Tag: Kasargodu

  • ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಮಂಗಳೂರು/ಕಾಸರಗೋಡು: ನಳಿನ್ ಕುಮಾರ್ ಕಟೀಲ್‌ಗೆ (Nalin Kumar Kateel) ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಮಧೂರು ದೇವಸ್ಥಾನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಪ್ರಾರ್ಥಿಸಿದ್ದಾರೆ.

    ಕೇರಳ (Kerala) ರಾಜ್ಯದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ (Madhur Temple) ಬ್ರಹ್ಮಕಲಶೋತ್ಸವದ ಹಿನ್ನೆಲೆ ಡಿಕೆ ಶಿವಕುಮಾರ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನಳಿನ್ ಕುಮಾರ್ ಕಟೀಲ್ ಹಾಗೂ ಡಿಕೆ ಶಿವಕುಮಾರ್ ಒಂದೇ ವೇದಿಕೆಯಲ್ಲಿ ಜೊತೆಯಾಗಿದ್ದರು. ಈ ವೇಳೆ ನಳಿನ್ ಕುಮಾರ್ ಪರ ಡಿಕೆಶಿ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರು| ಗನ್‌ ಹಿಡಿದು ವೀಡಿಯೋ ಹಂಚಿಕೊಂಡ ಯುವಕ – ಸರ್ಕಾರಿ ವಾಹನದಲ್ಲಿ ಕುಳಿತು ಪೋಸ್‌

    ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಿಕೆಶಿ, ನನ್ನ ಮಿತ್ರ, ಮಾಜಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಅವರು ಮಾಜಿ ಅಂದುಕೊಳ್ಳೋದು ಬೇಡ, ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹೀರೋ ಝೀರೋ ಆಗುತ್ತಾನೆ, ಝೀರೋ ಹೀರೋ ಆಗುತ್ತಾನೆ. ನಾನು ಮತ್ತು ನೀವು ಒಂದೇ ವೇದಿಕೆಯಲ್ಲಿ ದೇವರನ್ನ ಪ್ರಾರ್ಥನೆ ಮಾಡಿದ್ದೇವೆ. ಭಗವಂತ ನಿಮ್ಮ ಎಲ್ಲಾ ವಿಘ್ನ ನಿವಾರಣೆ ಮಾಡಿ ಮತ್ತೆ ಈ ರಾಜ್ಯದಲ್ಲಿ ಸೇವೆ ಮಾಡುವ ಅವಕಾಶ ಕೊಡಲಿ. ಮತ್ತೆ ನಿಮಗೆ ಅವಕಾಶ ಸಿಗಲಿ ಅಂತ ನಾನೂ ಕೂಡ ಪ್ರಾರ್ಥನೆ ಮಾಡುತ್ತೇನೆ ಎಂದರು. ಇದನ್ನೂ ಓದಿ: ರಾಮನವಮಿ | 50 ಲಕ್ಷ ಭಕ್ತರಿಂದ ಅಯೋಧ್ಯೆ ಶ್ರೀರಾಮನ ದರ್ಶನ ಸಾಧ್ಯತೆ

  • Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ

    Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ

    ಮಡಿಕೇರಿ: ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ ಕಾರ್ಯವನ್ನು (Dafan Ritual) ಕುಟುಂಬಸ್ಥರು ನೇರವೇರಿಸಿರುವ ಅಪರೂಪದ ಘಟನೆಯೊಂದು ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ.

    ಕೊಲೆಯಾದ ಬರೋಬ್ಬರಿ 18 ವರ್ಷಗಳ ಬಳಿಕ ಕೊಡಗಿನ ಅಯ್ಯಂಗೇರಿಯ ಬಾಲಕಿಯ ದಫನ ಕಾರ್ಯ ಸೋಮವಾರ ನಡೆದಿದೆ. ಡಿಸೆಂಬರ್ 2006ರಲ್ಲಿ ಸಫಿಯಾ ಎಂಬ ಅಯ್ಯಂಗೇರಿಯ 13 ವರ್ಷದ ಬಾಲಕಿಯ ಕೊಲೆ ನಡೆದಿತ್ತು. ಜೂನ್ 5, 2008ರಂದು ಆಕೆಯ ತಲೆಬುರುಡೆ ಮತ್ತು ಕೆಲವು ಮೂಳೆಯ ತುಣುಕುಗಳು ಪತ್ತೆಯಾಗಿತ್ತು. ಅದನ್ನು ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಇರಿಸಲಾಗಿತ್ತು. ಸೋಮವಾರ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಫಿಯಾಳ ಅಸ್ಥಿಪಂಜರವನ್ನು ಆಕೆಯ ಪೋಷಕರಿಗೆ ಹಸ್ತಾಂತರಿಸಲಾಯಿತು. ಬಳಿಕ ಪೋಷಕರು, ಅಯ್ಯಂಗೇರಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ದಫನ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: ಭಾರತ ಬರಲಿ, ಬಾರದೇ ಇರಲಿ ನಾವು ಚಾಂಪಿಯನ್ಸ್‌ ಟ್ರೋಫಿ ಆಯೋಜಿಸುತ್ತೇವೆ: ಪಾಕಿಸ್ತಾನ

    ಪ್ರಕರಣದ ಹಿನ್ನೆಲೆ:
    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ 13 ವರ್ಷದ ಬಾಲಕಿ ಸಫಿಯಾಳನ್ನು ಕಾಸರಗೋಡಿನ ಮುಲಿಯಾರ್ ಮಸ್ತಿಕುಂದ್‌ನ ಸಿವಿಲ್ ಕಾಂಟ್ರಾಕ್ಟರ್ ಕೆ.ಸಿ ಹಂಝ ಮತ್ತು ಮೈಮೂನ ದಂಪತಿ 2006ರಲ್ಲಿ ಮನೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಳಿಕ ಉದ್ಯೋಗ ನಿಮಿತ್ತ ಹಂಝ ದಂಪತಿ ಗೋವಾಕ್ಕೆ ಶಿಫ್ಟ್ ಆಗಿದ್ದರು. ಈ ವೇಳೆ ಸಫಿಯಾಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದರು. ಇದನ್ನೂ ಓದಿ: ಗೋಕಾಕ್‌ ಜಿಲ್ಲೆಗೆ ಆಗ್ರಹಿಸಿ ನಿರಂತರ ಹೋರಾಟ : ಶ್ರೀ ಮುರುಘರಾಜೇಂದ್ರ ಸ್ವಾಮೀಜಿ

    ಕೆಲ ತಿಂಗಳ ಬಳಿಕ ಸಫಿಯಾಳನ್ನು ಕಾಸರಗೋಡಿಗೆ ಕರೆದುಕೊಂಡು ಬರುತ್ತೇನೆ ಎಂದು ಹಂಝ ಬಾಲಕಿಯ ತಂದೆ ಮೊಯ್ದು ಅವರಿಗೆ ತಿಳಿಸಿದ್ದರು. ಮಗಳನ್ನು ಬರಮಾಡಿಕೊಳ್ಳಲು ಆಕೆಯ ಇಷ್ಟದ ನೆಲ್ಲಿಕಾಯಿಯ ಜೊತೆ ಮೊಯ್ದು ಅವರು ಕಾಸರಗೋಡಿಗೆ ತೆರಳಿದಾಗ, ಸಫಿಯಾ ಕಾಣೆಯಾಗಿದ್ದಾಳೆ ಎಂದು ಹಂಝ ಹೇಳಿದ್ದರು. ಬಳಿಕ ಬಾಲಕಿಯ ತಂದೆ ಮತ್ತು ಹಂಝ ಜೊತೆಯಾಗಿ ಆದೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ KSRTC ಗುಡ್‌ನ್ಯೂಸ್ – ಮೊದಲ ಬಾರಿಗೆ ಶಬರಿಮಲೆಗೆ ವೋಲ್ವೋ ಬಸ್ ಸಂಚಾರ

    ಪೊಲೀಸರು ಒಂದು ವರ್ಷಗಳ ಕಾಲ ಪ್ರಕರಣದ ತನಿಖೆ ನಡೆಸಿದ್ದರು, ಸಫಿಯಾಳಿಗಾಗಿ ಹುಡುಕಾಡಿದ್ದರು. ಆದರೆ ಆಕೆ ಪತ್ತೆಯಾಗಿರಲಿಲ್ಲ. ಈ ನಡುವೆ ಸಫಿಯಾ ಕ್ರಿಯಾ ಸಮಿತಿಯೊಂದನ್ನು ರಚಿಸಲಾಗಿತ್ತು. ಸಫಿಯಾಳ ತಾಯಿ ತನ್ನ ಮಗಳಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಕೇರಳದ ಕಾಸರಗೋಡು ಪಟ್ಟಣದಲ್ಲಿ 90 ದಿನಗಳ ಪ್ರತಿಭಟನೆಯನ್ನು ನಡೆಸಿದ್ದರು. ಒಂದೂವರೆ ವರ್ಷಗಳ ನಂತರ ಕೇರಳ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡು ಸಫಿಯಾಳ ನಾಪತ್ತೆ ನಿಗೂಢವನ್ನು ಭೇದಿಸಿತ್ತು. ಇದನ್ನೂ ಓದಿ: ರಝಾಕರ್‌ಗಳಿಂದಲೇ ಖರ್ಗೆ ತಾಯಿ, ಸಹೋದರಿಯ ಹತ್ಯೆಯಾದರೂ ಮುಸ್ಲಿಮರ ಮತಕ್ಕಾಗಿ ಬಾಯಿ ಬಿಡುತ್ತಿಲ್ಲ: ಯೋಗಿ ತಿರುಗೇಟು

    ಕ್ರೈ ಬ್ರಾಂಚ್ ತನಿಖೆಯಲ್ಲಿ ಸಫಿಯಾಳನ್ನು ಆಕೆ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕ ಹಂಝ ಕೊಲೆ ಮಾಡಿರುವುದು ಬಯಲಾಗಿತ್ತು. ಹಂಝ ಅವರ ಮನೆಯಲ್ಲಿ ಕೆಲಸ ಮಾಡುವಾಗ ಬಿಸಿ ಗಂಜಿ ಸಫಿಯಾಳ ಮೈಮೇಲೆ ಬಿದ್ದಿತ್ತು. ಇದರಿಂದ ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಸಫಿಯಾಳನ್ನು, ಹಂಝ ಕ್ರೂರವಾಗಿ ಹತ್ಯೆ ಮಾಡಿ, ದೇಹವನ್ನು ತುಂಡರಿಸಿ ನಂತರ ಗೋವಾದ ಅಣೆಕಟ್ಟೆಯೊಂದರ ಬಳಿ ಹೂತಿದ್ದ ಎಂಬುದು ತನಿಖೆಯ ವೇಳೆ ಬಯಲಾಗಿದೆ. ಇದನ್ನೂ ಓದಿ: ಮದ್ಯದಲ್ಲಿ ಮತ್ತು ಬರಿಸುವ ಔಷಧಿ ಬೆರೆಸಿ ಮನೆಯಿಂದ 1.5 ಕೋಟಿ ದೋಚಿದ್ದ ದಂಪತಿ

    ಇನ್ನೂ ಮನೆ ಕೆಲಸ ಮಾಡುವಾಗ ಸಫಿಯಾ ಸುಟ್ಟ ಗಾಯಕ್ಕೆ ಒಳಗಾಗಿದ್ದಳು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು, ಆಕೆಯನ್ನು ಯಾರಾದರು ನೋಡಿದರೆ ಮನೆಯಲ್ಲಿ ಹಿಂಸಿಸಲಾಗಿದೆ ಅಂದುಕೊಳ್ಳುತ್ತಾರೆ. ಬಾಲ ಕಾರ್ಮಿಕ ಕೇಸ್ ಬೀಳುತ್ತದೆ ಎಂದು ಯೋಚಿಸಿದ ಹಂಝ, ಆಕೆಯನ್ನು ಕೊಲೆ ಮಾಡಿದ್ದ. ಇದನ್ನೂ ಓದಿ: ಚೀನಾದಲ್ಲಿ ಕಾರು ಚಾಲಕನ ಹುಚ್ಚಾಟಕ್ಕೆ 35 ಬಲಿ, 43 ಮಂದಿಗೆ ಗಾಯ

    ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ 2008ರಲ್ಲಿ ಹಂಝನನ್ನು ಬಂಧಿಸಲಾಗಿತ್ತು. ಜುಲೈ, 2015ರಲ್ಲಿ ಕಾಸರಗೋಡು ಸೆಷನ್ ನ್ಯಾಯಾಲಯ ಹಂಝಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಬಳಿಕ 2019ರಲ್ಲಿ ಕೇರಳ ಹೈಕೋರ್ಟ್ ಶಿಕ್ಷೆಯನ್ನು ಜೀವಾವಧಿಗೆ ಇಳಿಸಿತ್ತು. ಇದನ್ನೂ ಓದಿ: ಜಾರ್ಖಂಡ್ ವಿಧಾನಸಭೆಗೆ ನಾಳೆ ಮೊದಲ ಹಂತದ ಚುನಾವಣೆ – 15 ಜಿಲ್ಲೆಗಳ 42 ಸ್ಥಾನಗಳಿಗೆ ಮತದಾನ

    ಕೊಲೆ ಅಪರಾಧಿ ಹಂಝಗೆ ಶಿಕ್ಷೆಯಾದರೂ, ಸಫಿಯಾಳ ಅಸ್ತಿಪಂಜರ ಕಾಸರಗೋಡು ನ್ಯಾಯಾಲಯದಲ್ಲೇ ಉಳಿದಿತ್ತು. ಅದನ್ನು ಇಸ್ಲಾಂ ಧರ್ಮದ ಪ್ರಕಾರ ದಫನ ಮಾಡಲು ಅವಕಾಶ ಮಾಡಿಕೊಡುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ ಶುಕೂರ್ ಮೂಲಕ ಪೋಷಕರು ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ ನ್ಯಾಯಾಧೀಶ ಸಾನು ಎಸ್ ಪಣಿಕ್ಕರ್ ಅವರು ಅಸ್ತಿ ಪಂಜರ ಹಸ್ತಾಂತರಕ್ಕೆ ಆದೇಶಿಸಿದ್ದರು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಆರೋಪಿ ಸಾವು ಕೇಸ್ – ಸಬ್ ಇನ್‌ಸ್ಪೆಕ್ಟರ್, ಹೆಡ್ ಕಾನ್‌ಸ್ಟೇಬಲ್ ಅಮಾನತು

    ನ್ಯಾಯಾಲಯದಿಂದ ಪೋಷಕರಿಗೆ ಹಸ್ತಾಂತರಿಸಿದ ಸಫಿಯಾಳ ಅಸ್ತಿ ಪಂಜವರನ್ನು ಕಾಸರಗೋಡಿನ ಮುಹಿಮ್ಮಾತ್‌ನಲ್ಲಿ ಶುದ್ದಿಗೊಳಿಸಿ (ಸ್ನಾನ) ಬಳಿಕ ಅಯ್ಯಂಗೇರಿ ಮಸೀದಿಯಲ್ಲಿ ಸೋಮವಾರ ರಾತ್ರಿ ದಫನ ಮಾಡಲಾಗಿದೆ. ಈ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ. ಇದನ್ನೂ ಓದಿ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಸ್? – ಹೈಕಮಾಂಡ್‌ ಲಾಬಿಗೆ ಮಣಿದ್ರಾ ಡಿಕೆಶಿ?

  • ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ  ಕರಣ್ ಆಚಾರ್ಯ ಪ್ರತಿಕ್ರಿಯೆ

    ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

    ಬೆಂಗಳೂರು: ವಾಹನಗಳ ಮೇಲೆ ಹೆಚ್ಚು ರಾರಾಜಿಸುತ್ತಿರುವ ಹನುಮಾನ್ ಚಿತ್ರವನ್ನು ರಚಿಸಿರುವ ಕರಣ್ ಆಚಾರ್ಯ ಪ್ರಧಾನಿ ನರೇಂದ್ರ ಮೋದಿ ಹೊಗಳಿಕೆಗೆ ಧನ್ಯವಾದ ತಿಳಿಸಿ, ಇದು ತನ್ನ ಜೀವನದ ಶ್ರೇಷ್ಠ ಸಾಧನೆ ಎಂದು ಹೇಳಿದ್ದಾರೆ.

    ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ಪ್ರಚಾರ ಭಾಷಣದಲ್ಲಿ ಹನುಮಾನ್ ಚಿತ್ರ ರಚಿಸಿದ್ದ ಕರಣ್ ಆಚಾರ್ಯ ಅವರ ಹೆಸರನ್ನು ಪ್ರಸ್ತಾಪಿಸಿ ಹೊಗಳಿದ್ದರು. ಮಂಗಳೂರಿನ ಯುವಕನ ಈ ಸಾಧನೆಗೆ ದೇಶದ ಹಲವು ಮಾಧ್ಯಮಗಳು ಸಂದರ್ಶನಕ್ಕಾಗಿ ಕಾದು ನಿಂತಿದ್ದರು. ಇದು ಪ್ರಶಂಸನಿಯ ಸಾಧನೆ ಎಂದು ತಿಳಿಸಿದ್ದರು. ಅಲ್ಲದೇ ಟ್ವಿಟ್ಟರ್ ನಲ್ಲಿ ಹನುಮಾನ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

    ಈ ವಿಡಿಯೋವನ್ನು ನೋಡಿದ ಕರಣ್, ಪ್ರಧಾನಿ ಮೋದಿ ಅವರು ನನ್ನ ಹೆಸರನ್ನು ಹೇಳಿ ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.

    ಮೂಲತಃ ಕಾಸಗೋಡು ಜಿಲ್ಲೆಯ ಕರಣ್ ಮಾಧ್ಯಮವೊಂದರ ಜೊತೆ ಮಾತನಾಡಿ ಹರ್ಷವ್ಯಕ್ತ ಪಡಿಸಿದ್ದಾರೆ. ನನ್ನ ಸ್ನೇಹಿತರು ಅಂದು ಪದೇ ಪದೇ ಕರೆ ಮಾಡುತ್ತಿದ್ದರು. ಈ ವೇಳೆ ತನಗೆ ವಿಷಯ ತಿಳಿದಿರಲಿಲ್ಲ. ಬಳಿಕ ವಿಡಿಯೋ ನೋಡಿ ಮೇಲೆ ತನಗೆ ಈ ಬಗ್ಗೆ ತಿಳಿಯಿತು. ಇದು ನನ್ನ ಜೀವನದ ಶ್ರೇಷ್ಠ ಸಾಧನೆ ಎಂದು ತಿಳಿಸಿದ್ದಾರೆ.

    ಅಲ್ಲದೇ ಹನುಮಾನ್ ಚಿತ್ರ ರಚನೆ ಮಾಡಿದ್ದ ಕುರಿತ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಗೆಳೆಯರು ಗಣೇಶ್ ಚರ್ತುಥಿಯ ಅಂಗವಾಗಿ ಧ್ವಜದ ಚಿತ್ರ ಬಿಡಿಸುವಂತೆ ಕೋರಿದ್ದರು. ಅದು ಇದುವರೆಗಿನ ಎಲ್ಲಾ ಧ್ವಜಗಳಿಗಿಂತ ಭಿನ್ನವಾಗಿರುವಂತೆ ರಚಿಸಲು ಒತ್ತಡ ಹಾಕಿದ್ದರು. ಎಲ್ಲರಿಗಿಂತ ಭಿನ್ನವಾದ ಚಿತ್ರ ಬಿಡಿಸಲು ನಿರ್ಧರಿಸಿದ ವೇಳೆ ನಾನು ಹನುಮಾನ್ ಚಿತ್ರ ಬಿಡಿಸಲು ಪ್ರಾರಂಭಿಸಿದೆ. ಗೂಗಲ್ ನಲ್ಲಿ ಹಲವು ಆಂಜನೇಯನ ಚಿತ್ರಗಳನನ್ನು ನೋಡಿದ ಬಳಿಕ ಹೊಸ ಚಿತ್ರದ ರಚನೆ ಮಾಡಿದೆ. ಅದ್ದರಿಂದ ತಾನು ಕೇಸರಿ ಬಣ್ಣವನ್ನು ಮಾತ್ರ ಬಳಕೆ ಮಾಡಿದೆ. ಈ ಚಿತ್ರ ಕೇವಲ ಅರ್ಧ ಗಂಟೆಯಲ್ಲೇ ರಚನೆ ಮಾಡಿದೆ ಎಂದು ವಿವರಿಸಿದರು.

    ಕೇಸರಿ ಬಣ್ಣವನ್ನು ನಾನು ದೇವರ ಸಂಕೇತವಾಗಿ ಬಳಕೆ ಮಾಡಿದ್ದೇನೆ, ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವಾಗಿ ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಈ ಚಿತ್ರವನ್ನು ರಚನೆ ಮಾಡಿ ಮೂರು ವರ್ಷ ಕಳೆದಿದ್ದು ಎಲ್ಲೆಡೆ ವೈರಲ್ ಆಗಿದೆ. ಇದಕ್ಕಿಂತ ಹೆಚ್ಚಿನ ಕೊಡುಗೆ ಚಿತ್ರಕಾರನಿಗೆ ಸಿಗಲು ಸಾಧ್ಯವಿಲ್ಲ. ಯಾವುದೇ ಕಾರಿನ ಹಿಂಭಾಗ ನೋಡಿದರೂ ಈ ಚಿತ್ರ ಅತೀ ಹೆಚ್ಚು ಕಾಣಿಸಿಕೊಳ್ಳುತ್ತದೆ. ತನ್ನ ಈ ಸಾಧನೆಗೆ ಪೋಷಕರು ನೀಡಿದ ಬೆಂಬಲವೇ ಪ್ರಮುಖ ಕಾರಣ ಎಂದು ತಿಳಿಸಿದರು.  ಇದನ್ನು ಓದಿ: ಆಂಜನೇಯನ ಭಾವಚಿತ್ರ ಹಾಕಿಕೊಂಡ ಕ್ಯಾಬ್‍ನವರು ರೇಪಿಸ್ಟ್ ಗಳು, ಅವುಗಳಲ್ಲಿ ಪ್ರಯಾಣಿಸಬೇಡಿ : ರಶ್ಮಿ ನಾಯರ್

  • ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ‘ಓಖಿ’ಯಬ್ಬರಕ್ಕೆ ನೋಡನೋಡ್ತಿದ್ದಂತೆ ಕುಸಿದು ಬಿತ್ತು ಕಡಲ ಕಿನಾರೆಯಲ್ಲಿದ್ದ ಮನೆ!

    ಮಂಗಳೂರು: ಓಖಿ ಚಂಡಮಾರುತ ಎಫೆಕ್ಟ್ ರಾಜ್ಯದ ಕರಾವಳಿ ಭಾಗದಲ್ಲೂ ಬೀರತೊಡಗಿದೆ. ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲಿನ ಅಬ್ಬರ ಜೋರಾಗಿದೆ. ಮಂಗಳೂರಿಗೆ ಹೊಂದಿಕೊಂಡಂತೆ ಇರುವ ಕೇರಳದ ಕಾಸರಗೋಡು ತೀರ ಪ್ರದೇಶದ ಮನೆಗಳು ನೀರು ಪಾಲಾಗುತ್ತಿದೆ.

    ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಕಡಪ್ಪರ, ಉಪ್ಪಳ ಬಳಿಯ ಕೊಯಿಪಾಡಿ ಎಂಬಲ್ಲಿ ಆರು ಮನೆಗಳು ಸಮುದ್ರ ಪಾಲಾಗಿವೆ. ಅಲ್ಲಿದ್ದ ನಿವಾಸಿಗಳನ್ನು ಮೊದಲೇ ಸ್ಥಳಾಂತರ ಮಾಡಿದ್ದರಿಂದ ಜೀವ ಹಾನಿ ತಪ್ಪಿದೆ. ಮಂಜೇಶ್ವರದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಆಗುತ್ತಿದ್ದು ಬ್ರೇಕ್ ವಾಟರ್ ಅವೈಜ್ಞಾನಿಕ ವಾಗಿ ನಿರ್ಮಿಸಿದ್ದರಿಂದ ಕೆಲವು ಪ್ರದೇಶಗಳಲ್ಲಿ ಸಮುದ್ರದ ತೀವ್ರತೆ ಹೆಚ್ಚಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ.

     

    ಮಂಜೇಶ್ವರದ ಕಡಲ ಕಿನಾರೆ (ಕಡಪ್ಪರ) ಯಲ್ಲಿ ಮನೆಯೊಂದು ನೋಡ ನೋಡುತ್ತಲೇ ಸಮುದ್ರಕ್ಕೆ ಬಿದ್ದು ನೀರುಪಾಲಾಗುತ್ತಿರುವ ದೃಶ್ಯ ಮನ ಕಲಕುವಂತಿತ್ತು. ಸಮುದ್ರ ರಫ್ ಅಗಿದ್ದರಿಂದ ಶನಿವಾರ ಸಂಜೆಯಿಂದಲೇ ಕಡಲ್ಕೊರೆತ ಆರಂಭವಾಗಿತ್ತು. ಇದರಿಂದಾಗಿ ಮನೆಯ ಅಡಿಪಾಯಕ್ಕಿಂತಲೂ ಕೆಳಗಿದ್ದ ಮರಳು ಕಡಲಿನ ಅಲೆಯಲ್ಲಿ ಕೊಚ್ಚಿ ಹೋಗಿತ್ತು. ಹೀಗೆ ಸುಮಾರು ಒಂದೂವರೆ ನಿಮಿಷಗಳ ಬಳಿಕ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

    ಈ ನಡುವೆ ಕೇರಳದ ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಕಾಣಿಸಿದರೂ ಕೆಲವು ಮೀನುಗಾರರು ಅಲೆಯನ್ನು ಎದುರು ಹಾಕಿಕೊಂಡು ಬೋಟ್ ತೆಗೆದುಕೊಂಡು ಹೋಗಲು ಶ್ರಮಿಸಿದ್ದಾರೆ. ಈ ವೇಳೆ ಒಂದು ಬೋಟ್ ಯಶಸ್ವಿಯಾಗಿ ಅಲೆ ದಾಟಿದರೂ ಇನ್ನೊಂದು ಬೋಟ್ ಇದರಲ್ಲಿ ಸಫಲತೆ ಕಾಣಲಿಲ್ಲ. ಇದರ ಪರಿಣಾಮವಾಗಿ ಬೋಟ್ ಸುಮಾರು 2 ನಿಮಿಷಗಳ ಕಾಲ ಅಲೆಗಳ ನಡುವೆ ಸಿಲುಕಿತ್ತು. ಎರಡು ಬಾರಿ ಕಡಲಿನಲ್ಲೇ ಬೋಟ್ ಮುಳುಗುತ್ತೆ ಎನ್ನಿಸಿದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಲಿಲ್ಲ. ಕೊನೆಗೆ ಭಾರಿ ಗಾತ್ರದ ಅಲೆಯೊಂದು ಬೋಟನ್ನು ಕಡಲ ಕಿನಾರೆಗೆ ನೂಕಿದ ವೇಳೆ ಬೋಟ್ ಪಲ್ಟಿಯಾಯಿತು. ಆದರೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

    https://www.youtube.com/watch?v=IskPbU9PesM

    https://www.youtube.com/watch?v=ampmtdoQElk

    https://www.youtube.com/watch?v=QC37Q2pdg9w

    ಇದನ್ನೂ ಓದಿ: ಓಖಿ ಚಂಡಮಾರುತದ ಅಬ್ಬರ- ಮಂಗಳೂರಲ್ಲಿ 4 ಮಿನಿ ಹಡಗು ಮುಳುಗಿ 8 ಮಂದಿ ಕಣ್ಮರೆ

     

  • ಕಾಸರಗೋಡಿನಲ್ಲಿ ಕೊಡಗು ಮೂಲದ ಮದರಸಾ ಶಿಕ್ಷಕ ಕೊಲೆ

    ಕಾಸರಗೋಡಿನಲ್ಲಿ ಕೊಡಗು ಮೂಲದ ಮದರಸಾ ಶಿಕ್ಷಕ ಕೊಲೆ

    ಕಣ್ಣೂರು: ಕಾಸರಗೋಡಿನ ಸ್ಥಳೀಯ ಮಸೀದಿಗೆ ಹೊಂದಿಕೊಂಡಿರುವ ರೂಮಿನಲ್ಲಿ ಮಡಿಕೇರಿಯ ಕೊಡಗು ಮೂಲದ ಶಿಕ್ಷಕರೊಬ್ಬರು ಬರ್ಬರ ಕೊಲೆಯಾದ್ದಾರೆ. ಸೋಮವಾರ ರಾತ್ರಿ ಕೊಲೆ ನಡೆದಿದ್ದು, ಮಂಗಳವಾರ ಮುಂಜಾನೆ ಬೆಳಕಿಗೆ ಬಂದಿದೆ.

    ಕೊಡಗು ಮೂಲದ ರಿಯಾಜ್(34) ಕೊಲೆಯಾದ ಶಿಕ್ಷಕ. ಕಳೆದ 9 ವರ್ಷಗಳಿಂದ ಇಲ್ಲಿನ ಮದರಸಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಇವರು, ಇಲ್ಲಿನ ಮುಹಾಯುದ್ದೀನ್ ಜುಮಾ ಮಸೀದಿಗೆ ಹೊಂದಿಕೊಂಡಿರುವ ಕೊಠಡಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

    ನಡೆದಿದ್ದೇನು?: ಮಧ್ಯರಾತ್ರಿ ಕೊಠಡಿಯೊಳಗಿಂದ ಜೋರಾಗಿ ಕಿರುಚಾಡೋ ಶಬ್ದ ಕೇಳಿಸಿತ್ತು. ಅಂತೆಯೇ ಏನಾಯ್ತು ಎಂದು ಬಾಗಿಲು ತೆರೆದು ನೋಡುವಷ್ಟರಲ್ಲಿ ಕೊಠಡಿಯ ಮೇಲೆ ಯದ್ವಾತದ್ವವಾಗಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸುತ್ತಿದ್ದರು. ಕೂಡಲೇ ಬಾಗಿಲು ಹಾಕಿಕೊಂಡು ಇನ್ನೊಂದು ಬಾಗಿಲಿನ ಮೂಲಕ ಮಸೀದಿಯೊಳಗಡೆ ಹೋಗಿ ಅಲ್ಲಿರುವ ಮಂದಿಯ ಜೊತೆ ಹೇಳಿದೆ. ತಕ್ಷಣವೇ ಎಲ್ಲರೂ ಶಬ್ದ ಕೇಳಿದ ಕೊಠಡಿಯೊಳಗೆ ಹೋಗಿ ನೋಡಿದಾಗ ರಿಯಾಜ್ ಕುತ್ತಿಗೆಗೆ ಕಡಿದ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದ್ರೆ ದಾರಿ ಮಧ್ಯೆದಲ್ಲಿ ಸಾವನಪ್ಪಿದ್ದಾರೆ ಅಂತಾ ರಿಯಾಜ್ ಪಕ್ಕದ ಕೊಠಡಿಯ ವ್ಯಕ್ತಿ ಮಾಹಿತಿ ನೀಡಿದ್ದಾರೆ.

    ಹರತಾಳ ಜಾರಿಗೆ: ಸದ್ಯ ರಿಯಾಜ್ ಹತ್ಯೆ ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹರತಾಳಕ್ಕೆ ಕರೆ ನೀಡಲಾಗಿದೆ. ಇನ್ನು ಪೊಲೀಸರ ಸಹಾಯದಿಂದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಅಂತಾ ಕಾಸರಗೋಡು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಘಟನೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಿದ್ದು, ಅರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.