Tag: Kashyap

  • ಬಹುದಿನದ ಗೆಳೆಯನ ಕೈ ಹಿಡಿದ ಸೈನಾ ನೆಹ್ವಾಲ್

    ಬಹುದಿನದ ಗೆಳೆಯನ ಕೈ ಹಿಡಿದ ಸೈನಾ ನೆಹ್ವಾಲ್

    ಮುಂಬೈ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ವಿವಾಹ ಮುಂಬೈನಲ್ಲಿ ಶುಕ್ರವಾರ ನೆರವೇರಿದೆ. ಬಹುದಿನಗಳ ಗೆಳೆಯ ಕಶ್ಯಪ್ ರನ್ನು ಕೈ ಹಿಡಿದ ಸೈನಾ ತಮ್ಮ ಮದುವೆ ಫೋಟೋ ಟ್ವೀಟ್ ಮಾಡಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಮದುವೆಯ ಬಗ್ಗೆ ಮಾಹಿತಿ ನೀಡಿದ್ದ ಸೈನಾ ಅವರು ತಮ್ಮ ಟ್ವೀಟ್ ನಲ್ಲಿ ‘ನನ್ನ ಜೀವನದ ಅತ್ಯುತ್ತಮ ಜೋಡಿ’ ಎಂದು ಬರೆದುಕೊಂಡು ಫೋಟೋ ಹಂಚಿಕೊಂಡಿದ್ದಾರೆ.

    ಈ ಹಿಂದೆ ಸೈನಾ, ಕಶ್ಯಪ್ ಮದುವೆ ಹೈದರಾಬಾದ್‍ನಲ್ಲಿ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಮುಂಬೈನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸೈನಾ, ಕಶ್ಯಪ್ ಕೈಹಿಡಿದಿದ್ದು, ಸಮಾರಂಭದಲ್ಲಿ ಆಪ್ತ ವಲಯದ ಸ್ನೇಹಿತರು ಸೇರಿದಂತೆ ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

    ಕಳೆದ ಮೂರ್ನಾಲ್ಕು ತಿಂಗಳಿಂದ ಬಾಲಿವುಡ್ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳ ಅದ್ಧೂರಿ ಮದುವೆಗಳು ನಡೆಯುತ್ತಿದ್ದು, ಸದ್ಯ ಸೈನಾ ಕಶ್ಯಪ್ ಮದುವೆಯೂ ಇದೇ ಸಾಲಿಗೆ ಸೇರ್ಪಡೆಯಾಗಿದೆ. ಬಾಲಿವುಡ್ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಹಾಗೂ ಪ್ರಿಯಾಂಕಾ ಚೋಪ್ರಾ, ನಿಕ್ ಮತ್ತು ಹಾಸ್ಯ ನಟ ಕಪಿಲ್ ಶರ್ಮ ಸೇರಿದಂತೆ ಹಲವರ ಮದುವೆ ಸಮಾರಂಭಗಳು ಕೆಲ ದಿನಗಳ ಅಂತರದಲ್ಲೇ ನಡೆದಿದೆ.

    ಉಳಿದಂತೆ ಏಷ್ಯಾದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮದುವೆಯೂ ಅದ್ಧೂರಿಯಾಗಿ ನಡೆಯಿತು. ಅಲ್ಲದೇ ಸ್ಯಾಂಡಲ್‍ವುಡ್ ನಟ ದಿಗಂತ್ ಹಾಗೂ ಐಂದ್ರಿತಾ ರೇ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಆ್ಯಮಸ್ಟರ್ ಡಮ್‍ನಲ್ಲಿ ಪಾಸ್‍ಪೋರ್ಟ್ ಕಳೆದಿದೆ, ಹೆಲ್ಪ್ ಮಾಡಿ-ಪಾರುಪಲ್ಲಿ ಕಶ್ಯಪ್

    ಆ್ಯಮಸ್ಟರ್ ಡಮ್‍ನಲ್ಲಿ ಪಾಸ್‍ಪೋರ್ಟ್ ಕಳೆದಿದೆ, ಹೆಲ್ಪ್ ಮಾಡಿ-ಪಾರುಪಲ್ಲಿ ಕಶ್ಯಪ್

    ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಪಾರುಪಲ್ಲಿ ಕಶ್ಯಪ್ ಅವರ ಪಾಸ್‍ಪೋರ್ಟ್ ವಿದೇಶದಲ್ಲಿ ಕಳ್ಳತನವಾಗಿದ್ದು, ಸಹಾಯ ಮಾಡಿ ಅಂತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಶನಿವಾರ ಮಧ್ಯಾಹ್ನ ಟ್ವೀಟ್ ಮಾಡಿದ್ದಾರೆ.

    ಆ್ಯಮಸ್ಟರ್ ಡಮ್‍ನಲ್ಲಿ ಶುಕ್ರವಾರ ರಾತ್ರಿ ನನ್ನ ಪಾಸ್‍ಪೋರ್ಟ್ ಕಳೆದಿದೆ. ಡೆನ್ಮಾರ್ಕ್ ಓಪನ್, ಫ್ರೆಂಚ್ ಓಪನ್ ಮತ್ತು ಸಾರಲೌಕ್ಷ ಓಪನ್ ಪಂದ್ಯವಿದೆ. ಭಾನುವಾರ ಡೆನ್ಮಾರ್ಕ್ ನಿಂದ ನನ್ನ ಟಿಕೆಟ್ ಬುಕ್ ಮಾಡಲಾಗಿದೆ. ಹಾಗಾಗಿ ನನಗೆ ಸಹಾಯ ಮಾಡಿ ಎಂದು ಸುಷ್ಮಾ ಸ್ವರಾಜ್, ಪ್ರಧಾನಿ ಮೋದಿ, ಕೇಂದ್ರ ಸಚಿವ ರಾಜವರ್ಧನ್ ರಾಥೋಡ್ ಮತ್ತು ಬ್ಯಾಡ್ಮಿಂಟನ್ ಅಧ್ಯಕ್ಷರಾದ ಹಿಮಾಂತ್ ಬಿಸ್ವಾ ಅವರಿಗೆ ಟ್ಯಾಗ್ ಮಾಡಿದ್ದರು.

    ಕಶ್ಯಪರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ನೆದರ್‍ಲ್ಯಾಂಡ್‍ನ ಭಾರತೀಯ ರಾಯಭಾರಿ ಕಚೇರಿಯ ಅಧ್ಯಕ್ಷ ವೇನು ರಾಜಮೋನಿ, ಹೇಗ್‍ನ ರಾಯಭಾರಿ ಕಚೇರಿಗೆ ಭೇಟಿ ನೀಡಿ, ನಿಮಗೆ ಅಲ್ಲಿ ಅಮರ್ ಎಂಬವರು ಸಹಾಯ ಮಾಡ್ತಾರೆ ಅಂತಾ ಬರೆದು ಫೋನ್ ನಂಬರ್ ಸಹ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಯಾಡ್ಮಿಂಟನ್  ಸ್ಟಾರ್ ಸೈನಾ ನೆಹ್ವಾಲ್ ಮದುವೆ ಫಿಕ್ಸ್!

    ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಮದುವೆ ಫಿಕ್ಸ್!

    ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್  ತಾರೆ ಸೈನಾ ನೆಹ್ವಾಲ್ ಮದುವೆಯಾಗಲು ನಿರ್ಧರಿಸಿದ್ದು, ವರ್ಷಾಂತ್ಯಕ್ಕೆ ಅವರ ವಿವಾಹ ನಡೆಯಲಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಸೈನಾ ಮದುವೆ ಆಗುತ್ತಿರುವ ವರ ಯಾರು ಎಂಬ ಕುತೂಹಲವೂ ಹೆಚ್ಚಿನ ಅಭಿಮಾನಿಗಳಲ್ಲಿ ಇದ್ದು, ಸೈನಾ ನೆಹ್ವಾಲ್ ಗುರು ಗೋಪಿಚಂದ್ ಅವರ ಗರಡಿಯಲ್ಲಿ ಪಳಗಿದ ಪಾರುಪಲ್ಲಿ ಕಶ್ಯಪ್‍ರನ್ನೇ ಮದುವೆ ಆಗಲಿದ್ದಾರೆ. ಈ ಇಬ್ಬರು ತಾರೆಯರು ಕೂಡ ಗೋಪಿಚಂದ್ ಅವರ ಬಳಿಯೇ ತರಬೇತಿ ಪಡೆದಿದ್ದಾರೆ. ಇಬ್ಬರ ವಿವಾಹ ಕಾರ್ಯಕ್ರಮ ಡಿಸೆಂಬರ್ 16 ರಂದು ನಡೆಯಲು ಸಿದ್ಧತೆ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

    ಕುಟುಂಬಗಳ ಹಿರಿಯರು ಈಗಾಗಲೇ ಮದುವೆ ಕುರಿತು ಮಾತುಕತೆ ನಡೆಸಿದ್ದಾರೆ. ಅಲ್ಲದೇ ವಿವಾಹ ಕಾರ್ಯಕ್ರಮದ ಸಿದ್ಧತೆಗಳನ್ನು ನಡೆಸಿದ್ದಾರೆ. ಮದುವೆಯ ಸಮಾರಂಭಕ್ಕೆ ಕುಟುಂಬದ ಸದಸ್ಯರು ಹಾಗೂ ಆಪ್ತ ವಲಯದ ಕೆಲವೇ ಮಂದಿಗೆ ಆಹ್ವಾನ ನೀಡಲಾಗುತ್ತದೆ ಎನ್ನಲಾಗಿದೆ. ಮದುವೆ ಬಳಿಕ ಅಂದರೆ ಡಿಸೆಂಬರ್ 21 ರಂದು ನಡೆಯುವ ಆರತಕ್ಷತೆ ಸಮಾರಂಭದಲ್ಲಿ ಸ್ನೇಹಿತರು, ಗಣ್ಯರಿಗೆ ಆಹ್ವಾನ ನೀಡಲಾಗುತ್ತದೆ ಎಂದು ವರದಿಯಾಗಿದೆ.

    2005ರಲ್ಲಿ ಗೋಪಿಚಂದ್ ಅವರ ಬಳಿ ತರಬೇತಿ ಪಡೆಯುತ್ತಿದ್ದ ವೇಳೆ ಕಶ್ಯಪ್ ಹಾಗೂ ಸೈನಾ ನಡುವೆ ಪರಿಚಯವಾಗಿತ್ತು. ಬಳಿಕ ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. 28 ವರ್ಷದ ಸೈನಾ ನೆಹ್ವಾಲ್ ಹಾಗೂ 32 ವರ್ಷದ ಕಶ್ಯಪ್ ವಿಶ್ವ ಬ್ಯಾಡ್ಮಿಟನ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

    ಸೈನಾ ನೆಹ್ವಾಲ್ 2014 ರಲ್ಲಿ ಗೋಪಿಚಂದ್ ಅವರ ಬಳಿ ತರಬೇತಿ ತೊರೆದು ಬೆಂಗಳೂರಿನ ವಿಮಲ್ ಕುಮಾರ್ ಅವರ ಬಳಿ ತರಬೇತಿ ಪಡೆಯಲು ಆಗಮಿಸಿದ್ದರು. ಈ ವೇಳೆ ಹಲವು ಬಾರಿ ಕಶ್ಯಪ್ ಬೆಂಗಳೂರಿಗೆ ಬಂದು ಸೈನಾರನ್ನು ಭೇಟಿ ಮಾಡುತ್ತಿದ್ದರು. ಆಗಲೇ ಇಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಆದರೆ ಈ ಕುರಿತು ಇಬ್ಬರು ಎಲ್ಲಿಯೂ ಮಾತನಾಡಿರಲಿಲ್ಲ. ಬಳಿಕ ಸೈನಾ ಮತ್ತೆ ಬೆಂಗಳೂರಿನಿಂದ ಗೋಪಿಚಂದ್ ಅವರ ತರಬೇತಿ ಕೇಂದ್ರಕ್ಕೆ ಶಿಪ್ಟ್ ಆಗಿದ್ದರು. ಸೈನಾರ ಈ ನಿರ್ಧಾರಕ್ಕೆ ಕಶ್ಯಪ್ ಅವರೊಂದಿನ ಪ್ರೀತಿಯೂ ಒಂದು ಕಾರಣ ಎನ್ನಲಾಗಿದೆ. ಸೈನಾ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲೂ ಕಶ್ಯಪ್ ರೊಂದಿನ ಫೋಟೋಗಳನ್ನೇ ಹೆಚ್ಚು ಪೋಸ್ಟ್ ಮಾಡುತ್ತಿದ್ದ ಕಾರಣ ಇವರಿಬ್ಬರು ಪ್ರೀತಿಯಲ್ಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

    ಈ ಹಿಂದೆಯೂ ಕೂಡ ಕ್ರೀಡಾ ಕ್ಷೇತ್ರದಲ್ಲಿರುವ ಹಲವು ಸ್ಟಾರ್ ಗಳು ವಿವಾಹವಾಗಿದ್ದು, ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್-ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್, ಇಶಾಂತ್ ಶರ್ಮಾ-ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್, ಕುಸ್ತಿ ಪಟು ಗೀತಾ ಪೋಗಟ್- ಕುಸ್ತಿಪಟು ಪವನ್ ಕುಮಾರ್ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್-ಕುಸ್ತಿಪಟು ಸತ್ಯವರ್ತ್ ಕಡಿಯಾನ್ ರೊಂದಿಗೆ ವಿವಾಹವಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://www.instagram.com/p/BiuZHnPBMif/?hl=en&taken-by=nehwalsaina

    https://www.instagram.com/p/BhoNuHKFUmX/?hl=en&taken-by=nehwalsaina

    https://www.instagram.com/p/BgdNzPNg6G5/?hl=en&taken-by=nehwalsaina