Tag: Kashmiri Pandit

  • ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಗುಂಡಿನ ದಾಳಿ ನಡೆಸಿ ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರರು

    ಶ್ರೀನಗರ: ಕಾಶ್ಮೀರಿ ಪಂಡಿತರೊಬ್ಬರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆಗೈದಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಕಂದಾಯ ಇಲಾಖೆಯ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

    ಕಾಶ್ಮೀರಿ ಪಂಡಿತ್ ಸಮುದಾಯದ ರಾಹುಲ್ ಭಟ್ ಹತ್ಯೆಗೀಡಾದ ವ್ಯಕ್ತಿ. ಮೃತರು ಕಂದಾಯ ಇಲಾಖೆಯ ನೌಕರರಾಗಿದ್ದರು. ಕೇಂದ್ರ ಕಾಶ್ಮೀರದ ಚದೂರದಲ್ಲಿರುವ ತಹಸೀಲ್ದಾರ್ ಕಚೇರಿಯಲ್ಲಿಯೇ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡಿ ಸಾವನ್ನಪ್ಪಿದ್ದಾರೆ.

    ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿ, ಬುದ್ಗಾಮ್‍ನ ತಹಸೀಲ್ದಾರ್ ಕಚೇರಿ ಚದೂರದಲ್ಲಿ ಅಲ್ಪಸಂಖ್ಯಾತ ಸಮುದಾಯದ ರಾಹುಲ್ ಭಟ್ ಎಂಬ ನೌಕರನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬೇಲ್‌ನಿಂದ ಹೊರಬಂದು ಮದುವೆಯಾಗು ಎಂದ – ರೌಡಿ ಅಂತ ರಿಜೆಕ್ಟ್‌ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಕೊಂದ

    ಘಟನೆಯ ನಂತರ, ಭದ್ರತಾ ಪಡೆಗಳು ಘಟನೆ ನಡೆದ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಘಟನೆಯ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಶ್ವನಿ ಹಂಡಾ, ಕಣಿವೆಯಲ್ಲಿ ಕಾಶ್ಮೀರಿ ಪಂಡಿತರಿಗೆ ಭದ್ರತೆ ಒದಗಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ತಾಜ್‌ ಮಹಲ್‌ ಹಿಂದೆ ʼತೇಜೋ ಮಹಾಲಯʼವಾಗಿತ್ತು, ಅಲ್ಲಿ ಹಿಂದೂ ವಿಗ್ರಹಗಳಿವೆ – ತನಿಖೆಗಾಗಿ ಕೋರ್ಟ್‌ಗೆ ಮನವಿ

    ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದರು

  • ಉಗ್ರರ ದಾಳಿ- ಕಾಶ್ಮೀರಿ ಪಂಡಿತನಿಗೆ ಗುಂಡೇಟು

    ಉಗ್ರರ ದಾಳಿ- ಕಾಶ್ಮೀರಿ ಪಂಡಿತನಿಗೆ ಗುಂಡೇಟು

    ಶ್ರೀನಗರ: ಶೋಪಿಯಾನ್‌ ಜಿಲ್ಲೆಯ ಗಡಿ ಭಾಗದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ವ್ಯಾಪಾರಿ ಕಾಶ್ಮೀರಿ ಪಂಡಿತರೊಬ್ಬರಿಗೆ ಗುಂಡೇಟು ಬಿದ್ದಿದೆ.

    ಕಾಶ್ಮೀರಿ ಪಂಡಿತ ಬಾಲ ಕೃಷ್ಣನ್‌ ಗಾಯಗೊಂಡಿರುವ ವ್ಯಕ್ತಿ. ಉಗ್ರರ ದಾಳಿಯಿಂದ ಬಾಲ ಕೃಷ್ಣನ್ ಕೈ ಮತ್ತು ಕಾಲುಗಳಿಗೆ ಗುಂಡುಗಳು ತಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಅವರನ್ನು ಶ್ರೀನಗರದ ಸೇನಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ದಾಳಿ: ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮ

    ಈಚೆಗಷ್ಟೇ ಶ್ರೀನಗರದ ಮೈಸುಮಾದಲ್ಲಿ ಉಗ್ರರು ದಾಳಿ ನಡೆಸಿದ ಪರಿಣಾಮ ಸಿಆರ್‌ಪಿಎಫ್‌ ಯೋಧ ಮೃತಪಟ್ಟಿದ್ದರು. ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದರು.

    ಪುಲ್ವಾಮಾದಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಗುಂಡು ಹಾರಿಸಿದ ಕೆಲವೇ ಗಂಟೆಗಳಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆಸಲಾಗಿತ್ತು. ಗಾಯಾಳುಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಬಿರ್ಭೂಮ್ ಹಿಂಸಾಚಾರ – ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ಕೊಟ್ಟ ಮಮತಾ ಬ್ಯಾನರ್ಜಿ

  • ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದಿನಕ್ಕೊಂದು ರೋಚಕ ಸಂಗತಿಯನ್ನು ಹೊರ ಹಾಕುತ್ತಿದೆ. ಈ ಸಿನಿಮಾದ ಕಥೆಯಲ್ಲಿ ಅಕ್ಕಿ ಡ್ರಮ್ ನಲ್ಲಿ ಕಾಶ್ಮೀರಿ ಪಂಡಿತರೊಬ್ಬರ ಹತ್ಯ ನಡೆದ ಘಟನೆಯ ಬರುತ್ತದೆ. ಆ ‍ಘಟನೆಯು ನಡೆದದ್ದು ಕಾಶ್ಮೀರಿದ ಶ್ರೀನಗರದ ಛೋಟಾ ಬಜಾರ್ ನಲ್ಲಿ ಎನ್ನುವ ಮಾಹಿತಿ ಹೊರ ಬಿದ್ದಿದೆ.

    ಇಂಥದ್ದೊಂದು ಘಟನೆ ನಡೆದದ್ದು ಶಹೀದ್ ಬಾಲ್ ಕ್ರಿಶನ್ ಗಂಜು ಅವರ ಕುಟುಂಬದಲ್ಲಿ ಎನ್ನುವ ಮಾಹಿತಿಯನ್ನು ಸ್ವತಃ ಇವರ ಸಹೋದರಿಯೇ ಟ್ವಿಟರ್ ಖಾತೆಯಲ್ಲಿ ಖಚಿತ ಪಡಿಸಿದ್ದಾರೆ. ಅಲ್ಲದೇ, ‘ಕಾಶ್ಮೀರಿ ಪಂಡಿತ್ ನೆಟ್ ವರ್ಕ್’ ಎಂಬ ಜಾಲತಾಣದಲ್ಲಿ ಪ್ರಕಟವಾದ ಹತ್ಯೆಯಾದ ಕಾಶ್ಮೀರಿ ಪಂಡಿತರ ಪರಿಚಯದಲ್ಲೂ ಈ ಗಂಜು ಇದ್ದಾರೆ.

    ಯಾರಿದು ಬಾಲ್ ಕ್ರಿಶನ್ ಗಂಜು?
    ಕಾಶ್ಮೀರದ ಶ್ರೀನಗರದಲ್ಲಿಯ ಛೋಟಾ ಬಜಾರ್ ನಿವಾಸಿ ಶಾಹೀದ್ ಬಾಲ್ ಕ್ರಿಶನ್ ಗಂಜು. ಇವರು ಟೆಲಿಕಾಂನಲ್ಲಿ ಇಂಜಿನಿಯರ್ ಆಗಿದ್ದರು. ಶಿಬನ್ ಗುಂಜಿ ಸೇರಿದಂತೆ ಹಲವರು ನಾಲ್ಕು ಅಂತಸ್ತಿನ ಛೋಟಾ ಬಜಾರ್ ಮನೆಯಲ್ಲೇ ವಾಸವಿದ್ದರು. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ಹತ್ಯೆಯಾಗಿದ್ದು ಹೇಗೆ?
    ಸಹೋದರಿ ಶಿಬನ್ ಗುಂಜಿ ಈ ಘಟನೆಯ ಕುರಿತು ಹೇಳಿಕೊಂಡಂತೆ. ಅದು 10 ಮಾರ್ಚ್ 1990ರ ಇಸವಿ. ಸುಮಾರು 32 ವರ್ಷಗಳ ಹಿಂದೆ ನಡೆದ ಘಟನೆಯಿದು. ಆಗ ಕಾಶ್ಮೀರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಈ ಕರ್ಫ್ಯೂ ಅಂದು ಸಡಿಲಗೊಂಡಿದ್ದರಿಂದ ಎಂದಿನಂತೆ ಕೆಲಸ ಮುಗಿಸಿಕೊಂಡು ಟೆಲಿಕಾಂ ಇಂಜಿನಿಯರ್ ಆಗಿದ್ದ ಶಾಹೀದ್ ಬಾಲ್ ಕ್ರಿಶನ್ ಗಂಜು ಮನೆಗೆ ಆಗಮಿಸುತ್ತಿದ್ದರು. ಅವರ ಹಿಂದೆಯೇ ಭಯೋತ್ಪಾದಕರು ಹಿಂಬಾಲಿಸುತ್ತಿದ್ದಾರೆ ಎನ್ನುವ ಕೊಂಚ ಸುಳಿವೂ ಅವರಿಗೆ ಸಿಕ್ಕಿರಲಿಲ್ಲ. ತಮ್ಮ ಪಾಡಿಗೆ ತಾವು ನಿರಾಳವಾಗಿ ಮನೆಯತ್ತ ಹೆಜ್ಜೆ ಇಟ್ಟಿದ್ದರು. ಮುಂದೆ ಮುಂದೆ ಗಂಜು, ಹಿಂದೆಯೇ ಭಯೋತ್ಪಾದಕರು.

    ಗಂಜುಗಾಗಿ ಮನೆಯ ಬಾಗಿಲಿನಲ್ಲೇ ಕಾಯುತ್ತಿದ್ದ ಪತ್ನಿಯು, ತನ್ನ ಪತಿಯ ಹಿಂದೆ ಭಯೋತ್ಪಾದಕರು ಸದ್ದಿಲ್ಲದೇ ಬರುತ್ತಿದ್ದಾರೆ ಎನ್ನುವುದನ್ನು ಗಮನಿಸಿದರು. ತಕ್ಷಣವೇ ಪತಿಯನ್ನು ಮನೆಯೊಳಗೆ ಕರೆದುಕೊಂಡು ಬಾಗಿಲು ಹಾಕಿಕೊಂಡರು. ತಮ್ಮ ಹಿಂದೆಯೇ ಭಯೋತ್ಪಾದಕರು ಬರುತ್ತಿದ್ದಾರೆ ಎನ್ನುವ ಸುದ್ದಿಯನ್ನು ಕೇಳಿ, ಗಂಜು ಆಘಾತಕ್ಕೆ ಒಳಗಾದರು. ಭದ್ರವಾಗಿ ಬಾಗಿಲು ಹಾಕಿಕೊಂಡು, ಚಿಲಕ ಕೂಡ ಹಾಕಿದರು. ಇದನ್ನೂ ಓದಿ:  ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

    ಕೊಲ್ಲಲಿಕ್ಕೆ ಬಂದಿದ್ದ ಭಯೋತ್ಪಾದಕರು ಬಾಗಿಲು ಒಡೆದರು, ಮನೆಗೆ ನುಗ್ಗಿದರು. ಮನೆಯಲ್ಲಿದ್ದವರನ್ನು ಕೊಲ್ಲುತ್ತಾ ಸಾಗಿದರು. ಈ ವೇಳೆಯಲ್ಲಿ ಭಯೋತ್ಪಾದಕರಿಂದ ತಪ್ಪಿಸಿಕೊಳ್ಳಲು ಗಂಜು ಮೂರನೇ ಮಹಡಿಯತ್ತ ಓಡಿದರು. ಎಲ್ಲಿ ತಪ್ಪಿಸಿಕೊಳ್ಳುವುದು ಅಂತ ಗೊತ್ತಾಗದೇ ಕಂಗಾಲಾದರು. ಅಲ್ಲಿಯೇ ಇದ್ದ ಅಕ್ಕಿ ತುಂಬಿದ್ದ ಡ್ರಮ್ ನೊಳಗೆ ಬಚ್ಚಿಟ್ಟುಕೊಂಡರು. ಇವರನ್ನು ಹುಡುಕ್ತಾ ಇದ್ದ ಭಯೋತ್ಪಾದಕರು ಇಡೀ ಮನೆಯನ್ನು ಧ್ವಂಸ ಮಾಡಿದರು. ಇಂಚಿಂಚು ಜಾಗ ಬಿಡದೇ ಹುಡುಕಿದರು. ಕೊನೆಗೆ ಅಕ್ಕಿ ಡ್ರಮ್ ನಲ್ಲಿ ಅವಿತು ಕುಳಿತಿದ್ದ ಗಂಜು ಕಣ್ಣೀಗೆ ಬಿದ್ದರು. ಅಕ್ಕಿ ಡಬ್ಬಿಯಲ್ಲೇ ಕೊಂದರು. ಅದೇ ಅಕ್ಕಿಯಿಂದ ಅನ್ನ ಮಾಡಿಕೊಂಡು ಅವರ ಮಕ್ಕಳೇ ತಿನ್ನಲಿ ಎಂದು ಕ್ರೂರತೆ ಮೆರೆದರು.

    ಇದು ನಿಜವಾಗಿ ನಡೆದ ಘಟನೆ ಎಂದು ಸ್ವತಃ ಗಂಜು ಅವರ ಸಹೋದರಿಯೇ ಸೋಷಿಯಲ್ ಮೀಡಿಯಾದ ಮೂಲಕ ಬರೆದುಕೊಂಡಿದ್ದಾರೆ. ಅಂದಹಾಗೆ ಈ ಗಂಜು ಅವರು ಭಯೋತ್ಪಾದಕರಿಂದ ಹತ್ಯೆಯಾಗಿ 19 ಮಾರ್ಚ್ 2022ಕ್ಕೆ 32 ವರ್ಷಗಳ ಆಗಿವೆ. ಈ ಸಂದರ್ಭದಲ್ಲಿ ಗಂಜು ಸಹೋದರಿ, ಈ ಎಲ್ಲ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

  • ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ: ರಾಹುಲ್ ಗಾಂಧಿ

    ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ: ರಾಹುಲ್ ಗಾಂಧಿ

    ಶ್ರೀನಗರ: ನಾನು ಕಾಶ್ಮೀರಿ ಪಂಡಿತ, ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

    ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬೆಳಿಗ್ಗೆ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿತು. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಏನೂ ಮಾಡಿಲ್ಲ ಎಂದು ಅವರು ನನಗೆ ತಿಳಿಸಿದರು ಎಂದರು.

    ನಾನು ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ. ನನ್ನ ಕುಟುಂಬವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸುದೀರ್ಘ ಸಂಬಂಧ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಕಾಶ್ಮೀರಿ ಪಂಡಿತ ಸಹೋದರರಿಗೆ ನಾನು ಏನಾದರೂ ಮಾಡುವುದಾಗಿ ಭರವಸೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ

    ಜಮ್ಮು ಕಾಶ್ಮೀರಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದ್ದು, ಈಗ ನನಗೆ ನೋವಾಗಿದೆ. ಇಲ್ಲಿ ಸಹೋದರತ್ವವಿದೆ. ಆದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಆ ಸಹೋದರತ್ವದ ಬಂಧವನ್ನು ಮುರಿಯಲು ಪ್ರಯತ್ನಿಸುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

    ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಜಮ್ಮು ಮತ್ತು ಕಾಶ್ಮೀರವನ್ನು ಬಿಜೆಪಿ ದುರ್ಬಲಗೊಳಿಸಿದೆ. ರಾಜ್ಯ ಸ್ಥಾನಮಾನವನ್ನು ಕಾಶ್ಮೀರಿಗಳಿಂದ ಕಿತ್ತುಕೊಳ್ಳಲಾಗಿದೆ. ಈ ಸ್ಥಾನಮಾನವನ್ನು ಮರಳಿ ಪಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಈಗ ಬಿಡುಗಡೆಯಾಗಲ್ಲ, ದೀಪಾವಳಿಗೂ ಮೊದಲು ಬರಲಿದೆ ಜಿಯೋ ಫೋನ್

    ಗುರುವಾರ ರಾಹುಲ್ ಗಾಂಧಿ ಮಾತಾ ವೈಷ್ಣೋದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಕತ್ರಾ ಬೇಸ್‍ಕ್ಯಾಂಪ್‍ನಿಂದ ತ್ರಿಕೂಟ ಬೆಟ್ಟಗಳ ಮೂಲಕ ಕಾಲ್ನಡಿಗೆಯಲ್ಲಿ 13 ಕಿ.ಮೀ ಯಾತ್ರೆ ನಡೆಸಿ ದೇಗುಲವನ್ನು ತಲುಪಿದ್ದರು. ಜಮ್ಮು ಕಾಶ್ಮೀರದ ನಂತರ ಅವರು ಲಡಾಖ್‍ಗೆ ಭೇಟಿ ನೀಡಲಿದ್ದಾರೆ.

  • ಹೊಸ ವರುಷಕ್ಕೆ ಶುಭಕೋರಿ ಟ್ರೋಲ್ ಆದ್ರು ಪ್ರಿಯಾಂಕ ಗಾಂಧಿ!

    ಹೊಸ ವರುಷಕ್ಕೆ ಶುಭಕೋರಿ ಟ್ರೋಲ್ ಆದ್ರು ಪ್ರಿಯಾಂಕ ಗಾಂಧಿ!

    ನವದೆಹಲಿ: ಪ್ರಿಯಾಂಕ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಕಾಂಗ್ರೆಸ್ ಸಮಿತಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಜನರಿಗೆ ಮತ್ತಷ್ಟು ಹತ್ತಿರವಾಗಲು ಬಯಸಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಆದರೆ ಇಂದು ಕಾಶ್ಮೀರಿ ಪಂಡಿತರಿಗೆ ಯುಗಾದಿಯ ಶುಭಕೋರುವ ಮೂಲಕ ಟ್ರೋಲ್ ಆಗಿದ್ದಾರೆ.

    ಪ್ರಿಯಾಂಕ ಗಾಂಧಿ ಅವರು ಕಾಶ್ಮೀರಿ ಪಂಡಿತರಿಗೆ ‘ನವರೇಹ್ ಮುಬಾರಕ್’ ಎಂದು ಶುಭಕೋರುವ ಬದಲು ‘ನೌರುಜ್ ಮುಬಾರಕ್’ ಎಂದು ತಿಳಿಸಿದ್ದರು. ಪ್ರಿಯಾಂಕ ಅವರ ಟ್ವಿಟ್ ಪ್ರತಿಕ್ರಿಯೆ ನೀಡಿರುವ ತರೆಕ್ ಫತಾಹ್ ಅವರು, ನೌರುಜ್ ಹಬ್ಬ ಅನ್ನು ಕಳೆದ ತಿಂಗಳೇ ಆಚರಣೆ ಮಾಡಿದ್ದು, ಕಾಶ್ಮೀರಿ ಪಂಡಿತರ ಹೊಸ ವರ್ಷವನ್ನು ನವರೇಹ್ ಮುಬಾರಕ್ ಎಂದು ಕರೆಯುತ್ತಾರೆ ಎಂದು ತಿಳಿಸಿದ್ದಾರೆ.

    ಮಾರ್ಚ್ 21 ರಂದು ಪರ್ಷಿಯನ್ ನೌರುಜ್ ಆಚರಣೆ ಮಾಡಲಾಗುತ್ತದೆ. ಆದರೆ ಸಂಸ್ಕøತ ಭಾಷೆಯಿಂದ ಬಂದಿರುವ ‘ನವ ವರ್ಷ’ ಪದವನ್ನು ನವರೇಹ್ ಎಂದು ಕರೆಯುತ್ತಾರೆ. ಅದನ್ನು ಏಪ್ರಿಲ್ 05 ರಂದು ಆಚರಿಸುತ್ತೇವೆ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಪ್ರಿಯಾಂಕ ಅವರು ಟ್ವೀಟ್ಟರ್ ಖಾತೆ ತೆರೆದಿದ್ದರು ಕೂಡ ಅಲ್ಪ ಸಮಯದಲ್ಲೇ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇತ್ತ ಪ್ರಿಯಾಂಕ ಅಭಿಮಾನಿಗಳು ಕೂಡ ತಮ್ಮದೇ ವಾದವನ್ನು ಮುಂದಿಟ್ಟು ಅವರ ಟ್ವೀಟನ್ನು ಸಮರ್ಥಿಸಿಕೊಂಡಿದ್ದಾರೆ.

    https://twitter.com/bhaiyyajispeaks/status/1114408918787207169

    https://twitter.com/vishesh_koul/status/1114408018559492096?