Tag: Karthikeya 2

  • ನಿಜ ಜೀವನದಲ್ಲೂ ಹೀರೋ ಆದ ನಿಖಿಲ್- ವರ್ಷಗಳಿಂದ ಮುಚ್ಚಿದ ದೇವಸ್ಥಾನ ತೆರೆಸಿದ ನಟ

    ನಿಜ ಜೀವನದಲ್ಲೂ ಹೀರೋ ಆದ ನಿಖಿಲ್- ವರ್ಷಗಳಿಂದ ಮುಚ್ಚಿದ ದೇವಸ್ಥಾನ ತೆರೆಸಿದ ನಟ

    ಕಾರ್ತಿಕೇಯ, ಕಾರ್ತಿಕೇಯ 2 (Karthikeya 2) ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟ ನಿಖಿಲ್ ಸಿದ್ಧಾರ್ಥ್ (Nikhil Siddarth) ಇದೀಗ ಸಿನಿಮಾದಲ್ಲಿ ಮಾತ್ರವಲ್ಲ, ರಿಯಲ್ ಲೈಫ್‌ನಲ್ಲೂ ಹೀರೋ ಆಗಿದ್ದಾರೆ. ಕೆಲ ವರ್ಷಗಳಿಂದ ಮುಚ್ಚಿದ ದೇವಸ್ಥಾನ (Temple) ನಿಖಿಲ್ ತೆರೆಸಿದ್ದಾರೆ.‌ ಅವರ ಕಾರ್ಯಕ್ಕೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಎಂಟ್ರಿ ಕೊಟ್ಟ ವಿನಯ್ ಗೌಡ ದಂಪತಿ

    ಆಂಧ್ರ ಪ್ರದೇಶದ ಭಾಪಟ್ಲ ಜಿಲ್ಲೆಯ ಚಿರಾಲದ ಬಳಿಯಿರುವ ಈ ದೇವಸ್ಥಾನ ವರ್ಷಗಳಿಂದ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಶಿಥಿಲಾವಸ್ಥೆ ತಲುಪಿತ್ತು. ಹೀಗಾಗಿ ದೇವಸ್ಥಾನದ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿರುವ ನಿಖಿಲ್, ಭಕ್ತರಿಗಾಗಿ ದೇವಸ್ಥಾನದ ಬಾಗಿಲನ್ನ ಈಗ ಮತ್ತೆ ತೆರೆದಿದ್ದಾರೆ.

    ಈ ಬಗ್ಗೆ ಸೋಷಿಯಲ್ ವಿಡಿಯೋ ಹಂಚಿಕೊಂಡಿರುವ ನಿಖಿಲ್, ಊರಿನ ಗ್ರಾಮಸ್ಥರಿಗೆ ಶಿಕ್ಷೆಯಾಗಿ ಊರಿನ ದೇವಾಲಯವನ್ನು ಮುಚ್ಚಲಾಗಿತ್ತು. ನಾವು ಕಳೆದ ತಿಂಗಳು ದೇವಾಲಯ ತೆರೆದು ಜೀರ್ಣೋದ್ಧಾರ ಮಾಡಿದೆವು. ಈಗ ಮತ್ತೆ ಅಲ್ಲಿಗೆ ಭೇಟಿ ನೀಡಿದಾಗ ಗ್ರಾಮಸ್ಥರ ಸಂಭ್ರಮ ನೋಡಿ ಖುಷಿಯಾಯ್ತು ಎಂದಿದ್ದಾರೆ. ನಿಖಿಲ್ ನಡೆಯುತ್ತಿರುವಾಗ ಗ್ರಾಮದ ಮಹಿಳೆಯರು ಹಾದಿಗೆ ಹೂವು ಹಾಸಿ ಸ್ವಾಗತ ಕೋರುತ್ತಿರುವ ದೃಶ್ಯವಿದೆ.

    ಸದ್ಯ ಕನ್ನಡದ ನಟಿ ನಭಾ ನಟೇಶ್ (Nabha Natesh) ಜೊತೆ ‘ಸ್ವಯಂಭು’ ಸಿನಿಮಾದಲ್ಲಿ ನಿಖಿಲ್ ನಾಯಕನಾಗಿ ನಟಿಸುತ್ತಿದ್ದಾರೆ. ಇಂಡಿಯನ್ ಹೌಸ್ ಎಂಬ ಹೊಸ ಸಿನಿಮಾವನ್ನು ನಟ ಒಪ್ಪಿಕೊಂಡಿದ್ದಾರೆ.

  • ಕನ್ನಡದಲ್ಲೂ ನಿಖಿಲ್ ಸಿದ್ಧಾರ್ಥ್ ನಟನೆಯ ‘ಕಾರ್ತಿಕೇಯ-2’ ಸಿನಿಮಾದ ಟೀಸರ್

    ಕನ್ನಡದಲ್ಲೂ ನಿಖಿಲ್ ಸಿದ್ಧಾರ್ಥ್ ನಟನೆಯ ‘ಕಾರ್ತಿಕೇಯ-2’ ಸಿನಿಮಾದ ಟೀಸರ್

    ಟಾಲಿವುಡ್ ಚಿತ್ರರಂಗದ ಯುವ ಪ್ರತಿಭಾನ್ವಿತ ನಟ ನಿಖಿಲ್ ಸಿದ್ಧಾರ್ಥ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಾರ್ತಿಕೇಯ-2 ಚಿತ್ರದ ಟೀಸರ್ ರಿಲೀಸ್ ಆಗಿದೆ. ಎಪಿಕ್ ಅಡ್ವೆಂಚರ್ಸ್ ಜರ್ನಿಯ ಕಥಾನಕದ ಈ ಚಿತ್ರದಲ್ಲಿ ನಿಖಿಲ್ ಕಾರ್ತಿಕೇಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೆಲುಗು, ತಮಿಳು, ಹಿಂದಿ, ಮಲಯಾಳಂ ಜೊತೆಗೆ ಕನ್ನಡದಲ್ಲಿಯೂ ಟೀಸರ್ ಬಿಡುಗಡೆಯಾಗಿದೆ.

    ಅನುಪಮ ಪರಮೇಶ್ವರನ್, ಅನುಪಮ್ ಖೇರ್, ಶ್ರೀನಿವಾಸ್ ರೆಡ್ಡಿ, ಹರ್ಷ, ಆದಿತ್ಯ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ.  ಕಾರ್ತಿಕೇಯ 2 ಚಂದೂ ಮೊಂಡೇಟಿ ನಿರ್ದೇಶಿಸಿದ್ದು, ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್‌ ನಡಿ ಸಿನಿಮಾ ನಿರ್ಮಿಸಲಾಗಿದೆ.  ಟೀಸರ್ ಮೂಲಕ ಸಖತ್ ಸದ್ದು ಮಾಡ್ತಿರುವ ಕಾರ್ತಿಕೇಯ-2 ಸಿನಿಮಾ ಆಗಸ್ಟ್ 12ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯ ಚಿತ್ರತೆರೆಗೆ ಬರ್ತಿದೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ಕಾಲ ಭೈರವ ಸಂಗೀತವಿರುವ ಕಾರ್ತಿಕೇಯ-2 ಸಿನಿಮಾ ಇದೇ ತಿಂಗಳ 22ಕ್ಕೆ ವರ್ಲ್ಡ್ ವೈಡ್ ರಿಲೀಸ್ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಇದೇ ದಿನ ನಾಗ ಚೈತನ್ಯ ನಟನೆಯ ಥ್ಯಾಂಕೂ ಸಿನಿಮಾ ಬರ್ತಿರುವುದರಿಂದ ಚಿತ್ರತಂಡ ಸಿನಿಮಾ ಪೋಸ್ಟ್ ಪೋನ್ ಮಾಡಿದೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಿಖಿಲ್ ಸಿದ್ಧಾರ್ಥ್ ಮಾಹಿತಿ‌ ನೀಡಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು.

    Live Tv
    [brid partner=56869869 player=32851 video=960834 autoplay=true]