Tag: kashmir

  • ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಕಾಶ್ಮೀರದಿಂದ ಶುರುವಾಯ್ತು ಶಾರುಖ್ ನಟನೆಯ ‘ಡಂಕಿ’ ಚಿತ್ರ

    ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಶಾರುಖ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಹೆಸರಾಂತ ನಿರ್ದೇಶಕ ರಾಜ್ ಕುಮಾರ್ ಹಿರಾನಿ (Raj Kumar Hirani) ನಿರ್ದೇಶನದಲ್ಲಿ ತಯಾರಾಗುತ್ತಿರುವ ಡಂಕಿ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಸದ್ದಿಲ್ಲದೇ ಶುರುವಾಗಿದೆ.

    ಡಂಕಿ ಸಿನಿಮಾವನ್ನು ನಿರ್ದೇಶಕರು ಕಾಶ್ಮೀರದಿಂದ (Kashmir) ಶುರು ಮಾಡಿದ್ದಾರೆ. ಈ ಭಾಗದ ಚಿತ್ರೀಕರಣಕ್ಕಾಗಿ ಶಾರುಖ್ ಕಾಶ್ಮೀರದಲ್ಲಿ ಬೀಡುಬಿಟ್ಟಿದ್ದಾರೆ. ಕಾಶ್ಮೀರದಲ್ಲಿ ತಮ್ಮ ನೆಚ್ಚಿನ ನಟ ಶಾರುಖ್ ಶೂಟಿಂಗ್ ನಲ್ಲಿ ಪಾಲ್ಗೊಂಡ ವಿಡಿಯೋವನ್ನು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಹನ್ನೊಂದು ವರ್ಷದ ನಂತರ ಶಾರುಖ್ ಸಿನಿಮಾ ಕಾಶ್ಮೀರದಲ್ಲಿ ಚಿತ್ರೀಕರಣವಾಗುತ್ತಿದ್ದು,  ಈ ಹಿಂದೆ ಜಬ್ ತಕ್ ಹೈ ಜಾನ್ ಸಿನಿಮಾದ ಶೂಟಿಂಗ್ ಅದೇ ಸ್ಥಳದಲ್ಲೇ ನಡೆದಿತ್ತು ಎಂದು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ. ಬರೋಬ್ಬರಿ 11 ವರ್ಷಗಳ ಬಳಿಕ ಆ ನೆಲದಲ್ಲಿ ಶಾರುಖ್ ಕಾಲಿಟ್ಟಿರುವುದು ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ. ಇದನ್ನೂ ಓದಿ:ನಾನು ಮಾತಾಡಿದರೆ ಸಮಂತಾ ಕಥೆ ಅಷ್ಟೆ: ಮತ್ತೆ ಗುಡುಗಿದ ಚಿಟ್ಟಿ ಬಾಬು

    ಡಂಕಿ ಸಿನಿಮಾದಲ್ಲಿ ಶಾರುಖ್ ಜೊತೆ ತಾಪ್ಸಿ ಪನ್ನು(Taapsee Pannu) ಮತ್ತು ವಿಕ್ಕಿ ಕೌಶಲ್ (Vicky Kaushal) ನಟಿಸಿದ್ದು, ಸದ್ಯ ಕಾಶ್ಮೀರದ ಸೋನ್ ಮಾರ್ಗ್ ಪ್ರದೇಶದಲ್ಲಿ ಮಾತಿನ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರಂತೆ ನಿರ್ದೇಶಕ ರಾಜಕುಮಾರ್ ಹಿರಾನಿ.

  • ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ  ಉಗ್ರ ಎನ್‌ಕೌಂಟರ್‌ಗೆ ಬಲಿ

    ಕಾಶ್ಮೀರಿ ಪಂಡಿತನನ್ನು ಹತ್ಯೆಗೈದ ಉಗ್ರ ಎನ್‌ಕೌಂಟರ್‌ಗೆ ಬಲಿ

    ಶ್ರೀನಗರ: ಅವಂತಿಪೋರಾ ಪ್ರದೇಶದಲ್ಲಿ (Awantipora Area) ನಡೆದ ಎನ್‍ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನ ಹತ್ಯೆಯಲ್ಲಿ ಭಾಗಿಯಾಗಿದ್ದ ಓರ್ವ ಉಗ್ರನನ್ನು (Terrorists) ಹತ್ಯೆಗೈದಿದ್ದಾರೆ.

    ಹತ್ಯೆಗೀಡಾದವನನ್ನು ಅಕಿಬ್ ಮುಷ್ತಾಕ್ ಭಟ್‌ ಎಂದು ಗುರುತಿಸಲಾಗಿದೆ. ಪುಲ್ವಾಮಾದಲ್ಲಿ ಕಾಶ್ಮೀರಿ ಪಂಡಿತನೊಬ್ಬನನ್ನು (Kashmiri Pandit) ಉಗ್ರರು ಹೊಡೆದುರುಳಿಸಿದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. ಅಕಿಬ್ ಮುಷ್ತಾಕ್ ಭಟ್‌ ಆರಂಭದಲ್ಲಿ ಹೆಚ್‌ಎಂ ಉಗ್ರ ಸಂಘಟನೆಯಲ್ಲಿ ಕೆಲಸ ಮಾಡುತ್ತಿದ್ದ. ಈಗ ಟಿಆರ್‌ಎಫ್‌ನೊಂದಿಗೆ ಕೆಲಸ ಮಾಡುತ್ತಿದ್ದ. ಈ ಬಗ್ಗೆ ಕಾಶ್ಮೀರ (Kashmir) ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಪುಲ್ವಾಮಾ ಜಿಲ್ಲೆಯ ಪಡಗಂಪೋರಾ ಅವಂತಿಪೋರಾದಲ್ಲಿ ಎನ್‍ಕೌಂಟರ್ ನಡೆದಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯದಲ್ಲಿವೆ. ಎನ್‍ಕೌಂಟರ್‌ನಲ್ಲಿ ಒಬ್ಬ ಉಗ್ರನನ್ನು ಕೊಲ್ಲಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಫಾರ್ಮಾ ಕಂಪನಿಯಲ್ಲಿ ಸ್ಫೋಟ – ಇಬ್ಬರು ಸಾವು

    ಭಾನುವಾರ ಮತ್ತೊಂದು ಉದ್ದೇಶಿತ ಹತ್ಯೆಯಲ್ಲಿ ಕಾಶ್ಮೀರಿ ಪಂಡಿತ್ ಬಲಿಯಾಗಿದ್ದರು. ಸಂಜಯ್ ಶರ್ಮಾ ಅವರು ಪುಲ್ವಾಮಾ ಜಿಲ್ಲೆಯ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದರು. ಈ ವೇಳೆ ಉಗ್ರರು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಪಾಕ್, ಚೀನಾದಲ್ಲಿ ತರಬೇತಿ ಪಡೆದ ಡೇಂಜರಸ್ ವ್ಯಕ್ತಿ ಭಾರತಕ್ಕೆ ಎಂಟ್ರಿ – NIA ಅಲರ್ಟ್

  • ಮೂವರು ಹಿಜ್ಬುಲ್ ಉಗ್ರರು ಅರೆಸ್ಟ್

    ಮೂವರು ಹಿಜ್ಬುಲ್ ಉಗ್ರರು ಅರೆಸ್ಟ್

    ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ (Kashmir) ಪೊಲೀಸರು ಕಾರ್ಯಾಚರಣೆ ನಡೆಸಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ (Hizb-ul-Mujahideen) ಭಯೋತ್ಪಾದಕರನ್ನು ಬಂಧಿಸಿದ್ದಾರೆ.

    ಬಂಧಿತರಿಂದ ಒಂದು ಪಿಸ್ತೂಲ್ (Pistol), ಎರಡು ಮ್ಯಾಗ್‍ಜಿನ್ ಹಾಗೂ 13 ಸುತ್ತಿನ ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: `ಸಾಕಪ್ಪ ಸಾಕು, ಕಿವಿ ಮೇಲೆ ಹೂ’; ಬಜೆಟ್ ಬಗ್ಗೆ ಕಾಂಗ್ರೆಸ್ ವ್ಯಂಗ್ಯ – ಪೋಸ್ಟರ್ ಅಂಟಿಸಿ ಅಭಿಯಾನ

    ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿರುವ ನಿರ್ದಿಷ್ಟ ಮಾಹಿತಿ ಮೇರೆಗೆ ಹತಿಪೋರ್, ಬೆಹಿಬಾಗ್ ಮತ್ತು ಕುಲ್ಗಾಮ್ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡು, ದಾದರ್‍ಕೊಟ್‍ನ ಅಲಂಗಂಜ್ ಕ್ರಾಸಿಂಗ್‍ನಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ಕಾದಿದ್ದರು.

     ಪ್ರಾಥಮಿಕ ತನಿಖೆಯಿಂದ ಆರೋಪಿಗಳು ಭಯೋತ್ಪಾದಕ ಸಂಘಟನೆಯೊಂದಿಗೆ ಕೈಜೋಡಿಸಿ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ತಿಳಿದು ಬಂದಿದೆ. ಈ ಬಗ್ಗೆ ಎಫ್‍ಐಆರ್ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಉಸಿರೆಳೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಟಿಪ್ಪು, ಭಯೋತ್ಪಾದನೆ, ಎಸ್‍ಡಿಪಿಐ ಆಕ್ಸಿಜನ್ ಆಗ್ತಿದೆ: ಯುಟಿ ಖಾದರ್

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಟಿ ನೆಪದಲ್ಲಿ ಕರೆಸಿ, ಕಾಶ್ಮೀರ ಮೂಲದ ಯುವತಿಯರ ಮೇಲೆ ಅತ್ಯಾಚಾರ ಯತ್ನ

    ಪಾರ್ಟಿ ನೆಪದಲ್ಲಿ ಕರೆಸಿ, ಕಾಶ್ಮೀರ ಮೂಲದ ಯುವತಿಯರ ಮೇಲೆ ಅತ್ಯಾಚಾರ ಯತ್ನ

    ಬೆಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ರೂಮ್‌ಗೆ ಕರೆಸಿಕೊಂಡು ಕಾಶ್ಮೀರ ಮೂಲದ ಯುವತಿಯರ (Kashmir Girls) ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನ (Bengaluru) ವಿವೇಕನಗರದ ಪೊಲೀಸ್ ಠಾಣಾ (Vivekanagar Police Station) ವ್ಯಾಪ್ತಿಯಲ್ಲಿ ನಡೆದಿದೆ.

    ಖಾಸಗಿ ಕಂಪನಿಯಲ್ಲಿ (Private Company) ಒಟ್ಟಿಗೆ ಕೆಲಸ ಮಾಡುತ್ತಿದ್ದ ಯುವಕರು, ತಮ್ಮ ಇಬ್ಬರು ಸ್ನೇಹಿತೆಯರನ್ನ ಪಾರ್ಟಿ ನೆಪದಲ್ಲಿ ಕರೆಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

    ಈ ನಾಲ್ವರು ಜಲಂದರ್ ವಿಶ್ವವಿದ್ಯಾಲಯದಲ್ಲಿ (Jalandhar University) ಒಟ್ಟಿಗೆ ವಿದ್ಯಾಭ್ಯಾಸ ಮುಗಿಸಿ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಕಾಮುಕ ಯುವಕರು ಪಾರ್ಟಿ ಮಾಡುವ ನೆಪದಲ್ಲಿ ತಮ್ಮ ಇಬ್ಬರು ಸ್ನೇಹಿತೆಯರನ್ನ ರೂಮಿಗೆ ಕರೆದಿದ್ದಾರೆ. ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಸೇವಿಸಿದ್ದಾರೆ. ಬಳಿಕ ಇಬ್ಬರು ಯುವತಿಯರ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಒಬ್ಬಳು ಬಾತ್‌ರೂಮ್ ಸೇರಿಕೊಂಡಿದ್ದಾಳೆ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಈ ಸಂಬಂಧ ಯುವತಿಯರು ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಇಬ್ಬರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ, ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೋಡೋ ಯಾತ್ರೆ ಕಾಶ್ಮೀರ ಪ್ರವೇಶ – ಮೊದಲ ಬಾರಿ ಜಾಕೆಟ್‌ನಲ್ಲಿ ಕಾಣಿಸಿಕೊಂಡ ರಾಗಾ

    ಜೋಡೋ ಯಾತ್ರೆ ಕಾಶ್ಮೀರ ಪ್ರವೇಶ – ಮೊದಲ ಬಾರಿ ಜಾಕೆಟ್‌ನಲ್ಲಿ ಕಾಣಿಸಿಕೊಂಡ ರಾಗಾ

    ಶ್ರೀನಗರ: ಕಾಂಗ್ರೆಸ್‌ನ (Congress) ಭಾರತ್ ಜೋಡೋ ಯಾತ್ರೆ (Bharat Jodo Yatra) ಗುರುವಾರ ಪಂಜಾಬ್‌ನಿಂದ ಜಮ್ಮುವಿಗೆ ಪ್ರವೇಶ ಪಡೆದಿದೆ. ದಕ್ಷಿಣದ ರಾಜ್ಯಗಳಿಂದ ಹಿಡಿದು ಉತ್ತರದ ರಾಜ್ಯಗಳವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚಳಿಯಲ್ಲಿಯೂ ಕೇವಲ ಟೀಶರ್ಟ್‌ನಲ್ಲಿ (T-Shirt) ಕಾಣಿಸಿಕೊಂಡಿದ್ದರು. ಕಾಶ್ಮೀರ (Kashmir) ಪ್ರವೇಶಿಸುತ್ತಿದ್ದಂತೆ ರಾಗಾ ಮೊದಲ ಬಾರಿ ಯಾತ್ರೆಯಲ್ಲಿ ಜಾಕೆಟ್ (Jacket) ಧರಿಸಿದ್ದಾರೆ.

    ಜಮ್ಮುವಿನ ಹಲವು ಭಾಗಗಳಲ್ಲಿ ತುಂತುರು ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಕ್ಷಣೆ ಪಡೆದುಕೊಳ್ಳಲು ಜಾಕೆಟ್ ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಅವರು ಬಳಿಕ ಜಾಕೆಟ್ ಅನ್ನು ತೆಗೆದು ಮತ್ತೆ ತಮ್ಮ ಬಿಳಿಯ ಟೀಶರ್ಟ್‌ನಲ್ಲಿ ನಡೆಯುತ್ತಿದ್ದುದು ಕಂಡುಬಂದಿದೆ. ಇದನ್ನೂ ಓದಿ: ವಿದೇಶಗಳಿಗೆ ಹಣಕಾಸು ಸಚಿವಾಲಯದ ಮಾಹಿತಿ ರವಾನೆ – ಓರ್ವ ಉದ್ಯೋಗಿ ಅರೆಸ್ಟ್‌

    ರಾಹುಲ್ ಇದುವರೆಗೆ ತಮ್ಮ 125 ದಿನಗಳ ಯಾತ್ರೆಯಲ್ಲಿ ಸುಮಾರು 3,400 ಕಿ.ಮೀ ಕ್ರಮಿಸಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಯಾವುದೇ ಆಡಂಬರವಿಲ್ಲದ ಬಿಳಿಯ ಟೀಶರ್ಟ್‌ನಲ್ಲಿ ಕಂಗೊಳಿಸುತ್ತಿದ್ದರು. ಅವರು ಮೈಕೊರೆಯುವ ಚಳಿಯಲ್ಲಿಯೂ ಕನಿಷ್ಠ ಉಡುಪು ಧರಿಸಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಅನೇಕರು ಕುತೂಹಲ ವ್ಯಕ್ತಪಡಿಸಿದ್ದರು. ತಮಗೆ ಒಂದುವೇಳೆ ಚಳಿ ಎನಿಸಿದರೆ ಹೆಚ್ಚಿನ ಬಟ್ಟೆ ತೊಡುವುದಾಗಿ ರಾಗಾ ಈ ಹಿಂದೆ ಹೇಳಿದ್ದರು.

    ರಾಹುಲ್ ಗಾಂಧಿ ಜನವರಿ 25ರಂದು ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್‌ನಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಜನವರಿ 27ರಂದು ಅನಂತ್‌ನಾಗ್ ಮಾರ್ಗದ ಮೂಲಕ ಶ್ರೀನಗರ ಪ್ರವೇಶಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಶೀಘ್ರವೇ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾಶ್ಮೀರದಲ್ಲಿ ಹಿಂದೂಗಳೇ ಇರುವುದಿಲ್ಲ: ಫಾರೂಕ್ ಅಬ್ದುಲ್ಲಾ

    ಶ್ರೀನಗರ: ಕೇಂದ್ರಾಡಳಿತ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರ (Kashmiri Pandits) ಹತ್ಯೆಗಳು ಹೆಚ್ಚುತ್ತಿದೆ. ಈ ಹಿನ್ನೆಲೆ ಶೀಘ್ರದಲ್ಲಿಯೇ ಸರ್ಕಾರ ಏನನ್ನು ಮಾಡದೇ ಹೋದರೆ ಕಾಶ್ಮೀರದಲ್ಲಿ ಖಂಡಿತ 100% ಹಿಂದೂಗಳು ಕಡಿಮೆಯಾಗುತ್ತಾರೆ ಎಂದು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ (ಜೆಕೆಎನ್‍ಸಿ) (Jammu and Kashmir National Conference) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಹೇಳಿದ್ದಾರೆ.

    ಈ ಕುರಿತಂತೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, 1990ರಲ್ಲಿ ಸಂಭವಿಸಿದ್ದ ಪರಿಸ್ಥಿತಿಗಳು ಕಾಶ್ಮೀರಿ ಪಂಡಿತರಿಗೆ ಪುನಃ ಬಂದಿದೆ. ಈ ವಿಚಾರವಾಗಿ ಸರ್ಕಾರ ಕೂಡಲೇ ಏನ್ನಾನಾದರೂ ಮಾಡಲಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಕಾಶ್ಮೀರದಲ್ಲಿ ಶೇ. 100% ಹಿಂದೂಗಳು ಕಡಿಮೆಯಾಗುತ್ತಾರೆ. ಅಲ್ಲದೇ ನಾನು ಯಾವುದೇ ಭಯೋತ್ಪಾದಕರ ಪರ ಹೇಳಿಕೆಗಳನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

    ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಮಧ್ಯಸ್ಥಿಕೆ ವಹಿಸಬೇಕು. ಈ ಬಗ್ಗೆ ಗಮನ ಹರಿಸಬೇಕು. ಕಾಶ್ಮೀರಿ ಪಂಡಿತರ ಉದ್ದೇಶಿತ ಹತ್ಯೆಗಳು ಮತ್ತು ಅಲ್ಪಸಂಖ್ಯಾತ ಹಿಂದೂಗಳ ವಲಸೆಯ ಬಗ್ಗೆ ಸರ್ವಪಕ್ಷ ಸಭೆಯನ್ನು ಕರೆಯಬೇಕು ಎಂದು ಮನವಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    ಕಾಶ್ಮೀರ ಪ್ರತ್ಯೇಕ ದೇಶ – ಶಾಲಾ ಪ್ರಶ್ನೆ ಪತ್ರಿಕೆಯಲ್ಲಿ ಉಲ್ಲೇಖಿಸಿದ್ದಕ್ಕೆ ವಿವಾದ

    ಪಾಟ್ನಾ: 7ನೇ ತರಗತಿಯ ಪರೀಕ್ಷೆಯಲ್ಲಿ (Exam) ಕಾಶ್ಮೀರವನ್ನು (Kashmir) ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿ, ಪ್ರಶ್ನೆಯನ್ನು (Question) ಕೇಳಿರುವ ಪತ್ರಿಕೆಯೊಂದು ಬೆಳಕಿಗೆ ಬಂದಿದೆ. ಈ ವಿಚಾರವಾಗಿ ವಿವಾದ ಉಂಟಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ ಪ್ರಶ್ನೆಯನ್ನು ಬಿಹಾರ ರಾಜ್ಯದ ಅರಾರಿಯಾ, ಕಿಶನ್‌ಗಂಜ್ ಮತ್ತು ಕತಿಹಾರ್‌ನಲ್ಲಿನ 7ನೇ ತರಗತಿಯ ವಿದ್ಯಾರ್ಥಿಗಳ ಮುಂದೆ ಇಡಲಾಗಿದೆ. ಇದೊಂದು ಗಂಭೀರವಾದ ವಿಚಾರವಾಗಿದ್ದು, ಪ್ರಶ್ನೆ ಪತ್ರಿಕೆ (Question Paper) ತಯಾರಿಯಲ್ಲಿ ಉನ್ನತ ಅಧಿಕಾರಿಗಳು ಶಾಮೀಲಾಗಿದ್ದರೂ ತನಿಖೆ ನಡೆಸಲಾಗುವುದು ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಸಿಂಗ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಗೆ ಮೋದಿ ವಿಶ್

    ಪ್ರಶ್ನೆ ಪತ್ರಿಕೆಯಲ್ಲೇನಿದೆ?
    ಈ ದೇಶಗಳ ಜನರನ್ನು ಏನೆಂದು ಕರೆಯುತ್ತಾರೆ ಎಂಬ ಪ್ರಶ್ನೆಯನ್ನು ಪತ್ರಿಕೆಯಲ್ಲಿ ನೀಡಲಾಗಿದೆ. ಅದರ ಕೆಳಗೆ ಚೀನಾ, ನೇಪಾಳ, ಇಂಗ್ಲೆಂಡ್, ಕಾಶ್ಮೀರ ಹಾಗೂ ಭಾರತದ ಜನರನ್ನು ಏನೆಂದು ಕರೆಯುತ್ತಾರೆ ಎಂಬ ಬಿಟ್ಟ ಸ್ಥಳದ ರೂಪದಲ್ಲಿ ಪ್ರಶ್ನೆಗಳನ್ನು ನೀಡಲಾಗಿದೆ. ಉದಾಹರಣೆಗೆ ಚೀನಾದ ಜನರನ್ನು ಚೀನೀಯರು (Chinese) ಎಂಬಂತೆ ಉತ್ತರಿಸಬೇಕು. ಆದರೆ ಕಾಶ್ಮೀರವನ್ನು ದೇಶಗಳ ಸಾಲಿನಲ್ಲಿ ನೀಡಿರುವುದಕ್ಕೆ ವಿವಾದ ಭುಗಿಲೆದ್ದಿದೆ. ಇದನ್ನೂ ಓದಿ: ಡಿಕೆಶಿ ಸ್ವಕ್ಷೇತ್ರದಲ್ಲಿ ಏಸುಕ್ರಿಸ್ತನ ಜಪ- ರೇಷನ್ ಕಾರ್ಡ್‍ನಲ್ಲಿ ಏಸುಕ್ರಿಸ್ತನ ಫೋಟೋ ಮುದ್ರಣ

    ಈ ಬಗ್ಗೆ ಸ್ಪಷ್ಟನೆ ಕೊಟ್ಟ ಮುಖ್ಯ ಶಿಕ್ಷಕ ಎಸ್‌ಕೆ ದಾಸ್, ಕಾಶ್ಮೀರದ ಜನರನ್ನು ಏನೆಂದು ಕರೆಯಬೇಕು? ಎಂಬ ಪ್ರಶ್ನೆಯನ್ನು ಕೇಳಬೇಕಿತ್ತು. ಆದರೆ ತಪ್ಪಾಗಿ ಕಾಶ್ಮೀರ ದೇಶದ ಜನರನ್ನು ಏನೆಂದು ಕರೆಯುತ್ತಾರೆ? ಎಂದು ಕೇಳಲಾಗಿದೆ. ಇದು ಮಾನವ ದೋಷ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರದಲ್ಲಿ ಕಲ್ಲೆಸೆದಿಲ್ಲ ಎಂದು ಉಲ್ಟಾ ಹೊಡೆದ್ರಾ ಬಾಲಿವುಡ್ ನಟ ಇಮ್ರಾನ್ ಹಶ್ಮಿ?: ನೆಟ್ಟಿಗರ ಅನುಮಾನ

    ಕಾಶ್ಮೀರದಲ್ಲಿ ಕಲ್ಲೆಸೆದಿಲ್ಲ ಎಂದು ಉಲ್ಟಾ ಹೊಡೆದ್ರಾ ಬಾಲಿವುಡ್ ನಟ ಇಮ್ರಾನ್ ಹಶ್ಮಿ?: ನೆಟ್ಟಿಗರ ಅನುಮಾನ

    ಕಾಶ್ಮೀರದಲ್ಲಿ ಬಾಲಿವುಡ್ ನಟ ಇಮ್ರಾನ್ ಹಶ್ಮಿ (Emraan Hashmi) ಮೇಲೆ ಕಲ್ಲು ತೂರಲಾಗಿದೆ ಎಂದು ಹೇಳಲಾಗಿತ್ತು. ಏಕಾಏಕಿ ನಡೆದ ದಾಳಿಯಿಂದ ಇಮ್ರಾನ್ ವಿಚಲಿತರಾಗಿದ್ದರು ಎನ್ನುವ ಮಾಹಿತಿಯೂ ಹೊರ ಬಿದ್ದಿತ್ತು. ಅವರ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿರುವುದರಿಂದ, ಅವರು ಅಲ್ಲಿಯೇ ಇದ್ದಾರೆ ಎಂದು, ಅವರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ, ಇದ್ಯಾವುದೂ ಸುಳ್ಳು ಎಂದಿದ್ದಾರೆ ಇಮ್ರಾನ್.

    ತಮ್ಮ ಮೇಲೆ ಯಾವುದೇ ದಾಳಿ ಆಗಿಲ್ಲ. ಯಾರೂ ಕಲ್ಲು ತೂರಿಲ್ಲ. ಹರಡಿರುವ ಸುದ್ದಿ ಸುಳ್ಳು. ಗಾಸಿಪ್ ಹರಡಿಸಿದ್ದಾರೆ. ನಾನು ಕಾಶ್ಮೀರದಲ್ಲಿ ಸೇಫ್ ಆಗಿದ್ದೇನೆ. ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇನೆ ಎಂದು ಹಶ್ಮಿ ತಿಳಿಸಿದ್ದಾರೆ. ಈ ವಿಷಯದಲ್ಲಿ ಇಮ್ರಾನ್ ಸುಳ್ಳು ಹೇಳಿದ್ದಾರೆ ಎಂದು ಹಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ತಮ್ಮ ರಕ್ಷಣೆಗಾಗಿ ನಡೆದಿರುವ ಘಟನೆಯನ್ನೂ ನಡೆದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಸೈಮಾ ಅವಾರ್ಡ್’ ಐಷಾರಾಮಿ ಹೋಟೆಲ್‌ನಲ್ಲಿ ಸೆಲೆಬ್ರಿಟಿಗಳ ತಡರಾತ್ರಿ ಪಾರ್ಟಿ : FIR ದಾಖಲು

    ಬಾಲಿವುಡ್ ನ ಹೆಸರಾಂತ ನಟ ಇಮ್ರಾನ್ ಹಶ್ಮಿ, ಮೂರು ದಿನಗಳಿಂದ ಕಾಶ್ಮೀರದಲ್ಲಿ (Kashmir) ಬೀಡು ಬಿಟ್ಟಿದ್ದರು. ‘ಗ್ರೌಂಡ್ ಜೀರೊ’ (Ground Zero) ಸಿನಿಮಾದ ಶೂಟಿಂಗ್ ಗಾಗಿ ಅವರು ಅಲ್ಲಿದ್ದರು. ಎರಡು ದಿನಗಳಿಂದ ಸತತ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಏಕಾಏಕಿಯಾದ ಈ ದಾಳಿ ಕಂಡು ಇಮ್ರಾನ್ ಆಘಾತಗೊಂಡಿದ್ದಾರೆ ಎಂದು ಹೇಳಲಾಗಿತ್ತು.

    ಕಾಶ್ಮೀರದ ಪಹಲ್ಗಾಂನಲ್ಲಿ ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೊ ಸಿನಿಮಾದ ಚಿತ್ರೀಕರಣ (Shooting) ನಡೆಯುತ್ತಿತ್ತು. ಈ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಪಹಲ್ಗಾಂ ಮಾರುಕಟ್ಟೆಗೆ ಇಮ್ರಾನ್ ಬಂದಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ (Stone pelting)  ಮಾಡಲಾಗಿದೆ. ಏಕಾಏಕಿ ನಡೆದ ಈ ದಾಳಿಗೆ ಇಮ್ರಾನ್  ಶಾಕ್ ಗೆ ಒಳಗಾಗಿದ್ದಾರೆ. ಯಾರು ಇದನ್ನು ಮಾಡಿದ್ದು, ಯಾಕೆ ಕಲ್ಲು ತೂರಾಟ ಮಾಡಿದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿತ್ತು.

    ಇಮ್ರಾನ್ ಮೇಲೆ ದಾಳಿ ಆಗುತ್ತಿದ್ದಂತೆಯೇ ಕೂಡಲೇ ಪೊಲೀಸರು (Police) ಸ್ಥಳಕ್ಕೆ ಬಂದಿದ್ದಾರೆ. ಆಮೇಲೆ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಮ್ರಾನ್ ಹಶ್ಮಿ ತಮ್ಮ ಮೇಲೆ ಈ ರೀತಿಯಲ್ಲಿ ಯಾವುದೇ ದಾಳಿ ಆಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

    ಬಾಲಿವುಡ್ ನಟ ಇಮ್ರಾನ್ ಹಶ್ಮಿ ಮೇಲೆ ಕಾಶ್ಮೀರದಲ್ಲಿ ಕಲ್ಲು ತೂರಾಟ

    ಬಾಲಿವುಡ್ ನ ಹೆಸರಾಂತ ನಟ ಇಮ್ರಾನ್ ಹಶ್ಮಿ (Emraan Hashmi), ಮೂರು ದಿನಗಳಿಂದ ಕಾಶ್ಮೀರದಲ್ಲಿ ಬೀಡು ಬಿಟ್ಟಿದ್ದರು. ‘ಗ್ರೌಂಡ್ ಜೀರೊ’ ಸಿನಿಮಾದ ಶೂಟಿಂಗ್ ಗಾಗಿ ಅವರು ಅಲ್ಲಿದ್ದರು. ಎರಡು ದಿನಗಳಿಂದ ಸತತ ಈ ಸಿನಿಮಾದ ಚಿತ್ರೀಕರಣ ನಡೆಯಿತ್ತು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಏಕಾಏಕಿಯಾದ ಈ ದಾಳಿ ಕಂಡು ಇಮ್ರಾನ್ ಆಘಾತಗೊಂಡಿದ್ದಾರೆ.

    ಕಾಶ್ಮೀರದ (Kashmir) ಪಹಲ್ಗಾಂನಲ್ಲಿ ಇಮ್ರಾನ್ ಹಶ್ಮಿ ನಟನೆಯ ಗ್ರೌಂಡ್ ಜೀರೊ (Ground Zero) ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಈ ಸಿನಿಮಾದ ಶೂಟಿಂಗ್ (Shooting) ಮುಗಿಸಿಕೊಂಡು ಪಹಲ್ಗಾಂ ಮಾರುಕಟ್ಟೆಗೆ ಇಮ್ರಾನ್ ಬಂದಿದ್ದರು. ಈ ವೇಳೆ ಅವರ ಮೇಲೆ ಕಲ್ಲು ತೂರಾಟ (Stone pelting) ಮಾಡಲಾಗಿದೆ. ಏಕಾಏಕಿ ನಡೆದ ಈ ದಾಳಿಗೆ ಇಮ್ರಾನ್  ಶಾಕ್ ಗೆ ಒಳಗಾಗಿದ್ದಾರೆ. ಯಾರು ಇದನ್ನು ಮಾಡಿದ್ದು, ಯಾಕೆ ಕಲ್ಲು ತೂರಾಟ ಮಾಡಿದರು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:`ಗಿಚ್ಚಿ ಗಿಲಿಗಿಲಿ’ ವಿನ್ನರ್ ಆದ ವನ್ಷಿಕಾ, ರನ್ನರ್ ಅಪ್ ಆಗಿ ನಿವೇದಿತಾ ಗೌಡ

    ಇಮ್ರಾನ್ ಮೇಲೆ ದಾಳಿ ಆಗುತ್ತಿದ್ದಂತೆಯೇ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಮೇಲೆ ಪಹಲ್ಗಾಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಯಾರನ್ನೂ ಬಂಧಿಸಿಲ್ಲ. ಆದರೆ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು (Police) ಬಲೆ ಬೀಸಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗರಿಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ

    ನಾಗರಿಕರ ದಾಳಿಗೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಭದ್ರತಾ ಪಡೆ ನಡೆಸಿದ್ದ ಎನ್‍ಕೌಂಟರ್‌ನಲ್ಲಿ ಇಬ್ಬರು ಜೈಶ್ ಎ ಮೊಹಮ್ಮದ್ ಉಗ್ರರನ್ನು ಸದೆಬಡೆದಿದೆ.

    ಸೋಪೋರ್ ಪಟ್ಟಣದ ಬೊಮೈ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‍ಕೌಂಟರ್ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಘಟನೆ ವೇಳೆ ಓರ್ವ ನಾಗರಿಕನಿಗೆ ಗಾಯವಾಗಿದೆ.

    ಉಗ್ರರಿಬ್ಬರು ನಿಷೇಧಿತ ಭಯೋತ್ಪಾದನಾ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರು. ಅಷ್ಟೇ ಅಲ್ಲದೇ ನಾಗರಿಕರ ಮೇಲೆ ದಾಳಿ ನಡೆಸಲು ಸಂಚನ್ನು ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    ಹತ್ಯೆಯಾದ ಇಬ್ಬರು ಉಗ್ರರನ್ನು ಸೋಪೋರ್‌ನ ಮೊಹಮ್ಮದ್ ರಫಿ ಮತ್ತು ಪುಲ್ವಾಮಾದ ಕೈಸರ್ ಅಶ್ರಫ್ ಎಂದು ಗುರುತಿಸಲಾಗಿದೆ. ಉಗ್ರ ರಫಿ ವಿರುದ್ಧ ಈ ಹಿಂದೆ ಎರಡು ಬಾರಿ ಪಿಎಸ್‍ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇಬ್ಬರೂ ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಬೀಸಾಡಿದ ಸಿಬ್ಬಂದಿ – ವೈರಲ್ ವೀಡಿಯೋಗೆ ರೈಲ್ವೆ ಇಲಾಖೆ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]