Tag: kashmir road

  • ರಸ್ತೆ ಕೆಟ್ಟು ಹೋಗಿದ್ದರಿಂದ ಮನೆಗೆ ಸಂಬಂಧಿಕರು ಬರ್ತಿಲ್ಲ- ಬಾಲಕಿ ವೀಡಿಯೋ ವೈರಲ್

    ರಸ್ತೆ ಕೆಟ್ಟು ಹೋಗಿದ್ದರಿಂದ ಮನೆಗೆ ಸಂಬಂಧಿಕರು ಬರ್ತಿಲ್ಲ- ಬಾಲಕಿ ವೀಡಿಯೋ ವೈರಲ್

    ಶ್ರೀನಗರ: ಗುಂಡಿ ಬಿದ್ದು, ಕೆಸರು ಗದ್ದೆಯಾದ ರಸ್ತೆಯ ಬಗ್ಗೆ ಕಾಶ್ಮೀರದ ಪುಟ್ಟ ಬಾಲಕಿಯೊಬ್ಬಳು ವರದಿ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?: ಬಾಲಕಿ ಹಾಳಾದ ರಸ್ತೆಯನ್ನು ತೋರಿಸಿ ಮಾತನಾಡಿ ಇಷ್ಟು ಕೆಟ್ಟ ರಸ್ತೆ ಇರುವುದರಿಂದ ಸಂಬಂಧಿಕರು ಮನೆಗೆ ಬರುತ್ತಿಲ್ಲ, ನಮಗೂ ನಡೆದಾಡಲು ಕಷ್ಟವಾಗುತ್ತಿದೆ. ನೋಡಿ ಎಷ್ಟು ಕಸ ಮತ್ತು ಕೆಸರು ತುಂಬಿಕೊಂಡಿದೆ ಎಂದು ತೋರಿಸುತ್ತಾಳೆ. ಅದೇ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಕೆಸರು ತುಂಬಿದ ರಸ್ತೆಯಲ್ಲಿ ಓಡಾಡಿ ರಸ್ತೆ ಹದಗೆಟ್ಟ ಬಗ್ಗೆ ಅಲ್ಲಿಯ ಜನರು ಸಂಚರಿಸಲು ಕಷ್ಟಪಡುತ್ತಿರುವ ಬಗ್ಗೆ ವಿವರಿಸಿದ್ದಾಳೆ. ಅಲ್ಲದೇ ಅಲ್ಲಿ ಹಾಕಿರುವ ಕಸಗಳನ್ನು ನೋಡಿ ಕೋಪಗೊಂಡು ಜನರೂ ಕೂಡ ಎಷ್ಟು ಕೊಳಕು ಮನಸ್ಥಿತಿಯವರಾಗಿದ್ದಾರೆ ಎಂದು ವಿವರಿಸಿದ್ದಾಳೆ.

    ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಲಗುಬಗೆಯಿಂದ ಓಡಾಡುತ್ತಾ, ಕೆಸರು ಬಿದ್ದು ಗದ್ದೆಯಂತಾಗಿರುವ ರಸ್ತೆಗಳ ಪರಿಸ್ಥಿತಿ ಕುರಿತು ವಿವರಿಸಿದ್ದಾಳೆ. 2.08 ನಿಮಿಷದ ಈ ವೀಡಿಯೋಗೆ 3 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. 705 ರೀ ಟ್ವೀಟ್ ಆಗಿದೆ. ದನ್ನೂ ಓದಿ: ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ

    ತಮ್ಮ ಊರಿನ ರಸ್ತೆಯ ದುಸ್ಥಿತಿಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಡುತ್ತಿದ್ದಾರೆ. ದನ್ನೂ ಓದಿ:  ವೇಟ್ ಲಾಸ್‍ಗಾಗಿ 15 ದಿನ ಉಪವಾಸ ಮಾಡಿದ ಅಮಿರ್ ಖಾನ್ ಪುತ್ರಿ