Tag: Karwar Shipyard

  • ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ – ಕಾರವಾರ ಕದಂಬ ನೌಕಾ ನೆಲೆಯಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ನೌಕೆಗಳು

    ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ – ಕಾರವಾರ ಕದಂಬ ನೌಕಾ ನೆಲೆಯಲ್ಲಿ ಯುದ್ಧಕ್ಕೆ ಸಜ್ಜಾಗುತ್ತಿರುವ ನೌಕೆಗಳು

    ಕಾರವಾರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಹಿಂದೂಗಳ ಹತ್ಯೆ ಬೆನ್ನಲ್ಲೇ ಕೇಂದ್ರ ಸರ್ಕಾರ ಮಿಲಿಟರಿ ಆಪರೇಷನ್‌ಗೆ ಸಿದ್ಧತೆ ಮಾಡಿಕೊಂಡಿದೆ.

    ಕಾರವಾರದ ಕದಂಬ ನೌಕಾ ನೆಲೆಯಲ್ಲಿ (Karwar Kadamba Naval Base) ಹೈಯಸ್ಟ್ ಸ್ಟೇಟ್ ಆಫ್ ರೆಡಿನಸ್ ಅಲರ್ಟ್‌ (ರೆಡ್ ಅಲರ್ಟ್‌) ನೀಡಲಾಗಿದ್ದು, ನೌಕಾ ನೆಲೆ ಸಿಬ್ಬಂದಿಗಳಿಗೆ ರಜೆಯನ್ನು ಮೊಟಕುಗೊಳಿಸಲಾಗಿದೆ. ಯುದ್ಧ ಹಡಗುಗಳು ಹಾಗೂ ಸಬ್ ಮೆರಿನ್‌ಗಳು ಪಾಕಿಸ್ತಾನದ ಗಡಿಗೆ ತೆರಳಲು ಸಿದ್ಧವಾಗಿವೆ. ಕಾರವಾರ ನೌಕಾ ನೆಲೆಯಲ್ಲಿ ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಶಾಕ ಪಟ್ಟಣಮ್ ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಸಿದ್ಧವಾಗಿವೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ

    ಅರಬ್ಬೀ ಸಮುದ್ರದ ಮೂಲಕ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಡಿಗೆ ತೆರಳಲು ಸನ್ನದ್ಧವಾಗಿದ್ದು, ಫ್ಲಾಗ್ ಆಫೀಸರ್‌ಗಳ ಸೂಚನೆಗೆ ಕಾಯುತ್ತಿವೆ. ಇನ್ನು ಕಾರವಾರ ಕದಂಬ ನೌಕಾನೆಲೆಯೇ ಬೇಸ್ ಮಾಡಿಕೊಂಡಿರುವ ವಿಶ್ವದ ಅತೀ ದೊಡ್ಡ ಏರ್ ಕ್ರಾಪ್ಟ ನೌಕೆ ಎಂಬ ಹೆಸರು ಪಡೆದಿರುವ ಐಎನ್‌ಎಸ್ ವಿಕ್ರಮಾದಿತ್ಯ ಹಡಗು ಕೊಚ್ಚಿಯ ರಿಪೇರಿ ಯಾರ್ಡ್‌ನಲ್ಲಿದ್ದು ಯದ್ಧಕ್ಕೆ ತೆರಳಲು ಸಿದ್ಧಪಡಿಸಲಾಗುತ್ತಿದೆ. ಮೇ ಮೊದಲ ವಾರದಲ್ಲಿ ಅರಬ್ಬೀ ಸಮುದ್ರದ ಗಡಿಗೆ ತೆರಳಲಿದೆ.

    ಸದ್ಯ ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐಎನ್‌ಎಸ್ ಸುಭದ್ರ, ಐಎನ್‌ಎಸ್ ಜ್ಯೋತಿ, ಐಎನ್‌ಎಸ್ ವಿಶಾಕಪಟ್ಟಣಂ, ಸಬ್ ಮೆರಿನ್‌ಗಳಾದ ಕಾಂಡೇರಿ, ಕರಂಜ್‌ಗಳು ಅರಬ್ಬೀ ಸಮುದ್ರದ ಪಂಜಾಬ್ ಪ್ರಾಂತ್ಯದ ಗಡಿ ಭಾಗಕ್ಕೆ ತೆರಳಲು ಅಣಿಯಾಗಿದೆ. ಇದನ್ನೂ ಓದಿ: ನಮ್ಮ ಧರ್ಮ ಯಾರನ್ನ ಕೊಲ್ಲಲೂ ಅನುಮತಿಸಲ್ಲ – ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಸ್ಲಿಮರ ಒತ್ತಾಯ

  • ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡ ಕಾರವಾರದ ನೌಕಾ ನೆಲೆಯ ಎಂಜಿನಿಯರ್

    ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕಗೊಂಡ ಕಾರವಾರದ ನೌಕಾ ನೆಲೆಯ ಎಂಜಿನಿಯರ್

    ನವದೆಹಲಿ: ಕಾರವಾರದ ನೌಕಾ ನೆಲೆಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಲೆಫ್ಟಿನೆಂಟ್ ಕಮಾಂಡರ್ ಕರಾಬಿ ಗೊಗೋಯ್ ಅವರನ್ನು ನೌಕಾಪಡೆಯ ಮೊದಲ ರಕ್ಷಣಾ ಸಲಹೆಗಾರ್ತಿಯಾಗಿ ನೇಮಕ ಮಾಡಲಾಗಿದೆ.

    ಸೆಪ್ಟೆಂಬರ್‍ನಲ್ಲಿ ಭಾರತೀಯ ವಾಯುಪಡೆ (ಐಎಎಫ್) ಮಾಸ್ಕೋ ದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ವಿಂಗ್ ಕಮಾಂಡರ್ ಅಂಜಲಿ ಸಿಂಗ್‍ರನ್ನು ಉಪ ರಕ್ಷಣಾ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು. ಮುಂದಿನ ತಿಂಗಳು ಕರಾಬಿ ಗೊಗೋಯ್ ಎಲ್ಲಾ ವಿಭಾಗಗಳಿಂದ ಅನುಮೋದನೆ ಪಡೆದ ಬಳಿಕ ಅವರು ಮಾಸ್ಕೋದ ಅದೇ ರಾಯಭಾರ ಕಚೇರಿಯಲ್ಲಿ ಹೊಸ ರಕ್ಷಣಾ ಸಲಹೆಗಾರ್ತಿಯಾಗಿ ನಿರ್ವಹಿಸಲಿದ್ದಾರೆ. ಅದಕ್ಕಿಂತ ಮೊದಲು ಅವರು ರಷ್ಯನ್ ಭಾಷೆ ಕೋರ್ಸ್ ಮುಗಿಸಲಿಸಿದ್ದಾರೆ.

    ಅಸ್ಸಾಂ ಮೂಲದ ಗುವಾಹಟಿಯವರಾಗಿರುವ ಕರಾಬಿ ಗೊಗೋಯ್ ಅವರು 2010ರಲ್ಲಿ ನೌಕಾಪಡೆಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಅವರ ಕಾರವಾರದ ನೌಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತಿ ಲೆ.ಕ. ಪ್ರಾಂಜಲ್ ಹಾಂಡಿಕ್ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದಾರೆ. ಹಿರಿಯ ಅಧಿಕಾರಿಗಳು ನಡೆಸಿದ ಸಂದರ್ಶನ ಮತ್ತು ಇತರ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಗೊಗೋಯ್‍ರನ್ನು ಹೊಸ ಹುದ್ದೆಗೆ ಆಯ್ಕೆ ಮಾಡಲಾಗಿದೆ.

    ನೌಕಾಪಡೆಯಲ್ಲಿ ಗೊಗೋಯ್ ಹೊಂದಿರುವ ಲೆಫ್ಟಿನೆಂಟ್ ಕಮಾಂಡರ್ ಭೂಸೇನೆಯ ಮೇಜರ್ ಶ್ರೇಣಿಗೆ ಸಮನಾಗಿದೆ. ಅಮೆರಿಕ, ಯುನೈಟೆಡ್ ಕಿಂಗ್‍ಡಮ್ ಮತ್ತು ರಷ್ಯಾಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳಲ್ಲಿ 100ಕ್ಕೂ ಹೆಚ್ಚು ರಕ್ಷಣಾ ಸಲಹೆಗಾರರು ಇದ್ದಾರೆ. ಈ ಹುದ್ದೆಗಳಲ್ಲಿರುವವರು ಆತಿಥೇಯ ರಾಷ್ಟ್ರಗಳ ಸೇನೆಯ ಪ್ರಮುಖ ವಿಭಾಗಗಳ ಜತೆಗೆ ಭದ್ರತೆ, ಮಿಲಿಟರಿ ತಂತ್ರಜ್ಞಾನ ಸಂಬಂಧಿಸಿದಂತೆ ಅಧ್ಯಯನ ನಡೆಸುತ್ತಿದ್ದಾರೆ.