Tag: Karunanidhi

  • ಹಳ್ಳಿಯಿಂದ ಬಂದ ವ್ಯಕ್ತಿ 50 ವರ್ಷ ಪಕ್ಷವನ್ನು ಕಟ್ಟಿ ಆಳಿದ್ದಾರೆ: ಎಚ್‍ಡಿಡಿ

    ಹಳ್ಳಿಯಿಂದ ಬಂದ ವ್ಯಕ್ತಿ 50 ವರ್ಷ ಪಕ್ಷವನ್ನು ಕಟ್ಟಿ ಆಳಿದ್ದಾರೆ: ಎಚ್‍ಡಿಡಿ

    ನವದೆಹಲಿ: ಹಳ್ಳಿಯಿಂದ ಬಂದ ವ್ಯಕ್ತಿಯೊಬ್ಬರು 50 ವರ್ಷ ಪ್ರಾದೇಶಿಕ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಎಂತಹ ಕಠಿಣ ಸಂದರ್ಭದಲ್ಲಿಯೂ ಪಂಚಾಯ್ತಿ ಮಟ್ಟದಿಂದ ಯಾವ ಒಬ್ಬ ಕಾರ್ಯಕರ್ತನೂ ಕರುಣಾನಿಧಿಯವರನ್ನು ಬಿಟ್ಟು ಹೋಗಲಿಲ್ಲ. ಆ ಜನತೆಯ ಆಶೀರ್ವಾದದಿಂದ ಕೇಂದ್ರದಲ್ಲಿ ಎನ್‍ಡಿಎ ಮತ್ತು ಯುಪಿಎ ಸರ್ಕಾರ ಆಡಳಿತ ನಡೆಸಲು ಸಹಾಯ ಮಾಡಿದ್ರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ್ದಾರೆ.

    ಈ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ಸರ್ವತೋಮ ಅಭಿವೃದ್ಧಿಗೆ ಕೇಂದ್ರದಿಂದ ಎಲ್ಲ ಆರ್ಥಿಕ ಯೋಜನೆಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದ್ರು. ಕರುಣಾನಿಧಿ ಅವರ ಬೆಂಬಲದಿಂದಲೇ ಕೇಂದ್ರದಲ್ಲಿ ಎನ್‍ಡಿಎ ಮತ್ತು ಯುಪಿಎ ನಿರಾಂತಕವಾಗಿ ಸರ್ಕಾರ ನಡೆಸಿವೆ. ತಮಿಳುನಾಡಿನ ಅಭಿವೃದ್ಧಿಗಾಗಿ ಆಡಳಿತಾರೂಢ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ ಕೇಂದ್ರದ ಎಲ್ಲ ಯೋಜನೆಗಳನ್ನು ತಮ್ಮ ರಾಜ್ಯಕ್ಕೆ ತರುವಲ್ಲಿ ಯಶಸ್ವಿಯಾದ ನಾಯಕ ಅಂದ್ರು.

    ಇಂದು ತಮಿಳುನಾಡಿನಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಕುರುಣಾನಿಧಿಯವರ ಮರಣ ವಾರ್ತೆ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ. ಕರುಣಾನಿಧಿಯ ಸಾವಿನ ದುಃಖವನ್ನು ಭರಿಸುವ ಶಕ್ತಿ ಕುಟುಂಬಸ್ಥರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಸಂತಾಪ ಸೂಚಿಸಿದರು.

  • ತಮಿಳ್ನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವಿಧಿವಶ- ಬೆಂಗ್ಳೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

    ತಮಿಳ್ನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ವಿಧಿವಶ- ಬೆಂಗ್ಳೂರಿನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್

    ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಕರುಣಾನಿಧಿ ವಿಧಿವಶರಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ತಮಿಳು ಭಾಷಿಕರು ಇರುವ ಏರಿಯಾವಾದ ಬೆಂಗಳೂರಿನ ಶ್ರೀರಾಂಪುರದಲ್ಲಿ ಭದ್ರತೆಯ ದೃಷ್ಟಿಯಿಂದ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎರಡು ಕೆ ಎಸ್ ಆರ್ ಪಿ ತುಕಡಿಗಳು ಹಾಗೂ ಪೊಲೀಸರನ್ನು ನಿಯೋಜಿಸಲಾಗಿದೆ.

    ತಮಿಳುನಾಡು ಕಡೆ ಹೊರಡುವ ಕೆಎಸ್‍ಆರ್‍ಟಿಸಿ ಮತ್ತು ತಮಿಳುನಾಡು ಸಾರಿಗೆ ಬಸ್‍ಗಳ ಸಂಚಾರ ಕೂಡ ಸ್ಥಗಿತವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತೊಂದರೆ ಅನುಭವಿಸುವಂತಾಗಿದೆ. ಮಕ್ಕಳು, ಮಹಿಳೆಯರು ತಮ್ಮ ಊರುಗಳಿಗೆ ತೆರಳಲು ಬಸ್‍ಗಳಿಲ್ಲದ ಬಸ್ ನಿಲ್ದಾಣದಲ್ಲೆ ವಾಸ್ತವ್ಯ ಹೂಡಿದ್ದಾರೆ. ರಾತ್ರಿ ಇಡೀ ಬಸ್ ನಿಲ್ದಾಣದಲ್ಲಿ ಜಾಗರಣೆ ಮಾಡಬೇಕು, ಬೇರೆ ದಾರಿ ಇಲ್ಲ ಅಂತ ಪ್ರಯಾಣಿಕರು ತಿಳಿಸಿದ್ದಾರೆ.

    ತಮಿಳುನಾಡಿನ ವಿವಿಧ ಭಾಗಗಳಿಗೆ ಸಂಚರಿಸುವ ಎಲ್ಲಾ ಬಸ್ ಗಳು ಸ್ಥಗಿತವಾಗಿದ್ದು, ತಮಿಳುನಾಡು ಸಾರಿಗೆ ಸಂಸ್ಥೆಯ ಎಲ್ಲಾ ಬಸ್‍ಗಳು ಸ್ಯಾಟಲೈಟ್ ನಿಲ್ದಾಣದಲ್ಲಿ ಹಾಲ್ಟ್ ಆಗಿವೆ.

    ಘಟನೆ ವಿವರ:
    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಸಂಜೆ ವಿಧಿವಶರಾದ್ರು.

    ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿದೆ. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.

    ಐದು ಬಾರಿ ಮುಖ್ಯಮಂತ್ರಿ:
    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

  • ಇಲ್ಲಿದೆ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ!

    ಇಲ್ಲಿದೆ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ!

    ಚೆನ್ನೈ: ವಿದ್ಯಾರ್ಥಿ ಚಳುವಳಿ, ಸಾಮಾಜಿಕ ಹೋರಾಟ, ಸಿನಿಮಾ ರಂಗದ ಪಯಣ, ರಾಜಕೀಯದ ಏಳು-ಬೀಳು, ಏರಿದ ಉನ್ನತ ಹುದ್ದೆ ಇದರಿಂದಾಚೆಗೆ ಕರುಣಾನಿಧಿಯವರ ವೈಯಕ್ತಿಕ ಜೀವನ ರಂಗು ಹೊಂದಿತ್ತು. ತಮಿಳುನಾಡಿನ ಆರಾಧ್ಯ ದೈವ, ದ್ರಾವಿಡ ಚಳವಳಿಯ ಕಡೆಯ ಕೊಂಡಿ ಕಲೈನರ್ ಕರುಣಾನಿಧಿಯವರ ರಸಮಯ ಬದುಕಿನ ಚಿತ್ರಣ ಇಲ್ಲಿದೆ.

    60ರ ದಶಕ ಕೊನೆಯಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿದ್ದ ಮುಥುವೇಲು ಕರುಣಾನಿಧಿಯವರ ಬಳಿ, ಸರ್ಕಾರದಿಂದ ಅಧಿಕೃತವಾಗಿ ನೀವು ಬಾಡಿಗೆ ಪಡೆದು ನೆಲೆಸುತ್ತಿರುವ ಆಲಿವರ್ ರಸ್ತೆಯಲ್ಲಿರುವ ಆ ಕಟ್ಟಡದಲ್ಲಿ ನಿಮ್ಮೊಂದಿಗಿರುವವರು ಯಾರು ಎಂಬ ವಿಚಿತ್ರ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಂದರ್ಭದಲ್ಲಿ ಪ್ರಶ್ನಿಸಿದವರ ಕಣ್ಣಲ್ಲಿ ಕಣ್ಣಿಟ್ಟು ಉತ್ತರಿಸಿದ್ದ ಕರುಣಾನಿಧಿ, ಅಲ್ಲಿ ನನ್ನ ಮಗಳು ಕನಿಮೋಳಿಯ ತಾಯಿ ವಾಸಿಸುತ್ತಿದ್ದಾರೆ ಎಂದಿದ್ದರು. ಇದಾದ ಬಳಿಕ ರಜತಿ ಅಮ್ಮಲ್‍ರನ್ನು ಅವರ ಅಧಿಕೃತ ಪತ್ನಿ ಎನ್ನಲಾಯಿತು. ಇದಾದ ಬಳಿಕ ಯಾರೊಬ್ಬರೂ ಕರುಣಾನಿಧಿಯ ಬಳಿ ಇಂತಹ ಪ್ರಶ್ನೆ ಕೇಳಲಿಲ್ಲ.

    ಕಳೆದ ಕೆಲ ದಶಕಗಳಿಂದ ಕರುಣಾನಿಧಿಯವರ ದಿನಚರಿ ಕಣ್ಣಿಗೆ ಕಟ್ಟುವಂತಿತ್ತು. ಅವರು ಸಿಜೆಐ ಕಾಲೋನಿಯ ಐಷಾರಾಮಿ ಬಂಗಲೆಯಲ್ಲಿ ರಜತಿ ಅಮ್ಮಲ್ ಜೊತೆಗೆ ರಾತ್ರಿ ಕಳೆಯುತ್ತಿದ್ದರು. ಬೆಳಗಾಗುತ್ತಿದ್ದಂತೆಯೇ ತಮ್ಮ ಪತ್ನಿ ದಯಾಲ್ ಅಮ್ಮಲ್ ಇದ್ದ ಗೋಪಾಲ್‍ಪುರ್ ನಲ್ಲಿದ್ದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದರು. ತಮಿಳುನಾಡು ರಾಜಕಾರಣದಲ್ಲಿ, ರಾಜಕೀಯ ಮುಖಂಡರಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರಿರುವ ಪರಂಪರೆ ಇದೆ. ಇದನ್ನು ಅಲ್ಲಿನ ಜನರು “ಚಿನ್ನವೀಡು” ಎನ್ನುತ್ತಾರೆ. ಆದರೆ ಹಿಂದೂ ಆಕ್ಟ್ ಅನ್ವಯ ಕಾನೂನಾತ್ಮಕವಾಗಿ ಒಂದಕ್ಕಿಂತ ಹೆಚ್ಚು ವಿವಾಹವಾಗುವುದು ಅಪರಾಧವಾಗಿದೆ. ಆದರೆ ಕರುಣಾನಿಧಿಗೆ ಈ ವಿಚಾರವಾಗಿ ಯಾವತ್ತೂ ಸಮಸ್ಯೆ ಎದುರಾಗಿಲ್ಲ. ಅವರು ತಮ್ಮ ಜೀವನದಲ್ಲಿ ಮೂವರನ್ನು ಮದುವೆಯಾಗಿದ್ದಾರೆ. ಇವರಲ್ಲಿ ಇಬ್ಬರನ್ನು ಸಕಲ ಸಂಪ್ರದಾಯದಂತೆ ವಿವಾಹವಾಗಿದ್ದರೆ, ಒಬ್ಬರನ್ನು ಅನ್ಯ ಪರಂಪರೆಯನ್ವಯ ಮದುವೆಯಾಗಿದ್ದರು.

    ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕರುಣಾನಿಧಿಗೆಗೆ ಪ್ರಖ್ಯಾತ ಗಾಯಕ ಜಯರಾಮನ್ ಪರಿಚಯವಾಗಿತ್ತು. ಕ್ರಮೇಣ ಇವರ ತಂಗಿ ಪದ್ಮಾವತಿ ಅಮ್ಮಾಯ್ಯರ್ ಪರಿಚಯವಾಗಿ ಪ್ರೀತಿಗೆ ತಿರುಗಿತು. 1945 ರಲ್ಲಿ ಕರುಣಾನಿಧಿ ಪದ್ಮಾವತಿಯನ್ನು ವಿವಾಹವಾದರು. ಇವರಿಗೆ ಹುಟ್ಟಿದ ಗಂಡು ಮಗನೇ ಎಂ.ಕೆ ಮುತ್ತು. ಪದ್ಮಾವತಿ ಕರುಣಾನಿಧಿ ಜೊತೆ ಹೆಚ್ಚು ದಿನ ಬದುಕಲೇ ಇಲ್ಲ. 1948ರಲ್ಲಿ ಕಾಯಿಲೆಯೊಂದಕ್ಕೆ ತುತ್ತಾಗಿ ಕೊನೆಯುಸಿರೆಳದ್ದರು. ಇದಾಗಿ ನಾಲ್ಕು ವರ್ಷಗಳ ಬಳಿಕ 1952ರಲ್ಲಿ ಕರುಣಾನಿಧಿ ಪೋಷಕರು ದಯಾಲು ಅಮ್ಮಲ್‍ರೊಂದಿಗೆ ಎರಡನೇ ಮದುವೆ ಮಾಡಿಸಿದ್ದರು. ಇವರಿಗೆ ಮೂವರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಮಗು ಸೇರಿ ನಾಲ್ವರು ಮಕ್ಕಳಾದರು. ಅವರೇ ಎಂ.ಕೆ. ಅಳಗಿರಿ, ಎಂ.ಕೆ ಸ್ಟಾಲಿನ್, ಎಂ.ಕೆ ತಮಿಳಾರಸು ಹಾಗೂ ಸೆಲ್ವಿ. ಇದೊಂದು ಪರಿಪೂರ್ಣ ಕುಟುಂಬವಾಗಿತ್ತು.

    ಈ ವೇಳೆಗಾಗಲೇ ಕರುಣಾನಿಧಿ ರಾಜಕೀಯವೆಂಬ ಹಡಗಿನಲ್ಲಿ ಅಣ್ಣಾದೊರೈಯೊಂದಿಗೆ ತಮ್ಮ ಪ್ರಯಾಣ ಆರಂಭಿಸಿದ್ದರು. ನಂತರ ಚುನಾವಣೆ ಸಂದರ್ಭದಲ್ಲಿ ಎಐಎಡಿಎಂಕೆ ಚುನಾವಣಾ ಪಕ್ಷದ ಪ್ರಚಾರ ತಂಡದಲ್ಲಿ ರಜತಿ ಎಂಬಾಕೆಯನ್ನು ಕಂಡ ಕುರುಣಾನಿಧಿಗೆ ಮತ್ತೊಂದು ಪ್ರೇಮಾಂಕುರವಾಯ್ತು. ದಯಾಲು ಅಮ್ಮಲ್‍ರನ್ನೂ ಬಿಡಲು ಇಷ್ಟಪಡದ ಕರುಣಾನಿಧಿ ರಜತಿಯನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. 1966ರಲ್ಲಿ ಪಕ್ಷದ ಹಲವಾರು ಹಿರಿಯರ ಸಮ್ಮುಖದಲ್ಲಿ ರಜತ ನಾನು ಜೀವಮಾನವಿಡೀ ಜೊತೆಯಾಗಿರುತ್ತೇವೆಂದು ಪ್ರತಿಜ್ಞೆ ಮಾಡಿ, ಆಶೀರ್ವಾದ ಪಡೆದರು. ಇದಾಗಿ ಒಂದು ವರ್ಷದಲ್ಲಿ ಕನಿಮೋಳಿ ಜನಿಸಿದರು. ಕಾನೂನಾತ್ಮಕವಾಗಿ ದಯಾಲು ಅವರ ಹೆಂಡತಿಯಾಗಿದ್ದರೂ, ಜಗತ್ತಿನ ದೃಷ್ಟಿಯಲ್ಲಿ ಇಬ್ಬರೂ ಅವರ ಹೆಂಡತಿಯರು. ಇಬ್ಬರು ಹೆಂಡತಿಯರು ಏಕಕಾಲದಲ್ಲಿ ಕರುಣಾನಿಧಿ ಭಾಗವಹಿಸುತ್ತಿದ್ದ ಸಾರ್ವಜನಿಕ ಸಭೆಗಳಲ್ಲಿ ಕಾಣಸಿಗುತ್ತಿದ್ದರು. ಆದರೆ ಇವರ ಮಕ್ಕಳ ನಡುವೆ ಮಾತ್ರ ಹೊಂದಾಣಿಕೆ ಬರಲೇ ಇಲ್ಲ. ಇಷ್ಟೆಲ್ಲಾ ಏರಿಳಿತಗಳನ್ನು ಹೊಂದಿರುವ ವರ್ಣರಂಜಿತ ವ್ಯಕ್ತಿತ್ವ ಈಗ ಕೊನೆಯಾಗಿದೆ.

  • ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

    ಕರುಣಾನಿಧಿ ಅವರ ಕಪ್ಪು ಕನ್ನಡಕ, ಹಳದಿ ಶಾಲಿನ ರಹಸ್ಯ

    ಚೆನ್ನೈ: ದೇಶದ ಯಾವ ಮೂಲೆಯ ಯಾವ ವ್ಯಕ್ತಿಯ ಬಳಿ ಬಗ್ಗೆ ವಿಚಾರಿಸಿದರೆ ಅವರು ಕರುಣಾನಿಧಿಯವರನ್ನ ಗುರುತಿಸ್ತಾ ಇದ್ದದ್ದು ಗಾಢ ಕಪ್ಪು ಕನ್ನಡಕ ಹಾಗೂ ಹಳದಿ ಶಾಲು. ಒಂದು ಲೆಕ್ಕಾಚಾರದಲ್ಲಿ ಕನ್ನಡಕ ಮತ್ತು ಹಳದಿ ಶಾಲೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು.

    ಬಿಳಿ ಪಂಚೆ, ವೈಟ್ ಶರ್ಟ್, ಬ್ಲ್ಯಾಕ್ ಕನ್ನಡಕ, ಎಡಗೈಯಲ್ಲಿ ಬ್ಲ್ಯಾಕ್ ವಾಚ್ ಹಾಗೂ ಹಳದಿ ಬಣ್ಣದ ಶಾಲು ಹಾಕಿ ಗತ್ತಿನ ಹೆಜ್ಜೆ ಇಡುತ್ತ ವೇದಿಕೆಗೆ ಎಂಟ್ರಿ ಕೊಟ್ಟರು ಎಂದರೆ ಅವರು ಬೇರೆ ಯಾರೂ ಅಲ್ಲ. ಖಡಕ್ ಮಾತು, ನೇರ ನುಡಿ ದಿಟ್ಟ ಹೆಜ್ಜೆಗಳನ್ನ ಇಡುತ್ತ ಕಳೆದ ಅರ್ಧಶತಕಗಳಿಗೂ ಹೆಚ್ಚು ಕಾಲ ತಮಿಳು ಜನರ ಮನಸ್ಸನ್ನ ಗೆದ್ದು ಹೆಸರಾದ ಕಲೈನರ್.

    ತಮಿಳುನಾಡಿನ ಯಾವ ಮಹಾನಾಯಕರನ್ನು ಅಥವಾ ರಾಜಕಾರಣಿಗಳನ್ನು ನೋಡಿದ್ದರೂ ಅವರದ್ದೇ ಆದ ಒಂದು ಟ್ರೇಡ್ ಮಾರ್ಕ್ ಇರುತ್ತೆ. ತಮಿಳಿನ ಮಹಾನಟ ಅನ್ನಿಸಿಕೊಂಡಿದ್ದ ಎಂಜಿಆರ್ ಕನ್ನಡಕ ಟೋಪಿ ಇಲ್ಲದೆ ಹೊರಗಡೆ ಕಾಣಿಸಿಕೊಳ್ಳುತ್ತಿರಲಿಲ್ಲ. ಜಯಲಲಿತಾ ಯಾವಾಗಲೂ ಹಸಿರು ಸೀರೆಯುಡುತ್ತಾ ಇದ್ರು, ಹೀಗೆ ಕರುಣಾನಿಧಿ ಕೂಡ ಕಪ್ಪು ಕನ್ನಡಕ ಮತ್ತು ಹೆಗಲ ಮೇಲೆ ಹಳದಿ ಶಾಲಿಲ್ಲದೆ ಹೊರಗಡೆ ಕಾಲಿಡ್ತಾನೇ ಇರಲಿಲ್ಲ. ಕರುಣಾನಿಧಿಯವರ ಬಹುತೇಕ ಫೋಟೋಗಳಲ್ಲಿ ಅವರ ಹೆಗಲ ಮೇಲೊಂದು ಹಳದಿ ಶಾಲು ಇದ್ದೇ ಇರುತ್ತಿತ್ತು.

    1940ರ ದಶಕದಲ್ಲಿ ಜಾತಿ ತಾರತಮ್ಯದ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಿದ್ದ, ದ್ರಾವಿಡರ್ ಕಳಗಮ್ ಹೋರಾಟವನ್ನು ಹುಟ್ಟುಹಾಕಿದ್ದ, ಪೆರಿಯಾರ್ ಇವಿ ರಾಮಸಾಮಿ ವಿಭಿನ್ನ ರೀತಿಯ ಚಳುವಳಿಯೊಂದನ್ನು ಹುಟ್ಟುಹಾಕಿದ್ದರು. ಹಳದಿ ಬಣ್ಣವನ್ನು ಸಮಾನತೆಯ ಪ್ರತೀಕವೆಂದು ಘೋಷಿಸಿದ್ದರು. ಪೆರಿಯಾರ್ ತತ್ವ ಆದರ್ಶಗಳನ್ನು ಬಲವಾಗಿ ನಂಬಿದ್ದ ಮತ್ತು ಅವರ ಹಾದಿಯಲ್ಲೇ ಸಾಗಿದ ಕರುಣಾನಿಧಿ ಅದೇ ಬಣ್ಣದ ಶಾಲನ್ನು ಧರಿಸೋದಕ್ಕೆ ತೀರ್ಮಾನಿಸಿದ್ದರು.

    ನಾಸ್ತಿಕರೆಂದೇ ಗುರುತಿಸಿಕೊಂಡಿದ್ದ ಕರುಣಾನಿಧಿ ಅವರಿಗೆ ಇಷ್ಟವಾದ ಬಣ್ಣ ಕಪ್ಪು. ಆದರೆ ರಾಜಕೀಯ ಬದುಕಿನಲ್ಲಿದ್ದ ಅವರು ಧರಿಸುತ್ತಿದ್ದದ್ದು, ಬಿಳಿ ಬಣ್ಣದ ಶರ್ಟ್ ಹಾಗೂ ಪಂಚೆ. ಇವರು ಕಪ್ಪು ಬಣ್ಣವನ್ನು ಹೆಚ್ಚಾಗಿ ಇಷ್ಟ ಪಡುತ್ತಿದ್ದರಿಂದಲೇ ಇವರು ಕಟ್ಟುವ ವಾಚಿನ ಡೇಲ್ ಕಪ್ಪು ಬಣ್ಣದಾಗಿರುತ್ತಿತ್ತು. 1967ರಲ್ಲಿ ಅಪಘಾತವೊಂದರಲ್ಲಿ ಕರುಣಾನಿಧಿಯವರ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. 4 ವರ್ಷಗಳವರೆಗೆ ಆ ನೋವನ್ನೂ ನುಂಗಿಕೊಂಡ ಕರುಣಾನಿಧಿ ಕೊನೆಗೆ 1971 ರಲ್ಲಿ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆಗ ಧರಿಸಿದ ಕನ್ನಡಕವೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಕಪ್ಪು ಕನ್ನಡಕ ಇಲ್ಲದೆ ಕರುಣಾನಿಧಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕೆಲವರು ತಮಿಳುನಾಡಿನ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಹೀಗೆ ಗಾಢ ಕಪ್ಪುಬಣ್ಣದ ಕನ್ನಡಕ ಧರಿಸುವ ಶೋಕಿ ಇದೆ ಅಂತ ವ್ಯಂಗ್ಯವಾಡಿದ್ದರು.

    ಹೀಗೆ ಕರುಣಾನಿಧಿಯ ರಾಜಕೀಯ ಬದುಕು ವರ್ಣರಂಜಿತ ಅನ್ನಿಸಿಕೊಂಡಿತ್ತು. ಆದ್ರೀಗ ಕರುಣಾನಿಧಿ ಅನ್ನೋ ರಾಜಕೀಯ ಧುರೀಣ ಇನ್ನೇನಿದ್ರೂ ಪ್ರತಿಮೆಯಷ್ಟೇ.

  • ಶೋಕಸಾಗರದಲ್ಲಿ ಮುಳುಗಿದ ತಮಿಳುನಾಡು- ಹೃದಯಾಘಾತದಿಂದ ಮೂವರ ದುರ್ಮರಣ

    ಶೋಕಸಾಗರದಲ್ಲಿ ಮುಳುಗಿದ ತಮಿಳುನಾಡು- ಹೃದಯಾಘಾತದಿಂದ ಮೂವರ ದುರ್ಮರಣ

    ಚೆನ್ನೈ: ಕಳೆದ ವರ್ಷ ಜಯಲಲಿತಾರನ್ನ, ಈಗ ಕರುಣಾನಿಧಿಯನ್ನು ಕಳೆದುಕೊಂಡಿರುವ ತಮಿಳುನಾಡು ಜನ ಶೋಕಸಾಗರದಲ್ಲಿ ಮುಳುಗಿದ್ದಾರೆ. ಅಯ್ಯ.. ಅಯ್ಯ ಎಂದು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ.

    ನೆಚ್ಚಿನ ನಾಯಕನ ಸಾವಿನ ಸುದ್ದಿ ಕೇಳಿ ಮೂವರು ಹೃದಯಾಘಾತದಿಂದ ಮೃತಪಟ್ಟಿದಾರೆ. ಇನ್ನು ಅಗಲಿದ ನಾಯಕನ ಗೌರವಾರ್ಥ ಏಳು ದಿನ ಶೋಕಾಚರಣೆ ಆಚರಿಸಲು ಸರಕಾರ ಆದೇಶಿಸಿದೆ. ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲೂ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಗುತ್ತದೆ.

    ಕರ್ನಾಟದಲ್ಲೂ ಇಂದು ಶೋಕಾಚರಣೆ ಘೋಷಣೆ ಮಾಡಲಾಗಿದೆ. ಸಂಜೆ ಹೊತ್ತಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಸೇರಿದಂತೆ ವಿವಿಧ ರಾಜ್ಯದ ಮುಖ್ಯಮಂತ್ರಿಗಳು, ಸೇರಿದಂತೆ ಗಣ್ಯಾತಿ ಗಣ್ಯರ ಭಾಗವಹಿಸಲಿದ್ದಾರೆ. ಪತ್ನಿಯರಿಬ್ಬರು, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಮುತ್ತುವೇಲು ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಕರುಣಾನಿಧಿ ಆಸ್ಪತ್ರೆಗೆ ದಾಖಲಾಗಿದ್ದ ವಿಷಯ ತಿಳಿದು 21 ಮಂದಿ ದುರ್ಮರಣ!

     ಘಟನೆ ವಿವರ:
    ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು. ಇದನ್ನೂ ಓದಿ: ರಾಜಾಜಿಹಾಲ್‍ನಲ್ಲಿ ಕರುಣಾನಿಧಿ ಪಾರ್ಥಿವ ಶರೀರ-ಸಾವಿರಾರು ಜನರಿಂದ ಅಂತಿಮ ದರ್ಶನ

    ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಬಳಿಕ ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.

    ಐದು ಬಾರಿ ಮುಖ್ಯಮಂತ್ರಿ:
    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು.

  • ರಾಜಾಜಿಹಾಲ್‍ನಲ್ಲಿ ಕರುಣಾನಿಧಿ ಪಾರ್ಥಿವ ಶರೀರ-ಸಾವಿರಾರು ಜನರಿಂದ ಅಂತಿಮ ದರ್ಶನ

    ರಾಜಾಜಿಹಾಲ್‍ನಲ್ಲಿ ಕರುಣಾನಿಧಿ ಪಾರ್ಥಿವ ಶರೀರ-ಸಾವಿರಾರು ಜನರಿಂದ ಅಂತಿಮ ದರ್ಶನ

    ಚೆನ್ನೈ: ತಮಿಳುನಾಡಿನ ಅಪೂರ್ವ ನಿಧಿ ಕಲೈನಾರ್ ಮರೆಯಾಗಿದ್ದಾರೆ. ನಿಧಿ ಇಲ್ಲದ ದ್ರಾವಿಡ ನಾಡು ಬಡವಾಗಿದ್ದು, ರಾಜ್ಯದಲ್ಲಿ ಕಣ್ಣೀರ ಕೋಡಿ ಹರಿದಿದೆ. ಪತ್ನಿಯರಿಬ್ಬರು, ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿರುವ ಮುತ್ತುವೇಲು ನಿಧನಕ್ಕೆ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.

    ಮಂಗಳವಾರ ಸಂಜೆ 6 ಗಂಟೆ 10 ನಿಮಿಷಕ್ಕೆ ಕಾವೇರಿ ಆಸ್ಪತ್ರೆ ವೈದ್ಯರು ಕರುಣಾನಿಧಿ ಅವರ ಸಾವಿನ ಸುದ್ದಿಯನ್ನ ಪ್ರಕಟಿಸಿದ್ದರು. ನಂತ್ರ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ರಾತ್ರಿ 9.30ರ ಸುಮಾರಿಗೆ ಕಾವೇರಿ ಆಸ್ಪತ್ರೆಯಿಂದ ಗೋಪಾಲಪುರಂ ನಿವಾಸಕ್ಕೆ ಕೊಂಡೊಯ್ದು ಅಂತಿಮ ದರ್ಶನಕ್ಕಿಡಲಾಗಿತ್ತು. ಈ ವೇಳೆ ನಟ ರಜಿನಿಕಾಂತ್, ಪಶ್ಚಿಮಗಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ದರ್ಶನ ಪಡೆದರು. ಇದನ್ನೂ ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

    ಮಧ್ಯರಾತ್ರಿ 1.30 ರ ಸುಮಾರಿಗೆ ಸಿಐಟಿ ಕಾಲೋನಿಯಲ್ಲಿರುವ ಪುತ್ರಿ ಕನಿಮೋಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯ್ತು. ನಸುಕಿನ ಜಾವ 5.30ರ ನಂತರ ರಾಜಾಜಿ ಹಾಲ್‍ನಲ್ಲಿ ಸಾರ್ವಜನಿಕ ದರ್ಶನಕ್ಕಿಡಲಾಗಿದ್ದು, ಸಾಗರೋಪಾದಿಯಲ್ಲಿ ಜನ ಹರಿದು ಬರ್ತಿದ್ದಾರೆ.   ಇದನ್ನೂ ಓದಿ: ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

     ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಮುಖ್ಯಸ್ಥ ಎಂ. ಕಲೈನರ್ ಕರುಣಾನಿಧಿ(94) ಅವರು ಉಸಿರಾಟದ ತೊಂದರೆ, ಜ್ವರ ಹಾಗೂ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಅವರನ್ನು ಜುಲೈ 22ರ ರಾತ್ರಿ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲೈ 22ರ ಬಳಿಕ ಕರುಣಾನಿಧಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಆದರೆ ಆರೋಗ್ಯದಲ್ಲಿ ಮತ್ತೇ ಏರಿಳಿತ ಕಂಡು ಬಂದ ಹಿನ್ನೆಲೆಯಲ್ಲಿ ಕರುಣಾನಿಧಿ ಅವರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾವೇರಿ ಆಸ್ಪತ್ರೆ ವೈದ್ಯರು ಸೋಮವಾರವೇ 24 ಗಂಟೆಗಳ ಕಾಲ ಯಾವ ಭರವಸೆಗಳನ್ನು ನೀಡೋದಕ್ಕೆ ಸಾಧ್ಯವಿಲ್ಲ. ಕ್ಷಣ ಕ್ಷಣಕ್ಕೂ ಕರುಣಾನಿಧಿ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಸ್ಪಷ್ಟಪಡಿಸಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ವಿಧಿವಶರಾದ್ರು. ಇದನ್ನೂ ಓದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

    ಕರುಣಾನಿಧಿ ಅವರು 1924 ಜೂನ್ 3ರಂದು ಮದ್ರಾಸ್ ನ ನಾಗಪಟ್ಟಿನಂ ಜಿಲ್ಲೆಯ ಥಿರುಕ್ಕುವಲೈ ನಲ್ಲಿ ಜನಿಸಿದ್ದರು. ತಮಿಳುನಾಡಿನ ಮೂರನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ತಮಿಳುನಾಡಿನ ರಾಜಕೀಯ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ ನ ಅಧ್ಯಕ್ಷರಾಗಿದ್ದರು. 1969 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಮತ್ತೆ 2006 ಮೇ 13 ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಇದನ್ನೂ ಓದಿ: ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ

  • ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮನವಿಯನ್ನು ತಿರಸ್ಕರಿಸಿದ ಸರ್ಕಾರ

    ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮನವಿಯನ್ನು ತಿರಸ್ಕರಿಸಿದ ಸರ್ಕಾರ

    ಚೆನ್ನೈ: ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರದ ಮನವಿಯನ್ನು ಆಡಳಿತರೂಢ ಎಐಎಡಿಎಂಕೆ ಸರ್ಕಾರ ತಿರಸ್ಕರಿಸಿದೆ.

    ಎಐಎಡಿಎಂಕೆ ಪಕ್ಷದ ನಿರ್ಧಾರದಿಂದಾಗಿ, ಈಗ ಯಾವ ಜಾಗದಲ್ಲಿ ಕರಣಾನಿಧಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ, ಎನ್ನುವ ಬಗ್ಗೆ ಸ್ವಲ್ಪ ಗೊಂದಲ ಏರ್ಪಟ್ಟಿದೆ.

    ಚೆನ್ನೈ ಮರೀನಾ ಬೀಚ್ ಪ್ರದೇಶ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ರಾಜಕೀಯ ನಾಯಕರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಅರ್ಜಿ ಇತ್ಯರ್ಥವಾಗದ ಕಾರಣ ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. ಪ್ರಕರಣ ಕೋರ್ಟ್ ನಲ್ಲಿ ಇರುವ ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದ ಗಾಂಧಿ ಮಂಟಪದ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

    ಸರ್ಕಾರ ಅನುಮತಿ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮರೀನಾ ಬೀಚ್ ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟುಹಿಡಿದಿದ್ದಾರೆ.

    ಏನು ಮಾಡಬೇಕೆಂದು ತಿಳಿಯದ ತಮಿಳುನಾಡು ಸರ್ಕಾರ ಈಗ ಕೇಂದ್ರದ ಮೊರೆ ಹೋಗಿದೆ. ಈ ಮಧ್ಯೆ ಡಿಎಂಕೆ ಪಕ್ಷ ಮರೀನಾ ಬೀಚ್ ಬಳಿ ಇರುವ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡುವಂತೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ಸಲ್ಲಿಸಿದೆ.

    ಮರೀನಾ ಬೀಚ್‍ನಲ್ಲಿಯೇ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.

  • ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ

    ಬದುಕಿರುವಾಗಲೇ ದಂತಕಥೆಯಂತಿದ್ದ ಕರುಣಾನಿಧಿ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಎಚ್‍ಡಿಕೆ

    ಬೆಂಗಳೂರು: ಬದುಕಿರುವಾಗಲೇ ದಂತಕಥೆಯಂತಿದ್ದ’ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ ಎಂದು ಫೇಸ್‍ಬುಕ್‍ನಲ್ಲಿ ಕುಮಾರಸ್ವಾಮಿಯವರು ಬರೆದಿದ್ದಾರೆ.

    ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
    ಹಲವು ಬಾರಿ ಶ್ರೀ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು. ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳು ಅನುಕರಿಸುತ್ತಿವೆ. ಇದನ್ನು ಓದಿ: ‘ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

    ಹೆಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಮ್ಮಿಶ್ರ ಸರ್ಕಾರದ ರಚನೆಗೆ ಶ್ರೀ ಕರುಣಾನಿಧಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿ ಅವರ ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ.

    ಅವರ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ. ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ.

     

  • ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

    ಸಾಹಿತಿ, ಹೋರಾಟಗಾರ, ಪತ್ರಕರ್ತ, ರಾಜಕೀಯ ನಾಯಕ: ಇಲ್ಲಿದೆ ಕರುಣಾನಿಧಿ ಹೆಜ್ಜೆಗುರುತು

    ಬೆಂಗಳೂರು: ತಮಿಳುನಾಡಿನ ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಮುತ್ತುವೇಲು ಕರುಣಾನಿಧಿ ನಿಧನರಾಗಿದ್ದಾರೆ. ಇವತ್ತು ಸಂಜೆ 6 ಗಂಟೆ 10 ನಿಮಿಷಕ್ಕೆ ನಿಧನದ ಸುದ್ದಿಯನ್ನ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು.

    ಅವರಿಗೆ 94 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಜುಲೈ 27ಕ್ಕೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ನಿಗಾ ಘಟಕದಲ್ಲಿ 11 ದಿನಗಳಿಂದ ಚಿಕಿತ್ಸೆ ನಿಂತರವಾಗಿದ್ದ ಅವರನ್ನು ವಿಶೇಷ ವೈದ್ಯರ ತಂಡ ಸೂಕ್ಷ್ಮವಾಗಿ ನಿಗಾವಹಿಸಿತ್ತು. ಆರಂಭದ ಮೂರ್ನಾಲ್ಕು ದಿನಗಳಲ್ಲಿ ಚಿಕಿತ್ಸೆಗೆ ಅಚ್ಚರಿಯ ರೀತಿ ಸ್ಪಂದಿಸುತ್ತಿದ್ದ ತಲೈವಾ ಆರೋಗ್ಯ ಕಳೆದರಡು ದಿನಗಳಿಂದ ತೀವ್ರ ಚಿಂತಾಜನಕವಾಗಿತ್ತು.

    ಕರುಣಾನಿಧಿ ಅವರ ಲಿವರ್, ಕಿಡ್ನಿ ಕಾರ್ಯ ಸ್ಥಗಿತವಾಗುತ್ತಾ ಹೋಯಿತು. ರಕ್ತದೊತ್ತಡವೂ ಗಣನೀಯ ಇಳಿಕೆಯಾಗಿತ್ತು. ಅಯ್ಯ ಅವರನ್ನ ಉಳಿಸಿಕೊಳ್ಳಲು ನಿನ್ನೆ ಸಂಜೆಯಿಂದಲೂ ನಾವು ಶತಪ್ರಯತ್ನ ಮಾಡಿದೆವು. ಆದರೆ, ಉಳಿಸಿಕೊಳ್ಳಲು ಆಗಲಿಲ್ಲ ಅಂತ ಕಾವೇರಿ ಆಸ್ಪತ್ರೆ ವೈದ್ಯರು ಪ್ರಕಟಿಸಿದರು. ಇದನ್ನು ಇದಿ: ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

    ಸೋಮವಾರ ಸಂಜೆಯಿಂದಲೂ ಆಸ್ಪತ್ರೆ ಮುಂದೆ ಜನಸಾಗರ ಸೇರಲಾರಂಭಿಸಿತ್ತು. ಪುತ್ರ ಸ್ಟಾಲಿನ್ ಅವರು ಸಿಎಂ ಪಳನಿಸ್ವಾಮಿ ಅವರ ಜೊತೆ ಸರಣಿ ಸಭೆ ನಡೆಸಿದ್ದರು. ಬೆನ್ನಲ್ಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಪಳನಿಸ್ವಾಮಿ ತುರ್ತು ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಬಿಗಿಗೊಳಿಸಲು ಸೂಚಿಸಿದ್ದರು. ಇದರ ಮಧ್ಯೆ, ಕುಟುಂಬ ವರ್ಗದವರು, ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಹೊರಗೆ ಬಂದವರ ಮೊಗದಲ್ಲಿ ದುಃಖ ಮಡುಗಟ್ಟಿತ್ತು. ಇಷ್ಟೊತ್ತಿಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಮತ್ತೆ ಜಮಾಯಿಸಿದರು. ಮಹಿಳೆಯರಂತು ಕಣ್ಣೀರು ಸುರಿಸುತ್ತ ದೇವರಲ್ಲಿ ಪ್ರಾರ್ಥಸಿದರು. ಆದರೆ, ಅವರ ಪ್ರಾರ್ಥನೆ ಫಲಿಸಲಿಲ್ಲ.

    ಬುಧವಾರ ಅಂತ್ಯಕ್ರಿಯೆ ನಡೆಯಲಿದ್ದು, ತಮಿಳುನಾಡಿನಲ್ಲಿ ಶೋಕದ ಕಾರ್ಮೋಡ ಆವರಿಸಿದೆ. ಶೋಕಾಚರಣೆ ಆಚರಿಸಲಾಗುತ್ತಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ. ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಲಿದ್ದಾರೆ. ಇದನ್ನು ಓದಿ: ಕರುಣಾನಿಧಿ ಯಾವಾಗಲೂ ಕಪ್ಪು ಕನ್ನಡಕವನ್ನೇ ಧರಿಸುತ್ತಿದ್ದರು ಯಾಕೆ?

    ಕರುಣಾನಿಧಿ ಹೆಜ್ಜೆ ಗುರುತು:
    * 1924 ಜೂನ್ 3ರಂದು ತಿರುವರೂರ್ ಜಿಲ್ಲೆಯ ತಿರುಕ್ಕುವಲೈನಲ್ಲಿ ಕರುಣಾನಿಧಿ ಜನನ
    * ಕರುಣಾನಿಧಿ ಮೂಲ ಹೆಸರು ದಕ್ಷಿಣ ಮೂರ್ತಿ
    * 14ನೇ ವಯಸ್ಸಿನಲ್ಲಿ ಅಳಗಿರಿಸ್ವಾಮಿ ಭಾಷಣದಿಂದ ಪ್ರಭಾವಿತರಾಗಿ ರಾಜಕೀಯ ರಂಗಕ್ಕೆ ಪ್ರವೇಶ
    * 1932ರಲ್ಲಿ ಹಿಂದಿ ವಿರೋಧಿ ಚಳವಳಿಯಲ್ಲಿ ಭಾಗಿ
    * ದ್ರಾವಿಡ ಚಳವಳಿಯ ಮೊದಲ ವಿದ್ಯಾರ್ಥಿ ಸಂಘಟನೆ ನಾಯಕ
    * 1957ರಲ್ಲಿ ತಿರುಚಿರಾಪಲ್ಲಿ ಕುಳಿತಲೈ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ
    * 1962ರಲ್ಲಿ ವಿಧಾನಸಭೆ ವಿರೋಧಪಕ್ಷದ ಉಪನಾಯಕ
    * 1967ರಲ್ಲಿ ಲೋಕೋಪಯೋಗಿ ಸಚಿವ
    * 1969ರಲ್ಲಿ ಅಣ್ಣಾದೊರೈ ನಿಧನರಾದ ಬಳಿಕ ಸಿಎಂ
    * 1971, 1989, 1996, 2006ರಲ್ಲಿ ಮುಖ್ಯಮಂತ್ರಿ

    ಸಾಹಿತಿಯಾಗಿ ಕರುಣಾನಿಧಿ:
    ಕರುಣಾನಿಧಿ ಅವರು ತಮಿಳು ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕವನ, ಕಾದಂಬರಿ, ಜೀವನಚರಿತ್ರೆ, ಸಂಭಾಷಣೆ ಸೇರಿದಂತೆ ಗೀತಾರಚನಾಕಾರರಾಗಿ ಗುರುತಿಸಿಕೊಂಡಿದ್ದಾರೆ. 100ಕ್ಕೂ ಹೆಚ್ಚು ಕವನ, ಗದ್ಯ ಬರೆದಿರುವ ಅವರು, 20ನೇ ವಯಸ್ಸಿನಲ್ಲಿ ಜ್ಯುಪಿಟರ್ ಪಿಕ್ಚರ್ಸ್ ನಲ್ಲಿ ಕಥಾ ಲೇಖಕರು. ಅವರು ಅಭಿನಯಿಸಿದ ಮೊದಲ ಸಿನಿಮಾ ‘ರಾಜಕುಮಾರಿ’ ಮೂಲಕವೇ ಜನಪ್ರಿಯತೆ ಗಿಟ್ಟಿಸಿಕೊಂಡರು. ಅಷ್ಟೇ ಅಲ್ಲದೆ 70 ಕ್ಕಿಂತಲೂ ಹೆಚ್ಚು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ ಕೀರ್ತಿ ಕರುಣಾನಿಧಿಗೆ ಸೇರುತ್ತದೆ.

    ಪತ್ರಕರ್ತರಾಗಿ ಕರುಣಾನಿಧಿ:
    ಕರುಣಾನಿಧಿ ತಮ್ಮನ್ನು ಅನೇಕ ಕ್ಷೇತ್ರದಲ್ಲಿ ತೊಡಿಸಿಕೊಂಡಿದ್ದರು. ಪತ್ರಕರ್ತರು, ವ್ಯಂಗ್ಯಚಿತ್ರಕಾರರಾಗಿ ಪತ್ರಿಕೋದ್ಯಮಕ್ಕೆ ಕೊಡುಗೆ ನೀಡಿದ್ದಾರೆ. 1942ರಲ್ಲಿ ಮುರಸೊಳಿ ಮಾಸಪತ್ರಿಕೆ ಆರಂಭಸಿದ ಅವರು, ಪತ್ರಿಕೆಯ ಸ್ಥಾಪಕ ಸಂಪಾದಕರಾಗಿ, ಪ್ರಕಾಶಕರಾಗಿ ಬೆಳೆಸಿದರು. ನಂತರದಲ್ಲಿ ಅದನ್ನು ದಿನಪತ್ರಿಕೆಯಾಗಿ ಪರಿವರ್ತಿಸಿದರು. ಕೇವಲ ಮುರಸೂಳಿ ಅಲ್ಲದೆ “ಕುಡಿಯರಸು” ಪತ್ರಿಕೆಯ ಸಂಪಾದಕರಾಗಿ ಸೇವೆಸಲ್ಲಿಸಿ ‘ಮುತಾರಮ್’ ಪತ್ರಿಕೆಗೆ ಹೊಸಜೀವ ತುಂಬಿದರು.

    ಕರುಣಾನಿಧಿ ಮತ್ತು ವಿವಾದ:
    ಡಿಎಂಕೆ ಪಕ್ಷವನ್ನು ತಮ್ಮ ಹಿಡಿತಕ್ಕೆ ತಗೆದುಕೊಂಡು ನೆಹರು ಮಾದರಿಯಲ್ಲಿಯೇ ವಂಶಪಾರಂಪರ್ಯ ರಾಜಕೀಯಕ್ಕೆ ಮುಂದಾಗಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಕರುಣಾನಿಧಿ ಪುತ್ರರಾದ ಆಳಗಿರಿ, ಸ್ಟಾಲಿನ್, ಕನಿಮೋಳಿ, ಮುತ್ತು ರಾಜಕೀಯ ಪ್ರವೇಶ ಮಾಡಿದ್ದಾರೆ. ಇತ್ತ ಸಂಬಂಧಿ ಹಾಗೂ ಪಕ್ಷದ ಮುಖಂಡ ಮುರಸೊಳಿ ಮಾರನ್ ಪುತ್ರ ಕಲಾನಿಧಿ ಮಾರನ್‍ಗೆ ಪ್ರಕರಣವೊಂದರಲ್ಲಿ ನೆರವು ನೀಡಿದ್ದರು. ಹೀಗಾಗಿ ಕರುಣಾನಿಧಿ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿ ಬಂದಿತ್ತು.

    ತಮ್ಮ ಮುಖ್ಯಮಂತ್ರಿ ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಪೋಷಣೆ ನೀಡಿದ್ದರು ಎನ್ನುವ ವಿವಾದ ಅವರ ಸುತ್ತ ಸುತ್ತಿತ್ತು. ಶ್ರೀರಾಮನ ಬಗ್ಗೆಯೂ ಕರುಣಾನಿಧಿ ಲಘು ಹೇಳಿಕೆ ನೀಡಿದ್ದರು. ಇತ್ತ ಮಗಳು ಎಂ.ಕೆ.ಕನಿಮೋಳಿ 2 ಜಿ ಸ್ಪೆಕ್ಟ್ರಂ ಹಗರಣದಲ್ಲಿ ಬಂಧಿತರಾಗಿದ್ದರು.

  • ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

    ಡಿಎಂಕೆ Vs ಎಐಎಡಿಎಂಕೆ: ಕರುಣಾ ಮೇಲೆ ಜಯಾ ಮುನಿಸಾಗಿದ್ದು ಯಾಕೆ? ಏನದು ಆ ಒಂದು ತಪ್ಪು?

    ತಮಿಳುನಾಡು ರಾಜಕಾರಣದ ಮೇರುಪರ್ವ ಎಂ. ಕರುಣಾನಿಧಿಯ ಜಂಘಾಬಲವನ್ನು ಅಡಗಿಸಿದ್ದು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ. ಬಹುಶಃ ಅದೊಂದು ತಪ್ಪು ಮಾಡದಿದ್ರೆ, ಇಬ್ಬರ ಮಧ್ಯೆ ದ್ವೇಷ ಹುಟ್ಟುತ್ತಿರಲಿಲ್ಲವೇನೋ? ಜಯಲಲಿತಾ ಕೂಡ ಹಗೆತನ ಸಾಧಿಸುತ್ತಿರಲಿಲ್ಲವೇನೋ?

    ಎಂತಹ ಬುದ್ದಿವಂತನಾದರೂ ಒಂದಲ್ಲ ಒಂದು ವಿಷ್ಯದಲ್ಲಿ ಎಡವಿಯೇ ಬೀಳುತ್ತಾನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕೂಡ ಹೊರತಲ್ಲ. ಒಂದು ಕಾಲದಲ್ಲಿ ತಮಿಳುನಾಡು ರಾಜಕೀಯದ ಮೇಲೆ ಪ್ರಭುತ್ವ ಸಾಧಿಸಿದ್ದ ಡಿಎಂಕೆ ಇವತ್ತು ಮೂಲೆಗುಂಪಾಗಲು ಎರಡೇ ಕಾರಣ ಒಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಮತ್ತೊಂದು ಕರುಣಾ ಕುಟುಂಬದಲ್ಲಿನ ಒಳಜಗಳ

    ತಮಿಳುನಾಡು ವಿಧಾನಸಭೆಯಲ್ಲಿ ಏನಾಯ್ತು?
    ಅದು 1989 ಮಾರ್ಚ್ 25. ತಮಿಳುನಾಡಿನ ವಿಧಾನಸಭೆಯಲ್ಲಿ ಗಂಭೀರ ಚರ್ಚೆಯಾಗುತ್ತಿತ್ತು. ಮುಖ್ಯಮಂತ್ರಿ ಕರುಣಾನಿಧಿ ಸರ್ಕಾರವನ್ನು ಪ್ರತಿಪಕ್ಷ ನಾಯಕಿ ಜಯಲಲಿತಾ ತರಾಟೆಗೆ ತೆಗೆದುಕೊಂಡಿದ್ದರು. ಸದನದ ವಿಐಪಿ ಗ್ಯಾಲರಿಯಲ್ಲಿ ಕರುಣಾನಿಧಿ ಅವರ ಇಬ್ಬರು ಪತ್ನಿಯರು ಕಲಾಪ ವೀಕ್ಷಿಸುತ್ತಿದ್ದರು. ಏಕಾಏಕಿ ನಡೆಯಬಾರದಂತಹ ಘಟನೆಯೊಂದು ನಡೆದೇ ಹೋಯ್ತು.

    ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಜಯಲಲಿತಾ ಮೇಲೆ ಡಿಎಂಕೆ ಶಾಸಕರು ಸಿಟ್ಟಾಗಿದ್ದರು. ಏಕಾಏಕಿ ಪ್ರತಿಪಕ್ಷ ನಾಯಕಿಯ ಮೇಲೆರಗಿದ್ದರು. ಓರ್ವ ಹೆಣ್ಣು ಮಗಳು ಅನ್ನೋದನ್ನಾ ಮರೆತ ಡಿಎಂಕೆ ಸದಸ್ಯರು ತಲೆ ಕೂದಲನ್ನು ಎಳೆದು ಚಪ್ಪಲಿಯನ್ನು ಎಸೆದು ಬಿಟ್ಟರು. ಓರ್ವ ಶಾಸಕನಂತೂ ಮೈ ಮೇಲೆ ಇದ್ದ ಸೀರೆಯನ್ನೇ ಎಳೆಯುವಷ್ಟರ ಮಟ್ಟಿಗೆ ಮುಂದಾಗುತ್ತಾನೆ. ದೌರ್ಭಾಗ್ಯ ಎಂದರೆ, ಇವೆಲ್ಲದಕ್ಕೂ ಸಾಕ್ಷಿಯಾಗಿದ್ದು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಸದನದಲ್ಲಿದ್ದ ಅವರ ಇಬ್ಬರ ಹೆಂಡಿರು.

    ಜಯಾ ಪ್ರತಿಜ್ಞೆ:
    ಈ ಘಟನೆಯಿಂದ ಜಯಲಲಿತಾ ಕನಲಿ ಕೆಂಡವಾಗಿದ್ದರು. ಕಣ್ಣೀರಿಡುತ್ತಲೇ ತಮಿಳುನಾಡಿಗೆ ಒಂದೇ ಸಂದೇಶ ರವಾನಿಸಿದ್ರು. ಅವತ್ತೇ ನಿರ್ಧಾರವೊಂದನ್ನು ಮಾಡಿದ್ದರು. ಮುಖ್ಯಮಂತ್ರಿ ಕರುಣಾನಿಧಿ ಸೊಕ್ಕು ಅಡಗಿಸುವ ಶಪಥಗೈಯ್ದರು. “ಕರುಣಾನಿಧಿ ಎಲ್ಲಿಯವರೆಗೆ ಮುಖ್ಯಮಂತ್ರಿ ಆಗಿರುತ್ತಾರೋ ಅಲ್ಲಿಯವರೆಗೆ ನಾನು ವಿಧಾನಸಭೆಗೆ ಕಾಲಿಡುವುದೇ ಇಲ್ಲ. ಮುಖ್ಯಮಂತ್ರಿಯಾಗಿ ಈ ಸದನಕ್ಕೆ ಕಾಲಿಡುತ್ತೇನೆ. ನನಗಾದ ಅಪಮಾನಕ್ಕೆ ಈ ಮೂಲಕ ಸೇಡು ತೀರಿಸಿಕೊಳ್ಳುತ್ತೇನೆ” ಎಂದು ಹೇಳಿಕೆಯೊಂದನ್ನು ನೀಡಿ ಜಯಲಲಿತಾ ಸದನದಿಂದ ಹೊರ ನಡೆದೇ ಬಿಟ್ಟರು.

    ತಮಿಳುನಾಡು ವಿಧಾನಸಭೆಯಲ್ಲಿ ಆದ ಘಟನೆಯಿಂದ ಜಯಲಲಿತಾ ನೊಂದು ಹೋಗಿದ್ದರು. ವಿಧಾನಸಭೆಯಿಂದ ನೇರವಾಗಿ ಮನೆಗೆ ತೆರಳಿ ಬಿಕ್ಕಿ ಬಿಕ್ಕಿ ಅತ್ತರು. ಅವತ್ತೇ ನಿರ್ಧರಿಸಿಬಿಟ್ಟರು. ಯುದ್ಧ ಭೂಮಿಯಿಂದ ಹೆದರಿ ಓಡುವ ಬದಲು ಧೈರ್ಯವಾಗಿ ಪುರುಷರನ್ನು ಹೆದರಿಸಬೇಕೆಂದು ತೀರ್ಮಾನಿಸಿದ್ರು. ಬದ್ಧವೈರಿ ಕರುಣಾನಿಧಿ ವಿರುದ್ಧ ಹೋರಾಟಕ್ಕೆ ಜಯಲಲಿತಾ ಆಯ್ದುಕೊಂಡ ಅಸ್ತ್ರವೇ ಪ್ರಚಾರ.

    ಮೂಲೆ ಮೂಲೆಯೂ ಸಂಚಾರ:
    ವಿಧಾನಸಭೆಯಲ್ಲಿ ಆದ ಅಪಮಾನವನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡ ಜಯಲಲಿತಾ, ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಮಿಳುನಾಡಿನಾದ್ಯಂತ ಮಿಂಚಿನ ಸಂಚಾರ ನಡೆಸಿದ್ರು. ಅಣ್ಣಾಡಿಎಂಕೆ ಮುಖಂಡರು ಕರುಣಾನಿಧಿಯನ್ನು ದುರ್ಯೋಧನ ಎಂದೂ, ಜಯಲಲಿತಾರನ್ನು ದ್ರೌಪದಿ ಎಂದು ಬಿಂಬಿಸಿದ್ರು. ಎಲ್ಲಿವರೆಗೆ ಕರುಣಾನಿಧಿ ಮುಖ್ಯಮಂತ್ರಿ ಪದವಿಯಲ್ಲಿರುವರೋ ಅಲ್ಲಿಯವರೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ ಇದೊಂದು ದುರ್ಯೋಧನ-ದುಶ್ಯಾಸನರ ಸರ್ಕಾರ ಎಂದು ಜನರ ಮುಂದೆ ಜಯಾ ಸಾರಿದ್ರು. ಇದರಿಂದಾಗಿ 1991ರಲ್ಲಿ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ನೆಲಕಚ್ಚಿ ಹೋಯ್ತು. ಯಂಗ್ ಸಿಎಂ ಜಯಲಲಿತಾ ಪ್ರಮಾಣವಚನ ಸ್ವೀಕರಿಸಿದ್ರು.

    ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಿದ ನಂತರ ತಮಿಳುನಾಡು ರಾಜಕೀಯ ಚಿತ್ರಣವೇ ಬದಲಾಗಿ ಹೋಯ್ತು. ಕರುಣಾನಿಧಿ ರಾಜಕೀಯ ಜೀವನದಲ್ಲಿ ನಡೆಯಬಾರದ ಘಟನೆಗಳೂ ನಡೆದು ಹೋದವು. ಜಯಲಲಿತಾ ಸಿಎಂ ಆಗ್ತಿದ್ದಂತೆ ಸೇಡಿನ ರಾಜಕಾರಣ ಶುರುವಾಯಿತು. ಕರುಣಾನಿಧಿ ಬಾಳಲ್ಲಿ ರಾಜಕೀಯ ಹಿನ್ನಡೆಯ ಜೊತೆಗೆ ಸಾಂಸರಿಕ ತಾಪತ್ರಯಗಳೂ ಶುರುವಾದವು. ಅಧಿಕಾರಕ್ಕೇರುತ್ತಿದ್ದಂತೆ, ಜಯಲಲಿತಾ ಸೇಡಿನ ರಾಜಕಾರಣಕ್ಕೆ ಮುಂದಾಗಿದ್ರು. ಚೆನ್ನೈಯಲ್ಲಿನ ಮೇಲುಸೇತುವೆಗಳ ನಿರ್ಮಾಣ ಕಾರ್ಯದಲ್ಲಿ ಭ್ರಷ್ಟಾಚಾರ ಎಸಗಿದ ಆರೋಪದಡಿ ಕರುಣಾನಿಧಿಯವರನ್ನ ಬಂಧಿಸುವಂತೆ ಆದೇಶಿಸಿದ್ರು. 2001ರ ಜೂನ್ 30 ತಡರಾತ್ರಿ 2 ಗಂಟೆ ಸುಮಾರಿಗೆ ಚೆನ್ನೈನ ಗೋಪಾಲಪುರಂ ನಿವಾಸದಿಂದ ಕರುಣಾನಿಧಿ ಅವರನ್ನು ಪೊಲೀಸರು ಎಳೆದು ತಂದು ಬಲವಂತವಾಗಿ ಹೊತ್ತೊಯ್ದರು.

    ಅಧಿಕಾರಕ್ಕಾಗಿ ಸಹೋದರರ ಕಿತ್ತಾಟ..!
    ಕರುಣಾನಿಧಿ ರಾಜಕೀಯ ಬದುಕಿನಲ್ಲಿ ಮತ್ತೊಂದು ಹಿನ್ನಡೆಗೆ ಕಾರಣ ಕುಟುಂಬದಲ್ಲಿನ ಕಿತ್ತಾಟ. ಕರುಣಾನಿಧಿಗೆ ಮೂವರು ಹೆಂಡತಿಯರು. ಎರಡನೇ ಹೆಂಡತಿ ದಯಾಳ್ ಅಮ್ಮಾಳ್ ಮಕ್ಕಳು ಅಳಗಿರಿ ಹಾಗೂ ಸ್ಟ್ಯಾಲಿನ್. ಮೂರನೇ ಹೆಂಡತಿ ಮಗಳು ರಜತಿ ಅಮ್ಮಾಳ್ ಪುತ್ರಿ ಕನ್ನಿಮೋಳಿ. ಕರುಣಾನಿಧಿಗೆ 90 ವರ್ಷ ದಾಟುತ್ತಿದ್ದಂತೆ ಉತ್ತರಾಧಿಕಾರಕ್ಕಾಗಿ ಪಕ್ಷದಲ್ಲಿ ಸೋದರರಿಬ್ಬರ ಕಾಳಗ ಆರಂಭಗೊಂಡಿತ್ತು.

    ಕರುಣಾನಿಧಿಯ ಎರಡನೇ ಪತ್ನಿ ಮಕ್ಕಳಾದ ಅಳಗಿರಿ ಮತ್ತು ಸ್ಟಾಲಿನ್ ನಡುವಿನ ಸಮರ ಪಕ್ಷಕ್ಕೆ ಭಾರೀ ಹಿನ್ನಡೆ ತಂದೊಡ್ಡಿತು. ಕರುಣಾನಿಧಿ ನಂತರದ ಉತ್ತರಾಧಿಕಾರಕ್ಕೆ ಅಳಗಿರಿ ಹೊಂಚು ಹಾಕಿದ್ರೆ. ಅತ್ತ ಡಿಎಂಕೆಯಲ್ಲಿ ಚಾಣಕ್ಯ ಎಂದೇ ಗುರುತಿಸಿಕೊಂಡಿರುವ ಇನ್ನೋರ್ವ ಪುತ್ರ ಸ್ಟಾಲಿನ್ ಕೂಡಾ ಉತ್ತರಾಧಿಕಾರದ ಆಕಾಂಕ್ಷಿಯಾಗಿದ್ದರು.

    ಇಬ್ಬರ ಕಾಳಗವನ್ನು ಶಮನಗೊಳಿಸಲೆಂದೇ ಅಳಗಿರಿಯನ್ನು ಕೇಂದ್ರದಲ್ಲಿ ಮಂತ್ರಿ ಮಾಡಿ ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿದ್ರೆ. ಸ್ಟಾಲಿನ್‍ನನ್ನು ಉಪಮುಖ್ಯಮಂತ್ರಿ ಮಾಡಿ ರಾಜ್ಯ ರಾಜಕಾರಣಕ್ಕೆ ಸೀಮಿತಗೊಳಿಸಿದ್ರು, ಇದ್ರಿಂದ ಸೋದರರ ವೈಷಮ್ಯ ಶಮನಗೊಳಿಸುವ ಉದ್ದೇಶ ಕರುಣಾನಿಧಿಯದ್ದಾಗಿತ್ತು. ಆದ್ರೆ ಅಳಗಿರಿ ಮತ್ತೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದರಿಂದ ಅನಿವಾರ್ಯವಾಗಿ ಪಕ್ಷದಿಂದಲೇ ಉಚ್ಛಾಟನೆ ಮಾಡಬೇಕಾಯಿತು. ಅಣ್ಣಾ ತಮ್ಮಂದಿರ ಕಿತ್ತಾಟದಿಂದ ಡಿಎಂಕೆ ಇಬ್ಭಾಗವಾಯ್ತೇ ಹೊರತು, ಪಕ್ಷಕ್ಕೆ ಅಧಿಕಾರ ದಕ್ಕಲೇ ಇಲ್ಲ.

    ಕುಟುಂಬ ವ್ಯಾಮೋಹಕ್ಕೆ ಒಳಗಾಗಿದ್ದ ಕರುಣಾನಿಧಿ ಬದುಕು ಮಾಜಿ ಟೆಲಿಕಾಂ ಸಚಿವ ಎ.ರಾಜಾರಿಂದ ಮತ್ತಷ್ಟು ಹಾಳಾಯ್ತು. ಸೋದರ ಸಂಬಂಧಿ ಮಾರನ್ ಕುಟುಂಬದೊಂದಿಗೆ ಸಂಬಂಧ ಹಳಸಿದ್ದರಿಂದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್ ಬದಲಿಗೆ ಪುತ್ರಿ ಕನ್ನಿಮೋಳಿ ಸಲಹೆಯಂತೆ ಎ.ರಾಜಾರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. 2-ಜಿ ತರಂಗಾಂತರ ಹಂಚಿಕೆಯಲ್ಲಿ ಸ್ವತಂತ್ರ ಭಾರತ ಕಂಡು ಕೇಳರಿಯದ ಹಗರಣದಲ್ಲಿ ಸಿಲುಕಿದ್ದ ರಾಜಾ, ಪಕ್ಷಕ್ಕೆ ಮಸಿ ಬಳಿದು ಬಿಟ್ಟರು. ರಾಜಾ ಜೊತೆಗೆ ಕನ್ನಿಮೋಳಿ ಸಹ ಜೈಲು ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಯ್ತು. ಈ ಹಗರಣದ ನಂತರ ಡಿಎಂಕೆ ಮೇಲೇಳಲೇ ಇಲ್ಲ. ತಮಿಳುನಾಡಿನ ಜನತೆ ಕರುಣಾನಿಧಿಯನ್ನು ಸೋಲಿಸದಿದ್ದರೂ, ಡಿಎಂಕೆಗೆ ಅಧಿಕಾರ ನೀಡಲೇ ಇಲ್ಲ.

    2011ರ ವಿಧಾನಸಭೆ ಚುನಾವಣೆ, 2013ರ ಲೋಕಸಭೆ ಚುನಾವಣೆ, 2106ರ ವಿಧಾನಸಭೆ ಚುನಾವಣೆಯಲ್ಲೂ ಡಿಎಂಕೆ ಸೋಲಿನ ಮನೆ ಸೇರಬೇಕಾಯಿತು. ತಮಿಳುನಾಡಿನ ಮೇಲೆ ಜಯಲಲಿತಾ ಎಷ್ಟರ ಮಟ್ಟಿಗೆ ಪಾರುಪತ್ಯ ಸಾಧಿಸಿದ್ದರೆಂದರೆ, ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೇರುವ ಮೂಲಕ ಇತಿಹಾಸವನ್ನೇ ಸೃಷ್ಠಿಸಿಬಿಟ್ಟಿದ್ದರು. ಆದ್ರೆ ಒಂದೂವರೆ ವರ್ಷಗಳ ಹಿಂದೆ ಸಿಎಂ ಆಗಿರುವಾಗ್ಲೇ ಜಯಲಲಿತಾ ತೀರಿಕೊಂಡರು. ಅಲ್ಲಿಗೆ ರಾಜಕಾರಣದ ಒಂದು ಶಕೆ ಅಂತ್ಯಗೊಂಡಿತ್ತು.

    https://www.youtube.com/watch?v=mpTq3Jumfeg

    https://www.youtube.com/watch?v=CadStB3RhRs