Tag: Kashi Vishwanth Temple

  • ಕಾಶಿ ದೇವಸ್ಥಾನದಲ್ಲಿ ಅರ್ಚಕರ ಧಿರಿಸಿನಲ್ಲಿ ಪೊಲೀಸರು – ಅಖಿಲೇಶ್‌ ಕಿಡಿ

    ಕಾಶಿ ದೇವಸ್ಥಾನದಲ್ಲಿ ಅರ್ಚಕರ ಧಿರಿಸಿನಲ್ಲಿ ಪೊಲೀಸರು – ಅಖಿಲೇಶ್‌ ಕಿಡಿ

    ಲಕ್ನೋ: ಉತ್ತರ ಪ್ರದೇಶದಲ್ಲಿ (Uttar Pradesh) ಕಾಶಿ ವಿಶ್ವನಾಥ ದೇವಸ್ಥಾನದ (Kashi Vishwanth Temple) ಒಳಗಡೆ ಭಕ್ತರನ್ನು ನಿಯಂತ್ರಿಸಲು ಪೊಲೀಸರನ್ನು (Police) ಅರ್ಚಕರು ಧರಿಸುವ ಧೋತಿ, ಕುರ್ತಾ ಧಿರಿಸಿನಲ್ಲಿ ನಿಯೋಜಿಸಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ವಾರಣಾಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರ್‌ವಾಲ್, ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ವಿಶ್ವನಾಥನ ದರ್ಶನಕ್ಕೆ ಆಗಮಿಸುತ್ತಿದ್ದಾರೆ. ದೇವಾಲಯಕ್ಕೆ ಭೇಟಿ ನೀಡುವ ಸಮಯದಲ್ಲಿ ದೇವರನ್ನು ಚೆನ್ನಾಗಿ ವೀಕ್ಷಿಸಲು ಸಹಾಯ ಮಾಡಲು ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.  ಇದನ್ನೂ ಓದಿ: ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

     

    ಭಕ್ತರು ತಮ್ಮ ದೇವಾಲಯದ ಭೇಟಿಯ ಸಮಯದಲ್ಲಿ ತಮ್ಮನ್ನು ತಳ್ಳುವ ಪೊಲೀಸ್ ಅಧಿಕಾರಿಗಳ ಬಗ್ಗೆ ಆಗಾಗ ದೂರು ನೀಡುತ್ತಾರೆ. ಆದರೆ ಭಕ್ತರು ಅರ್ಚಕರ ಮಾತನ್ನು ಕೇಳುತ್ತಾರೆ. ಅರ್ಚಕರ ಬಗ್ಗೆ ಗೌರವ ಇರುವ ಕಾರಣ ಪೊಲೀಸರಿಗೆ ಅರ್ಚಕರ ಧಿರಿಸನ್ನು ಧರಿಸುವಂತೆ ಹೇಳಿದ್ದೇವೆ ಎಂದು ಇಲಾಖೆಯ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ದೀದಿ ಆಡಳಿತದ ಬಂಗಾಳ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ: ರಾಮೇಶ್ವರಂ ಕೆಫೆ ಬಾಂಬರ್‌ ಅರೆಸ್ಟ್‌ ಬಗ್ಗೆ ಅಮಿತ್‌ ಮಾಳವಿಯ ಮಾತು

    ಪೋಲಿಸರನ್ನು ಅರ್ಚಕರಂತೆ ನಿಯೋಜಿಸಿದ್ದಕ್ಕೆ ಎಸ್‌ಪಿ ಅಧ್ಯಕ್ಷ, ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಖಂಡಿಸಿದ್ದಾರೆ. ಅರ್ಚಕರಂತೆ ಪೊಲೀಸರು ಧಿರಿಸು ಧರಿಸುವಂತೆ ನಿಯಮ ಯಾವ ಪೊಲೀಸ್‌ ಕೈಪಿಡಿಯಲ್ಲಿದೆ? ಪುರೋಹಿತರ ವೇಷ ಧರಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕು. ನಾಳೆ ಯಾವುದೇ ಪುಂಡರು ಇದರ ಲಾಭ ಪಡೆದು ಅಮಾಯಕ ಸಾರ್ವಜನಿಕರನ್ನು ಲೂಟಿ ಮಾಡಿದರೆ ಉತ್ತರ ಪ್ರದೇಶ ಸರ್ಕಾರ ಮತ್ತು ಆಡಳಿತ ಏನು ಉತ್ತರಿಸುತ್ತದೆ? ಇದು ಖಂಡನೀಯ ಎಂದು ಕಿಡಿಕಾರಿದ್ದಾರೆ.