Tag: kashmir

  • ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ಸಹೋದರನೊಂದಿಗೆ ಸಾರಾ ಅಲಿ ಖಾನ್ ಕಾಶ್ಮೀರ ಟ್ರಿಪ್

    ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಸಹೋದರ ಇಬ್ರಾಹಿಂ ಅಲಿ ಖಾನ್ ಜೊತೆಗೆ ಕಾಶ್ಮೀರ ಟ್ರಿಪ್ ಹೊಡೆಯುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.

    ಸದ್ಯ ಕಾಶ್ಮೀರದಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಸಾರಾ ಅಲಿ ಖಾನ್ ಅಲ್ಲಿ ಕೆಲವೊಂದಷ್ಟು ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ನೋಟ ಪಡೆಯಿತು ರಾಜ್ ಕುಂದ್ರಾ ಇನ್‍ಸ್ಟಾಗ್ರಾಮ್ ಪ್ರೊಫೈಲ್

    ಫೋಟೋದಲ್ಲಿ ಸಾರಾ ಅಲಿ ಖಾನ್ ಹಾಗೂ ಇಬ್ರಾಹಿಂ ಹಿಂದೆ ಹಿಮದ ಗಡ್ಡೆ ಇರುವುದನ್ನು ಕಾಣಬಹುದಾಗಿದೆ. ಅಲ್ಲದೇ ವೀಡಿಯೋವೊಂದರಲ್ಲಿ ಇಬ್ರಾಹಿಂ ಅಲಿ ಖಾನ್ ಐಸ್ ಮೇಲೆ ಸ್ಕೇಟಿಂಗ್ ಆಡಿರುವುದನ್ನು ಕಾಣಬಹುದಾಗಿದೆ. ವಿಶೇಷವೆಂದರೆ ಈ ಫೋಟೋಗಳ ಜೊತೆಗೆ ಕ್ಯಾಪ್ಷನ್‍ನಲ್ಲಿ ಸಹೋದರ ಎಲ್ಲಿರುತ್ತಾನೋ ಅದೇ ಮನೆಯಾಗಿರುತ್ತದೆ ಎಂದು ಪ್ರೀತಿಯಿಂದ ಸಾರಾ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Sara Ali Khan (@saraalikhan95)

    ಸಾರಾ ಶೇರ್ ಮಾಡಿರುವ ಮೊದಲ ಫೋಟೋದಲ್ಲಿ ಇಬ್ರಾಹಿಂ ಜೊತೆ ಕಾರಿನ ಮೇಲೆ ಕುಳಿತುಕೊಂಡಿದ್ದಾರೆ, ಎರಡನೇ ಫೋಟೋದಲ್ಲಿ ಪಿಂಕ್ ಕಲರ್ ಟೋಪಿ ತೊಟ್ಟು ಫೋಟೋಗೆ ಪೋಸ್ ನೀಡಿದ್ದಾರೆ. ಮತ್ತೊಂದರಲ್ಲಿ ಸ್ನೇಹಿತರೊಂದಿಗೆ ಮಂಜು ಗಡ್ಡೆಯಿಂದ ಹಿಮಮಾನವನನ್ನು ನಿರ್ಮಿಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ ಎಂದಿದ್ದ ನಟಿ ಕ್ಷಮೆ

    ಒಟ್ಟಾರೆ ಹಲವಾರು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಾರಾ ಅಲಿ ಖಾನ್ ಅವರು ಕಾಶ್ಮೀರದಲ್ಲಿನ ತಾಪಮಾನ ಮೈನಸ್ 7ಡಿಗ್ರಿ ಇತ್ತು ಎಂದು ತಿಳಿಸಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಹಲವಾರು ಲೈಕ್ಸ್‍ಗಳು ಹರಿದುಬರುತ್ತಿದ್ದು, ಅಭಿಮಾನಿಗಳು ಸಾರಾ ಹಾಗೂ ಇಬ್ರಾಹಿಂ ಇಬ್ಬರೂ ಸುರಕ್ಷಿತವಾಗಿರಿ ಮತ್ತು ಅದ್ಭುತವಾದಂತಹ ಸಮಯ ಕಳೆಯಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಹಿಮದಲ್ಲಿ ದೃಢವಾಗಿ ನಿಂತ ಯೋಧನಿಗೆ ಒಂದು ಸೆಲ್ಯೂಟ್ – ವೀಡಿಯೋ ವೈರಲ್

    ಹಿಮದಲ್ಲಿ ದೃಢವಾಗಿ ನಿಂತ ಯೋಧನಿಗೆ ಒಂದು ಸೆಲ್ಯೂಟ್ – ವೀಡಿಯೋ ವೈರಲ್

    ಶ್ರೀನಗರ: ಕಾಶ್ಮೀರದ ಹಿಮದಲ್ಲಿ ದೃಢವಾಗಿ ನಿಂತಿರುವ ಸೇನಾ ಯೋಧರೊಬ್ಬರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕಾಶ್ಮೀರದಲ್ಲಿಗ ಭೀಕರ ಹಿಮ ಬಿರುಗಾಳಿ ಬೀಸುತ್ತಿದ್ದು, ಇದೀಗ ಮೊಣಕಾಲು ಆಳವಾದ ಹಿಮದಲ್ಲಿ ಸೇನಾ ಯೋಧರೊಬ್ಬರು ಗನ್ ಹಿಡಿದುಕೊಂಡು ದೃಢವಾಗಿ ನಿಂತಿರುವ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ರಕ್ಷಣಾ ಸಚಿವಾಲಯದ ಉದಂಪುರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಟ್ವಿಟ್ಟರ್ ನಲ್ಲಿ”ಯಾವ ಸುಲಭದ ಭರವಸೆ ಅಥವಾ ಸುಳ್ಳುಗಳು ನಮ್ಮನ್ನು ಗುರಿಯೆಡೆಗೆ ಕರೆದೊಯ್ಯುವದಿಲ್ಲ. ಆದರೆ ತನು ಮನ ಹಾಗೂ ಆತ್ಮ ತ್ಯಾಗವೂ ನಿಮ್ಮನ್ನು ಗುರಿಯೆಡೆಗೆ ಕರೆದೊಯ್ಯುತ್ತದೆ. ಅಲ್ಲಿರುವುದು ಒಂದೇ ಒಂದು ಎಲ್ಲರೂ ಸಾಧಿಸಬೇಕಾದ ಕಾರ್ಯ, ಸ್ವಾತಂತ್ರ್ಯ ಪತನಗೊಂಡಾಗ ಎದ್ದು ನಿಲ್ಲುವರ್ಯಾರು?” ಎಂದು ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕರ್ಫ್ಯೂ ವೇಳೆ ಕ್ರಿಕೆಟ್ ಆಡಬಹುದೇ – ಯುವಕನ ಪ್ರಶ್ನೆಗೆ ಪೊಲೀಸರ ‘ಸಿಲ್ಲಿ ಪಾಯಿಂಟ್’ ಉತ್ತರ

    ವೀಡಿಯೋವು 7 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ. ಜನರು ಸೈನಿಕನ ತಾಳ್ಮೆ ಮತ್ತು ಶಕ್ತಿಗೆ ಕೆಲವರು ಬೆರಗಾದರೆ, ಇತರರು ಅಂತಹ ಕಠಿಣ ಪರಿಸ್ಥಿತಿಗಳ ನಡುವೆ ದೇಶವನ್ನು ರಕ್ಷಿಸಿದ್ದಕ್ಕಾಗಿ ಅವನಿಗೆ ಸೆಲ್ಯೂಟ್ ಹೊಡೆದು. ಇದನ್ನೂ ಓದಿ: ಇಂದು 8,906 ಪಾಸಿಟಿವ್ 4 ಸಾವು – ಬೆಂಗಳೂರಿನಲ್ಲಿ 7,113 ಮಂದಿಗೆ ಸೋಂಕು

  • ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಉಗ್ರಗಾಮಿ ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿ

    ಶ್ರೀನಗರ: ಭಯೋತ್ಪಾದಕ ಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್(ಟಿಆರ್‌ಎಫ್) ಕಮಾಂಡರ್ ಸೇರಿದಂತೆ ಐವರು ಉಗ್ರರು ಗುಂಡಿಗೆ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಪೊಂಬೆ ಮತ್ತು ಗೋಪಾಲ್‌ಪೋರಾ ಗ್ರಾಮಗಳಲ್ಲಿ ಬುಧವಾರ ನಡೆದಿದೆ.

    ಗೋಪಾಲ್‌ಪೋರಾ ಗ್ರಾಮಗಳಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಟಿಆರ್‌ಎಫ್ ಕಮಾಂಡರ್ ಸೇರಿದಂತೆ ಐವರು ಉಗ್ರರು ಹತರಾಗಿದ್ದಾರೆ. ಪೊಂಬೆಯಲ್ಲಿ ಮೂವರು ಉಗ್ರರು ಸಾವನ್ನಪ್ಪಿದರೆ, ಗೋಪಾಲ್‌ಪೋರಾದಲ್ಲಿ ಇಬ್ಬರು ಹತರಾಗಿದ್ದಾರೆ. ಇದನ್ನೂ ಓದಿ:  ಚೀನಾ ಗಡಿ ಕ್ಯಾತೆ ನಡುವೆ ಭಾರತೀಯ ಸೇನೆಯಿಂದ ಆಪರೇಷನ್ ಹರ್ಕ್ಯುಲಸ್

    ಗೋಪಾಲ್‌ಪೋರಾ ಪ್ರದೇಶದಲ್ಲಿ ಉಗ್ರಗಾಮಿಗಳು ಇರುವ ಖಚಿತ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ನಂತರ, ಅವರು ಪ್ರತಿದಾಳಿ ನಡೆಸಿದರು. ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.

    ಟಿಆರ್‌ಎಫ್ ಉಗ್ರಗಾಮಿ ಕಮಾಂಡರ್ ಅಫಾಕ್ ಸಿಕಂದರ್ ಲೋನ್ ಮತ್ತು ಮತ್ತೊಬ್ಬ ಟಿಆರ್‌ಎಫ್ ಸದಸ್ಯ ಇರ್ಫಾನ್ ಮುಸ್ತಾಕ್ ಲೋನ್‌ನನ್ನು ಗೋಪಾಲ್‌ಪೋರಾದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್ ಮಾಡಿವೆ. ಈ ಕುರಿತು ಪೊಲೀಸ್ ಮಹಾನಿರೀಕ್ಷಕ(ಕಾಶ್ಮೀರ) ವಿಜಯ್ ಕುಮಾರ್ ಟ್ವೀಟ್‌ನಲ್ಲಿ, ನಿಷೇಧಿತ ಭಯೋತ್ಪಾದಕ ಸಂಘಟನೆಯ ಟಿಆರ್‌ಎಫ್‌ನ ಭಯೋತ್ಪಾದಕ ಕಮಾಂಡರ್ ಅಫಾಕ್ ಸಿಕಂದರ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  4ಜಿ ಡೌನ್‍ಲೋಡ್ ವೇಗದಲ್ಲಿ ಜಿಯೋ ಫಸ್ಟ್

    ಇದಲ್ಲದೆ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಇಬ್ಬರು ಸಕ್ರಿಯ ಭಯೋತ್ಪಾದಕ ಸಹಚರರನ್ನು ಹಾಗೂ ಪುಲ್ವಾಮಾ ನಿವಾಸಿ ಅಮೀರ್ ಬಶೀರ್ ದಾರ್, ಶೋಪಿಯಾನ್ ನಿವಾಸಿ ಮುಖ್ತಾರ್ ಅಹ್ಮದ್ ಭಟ್ ಅವರನ್ನು ಪಡೆಗಳು ಬಂಧಿಸಿವೆ. ಅವರ ಬಳಿಯಿದ್ದ ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿದೆ.

  • ಕಾಶ್ಮೀರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

    ಕಾಶ್ಮೀರದಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

    ಶ್ರೀನಗರ್: ಪ್ರತಿ ವರ್ಷದಂತೆ ಈ ವರ್ಷವೂ ಯೋಧರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೌಶೇರಾ ವಲಯದಲ್ಲಿರುವ ಯೋಧರನ್ನು ಗುರುವಾರ ಬೆಳಿಗ್ಗೆ ಭೇಟಿಯಾಗಿದ್ದರು. ನಂತರ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಶುಭಾಶಯ ತಿಳಿಸಿದ್ದಾರೆ.

    ನಂತರ ಮಾತನಾಡಿದ ಅವರು, “ನಾನು ಪ್ರಧಾನಿಯಾಗಿ ಇಲ್ಲಿಗೆ ಬಂದಿಲ್ಲ. ನಿಮ್ಮ ಕುಟುಂಬದ ಸದಸ್ಯನಾಗಿ ಬಂದಿದ್ದೇನೆ. ಕೋಟ್ಯಂತರ ಭಾರತೀಯರ ಆಶೀರ್ವಾದವನ್ನು ತಂದಿದ್ದೇನೆ” ಎಂದು ಯೋಧರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದ್ದಾರೆ. ಇದನ್ನೂ ಓದಿ: ಪಟಾಕಿ ಇಲ್ಲದೇ ದೀಪಾವಳಿ ಆಚರಿಸಲು ಶಾಲೆಗಳಲ್ಲೇ ಮಕ್ಕಳಿಗೆ ಪ್ರೇರಣೆ- ದೆಹಲಿ ಸರ್ಕಾರದಿಂದ ಹೊಸ ಪ್ರಯತ್ನ

    ಈ ಸ್ಥಳಕ್ಕೆ ಬಂದಾಗ ನನ್ನ ಹೃದಯ ತುಂಬಿಬಂತು. ಈ ಸ್ಥಳವು ನಿಮ್ಮ ಶೌರ್ಯಕ್ಕೆ ಉದಾಹರಣೆಯಾಗಿದೆ. ನೌಶೇರಾದಲ್ಲಿ ನಡೆದ ಎಲ್ಲ ಪಿತೂರಿಗಳಿಗೂ ತಕ್ಕ ಉತ್ತರ ನೀಡಿದ್ದೀರಿ ಎಂದು ಯೋಧರನ್ನು ಶ್ಲಾಘಿಸಿದ್ದಾರೆ.

    ಎರಡನೇ ಬಾರಿಗೆ ಪ್ರಧಾನಿ ಮೋದಿ ಅವರು ಯೋಧರೊಂದಿಗೆ ಪ್ರಧಾನಿ ಮೋದಿ ಅವರು ದೀಪಾವಳಿ ಆಚರಿಸುತ್ತಿದ್ದಾರೆ. ಬುಧವಾರ ಜಮ್ಮುವಿನಲ್ಲಿ ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ಅವರನ್ನು ಮೋದಿ ಅವರು ಭೇಟಿಯಾದರು. ನಂತರ ಭದ್ರತಾ ಪಡೆಗಳಿರುವ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು. ಇದನ್ನೂ ಓದಿ: ಕೇಂದ್ರದ ಬಳಿಕ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ಯಾವ್ಯಾವ ರಾಜ್ಯದಲ್ಲಿ ಎಷ್ಟೆಷ್ಟು?ರೂಪಾಯಿ ಇಳಿಕೆ

    2019ರಲ್ಲಿ ರಜೌರಿಯ ಸೇನಾ ಘಟಕದಲ್ಲಿ ಪ್ರಧಾನಿ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಿದ್ದರು. ಈ ಬಾರಿ ನೌಶೆರಾದಲ್ಲಿ ಯೋಧರೊಂದಿಗೆ ಹಬ್ಬ ಆಚರಿಸಲು ಮುಂದಾಗಿದ್ದಾರೆ.

  • ಅಮಿತ್ ಶಾ ಕಾಶ್ಮೀರ ಭೇಟಿ – ಕೆಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತ, ದ್ವಿಚಕ್ರ ವಾಹನ ವಶ

    ಅಮಿತ್ ಶಾ ಕಾಶ್ಮೀರ ಭೇಟಿ – ಕೆಲ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸ್ಥಗಿತ, ದ್ವಿಚಕ್ರ ವಾಹನ ವಶ

    ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕಣಿವೆ ರಾಜ್ಯಕ್ಕೆ ಭೇಟಿ ನೀಡಲಿರುವ ಬೆನ್ನಲ್ಲೇ ಪೊಲೀಸರು ಕಾಶ್ಮೀರದ ಕೆಲವು ಪ್ರದೇಶಗಳ ಇಂಟರ್‌ನೆಟ್‌ ಸೇವೆಗಳನ್ನು ಸ್ಥಗಿತಗೊಳಿಸಿ ಕೆಲ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಅಕ್ಟೋಬರ್ 23 ರಂದು ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಅದಲ್ಲದೆ ಅಮಿತ್ ಶಾ ಶ್ರೀನಗರದಿಂದ ಶಾರ್ಜಾಗೆ ಹಾರಾಟ ನಡೆಸಲಿರುವ ಮೊದಲ ವಿಮಾನಕ್ಕೆ ಚಾಲನೆ ನೀಡಲಿದ್ದಾರೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದನ್ನೂ ಓದಿ: ಇಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

    ಈ ನಡುವೆ ನಿನ್ನೆ ದ್ವಿಚಕ್ರ ವಾಹನಗಳ ವಶ ಪಡೆದ ಬಗ್ಗೆ ಮತ್ತು ಇಂಟರ್‌ನೆಟ್‌ ಸ್ಥಗಿತಗೊಳಿಸಿರುವ ಕುರಿತು ಟ್ವಿಟ್ಟರ್ ಮೂಲಕ ಸ್ಪಷ್ಟನೆ ಕೊಟ್ಟಿರುವ ಕಾಶ್ಮೀರ ವಲಯ ಐಜಿಪಿ ವಿಜಯ್ ಕುಮಾರ್, ಇಂಟರ್‌ನೆಟ್‌ ಸ್ಥಗಿತಗೊಳಿಸಿರುವುದು ಮತ್ತು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಕ್ಕೂ ಅಮಿತ್ ಶಾ ಭೇಟಿಗೂ ಯಾವುದೇ ಸಂಬಂಧವಿಲ್ಲ. ಭಯೋತ್ಪಾದನಾ ವಿರೋಧಿ ಕ್ರಮಗಳ ಭಾಗವಾಗಿ ಈ ಕ್ರಮ ಕೈಗೊಂಡಿದ್ದೇವೆ. ಕೆಲದಿನಗಳ ಹಿಂದೆ ಹಿಂಸಾತ್ಮಕ ಘಟನೆಗಳು ನಡೆದಿತ್ತು ಆ ಬಳಿಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.

    ಕೆಲದಿನಗಳ ಹಿಂದೆ ಉಗ್ರರು ಹಲವು ವಲಸೆ ಕಾರ್ಮಿಕರನ್ನು ಹತ್ಯೆ ಮಾಡಿ ಕೌರ್ಯ ಮೆರೆದಿದ್ದರು. ಈ ಸಂದರ್ಭ ಕೂಡ ಹಲವು ಪ್ರದೇಶಗಳ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಜೊತೆಗೆ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ದಾಖಲೆಗಳ ತಪಾಸಣೆ ನಡೆಸಿ ಬಿಡುವಂತಹ ಕ್ರಮಕ್ಕೆ ಮುಂದಾಗಿದ್ದರು. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – 88ಕ್ಕೆ ಏರಿದ ಸಾವಿನ ಪ್ರಮಾಣ

  • ಜಮ್ಮು, ಕಾಶ್ಮೀರ, ಲಡಾಕ್ ಭಾರತ ಅವಿಭಾಜ್ಯ ಅಂಗ ಕೂಡಲೇ ಖಾಲಿ ಮಾಡಿ – ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿಪಾದನೆ

    ಜಮ್ಮು, ಕಾಶ್ಮೀರ, ಲಡಾಕ್ ಭಾರತ ಅವಿಭಾಜ್ಯ ಅಂಗ ಕೂಡಲೇ ಖಾಲಿ ಮಾಡಿ – ವಿಶ್ವಸಂಸ್ಥೆಯಲ್ಲಿ ಭಾರತದ ಪ್ರತಿಪಾದನೆ

    ನವದೆಹಲಿ: ಜಮ್ಮು, ಕಾಶ್ಮೀರ – ಲಡಾಕ್ ಭಾರತ ಅವಿಭಾಜ್ಯ ಅಂಗ, ಅವು ಯಾವಾಗಲೂ ಭಾರತದ ಅವಿಭಾಜ್ಯವಾಗೇ ಉಳಿಯಲಿವೆ. ಪಾಕ್ ಅಕ್ರಮವಾಗಿ ವಶಪಡಿಸಿಕೊಂಡಿರುವ ಪಿಓಕೆ ಭಾಗವನ್ನು ಕೂಡಲೇ ಖಾಲಿ ಮಾಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಎಚ್ಚರಿಕೆ ನೀಡಿದೆ.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದರು. ವಿಶ್ವಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಉಗ್ರರಿಗೆ ಪಾಕ್ ಆತಿಥ್ಯ ವಹಿಸಿದೆ. ಒಸಾಮಾ ಬಿಲ್ಡಾನ್‍ನ್ನ ಹುತಾತ್ಮ ಎಂದು ಪಾಕ್ ನಾಯಕರು ಕರೆಯುತ್ತಾರೆ. ತನ್ನ ಹಿತ್ತಲಲ್ಲಿ ಭಯೋತ್ಪಾದನೆ ಪೋಷಣೆ ಮಾಡುತ್ತಿದೆ. ಇದರ ನಷ್ಟ ಇಡೀ ವಿಶ್ವ ಎದುರಿಸುತ್ತಿದೆ ಎಂದು ದುಬೆ ಆರೋಪಿಸಿದರು. ಇದನ್ನೂ ಓದಿ: ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    sneha dubey

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದರು. ಆರ್ಟಿಕಲ್ 370 ರದ್ದು ಹಾಗೂ ಪಾಕಿಸ್ತಾನದ ಪರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗೀಲಾನಿಯವರ ಸಾವಿನ ಕುರಿತು ಭಾರತ ಸರ್ಕಾರದ ಆಗಸ್ಟ್ 5, 2019 ರ ನಿರ್ಧಾರದ ಬಗ್ಗೆ ಅವರು ಮಾತನಾಡಿದ್ದರು.

    ಪ್ರತ್ಯುತ್ತರದ ಹಕ್ಕಿನಲ್ಲಿ ಮಾತನಾಡಿದ ಸ್ನೇಹ ದುಬೆ, ದುರದೃಷ್ಟವಶಾತ್ ಪಾಕಿಸ್ತಾನ ಭಾರತದ ವಿರುದ್ಧ ಸುಳ್ಳು ಮತ್ತು ದುರುದ್ದೇಶ ಪ್ರೇರಿತ ಹೇಳಿಕೆಗಳನ್ನು ನೀಡಲು ವಿಶ್ವಸಂಸ್ಥೆಯ ವೇದಿಕೆಯನ್ನು ಬಳಸಿಕೊಳ್ಳುತ್ತಿದೆ. ಭಯೋತ್ಪಾದಕರಿಗೆ ನೆಲೆ ನೀಡುವ ಪಾಕ್, ಗಮನ ಬೇರೆಡೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದೆ ಎಂದರು. ಇದನ್ನೂ ಓದಿ: ಅ.7ಕ್ಕೆ ಚಾಮರಾಜನಗರಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮನ

    ಭಾರತ ತನ್ನ ನೆರೆಯ ಎಲ್ಲ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ನಾವು ಬಂಗಾಳದ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಬಾಂಗ್ಲಾದೇಶದ 50ನೇ ವರ್ಷದ ವರ್ಷಾಚರಣೆಯಲ್ಲಿ ಭಾರತ ಭಾಗಿಯಾಗಿತ್ತು. ಆದರೆ ಪಾಕ್ ಉತ್ತಮ ಸಂಬಂಧ ಹೊಂದುವ ಬದಲು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ “ಭಾರತದ ಅವಿಭಾಜ್ಯ ಮತ್ತು ಎಂದಿಗೂ ಬಿಡಿಸಲಾಗದ ಭಾಗವಾಗಿದೆ” ಕೂಡಲೇ ಜಾಗ ಖಾಲಿ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.

  • ಕಾಶ್ಮೀರದಲ್ಲಿ ಕಾನ್ಸ್​ಟೇಬಲ್  ಮೇಲೆ ಭದ್ರತಾ ಸಿಬ್ಬಂದಿಯಿಂದ ಗುಂಡಿನ ದಾಳಿ

    ಕಾಶ್ಮೀರದಲ್ಲಿ ಕಾನ್ಸ್​ಟೇಬಲ್ ಮೇಲೆ ಭದ್ರತಾ ಸಿಬ್ಬಂದಿಯಿಂದ ಗುಂಡಿನ ದಾಳಿ

    ಶ್ರೀನಗರ: ದೇವಸ್ಥಾನದ ಬಳಗೆ ಪ್ರವೇಶಿಸುತ್ತಿದ್ದ ಪೊಲೀಸ್ ಕಾನ್ಸ್​ಟೇಬಲ್ ರಾಷ್ಟ್ರ ವಿರೋಧಿ ಎಂದು ಶಂಕಿಸಿ ಗುಂಡಿನ ದಾಳಿ ನಡೆಸಿದ ಘಟನೆ ಕಾಶ್ಮೀರದಲ್ಲಿ ನಡೆದಿದೆ.

     

    ಲಂಗೇಟ್ ಹಂದ್ವಾರ ನಿವಾಸಿ ಅಜಯ್ ಧರ್ ಗುಂಡಿನ ದಾಳಿಗೆ ಒಳಗಾದ ಕಾನ್‍ಸ್ಟೇಬಲ್. ಕಾಶ್ಮೀರದ ಬಹುತೇಕ ದೇವಸ್ಥಾನಗಳಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಈ ಹಿನ್ನೆಲೆ ಅಜಯ್ ಅವರು ತಮ್ಮ ಗುರುತನ್ನು ಮುಚ್ಚಿಟ್ಟು ದೇವಾಲಯದ ಬಾಗಿಲನ್ನು ಒಡೆಯುತ್ತಿದ್ದರು. ಇದನ್ನೂ ಓದಿ:  ಉಡುಪಿಯಲ್ಲಿ ಹಟ್ಟಿಗೆ ನುಗ್ಗಿ ಗೋವು ಕಳ್ಳತನ- ಪೊಲೀಸ್ ಠಾಣೆ ಮುಂದೆ ಪ್ರತಿಭಟನಾ ಭಜನೆ

    ಗಾಳಿಯಲ್ಲಿ ಗುಂಡು ಹಾರಿಸಿದ ನಂತರವೂ ತನ್ನ ಗುರುತನ್ನು ಬಹಿರಂಗ ಪಡಿಸದ ಕಾರಣ ಅಜಯ್ ಉಗ್ರಗಾಮಿ ಆಗಿರಬಹುದು ಎಂದು ಶಂಕಿಸಿ ಅವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ಅಜಯ್ ಸಾವನ್ನಪ್ಪಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್, ಈ ಘಟನೆ ದುರದೃಷ್ಟಕರ. ಅಜಯ್ ತಮ್ಮ ಗುರುತನ್ನು ತಿಳಿಸದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ರಿಲ್ ಹಾಕಿದ್ದರಿಂದಲೇ ಇಬ್ಬರು ಬೆಂಕಿಗೆ ಬಲಿಯಾಗಿದ್ದಾರೆ – ಅಪಾರ್ಟ್‍ಮೆಂಟ್ ನಿವಾಸಿ

    ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನದ ಐಎಸ್‍ಐ ಭಾರತಕ್ಕೆ ಉಗ್ರರನ್ನು ಕಳುಹಿಸಲು ಮುಂದಾಗಿದೆ. ಕೆಲ ಉಗ್ರರು ಕಾಶ್ಮೀರವನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

  • ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದಿಸಿದ ಕುಟುಂಬಸ್ಥರ ವಿರುದ್ಧ FIR

    ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ ಹೊದಿಸಿದ ಕುಟುಂಬಸ್ಥರ ವಿರುದ್ಧ FIR

    ಶ್ರೀನಗರ: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿ(92)ಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ದೇಶ ವಿರೋಧಿ ಘೋಷಣೆ ಕೂಗಿದ ಗೀಲಾನಿಯವರ ಕುಟುಂಬದವರ ವಿರುದ್ಧ ಬದ್ಗಾಂ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

    ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಅಲಿ ಗೀಲಾನಿಯವರು ಬುಧವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದರು. ನಂತರ ಅವರ ಮೃತ ದೇಹವನ್ನು ಸಮೀಪದಲ್ಲಿರು ಮಸೀದಿಯ ಸ್ಮಶಾನದಲ್ಲಿ ಹೂಳುವ ಮುನ್ನ ಪಾಕಿಸ್ತಾನ ರಾಷ್ಟ್ರ ಧ್ವಜವನ್ನು ಹೊದಿಸಲಾಗಿತ್ತು. ಇದನ್ನೂ ಓದಿ: ಮೈಸೂರಿನ ದರೋಡೆ, ಶೂಟ್‍ಔಟ್ ಪ್ರಕರಣ- ಖತರ್ನಾಕ್ ಬಾಂಬೆ ಬುಡ್ಡಾ ಅಂದರ್

    Syed Ali Shah Geelani

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಕಾಶ್ಮೀರದಲ್ಲಿ ಶುಕ್ರವಾರ ರಾತ್ರಿ ಮೊಬೈಲ್ ಇಂಟರ್‍ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ಪುತ್ರ ನಸೀಮ್ ಗಿಲಾನಿ ನಮ್ಮ ತಂದೆಯ ಮೃತ ದೇಹವನ್ನು ಪೊಲೀಸರು ಬಲವಂತವಾಗಿ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಅಲ್ಲದೇ ಮನೆಯ ಮಹಿಳೆಯರಿಗೆ ಮತ್ತು ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾಸನದಲ್ಲೊಂದು ತ್ರಿಕೋನ ಪ್ರೇಮ ಕಥೆ – ವಿಷ ಸೇವಿಸಿದವಳ ಆಯ್ಕೆ ಬಳಿಕ ಮತ್ತೊಬ್ಬಳು ಕೊಟ್ಟಿದ್ದೇಕೆ ಎಚ್ಚರಿಕೆ.?

    ಆದರೆ ಪೊಲೀಸರು ಸೈಯದ್ ಅಲಿ ಶಾ ಗೀಲಾನಿಯವರ ಅಂತ್ಯ ಕ್ರಿಯೆ ನಡೆಸಲು ಕುಟುಂಬಸ್ಥರಿಗೆ ಸಹಾಯ ಮಾಡಲಾಗಿದೆ ಎಂಬ ಮಾಹಿತಿ ಇದ್ದು, ಶ್ರೀನಗರದ ವಿಮಾನ ನಿಲ್ದಾಣದ ರಸ್ತೆಯಲ್ಲಿರುವ ಹೈದರ್‍ಪೋರಾದಲ್ಲಿ ಗೀಲಾನಿಯವರನ್ನು ಸಮಾಧಿ ಮಾಡಿಲಾಗಿದೆ. ಅಲ್ಲದೇ ಅಂತ್ಯಕ್ರಿಯೆಯಲ್ಲಿ ಗೀಲಾನಿಯವರ ಕೆಲ ಸಂಬಂಧಿಕರು ಕೂಡ ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ಅಕ್ಷಯ್ ಕುಮಾರ್ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಗೆ ಭೂಮಿ ಪೂಜೆ

    ಅಕ್ಷಯ್ ಕುಮಾರ್ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಗೆ ಭೂಮಿ ಪೂಜೆ

    ಶ್ರೀನಗರ: ಬಾಲಿವುಡ್ ನಟ ಅಕ್ಷಯ್ ಕುಮಾರ್ 1ಕೋಟಿ ರೂ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಪೂಜೆಯನ್ನು ನೆರವೇರಿಸಲಾಗಿದೆ.

    ಅಕ್ಷಯ್ ಈ ಹಿಂದೆ ಬಿಎಸ್‍ಎಫ್‍ಗೆ ಭೇಟಿ ನೀಡಿದ್ದರ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ದೇಶದ ಗಡಿ ಕಾಯುವ ನೈಜ ಹೀರೋಗಳನ್ನು ನಾನಿಂದು ಭೇಟಿಯಾದೆ. ಗೌರವದ ಹೊರತಾಗಿ ಮತ್ಯಾವ ಭಾವವೂ ನನ್ನಲ್ಲಿ ಮೂಡುತ್ತಿಲ್ಲ ಎಂದು ಅವರು ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿಯೇ ಅವರು ಶಾಲೆಗೆ ದೇಣಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಬಿಎಸ್‍ಎಫ್ ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.

     

    ಗಡಿ ಭದ್ರತಾ ಪಡೆಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯಂತೆ, ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಸ್ಮರಣಾರ್ಥವಾಗಿ, ಕಾಶ್ಮೀರದ ನೀರುವಿನ ಸರ್ಕಾರಿ ಶಾಲೆಯ ಹೊಸ ಸಂಕೀರ್ಣಕ್ಕೆ ಅಡಿಪಾಯವನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ವೆಬ್‍ಲಿಂಕ್ ಮೂಲಕ ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.

    ಕೊರೊನಾ ಸಂದಿಗ್ಧ ಸಮಯದಲ್ಲಿ ಅವಶ್ಯವಿರುವವರಿಗೆ ಸಹಾಯ ಹಸ್ತ ಚಾಚಿದ್ದ ಈ ನಟ, ಈಗ ಶಿಕ್ಷಣ ಕ್ಷೇತ್ರದಲ್ಲೂ ನೆರವು ನೀಡಿದ್ದು ಗಮನ ಸೆಳೆದಿದೆ. ಅಕ್ಷಯ್ ಕುಮಾರ್ ಅವರು ಬಾಲಿವುಡ್‍ನಲ್ಲಿ ಮುಂಚೂಣಿಯಲ್ಲಿರುವ ನಟರಾಗಿದ್ದಾರೆ. ಬೆಲ್ ಬಾಟಂ, ಬಚ್ಚನ್ ಪಾಂಡೆ, ರಕ್ಷಾ ಬಂಧನ್, ರಾಮ ಸೇತು, ಪೃಥ್ವಿರಾಜ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಮೇ 17ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ – ಮದುವೆಗೆ 25 ಮಂದಿಗೆ ಮಾತ್ರ ಅವಕಾಶ

    ಜಮ್ಮು-ಕಾಶ್ಮೀರದಲ್ಲಿ ಮೇ 17ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ – ಮದುವೆಗೆ 25 ಮಂದಿಗೆ ಮಾತ್ರ ಅವಕಾಶ

    ಶ್ರೀನಗರ: ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಜಮ್ಮು-ಕಾಶ್ಮೀರದ ಆಡಳಿತವು ಯುಟಿಯ 20 ಜಿಲ್ಲೆಗಳಲ್ಲಿ ಒಂದು ವಾರ ಕೊರೊನಾ ಕರ್ಫ್ಯೂವನ್ನು ವಿಸ್ತರಿಸಿದೆ.

    ಮೇ 17ರ ಬೆಳಗ್ಗೆ 7 ಗಂಟೆಯವರೆಗೆ ಜಮ್ಮು-ಕಾಶ್ಮೀರದ 20 ಜಿಲ್ಲೆಗಳಲ್ಲಿ ಕಫ್ರ್ಯೂವನ್ನು ವಿಧಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕರ್ಫ್ಯೂ ಕಟ್ಟುನಿಟ್ಟಾಗಿರುತ್ತದೆ ಎಂದು ಡಿಐಪಿಆರ್ ತನ್ನ ಟ್ವಿಟ್ಟರ್ ಖಾತೆ ಮೂಲಕ ತಿಳಿಸಿದೆ.

    ಅಷ್ಟೇ ಅಲ್ಲದೇ ಮದುವೆ ಸಮಾರಂಭಗಳಲ್ಲಿ 25 ಜನರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳಿದೆ ಷರತ್ತು ಬದ್ಧ ಅವಕಾಶ ನೀಡಲಾಗಿದೆ. ಜನರ ಅನಗತ್ಯ ಸಂಚಾರವನ್ನು ತಡೆಯಲು ಪೊಲೀಸರು ಮತ್ತು ಸೈನಿಕರ ಪಡೆಗಳನ್ನು ಯುಟಿಯ ಎಲ್ಲಾ ಜಿಲ್ಲೆಗಳ ರಸ್ತೆಯ ಚೆಕ್‍ಪೋಸ್ಟ್‍ಗಳಲ್ಲಿ ನಿಯೋಜಿಸಿದೆ.

    ಜಮ್ಮು ಹಾಗೂ ಕಾಶ್ಮೀರದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುಮಾರು 5 ಸಾವಿರಕ್ಕೂ ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 60 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.