ಬೆಂಗಳೂರು: ಅಯೋಧ್ಯೆ ಮತ್ತು ಕಾಶಿಗೆ ಹೋಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಅದರಲ್ಲೂ ಅಯೋಧ್ಯೆಯ ಶ್ರೀರಾಮನನ್ನು (Ayodhya Shree Ram) ಹಾಗೂ ಕಾಶಿಯ ವಿಶ್ವನಾಥನನ್ನು (Kashi Vishwanath) ನೋಡಬೇಕು ಎಂಬ ಬಯಕೆ ಎಲ್ಲರಲ್ಲಿ ಇರುತ್ತದೆ.
ಎಷ್ಟೋ ಜನರಿಗೆ ಈ ಆಸೆ ಇದ್ದಾಗಲೂ ಸಹ ಹೋಗುವುದಕ್ಕೆ ಸಾಧ್ಯವಾಗಿರಲ್ಲ. ಆರ್ಥಿಕ ಸಮಸ್ಯೆಯಿಂದ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಭಾಷೆಯ ಸಮಸ್ಯೆಯಿಂದ ಹೇಗಪ್ಪ ಹೋಗುವುದು ಎಂಬ ಚಿಂತೆ ಅವರಲ್ಲಿರುತ್ತದೆ. ಯಾರಾದರೂ ಜೊತೆಗಿದ್ದರೆ ಹೋಗಬಹುದು ಎಂಬ ಧೈರ್ಯ ಇರುತ್ತೆ. ಹೀಗೆ ಆಸೆ ಇಟ್ಟುಕೊಂಡ ಅನೇಕ ಜನರಿಗೆ ʼಓಂ ಶಕ್ತಿʼ ಸಂಸ್ಥೆ ಅವಕಾಶ ಮಾಡಿಕೊಟ್ಟಿದೆ. ಇದೇ ತಿಂಗಳು 30ನೇ ತಾರೀಖಿನಂದು ಬೆಳಿಗ್ಗೆ 6 ಗಂಟೆಗೆ ರೈಲಿನ ಮೂಲಕ ಉಚಿತವಾಗಿ ಅಯೋಧ್ಯೆ ಹಾಗೂ ಕಾಶಿಗೆ ಕರೆದುಕೊಂಡು ಸಂಸ್ಥೆ ಕರೆದುಕೊಂಡು ಹೋಗುತ್ತಿದೆ. ಇದನ್ನೂ ಓದಿ: ಐತಿಹಾಸಿಕ ಗಂಗೈಕೊಂಡ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿದ ಮೋದಿ
ಒಂದೊಂದು ಜಿಲ್ಲೆಯಿಂದ 100 ಜನರನ್ನು ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರನ್ನ ಗುರುತಿಸಿ ಈಗಾಗಲೇ ಆಯ್ಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ ನಿಗದಿ ಮಾಡಿದಂತೆ ಒಟ್ಟು ಎಂಟು ದಿನ ಈ ಪ್ರವಾಸ ಇರಲಿದೆ. ಉಚಿತವಾಗಿ ಪ್ರಯಾಣ, ಹಾಗೂ ಊಟ ಜೊತೆಗೆ ಉಳಿದುಕೊಳ್ಳಲೂ ಸಹ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ.
ಇದಕ್ಕಾಗಿ ರೈಲ್ವೇ ಇಲಾಖೆಯನ್ನು (Indian Railways) ಸಂಪರ್ಕಿಸಿ ಇಡಿ ಒಂದು ರೈಲನ್ನು 8 ದಿನಕ್ಕಾಗಿ ಬುಕ್ ಮಾಡಿ ಕರೆದುಕೊಂಡು ಹೋಗಲಾಗುತ್ತಿದೆ.
ಲಕ್ನೋ: ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗಾಗಿ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ನಿಂದ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಕಾಶಿ ವಿಶ್ವನಾಥನ ದರ್ಶನ ಪಡೆಯಲು ಹಲವು ಭಕ್ತಾದಿಗಳು ತುಂಬಾ ದಿನದಿಂದ ಕಾಯುತ್ತಿರುತ್ತಾರೆ. ಭಕ್ತರಿಗಾಗಿ ದೇವಸ್ಥಾನ ಟ್ರಸ್ಟ್ ಒಂದು ಹೊಸ ಅಪ್ಲಿಕೇಶನ್ ಬಿಟ್ಟಿದೆ. ಈ ಅಪ್ಲಿಕೇಶನ್ ನಲ್ಲಿ ಭಕ್ತರು ನೋಂದಾಯಿಸಿಕೊಳ್ಳುವ ಮೂಲಕ ದರ್ಶನವನ್ನು ಪಡೆಯಬಹುದು. ಈ ಆ್ಯಪ್ ಮೂಲಕ ಯಾವ ವೇಳೆ ಕಾಶಿ ದರ್ಶನ ಪಡೆಯಬೇಕು ಎಂಬುದನ್ನು ತಿಳಿದುಕೊಳ್ಳಬಹುದು. ಆ್ಯಪ್ ನಲ್ಲಿ ದರ್ಶನಕ್ಕೆ ಸರಿಯಾದ ಮಾರ್ಗ ಮತ್ತು ಸಮಯದ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತೆ. ಇದನ್ನೂ ಓದಿ: ಈ ಅಪರೂಪದ ಕೃತಿಯ ದರ್ಶನ ಪಡೆದರೆ ಮಾನವನ ಎಲ್ಲ ಸಂಕಷ್ಟ ದೂರ!
ಆ್ಯಪ್‍ನಲ್ಲಿ ಭಕ್ತರು ನೋಂದಾಯಿಸಿಕೊಂಡರೆ ದೇವಾಲಯದ ಆಡಳಿತವು ಅವರಿಗೆ ಒಂದು ನಿರ್ದಿಷ್ಟ ಸಮಯ ಕೊಟ್ಟು ದೇವರ ದರ್ಶನ ಪಡೆಯುವಂತೆ ಸೂಚಿಸುತ್ತೆ. ಈ ಮೂಲಕ ದೇವಾಲಯದ ಆಡಳಿತ ಮಂಡಳಿಯು ಜನಸಂದಣಿಯನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.
ಡೌನ್‍ಲೋಡ್ ಮಾಡುವುದು ಹೇಗೆ!
ಮಾಹಿತಿಗಳ ಪ್ರಕಾರ, ಆ್ಯಪ್ ಸದ್ಯಕ್ಕೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಲಿದೆ. ಇದನ್ನು ಪ್ಲೇ ಸ್ಟೋರ್‌ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು. ಅಪ್ಲಿಕೇಶನ್‍ನ ವೈಶಿಷ್ಟ್ಯವೆಂದರೆ ಇದು ಹಿಂದಿ, ಇಂಗ್ಲಿಷ್ ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳನ್ನು ಹೊಂದಿರುತ್ತದೆ ಎಂದು ತಿಳಿದುಬಂದಿದೆ.
ಯಾವ ರೀತಿ ಇರುತ್ತೆ?
ಶಿವರಾತ್ರಿ(ಮಾರ್ಚ್ 1) ದಿನ ಗಂಗಾನದಿಯ ಕಡೆಯಿಂದಲೂ ಹಲವು ಭಕ್ತರು ಬರತ್ತಾರೆ. ಅದಕ್ಕೆ ಭಕ್ತರಿಗಾಗಿ ಹೊಸ ಮಾರ್ಗವನ್ನು ತೆರೆಯಲಾಗುತ್ತಿದೆ ಎಂದು ವಿಭಾಗೀಯ ಆಯುಕ್ತ ದೀಪಕ್ ಅಗರವಾಲ್ ತಿಳಿಸಿದ್ದಾರೆ. ಅಲ್ಲದೆ ಎಲ್ಲ ಪ್ರವೇಶ ದ್ವಾರಗಳಿಂದ ಗರ್ಭಗುಡಿ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ.
ವಿವಿಧೆಡೆ LED ಅಳವಡಿಸುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದ ಗರ್ಭಗುಡಿಯ ನೇರ ದರ್ಶನವನ್ನು ಭಕ್ತರಿಗೆ ಮಾಡಿಲಾಗುತ್ತಿದೆ. ವಿವಿಐಪಿಗಳು ಜಲಮಾರ್ಗದ ಮೂಲಕ ಬರುವಂತೆ ಮನವಿ ಮಾಡಲಾಗಿದೆ. ಮೈದಾಗಿನ್ ಮತ್ತು ಗೋಡೋಲಿಯಾದಿಂದ ಯಾವುದೇ ದೊಡ್ಡ ವಾಹನಗಳನ್ನು ಅನುಮತಿಸಲಾಗುವುದಿಲ್ಲ. ವಿಕಲಚೇತನರು ಮತ್ತು ವೃದ್ಧರಿಗಾಗಿ ದೇವಾಲಯದ ಆಡಳಿತ ಮಂಡಳಿಯಿಂದ ಇ-ರಿಕ್ಷಾಗಳನ್ನು ನಡೆಸಲಾಗುವುದು.
ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದ್ದು, ವಿವಿಧೆಡೆ ನೀರಿಗಾಗಿ ಹಾಗೂ ರಾತ್ರಿ ವೇಳೆ ನಡೆಯುವ ಕಾರ್ಯಕ್ರಮಗಳಿಗೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಲ್ಲಲು ಆವರಣದಲ್ಲಿ ಸ್ಟೀಲ್ ರೇಲಿಂಗ್‍ಗಳನ್ನು ಅಳವಡಿಸಲಾಗುವುದು. ದೇವಾಲಯದಲ್ಲಿ ಟ್ಯಾಬ್ಲೋ ದರ್ಶನದ ವ್ಯವಸ್ಥೆಯು ಮುಂದುವರಿಯುತ್ತದೆ. ಈ ಮೂಲಕ ಭಕ್ತರಿಗೆ ದರ್ಶನ ಸುಲಭವಾಗಲಿದೆ. ಇದನ್ನೂ ಓದಿ: ಕೇವಲ 13 ಗಂಟೆಯಲ್ಲಿ 135 ಕಿ.ಮೀ ಬಂದ ಎತ್ತಿನ ಚಕ್ಕಡಿ – ಎತ್ತುಗಳಿಗೆ ಅದ್ಧೂರಿ ಸ್ವಾಗತ
ಶ್ರೀ ಕಾಶಿ ವಿಶ್ವನಾಥ ಧಾಮದ ನಿರ್ಮಾಣದ ನಂತರ, ಇದು ಮಹಾ ಶಿವರಾತ್ರಿಯ ಮೊದಲ ಆಚರಣೆಯಾಗಿದೆ. ವಿವಿಧ ಆಚರಣೆಗಳು ಮತ್ತು ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿ ಬಿಗಿ ಭದ್ರತೆ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಲಕ್ನೋ: ಬಿಜೆಪಿ ಅಧಿಕಾರದಲ್ಲಿರುವ 12 ರಾಜ್ಯಗಳ ಮುಖ್ಯಮಂತ್ರಿಗಳು ವಾರಣಾಸಿಗೆ ಭೇಟಿ ನೀಡಿದ ಬೆನ್ನಲ್ಲೇ ಇದೀಗ ಭಾರತದ 100 ಮೇಯರ್‌ಗಳು ಕಾಶಿಗೆ ಭೇಟಿ ನೀಡಿದ್ದಾರೆ.
ಇಂದು ವಾರಣಾಸಿಯಲ್ಲಿ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿಯ ಸಂಸದರಾದ ಬಳಿಕ ಕಾಶಿ ಬದಲಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಶಿ ಮಾದರಿ ಅಭಿವೃದ್ಧಿಯ ದರ್ಶನ ಮೇಯರ್‌ಗಳಿಗೆ ಆಗಬೇಕು ಹಾಗೂ ಅವರು ಕೂಡ ತಮ್ಮ ನಗರದಗಳಲ್ಲಿ ಈ ಮಾದರಿ ಅವಳಪಡಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಕಾಶಿಯಲ್ಲಿ ಮೇಯರ್‌ಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಕಾಶಿಯಿಂದ ಕಾಶ್ಮೀರದವರೆಗೆ ಅಭಿವೃದ್ಧಿ – ಮೋದಿ ಅವಧಿಯಲ್ಲಿ ಯಾವೆಲ್ಲ ದೇವಾಲಯಗಳು ಜೀರ್ಣೋದ್ಧಾರಗೊಂಡಿದೆ?
PM Narendra Modi to inaugurate and address the All India Mayors’ Conference shortly via video conferencing.
The conference is being organised by the Department of Urban Development, Uttar Pradesh in Varanasi. Mayors from various states are participating in the conference. pic.twitter.com/fcO8Ez1aP0
ಕರ್ನಾಟಕದಿಂದ 5 ಮೇಯರ್: ವಾರಣಾಸಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಮೇಯರ್‌ಗಳ ಸಮ್ಮೇಳನದಲ್ಲಿ ರಾಜ್ಯದಿಂದ 5 ಮಂದಿ ಭಾಗವಹಿಸಲಿದ್ದಾರೆ. ಮೈಸೂರಿನ ಮೇಯರ್ ಸುನಂದಾ ಪಾಲನೇತ್ರ, ಶಿವಮೊಗ್ಗದ ಸುನೀತಾ ಅಪ್ಪಣ್ಣ, ಮಂಗಳೂರಿನ ಪ್ರೇಮಾನಂದ ಶೆಟ್ಟಿ, ದಾವಣಗೆರೆಯ ಎಸ್.ಟಿ ವೀರೇಶ, ತುಮಕೂರಿನ ಕೃಷ್ಣಪ್ಪ ಪಾಲ್ಗೊಂಡಿದ್ದಾರೆ. ಕಾಶಿ ವಿಶ್ವನಾಥನ ದರ್ಶನ ಜೊತೆಗೆ ಕಾಶಿ ಅಭಿವೃದ್ಧಿಯ ಕುರಿತು ಅರಿವು ನೀಡುವ ಕಾರ್ಯಕ್ರಮ ಇದಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಸಮ್ಮೇಳನಕ್ಕೆ ಚಾಲನೆ ನೀಡಿ ಭಾಷಣ ಮಾಡಲಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ನಗರಾಭಿವೃದ್ಧಿ ಸಚಿವ ಹರ್‍ದೀಪ್ ಸಿಂಗ್ ಪುರಿ ಅವರು ಸಹ ಈ ಸಭೆಯಲ್ಲಿ ಭಾಗವಹಿಸಿದ್ದಾರೆ.
ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಮ್ಮ ಹೆಸರಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ನನ್ನ ಹೆತ್ತವರಿಗೆ ಮೊದಲ ಮಗು ಸತ್ತು ಹೋಗಿತ್ತು. ಎರಡನೇ ಮಗು ಸಾವನ್ನಪ್ಪಬಾರದು ಅಂತಾ ನಮ್ಮಪ್ಪ ಹರಕೆ ಹೊತ್ತಿದ್ದರು. ಕಾಶಿಗೆ ಹೋಗಿ ಹರಕೆ ಹೊತ್ತಿದ್ದ ಕಾರಣ ನನಗೆ ಆ ಹೆಸರು ಇಟ್ಟರು ಎಂದರು.
ಇದೇ ವೇಳೆ ವಾರಣಾಸಿಯಲ್ಲಿ ವಿಶ್ವನಾಥ್ ಕಾರಿಡಾರ್ ನಿರ್ಮಾಣ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ಒಂದು ಸಣ್ಣ ಲೋಪವಾಗಿದೆ. ವಾರಣಾಸಿಯನ್ನು ಬೇರೆ ಬೇರೆ ಧರ್ಮದವರು ನಾಶ ಮಾಡಿದ್ದರು. 16ನೇ ಶತಮಾನದಲ್ಲಿ ಉಳಿಸಿದ್ದು ಅಹಲ್ಯಬಾಯಿ. ಅವರೇ ಕಾಶಿ ವಿಶ್ವನಾಥ ದೇವಸ್ಥಾನ ಉಳಿಸಿದ್ದರು. ಯುದ್ಧದ ಬದಲು ಯುಕ್ತಿಯಿಂದ ಉಳಿಸಿದ್ದರು. ಶಿವನ ಹೆಸರಲ್ಲೇ ಅವರು ಆಡಳಿತ ಮಾಡಿದ್ದರು. ಇಂತಹ ಯುಕ್ತಿ ಪ್ರದರ್ಶಿಸಿದ ಅಹಲ್ಯಬಾಯಿ ಅವರನ್ನು ಎಲ್ಲರೂ ಮರೆತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿ ನರೇಂದ್ರ ಮೋದಿ ಸಹ ಮರೆತಿದ್ದಾರೆ ಎಂದು ಆರೋಪಿಸಿದರು.
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಕಾಶಿ ವಿಶ್ವನಾಥ ಕಾರಿಡಾರ್‌ನನ್ನು ಇಂದು ಮಧ್ಯಾಹ್ನ 1 ಗಂಟೆಗೆ ಪ್ರಧಾನಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಿದ್ದಾರೆ. ಈ ಯೋಜನೆಯಿಂದಾಗಿ ಪ್ರವಾಸೋದ್ಯಮ ಚೇತರಿಕೆ ಕಾಣಲಿದೆ.
ಈಗಾಗಲೇ ಮೋದಿ ಅವರು ಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವಾರಾಣಿಸಿಯ ಜನರು ಹೂ ಮಳೆ ಸುರಿಸಿ, ಮೋದಿ, ಮೋದಿ, ಹರ್ ಹರ್ ಮಹಾದೇವ್ ಎಂದು ಘೋಷಣೆ ಕೂಗುತ್ತಾ ಅದ್ಧೂರಿಯಾಗಿ ಪ್ರಧಾನಿಯವರನ್ನು ಸ್ವಾಗತಿಸಿದ್ದಾರೆ. ಮೋದಿಯವರು ಕಾವಿ ವಸ್ತ್ರವನ್ನು ಧರಿಸಿ ಗಂಗಾ ನದಿಯಲ್ಲಿ ಮುಳುಗಿ ಪುಣ್ಯ ಸ್ನಾನ ಮಾಡಿ, ಜಪ ಮಾಲೆ ಹಿಡಿದು ಜಪ ಮಾಡಿದ್ದಾರೆ.
ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ:
ಕಾಶಿ ವಿಶ್ವನಾಥ ಕಾರಿಡಾರ್ ವಿಶ್ವನಾಥ ದೇಗುಲ ಮತ್ತು ಪವಿತ್ರ ಗಂಗಾ ನದಿಯನ್ನು ನೇರವಾಗಿ ಸಂಪರ್ಕಿಸುತ್ತದೆ. ಈ ಮೊದಲು ದೇಗುಲ ಮತ್ತು ಪವಿತ್ರ ಗಂಗಾ ನದಿಗೆ ನೇರವಾದ ಸಂಪರ್ಕವಿರಲಿಲ್ಲ. ದೇಗುಲದ ಮೂರು ದಿಕ್ಕುಗಳಲ್ಲಿ ಮನೆಗಳು, ಕಟ್ಟಡಗಳು, ಆವರಿಸಿದ್ದವು. ಇದೀಗ ಕಿಕ್ಕಿರಿದ ಪ್ರದೇಶ, ಜನಸಂದಣಿಯಿಂದ ಯಾವುದೇ ಅಡೆತಡೆಗಳಿಲ್ಲದೆ ಗಂಗೆಯ ಲಲಿತಾ ಘಾಟ್‍ಗೆ ಭಕ್ತರು ಮಂದಿರದಿಂದ ಭೇಟಿ ನೀಡಬಹುದು. ದೇಗುಲದಲ್ಲಿ ನಿಂತೇ ಪ್ರಸಿದ್ಧ ಗಂಗಾರತಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಕಾರಿಡಾರ್ ದೇಗುಲ ಮತ್ತು ಲಲಿತಾ ಘಾಟ್‍ಗೆ ಸಂಪರ್ಕ ಕಲ್ಪಿಸುವುದು ಮಾತ್ರವಲ್ಲದೇ ದೇಗುಲ ಚೌಕ, ವಾರಾಣಸಿ ನಗರ ಗ್ಯಾಲರಿ, ಮ್ಯೂಸಿಯಂ, ವಿವಿಧ ಉದ್ದೇಶಿತ ಸಭಾಂಗಣ, ಹಾಲ್, ಭಕ್ತರಿಗೆ ಸೌಲಭ್ಯ ಒದಗಿಸುವ ಕೇಂದ್ರವಾಗಿದೆ. ಸಾರ್ವಜನಿಕ ತಂಗುದಾಣ, ಅರ್ಚಕರಿಗೆ ವಸತಿ ಮತ್ತು ಆಧ್ಯಾತ್ಮ ಗ್ರಂಥಾಲಯ ಮುಂತಾದ ಸೌಕರ್ಯಗಳನ್ನು ಕಾರಿಡಾರ್ ಒಳಗೊಂಡಿದೆ.
ಕಾರಿಡಾರ್‌ನಲ್ಲಿ ಏನಿದೆ?:
* ಯೋಜನೆಯಡಿ 24 ಕಟ್ಟಡ ನಿರ್ಮಾಣ
* ಸುಮಾರು 50 ಅಡಿ ಉದ್ದ ಕಾರಿಡಾರ್ ಗಂಗಾ ಮಣಿಕರ್ಣಿಕಾ, ಲಲಿತಾ ಘಾಟ್ ಮತ್ತು ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ ದೇಗುಲವನ್ನು ಸಂಪರ್ಕಿಸುತ್ತದೆ. ಯಾತ್ರಾರ್ಥಿಗಳಿಗೆ ವಿಶ್ರಾಂತಿ ಕೊಠಡಿ ವ್ಯವಸ್ಥೆಯನ್ನು ಮಾಡಲಾಗಿದೆ.
* ವಾರಾಣಸಿ ಸಂಸ್ಕ್ರತಿ ಪ್ರತಿಬಿಂಬಿಸುವ ಮ್ಯೂಸಿಯಂ ಮತ್ತು ಸಭಾಂಗಣ ಮತ್ತು ಹೋಮ ಹವನದಂತಹ ಧಾರ್ಮಿಕ ಕಾರ್ಯ ನಡೆಸಲು ಯೋಗಶಾಲೆಗಳು ಇವೆ.
* ಆರ್ಚಕರು, ಸ್ವಯಂ ಸೇವಕರು ಮತ್ತು ಯಾತ್ರಾರ್ಥಿಗಳಿಗೆ ವಿಶೇಷ ವಸತಿಯನ್ನು ಮಾಡಲಾಗಿದೆ.
* ಗಂಗಾ ನದಿ ಕಣ್ತುಂಬಿಕೊಳ್ಳುವ ಗ್ಯಾಲರಿ ಇದ್ದು, ದೇಗುಲದ 7000 ಚದರ ಮೀ. ಪ್ರದೇಸ 10,000 ಜನರಿಗೆ ಧ್ಯಾನಕ್ಕೆ ಮೀಸಲು ಇಡಲಾಗಿದೆ. 7 ದ್ವಾರ ಕೆಫೆಟೇರಿಯಾ, ಆಧ್ಯಾತ್ಮ ಗ್ರಂಥಾಲಯ, ಫುಡ್ ಸ್ಟ್ರೀಟ್ ವ್ಯವಸ್ಥೆ ಇದೆ. ಇದನ್ನೂ ಓದಿ:ಪ್ರಧಾನಿ ಮೋದಿಗೆ ದೃಷ್ಟಿ ನಿವಾರಿಸಿದ ಅರ್ಚಕ
ಕಾಶಿ ದೇಗುಲ 3000 ಚದರಡಿ ವ್ಯಾಪ್ತಿಯಲ್ಲಿತ್ತು. ಮಹತ್ವಾಕಾಂಕ್ಷಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯೇ ಮೊದಲ ಹಂತದ ವೆಚ್ಚ399 ಕೋಟಿ ಆಗಿದ್ದು, 5 ಲಕ್ಷ ಚದರ ಅಡಿ ಪ್ರದೇಶಕ್ಕೆ ದೇಗುಲದ ವ್ಯಾಪ್ತಿ ವಿಸ್ತರಿಸಿದೆ. ಕಾರಿಡಾರ್ 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲ ಇದೆ. ಮೊದಲಿನಂತೆ ಕಿಕ್ಕಿರಿದ ರಸ್ತೆಗಳ ಬದಲಾಗಿ ಇದೀಗ ಸರಾಗವಾಗಿ ಕೇವಲ ಒಂದು ನಿಮಿಷದಲ್ಲಿ ದೇಗುಲದಿಂದ ಲಲಿತಾ ಘಾಟ್ ತಲುಪಬಹುದಾಗಿದೆ. ಇದನ್ನೂ ಓದಿ: ಸೂಪರ್ ಸ್ಟಾರ್ ರಜನಿಕಾಂತ್‍ಗೆ 71ನೇ ಹುಟ್ಟುಹಬ್ಬದ ಸಂಭ್ರಮ
ಮೋದಿ ಕಾಶಿ ಪರಿವರ್ತನೆ ಮಾಡಿದ್ದು ಹೇಗೆ?:
ಮೋದಿ ವಾರಾಣಸಿಯಿಂದ ಲೋಕಸಭೆಗೆ ಆಯ್ಕೆಯಾದ ಬೆನ್ನಲ್ಲೇ ಕಾಶಿ ಸ್ವರೂಪವನ್ನೇ ಬದಲಿಸಿದರು. ಈ ಹಿಂದಿನ ಹಳೆಯ ಕಾಶಿಯಲ್ಲಿ ಕಿರಿದಾದ ರಸ್ತೆಗಳಿದ್ದವು. ಅಸ್ವಚ್ಛತೆ ಎಲ್ಲಾ ಕಡೆ ಎದ್ದು ಕಾಣುತ್ತಿತ್ತು. ಇದನ್ನು ಬದಲಿಸಿದ ಅವರು ರಸ್ತೆಗಳ ಅಗಲೀಕರಣ ಮಾಡಿಸಿದರು. ನೈರ್ಮಲೀಕರಣಕ್ಕೆ ಕ್ರಮ ಕೈಗೊಂಡರು. ಮಲಿನವಾಗಿದ್ದ ಗಂಗಾ ನದಿಯನ್ನು “ನಮಾಮಿ ಗಂಗೆ” ಯೋಜನೆ ಅಡಿ ಸ್ವಚ್ಛಗೊಳಿಸಿದಉ. ಈಗ ‘ವಿಶ್ವನಾಥ ಕಾರಿಡಾರ್’ ಯೋಜನೆ ಜಾರಿಗೊಳಿಸಿ ದೇಗುಲದ ಗತವೈಭವ ಮರುಕಳಿಸಿದ್ದಾರೆ.