Tag: kateel durgaparameshwari temple

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಶಿಲ್ಪಾ ಶೆಟ್ಟಿ

    ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ (Shilpa Shetty) ಅವರು ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ರಾಜಮೌಳಿ ಮೇಲೆ ಗಂಭೀರ ಆರೋಪ : ನಿರ್ಮಾಪಕ ಆತ್ಮಹತ್ಯೆ

    ಕುಟುಂಬದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಶೆಟ್ಟಿಯವರ ಮಗ, ಮಗಳು, ತಾಯಿ, ತಂಗಿ ನಟಿ ಶಮಿತಾ ಶೆಟ್ಟಿ ಜೊತೆ ಬಂದು ಕಟೀಲು ದೇವಿಯ ದರ್ಶನ ಪಡೆದು ಮಲ್ಲಿಗೆ ಹೂವು ಹರಕೆ ರೂಪದಲ್ಲಿ ದೇವಿಗೆ ನೀಡಿದ್ದಾರೆ. ಕಟೀಲು ಪರಿಸರದ ಮೊದಲಾಡಿಗುತ್ತುನಲ್ಲಿ ಮೂಲ ಮನೆ ಹೊಂದಿರುವ ಶಿಲ್ಪಾ ಶೆಟ್ಟಿ ಆಗಾಗ ಕಟೀಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿರುತ್ತಾರೆ.

    ಅಂದಹಾಗೆ, ನಟಿ ಶಿಲ್ಪಾ ಶೆಟ್ಟಿ ಅವರು ಡೈರೆಕ್ಟರ್ ಪ್ರೇಮ್ ಮತ್ತು ಧ್ರುವ ಸರ್ಜಾ ನಟನೆಯ ‘ಕೆಡಿ’ (KD Film) ಸಿನಿಮಾದಲ್ಲಿ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಹಲವು ವರ್ಷಗಳ ಬಳಿಕ ಈ ಚಿತ್ರದ ಮೂಲಕ ಅವರು ಕಮ್‌ಬ್ಯಾಕ್ ಆಗುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ರಿಲೀಸ್‌ ಆಗಲಿದೆ.

  • UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್‌ ಟೆಂಪಲ್‌ ರನ್

    UI ರಿಲೀಸ್‌ಗೂ ಮುನ್ನ ಉಪೇಂದ್ರ & ಟೀಮ್‌ ಟೆಂಪಲ್‌ ರನ್

    ರಿಯಲ್ ಸ್ಟಾರ್ ಉಪೇಂದ್ರ (Upendra) ನಟನೆಯ UI ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ‘ಯುಐ’ ಟೀಮ್ ಜೊತೆ ಉಪೇಂದ್ರ ಭೇಟಿ ನೀಡಿದ್ದಾರೆ. ಇದನ್ನೂ ಓದಿ:BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    ‘ಯುಐ’ ವಾರ್ನರ್‌ಗೆ ಅಭಿಮಾನಿಗಳಿಂದ ಉತ್ತರ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ರಿಲೀಸ್‌ಗೂ ಸಿದ್ಧವಾಗಿದೆ. ಈ ಹಿನ್ನೆಲೆ, ಉಪೇಂದ್ರ ಅವರು ಶಕ್ತಿ ದೇವತೆ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆದಿದ್ದಾರೆ. ದೇವಿಗೆ ಪೂಜೆ ಸಲ್ಲಿಸಿ, ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ನಂತರ ಉಪೇಂದ್ರ & ಟೀಮ್ ಕೊರಗಜ್ಜ ದೈವದ ದರ್ಶನ ಪಡೆದಿದ್ದಾರೆ.

    ಉಪೇಂದ್ರ ಜೊತೆ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಲಹರಿ ವೇಲು ಹಾಗೂ ನವೀನ್ ಮನೋಹರನ್ ಕೂಡ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ, ಉಪೇಂದ್ರ ಜೊತೆಗಿನ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇನ್ನೂ ಇಂದು (ಡಿ.3) ಸಂಜೆ ಮಂಗಳೂರಿನಲ್ಲಿ ನಡೆಯಲಿರುವ ‘ಯುಐ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದೆ ಚಿತ್ರತಂಡ.

    ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

  • ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಾಲಿ, ನವೀನ್‌ ಶಂಕರ್

    ಕಟೀಲು ದುರ್ಗಾಪರಮೇಶ್ವರಿ ದರ್ಶನ ಪಡೆದ ಡಾಲಿ, ನವೀನ್‌ ಶಂಕರ್

    ನ್ನಡದ ನಟ ಡಾಲಿ (Daali Dhananjay) ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಿನಿಮಾ ಕೆಲಸಕ್ಕೆ ಬ್ರೇಕ್‌ ಸಿಕ್ಕ ಬೆನ್ನಲ್ಲೇ ಸ್ನೇಹಿತರ ಜೊತೆ ಮಂಗಳೂರಿನ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಡಾಲಿ ಭೇಟಿ ನೀಡಿದ್ದಾರೆ. ಇದನ್ನೂ ಓದಿ:BBK 11: ಬಿಗ್‌ ಬಾಸ್‌ ನಿರೂಪಣೆಗೆ ಕಿಚ್ಚ ಸುದೀಪ್‌ ಗುಡ್‌ಬೈ

    ‘ಸಲಾರ್’ ನಟ ನವೀನ್ ಶಂಕರ್ (Naveen Shankar) ಜೊತೆ ಡಾಲಿ ಧನಂಜಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ, ಡಾಲಿ ಮತ್ತು ನವೀನ್ ಶಂಕರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಫ್ಯಾನ್ಸ್ ಮುಗಿಬಿದ್ದಿದ್ದಾರೆ.

    ಅಂದಹಾಗೆ, ಅಣ್ಣ ಫ್ರಂ ಮೆಕ್ಸಿಕೋ, ಉತ್ತರಕಾಂಡ, ನಾಡಪ್ರಭು ಕೆಂಪೇಗೌಡ ಸೇರಿದಂತೆ ಡಾಲಿ ಕೈಯಲ್ಲಿ ಹಲವು ಸಿನಿಮಾಗಳಿವೆ. ಜೊತೆಗೆ ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಧನಂಜಯ ಅವಕಾಶ ನೀಡುತ್ತಿದ್ದಾರೆ. ಇನ್ನೂ ಶಿವಣ್ಣ ನಟನೆಯ ಹೊಸ ಸಿನಿಮಾದಲ್ಲಿ ನವೀನ್ ಶಂಕರ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  • ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ – ಕಟೀಲು ದುರ್ಗಾಪರಮೇಶ್ವರಿಯ ದರ್ಶನ

    ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ – ಕಟೀಲು ದುರ್ಗಾಪರಮೇಶ್ವರಿಯ ದರ್ಶನ

    – ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗಿ

    ಮಂಗಳೂರು: ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ (Shivam Dube) ಮಂಗಳೂರಿಗೆ (Mangaluru) ಭೇಟಿ ನೀಡಿದ್ದಾರೆ. ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durgaparameshwari Temple) ಭೇಟಿ ನೀಡಿದ ದುಬೆ, ದೇವಿಯ ದರ್ಶನ ಪಡೆದಿದ್ದಾರೆ.

    ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವತಿಯಿಂದ ಶಿವಂ ದುಬೆ ಅವರಿಗೆ ದೇವಳದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ದೇವಳದ ಅರ್ಚಕರು, ಆಡಳಿತ ಮಂಡಳಿಯವರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ದುಬೆ ಪಾಲ್ಗೊಂಡರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಈ ಬಾರಿಯೂ ಜನ ಜೆಡಿಎಸ್‌ ಕೈ ಹಿಡಿಯುತ್ತಾರೆ: ನಿಖಿಲ್‌ ಕುಮಾರಸ್ವಾಮಿ

    ಮಂಗಳೂರಿನಲ್ಲಿ ಹುಲಿವೇಷ ಸ್ಪರ್ಧೆಯ ಅಬ್ಬರ ಜೋರಾಗಿ ನಡೆಯುತ್ತಿದ್ದು, ನಟ ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಸೇರಿದಂತೆ ಅನೇಕ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿ ಮಂಗಳೂರಿನ ವಿವಿಧೆಡೆ ಹುಲಿ ಕುಣಿತ ಸ್ಪರ್ಧೆ ನಡೆಯುತ್ತಿದೆ. ನಗರದ ನೆಹರೂ ಮೈದಾನದಲ್ಲಿ ನಡೆದ ಪಿಲಿಪರ್ಬ ಹುಲಿವೇಷ ಕುಣಿತದ ಸ್ಪರ್ಧೆಗೆ ಅತಿಥಿಯಾಗಿ ಆಗಮಿಸಿದ ಚಿತ್ರನಟ ರಾಜ್ ಬಿ ಶೆಟ್ಟಿ ವೇದಿಕೆಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದರು. ಇದನ್ನೂ ಓದಿ: Mysuru Dasara Photo Gallery: ಜಂಬೂಸವಾರಿ ಮೆರವಣಿಗೆ ವೈಭವ ಕಣ್ತುಂಬಿಕೊಂಡ ಕೋಟ್ಯಂತರ ಜನರು

    ಹುಲಿವೇಷಧಾರಿಗಳು ವೇದಿಕೆಯಲ್ಲಿ ಹುಲಿಡ್ಯಾನ್ಸ್ ಮಾಡುತ್ತಿದ್ದಂತೆ ರಾಜ್ ಬಿ ಶೆಟ್ಟಿಯೂ ಅವರೊಂದಿಗೆ ಸ್ಟೆಪ್ ಹಾಕಿ ಎಲ್ಲರನ್ನೂ ರಂಜಿಸಿದರು. ಬಳಿಕ ಇದೇ ವೇದಿಕೆಗೆ ಆಗಮಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಲಿವೇಷ ಹಾಕಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿದರು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಜಯ್ ದತ್ ಭೇಟಿ

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನಿರ್ಮಾಪಕಿ ಎಕ್ತಾ ಕಪೂರ್ ಭೇಟಿ

    ಬಾಲಿವುಡ್ (Bollywood) ನಿರ್ದೇಶಕಿ ಕಮ್ ನಿರ್ಮಾಪಕಿ ಎಕ್ತಾ ಕಪೂರ್ (Ekta Kapoor) ಇದೀಗ ಮಂಗಳೂರಿನ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕುಟುಂಬದ ಜೊತೆ ಕಟೀಲು ದುರ್ಗಾಪರಮೇಶ್ವರಿ (Kateel Sri Durgaparameshwari Temple) ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಮೊದಲ ಬಾರಿಗೆ ಭೇಟಿ ನೀಡಿರುವ ಎಕ್ತಾ ಕಪೂರ್, ಈಗ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಸಮಯ ದೇವಸ್ಥಾನದಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಬಳಿಕ ದೇವಸ್ಥಾನದ ವತಿಯಿಂದ ದೇವರ ವಿಶೇಷ ವಸ್ತ್ರ ನೀಡಿ ಗೌರವಿದ್ದಾರೆ. ನಂತರ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಎಕ್ತಾ ಕಪೂರ್ ಕುಟುಂಬ ಭೇಟಿ ಕೊಟ್ಟಿದ್ದಾರೆ.

    ಇನ್ನೂ ಹಿಂದಿ ಸಿನಿಮಾರಂಗದಲ್ಲಿ ಸೀರಿಯಲ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಎಕ್ ವಿಲನ್, ಬಿಗ್ ಬಿ ಮತ್ತು ರಶ್ಮಿಕಾ ನಟನೆಯ ‘ಗುಡ್ ಬೈ’ ಸಿನಿಮಾ, ಯೂ ಟರ್ನ್ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  • ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಕುಟುಂಬ ಸಮೇತ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಭೇಟಿ

    ಬಾಲಿವುಡ್ (Bollywood) ಖ್ಯಾತ ನಟಿ ಶಿಲ್ಪಾ ಶೆಟ್ಟಿ (Shilpa Shetty) ಅವರು ತುಳುನಾಡಿನ ಕಟೀಲು ದುರ್ಗಾಪರಮೇಶ್ವರಿ (Kateel Durgaparameshwari Temple) ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ಶಿಲ್ಪಾ ಶೆಟ್ಟಿ ಅವರು ಮೂಲತಃ ಮಂಗಳೂರಿನವರು, ಮುಂಬೈನಲ್ಲಿ ಸೆಟಲ್ ಆಗಿದ್ದರು ಕೂಡ ಇಂದಿಗೂ ದೈವ ಕೋಲ, ಇನ್ನಿತರ ಪೂಜೆ ಕಾರ್ಯಕ್ರಮಗಳಿಗೆ ಆಗಾಗ ಕುಟುಂಬ ಸಮೇತ ಮಂಗಳೂರಿಗೆ ಭೇಟಿ ನೀಡುತ್ತಾರೆ. ಅದರಂತೆಯೇ ಇದೀಗ ಶಿಲ್ಪಾ ಶೆಟ್ಟಿ ಕುಟುಂಬ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶಿಲ್ಪಾ ಜೊತೆ ಪತಿ ರಾಜ್‌ ಕುಂದ್ರಾ, ಶಮಿತಾ ಶೆಟ್ಟಿ, ಸುನಂದಾ ಶೆಟ್ಟಿ ಭಾಗಿಯಾಗಿದ್ದರು.  ದೇವಳದ ವತಿಯಿಂದ ಶಿಲ್ಪಾ ಶೆಟ್ಟಿಗೆ ದೇವರ ವಸ್ತ್ರ ಪ್ರಸಾದ ನೀಡಿ ಅಶೀರ್ವಾದ ಮಾಡಲಾಯಿತು. ಇದನ್ನೂ ಓದಿ:ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಯಶ್ ವೀಡಿಯೋ ವೈರಲ್

    ಕನ್ನಡದ ‘ಕೆಡಿ’ ಸಿನಿಮಾ ಮೂಲಕ 17 ವರ್ಷಗಳ ನಂತರ ಮತ್ತೆ ನಟಿ ಶಿಲ್ಪಾ ಶೆಟ್ಟಿ ಸ್ಯಾಂಡಲ್‌ವುಡ್ ಕಂಬ್ಯಾಕ್ ಆಗಿದ್ದಾರೆ. ಡೈರೆಕ್ಟರ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ ಜೊತೆ ಪ್ರಮುಖ ಪಾತ್ರದಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ.

  • ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ

    ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಿಷಬ್ ಶೆಟ್ಟಿ ಭೇಟಿ

    `ಕಾಂತಾರ’ (Kantara) ಚಿತ್ರದ ಸೂಪರ್ ಸಕ್ಸಸ್ ನಂತರ ರಿಷಬ್ ಶೆಟ್ಟಿ,(Rishab Shetty) ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ರಿಷಬ್‌ ಸಿನಿಮಾ ದೇಶದ ಏಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೇ ಖುಷಿಯಲ್ಲಿ ಕಟೀಲು ಸನ್ನಿಧಾನಕ್ಕೆ ನಟ ಭೇಟಿ ನೀಡಿದ್ದಾರೆ.

    ಚಿತ್ರರಂಗದಲ್ಲಿ `ಕಾಂತಾರ’ ಹವಾ ಜೋರಾಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ ನಂತರವೂ ಒಟಿಟಿಯಲ್ಲಿ ಕೂಡ ಸಿನಿಮಾ ಸೌಂಡ್ ಮಾಡುತ್ತಿದೆ. ಸದ್ಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ (Kateel Durgaparameshwari Temple) ಭೇಟಿ ನೀಡಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    `ಕಾಂತಾರ’ ನಿನಿಮಾ ಯಶಸ್ಸಿನ ಬಳಿಕ ಮೊದಲ ಬಾರಿಗೆ ಕಟೀಲಿಗೆ ರಿಷಬ್ ದಂಪತಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಳದ ವತಿಯಿಂದ ರಿಷಬ್ ಶೆಟ್ಟಿಗೆ ಆತ್ಮೀಯ ಗೌರವ ನೀಡಲಾಗಿದ್ದು, ದೇವರ ಶೇಷ ವಸ್ತ್ರ, ಪ್ರಸಾದ ನೀಡಿ ಆಡಳಿತ ಮಂಡಳಿ ಗೌರವ ಸೂಚಿಸಿದೆ. ಬಳಿಕ ನೆಚ್ಚಿನ ನಟನ ಜೊತೆ ದೇವಸ್ಥಾನದ ಮುಂಭಾಗ ಸೆಲ್ಪಿ ಕ್ಲಿಕ್ಕಿಸಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಟೀಲಿನಲ್ಲಿ ಎಲ್ಲ ಸೇವೆಗಳು ಆರಂಭ – ಭಕ್ತರು ಪಾಲನೆ ಮಾಡಬೇಕಾದ ನಿಯಮಗಳೇನು?

    ಕಟೀಲಿನಲ್ಲಿ ಎಲ್ಲ ಸೇವೆಗಳು ಆರಂಭ – ಭಕ್ತರು ಪಾಲನೆ ಮಾಡಬೇಕಾದ ನಿಯಮಗಳೇನು?

    ಮಂಗಳೂರು: ಸರಕಾರದ ನಿರ್ದೇಶನದಂತೆ  ಬುಧವಾರದಿಂದ ಕಟೀಲು ಶ್ರೀದುರ್ಗಾಪರಮೇಶ್ವರೀ  ದೇವಳದಲ್ಲಿ  ಕೆಲವನ್ನು ಹೊರತು ಪಡಿಸಿ ಎಲ್ಲ ಸೇವೆಗಳು ಆರಂಭಗೊಂಡಿದೆ.

    ದುರ್ಗಾನಮಸ್ಕಾರ, ಹೂವಿನಪೂಜೆ ಇತ್ಯಾದಿ ಎಲ್ಲ ಸೇವೆಗಳು ಕೋವಿಡ್‌19 ವಿಚಾರವಾಗಿ ಸರಕಾರ ನಿರ್ದೇಶಿಸಿರುವ ನಿಯಮಗಳನ್ನು ಪಾಲಿಸಿ ನಡೆಯುತ್ತವೆ. ಹಾಗಾಗಿ ಸಾಮಾಜಿಕ ಅಂತರ ಕಡ್ಡಾಯ. ವೃದ್ಧರಿಗೆ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ದೇವಳದ ಪ್ರವೇಶ ನಿಷೇಧವೇ ಮೊದಲಾದ ನಿಯಮಗಳು ಮುಂದುವರಿಯಲಿದೆ.

    1. ಎಲ್ಲ 12 ರಂಗಪೂಜೆಗಳನ್ನು ಮಾಡಿಸಿದಲ್ಲಿ ಸಾಮಾಜಿಕ ಅಂತರಕ್ಕೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಸದ್ಯ 5 ರಂಗಪೂಜಾಸೇವೆಗೆ ಮಾತ್ರಾವಕಾಶ ನೀಡಲಾಗುವುದು.

    2. ಹಣ್ಣುಕಾಯಿಸೇವೆಯನ್ನು ಕೊರೊನಾ ಮುಗಿಯುವ ವರೆಗೆ ನಡೆಸದಂತೆ ನಿರ್ಬಂಧಿಸಲಾಗಿದೆ.

    3.ತೀರ್ಥಕ್ಕೆ ಭಕ್ತಾದಿಗಳೇ  ಬಾಟಲಿ ತಂದಲ್ಲಿ ತೀರ್ಥಕೊಡಲಾಗುವುದಿಲ್ಲ. ತಂಬಿಗೆ ತಂದಲ್ಲಿ ಅದನ್ನು ಮುಟ್ಟುವ ಪ್ರಮೇಯ ಇಲ್ಲದಿರುವುದರಿಂದ ತೀರ್ಥ ನೀಡಲಾಗುವುದು.  ರಶೀದಿ ಮಾಡಿದವರಿಗೆ ದೇವಳದ ತೀರ್ಥ ಬಾಟಲಿ ನೀಡಲಾಗುವುದು.

    4. ಅನ್ನಪ್ರಾಶನ ಸೇವೆಗೆ ಮಕ್ಕಳಿಗೆ ದೇವಳಕ್ಕೆ ಪ್ರವೇಶವಿಲ್ಲ. ಸಮಯ ಮೀರಿ ಅನ್ನಪ್ರಾಶನ ಸಂಸ್ಕಾರ ಸಾಧುವಲ್ಲ. ಈ ಎರಡನ್ನೂ ಗಮನದಲ್ಲಿರಿಸಿ ಅನ್ನಪ್ರಾಶನ ಸೇವೆ ರಶೀದಿ ಮಾಡಿಸಿದ ಬಂಧುಗಳಿಗೆ ಅನ್ನಪ್ರಾಶನಕ್ಕೆ ನೀಡಲಾಗುವ ಗುಡಾನ್ನ ಪಾಯಸ  ಪ್ರಸಾದ ನೀಡಲಾಗುವುದು. ಹೆತ್ತವರು ಅವರವರ ಮನೆಯಲ್ಲಿ ತಮ್ಮ ಮಕ್ಕಳಿಗೆ ನೀಡುವುದು.

    5. ಸ್ವಯಂವರಪಾರ್ವತೀ ಅರ್ಚನೆ ಮಾಡಿಸುವವರು ದೇವಳದಲ್ಲಿ ಪ್ರಾರ್ಥನೆ ಮುಗಿಸಿ ಮೂಲಸ್ಥಾನ ಭ್ರಾಮರೀವನದಲ್ಲಿ ದೇವಿಗೆ ಪ್ರದಕ್ಷಿಣೆ ಬಂದು   ದೇವಳದಲ್ಲಿ ಪೂಜಾನಂತರ  ಪ್ರಸಾದ ಸ್ವೀಕರಿಸುವುದು.

    6. ವಾಹನ ಪೂಜೆಯು ಹಿಂದಿನಂತೆಯೇ ನಡೆಯಲಿದೆ.

    7. ಮದುವೆಯ ಶುಭದಿನದಂದು ದೇವಳವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಸರದಿಯಂತೆ ಏಕಕಾಲದಲ್ಲಿ ಒಂದೇ ಮದುವೆ ನಡೆಸುವ ಅವಕಾಶ ಕಲ್ಪಿಸಲಾಗುತ್ತದೆ.  ಮೊದಲಾಗಿ ನಿಗದಿಪಡಿಸಿದ ಸಮಯವನ್ನು ಭಕ್ತಾದಿಗಳು ಕಾದಿರಿಸಬೇಕಾಗುತ್ತದೆ.

    8. ಅಕ್ಷರಾಭ್ಯಾಸ ಸಂಸ್ಕಾರಕ್ಕೆ ಮಗುವಿನ ಉಪಸ್ಥಿತಿ ಅನಿವಾರ್ಯವಾಗಿರುವುದರಿಂದ ಸದ್ಯಕ್ಕೆ ಈ ಸೇವೆ  ಇಲ್ಲ.

    9. ಚಂಡಿಕಾಹೋಮ ಇತ್ಯಾದಿ ಹೋಮಗಳನ್ನು ಮೊದಲೇ‌ ನಿಗದಿಪಡಿಸಿದಲ್ಲಿ ನೆರವೇರಿಸಲಾಗುವುದು.

    10. ಅನ್ನಪ್ರಸಾದ ಇರುವುದಿಲ್ಲ. ಅನ್ನಪ್ರಸಾದದ ಕುರಿತಾಗಿ  ಏನನ್ನೂ ನಿರ್ದೇಶಿಸಲಾಗಿಲ್ಲ. ಆದ್ದರಿಂದ ಈ ಕುರಿತು ಮೇಲಧಿಕಾರಿಗಳಿಂದ ಸ್ಪಷ್ಟೀಕರಣ ಪಡೆದುಕೊಂಡು ನಂತರ ನಿರ್ಧರಿಸಲಾಗುವುದು.