Tag: kashinath

  • ಕಾಶಿನಾಥ್ ವಿಧಿವಶ- ನಟ ಉಪೇಂದ್ರ, ಸುದೀಪ್, ಶಿವರಾಜ್‍ಕುಮಾರ್ ಸೇರಿದಂತೆ ಕಲಾವಿದರಿಂದ ಅಂತಿಮ ದರ್ಶನ

    ಕಾಶಿನಾಥ್ ವಿಧಿವಶ- ನಟ ಉಪೇಂದ್ರ, ಸುದೀಪ್, ಶಿವರಾಜ್‍ಕುಮಾರ್ ಸೇರಿದಂತೆ ಕಲಾವಿದರಿಂದ ಅಂತಿಮ ದರ್ಶನ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್‍ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ.

    2 ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=d2LtElBseS0

    https://www.youtube.com/watch?v=fVFZCZZ1c8Y

    https://www.youtube.com/watch?v=h5Uo6paE5Vo

     

     

     

     

     

     

  • ಕಾಶಿನಾಥ್ ನಿಧನ – ‘ದಿ ವಿಲನ್’ ಶೂಟಿಂಗ್ ಸ್ಥಗಿತ

    ಕಾಶಿನಾಥ್ ನಿಧನ – ‘ದಿ ವಿಲನ್’ ಶೂಟಿಂಗ್ ಸ್ಥಗಿತ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

    ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ. ಕಾಶಿನಾಥ್ ಸಾವಿನ ಸುದ್ದಿ ಕೇಳಿ ಸಿನಿರಂಗ ಹಾಗೂ ರಾಜಕೀಯ ರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ‘ದಿ-ವಿಲನ್’ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

    ಕಾಶಿನಾಥ್ ರವರಿಗೆ ದಿ-ವಿಲನ್ ಚಿತ್ರತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದೇವೆ. ನೀವು ನಮ್ಮಿಂದ ಯಾವತ್ತೂ ದೂರವಾಗೋದಿಲ್ಲ ಎಂದು ದಿ- ವಿಲನ್ ಚಿತ್ರತಂಡ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ.

    ಕಾಶಿನಾಥ್ ವಿಧಿವಶರಾಗಿರೋ ಹಿನ್ನೆಲೆಯಲ್ಲಿ ನಟ ಉಪೇಂದ್ರ, ಶಿವರಾಜ್‍ಕುಮಾರ್, ಸುದೀಪ್, ತರುಣ್ ಸುಧೀರ್, ವಿ. ಮನೋಹರ್, ಬಿಗ್‍ಬಾಸ್ ಪ್ರಥಮ್, ಸೇರಿದಂತೆ ಹಲವಾರು ಚಿತ್ರರಂಗದ ಕಲಾವಿದರು ಅಂತಿಮ ದರ್ಶನ ಪಡೆದಿದ್ದಾರೆ. ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

  • 2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    2017 ರಿಂದ ಕಾಶಿನಾಥ್ ಕ್ಯಾನ್ಸರ್‍ ನಿಂದ ಬಳಲುತ್ತಿದ್ರು, ಹೃದಯಾಘಾತದಿಂದ ಸಾವು- ಡಾ. ರವಿ ತಿಪ್ಪೇಸ್ವಾಮಿ

    ಬೆಂಗಳೂರು: 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಚಿಕಿತ್ಸೆ ಮುಗಿದಿತ್ತು. ಆದ್ರೆ ಇಂದು ಮುಂಜಾನೆ ಹೃದಯಾಘಾತದಿಂದ ಕಾಶಿನಾಥ್ ಕೊನೆಯುಸಿರೆಳೆದಿದ್ದಾರೆ ಎಂದು ಶಂಕರ್ ಆಸ್ಪತ್ರೆಯ ವೈದ್ಯರಾದ ಡಾ. ರವಿ ತಿಪ್ಪೇಸ್ವಾಮಿ ಹೇಳಿದ್ದಾರೆ.

    ಕಾಶಿನಾಥ್ ನಿಧನದ ಬಳಿಕ ಮಾತನಾಡಿದ ಅವರು, 2017 ರಿಂದಲೇ ಕಾಶಿನಾಥ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದರು. ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ರು. ಹಾರ್ಟ್ ಸ್ಕಿಲ್ಸ್ ಲಿಂಕ್ ಫೋರ್ಮಾ ಅನ್ನೋ ಕ್ಯಾನ್ಸರ್ ಗೆ ಸಂಬಂಧಿಸಿದಂತ ಕಾಯಿಲೆಯಿಂದ ಬಳಲುತ್ತಿದ್ರು. ಒಂದು ತಿಂಗಳ ಹಿಂದೆ ಚಿಕಿತ್ಸೆ ಮುಗಿದಿತ್ತು. ಚಿಕಿತ್ಸೆಗೆ ಚನ್ನಾಗಿಯೇ ಸ್ಪಂದಿಸಿದ್ರು. ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದ್ರು.

     

     

    2 ದಿನಗಳ ಹಿಂದೆ ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ದಾಖಲಾಗಿದ್ದ ಕಾಶಿನಾಥ್ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಕಾಶಿನಾಥ್ ಅವರ ಮಗಳು ದುಬೈನಿಂದ ಬಂದ ನಂತರ ಅಂತಿಮ ವಿಧಿವಿಧಾನ ನಡೆಯಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಚಾಮರಾಜಪೇಟೆಯ ಟಿಆರ್ ಮಿಲ್‍ನಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

    https://www.youtube.com/watch?v=Z-vlkIrlNXw

    https://www.youtube.com/watch?v=Xs66MPO1im8

    https://www.youtube.com/watch?v=4RonOWCUWBo

     

  • ನಗುತ್ತಾ, ನಗಿಸುತ್ತಾ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಾ ಬಂದ ಕಾಶಿನಾಥ್ ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು- ಸಿಎಂ ಸಂತಾಪ

    ನಗುತ್ತಾ, ನಗಿಸುತ್ತಾ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಾ ಬಂದ ಕಾಶಿನಾಥ್ ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು- ಸಿಎಂ ಸಂತಾಪ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

    ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅವರ ಅಗಲಿಕೆಯ ಸುದ್ದಿ ಅತೀವ ದುಃಖ ತಂದಿದೆ. ಹಲವು ವರ್ಷಗಳ ಕಾಲ ನಗುತ್ತಾ, ನಗಿಸುತ್ತಾ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಾ ಬಂದ ಕಾಶಿನಾಥ್ ಇನ್ನಷ್ಟು ಕಾಲ ನಮ್ಮ ನಡುವೆ ಇರಬೇಕಿತ್ತು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

    https://youtu.be/C7kH6JcPNdo

     

    ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ದುಬೈನಿಂದ ಕಾಶಿನಾಥ್ ಅವರ ಮಗಳು ಹೊರಟಿದ್ದಾರೆ, ಸಂಜೆ 4ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬಂದ ನಂತರ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕಾಶಿನಾಥ್ ಸಹೋದರಿ ಗಾಯಿತ್ರಿ ತಿಳಿಸಿದ್ದಾರೆ.

    https://www.youtube.com/watch?v=JY1P-IPdVQE

  • ‘ಅನುಭವ’ ರಿ ರಿಲೀಸ್ ಮಾಡಿದ ಕಥೆಯನ್ನು ಹಾಟ್ ಸೀಟ್ ನಲ್ಲಿ ವಿವರಿಸಿದ್ದ ಕಾಶಿನಾಥ್

    ‘ಅನುಭವ’ ರಿ ರಿಲೀಸ್ ಮಾಡಿದ ಕಥೆಯನ್ನು ಹಾಟ್ ಸೀಟ್ ನಲ್ಲಿ ವಿವರಿಸಿದ್ದ ಕಾಶಿನಾಥ್

    ಬೆಂಗಳೂರು: ಚಂದನವನದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇಂದು ವಿಧಿವಶರಾಗಿದ್ದಾರೆ. ಈ ಹಿಂದೆ ನಟ ಕಾಶಿನಾಥ್ ಪಬ್ಲಿಕ್ ಟಿವಿ ‘ಹಾಟ್ ಸೀಟ್’ ಸಂದರ್ಶನದಲ್ಲಿ ಭಾಗಿಯಾಗಿದ್ದು, ಹೆಚ್.ಆರ್.ರಂಗನಾಥ್ ನೇರ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದರು.

    ನಿಮ್ಮ ಆಸೆ ಏನಾಗಿತ್ತು?
    ಉತ್ತರ: ನಾನು ಚಿಕ್ಕವನಿದ್ದಾಗ ವಿಜ್ಞಾನಿ ಆಗಬೇಕೆಂದು ಆಸೆಯಿತ್ತು. ನಮ್ಮ ಚಿಕ್ಕಪ್ಪರನ್ನು ನೋಡಿ ಯಾವಾಗಲೂ ಹೊಸತನ್ನು ಕಂಡುಹಿಡಿಯಬೇಕು ಎಂಬುದು ಮನದಲ್ಲಿತ್ತು. ನನ್ನ ಹೊಸತನವನ್ನು ಸಿನಿಮಾದಲ್ಲಿ ಕಂಡುಹಿಡಿದೆ.

    ಅನುಭವ ಸಿನಿಮಾ ರಿಲೀಸ್ ಆಗಿದ್ದು ಹೇಗೆ?
    ಸತ್ಯ ಘಟನೆ ಆಧಾರಿತ ಸಿನಿಮಾ ಮಾಡಲಾಯಿತು. ಈ ಹಿಂದೆ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳ ಮದುವೆಯನ್ನು ಮಾಡಲಾಗುತ್ತಿತ್ತು. ಸಿನಿಮಾ ರಿಲೀಸ್ ಮಾಡಬೇಕಾದ್ರೆ ಸೆನ್ಸಾರ್ ತೊಂದರೆ ಆಗಿತ್ತು. ಆ ವೇಳೆ ನಾನು ಮದ್ರಾಸ್ ನಿಂದ ಮರಳಿ ಬಂದು ಇಲ್ಲಿ ಕೆಲವು ಹಿರಿಯನರನ್ನು ಭೇಟಿಯಾದೆ. ಆವತ್ತು 20 ವರ್ಷದ ಮುಂದೆ ಮಾಡಬೇಕಿದ್ದ ಸಿನಿಮಾವನ್ನು ಇವತ್ತು ಯಾಕೆ ಮಾಡಿದ್ದೀಯಾ ಅಂತಾ ಪ್ರಶ್ನೆ ಮಾಡಿದ್ದರು.

    ಅನುಭವ ರೀ ರಿಲೀಸ್ ಆಗಿದ್ದು ಯಾಕೆ?
    ಅನುಭವ ಸಿನಿಮಾ ರಿಲೀಸ್ ಮಾಡಿದ್ದಾಗ ಇದು 20 ವರ್ಷ ಮುಂದೆ ಮಾಡಬೇಕಿತ್ತು ಅಂತಾ ಕೆಲವರು ಹೇಳಿದ್ದರು. ಹಾಗಾಗಿ ಸಿನಿಮಾ ಮತ್ತೊಮ್ಮೆ ರಿಲೀಸ್ ಮಾಡಲಾಯಿತು. ಅನುಭವ ಸಿನಿಮಾ ಸಾರ್ವಕಾಲಿಕ ಸತ್ಯದ ಕಥೆಯನ್ನು ಹೊಂದಿದೆ. ಅನುಭವ ಸಿನಿಮಾವನ್ನು ಇಂದಿನ ಪೀಳಿಗೆಯ ಜನರು ನೋಡಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ತಿಳಿಯಲು ಸಿನಿಮಾ ಮತ್ತೊಮ್ಮೆ ಬಿಡುಗಡೆ ಮಾಡಲಾಯಿತು.

    ಡಿಫರೆಂಟ್ ಸಿನಿಮಾದ ಐಡಿಯಾ ಬಂದಿದ್ದು ಹೇಗೆ?
    ಫಸ್ಟ್ ‘ಅಪರೂಪದ ಅತಿಥಿಗಳು’ ಎಂಬ ಕಾಮಿಡಿ ಸಿನಿಮಾ ಮಾಡಿದೆ. ನಂತರ ‘ಅಪರಿಚಿತ’ ಎಂಬ ಹಾರರ್ ಸಿನಿಮಾ. ಎರಡು ವಿಭಿನ್ನ ಸಿನಿಮಾ ಮಾಡಿದ ನಂತರ ಮುಂದೆ ಏನು ಎಂಬ ಪ್ರಶ್ನೆ ಬಂದಾಗ ಒಮ್ಮೆ ಸತ್ಯಜಿತ್ ರೇ ಅವರ ‘ಬಾಲಿಕಾ ಮಧು’ ಸಿನಿಮಾ ನೋಡಿದಾಗ ಅನುಭವ ಚಿತ್ರದ ಐಡಿಯಾ ಬಂತು. ಅಲ್ಲಿ ಶರ್ಮಿಳಾ ಟ್ಯಾಗೋರ್ ಚಿಕ್ಕ ಬಾಲಕಿಯಾಗಿ ನಟಿಸಿದ್ದರು. ಸಿನಿಮಾ ನೋಡುವ ಮುಂಚೆ ಒಂದು ದಿನ ನಮ್ಮ ತಾಯಿ, ದೂರದ ಸಂಬಂಧಿಕರ ಮನೆಯಲ್ಲಿ ಚಿಕ್ಕ ಹುಡುಗಿ ಜೊತೆ ನಡೆದಿರುವ ಘಟನೆ ಬಗ್ಗೆ ಹೇಳಿದ್ದರು. ಆ ಸತ್ಯ ಕಥೆಯನ್ನು ಆಧಾರವಾಗಿಟ್ಟುಕೊಂಡು ಅನುಭವ ಸಿನಿಮಾ ಮಾಡಲಾಗಿತ್ತು.

    ಇಂದಿನ ಸಿನಿಮಾ ಹೇಗಿದೆ?
    ಇಂದು ಸಿನಿಮಾದ ಕಥೆಯನ್ನು ಹೇಳುವ ಶೈಲಿ ಬದಲಾಗಿದೆ. ಅನುಭವ ಚಿತ್ರದ ಕಥೆ ಇಂದಿಗೂ ಚರ್ಚೆಗೆ ಒಳಪಡುತ್ತದೆ. ಇಂದು ಎಕ್ಸ್ ಪೋಸ್ ಅಂತಾ ಹೇಳುವ ಯಾವ ಸೀನ್‍ಗಳು ಅನುಭವ ಸಿನಿಮಾ ಹೊಂದಿಲ್ಲ. ಅಂದು ಸಿನಿಮಾ ನೋಡಿದ ಬಹಳಷ್ಟು ಜನ ತಮ್ಮ ಸುತ್ತಮುತ್ತಲಿನ ಘಟನೆಗಳೊಂದಿಗೆ ಹೋಲಿಕೆ ಮಾಡಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆ ಆನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ನಿಧನ ಹೊಂದಿದ್ದಾರೆ. ಬಸವನಗುಡಿಯ ಎನ್‍ಆರ್ ಕಾಲೋನಿಯ ಎಪಿಎಸ್ ಕಾಲೇಜ್ ಗ್ರೌಂಡ್‍ನಲ್ಲಿ ಕಾಶಿನಾಥ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಾಶಿನಾಥ್ ಅವರ ಮಗಳು ದುಬೈನಿಂದ ಇಂದು ಸಂಜೆ ನಾಲ್ಕು ಗಂಟೆಗೆ ಬೆಂಗಳೂರಿಗೆ ಬಂದ ನಂತರ ಅಂತಿಮ ವಿಧಿವಿಧಾನಗಳು ನಡೆಯಲಿವೆ.

    https://www.youtube.com/watch?v=LxyUcIpnDwg

  • ಹೀರೋ ಅಂದ್ರೆ ಹೀಗೇ ಇರ್ಬೇಕು, ಹೈಟ್-ಫೇರ್ ಇರಬೇಕು ಅನ್ನೋದೆಲ್ಲ ಸುಳ್ಳೆಂದು ಪ್ರೂವ್ ಮಾಡಿದ್ದವ್ರು ಕಾಶಿನಾಥ್: ರಮೇಶ್ ಅರವಿಂದ್

    ಹೀರೋ ಅಂದ್ರೆ ಹೀಗೇ ಇರ್ಬೇಕು, ಹೈಟ್-ಫೇರ್ ಇರಬೇಕು ಅನ್ನೋದೆಲ್ಲ ಸುಳ್ಳೆಂದು ಪ್ರೂವ್ ಮಾಡಿದ್ದವ್ರು ಕಾಶಿನಾಥ್: ರಮೇಶ್ ಅರವಿಂದ್

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ಹಿರಿಯ ನಟ ಬ್ಯಾಂಕ್ ಜನಾರ್ದನ್ ಮತ್ತು ನಟ, ನಿರ್ದೇಶಕ ರಮೇಶ್ ಅರವಿಂದ್ ಸಂತಾಪ ಸೂಚಿಸಿದ್ದಾರೆ.

    ಈ ಬಗ್ಗೆ ಪಬ್ಲಿಕ ಟಿವಿ ಜೊತೆ ಮಾತನಾಡಿದ ನಟ ನಿರ್ದೇಶಕ ರಮೇಶ್ ಅರವಿಂದ್, ಅವರು ಮಾಡಿದ ಸಿನಿಮಾ ಅವರನ್ನ ಬಾಲಿವುಡ್‍ಗೆ ಕರೆದುಕೊಂಡು ಹೋಗಿವೆ. ಬಜೆಟ್‍ನಲ್ಲಿ ಕೆಲಸ ಮಾಡುತ್ತಾರೆ. ಹಲವಾರು ನಟರನ್ನು ಪರಿಚಯಿಸಿದ್ದಾರೆ. ಯಂಗ್ ಗೆ ಸ್ಟರ್ ಅವಕಾಶ ಕೊಡುತ್ತಿದ್ದರು. ನನ್ನ ಶೋಗೆ ಬಂದಾಗ “ಎಷ್ಟು ದಿನ ಅಂತಾ ಬೇರೆ ಅವರ ಕಾಲು ಎಳೆಯುತ್ತೀರಾ? ಅಂದ್ರೆ ನೀವು ಅವರ ಕೆಳಗೆ ಇದ್ದೀರಾ ಎಂದು ಅರ್ಥ ಎಂದು ಹೇಳಿದ್ದರು. ಬಾಲಿವುಡ್‍ಗೆ ಹೋಗಿ ಬಂದ ಮೇಲೆ ಜೀವನ ಎಂದರೆ ಏನು ಎಂದು ಗೊತ್ತಾಯಿತು ಎಂದಿದ್ದರು. ಅದನ್ನು ನಾನು ಮರೆಯಲು ಸಾಧ್ಯವಿಲ್ಲ. ಇದು ಇಂಡಸ್ಟ್ರಿಗೆ ದೊಡ್ಡ ನಷ್ಟ. ಅವರಂತಹ ಥಿಂಕರ್ ಇರಬೇಕು ಅಂದ್ರು.

    ಹೀರೋ ಅಂದರೆ ಹೀಗೆ ಇರಬೇಕು, ಇಷ್ಟು ಹೈಟ್ ಇರಬೇಕು, ಇಷ್ಟು ಬೆಳ್ಳಗಿರಬೇಕು, ಈ ಥರ ನಗಬೇಕು ಅನ್ನೋದಲ್ಲಾ ಸುಳ್ಳು ಎಂದು ಸಾಬೀತು ಮಾಡಿದ ಕೆಲವೇ ಕೆಲವು ನಟರಲ್ಲಿ ಕಾಶಿನಾಥ್ ಒಬ್ಬರು. ಅವರ ವೀಕ್‍ನೆಸ್ ಗಳನ್ನೇ ಸ್ಟ್ರೆಂತ್ ಮಾಡಿಕೊಳ್ಳುವ ಶಕ್ತಿ ಅವರಲ್ಲಿತ್ತು. ಅವರ ಯೋಜನೆಗಳ ಮೂಲಕವೇ ಅವರು ಇಷ್ಟು ಸಾಧನೆ ಮಾಡಿದ್ದಾರೆ. ಸೆಕ್ಸ್ ಕೂಡ ಎಂಟರ್‌ಟೈನ್‌ಮೆಂಟ್‌ ರೀತಿಯಲ್ಲಿ ತೋರಿಸಿಕೊಟ್ಟವರು. ಇಂದು ಅವರು ಇಲ್ಲ ಅಂದರೆ ತುಂಬಾ ದುಃಖ ಆಗುತ್ತದೆ ಎಂದು ತಿಳಿಸಿದರು.

    ಹಿರಿಯ ನಟ ಬ್ಯಾಂಕ್ ಜನಾರ್ದನ್ ಮಾತನಾಡಿ, ತುಂಬಾ ದುಃಖ ಆಗುತ್ತಿದೆ. ಅವರು ಎಂತೆಂಥ ನಟರನ್ನು ಸಿನಿಮಾಗೆ ಪರಿಚಯಿಸಿದ್ದಾರೆ. ಅಪ್ರತಿಮ ಕಲಾವಿದ, ಉತ್ತಮ ನಿರ್ದೇಶಕ. ನನಗೆ ತುಂಬಾ ಆತ್ಮೀಯ. ಒಬ್ಬರಿಗೆ ಉಪಕಾರ ಮಾಡಿದರೆ ಅವರು ನಾನು ಮಾಡಿದ್ದೀನಿ ಎಂದು ಯಾರಿಗೂ ಹೇಳುತ್ತಿರಲ್ಲಿ. ಕಾಲಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಿದ್ದರು. ಅವರಿಂದ ನಾನು, ಉಮಾಶ್ರೀ ತುಂಬಾ ಹೆಸರು ಮಾಡಿದ್ದೇವೆ. ನಾನು ಸಹ ಅವರ ಗರಡಿಯಲ್ಲಿ ಮುಂದೆ ಬಂದಿದ್ದೇನೆ. ಈಗ ಅವರು ಇಲ್ಲ ಎಂದು ಕೇಳಿದರೆ ಏನು ಹೇಳಬೇಕು ಗೊತ್ತಾಗ್ತಿಲ್ಲ. ಒಂದು ರೀತಿ ಅವರು ನನಗೆ ಗುರುಗಳು ಎಂದು ಹೇಳಿದ್ರು.

    https://www.youtube.com/watch?v=JY1P-IPdVQE

  • ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ

    ನಟ, ನಿರ್ದೇಶಕ ಕಾಶಿನಾಥ್ ನಡೆದುಬಂದ ಹಾದಿ

    ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ, ನಿರ್ದೇಶಕರಲ್ಲಿ ಕಾಶಿನಾಥ್ ಕೂಡ ಒಬ್ಬರು. ಡಬಲ್ ಮಿನಿಂಗ್ ಡೈಲಾಗ್‍ನಿಂದಲೇ ಫೇಮಸ್ ಆದ ಇವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಯುವಪ್ರತಿಭೆಗಳಗೆ ಅವಕಾಶ ನೀಡಿದ್ದಾರೆ.

    ಕಾಶಿನಾಥ್ ಅವರು ವಿಜಯಾ ಕಾಲೇಜಿನಲ್ಲಿ ತಮ್ಮ ವ್ಯಾಸಾಂಗವನ್ನು ಮುಗಿಸಿದ್ರು. ನಂತರ ಅಸಿಮಾ ಎಂಬ ಫಿಲ್ಮಂ ಸೆಂಟರ್ ಗೆ ಸೇರಿಕೊಂಡರು. 1975ರಲ್ಲಿ ಕಾಶಿನಾಥ್ ಅವರು ಅಪರೂಪದ ಅಥಿತಿಗಳು ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್‍ವುಡ್ ಗೆ ಎಂಟ್ರಿ ಕೊಟ್ಟರು. ನಂತರ 1978ರಲ್ಲಿ ಸಸ್ಪೆನ್ಸ್ ಥ್ರೀಲ್ಲರ್ ಆದ ಅಪರಿಚಿತ ಚಿತ್ರವನ್ನು ನಿರ್ದೇಶನ ಮಾಡಿದ್ದು, ಆ ಚಿತ್ರ ಯಶಸ್ವಿಯಾಯ್ತು. ಆ ಚಿತ್ರವನ್ನು ಬೀ-ಶೇಕ್ ಎಂದು ಹೆಸರಿಟ್ಟು ಹಿಂದಿಯಲ್ಲಿ ಕೂಡ ನಿರ್ದೇಶನ ಮಾಡಿದ್ದರು.

    ಅಪರಿಚಿತ ಚಿತ್ರದ ನಂತರ ಕಾಶಿನಾಥ್ ಅವರು 16 ಸಿನಿಮಾಗಳನ್ನ ಒಟ್ಟಿಗೆ ನಿರ್ದೇಶಿಸಿದ್ದು, ಆ ಚಿತ್ರಗಳೆಲ್ಲಾ ಸಾಕಷ್ಟು ಹಿಟ್ ಆಗಿದ್ದವು. 1984ರಲ್ಲಿ ಮೊದಲ ಬಾರಿಗೆ ಕಾಶಿನಾಥ್ ಅವರು ಅನುಭವ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದರು. ಅವರಿಗೆ ಅಭಿನಯ ಹಾಗೂ ಉಮಾಶ್ರೀ ನಾಯಕಿಯರಾಗಿ ಸಾಥ್ ನೀಡಿದ್ದರು. ಅನುಭವ ಚಿತ್ರ ಕನ್ನಡದಲ್ಲಿ ಯಶಸ್ವಿ ಆಗುತ್ತಿದ್ದಂತೆ ಆ ಚಿತ್ರವನ್ನು ಹಿಂದಿಯಲ್ಲಿ ಅನುಭವ್ ಎಂಬ ಹೆಸರಲ್ಲಿ ನಿರ್ದೇಶನ ಮಾಡಿದ್ದರು. 2 ಹಿಂದಿ ಸಿನಿಮಾ ನಿರ್ದೇಶನ ಮಾಡಿದ್ದಾರೆ.

    1988ರಲ್ಲಿ ಅವಳೇ ನನ್ನ ಹೆಂಡ್ತಿ ಚಿತ್ರದಲ್ಲಿ ಟಾಪ್ ನಟಿ ಭವ್ಯ ಹಾಗೂ ತಾರಾ ಜೊತೆ ನಟಿಸಿದ್ದರು. ನಂತರ 1988ರಲ್ಲಿ ಅವನೇ ನನ್ನ ಗಂಡ, ಮನ್ಮಥ ರಾಜ ಹಾಗೂ 1990ರಲ್ಲಿ ಚಪಲ ಚನ್ನಿಗರಾಯ ಎಂಬ ಹಾಸ್ಯ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. 1993ಯಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಅವರು ನಿರ್ದೇಶನ ಮಾಡಿದ್ದ ಶ್…! ಹಾಗೂ ಹಲೋ ಯಮ ಚಿತ್ರದಲ್ಲಿ ಕಾಶಿನಾಥ್ ನಟಿಸಿದ್ದರು.

    ಕಾಶಿನಾಥ್ ಅವರು ತಮ್ಮ ಸಿನಿಮಾ ಜೀವನದಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ, ವಿ. ಮನೋಹರ್, ಸುನೀಲ್ ಕುಮಾರ್ ದೇಸಾಯಿರಂತಹ ಪ್ರತಿಭೆಗಳಿಗೆ ಸ್ಯಾಂಡಲ್‍ವುಡ್ ನಲ್ಲಿ ಅವಕಾಶ ನೀಡಿದ್ದಾರೆ. ಫೆಬ್ರವರಿ 3, 2017ರಲ್ಲಿ ತೆರೆಕಂಡ ಚೌಕ ಚಿತ್ರದಲ್ಲಿ ಕಾಶಿನಾಥ್ ಅವರು ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಇದು ಅವರ ಕೊನೆಯ ಚಿತ್ರ.

  • 2 ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ಮಾಡಿದ್ರು, ಗುಣಮುಖರಾಗುತ್ತಿದ್ರು: ಕಾಶಿನಾಥ್ ಸಹೋದರಿ ಗಾಯತ್ರಿ

    2 ದಿನಗಳ ಹಿಂದೆ ಸಿನಿಮಾ ಡಬ್ಬಿಂಗ್ ಮಾಡಿದ್ರು, ಗುಣಮುಖರಾಗುತ್ತಿದ್ರು: ಕಾಶಿನಾಥ್ ಸಹೋದರಿ ಗಾಯತ್ರಿ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದು, 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

    ಎರಡು ದಿನಗಳ ಹಿಂದೆ ಸಿನಿಮಾದ ಡಬ್ಬಿಂಗ್ ಸಹ ಮಾಡಿದ್ದರು. ಉಸಿರಾಟದ ತೊಂದರೆಯಾಗಿ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು, ಗುಣಮುಖರಾಗುತ್ತಿದ್ದರು. ಆದರೆ ಇಂದು ಬೆಳಗ್ಗೆ 7:15ಕ್ಕೆ ತೀವ್ರ ಉಸಿರಾಟದ ತೊಂದರೆಯಾಗಿ ಅಸುನೀಗಿದ್ದಾರೆ. ದುಬೈನಿಂದ ಕಾಶಿನಾಥ್ ಅವರ ಮಗಳು ಹೊರಟಿದ್ದಾರೆ, ಸಂಜೆ 4ಕ್ಕೆ ಬೆಂಗಳೂರಿಗೆ ಬರುತ್ತಾರೆ. ಬಂದ ನಂತರ ಬೆಂಗಳೂರಿನಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕಾಶಿನಾಥ್ ಸಹೋದರಿ ಗಾಯತ್ರಿ ತಿಳಿಸಿದ್ದಾರೆ.

    ಎರಡು ವರ್ಷಗಳ ಹಿಂದೆ ಕಾಶಿನಾಥ್ ತಾಯಿ ಸಾವನ್ನಪ್ಪಿದ್ದರು. ತಾಯಿ ಸಾವು ಕಾಶಿನಾಥ್ ಅವರನ್ನ ಬಹುವಾಗಿ ಕಾಡಿತ್ತು. ತಾಯಿ ಜೊತೆ ತುಂಬಾ ಅಟಾಚ್‍ಮೆಂಟ್ ಇತ್ತು. ಅವರ ಸಾವಿನಿಂದ ಇವರು ಇನ್ನಷ್ಟು ಕುಗ್ಗಿದ್ದರು. ಆರೋಗ್ಯದ ಬಗ್ಗೆ ಯಾರಿಗೂ ಹೇಳಿಕೊಳ್ಳುತ್ತಿರಲಿಲ್ಲ ಎಂದು ಗಾಯತ್ರಿ ಹೇಳಿದ್ರು.

    ಇದನ್ನೂ ಓದಿ: ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ

    ಇದನ್ನೂ ಓದಿ: ಬಹುತೇಕ ಸ್ಟಾರ್‍ ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ, ಸಂಭಾವಿತ ಕಾಶಿನಾಥ್- ನಟ ಜಗ್ಗೇಶ್ ಸಂತಾಪ

     

  • ಬಹುತೇಕ ಸ್ಟಾರ್‍ ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ, ಸಂಭಾವಿತ ಕಾಶಿನಾಥ್- ನಟ ಜಗ್ಗೇಶ್ ಸಂತಾಪ

    ಬಹುತೇಕ ಸ್ಟಾರ್‍ ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ, ಸಂಭಾವಿತ ಕಾಶಿನಾಥ್- ನಟ ಜಗ್ಗೇಶ್ ಸಂತಾಪ

    ಬೆಂಗಳೂರು: ಹಿರಿಯ ನಟ ನಿರ್ದೇಶಕ ಕಾಶಿನಾಥ್ ಅಗಲಿಕೆಗೆ ನಟ ಜಗ್ಗೇಶ್ ಸಂತಾಪ ಸೂಚಿಸಿದ್ದಾರೆ.

    ಈ ಬೆಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, ಎಂಥ ದುರ್ದೈವ. ಅವರ ಅನುಭವ ಚಿತ್ರಕ್ಕೆ ನನಗೆ ಪಾತ್ರಕೊಡಿಸಲು ನನ್ನ ಗುರುಗಳು ಛಾಯಾಗ್ರಹಕ ಸುಂದರ್ ನಾಥ ಸುವರ್ಣ ರವರು ಕರೆದುಕೊಂಡು ಹೋಗಿದ್ದರು. ಅವಕಾಶ ಸಿಗಲಿಲ್ಲ. ಆದರೆ ಮುಂದೆ ಅವರ ಜೊತೆ “ಮನ್ಮಥ” ಚಿತ್ರದಲ್ಲಿ ನಟಿಸಿದೆ. ತುಂಬ ಸಾಧು ಸ್ವಭಾವದ ಮನುಷ್ಯ. ಯಾರಿಗೂ ನೋಯಿಸದ ಸ್ನೇಹಜೀವಿ. ಇಷ್ಟುಬೇಗ ಹೋದರ ಎಂದು ನೋವಾಯಿತು. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದಿದ್ದಾರೆ.

    ಅಂದಿನ ದಿನದಲ್ಲಿ ಸಣ್ಣ ಬಡ್ಜೆಟ್ ಚಿತ್ರ ನಿರ್ಮಾಣ, ನಿರ್ದೇಶನ ಮಾಡಿ 36ವಾರ ಸಿನಿಮ ಓಡಿ ಬಹುತೇಕ ಸ್ಟಾರ್‍ಗಳಿಗೆ ಸೈಡ್ ಹೊಡೆದು ಗಾಬರಿ ಹುಟ್ಟಿಸಿದ ಸಾಧಕ. ಅವರ ಸಂಭಾವನೆ ಆ ಕಾಲದಲ್ಲೇ 5ಲಕ್ಷ, ನನಗೆ 4,000. ಯಾವಾಗ ಅವರಷ್ಟು ಸಂಭಾವನೆ ನನಗೆ ಸಿಗುತ್ತೆ ಅಂತ 90ಹಾಕಿ ಯೋಚಿಸುತ್ತಿದ್ದೆ. ತಾನಾಯಿತು ತನ್ನ ಕಾರ್ಯವಾಯಿತು ಅಂತ ಬದುಕಿದ ಸಂಭಾವಿತ ಕಾಶಿನಾಥ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ

    ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.

    43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.

    11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.

  • ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ

    ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ- ಕಾಶಿನಾಥ್ ಅಗಲಿಕೆಯ ಸುದ್ದಿ ಕೇಳಿ ಬಿಕ್ಕಿ ಬಿಕ್ಕಿ ಅತ್ತ ನಟಿ ಅಭಿನಯ

    ಬೆಂಗಳೂರು: ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನಿಲ್ಲ ಎಂಬ ಸುದ್ದಿ ಕೇಳಿ ನಟಿ ಅಭಿನಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಭಿನಯ, ನನಗೆ ಅವರು ಗಾರ್ಡ್ ಫಾದರ್ ಆಗಿದ್ದರು. ನನಗೆ ಸಿನಿಮಾದಲ್ಲಿ ನಟಿಸಲು ಬರುತ್ತಿರಲಿಲ್ಲ. ಆಗ ಮಕ್ಕಳ ತರ ನನಗೆ ಹೇಳಿಕೊಡುತ್ತಿದ್ದರು ಅಂದ್ರು. ಈ ವೇಳೆ ನನಗೆ ಮಾತನಾಡೋಕೆ ಆಗುತ್ತಿಲ್ಲ ಎಂದು ಗದ್ಗದಿತರಾದ್ರು,

    ನನಗೆ ಈಗಲೂ ನಂಬುವುದಕ್ಕೆ ಆಗುತ್ತಿಲ್ಲ. ಈಗಲೂ ಈ ಸುದ್ದಿ ಸುಳ್ಳಾಗಲಿ ಎಂದು ಬಯಸುತ್ತೇನೆ. ನಾನು ಕೊನೆಯಾದಾಗಿ ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅವರನ್ನ ನೋಡಿದ್ದೆ. ಈಗ ಏನಾಯ್ತು ಗೊತ್ತಿಲ್ಲ. ನಾನು ಶೂಟಿಂಗ್‍ನಲ್ಲಿ ಇದ್ದೆ. ಮೆಸೇಜ್ ಬಂತು, ನಾನು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಏನೂ ಮಾತನಾಡಲೂ ಆಗುತ್ತಿಲ್ಲ ಎಂದು ಕಣ್ಣೀರಿಟ್ಟರು.

    ಕಾಶಿನಾಥ್ ಅಗಲಿಕೆಯ ಬಗ್ಗೆ ಮಾತನಾಡಿದ ನಟಿ ತಾರಾ, ಅವರಿಗೆ ಕ್ಯಾನ್ಸರ್ ಇರುವುದೇ ಗೊತ್ತಿರಲ್ಲಿಲ್ಲ. ತಕ್ಷಣ ಸುದ್ದಿ ಕೇಳಿ ಶಾಕ್ ಆಯಿತು. ನಾನು ಅವರನ್ನು ನೋಡಿ ಬಹಳ ವರ್ಷ ಆಯಿತು. ನಾನು ಬಹಳ ಸಿನಿಮಾದಲ್ಲಿ ಅವರ ಜೊತೆ ನಟಿಸಿದ್ದೇನೆ. ತುಂಬಾ ಬೇಸರವಾಗುತ್ತಿದೆ ಅಂದ್ರು.

    ಬೆಂಗಳೂರಿನ ಶ್ರೀಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಾಶಿನಾಥ್ ನಿಧನರಾಗಿದ್ದಾರೆ. 2 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ನಸುಕಿನ ಜಾವ ಸುಮಾರು 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಪತ್ನಿ, ಇಬ್ಬರು ಗಂಡು ಮಕ್ಕಳನ್ನ ಕಾಶಿನಾಥ್ ಅಗಲಿದ್ದಾರೆ.

    43 ಸಿನಿಮಾಗಳಲ್ಲಿ ಕಾಶಿನಾಥ್ ನಟಿಸಿದ್ದರು. ಅಮರ ಮಧುರು ಪ್ರೇಮ, ಅನುಭವ, ಅನಾಮಿಕ, ಅಜಗಜಾಂತರ, ಶ್, ಅನಂತನ ಅವಾಂತರ, ಅವನೇ ನನ್ನ ಗಂಡ ಮುಂತಾದ ಸಿನಿಮಾಗಳಲ್ಲಿ ಕಾಶಿನಾಥ್ ನಟನೆ ಮಾಡಿದ್ದರು. ಉಪೇಂದ್ರರಂತಹ ಕಲಾವಿದರನ್ನ ಪರಿಚಯಿಸಿದ ಹೆಗ್ಗಳಿಕೆ ಕಾಶಿನಾಥ್ ಅವರದ್ದು.

    11 ಕನ್ನಡ, 1 ಹಿಂದಿ ಹಾಗೂ 1 ತೆಲುಗು ಚಿತ್ರ ನಿರ್ಮಾಣ ಮಾಡಿದ್ದರು. 80ರ ದಶಕದ ಸ್ಯಾಂಡಲ್‍ವುಡ್‍ನ ಜನಪ್ರಿಯ ನಟ ಹಾಗೂ ನಿರ್ದೇಶಕರಾಗಿದ್ದರು. ಇತ್ತೀಚಿನ ಚೌಕ ಸಿನಿಮಾ ಕಾಶಿನಾಥ್ ಅವರ ಕೊನೆಯ ಸಿನಿಮಾ.