೈಟ್ ದೃಶ್ಯದಲ್ಲಿ ಒಂದು ಕೈ ಇದೆ. ಮತ್ತೊಂದು ಫೈಟ್‌ನಲ್ಲಿ ಕೈಗಳೇ ಇಲ್ಲ. ಹಾಗಾದ್ರೆ ಹೀರೋ ಹೇಗೆ ಫೈಟ್ ಮಾಡಬಹುದು ಅಂತ ನೀವೇ ಯೋಚನೆ ಮಾಡಿ. ಆದರೆ ಮೂರು ಫೈಟ್ ಕೂಡ ವಿಭಿನ್ನವಾಗಿ ಮೂಡಿ ಬಂದಿದೆ ಎಂದು ದರ್ಶನ್ (Darshan) ಮಾತನಾಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಟ್ರೈಲರ್ ರಿಲೀಸ್ ಮಾಡ್ತಾ ಇದ್ದೀವಿ. ‘ಕಾಟೇರ’ (Katera) ಇದು ರೈತನ ಮೇಲೆ ಕಥೆ ಮಾಡಿರುವ ಚಿತ್ರ. ಡಿ.29ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿಲ್ಲ. ಅಪ್ಪಟ ಕನ್ನಡ ಸಿನಿಮಾ ಮಾಡಿದ್ದೀವಿ ಎಂದು ಮಾತನಾಡಿದ್ದರು.

  • Darshan: ‘ಕಾಟೇರ’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರಾಕ್‌ಲೈನ್ ವೆಂಕಟೇಶ್

    Darshan: ‘ಕಾಟೇರ’ ಬಗ್ಗೆ ಬಿಗ್ ಅಪ್‌ಡೇಟ್ ಕೊಟ್ಟ ರಾಕ್‌ಲೈನ್ ವೆಂಕಟೇಶ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera) ಸಿನಿಮಾ ಇದೇ ಡಿ.29ಕ್ಕೆ ರಿಲೀಸ್ ಆಗ್ತಿದೆ. ಟ್ರೈಲರ್‌ ರಿಲೀಸ್ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಿಹಿಸುದ್ದಿ ನೀಡಿದ್ದಾರೆ. ಸಿನಿಮಾದಲ್ಲಿ ದರ್ಶನ್ (Darshan) ಲುಕ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

    ತರುಣ್ ಸುಧೀರ್ ನಿರ್ದೇಶನದಲ್ಲಿ 70 ದಶಕದ ಕಥೆ ಮೂಡಿ ಬಂದಿದ್ದು, ದರ್ಶನ್‌ಗೆ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟಿಸಿದ್ದಾರೆ. ಸಿನಿಮಾ ರಿಲೀಸ್ ಮುನ್ನವೇ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಬಾತ್ ಟಬ್‌ನಲ್ಲಿ ಸಾನ್ಯ ಅಯ್ಯರ್ ಫೋಟೋಶೂಟ್

    ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ನಾವೆಲ್ಲರೂ ಇಂದು ಇಲ್ಲಿ ಸೇರಿದ್ದೀವಿ. ಡಿ.16ಕ್ಕೆ ‘ಕಾಟೇರ’ ಚಿತ್ರದ ಟ್ರೈಲರ್‌ ರಿಲೀಸ್‌ ಆಗ್ತಿದೆ. ಇದೇ ತಿಂಗಳು 29ಕ್ಕೆ ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ನಿರ್ಮಾಪಕನಾಗಿ ಚಿತ್ರ ಹಿಟ್ ಆಗಬೇಕು ಅನ್ನೋ ಆಸೆಯೊಂದಿಗೆ ಚಿತ್ರ ಮಾಡಿದ್ದೇನೆ. ಸಾಕಷ್ಟು ಹಿರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

    ದರ್ಶನ್ ಯಾವ ರೀತಿ ಕಾಣಿಸಿಕೊಳ್ತಿದ್ದಾರೆ ಅನ್ನೋ ಕುತೂಹಲ ನಿಮಗೆ ಇದೆ. ಎಲ್ಲರೂ ಕೇಳ್ತಿದ್ರಿ ಅದೇ ಖುಷಿ ಕೊಟ್ಟಿದೆ. ‘ಕಾಟೇರ’ ಚಿತ್ರಕ್ಕೆ ಹರಿಕೃಷ್ಣ ಒಳ್ಳೆಯ ಮ್ಯೂಸಿಕ್ ಕೊಟ್ಟಿದ್ದಾರೆ. ಈ ಚಿತ್ರ ನನಗೆ ಹೊಸ ಅನುಭವ ಆಯ್ತು ಎಂದು ಸಿನಿಮಾ ಬಗ್ಗೆ ಖುಷಿಯಿಂದ ಮಾತನಾಡಿದ್ದಾರೆ.

  • ಪುತ್ರಿಯ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದ ಮಾಲಾಶ್ರೀ

    ಪುತ್ರಿಯ ಜೊತೆ ಸಿದ್ಧಿವಿನಾಯಕನ ದರ್ಶನ ಪಡೆದ ಮಾಲಾಶ್ರೀ

    ನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ (Malashree) ಅವರು ಪುತ್ರಿಯ ಜೊತೆ ಸಿದ್ಧಿವಿನಾಯಕ ದೇವರ ದರ್ಶನ ಪಡೆದಿದ್ದಾರೆ. ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

    ನಟಿ ಮಾಲಾಶ್ರೀ ಪಡ್ಡೆಹುಡುಗರ ಕನಸಿನ ರಾಣಿಯಾಗಿ ಮರೆದವರು. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಜ್ಯೂ.ಮಾಲಾಶ್ರೀ ಆರಾಧಾನಾ (Aradhana Ram) ಕೂಡ ಸಿನಿಮಾಗೆ ಎಂಟ್ರಿ ಕೊಡ್ತಿದ್ದಾರೆ. ಈ ಬೆನ್ನಲ್ಲೇ ದೇವರ ಸನ್ನಿಧಿಗೆ ಮಾಲಾಶ್ರೀ-ಆರಾಧಾನಾ ಭೇಟಿ ನೀಡಿದ್ದಾರೆ. 5ಕ್ಕೂ ಹೆಚ್ಚು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿರುವ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಮಾಲಾಶ್ರೀ ಕುಟುಂಬವು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಜೊತೆ ತೆರೆಹಂಚಿಕೊಳ್ತಾರಂತೆ ತೃಪ್ತಿ ದಿಮ್ರಿ

    ಮಾಲಾಶ್ರೀ- ರಾಮು ಅವರ ಪುತ್ರಿ ಆರಾಧಾನಾ ‘ಕಾಟೇರ’ (Katera Film) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಲಗ್ಗೆ ಇಟ್ಟಿದ್ದಾರೆ.

  • ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ದರ್ಶನ್‌ ಜೊತೆ ಆಕ್ಟ್‌ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಕಾಟೇರ’ (Katera Film) ಸಿನಿಮಾ ಇಂದು ಕೊನೆಯ ಹಂತದ ಶೂಟಿಂಗ್ ಮುಕ್ತಾಯವಾಗಿದೆ. ಚಿತ್ರತಂಡದ ಕಡೆಯಿಂದ ಇಂದು (ಸೆ.11) ಸುದ್ದಿಗೋಷ್ಠಿ ಆಯೋಜಿಸಿದೆ. ಈ ಚಿತ್ರದ ಮೂಲಕ ನಾಯಕಿಯಾಗಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಯುವನಟಿ ಆರಾಧನಾ ರಾಮ್ ಸಂತಸ ವ್ಯಕ್ತಪಡಿಸಿದ್ದರು. ತೆರೆಹಿಂದಿನ ಅನುಭವ ಬಿಚ್ಚಿಟ್ಟರು.

    ದರ್ಶನ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಚಾನ್ಸ್ ಸಿಕ್ಕಿದ್ದಕ್ಕೆ ತುಂಬಾ ಖುಷಿಯಿದೆ. ಪೋಸ್ಟರ್‌ನಲ್ಲಿ ನನ್ನ ನೋಡಿದ್ರೆ, ಅದು ನಾನೇ ನಾ ಅಂತಾ ಅನಿಸುತ್ತಾಯಿದೆ. ದರ್ಶನ್ ಅವರ ಜೊತೆ ಫಸ್ಟ್ ಟೈಮ್ ವರ್ಕ್ ಮಾಡುತ್ತಾ ಇದ್ದೀನಿ ಎಂದು ಒಂದು ದಿನನೂ ಅನಿಸಲಿಲ್ಲ. ನಟಿಸೋದಕ್ಕೆ  ಸರ್ಪೋಟ್ ಮಾಡಿದ್ದರು. ನನಗೆ ಸೆಟ್‌ನಲ್ಲಿ ದರ್ಶನ್‌ ಸರ್ ಚಾಕಲೇಟ್‌ ತಂದು ಕೊಡುತ್ತಾ ಇದ್ದರು. ನಮ್ಮ ಡಿ ಬಾಸ್ ಹೀರೋ ಬಗ್ಗೆ ಎಷ್ಟು ಮಾತನಾಡಿದ್ದರು ಅದು ಸಾಕಾಗೋಲ್ಲ. ಇದನ್ನೂ ಓದಿ:‘ಮ್ಯಾಟ್ನಿ’ ಚಿತ್ರದ ಎಣ್ಣೆ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ನೀನಾಸಂ ಸತೀಶ್

    ತರುಣ್ (Tarun) ಅವರಂತಹ ನಿರ್ದೇಶಕರ ನಿರ್ದೇಶನದಲ್ಲಿ ಮೊದಲ ಬಾರಿ ನಟಿಸುತ್ತಿದ್ದೇನೆ ಅಂದರೆ ಅದು ನನ್ನ ಅದೃಷ್ಟ. ದಿನ ಹೊಸ ತರಹದ ಚಾಲೆಂಜ್ ಕೊಡುತ್ತಿದ್ದರು. ಈ ತರಹ ನೀನು ಮಾಡಬಹುದು ಅಂತಿದ್ರು. ಈ ಅವಕಾಶಕ್ಕೆ ನಾನು ಅಭಾರಿಯಾಗಿದ್ದೇನೆ. ನಿಮ್ಮ ಸಿನಿಮಾ ಕಲ್ಪನೆಯನ್ನ ನಾನು ಸ್ವಲ್ಪ ಆದರೂ ಟಚ್ ಮಾಡಿದ್ದೇನೆ ಎಂದು ಭಾವಿಸುತ್ತೇನೆ ಎಂದು ಡೈರೆಕ್ಟರ್ ಬಗ್ಗೆ ನಟಿ ಮಾತನಾಡಿದ್ದಾರೆ.

    ‘ಕಾಟೇರ’ (Katera) ಸಿನಿಮಾದಿಂದ ಕಲಿತ್ತಿದ್ದೇನೆ. ಪ್ರತಿದಿನವೂ ಕಲಿಯೋದು ಇತ್ತು. ನನಗೆ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ರಾಕ್‌ಲೈನ್ ವೆಂಕಟೇಶ್‌ಗೆ ಮೆಚ್ಚುಗೆ ಸೂಚಿಸಿದ್ದರು ಆರಾಧನಾ ರಾಮ್.

    ಚಾಲೆಂಜಿಂಗ್ ಸ್ಟಾರ್ ದರ್ಶನ್-ಆರಾಧನಾ ರಾಮ್ (Aradhana Ram) ನಟನೆಯ ಸಿನಿಮಾಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]