Tag: KAT

  • ಹಾಸನ ತಹಶೀಲ್ದಾರ್ ಶ್ವೇತಾ ವರ್ಗಾವಣೆಗೆ ಕೆಎಟಿ ತಡೆ

    ಹಾಸನ ತಹಶೀಲ್ದಾರ್ ಶ್ವೇತಾ ವರ್ಗಾವಣೆಗೆ ಕೆಎಟಿ ತಡೆ

    ಹಾಸನ: ಇಲ್ಲಿನ ತಹಶೀಲ್ದಾರ್ (Tahasildar) ಆಗಿದ್ದ ಶ್ವೇತಾ ಅವರ ವರ್ಗಾವಣೆಗೆ (Transfer) ಕೆಎಟಿ (Karnataka Adminstration Tribunal) ತಡೆ ನೀಡಿದೆ. ಅಧಿಕಾರಿ ಶ್ವೇತಾ ಸೇರಿದಂತೆ ಇತ್ತೀಚೆಗೆ ಹದಿಮೂರು ಮಂದಿ ತಹಶೀಲ್ದಾರ್‍ರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶದ ವಿರುದ್ಧ ಶ್ವೇತಾ ಅವರು, ಇಲ್ಲಿ ಅಧಿಕಾರ ವಹಿಸಿಕೊಂಡು ಕೇವಲ ಎಂಟು ತಿಂಗಳಾಗಿವೆ. ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ವರ್ಗಾವಣೆ ಮಾಡಲಾಗಿದೆ ಎಂದು ಕೆಎಟಿ ಮೊರೆ ಹೋಗಿದ್ದರು.

    ಶ್ವೇತಾ ಅವರು ಗ್ರೇಡ್-1 ತಹಶೀಲ್ದಾರ್ ಆಗಿದ್ದು, ಅವರ ಸ್ಥಾನಕ್ಕೆ ಗ್ರೇಡ್-2 ತಹಸೀಲ್ದಾರ್‍ರನ್ನು ನಿಯೋಜನೆ ಮಾಡಿರುವುದು ಎಷ್ಟು ಸರಿ? ಇದು ಊರ್ಜಿತವೇ? ಎಂದು ಶ್ವೇತಾ ಅವರ ಪರ ವಕೀಲರು ಕರ್ನಾಟಕ ನ್ಯಾಯಾಧಿಕರಣದ ಮುಂದೆ ವಾದ ಮಂಡಿಸಿದ್ದರು. ಈ ವಾದ ಹಾಗೂ ಮನವಿಯನ್ನು ಪುರಸ್ಕರಿಸಿದ ನ್ಯಾಯಮಂಡಳಿ ಶ್ವೇತಾ ಅವರ ವರ್ಗಾವಣೆಗೆ ತಡೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನೂ ತೆಗೆದುಹಾಕ್ತೀವಿ – ಅಮಿತ್‌ ಶಾ

    ಕೆಎಟಿ ಆದೇಶದ ಪ್ರತಿ ರಾತ್ರಿ ಕೈ ಸೇರುವ ಸಾಧ್ಯತೆ ಇದ್ದು, ಅದನ್ನು ಪಡೆದ ನಂತರ ವರದಿ ಮಾಡಿಕೊಳ್ಳುವುದಾಗಿ ಶ್ವೇತಾ ಅವರು ತಿಳಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಚನ್ನರಾಯಪಟ್ಟಣ ತಹಸೀಲ್ದಾರ್ ಆಗಿದ್ದ ಗೋವಿಂದರಾಜು ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಗೀತಾ ಎಂಬುವವರನ್ನು ನಿಯೋಜನೆ ಮಾಡಲಾಗಿತ್ತು. ನಂತರ ಗೋವಿಂದರಾಜು ಕೆಎಟಿ ಮೊರೆ ಹೋದ ನಂತರ ಅವರ ಪರವೇ ತೀರ್ಪು ಹೊರ ಬಿದ್ದಿತ್ತು. ಅದೇ ಸನ್ನಿವೇಶ ಹಾಸನದಲ್ಲೂ ಮರುಕಳಿಸಿದೆ.

    ಶ್ವೇತಾ ಅವರ ಸ್ಥಾನಕ್ಕೆ ವರ್ಗಾವಣೆಯಾಗಿದ್ದ ಗ್ರೇಡ್-2 ತಹಸೀಲ್ದಾರ್ ಎಸ್.ನವೀನ್ ಕುಮಾರ್, ಇಂದು ಬೆಳಿಗ್ಗೆ ಹಾಸನ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲಾ ಪಂಚಾಯ್ತಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: 200 ಮಕ್ಕಳನ್ನು ಶಾಲೆಗೆ ಕಳಿಸದೇ ಇಸ್ಲಾಮಿಕ್ ಶಿಕ್ಷಣ – ಬೆಂಗಳೂರಿನ ಅನಾಥಾಶ್ರಮದ ಮೇಲೆ NCPCR ದಾಳಿ

  • ಕೆಎಟಿ ಆದೇಶಕ್ಕೆ ಸಿಎಂ ಸೆಡ್ಡು- ಆಪ್ತ ಎಂಜಿನಿಯರ್‍ನನ್ನು ಉಳಿಸಿಕೊಳ್ಳಲು ಒಂದೇ ದಿನದಲ್ಲಿ ಟ್ರಾನ್ಸ್ ಫರ್ ಕ್ಯಾನ್ಸಲ್

    ಕೆಎಟಿ ಆದೇಶಕ್ಕೆ ಸಿಎಂ ಸೆಡ್ಡು- ಆಪ್ತ ಎಂಜಿನಿಯರ್‍ನನ್ನು ಉಳಿಸಿಕೊಳ್ಳಲು ಒಂದೇ ದಿನದಲ್ಲಿ ಟ್ರಾನ್ಸ್ ಫರ್ ಕ್ಯಾನ್ಸಲ್

    ಬೆಂಗಳೂರು: ಆಪ್ತ ಎಂಜಿನಿಯರ್‍ನನ್ನು ವಿಧಾನಸೌಧದಲ್ಲೇ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ವರ್ಗಾವಣೆ ಆದೇಶವನ್ನೇ ಕ್ಯಾನ್ಸಲ್ ಮಾಡಿದ್ದಾರೆ.

    ವಿಧಾನಸೌಧದ ಸಹಾಯಕ ಕಾರ್ಯಪಾಲ ಅಭಿಯಂತರರಾಗಿ ಸುಮಾರು 3 ವರ್ಷದಿಂದ ಕೆಲಸ ಮಾಡುತ್ತಿದ್ದ ನಾಗೇಂದ್ರರನ್ನು ಆಗಸ್ಟ್ 13 ರಂದು ಸರ್ಕಾರ ಎಂಜಿನಿಯರ್‍ಗಳ ಸಾಮಾನ್ಯ ವರ್ಗಾವಣೆಯಲ್ಲಿ ಬಿಡಿಎಗೆ ವರ್ಗಾವಣೆ ಮಾಡಲಾಗಿತ್ತು. ನಾಗೇಂದ್ರ ಜಾಗಕ್ಕೆ ಶಿವಾಜಿ ಎ ಕವಳೆರವನ್ನ ನೇಮಿಸಲಾಗಿತ್ತು. ಆದ್ರೆ ಒಂದೇ ದಿನದಲ್ಲಿ ತಮ್ಮ ಪವರ್ ಬಳಿಸಿ ನಾಗೇಂದ್ರ ವರ್ಗಾವಣೆ ಆದೇಶವನ್ನ ಕ್ಯಾನ್ಸಲ್ ಮಾಡಿಸಿದ್ದಾರೆ.

    ನಾಗೇಂದ್ರರ ನಡೆಯನ್ನು ಪ್ರಶ್ನಿಸಿ ಶಿವಾಜಿ ಕೆಎಟಿ ಮೋರೆ ಹೋಗಿದ್ರು. ಕೆಎಟಿ ಕೂಡಾ ಶಿವಾಜಿ ಅವರ ವಾದವನ್ನ ಪುರಸ್ಕರಿಸಿ ಅಲ್ಲೇ ಮುಂದುವರೆಯುವಂತೆ ಆದೇಶ ನೀಡಿತ್ತು. ಆದ್ರೆ ತಮ್ಮ ಪ್ರಭಾವವನ್ನ ಬಳಸಿ ಸಿಎಂ ಸಿದ್ದರಾಮಯ್ಯರ ಮೂಲಕ ಕೆಎಟಿ ಆದೇಶಕ್ಕೆ ವಿರುದ್ಧವಾಗಿ ನಾಗೇಂದ್ರ ಶಿಫಾರಸ್ಸು ಪತ್ರ ತಂದಿದ್ದಾರೆ.

    ಸಿಎಂ ಕೂಡಾ ತಮ್ಮ ಪತ್ರದಲ್ಲಿ ವಿಧಾನಸೌಧಕ್ಕೆ ಇವರ ಕೆಲಸ ಅಗತ್ಯ ಇದೆ. ಇವರನ್ನೆ ಮುಂದುವರೆಸಿ ಅಂತ ಪತ್ರ ಬರೆದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

  • 2011ರ ಕೆಪಿಎಸ್‍ಸಿ ನೇಮಕಾತಿ: ಇಂದಿನ ಸಚಿವ ಸಂಪುಟದಲ್ಲಿ 362 ಮಂದಿ ಭವಿಷ್ಯ ನಿರ್ಧಾರ

    2011ರ ಕೆಪಿಎಸ್‍ಸಿ ನೇಮಕಾತಿ: ಇಂದಿನ ಸಚಿವ ಸಂಪುಟದಲ್ಲಿ 362 ಮಂದಿ ಭವಿಷ್ಯ ನಿರ್ಧಾರ

    ಬೆಂಗಳೂರು: 2011ನೇ ಸಾಲಿನ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ಭವಿಷ್ಯ ಇವತ್ತು ಕ್ಯಾಬಿನೆಟ್‍ನಲ್ಲಿ ನಿರ್ಧಾರವಾಗಲಿದೆ.

    362 ಮಂದಿ ಗೆಜೆಟೆಡ್ ಪ್ರೊಬೆಷನರಿ ನೇಮಕಾತಿ ರದ್ದತಿಗೆ ತಡೆಯಾಜ್ಞೆ ನೀಡಿದ್ದ ಕೆಎಟಿ(ಕರ್ನಾಟಕ ಅಡ್ಮಿನಿಸ್ಟ್ರೇಷನ್ ಟ್ರಿಬ್ಯುನಲ್), ಸಂಶಯ ಇರುವ 46 ಮಂದಿಯ ನೇಮಕಾತಿಯನ್ನು ಪರಾಮರ್ಶೆ ನಡೆಸಿ, ಉಳಿದವರನ್ನ ನೇಮಕಾತಿಗೊಳಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಇವತ್ತು ಮಹತ್ವದ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ.

    ಕೆಎಟಿ ಆದೇಶವನ್ನೇ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರುವುದು, ಸಂಶಯ ಇರುವ 46 ಮಂದಿ ಹೊರತುಪಡಿಸಿ ಉಳಿದವರನ್ನು ಷರತ್ತುಬದ್ಧವಾಗಿ ನೇಮಕಾತಿಗೊಳಿಸಿ ಆದೇಶ ಹೊರಡಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ. ಕೆಎಟಿ ಆದೇಶವನ್ನು ಪ್ರಶ್ನಿಸಲು ಕೆಲ ಸಚಿವರ ವಿರೋಧವಿದ್ದು, 46 ಮಂದಿ ಹೊರತುಪಡಿಸಿ ಉಳಿದವರಿಗೆ ನೇಮಕಾತಿಗೊಳಿಸುವ ನಿರ್ಧಾರವನ್ನು ಕ್ಯಾಬಿಬೆಟ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಸಂಶಯ ಇರುವ 46 ಮಂದಿ ನೇಮಕಾತಿ ಪರಾಮರ್ಶೆಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವ ಸಾಧ್ಯತೆಯಿದೆ.

    ಹೀಗಾಗಿ ಇವತ್ತಿನ ಕ್ಯಾಬಿನೆಟ್ ಕುತೂಹಲ ಮೂಡಿಸಿದ್ದು, 362 ಮಂದಿ ಭವಿಷ್ಯ ನಿರ್ಧಾರವಾಗಲಿದೆ.