Tag: kashi vishwantaha

  • ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ

    ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು: ಮೋದಿ

    ಲಕ್ನೋ: ಗಂಗಾನದಿಗೆ ಸಂಪರ್ಕ ಕಲ್ಪಿಸುವ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ವಾರಣಾಸಿಯ ಕೇಂದ್ರ ಭಾಗದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.

    ಕಾಶಿ ವಿಶ್ವನಾಥ್ ಕಾರಿಡಾರ್‍ನ್ನು ಉದ್ಘಾಟಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಇದೊಂದು ಐತಿಹಾಸಿಕ ಕ್ಷಣವಾಗಿದೆ. ದೇಶದ ಇತಿಹಾಸದಲ್ಲೇ ದೊಡ್ಡ ದಿನವಾಗಿದೆ. ಈ ಕ್ಷಣಕ್ಕೆ ಸಾಕ್ಷಿಯಾಗಿದ್ದು ನಮ್ಮ ಪುಣ್ಯವಾಗಿದೆ. ಮುಕ್ಕಾಲು ಕೋಟಿ ದೇವರು ಕಾಶಿಯಲ್ಲಿ ಇದ್ದಾರೆ. ಕಾಲಭೈರವನ ದರ್ಶನ ಪಡೆದು ಬಂದಿದ್ದೇನೆ. ಕಾಶಿಯ ದರ್ಶನದಿಂದ ಸಕಲ ಸಂಕಷ್ಟ ದೂರವಾಗುತ್ತದೆ. ಈ ಕಾರ್ಯಕ್ರಮವು ನನಗೆ ಸಂತೋಷವನ್ನು ತಂದಿದೆ ಎಂದರು. ಇದನ್ನೂ ಓದಿ: ಮೋದಿ ಕನಸಿನ ಯೋಜನೆ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?

    ಕಣ್ಮರೆಯಾಗಿರುವ ಮಂದಿರಗಳನ್ನು ಮರುಸ್ಥಾಪನೆ ಮಾಡಿದ್ದೇವೆ. ಕಾಶಿ ನಮ್ಮ ಆದ್ಯಾತ್ಮಿಕತೆಯ ಪ್ರತೀಕವಾಗಿದೆ. ಪರಂಪರೆ ಪ್ರೇರಣೆಯಾಗುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ಪರಿಸರದಲ್ಲಿ ದೈವಿಕ ವಾತಾವರಣದೆ. ಪ್ರಾಚಿನ ಕಾಶಿಗೆ ಆಧುನಿಕ ಸ್ಪರ್ಶ ಸಿಕ್ಕಿದೆ. ಇಂದು ಶಿವನ ಪ್ರಿಯ ವಾರವಾಗಿದ್ದು, ಇಂದೇ ಕಾರಿಡಾರ್ ಲೋಕಾರ್ಪಣೆಗೊಂಡಿದೆ. ತಾಯಿ ಗಂಗೆ, ಕಾಶಿ ವಿಶ್ವನಾಥ ಎಲ್ಲರಿಗೂ ಸೇರಿದವರು ಎಂದರು. ಇದನ್ನೂ ಓದಿ: ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ

    ಕಾಶಿ ವಿಶ್ವನಾಥನ ಕ್ಷೇತ್ರಕ್ಕೆ ಹೊಸ ರೂಪ ನೀಡುವ 399 ಕೋಟಿ ರೂ. ಮೊದಲ ಹಂತದ ಕಾಶಿ ಕಾರಿಡಾರ್ ನ್ನು ಮೋದಿ ಉದ್ಘಾಟಿಸಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿಯವರು ಕಾಲ ಭೈರವೇಶ್ವರನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಅಲಕಾನಂದ ಕ್ರೂಸ್‍ನಲ್ಲಿ ಲಲಿತಾ ಘಾಟ್‍ಗೆ ತೆರಳಿ ಅಲ್ಲಿ ಕಾವಿಧಾರಿಯಾಗಿ ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ಅಲ್ಲಿ ಅಘ್ರ್ಯ ಅರ್ಪಿಸಿ ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡಿದರು.