Tag: Kash Patel

  • ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ (Kash Patel) ಅವರಿಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI)ನ 9ನೇ ನಿರ್ದೇಶಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಶೇಷವೆಂದರೆ ಅಮೆರಿಕದಲ್ಲೂ ಹಿಂದೂ ಸಂಸ್ಕೃತಿ ಮರೆಯದ ಕಾಶ್‌ ಪಟೇಲ್ ಭಗವದ್ಗೀತೆ (Bhagavad Gita) ಮೇಲೆ ಕೈಯಿಟ್ಟು ಪ್ರಮಾಣ ಮಾಡಿದ್ದಾರೆ.

    ಶ್ವೇತಭವನದ ಕ್ಯಾಂಪಸ್‌ನಲ್ಲಿರುವ ಐಸೆನ್‌ಹೋವರ್ ಕಾರ್ಯನಿರ್ವಾಹಕ ಕಚೇರಿ ಭವನದಲ್ಲಿ (EEOB) ಪ್ರಮಾಣ ವಚನ ಸ್ವೀಕರಿಸಿದರು. ಯುಎಸ್ ಅಟಾರ್ನಿ ಜನರಲ್ ಪ್ಯಾಮ್ ಬೋಂಡಿ ಅವರು ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ಪಟೇಲ್ ಪ್ರಮಾಣ ವಚನ ಸ್ವೀಕರಿಸುವಾಗ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ಅವರ ಪಕ್ಕದಲ್ಲಿ ನಿಂತಿದ್ದರು ಮತ್ತು ಕುಟುಂಬ ಇತರ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಇದೀಗ ಎಫ್‌ಬಿಐನ ನಿರ್ಗಮಿತ ನಿರ್ದೇಶಕ ಕ್ರಿಸ್ಟೋಫರ್ ವ್ರೇ ಅವರ ನಂತರ ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಮುಂದುವರಿಯಲಿದ್ದಾರೆ.

    ಟ್ರಂಪ್‌ ಶ್ಲಾಘನೆ:
    ಇನ್ನೂ ಕಾಶ್‌ ಪಟೇಲ್‌ ಅವರ ನೇಮಕಾತಿಯನ್ನು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ನಾನು ಕಾಶ್‌ ಪಟೇಲ್‌ರನ್ನ ಗೌರವಿಸುತ್ತೇನೆ. ಎಫ್‌ಬಿಐನ ಸಿಬ್ಬಂದಿ ಅವರ ಮೇಲೆ ಗೌರವ ಹೊಂದಿದ್ದರಿಂದಲೇ, ಹಾಗಾಗಿಯೇ ಅವರ ಆಯ್ಕೆಯನ್ನು ಸಮ್ಮತಿಸಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ಪ್ರಮಾಣ ಸ್ವೀಕಾರಕ್ಕೂ ಮುನ್ನವೇ ಬಿಗ್‌ ವಾರ್ನಿಂಗ್‌:
    ಎಫ್‌ಬಿಐ ನಿರ್ದೇಶಕರಾಗಿ ನೇಮಕ ಮಾಡಿ ಟ್ರಂಪ್‌ ಆದೇಶದ ಬೆನ್ನಲ್ಲೇ ಕಾಶ್‌ ಪಟೇಲ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಎಚ್ಚರಿಕೆಯೊಂದನ್ನ ನೀಡಿದ್ದರು. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ಎಚ್ಚರಿಸಿದ್ದರು.

    ಕಾಶ್ ಪಟೇಲ್ ಯಾರು?
    ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು.

    ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಇದನ್ನೂ ಓದಿ: ಬೋನಿ ದಾಖಲೆ ಮುರಿಯಲು ಸಜ್ಜಾದ ಸ್ನೇಹಿತೆ – 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡಲು ಅನ್ನಿ ನೈಟ್ ತಯಾರಿ

    ಕಾಶ್ ಪಟೇಲ್‌ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ.

  • ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ಅಮೆರಿಕದ ಎಫ್‌ಬಿಐಗೆ ಗುಜರಾತ್‌ ಮೂಲದ ಕಾಶ್‌ ಪಟೇಲ್‌ ಬಾಸ್‌ – ನೇಮಕವಾದ ಬೆನ್ನಲ್ಲೇ ಬಿಗ್‌ ವಾರ್ನಿಂಗ್‌

    ವಾಷಿಂಗ್ಟನ್‌: ಅಮೆರಿಕದ ತನಿಖಾ ಸಂಸ್ಥೆ ಫೆಡರಲ್‌ ಬ್ಯುರೋ ಆಫ್‌ ಇನ್‌ವೆಸ್ಟಿಗೇಷನ್ (FBI) ನಿರ್ದೇಶಕರಾಗಿ ಭಾರತ ಮೂಲದ ಕಾಶ್‌ ಪಟೇಲ್‌ ನೇಮಕಗೊಂಡಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್‌ ಪಟೇಲ್‌ ಅವರನ್ನು ನೇಮಕಗೊಳಿಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮಾಹಿತಿಯನ್ನು‌ ಶ್ವೇತಭವನದ ಅಧಿಕಾರಿ ಡಾನ್ ಸ್ಕ್ಯಾವಿನೋ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಆದೇಶದ ಬೆನ್ನಲ್ಲೇ ಭಾರತೀಯ ಮೂಲದ (Indian-origin) ಕಾಶ್‌ ಪಟೇಲ್‌, ಟ್ರಂಪ್‌ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಎಫ್‌ಬಿಐನ 9ನೇ ನಿರ್ದೇಶಕನಾಗಿದ್ದಕ್ಕೆ ನನಗೆ ಗೌರವವಿದೆ. ನಿಮ್ಮ ಅಚಲವಾದ ವಿಶ್ವಾಸ ಮತ್ತು ಬೆಂಬಲಕ್ಕಾಗಿ‌ ಟ್ರಂಪ್‌ ಹಾಗೂ ಅಟಾರ್ನಿ ಜನರಲ್ ಬೋಂಡಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ಮುಂದುವರಿದು.. ಎಫ್‌ಬಿಐ ಒಂದು ಪರಂಪರೆಯನ್ನು ಹೊಂದಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ನಮ್ಮ ನ್ಯಾಯ ವ್ಯವಸ್ಥೆಯು ಸಾರ್ವಜನಿಕ ನಂಬಿಕೆಯನ್ನು ಕಳೆದುಕೊಂಡಿದೆ, ಈ ಬೆಳವಣಿಗೆ ಇಂದೇ ಕೊನೆಗೊಳ್ಳಬೇಕು. ಅಮೆರಿಕನ್ನರು (American people) ಹೆಮ್ಮೆ ಪಡುವಂತೆ ಎಫ್‌ಬಿಐ ಅನ್ನು ಮರುನಿರ್ಮಾಣ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಸಂಕಲ್ಪ ಮಾಡೋಣ. ಅಲ್ಲದೇ ಇದನ್ನು ನಮ್ಮ ಎಚ್ಚರಿಕೆ ಎಂದೇ ಭಾವಿಸಿ ಅಮೆರಿಕನ್ನರಿಗೆ ಹಾನಿ ಮಾಡಲು ಬಯಸುವವರು ಯಾವುದೇ ಮೂಲೆಯಲ್ಲಿದ್ದರೂ ಹುಡುಕಿ ಬೇಟೆಯಾಡುತ್ತೇವೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

    ಕಾಶ್ ಪಟೇಲ್ ಯಾರು?
    ಕಾಶ್ ಪಟೇಲ್ ತಂದೆ-ತಾಯಿ ಗುಜರಾತ್ ಮೂಲದವರು. ಪಟೇಲ್ ಪೋಷಕರು ಅಮೆರಿಕದಲ್ಲಿ ನೆಲೆಸುವುದಕ್ಕಿಂತ ಮೊದಲು ಉಗಾಂಡದಲ್ಲಿದ್ದರು. ಅಲ್ಲಿಂದ ಕೆನಡಾಗೆ ಬಂದರು. ಈ ವೇಳೆ ಕಾಶ್ ಪಟೇಲ್ ತಂದೆಗೆ ಅಮೆರಿಕ ವಿಮಾನಯಾನ ಸಂಸ್ಥೆಯಲ್ಲಿ ಹಣಕಾಸು ಅಧಿಕಾರಿ ಕೆಲಸ ಸಿಕ್ಕಿದ್ದರಿಂದ ಅವರು ಕುಟುಂಬ ಸಮೇತರಾಗಿ ಅಮೆರಿಕಾಗೆ ಬಂದು ನೆಲೆಸಿದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ನ್ಯೂಯಾರ್ಕ್‌ನ ಗಾರ್ಡನ್ ಸಿಟಿಯಲ್ಲಿ 1980ರಲ್ಲಿ ಕಾಶ್ ಪಟೇಲ್ ಜನಿಸಿದರು. ಇಲ್ಲಿಯೇ ಅವರು ಕಾಲೇಜು ಶಿಕ್ಷಣ ಪಡೆದರು. ನಂತರ ರಿಚ್ಚಂಡ್ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ಕ್ರಿಮಿನಲ್ ಜಸ್ಟೀಸ್ ನಲ್ಲಿ ಪದವಿ ಪಡೆದರು. ಸಾರ್ವಜನಿಕ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ನಂತರ ಅವರು ಸರ್ಕಾರದ ವಿವಿಧ ತನಿಖಾ ಸಂಸ್ಥೆಗಳಲ್ಲಿ ಕೆಲಸ ಮಾಡಿದರು.

    ಕಾಶ್ ಪಟೇಲ್‌ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯ ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ. ಪಟೇಲ್‌ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ (ಎನ್‌ಎಸ್‌ಸಿ) ಭಯೋತ್ಪಾದನಾ ನಿಗ್ರಹದ ಹಿರಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವಾರ ಉಗ್ರಗಾಮಿ ಸಂಘಟನೆಗಳ ಭಯೋತ್ಪಾದಕರ ಹತ್ಯೆ ಸೇರಿದಂತೆ ಅಮೆರಿಕದ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಪನಾಮದಲ್ಲಿ ಬಂಧಿಯಾಗಿರುವ ಭಾರತೀಯ ವಲಸಿಗರು ಸೇಫ್‌ – ರಾಯಭಾರ ಕಚೇರಿ ಮಾಹಿತಿ

    ಇದಕ್ಕೂ ಮುನ್ನ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದ್ದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.

  • ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ಎಫ್‌ಬಿಐ ನಿರ್ದೇಶಕನಾಗಿ ಭಾರತೀಯ ಮೂಲದ ಕಶ್ಯಪ್‌ ನಾಮನಿರ್ದೇಶನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷಾಗಿ 2ನೇ ಬಾರಿ ಆಯ್ಕೆಯಾಗಿರುವ ಡೊನಾಲ್ಡ್‌ ಟ್ರಂಪ್‌ ಭಾರತ (Indian American) ಮೂಲದ ಕಶ್ಯಪ್ ʻಕಶ್ʼ ಪಟೇಲ್ ಅವರನ್ನ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (FBI) ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಈ ಮೂಲಕ ಟ್ರಂಪ್‌ ಸಂಪುಟಕ್ಕೆ ಆಯ್ಕೆಯಾದ ಭಾರತೀಯ ಮೂಲದ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆ ಕಶ್ಯಪ್ ಅವರದ್ದಾಗಿದೆ.

    ಈ ಮಾಹಿತಿಯನ್ನು ಟ್ರಂಪ್‌ (Donald Trump) ತಮ್ಮ ಟ್ರೂಥ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಮೂಲದ ಅಮೆರಿಕನ್‌ ಪ್ರಜೆ ಕಶ್‌, ನಮ್ಮ ಅಟಾರ್ನಿ ಜನರಲ್ ಪಾಮ್ ಬೊಂಡಿ ಅವರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಎಫ್‌ಬಿಐಗೆ ಇನ್ನಷ್ಟು ಸಮಗ್ರತೆಯನ್ನು ತರಲಿದ್ದಾರೆ. ಕಶ್ ಪಟೇಲ್ ಅವರು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ನ ಮುಂದಿನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂಬುದನ್ನು ಪ್ರಕಟಿಸಲು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿದ್ದಾರೆ.

    ಯಾರು ಈ ಕಶ್‌?
    ಕಾಶ್ ಒಬ್ಬ ಪ್ರತಿಭಾವಂತ ವಕೀಲ, ತನಿಖಾಧಿಕಾರಿ ಹಾಗೂ ಅಮೆರಿಕದ ಹೋರಾಟಗಾರ. ಭ್ರಷ್ಟಾಚಾರವನ್ನು ಬಯಲಿಗೆಳೆಯಲು, ನ್ಯಾಯವನ್ನು ರಕ್ಷಿಸಲು ಹಾಗೂ ಅಮೆರಿಕದ ಜನರ ಪರವಾಗಿ ತಮ್ಮ ಜೀವನ ಸವೆಸಿ ಸುದೀರ್ಘ ಹೋರಾಟ ನಡೆಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

    ರಷ್ಯಾದ ಹುಸಿ ಬೆದರಿಕೆ ಅನಾವರಣಗೊಳಿಸುವಲ್ಲಿ ಕಶ್ಯಪ್‌ ಅವರ ಪಾತ್ರ ದೊಡ್ಡದಿದೆ. ಸತ್ಯದ ಪರ ವಕೀಲರಾಗಿ, ಬದ್ಧತೆ ಮತ್ತು ಸಂವಿಧಾನದ ಪರವಾಗಿ ಸದಾ ನಿಂತವರು. ನನ್ನ ಮೊದಲ ಅವಧಿಯಲ್ಲಿ ಕಶ್ ರಕ್ಷಣಾ ವಿಭಾಗದ ಸಿಬ್ಬಂದಿ ಮುಖ್ಯಸ್ಥರಾಗಿ, ರಾಷ್ಟ್ರೀಯ ಗುಪ್ತಚರ ವಿಭಾಗದ ಉಪ ನಿರ್ದೇಶಕರಾಗಿ ಮತ್ತು ಭಯೋತ್ಪಾದೆ ವಿರೋಧಿ ವಿಭಾಗದ ಹಿರಿಯ ನಿರ್ದೇಶಕರಾಗಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಾರೆ ಎಂದು ಟ್ರಂಪ್‌ ಗುಣಗಾನ ಮಾಡಿದ್ದಾರೆ.

    ಬರಾಕ್ ಒಬಾಮಾ ಅವರ ಅವಧಿಯಲ್ಲಿ ನ್ಯಾಯ ವಿಭಾಗದಲ್ಲಿ ಅಲ್ಪಕಾಲ ಸೇವೆ ಸಲ್ಲಿಸಿದ್ದ ಕಶ್ಯಪ್‌ ಅವರು 2 ವರ್ಷಗಳ ಕಾಲ ಡೆವಿನ್ ನ್ಯೂನ್ಸ್, ಆರ್-ಕ್ಲಿಫ್ ಪರ ಹಿರಿಯ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. 2017 ಮತ್ತು 2018ರಲ್ಲಿ ಹೌಸ್ ಇಂಟೆಲಿಜೆನ್ಸ್ ಕಮಿಟಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ, ಎಫ್‌ಬಿಐ ರಷ್ಯಾ ತನಿಖೆಗೆ ನೆರವಾಗಿದ್ದರು.

    44 ವರ್ಷದ ಕಶ್ಯಪ್‌ ಪಟೇಲ್‌ ಪೂರ್ವ ಆಫ್ರಿಕಾದಿಂದ ವಲಸೆ ಬಂದ ಗುಜರಾತಿ ಮೂಲದ ದಂಪತಿಗೆ ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿ ಜನಿಸಿದರು. ಕಾನೂನು ಪದವಿ ಪಡೆದ ನಂತರ ಫ್ಲೋರಿಡಾದಲ್ಲಿ ವಕೀಲರಾಗಿ ಕೆಲಸ ಮಾಡಿದರು, ರಾಜ್ಯ ಮತ್ತು ಫೆಡರಲ್ ನ್ಯಾಯಾಲಯಗಳಲ್ಲಿ ಗ್ರಾಹಕರನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದರು. ನಂತರ ನ್ಯಾಯಾಂಗ ಇಲಾಖೆಯ ಪ್ರಾಸಿಕ್ಯೂಟರ್ ಆಗಿ ಸೇರಿಕೊಂಡರು. ಪೂರ್ವ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ನಡೆಯುತ್ತಿದ್ದ ಅಂತರರಾಷ್ಟ್ರೀಯ ಭಯೋತ್ಪಾದನೆ ಪ್ರಕರಣಗಳನ್ನು ನಿರ್ವಹಿಸಿದ್ದರು.