Tag: Kashinath Nayak

  • ಜಾವೆಲಿನ್‍ನಲ್ಲಿ ಪಂಜಾಬ್, ಹರಿಯಾಣ ಹಿಂದಿಕ್ಕಿ ಕರ್ನಾಟಕಕ್ಕೆ ಚಿನ್ನ ತಂದು ಕೊಟ್ಟ ಕರಿಷ್ಮಾ

    ಜಾವೆಲಿನ್‍ನಲ್ಲಿ ಪಂಜಾಬ್, ಹರಿಯಾಣ ಹಿಂದಿಕ್ಕಿ ಕರ್ನಾಟಕಕ್ಕೆ ಚಿನ್ನ ತಂದು ಕೊಟ್ಟ ಕರಿಷ್ಮಾ

    ಉಡುಪಿ: ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ಚಾಂಪಿಯನ್ ಶಿಪ್ ನಲ್ಲಿ ಉಡುಪಿ ಜಿಲ್ಲೆಯ ಕರಿಷ್ಮಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ. ಪಂಜಾಬ್ ಹರಿಯಾಣವನ್ನು ಹಿಂದಿಕ್ಕಿ ಕರುನಾಡಿನ ಯುವತಿ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ.

    Karishma

    ಬ್ರಹ್ಮಾವರ ತಾಲೂಕಿನ ಬಾರ್ಕೂರು ನಿವಾಸಿಯಾಗಿರುವ ಕರಿಷ್ಮಾ ಸನಿಲ್, ಎಲ್‍ವಿಡಿ ಕಾಲೇಜು ರಾಯಚೂರಿನಲ್ಲಿ ಬಿಎಸ್‍ಸಿ ಅಂತಿಮ ವರ್ಷ ಪದವಿ ಕಲಿಯುತ್ತಿದ್ದಾರೆ. ಸುದರ್ಶನ್ ಅನಿಲ್ ಮತ್ತು ಇಂದಿರಾ ದಂಪತಿ ಪುತ್ರಿ ಕರಿಷ್ಮಾ ಸನಿಲ್, ಬ್ರಹ್ಮಾವರ ಬೋರ್ಡ್ ಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದಾರೆ. ದೆಹಲಿಯಲ್ಲಿ 23 ವಯೋಮಿತಿ ಒಳಗಿನ ಮೊದಲ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಅಂತರಾಷ್ಟ್ರೀಯ ಅಥ್ಲೆಟಿಕ್ಸ್‌ನಲ್ಲಿ ಕರೀಷ್ಮಾ ಪಾಲ್ಗೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರ ಟ್ರೈನರ್ ಕಾಶಿನಾಥ್ ನಾಯಕ್ ಕರಿಷ್ಮಾಗೆ ಆನ್ ಲೈನ್ ಟ್ರೈನಿಂಗ್ ಕೊಡುತ್ತಿದ್ದಾರೆ. ಇದನ್ನೂ ಓದಿ: ಎಂಎಲ್‍ಸಿ ಸಂದೇಶ್ ನಾಗರಾಜ್ ಜೆಡಿಎಸ್‍ಗೆ ಗುಡ್ ಬೈ- ಬಿಜೆಪಿ ಸೇರಲು ಒಲವು

    ಕರಿಷ್ಮಾ ಬಾರಾಳಿ ಹೈಸ್ಕೂಲ್ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದು, ದೆಹಲಿ ಚಾಂಪಿಯನ್ ಶಿಪ್ ನಲ್ಲಿ 46.52 ಮೀಟರ್ ದೂರಕ್ಕೆ ಈಟಿ ಎಸೆದು ಸಾಧನೆ ಮಾಡಿದ್ದಾರೆ. ಪಂಜಾಬ್ ಮತ್ತು ರಾಜಸ್ಥಾನದ ಅಥ್ಲೆಟ್ ಗಳನ್ನು ಹಿಂದಿಕ್ಕಿದ ಕರ್ನಾಟಕದ ಕರಿಷ್ಮಾ, ಮುಂದೆ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಉತ್ಸಾಹ ತೋರಿದ್ದಾರೆ. ದೇಶಕ್ಕೆ ಪದಕ ತಂದುಕೊಡುವ ನಿರೀಕ್ಷೆ ಹುಟ್ಟಿಸಿದ್ದಾರೆ. ಅಥ್ಲೆಟಿಕ್ಸ್‌ಗಾಗಿ ಸಂಪೂರ್ಣವಾಗಿ ಕರಿಷ್ಮಾ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ಬಿಡ್ ಗೆದ್ದ ಟಾಟಾ – ಮಾತೃ ಸಂಸ್ಥೆಗೆ ಮಾರಾಟ

    Karishma

    ದಿನಪೂರ್ತಿ ಮೈದಾನದಲ್ಲಿ ತರಬೇತಿ ಮಾಡುವ ಕರಿಷ್ಮಾ, ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸುವ ಎಲ್ಲ ನಿರೀಕ್ಷೆಗಳು ಇವೆ ಎಂದು ಶಿಕ್ಷಕ ರಾಜಾರಾಮ್ ಬಾರಾಳಿ ಹೇಳಿದ್ದಾರೆ. ಸರ್ಕಾರ- ಖಾಸಗಿ ಸಂಸ್ಥೆಗಳು ಆರ್ಥಿಕ ಸಹಾಯ ಮಾಡಿದರೆ, ಗ್ರಾಮೀಣ ಪ್ರತಿಭೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

  • ನೀರಜ್ ಚೋಪ್ರಾ ತರಬೇತುದಾರ ಕಾಶಿನಾಥ್ ನಾಯಕ್ ಗೆ ನಗದು ಬಹುಮಾನ: ವಿಶ್ವೇಶ್ವರ ಹೆಗಡೆ ಕಾಗೇರಿ

    ನೀರಜ್ ಚೋಪ್ರಾ ತರಬೇತುದಾರ ಕಾಶಿನಾಥ್ ನಾಯಕ್ ಗೆ ನಗದು ಬಹುಮಾನ: ವಿಶ್ವೇಶ್ವರ ಹೆಗಡೆ ಕಾಗೇರಿ

    ಬೆಂಗಳೂರು: ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ ತರಬೇತುದಾರ ಕರ್ನಾಟಕದ ಕಾಶಿನಾಥ್ ನಾಯಕ್ ಅವರಿಗೆ 10 ಲಕ್ಷ ರೂಪಾಯಿಗಳ ನಗದು ಬಹುಮಾನ ಘೋಷಿಸಿರುವ ಸರ್ಕಾರದ ನಿರ್ಧಾರಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ಸೂಚಿಸಿದ್ದಾರೆ.

    ಸ್ವರ್ಣ ಇತಿಹಾಸ ಬರೆದ ಕ್ರೀಡಾಪಟುವಿನ ತರಬೇತುದಾರರಿಗೆ ನಗದು ಬಹುಮಾನ ಘೋಷಿಸುವುದು ‘ಉದಾತ್ತ, ಪ್ರೋತ್ಸಾಹದಾಯಕ ಮತ್ತು ಪ್ರೇರಣಾತ್ಮಕವಾಗಿದೆ’ ಇದು ಸರ್ಕಾರದ ಕಡೆಯಿಂದ ಉತ್ತೇಜನವಾಗಿದೆ. ತರಬೇತುದಾರರ ಸೇವೆಗಳನ್ನು ಗುರುತಿಸುವ ಈ ಕ್ರಮವು ತರಬೇತುದಾರರುಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮತ್ತು ಅವರ ಸಂಪೂರ್ಣ ಸಾಮಥ್ರ್ಯವನ್ನು ಧಾರೆ ಎರೆಯಲು ಅವರನ್ನು ಪ್ರೇರೇಪಿಸುವಲ್ಲಿ ಬಹು ದೂರ ಸಾಗುತ್ತದೆ ಎಂದು ತಿಳಿಸಿದ್ದಾರೆ.

    ಕಾಶೀನಾಥ್, ತಮ್ಮ ತವರು ಶಿರಸಿಯವರು ಎಂಬುದನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಹೆಮ್ಮೆಯಿಂದ ಸ್ಮರಿಸಿದ್ದಾರೆ. ” ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಚೋಪ್ರಾಗೆ ನನ್ನ ಊರಿನವರು ತರಬೇತುದಾರರಾಗಿದ್ದಾರೆ ಎಂಬ ಹೆಮ್ಮೆ ನನಗಿದೆ. ನಾನು ಕೂಡ ಕರ್ನಾಟಕ ರಾಜ್ಯದ ಸಮಸ್ತ ಜನತೆಯ, ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಜನರ ಜೊತೆಗೆ ಅತ್ಯಂತ ಆನಂದ ಅನುಭವಿಸಿದ್ದೇನೆ ಎಂದು ಕಾಗೇರಿ ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪದಕ ವಿಜೇತರೆಲ್ಲರಿಗೂ ಗೌರವಿಸುವ ರಾಜ್ಯ ಸರ್ಕಾರದ ಔದಾರ್ಯವನ್ನು ಕಾಗೇರಿ ಶ್ಲಾಘಿಸಿದ್ದಾರೆ. ಇದನ್ನೂ ಓದಿ:‘ಲವ್ ಯೂ ರಚ್ಚು’ ಸಿನಿಮಾ ಶೂಟಿಂಗ್ ವೇಳೆ ದುರಂತ – ಹೈಟೆನ್ಷನ್ ವೈರ್ ತಗುಲಿ ಫೈಟರ್ ಸಾವು