Tag: kashmir

  • 636 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಲಭ್ಯ

    636 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಲಭ್ಯ

    ನವದೆಹಲಿ: ಬರೋಬ್ಬರಿ 636 ದಿನಗಳ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ವಿಡಿಯೋ ಬಿಡುಗಡೆಯಾಗಿದೆ.

    ಈ ಕುರಿತ ವಿಡಿಯೋವನ್ನು ಎರಡು ಖಾಸಗಿ ವಾಹಿನಿಗಳು ಪ್ರಸಾರ ಮಾಡಿದ್ದು, ವಿಡಿಯೋದಲ್ಲಿ ದಾಳಿ ನಡೆದ ಸಮಯ ದಿನಾಂಕದ ಸಮೇತ ದೃಶ್ಯಗಳು ಲಭ್ಯವಾಗಿದೆ. ಯುಎವಿ ಮತ್ತು ಸೈನಿಕರು ಧರಿಸಿದ್ದ ಹೇಡ್ ಮೌಂಟೇನ್ ಕ್ಯಾಮೆರಾದಲ್ಲಿ ಕಾರ್ಯಾಚರಣೆಯನ್ನು ಸೆರೆ ಹಿಡಿಯಲಾಗಿದೆ.

    ಮೊದಲು ವಿಡಿಯೋದಲ್ಲಿ ಸೈನಿಕರ ಮೊದಲ ಟಾರ್ಗೆಟ್ ಆಗಿದ್ದ ಉಗ್ರಗಾಮಿಗಳ ಕ್ಯಾಪ್‍ಗಳು ಸೆರೆಯಾಗಿದ್ದು, ಬಳಿಕ ಯೋಧರು ಅವುಗಳ ಮೇಲೆ ದಾಳಿ ನಡೆಸುವ ಸಂದರ್ಭದ ದೃಶ್ಯಗಳು ಲಭಿಸಿದೆ. ಬೆಳಗ್ಗೆ 6.16 ಸಮಯಕ್ಕೆ ಎರಡನೇ ಟಾರ್ಗೆಟ್ ಮೇಲೆ ದಾಳಿ ನಡೆಸಲಾಗಿದೆ. ಮೂರನೇ ಟಾರ್ಗೆಟ್ ಬಂಕರ್ ಆಗಿದ್ದು, ಕೊನೆಯ ಫ್ರೇಮ್ ನಲ್ಲಿ ಉಗ್ರರ ಬಂಕರ್ ನಾಶವಾಗುವ ದೃಶ್ಯಗಳನ್ನು ಕಾಣಬಹುದಾಗಿದೆ.

    2016ರ ಸೆಪ್ಟೆಂಬರ್ 28, 29ರ ನಸುಕಿನ ಜಾವ ವೇಳೆ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಪ್ರವೇಶಿಸಿ ಸರ್ಜಿಕಲ್ ದಾಳಿ ನಡೆಸಿ 20ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಡಿಜಿಎಂಒ ಕಾರ್ಯಾಚರಣೆಯ ವಿವರವನ್ನು ನೀಡಿದ್ದರು.

  • ಸ್ವಾತಂತ್ರ್ಯ ಕಾಶ್ಮೀರ, ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ

    ಸ್ವಾತಂತ್ರ್ಯ ಕಾಶ್ಮೀರ, ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ

    ನವದೆಹಲಿ: ಕಾಶ್ಮೀರ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‍ನ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಬೆಂಬಲ ನೀಡಿ ಸಮರ್ಥನೆ ನೀಡಿದ್ದಾರೆ.

    ಈ ಕುರಿತು ಹೇಳಿಕೆ ನೀಡಿರುವ ಸೈಫುದ್ದೀನ್, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಮುಷರಫ್ ಸರಿಯಾದ ಹೇಳಿಕೆ ನೀಡಿದ್ದಾರೆ. ಅವರು ಕಾಶ್ಮೀರವನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯ ನೀಡಲು ಬಯಸಿದ್ದರು. 2007 ರಲ್ಲಿ ಮುಷರಫ್ ಕಾಶ್ಮೀರದ ಸಮಸ್ಯೆ ಬಗೆಹರಿಸುವ ಕುರಿತು ತಮ್ಮ ಸಲಹೆಗಳನ್ನು ಪಾಕಿಸ್ತಾನದ ಅಧಿಕಾರಿಗಳ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ.

    ಸದ್ಯ ಸೈಫುದ್ದೀನ್ ಅವರ `ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್’ ಪುಸ್ತಕ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆ ಮುಷರಫ್ ಅವರ ಹೇಳಿಕೆಗೆ ಸಮರ್ಥನೆ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೈಫುದ್ದೀನ್ ನೀಡಿರುವ ಹೇಳಿಕೆಗೆ ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

    ಮುಷರಫ್ ಏನು ಹೇಳಿದ್ದರು?
    ಒಂದು ವೇಳೆ ಕಾಶ್ಮೀರ ಜನರಿಗೆ ಅವಕಾಶ ಲಭಿಸಿದರೆ ಅವರು ಪಾಕಿಸ್ತಾನಕ್ಕೆ ಸೇರುವುದಿಲ್ಲ, ಅಲ್ಲದೇ ಸ್ವಾತಂತ್ರವಾಗಿರಲು ಬಯಸುತ್ತಾರೆ. ಕಾಶ್ಮೀರ ಸಮಸ್ಯೆ ಬಗೆ ಹರಿಸಲು ಇರುವುದು ಇದು ಒಂದೇ ಮಾರ್ಗ ಎಂದು 2007 ರಲ್ಲಿ ಹೇಳಿದ್ದರು.

    ಸದ್ಯ ಸೈಫುದ್ದೀನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕಿ ಮನಿಷಾ ಕಯಾಂಡೆ, ಎಐಸಿಸಿ ಅಧ್ಯಕ್ಷರು ಸೈಫುದ್ದೀನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕು, ಅಲ್ಲದೇ ಪಾಕಿಸ್ತಾನ ಹಾಗೂ ಮುಷರಫ್ ಬಗ್ಗೆ ಅವರು ಅಷ್ಟು ಕಳಜಿ ಹೊಂದಿದ್ದರೆ, ಅವರು ವಲಸೆ ಹೋಗಿ ಗುಲಾಮರಾಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ಹೇಳಿಕೆ ವಿರುದ್ಧ ಕಿಡಿಕಾರಿದ್ದು, ಕೇಂದ್ರ ಮಂತ್ರಿಯಾಗಿ ಸೈಫುದ್ದೀನ್ ಸೋಜ್ ತಮ್ಮ ಮಗಳನ್ನು ಜೆಕೆಎಲ್‍ಎಫ್ ನಿಂದ ಅಪಹರಿಸಲ್ಪಟ್ಟಾಗ ಕೇಂದ್ರದ ಅಧಿಕಾರದಿಂದ ಪ್ರಯೋಜನ ಪಡೆದಿದ್ದಾರೆ. ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಲಿನ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಭಾರತದಲ್ಲಿ ಇರಲು ಇಚ್ಛಿಸುವವರು ಸಂವಿಧಾನ ಪಾಲಿಸಬೇಕು, ಇಲ್ಲವಾದರೆ ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಟಿಕೆಟ್ ನೀಡಬೇಕು ಎಂದು ತಿರುಗೇಟು ನೀಡಿದರು.

  • ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ

    ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಹತ್ಯೆ ಮಾಡಿ ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು ಜಮಾತ್-ಉದ್-ದವ(ಜೆಯುಡಿ) ನಿಷೇಧಿತ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿದ್ದಾನೆ.

    ರಂಜಾನ್ ಪ್ರಯುಕ್ತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಪೂಂಚ್ ಜಿಲ್ಲೆಯ ರಾವಲ್ಕೋಟ್‍ನ ಸಾರ್ವಜನಿಕ ಸಮಾರಂಭದಲ್ಲಿ ಹಫಿಜ್ ಸಯೀದ್ ಈ ಹೇಳಿಕೆಯನ್ನು ನೀಡಿದ್ದಾನೆ.

    ಸಂಘಟನೆಯ ಹಿರಿಯ ಮುಖಂಡನಾದ ಮೌಲಾನ ಬಶೀರ್ ಅಹ್ಮದ್ ಖಾಖಿ, ಇಸ್ಲಾಂನ ಬಾವುಟವನ್ನು ಶೀಘ್ರವೇ ಭಾರತ ಮತ್ತು ಅಮೆರಿಕಾ ದೇಶದಲ್ಲಿ ಹಾರಿಸಿತ್ತೇವೆ. ಭಾರತದ ಪ್ರಧಾನಿ ಮೋದಿಯವರನ್ನು ಕೊಂದು ಹಾಕಿ, ಭಾರತ ಮತ್ತು ಇಸ್ರೇಲ್ ವಿಭಜನೆಯಲ್ಲಿ ಹೆಚ್ಚು ಮಂದಿ ಹುತಾತ್ಮರಾಗುತ್ತೇವೆ ಎಂದು ಎಂದು ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದಾನೆ.

    ರಂಜಾನ್ ತಿಂಗಳು ನಮಗೆ ಪವಿತ್ರ ದಿನವಾಗಿದ್ದು, ಈ ಸಮಯದಲ್ಲಿ ಜಿಹಾದ್(ಯುದ್ಧ) ನಡೆಸಿದರೆ ಗೆಲುವು ನಮ್ಮದೆ. ಒಂದು ವೇಳೆ ಜಿಹಾದ್‍ನಲ್ಲಿ ಹುತಾತ್ಮರಾದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ. ಸಂಘಟನೆಯು ಈಗಾಗಲೇ ಭಾರತ ಸೇನೆಯೊಂದಿಗೆ ಕಾಶ್ಮೀರ ವಿಭಜನೆಗೋಸ್ಕರ ಹೋರಾಟ ನಡೆಯುತ್ತಿದೆ. ಕಾಶ್ಮೀರ ಸ್ವಾತಂತ್ರ್ಯ ಮತ್ತು ಭಾರತದ ನಾಶಕ್ಕೆ ಮತ್ತು ಇಸ್ಲಾಂ ಧ್ವಜ ಹಾರಿಸಲು ಸಂಘಟನೆಗೆ ತಮ್ಮ ಮಕ್ಕಳನ್ನು ಸೇರಿಸಬೇಕೆಂದು ಜನರಲ್ಲಿ ಸಯೀದ್ ಮನವಿ ಮಾಡಿದ್ದಾನೆ.

    ರಂಜಾನ್ ತಿಂಗಳಲ್ಲಿ ದವಸ-ಧಾನ್ಯ ಹಾಗೂ ಹಣ ನೀಡಬೇಕು. ಕಾಶ್ಮೀರದ ಸ್ವಾತಂತ್ರ್ಯಕ್ಕೆ ತಮ್ಮ ಮಕ್ಕಳನ್ನು ಸಂಘಟನೆಗೆ ಸೇರಿಸುವಂತೆ ಮಹಿಳೆಯರಿಗೆ ಕರೆ ನೀಡಿದ್ದಾನೆ. ಇದನ್ನೂ ಓದಿ : ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

  • ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

    ಕಾಶ್ಮೀರ: ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

    ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಸದೆಬಡೆಯಲಾಗಿದೆ. ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು ಹೆಚ್ಚಿನ ಉಗ್ರರು ಇರಬಹುದೆಂದು ಶಂಕಿಸಲಾಗಿದೆ ಎಂದು ಭಾರತೀಯ ಸೇನಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

    ರಂಜಾನ್ ಹಬ್ಬದ ಪ್ರಯುಕ್ತ ಭಾರತದ ಗಡಿ ಪ್ರದೇಶಗಳಲ್ಲಿ ಭಾರತ ಸೇನೆಯು ಕದನ ವಿರಾಮವನ್ನು ಘೋಷಿಸಿತ್ತು. ಇಂದು ಭಾರತದ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಅಕ್ರಮವಾಗಿ ಪ್ರವೇಶವನ್ನು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.

    ವಿಶೇಷವಾಗಿ ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಹಿಮ ಕರಗುತ್ತಿರುವುದುರಿಂದ ಮುಂದಿನ ದಿನಗಳಲ್ಲಿ ಉಗ್ರರು ಈ ಗಡಿ ಪ್ರದೇಶದ ಮೂಲಕ ಒಳನುಸುಳುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ವಲಯ ತಿಳಿಸಿದೆ.

  • ಮೇಜರ್ ಗೊಗೊಯಿ ವಿರುದ್ಧ ಆರೋಪ ಸಾಬೀತಾದ್ರೆ ಕಠಿಣ ಕ್ರಮ: ಸೇನಾ ಮುಖ್ಯಸ್ಥ

    ಮೇಜರ್ ಗೊಗೊಯಿ ವಿರುದ್ಧ ಆರೋಪ ಸಾಬೀತಾದ್ರೆ ಕಠಿಣ ಕ್ರಮ: ಸೇನಾ ಮುಖ್ಯಸ್ಥ

    ಶ್ರೀನಗರ: ಬಾಲಕಿಯೊಬ್ಬಳನ್ನು ಹೋಟೆಲ್‍ಗೆ ಕರೆದೊಯ್ದಿದ್ದ ಪ್ರಕರಣದ ಆರೋಪ ಸಾಬೀತಾದರೆ ಮೇಜರ್ ಗೊಗೊಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಹೇಳಿದ್ದಾರೆ.

    ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಭಾರತೀಯ ಸೇನೆಯಲ್ಲಿರು ಯಾರೇ ತಪ್ಪು ಮಾಡಿದರೂ ಅವರಿಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ. ಶಿಕ್ಷೆಯು ಇತರರಿಗೆ ಮಾದರಿಯಾಗುವ ರೀತಿ ಇರುತ್ತದೆ ಎಂದು ಅವರು ಹೇಳಿದ್ದಾರೆ.

    ಏನಿದು ಪ್ರಕರಣ?
    ಮೇ 23ರಂದು ಭಾರತೀಯ ಸೇನೆಯ ಆರೋಪಿ ಮೇಜರ್ ಲೀತುಲ್ ಗೊಗೊಯ್ ಶ್ರೀನಗರದ ಹೋಟೆಲ್‍ವೊಂದರಲ್ಲಿ ರೂಮ್ ಬುಕ್ ಮಾಡಿದ್ದರು. ಅಲ್ಲಿಗೆ 17 ವರ್ಷದ ಸ್ಥಳೀಯ ಬಾಲಕಿಯನ್ನು ರೂಮ್‍ಗೆ ಕರೆತಂದಿದ್ದರು.

    ಸ್ಥಳೀಯರಿಗೆ ರೂಮ್ ನೀಡುವುದಿಲ್ಲ ಎನ್ನುವುದು ಹೋಟೆಲ್ ನಿಯಮವಾಗಿತ್ತು. ಹೀಗಾಗಿ ಬಾಲಕಿ ಹೋಟೆಲ್ ಪ್ರವೇಶಿಸಿದ್ದನ್ನು ಸಿಬ್ಬಂದಿ ವಿರೋಧಿಸಿದ್ದಾರೆ. ಅಲ್ಲಿಂದ ಹೊರಬಂದು ಸಿಬ್ಬಂದಿಯೊಂದಿಗೆ ಗೊಗೊಯ್ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಗೊಗೊಯ್ ಪರಿಚಿತ ವ್ಯಕ್ತಿ ಸಮೀರ್ ಅಹ್ಮದ್ ಇಲ್ಲಿದ್ದ ಎನ್ನಲಾಗಿದೆ. ಹೋಟೆಲ್ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಗೊಗೊಯ್‍ನನ್ನು ಬಂಧಿಸಿದ್ದಾರೆ.  ಇದನ್ನು ಓದಿ:

    ಲೀತುಲ್ ಗೊಗೊಯ್ ಯಾರು?
    ಅಸ್ಸಾಂನ ಗುವಾಹಟಿಯವರಾದ ಲೀತುಲ್ ಗೊಗೊಯ್ ಯುಪಿಎಸ್‍ಸಿ ಎನ್‍ಡಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿದ್ದಾರೆ. ಡೆಹ್ರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು 2013ರಲ್ಲಿ ಅಧಿಕಾರಿಯಾಗಿ ಗೊಗೊಯ್ ಸೇನೆಗೆ ಸೇರ್ಪಡೆಯಾಗಿದ್ದಾರೆ.

    ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೈನಿಕರು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಗೊಗೊಯ್ ಅವರ ವಿರುದ್ಧ ಪೊಲೀಸರು ಎಫ್‍ಐಆರ್ ಸಹ ದಾಖಲಿಸಿದ್ದರು. ಲೀತುಲ್ ಗೊಗೊಯ್ ಅವರ ಈ ಕಾರ್ಯವನ್ನು ಮೆಚ್ಚಿ ಸೇನೆಯ ಜನರಲ್ ಬಿಪಿನ್ ರಾವತ್ ಪ್ರಶಸ್ತಿ ಪತ್ರ ಕೊಟ್ಟು ಸನ್ಮಾನಿಸಿದ್ದರು. ಮೇಜರ್ ಗೆ ಸನ್ಮಾನ ಮಾಡಿದ್ದಕ್ಕೆ ಪಾಕ್ ಮಾಧ್ಯಮಗಳು ಇದನ್ನು ಶೇಮ್‍ಫುಲ್ ಅವಾರ್ಡ್ ಎಂದು ಟೀಕೆ ಮಾಡಿತ್ತು.

  • ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ಅಫ್ರಿದಿ `ಯುಎನ್’ ಪದಕ್ಕೆ ವಿಶೇಷ ಅರ್ಥ ನೀಡಿದ್ರು ಗಂಭೀರ್

    ನವದೆಹಲಿ: ಭಾರತವನ್ನು ಕೆಣಕಿ ಟ್ವಿಟ್ಟರ್ ನಲ್ಲಿ ಕಾಶ್ಮೀರ ಕುರಿತು `ಯುಎನ್'(ಯುನೈಟೆಡ್ ನೇಷನ್ಸ್ ಅಥವಾ ವಿಶ್ವಸಂಸ್ಥೆ) ಯಾವ ಕಾರ್ಯ ಮಾಡುತ್ತಿದೆ ಎಂದು ಪ್ರಶ್ನಿಸಿ, ಟ್ವೀಟ್ ಮಾಡಿದ್ದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಕ್ರಿಕೆಟಿಗ ಗೌತಮ್ ಗಂಭೀರ್ ವ್ಯಂಗ್ಯವಾಡಿ ಟಾಂಗ್ ನೀಡಿದ್ದಾರೆ.

    ಈ ಮೊದಲು ಟ್ವೀಟ್ ಮಾಡಿದ್ದ ಅಫ್ರಿದಿ ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರದಲ್ಲಿ ಕರೆದಿದ್ದರು. ಅಲ್ಲದೇ ಅಲ್ಲಿನ ಸರ್ಕಾರ ಅಮಾಯಕರನ್ನು ಹತ್ಯೆ ಮಾಡುತ್ತಿದ್ದಾರೆ. ಅದರೂ ವಿಶ್ವಸಂಸ್ಥೆ ಹಾಗೂ ಇತರೇ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದೇ ಸುಮ್ಮನೆ ಕುಳಿತಿರುವುದು ಏಕೆ ಎಂದು ಪ್ರಶ್ನಿಸಿದ್ದರು.

    ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಮಾಧ್ಯಮಗಳು ಶಹೀದ್ ಅಫ್ರಿದಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಳಿದರು. ಆದರೆ ಅವರಿಗೆ ಏನು ಹೇಳುವುದು? ಅಫ್ರಿದಿ ಮಾತ್ರ `ಯುಎನ್’ ಕಡೆಗೆ ನೋಡುತ್ತಿದ್ದಾರೆ. ಅಫ್ರಿದಿ ಅವರ ಹಿಂದುಳಿದ ನಿಘಂಟಿನಲ್ಲಿ ಯುಎನ್ ಎಂದರೆ `ಅಂಡರ್ ನೈಂಟೀನ್’ ಎಂಬ ಅರ್ಥವನ್ನು ನೀಡುತ್ತದೆ. ಮಾಧ್ಯಮಗಳು ಈ ವಿಷಯದಿಂದ ವಿಶ್ರಾಂತಿ ಪಡೆಯಬಹುದು. ಅಫ್ರಿದಿ ನೋಬಲ್ ನಲ್ಲಿ ಔಟಾದ ಸಂಭ್ರಮಾಚರಣೆ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ಅಫ್ರಿದಿ ತಮ್ಮ 16ನೇ ವಯಸ್ಸಿಗೆ ಕ್ರಿಕೆಟ್ ಗೆ ಪ್ರವೇಶ ಮಾಡಿದ್ದಾರೆ ಎಂಬ ಮಾಹಿತಿ ಇದ್ದು, ಈ ಕುರಿತು ಹಲವು ಬಾರಿ ಚರ್ಚೆಗಳು ನಡೆದಿದ್ದವು. ಇಂದಿಗೂ ಅಫ್ರಿದಿ ಕ್ರಿಕೆಟ್ ಗೆ ಪ್ರವೇಶ ಪಡೆದ ವಯಸ್ಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮೂಲಕ ಗಂಭೀರ್ ಮತ್ತೊಮ್ಮೆ ಅಫ್ರಿದಿಗೆ ಟಾಂಗ್ ನೀಡಿದ್ದಾರೆ.

    ಈ ಹಿಂದೆ 2007 ರಲ್ಲಿ ಕನ್ಪುರದಲ್ಲಿ ನಡೆದ ಪಾಕಿಸ್ತಾನ ಹಾಗೂ ಭಾರತ ನಡುವಿನ ಸರಣಿಯ ಮೂರನೇ ಏಕದಿನ ಪಂದ್ಯದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ವೇಳೆ ಅಂಪೈರ್ ಇಬ್ಬರ ನಡುವೆ ಮಧ್ಯಪ್ರವೇಶಿಸಿ ವಾತಾವರಣವನ್ನು ತಿಳಿಗೊಳಿಸಿದ್ದರು.

  • ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಕಾಶ್ಮೀರದಲ್ಲಿ 3 ಉಗ್ರರನ್ನ ಹೊಡೆದುರುಳಿಸಿದ ಭದ್ರತಾ ಪಡೆ- ಶ್ರೀನಗರದಲ್ಲಿ ಶಾಲಾ ಕಾಲೇಜುಗಳು ಬಂದ್

    ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆ ಸಿಬ್ಬಂದಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ಶಾಲಾ ಕಾಲೇಜುಗಳನ್ನ ಮುಚ್ಚಲಾಗಿದೆ.

    ಉಗ್ರರಲ್ಲಿ ಇಬ್ಬರನ್ನ ಗುರುತಿಸಲಾಗಿದ್ದು, ಶ್ರೀನಗರದ ಸೌರಾದ ಈಸಾ ಫಜಿಲಿ ಹಾಗೂ ದಕ್ಷಿಣ ಕಾಶ್ಮೀರದ ಕೊಕೆರ್ನಾಗ್‍ನ ಸೈಯದ್ ಓವೈಸ್ ಹತ್ಯೆಯಾಗಿದ್ದಾರೆ. ಮತ್ತೋರ್ವ ಉಗ್ರನ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರ ಪ್ರಕಾರ ಉಗ್ರರಲ್ಲಿ ಒಬ್ಬ ಇತ್ತೀಚೆಗೆ ಸೌರಾದಲ್ಲಿ ಪೊಲೀಸ್ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಎಂದು ವರದಿಯಾಗಿದೆ. ಈ ದಾಳಿಯಲ್ಲಿ ಪೇದೆಯೊಬ್ಬರು ಹುತಾತ್ಮರಾಗಿದ್ದರು.

    ಅನಂತ್‍ನಾಗ್‍ನ ಹಕೂರಾ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಉಗ್ರರು ತಪ್ಪಿಸಿಕೊಳ್ಳಲು ನಾವು ಅವಕಾಶ ನೀಡಲಿಲ್ಲ ಎಂದು ಪೊಲೀಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ, ಅಡಗಿ ಕುಳಿತಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಪಡೆ ಅಧಿಕಾರಿಗಳು ಎನ್‍ಕೌಂಟರ್ ನಡೆಸಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಪೊಲೀಸರು ಎಕೆ47 ರೈಫಲ್‍ಗಳು, ಪಿಸ್ತೂಲ್‍ಗಳು ಹಾಗೂ ಗ್ರೆನೇಡ್‍ಗಳನ್ನ ವಶಪಡಿಸಿಕೊಂಡಿದ್ದಾರೆ.

  • ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಉಸಿರುಗಟ್ಟಿ ವಿಜಯಪುರದ ಯೋಧ ಹುತಾತ್ಮ

    ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಉಸಿರುಗಟ್ಟಿ ವಿಜಯಪುರದ ಯೋಧ ಹುತಾತ್ಮ

    ವಿಜಯಪುರ: ಕಾಶ್ಮೀರದ ಸಿಯಾಚಿನ್ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯಪುರದ ಯೋಧರೊಬ್ಬರು ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ.

    ಜಿಲ್ಲೆಯ ಉತ್ನಾಳ ಗ್ರಾಮದ ಕಾಶಿನಾಥ ಕಲ್ಲಪ್ಪ ತಳವಾರ ಹುತಾತ್ಮ ಯೋಧ. ಜಮ್ಮು ಕಾಶ್ಮೀರದ ಸಿಯಾಚಿನ್ ನಲ್ಲಿ ಕರ್ತವ್ಯದ ವೇಳೆ ಉಸಿರುಗಟ್ಟಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

    ಯೋಧನ ಸಾವಿನಿಂದ ಉತ್ನಾಳನದ ಕಾಶಿನಾಥ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಮೃತನ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ ಯೋಧನ ಪಾರ್ಥಿವ ಶರೀರ ನಾಳೆ ಸ್ವಗ್ರಾಮಕ್ಕೆ ತರಲಾಗುತ್ತದೆ.

  • ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಪೊಲೀಸ್ ಪೇದೆ ಬಲಿ

    ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಪೊಲೀಸ್ ಪೇದೆ ಬಲಿ

    ಶ್ರೀನಗರ: ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಮೃತ ಪಟ್ಟಿದ್ದಾರೆ.

    ಹಜಿನ್ ಜಿಲ್ಲೆಯ ಮಿರ್ ಮೊಹಲ್ಲಾ ಗ್ರಾಮದ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ಅಡಗಿಕುಳಿತ್ತಿದ್ದರೆಂದು ಗುಪ್ತಚರ ಮಾಹಿತಿ ಆಧಾರದ ಮೇಲೆ ಪೊಲೀಸರು ಅವರನ್ನು ಬಂಧಿಸಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

    ಭಯೋತ್ಪಾದಕರ ಗುಂಡಿನ ದಾಳಿಗೆ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪೇದೆ ಜಹೀರ್ ಅಬ್ಬಾಸ್ ಬಲಿಯಾಗಿದ್ದಾರೆ. ಭಯೋತ್ಪಾದಕರನ್ನು ಶೋಧಿಸುತ್ತಿರುವಾಗ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಿಂದ ಮೃತ ಪಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

  • ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

    ಅಪಘಾತದಲ್ಲಿ ಗಾಯಗೊಂಡ ಯೋಧರಿಗೆ ಕಾಶ್ಮೀರದ ಜನರ ಸಹಾಯ- ವಿಡಿಯೋ ವೈರಲ್

     

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಯೋಧರಿಗೆ ಸ್ಥಳಿಯರು ಸಹಾಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇಲ್ಲಿನ ಬುದ್ಗಾಮ್ ಜಿಲ್ಲೆಯಲ್ಲಿ ಸೇನಾ ಟ್ರಕ್‍ವೊಂದು ಅಪಘಾತಕ್ಕೆ ಸಿಲುಕಿತ್ತು. ಇದನ್ನ ಕಂಡ ಸ್ಥಳೀಯರು ಕೂಡಲೇ ಸೈನಿಕರ ನೆರವಿಗೆ ಧಾವಿಸಿದ್ದಾರೆ. ಭಾನುವಾರದಂದು ಈ ಅಪಘಾತ ನಡೆದಿದೆ.

    ಇಲ್ಲಿನ ಚಾದೂರಾ ಪ್ರದೇಶದ ಮಾರ್ಗವಾಗಿ ವಾಹನ ಚಲಿಸುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯಿಂದ ಪಕ್ಕಕ್ಕೆ ಹೋಗಿತ್ತು. ಅಪಘಾತದಿಂದಾಗಿ ಹಲವು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಕೂಡಲೇ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಗಾಯಗೊಂಡ ಸೈನಿಕರಿಗೆ ನೆರವಾದ್ರು ಎಂದು ಪೊಲೀಸರು ಹೇಳಿದ್ದಾರೆ. ಸೈನಿಕರಿಗೆ ಕುಡಿಯಲು ನೀರು ಹಾಗೂ ಪ್ರಥಮ ಚಿಕಿತ್ಸೆ ನೀಡಿ ಸ್ಥಳೀಯರು ಮಾನವೀಯತೆ ಮೆರೆದಿದ್ದಾರೆ.

    ಕಳೆದ ವರ್ಷವೂ ಕೂಡ ಇಲ್ಲಿನ ಪರಿಂಪೋರಾ – ಪಂತ ಚೌಕ್ ಬೈಪಾಸ್‍ನ ಲಸ್ಜನ್ ಬಳಿ ಟ್ರಕ್ ಅಪಘಾತಕ್ಕೆ ಸಿಲುಕಿದ್ದಾಗ ಗಾಯಗೊಂಡ ಸೈನಿಕರು ಹೊರಬರಲು ಸ್ಥಳೀಯರು ಸಹಾಯ ಮಾಡಿದ್ದರು.