Tag: Karunya Ram

  • ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

    `ಬಿಗ್ ಬಾಸ್’ ಖ್ಯಾತಿಯ ಚೆಲುವೆ ಕಾರುಣ್ಯಾ ರಾಮ್ ಅವರು, ಹೊಸ ಮನೆ ಮಾಡಿದ ಖುಷಿಯಲ್ಲಿದ್ದಾರೆ. ನೂತನ ಗೃಹ ಪ್ರವೇಶದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾ, ಕಿರುತೆರೆಯ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

    ಸದ್ಯ ವಜ್ರಕಾಯದ ಬೆಡಗಿ ಕಾರುಣ್ಯ `ಮನೆ ಮಾರಾಟಕ್ಕಿದೆ’, `ರೆಮೋ’, `ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿಯೂ ಕಾರುಣ್ಯಾ ರಾಮ್ ನಟಿಸುತ್ತಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ -4 ಸೇರಿ ಡ್ಯಾನ್ಸ್ ರಿಯಾಲಿಟಿ ಶೋ ಜೊತೆಗೆ ಕಾರುಣ್ಯಾ ಅವರು `ಕುಕು ವಿಥ್ ಕಿರಿಕ್ಕು’ ಶೋನಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಅಮೆರಿಕಾ ನಟಿಯ ಡ್ರೆಸ್ ಕಾಪಿ ಮಾಡಿ ಟ್ರೋಲ್ ಆದ ಜಾಹ್ನವಿ ಕಪೂರ್

    ಇನ್ನು ಕಾರುಣ್ಯ ರಾಮ್ ಅವರ ನೂತನ ಗೃಹ ಪ್ರವೇಶಕ್ಕೆ `ನೆನಪಿರಲಿ’ ಪ್ರೇಮ್ ಜ್ಯೋತಿ ದಂಪತಿ, ಸ್ವಾತಿ ಶರ್ಮಾ, ಪ್ರಿಯಾಂಕಾ ಉಪೇಂದ್ರ, ನಿರಂಜನ್ ಸುಧೀಂದ್ರ, ಜಗದೀಶ್ ಆರ್ ಚಂದ್ರ, ತೇಜಸ್ವಿನಿ ಪ್ರಕಾಶ್ ಮುಂತಾದವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

    ನಟನೆ ಜೊತೆಗೆ ಸಾಮಾಜಿಕ ಕೆಲಸದಲ್ಲಿಯೂ ಸಕ್ರಿಯವಾಗಿದ್ದಾರೆ. ಕೆಲದಿನಗಳ ಹಿಂದೆ ಕಾರುಣ್ಯಾ ರಾಮ್ ಅವರು ಕ್ಯಾನ್ಸರ್ ರೋಗಿಗಳಿಗೆ ಅವರ ಕೂದಲು ದಾನ ಮಾಡಿದ್ದರು. ಒಟ್ನಲ್ಲಿ ಸಿನಿಮಾ, ಹೊಸ ಬಗೆಯ ಫೋಟೋಶೂಟ್, ಸಾಮಾಜಿಕ ಕಾರ್ಯದ ಮೂಲಕ ಕಾರುಣ್ಯ ಸುದ್ದಿಯಾಗುತ್ತಲೇ ಇರುತ್ತಾರೆ.

    Live Tv

  • ಕೂಲ್ ಕೂಲ್ ಪ್ರದೇಶದಲ್ಲಿ ಕನ್ನಡದ ಹಾಟ್ ಹಾಟ್ ನಟಿಯರು

    ಕೂಲ್ ಕೂಲ್ ಪ್ರದೇಶದಲ್ಲಿ ಕನ್ನಡದ ಹಾಟ್ ಹಾಟ್ ನಟಿಯರು

    ಚಂದನವನದ ಚೆಂದದ ತಾರೆಯರು ಹಾಲಿಡೇ ಎಂಜಾಯ್ ಮಾಡಲು ನಾನಾ ದೇಶಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಬೇಸಿಗೆ ಬಿಸಿಯನ್ನು ಕಳೆಯಲೆಂದೇ ಅವರು ಕೂಲ್ ಕೂಲ್ ಪ್ರದೇಶಕ್ಕೆ ಹಾರಿ, ಪ್ರಕೃತಿಯೊಂದಿಗೆ ಬೆರೆತಿದ್ದಾರೆ. ರಿಲ್ಯಾಕ್ಸೇಷನ್‌ಗಾಗಿ ದೂರದ ಊರಿನಲ್ಲಿ ಬೀಡು ಬಿಟ್ಟಿರೋ ನಟಿಮಣಿಯರು ಅಲ್ಲಿನ ಕ್ಷಣಗಳನ್ನು ಹಿಡಿದಿಟ್ಟು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಗಂಡ್ ಹೈಕ್ಳ ನಿದ್ದೆಕೆಡಿಸಿದ್ದಾರೆ. ಕೂಲ್ ಕೂಲ್ ಪ್ರದೇಶದಲ್ಲಿ ಪಯಣ ಬೆಳೆಸಿರುವ ನಟಿಯರು ಯಾರು? ಅವರು ಎಲ್ಲಿದ್ದಾರೆ ಎನ್ನುವ ಕಂಪ್ಲೀಟ್ ಸ್ಟೋರಿ ಇದು.

    ಬೇಸಿಗೆ ಬಂತು ಅಂದ್ರೆ ಸಾಕು ಎಲ್ಲರಿಗೂ ನೆನಪಾಗೋದು ರಜಾ ಮಜಾ ಅಷ್ಟೇ. ಬೇಸಿಗೆ ಶುರುವಾಗುತ್ತಿದ್ದಂತೆ ಹಾಲಿಡೇ ಟ್ರೀಪ್ ಪ್ಲ್ಯಾನ್‌ ಶುರುವಾಗುತ್ತದೆ. ಅದೇ ರೀತಿ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಛಾಪು ಮೂಡಿಸಿರೋ ನಟಿಯರಾದ ಅನುಪಮ ಗೌಡ, ನೇಹಾ ಗೌಡ, ಸೋನಾಲ್, ನಮೃತಾ ಗೌಡ, ಕಾರುಣ್ಯ ರಾಮ್ ಸೇರಿದಂತೆ ಹಲವು ನಟಿಮಣಿಯರು ಹಾಲಿಡೇಯಲ್ಲಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಸದ್ಯ ಅವರ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

    ಟಿವಿ ಪರದೆಯ ಕ್ವೀನ್ ಅನುಪಮ ಗೌಡ, ಬಿಗ್ ಬಾಸ್, ನಮ್ಮಮ್ಮ ಸೂಪರ್ ಸ್ಟಾರ್ ಶೋ ಮೂಲಕ ಸದ್ದು ಮಾಡಿದವರು. ಇದೀಗ ಕೆಲಸದ ಮಧ್ಯೆ ಕೊಂಚ ಫ್ರೀ ಮಾಡಿಕೊಂಡು ಗೋವಾ ಟ್ರೀಪ್‌ಗೆ ಹೋಗಿದ್ದಾರೆ. ಅನುಪಮಾಗೆ ಜತೆಗೆ ಸ್ನೇಹಿತೆಯರಾದ ನಟಿ ನೇಹಾ ಗೌಡ, ಇಶಿತಾ ವರ್ಷ ಕೂಡ ಸಾಥ್ ನೀಡಿದ್ದಾರೆ.

     

    View this post on Instagram

     

    A post shared by Anupama Anandkumar (@anupamagowda)

    ಕಿರುತೆರೆ ನಟಿ ಅನುಪಮಾ ಗೌಡ ಗೋವಾದ ಸುಂದರ ತಾಣದಲ್ಲಿ ರಿಲ್ಯಾಕ್ಸ್ ಮಾಡುತ್ತಾ, ಬೆಸ್ಟ್ ಫ್ರೆಂಡ್ಸ್ ನೇಹಾ,ಇಶಿತಾ ಜೊತೆಗಿನ ಫೋಟೋ ಶೇರ್ ಮಾಡಿ, 6 ತಿಂಗಳ ಹಳೆಯ ಟ್ರಿಪ್ ಫ್ಲ್ಯಾನ್, ಕೊನೆಗೂ ಗೋವಾ ಪ್ಲ್ಯಾನ್‌ ಪೂರ್ಣವಾಯಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಶೇರ್ ಮಾಡಿದ್ದಾರೆ.

     

    View this post on Instagram

     

    A post shared by namratha (@namratha__gowdaofficial)

    ಸ್ಮಾಲ್ ಸ್ಕ್ರೀನ್‌ನಲ್ಲಿ ಒನ್ ಆಫ್ ದಿ ಫೇಮಸ್ ನಟಿ ನಮೃತಾ ಗೌಡ `ನಾಗಿಣಿ 2′ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಶಿವಾನಿ ಪಾತ್ರಧಾರಿಯಾಗಿ ಸೈ ಎನಿಸಿಕೊಂಡವರು. ಸೀರಿಯಲ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಸ್ನೇಹಿತೆಯ ಜತೆ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಸಖತ್ ಹಾಟ್ ಫೋಟೋಶೂಟ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ. ಈ ಸದ್ಯ ಈ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ.

    `ರಾಬರ್ಟ್’ ಖ್ಯಾತಿಯ ನಟಿ ಸೋನಾಲ್ ಮಾಂಟೆರೊ ಸದ್ಯ ಸರೋಜಿನಿ ನಾಯ್ಡು ಬಯೋಪಿಕ್ ಮೂಲಕ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದಾರೆ. ಕನ್ನಡದ `ಗಾಳಿಪಟ 2′, `ಬನಾರಸ್’, `ಬುದ್ಧಿವಂತ 2′ ಸೇರಿದಂತೆ ಸಾಲು ಸಾಲು ಚಿತ್ರಗಳು ಸೋನಾಲ್ ಕೈಯಲ್ಲಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟ್‌ನಿಂದ ಬ್ಯುಸಿಯಿದ್ದ ಸೋನಾಲ್, ಕೆಲಸಕ್ಕೆ ಬ್ರೇಕ್ ಹಾಕಿ ಕಜಕಿಸ್ತಾನಲ್ಲಿ ಬೀಡು ಬಿಟ್ಟಿದ್ದಾರೆ. ತಮ್ಮ ತಾಯಿಯ ಜತೆ ಕಜಕಸ್ತಾನ ಸುಂದರ ತಾಣಗಳಿಗೆ ಭೇಟಿ ನೀಡಿರೋ ಫೋಟೋಸ್, ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ತುಂಡುಡುಗೆ ತೊಟ್ಟು ಟ್ರೋಲ್ ಆದ ಸಮಂತಾ

    ಸ್ಯಾಂಡಲ್‌ವುಡ್ ನಟಿಮಣಿಯರು ಬೇಸಿಗೆ ಕಾಲದಲ್ಲಿ ಭೇಟಿ ಕೊಟ್ಟಿರೋ ಟ್ರಾವೆಲ್ ಸ್ಟೋರಿ ನೋಡಿ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ನೆಚ್ಚಿನ ನಟಿಯರ ಖುಷಿ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.

  • ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಟರ್ಕಿಯಲ್ಲಿ ರಜಾಮಜಾ ಮಾಡುತ್ತಿರೋ ಬ್ಯೂಟಿಫುಲ್‌ ಗರ್ಲ್ ಕಾರುಣ್ಯ ರಾಮ್

    ಬೇಸಿಗೆ ರಜೆ ಬಂದರೆ ಸೆಲೆಬ್ರೆಟಿಗಳು ದೇಶ ಸುತ್ತುವುದು ಕಾಮನ್. ಅದರಲ್ಲೂ ನಟಿ ಕಾರುಣ್ಯ ರಾಮ್ ವರ್ಷಕ್ಕೆ ಎರಡು ಬಾರಿಯಾದರೂ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಬಾರಿ ಅವರು ಟರ್ಕಿ ದೇಶಕ್ಕೆ ಸಹೋದರಿಯ ಜತೆ ಪ್ರಯಾಣ ಬೆಳೆಸಿದ್ದಾರೆ. ಟರ್ಕಿಯಿಂದಲೇ ಪಬ್ಲಿಕ್ ಟವಿ ಡಿಜಿಟಲ್ ಜತೆ ಮಾತನಾಡಿರುವ ಅವರು ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ತಾಳಿಕಟ್ಟಿ ಹೆಂಡತಿಯನ್ನು ಎತ್ತಿಕೊಂಡ ರಣಬೀರ್ ಕಪೂರ್

    ಸಾಮಾನ್ಯವಾಗಿ ಯಾವುದೇ ದೇಶಕ್ಕೆ ಹೋದರೂ, ವಾರದ ಪ್ರವಾಸ ಆಗಿರುತ್ತದೆ. ಈ ಬಾರಿ ನಾವು ದೀರ್ಘ ಪ್ರವಾಸವನ್ನು ಟರ್ಕಿಯಲ್ಲಿ ಮಾಡುತ್ತಿದ್ದೇವೆ. ಈಗಾಗಲೇ ಟರ್ಕಿಯ ಏಳೆಂಟು ಸಿಟಿಯನ್ನು ನೋಡಿಕೊಂಡು, ಮತ್ತಷ್ಟು ಸ್ಥಳಗಳಿಗೆ ಗೊತ್ತು ಮಾಡಿದ್ದೇವೆ. ಟರ್ಕಿ ಶೇ.60ರಷ್ಟು ಪ್ರದೇಶವನ್ನು ನಾವು ನೋಡಿದ್ದೇವೆ. ಅದೊಂದು ಸುಂದರ ದೇಶ ಎಂದಿದ್ದಾರೆ ಕಾರುಣ್ಯ ರಾಮ್. ಇದನ್ನೂ ಓದಿ: ‘BOSS’ ಪಟ್ಟ ಅಲಂಕರಿಸಿದ ಯಶ್ : ಟ್ವಿಟರ್ ಟ್ರೆಂಡಿಂಗ್ ನಲ್ಲಿ #YASHBOSS

    ಸಹೋದರಿ ಜತೆ ಟರ್ಕಿಯ ಇಸ್ತಾನ್ ಬುಲ್, ಇಜ್ಮಿರ್, ಅಂತಲ್ಯಾ, ಅಂಕಾರಾ, ಬುರ್ಸಾ, ಕೈಸೆರಿ, ಕಪ್ಪಡೋಕಿಯಾ ಹೀಗೆ ನಾನಾ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಒಂದಕ್ಕೊಂದು ಸುಂದರವಾದ ಸಿಟಿಗಳಿವು ಎಂದು ಪ್ರವಾಸ ಕಥನವನ್ನು ಬಿಚ್ಚಿಡುತ್ತಾರೆ ಕಾರುಣ್ಯ. ಇದನ್ನೂ ಓದಿ:ಬೀಸ್ಟ್ ಸಿನಿಮಾಕ್ಕೆ ಸೆಡ್ಡು ಹೊಡೆದ ಕೆಜಿಎಫ್-2 – ಕೇರಳ, ತಮಿಳುನಾಡಿನಲ್ಲೂ ರಾಕಿಭಾಯ್ ಹವಾ

    ಟರ್ಕಿಯ ಇತಿಹಾಸ ಭವ್ಯವಾಗಿದೆ. ಅತೀ ಸುಂದರ ದೇಶಗಳಲ್ಲಿ ಇದು ಒಂದು. ಪ್ರವಾಸಿಗರಿಗೆ ಹೇಳಿ ಮಾಡಿಸಿದ ಜಾಗ. ಊಟ, ಉಪಚಾರ ಎಲ್ಲವೂ ಅಚ್ಚುಕಟ್ಟು. ಒಂದು ರೀತಿಯಲ್ಲಿ ದಣಿವರಿಯದ ಸ್ಥಳಗಳು ಇಲ್ಲಿವೆ. ಪ್ರವಾಸಿಗರು ಯಾವುದೇ ರೀತಿಯಲ್ಲಿ ತೊಂದರೆ ಆಗದಂತಹ ವ್ಯವಸ್ಥೆಯನ್ನು ಅಲ್ಲಿನ ಸರಕಾರ ಮಾಡಿದೆ. ನಿರಾತಂಕವಾಗಿ ಟರ್ಕಿಯಲ್ಲಿ ಒಬ್ಬರೇ ಸುತ್ತಬಹುದು ಎನ್ನುವುದು ಕಾರುಣ್ಯ ಮಾತು. ಇದನ್ನೂ ಓದಿ:ಬಾಲಿವುಡ್‌ನಲ್ಲೂ `ಕೆಜಿಎಫ್ ಚಾಪ್ಟರ್ 2′ ಹವಾ: ಹಿಂದಿಯಲ್ಲೂ ನಂಬರ್ ಒನ್

    ಸದ್ಯ ಕಾರುಣ್ಯ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನೀನಾಸಂ ಸತೀಶ್ ಜತೆ ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಹರಿಪ್ರಿಯಾ, ಅರುಣ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

  • ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    ಸಾಮಾನ್ಯವಾಗಿ ಕನ್ನಡದ ನಟಿಯರು ತೆಲುಗು, ತಮಿಳು ಸಿನಿಮಾ ರಂಗಕ್ಕೆ ಹಾರುವುದನ್ನು ಕಂಡಿದ್ದೇವೆ. ಕೆಲ ನಟಿಮಣಿಯರಂತೂ ಕನ್ನಡ ಸಿನಿಮಾ ರಂಗವನ್ನೂ ಮರೆತು ಕಾಲಿವುಡ್, ಟಾಲಿವುಡ್ ನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಆದರೆ, ಈ ನಟಿಯರು ಇನ್ನಷ್ಟು ದೂರ ಹೆಜ್ಜೆ ಇಟ್ಟಿದ್ದಾರೆ. ಕನ್ನಡ ಸಿನಿಮಾದಲ್ಲಿ ನಟಿಸುತ್ತಲೇ ಭೋಜಪುರಿ ಚಿತ್ರಗಳಿಗೂ ಸಹಿ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಚಿಟ್ಟೆ ಖ್ಯಾತಿಯ ಹರ್ಷಿಕಾ ಪೂಣಚ್ಚ ಮತ್ತು ಕಾರುಣ್ಯ ರಾಮ್. ಇದನ್ನು ಓದಿ :ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ


    ಹರ್ಷಿಕಾ ಅವರಿಗೆ ಭೋಜಪುರಿ ಸಿನಿಮಾ ಹೊಸದಲ್ಲ. ಈಗಾಗಲೇ ಅವರು ‘ಹಮ್ ಹೈನಾ ರಾಹಿ ಪ್ಯಾರ್ ಕೆ’ ಎಂಬ ಭೋಜಪುರಿ ಚಿತ್ರದಲ್ಲಿ ನಟಿಸಿ ಆಗಿದೆ. ಆ ಸಿನಿಮಾ ಬಿಡುಗಡೆ ಕೂಡ ಆಗಿದೆ. ಈಗ ಮತ್ತೊಂದು ಭೋಜಪುರಿ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ಮತ್ತೆ ಭೋಜಪುರಿ ವಿಮಾನ ಏರಿದ್ದಾರೆ. ಪ್ರೇಮಾಂಶು ಸಿಂಗ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಈಗಾಗಲೇ ಶೂಟಿಂಗ್ ಕೂಡ ಶುರುವಾಗಿದೆ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?


    ಸದ್ಯಕ್ಕೆ ಹರ್ಷಿಕಾ ಅವರು ಕನ್ನಡದಲ್ಲಿ ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಸಾಕಷ್ಟು ಕಥೆಗಳನ್ನು ಕೇಳಿದ್ದಾರಂತೆ. ಜತೆ ಜತೆಗೆ ಸಮಾಜಮುಖಿ ಕೆಲಸಗಳಲ್ಲೂ ಅವರು ನಿರತರಾಗಿದ್ದಾರೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?


    ಪೆಟ್ರೋಮ್ಯಾಕ್ಸ್ ಸಿನಿಮಾದ ಬಿಡುಗಡೆಗಾಗಿ ಕಾದಿರುವ ಕಾರುಣ್ಯ ರಾಮ್ ಕೂಡ ಭೋಜಪುರಿ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಸದ್ಯದಲ್ಲೇ ಆ ಸಿನಿಮಾದ ಶೂಟಿಂಗ್ ಗೂ ಅವರು ತೆರಳಲಿದ್ದಾರೆ. “ಭೋಜಪುರಿ ಸಿನಿಮಾ ಒಪ್ಪಿಕೊಂಡಿದ್ದು ನಿಜ. ವಿದೇಶದಲ್ಲೂ ನನ್ನ ಭಾಗದ ಚಿತ್ರೀಕರಣ ಆಗಲಿದೆ. ಈ ಚಿತ್ರದ ಬಗ್ಗೆ ಸಿನಿಮಾ ತಂಡವೇ ಮಾಹಿತಿ ನೀಡಲಿದೆ” ಎನ್ನುತ್ತಾರೆ.  ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ


    ಅಂದಹಾಗೆ ಈ ಇಬ್ಬರೂ ನಾಯಕಿಯರ ಚಿತ್ರಗಳನ್ನು ಒಂದೇ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿರುವುದು ಮತ್ತೊಂದು ವಿಶೇಷ.

  • ಕಾರುಣ್ಯ ರಾಮ್, ಅನಿಕಾ, ಸಚಿನ್ ತ್ರಿಕೋನ ಪ್ರೇಮ ಕಥೆಗೆ ಟ್ವಿಸ್ಟ್

    ಕಾರುಣ್ಯ ರಾಮ್, ಅನಿಕಾ, ಸಚಿನ್ ತ್ರಿಕೋನ ಪ್ರೇಮ ಕಥೆಗೆ ಟ್ವಿಸ್ಟ್

    ಬೆಂಗಳೂರು: ನಟಿ ಕಾರುಣ್ಯ ರಾಮ್, ಕಿರುತೆರೆ ನಟಿ ಅನಿಕಾ ಮತ್ತು ಉದ್ಯಮಿ ಸಚಿನ್ ತ್ರಿಕೋನ ಪ್ರೇಮಕಥೆಗೆ ಹೊಸ ತಿರುವು ಸಿಕ್ಕಿದೆ.

    ಸಚಿನ್ ಮತ್ತು ಕಾರುಣ್ಯಾ ನಿಶ್ಚಿತಾರ್ಥ ಮುರಿದುಬಿದ್ದಿದೆ. ಸಚಿನ್ ಮತ್ತು ಕಾರುಣ್ಯಾಗೆ ಈ ಹಿಂದೆ ಮದುವೆಯಾಗಿದೆ ಎಂದು ಸುದ್ದಿಯಾಗುತ್ತಿದೆ. ಜೊತೆಗೆ ಈ ಕುರಿತಾದ ಸಾಕ್ಷಿ ಕಾರುಣ್ಯ ಬಳಿ ಇದ್ದು, ಅನಿಕಾ ಮನೆಯವರಿಗೆ ಸಾಕ್ಷಿ ಸಮೇತ ತೋರಿಸಿದ್ದಾರೆ. ಹೀಗಾಗಿ ಅನಿಕಾ ಮತ್ತು ಸಚಿನ್ ಮದುವೆ ಮುರಿದಿದೆ ಎಂದು ಸುದ್ದಿಯಾಗುತ್ತಿದೆ.

    ಒಂದು ತಿಂಗಳ ಹಿಂದೆ ಅನಿಕಾ ಮತ್ತು ಸಚಿನ್ ನಿಶ್ಚಿತಾರ್ಥವಾಗಿತ್ತು. ಮದುವೆ ಮುರಿಯೋಕೆ ನಟಿ ಕಾರುಣ್ಯ ರಾಮ್ ಪ್ರಯತ್ನಿಸುತ್ತಿದ್ದಾರೆ ಎಂದು ಅನಿಕಾ ಆರೋಪಿಸಿದ್ದರು. ಈ ಕುರಿತು ಕಾರುಣ್ಯ ಪ್ರತಿಕ್ರಿಯಿಸಿ, ನನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲ. ನಾನು, ಸಚಿನ್ ಒಳ್ಳೆಯ ಸ್ನೇಹಿತರಾಗಿದ್ದು, ಇಲ್ಲಿಗೆ ವಿಷಯ ಬಿಟ್ಟುಬಿಡೋದಾಗಿ ಹೇಳಿದ್ದರು.

    ಏನಿದು ಪ್ರಕರಣ: ಈ ಹಿಂದೆ ಅನಿಕಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ, ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್‍ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವಿಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೊರೆಂಟ್ ಗೆ ಹೋಗಿದ್ದೆ, ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದರು.

    ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು. ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ಹೇಳಿದ್ದರು.

    ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇನಾದ್ರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದರು.

  • ‘ನನಗೆ ಸಚಿನ್ ಬೇಕು, ಮದ್ವೆ ಮಾಡಿಕೊಡಿ’ ಅಂದ್ರಂತೆ ಕಾರುಣ್ಯ ರಾಮ್!

    ‘ನನಗೆ ಸಚಿನ್ ಬೇಕು, ಮದ್ವೆ ಮಾಡಿಕೊಡಿ’ ಅಂದ್ರಂತೆ ಕಾರುಣ್ಯ ರಾಮ್!

    ಹರೀಶ್ ಸೀನಪ್ಪ
    ಬೆಂಗಳೂರು: ಲಕ್ಷ್ಮಿ ಬಾರಮ್ಮ ಧಾರಾವಾಹಿಯ ‘ಕುಮುದಾ’ ಬಾಳಲ್ಲಿ ನಟಿ ಕಾರುಣ್ಯ ಚೆಲ್ಲಾಟವಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸಚಿನ್ ಜೊತೆ 11 ದಿನದ ಹಿಂದೆ ಆಗಿದ್ದ ನಿಶ್ಚಿತಾರ್ಥ ಮುರಿಯೋ ಪ್ರಯತ್ನ ನಡೆಯುತ್ತಿದೆ ಅಂತ ಕುಮುದಾ ಖ್ಯಾತಿಯ ಅನಿಕಾ ಆರೋಪಿಸಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್ ಸಚಿನ್ ಎಂಬವರನ್ನು ಪ್ರೀತಿಸಿದ್ದರಂತೆ. ಕಾರುಣ್ಯರಾಮ್ ಜೊತೆ ಸಂಬಂಧ ಕಟ್ ಆಗಿ ಮೂರು ವರ್ಷ ಕಳೆದ ಮೇಲೆ ಸಚಿನ್ ಹಾಗೂ ಅನಿಕಾಗೆ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥ ಆದ್ಮೇಲೆ ನನ್ನ ಮದುವೆ ಮುರಿಯೋಕೆ ಕಾರುಣ್ಯ ರಾಮ್ ಪ್ರಯತ್ನ ಪಡ್ತಿದ್ದಾರೆ ಎಂದು ಕಿರುತೆರೆ ನಟಿ ಅನಿಕಾ ತನಗಾದ ನೋವನ್ನ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಪ್ರತಿನಿಧಿ ಹರೀಶ್ ಸೀನಪ್ಪ ಜೊತೆ ಅನಿಕಾ ಸಿಂಧ್ಯಾ ಮನಸ್ಸು ಬಿಚ್ಚಿ ಮಾತನಾಡಿದಾಗ ಏನೆಲ್ಲಾ ಹೇಳಿದ್ರು ಅನ್ನೋದು ಇಲ್ಲಿದೆ ನೋಡಿ.

    ನಿಮಗೆ ಯಾರಿಂದ ತೊಂದರೆಯಾಗುತ್ತಿದೆ?
    ನಾನು ಮಾನಸಿಕವಾಗಿ ತುಂಬಾ ಡಿಸ್ಟರ್ಬ್ ಆಗಿದ್ದೀನಿ. ಯಾರದೇ ಲೈಫ್ ನಲ್ಲಿ ಮದುವೆ ಅಥವಾ ಎಂಗೇಜ್ಮೆಂಟ್ ಆದ್ಮೇಲೆ ಯಾರಾದ್ರೂ ಬಂದರೆ ಮನೆಯವರು ಕೂಡಾ ಡಿಸ್ಟರ್ಬ್ ಆಗ್ತಾರೆ. ಕಾರುಣ್ಯರಾಮ್ ಹಾಗೂ ನನಗೆ ಎಂಗೇಜ್ಮೆಂಟ್ ಆದ ಸಚಿನ್ ಮಧ್ಯೆ ಮುಂಚೆ ಲವ್ ಇತ್ತಂತೆ. ಅದು ನನಗೆ ಬೇಡ. ಎಂಗೇಜ್ಮೆಂಟ್ ಆದಮೇಲೆ ಅವಳು ಸುಮ್ಮನೆ ಇದ್ದು ಬಿಡಬೇಕಿತ್ತು. ಎಂಗೇಜ್ಮೆಂಟ್ ನಡೆಯುವ 10 ದಿನ ಮೊದಲು ಹಾಗೂ ಎಂಗೇಜ್ಮೆಂಟ್ ಆದಮೇಲೂ ಟಾರ್ಚರ್ ಮಾಡಿದ್ದಾರೆ. ಈ ವಿಷಯ ನನಗೆ ಮೊನ್ನೆ ಮೊನ್ನೆ ಸಚಿನ್ ನಿಂದ ವಿಷಯ ಗೊತ್ತಾಯ್ತು. ಮೊನ್ನೆ ಕೂಡಾ ಸಚಿನ್ ತಾಯಿಗೆ ಫೋನ್ ಮಾಡಿ ಕರೆಸಿಕೊಂಡು ಅವರು ನನಗೆ ಸಚಿನ್ ಬೇಕು. ಮದುವೆ ಮಾಡಿಕೊಡಿ ಎಂದು ಹೇಳಿದ್ದಾಳೆ. ಇದರಿಂದ ನನ್ ಲೈಫ್ ಏನಾಗ್ಬೇಕು? ನನ್ ಲೈಫ್ ಹಾಳಾಗಲ್ವಾ..? ನಾನೇ ಸರಿ ಇಲ್ಲ ಅಂತೆಲ್ಲಾ ಹೇಳಲ್ವಾ..? ಈ ಹಿನ್ನೆಲೆಯಲ್ಲಿ ನಾನೇ ಮೊದಲು ಹೇಳ್ತಾ ಇದೀನಿ. ದಯವಿಟ್ಟು ಇದು ನನಗೆ ಬೇಡ ಎಂದು ನೀನು ಸುಮ್ಮನಾದರೆ ಸರಿ. ನನಗೆ ಯಾವುದೇ ಹೆದರಿಕೆ ಇಲ್ಲ. ಇನ್ಫೀರಿಯಾರಿಟಿ ಕಾಂಪ್ಲೆಕ್ಸ್ ಕೂಡಾ ಇಲ್ಲ. ಸುಮ್ಮನಾಗಿಬಿಟ್ರೆ ಈ ಕೇಸ್ ಇಲ್ಲಿಗೇ ಮುಗಿಯುತ್ತೆ. ನೀನೇನಾದ್ರೂ ಫ್ಯೂಚರಲ್ಲಿ ಅವನು ನಂಗೆ ಬೇಕು ಅಂದ್ರೆ ನಾನೇನ್ಮಾಡಬೇಕು ನನಗೆ ಗೊತ್ತು.

    ಸಚಿನ್ ನಿಮಗೆ ಯಾವಾಗ, ಹೇಗೆ ಪರಿಚಯವಾದ್ರು..?
    ಸಚಿನ್ ತುಂಬಾ ಒಳ್ಳೆಯ ಹುಡುಗ. ನನ್ ತಂದೆಯ ಬ್ಯುಸಿನೆಸ್ ಪಾರ್ಟನರ್ ಮೈದುನ ಸಚಿನ್. ಮನೆಯಲ್ಲಿ ನನಗೆ ಹುಡುಗನನ್ನು ಹುಡುಕ್ತಾ ಇದ್ರು. ಪ್ರಪೋಸಲ್ ಬಂತು. ಒಳ್ಳೆಯ ಹುಡುಗ ಎಂದು ಎಲ್ಲಾ ಒಪ್ಪಿಗೆಯಾಯಿತು. ಆವಾಗ ಯಾವುದೇ ತೊಂದರೆಯಿರಲಿಲ್ಲ. ಅವರು ನನ್ ಜೊತೆ ಓಡಾಡ್ತಿದ್ರು. ಎಂಗೇಜ್ಮೆಂಟ್ ಆದ್ಮೇಲೆ ಒಂದು ಕಾಲ್ ಇಲ್ಲ, ಮೆಸೇಜ್ ಇಲ್ಲ. ಸೋ ನನಗೆ ಅನುಮಾನ ಬಂತು. ಜಗಳ ಆಗಿ ಕೇಳಿದಾಗ ಮನೆಯಲ್ಲಿ ರಂಪ ರಾಮಾಯಣ ಆಗೋಗಿದೆ. ಅವಳೂ ಒಬ್ಳು ಹುಡುಗಿ. ಅವಳ ಲೈಫ್‍ಗೆ ಡ್ಯಾಮೇಜ್ ಮಾಡೋಕೆ ನನಗೆ ಇಷ್ಟವಿಲ್ಲ. ಮರ್ಯಾದೆಯಾಗಿ ಅವಳು ಹಿಂದಕ್ಕೆ ಸರಿದು ಬಿಟ್ರೆ ಸರಿ. ನನ್ ಲೈಫ್ ಬಗ್ಗೆ ನನಗೂ ಹೆದರಿಕೆ ಇರುತ್ತದೆ.

    ಸಚಿನ್ ಜೊತೆ ಅಥವಾ ಕಾರುಣ್ಯ ಜೊತೆ ಮಾತನಾಡಿದ್ರಾ..? ಸಚಿನ್ ಕೇಳಿದಾಗ ಏನ್ ಹೇಳಿದ್ರು..?
    ಸಚಿನ್ ಗೆ ಕೇಳಿದಾಗ ನನಗೆ ಈಗ ಅವಳು ಬೇಡ, ನೀನು ಬೇಕು. ಎಂಗೇಜ್ಮೆಂಟ್ ಆಗಿದ್ದೀನಿ. ನಿನ್ನನ್ನೇ ಮದುವೆಯಾಗ್ತೀನಿ ಅಂತಾ ಹೇಳಿದ್ದಾರೆ. ಕಾರುಣ್ಯ ಜೊತೆ ನಾನು ಇದುವರೆಗೂ ಡೈರೆಕ್ಟ್ ಆಗಿ ಮಾತನಾಡಿಲ್ಲ. ನನಗೂ ಅವಳಿಗೂ ಯಾವುದೇ ಪರಿಚಯವಿಲ್ಲ. ಇಂಡೈರೆಕ್ಟಾಗಿ ನನ್ ಹುಡ್ಗನಿಗೆ ಟಾರ್ಚರ್ ಮಾಡೋದೂ ಒಂದೇ, ನನ್ ಲೈಫ್ ಡ್ಯಾಮೇಜ್ ಮಾಡೋದೂ ಒಂದೇ.

    ಈ ವಿಷಯ ನಿಮಗೆ ಗೊತ್ತಾಗಿದ್ದು ಹೇಗೆ?
    ಈ ವಿಚಾರದಲ್ಲಿ ಮನೆಯಲ್ಲಿ ಏನ್ ಹೇಳ್ತಿದಾರೆ. ಈ ಪರಿಸ್ಥಿತಿಯನ್ನು ಹೇಗೆ ಹ್ಯಾಂಡಲ್ ಮಾಡುತ್ತಿದ್ದೀರಿ?
    ಸಚಿನ್ ನನ್ ಜೊತೆ ಮಾತನಾಡದೇ ಇದ್ದಾಗ ಅನುಮಾನ ಬಂದು ಕೇಳಿದೆ. ಆಗ ಈ ವಿಷಯಗಳೆಲ್ಲಾ ಹೊರಗೆ ಬಂತು. ನನಗೆ ತುಂಬಾ ಹರ್ಟ್ ಆಗಿದೆ. ತಕ್ಷಣ ಫೇಸ್‍ಬುಕ್ ನಿಂದ ಎಲ್ಲಾ ಡಿಲೀಟ್ ಮಾಡಿದೀನಿ. ರಿಂಗ್ ಕೂಡಾ ತೆಗೆದುಬಿಟ್ಟೆ. ಅಷ್ಟೊಂದು ಹರ್ಟ್ ಆಗಿದ್ದೀನಿ. ಮನೆಯವರಿಗೂ ಹರ್ಟ್ ಆಗಿದೆ. ಈವಾಗ ಎಲ್ಲಾ ಸರಿ ಹೋಗ್ತಾ ಇದೆ. ಹುಡುಗ ನನ್ ಕಡೆ ಇದಾನೆ. ಅವಳು ಮತ್ತೆ ಅವನ ಲೈಫ್ ಗೆ ಬರಬಾರದು. ಅವನ ಅಮ್ಮನಿಗಾಗಲೀ, ಅವನಿಗಾಗಲೀ ಯಾವುದೇ ಟಾರ್ಚರ್ ಮಾಡಬಾರದು. ಮದುವೆಯಾದ ಮೇಲೂ ನನಗೂ ನಿನಗೂ ಸಂಬಂಧವಿಲ್ಲ ಎಂದು ಅವಳು ಸುಮ್ಮನಿದ್ದುಬಿಡಬೇಕು.

    ಕಾರುಣ್ಯರಾಮ್ ಸಚಿನ್, ಅಮ್ಮನ ಜೊತೆ ಮಾತನಾಡಿದ್ದರ ಬಗ್ಗೆ ಏನ್ ಹೇಳ್ತೀರಾ..?
    ಯಾರೇ ಆಗಲಿ ನನ್ ಲವ್ ಮಾಡಿರೋ ಹುಡುಗ ಬೇರೆಯವರನ್ನು ಎಂಗೇಜ್ಮೆಂಟ್ ಆಗ್ತಿದ್ದಾರೆ ಎಂದರೆ ಅವರು ಚೆನ್ನಾಗಿರ್ಲಿ ಎಂದು ಸುಮ್ಮನಾಗ್ತಾರೆ. ಎಂಗೇಜ್ಮೆಂಟ್ ಆದ್ಮೇಲೆ ಅವರ ಅಮ್ಮನಿಗೆ ಬಂದು ಬಿಟ್ಟು ನನಗೆ ಮದುವೆ ಮಾಡಿಕೊಡಿ ಎಂದರೆ ಎಲ್ಲರಿಗೂ ಏನನ್ನಿಸುತ್ತೆ..? ನನಗೆ ಯಾವ ಹೆದರಿಕೆಯೂ ಇಲ್ಲ. ನಾನು ಎಂಥ ಹುಡುಗಿ ಅಂತಾ ಇಂಡಸ್ಟ್ರಿಗೆ ಗೊತ್ತು. ಇದನ್ನ ಇಲ್ಲಿಗೆ ನಿಲ್ಲಿಸಿದರೆ ಸರಿ.

     

    https://youtu.be/A8d3MaQjKpE

    https://youtu.be/CGvMv9nG1j0

     

    https://youtu.be/01_CZO0LRxc

    https://youtu.be/k-Q4HK-s5Ko

     

  • ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಕುಮುದಾ ಬಾಳಲ್ಲಿ ನಟಿ ಕಾರುಣ್ಯ `ಕಿರಿಕ್’!

    ಬೆಂಗಳೂರು: ಧಾರಾವಾಹಿ ನಟಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಕುಮುದಾ ಅಲಿಯಾಸ್ ಅನಿಕಾ ಮದುವೆ ಮುರಿದು ಬೀಳಲು ಸ್ಯಾಂಡಲ್‍ವುಡ್ ನಟಿ ಕಾರುಣ್ಯ ರಾಮ್ ಕಾರಣ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    10 ದಿನಗಳ ಹಿಂದೆ ಉದ್ಯಮಿ ಸಚಿನ್ ಎಂಬವರ ಜೊತೆ ನನ್ನ ನಿಶ್ಚಿತಾರ್ಥ ಆಗಿತ್ತು. ಆದರೆ ಈಗ ನಟಿ ಕಾರುಣ್ಯ ರಾಮ್ ನಿಂದಾಗಿ ಈ ನಿಶ್ಚಿತಾರ್ಥ ಬ್ರೇಕಪ್ ಆಗಿದೆ ಎಂದು ಅನಿಕಾ ಆರೋಪ ಮಾಡಿದ್ದಾರೆ.

    ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅನಿಕಾ, ಇದೆ ತಿಂಗಳು ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನನ್ನ ಮತ್ತು ಸಚಿನ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್ ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ನಟಿ ಅನಿಕಾ ಅವರ ಆರೋಪಕ್ಕೆ ಪ್ರತಿಕ್ರಯಿಸಿದ ನಟಿ ಕಾರುಣ್ಯ, ನನಗೆ ಅನಿಕಾ ಯಾರು ಎನ್ನುವುದೇ ಪರಿಚಯವೇ ಇಲ್ಲ. ನನಗೆ ಸಚಿನ್ ಕೂಡ ಗೊತ್ತಿಲ್ಲ. ನಾನು ಸ್ನೇಹಿತರ ಜೊತೆ ರೆಸ್ಟೋರೆಂಟ್ ಗೆ ಹೋಗಿದ್ದೆ ಅಲ್ಲಿ ಸಚಿನ್ ಇದ್ದರು. ಎಲ್ಲರ ಜೊತೆ ಇದ್ದಾಗ ಮಾತನಾಡಿದ್ದೀನಿ ಅಷ್ಟೆ ಎಂದು ಹೇಳಿದ್ದಾರೆ.

    ಬಹುಶಃ ಆ ಹುಡುಗಿ ಪಬ್ಲಿಸಿಟಿ ಪಡೆಯೋಕೆ ಇದೆಲ್ಲ ಮಾಡುತ್ತಿರಬಹುದು. ನನಗೆ ಮದುವೆಯಾಗೋಕೆ ಅವರೇ ಬೇಕಿಲ್ಲ. ಆ ಹುಡುಗಿಗೆ ಬಹುಶಃ ಇನ್‍ಫಿರಿಯಾರಿಟಿ ಕಾಂಪ್ಲೆಕ್ಸ್ ಇದೆ ಅನ್ನಿಸುತ್ತಿದೆ. ಆಕೆಯನ್ನು ನಾನು ನೋಡೇ ಇಲ್ಲ. ನಾನು ಯಾರ ಕುಟುಂಬಕ್ಕೂ ತೊಂದರೆ ನೀಡಿಲ್ಲ. ನನ್ನಿಂದ ತೊಂದರೆ ಆದರೆ ಆ ಹುಡುಗ ಮಾತಾಡಬೇಕು ಇವಳ್ಯಾಕೆ ಮಾತನಾಡುತ್ತಿದ್ದಾಳೆ? ನನಗೆ ಸಚಿನ್ ಪರಿಚಯವಿಲ್ಲ, ಅವರು ಪಬ್ಲಿಸಿಟಿಗೋಸ್ಕರ ಸುದ್ದಿ ಮಾಡುತ್ತಿರಬಹುದು ಎಂದು ನಟಿ ಕಾರುಣ್ಯ ರಾಮ್ ತಿಳಿಸಿದ್ದಾರೆ.

    ಉದ್ಯಮಿ ಸಚಿನ್ ಯಾರೆಂಬುದು ನನಗೆ ಗೊತ್ತೇ ಇಲ್ಲ. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇದರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ. ಆಮೇಲೆ ಪ್ರತಿಕ್ರಿಯೆ ನೀಡುತ್ತೇನೆ. ಸುಮ್ ಸುಮ್ಮನೆ ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದು ಪ್ರಶ್ನಿಸಿದ್ದಾರೆ.