Tag: karthik mahesh

  • Bigg Boss Kannada: ಸಂಗೀತಾಗೆ ಸಿಹಿ ಮುತ್ತಿಟ್ಟ ಕಾರ್ತಿಕ್

    Bigg Boss Kannada: ಸಂಗೀತಾಗೆ ಸಿಹಿ ಮುತ್ತಿಟ್ಟ ಕಾರ್ತಿಕ್

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರತಿ ಸೀಸನ್‌ನಲ್ಲೂ ಒಂದಲ್ಲಾ ಒಂದು ಪ್ರೇಮ ಕಥೆ ಇದ್ದೇ ಇರುತ್ತೆ. ಈ ಸೀಸನ್‌ನಲ್ಲಿ ಕಾರ್ತಿಕ್- ಸಂಗೀತಾ ಶೃಂಗೇರಿ (Sangeetha Sringeri) ಜೋಡಿ ಮೋಡಿ ಮಾಡ್ತಿದೆ. ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂಬ ಸುದ್ದಿಯ ನಡುವೆ ಇದೀಗ ಸಂಗೀತಾಗೆ ಕಾರ್ತಿಕ್ ಸಿಹಿಮುತ್ತು ಕೊಟ್ಟಿದ್ದಾರೆ. ಇದನ್ನೂ ಓದಿ:‘ಜೇಮ್ಸ್’ ನಿರ್ದೇಶಕನ ಜೊತೆ ಕೈಜೋಡಿಸಿದ ಅಣ್ಣಾವ್ರ ಮೊಮ್ಮಗ ಧೀರೆನ್

    ದೊಡ್ಮನೆಯಲ್ಲಿ ಲವ್, ಬ್ರೇಕಪ್, ಪ್ರೀತಿ ಗೀತಿ ಇತ್ಯಾದಿ ಇವೆಲ್ಲವೂ ಕಾಮನ್ ಆಗಿದೆ. ಬಿಗ್ ಬಾಸ್ 10ನೇ ಸೀಸನ್‌ನಲ್ಲಿ ಕಾರ್ತಿಕ್-ಸಂಗೀತಾ ಲವ್ ಕಹಾನಿ ಹೈಲೆಟ್ ಆಗಿದೆ. ನಮ್ಮಿಬ್ಬರ ನಡುವೆ ಏನಿಲ್ಲ ಏನಿಲ್ಲ ಅಂತ ಹೇಳುತ್ತಲೇ ಹೊಸ ಪ್ರೇಮ ಕಾವ್ಯ ಬರೆಯಲು ರೆಡಿಯಾಗ್ತಿದ್ದಾರೆ.

    ಸಂಗೀತಾ ಜೊತೆ ಮಾತನಾಡುವಾಗ ನಾನು ಯಾರಿಗಾದರೂ ಭೇದ ಭಾವ ಮಾಡ್ತೀನಿ ಅಂತ ಅನಿಸುತ್ತಾ ಅಂತ ಕಾರ್ತಿಕ್ ಕೇಳಿದ್ದಾರೆ. ದಯವಿಟ್ಟು ನೀವು ಇದನ್ನೆಲ್ಲಾ ನನಗೆ ಕೇಳಲೇಬೇಡಿ ಅಂತ ಹೇಳುತ್ತಾರೆ. ಬಳಿಕ ತನಿಷಾ ಕೂಡ ಇಬ್ಬರ ಜೊತೆ ಜಾಯಿನ್ ಆಗಿ ಮಾತನಾಡುತ್ತಾರೆ. ಮಾತನಾಡುತ್ತಿದ್ದಾಗ ಸಂಗೀತಾ ಕೈಗೆ ಕಾರ್ತಿಕ್ (Karthik) ಮುತ್ತು ಕೊಡುತ್ತಾರೆ. ಇದು ಸಂಗೀತಾ ಅರಿವಿಗೆ ಬಂದಿಲ್ಲ. ತನಿಷಾ ಇದನ್ನ ಗಮನಿಸಿ ಕೇಳುತ್ತಾರೆ. ಇಲ್ಲವಲ್ಲ ಹಾಗೇನು ಆಗಿಲ್ಲ, ಅವರ ಕೈಯಲ್ಲಿನ ಸ್ಮೆಲ್ ನೋಡಿದೆ ಎಂದು ಕಾರ್ತಿಕ್ ಟಾಪಿಕ್ ಬದಲಿಸುತ್ತಾರೆ.

    ಬಿಗ್ ಬಾಸ್‌ಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡುವ ದಿನ ಕಾರ್ತಿಕ್, ಅಮ್ಮಾ ಮನೆಗೆ ಸೊಸೆಯನ್ನ ಕರಕೊಂಡು ಬರುತ್ತೀನಿ ಅಂದಿದ್ದರು. ಅಂದಿನ ಆ ಮಾತನ್ನೇ ನಿಜ ಮಾಡುವ ಹಾದಿಯಲ್ಲಿದ್ದಾರೆ. ದಿವ್ಯಾ‌ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿಯಂತೆಯೇ ಕಾರ್ತಿಕ್-ಸಂಗೀತಾ ಕೂಡ ಜೋಡಿಯಾಗುವ ಮುನ್ಸೂಚನೆ ಸಿಕ್ತಿದೆ. ಎಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಗಣಿಯಲ್ಲೂ ಚೆನ್ನಾಗಿ ಕಾಣಿಸುತ್ತಿದ್ರಿ, ಸಂಗೀತಾಗೆ ಕಾರ್ತಿಕ್ ಕಾಂಪ್ಲಿಮೆಂಟ್

    ಸಗಣಿಯಲ್ಲೂ ಚೆನ್ನಾಗಿ ಕಾಣಿಸುತ್ತಿದ್ರಿ, ಸಂಗೀತಾಗೆ ಕಾರ್ತಿಕ್ ಕಾಂಪ್ಲಿಮೆಂಟ್

    ಬಿಗ್ ಬಾಸ್ ಮನೆ (Bigg Boss Kannada 10) ಇದೀಗ 2ನೇ ವಾರಕ್ಕೆ ಧಗ ಧಗ ಅಂತಾ ಉರಿಯುತ್ತಿದೆ. ಶುರುವಿನಲ್ಲಿ ತಣ್ಣಗೆ ಇದ್ದ ಮನೆ ರಣರಂಗವಾಗಿದೆ. ವಿನಯ್ & ಟೀಂ ಮುಂದೆ ಸೋತ ಸಂಗೀತಾ (Sangeetha Sringeri) ಗಳಗಳನೇ ಅತ್ತಿದ್ದಾರೆ. ಮನೆಯಲ್ಲಿ ನಾನು ಟಾರ್ಗೆಟ್ ಆಗುತಿದ್ದೇನೆ ಎಂದು ಭಾವುಕರಾಗಿದ್ದಾರೆ.

    ಈ ವಾರದ ಟಾಸ್ಕ್‌ಗಳಿಗೆ ತಲಾ 8 ಸದಸ್ಯರಿರುವ ಎರಡು ತಂಡಗಳ ಅಗತ್ಯವಿತ್ತು. ಅದಕ್ಕೂ ಮುನ್ನ, ಎಲ್ಲರೂ ಈ ತಂಡಗಳಿಗೆ ನಾಯಕರನ್ನು ಒಮ್ಮತದಿಂದ ಆರಿಸಬೇಕಿತ್ತು. ಎಲ್ಲರೂ ವಿನಯ್ ಗೌಡ ಹಾಗೂ ಕಾರ್ತಿಕ್ ಮಹೇಶ್ (Karthik Mahesh) ಹೆಸರುಗಳನ್ನ ಕ್ಯಾಪ್ಟನ್ ಆಗಲು ಹೇಳಿದರು. ಬಳಿಕ ಬಿಗ್ ಬಾಸ್ ಕೊಟ್ಟ ಟಾಸ್ಕ್‌ವೊಂದರಲ್ಲಿ ಕಾರ್ತಿಕ್ ತಂಡದಿಂದ ನೀತು, ಸಂಗೀತಾಗೆ ಎದುರಾಳಿಗಳಾಗಿ ಮೈಕಲ್ ಮತ್ತು ರಕ್ಷಕ್ ಆಟವಾಡಿದ್ದರು. ಇವರ ಮುಂದೆ ಗೆಲ್ಲೋದ್ರಲ್ಲಿ ಸಂಗೀತಾ-ನೀತು ಎಡವಿದ್ದರು. ಬಿಗ್ ಬಾಸ್ ಅಣತಿಯಂತೆ ಸಂಗೀತಾ ಅವರನ್ನ ಹೆಸರನ್ನ ಶಿಕ್ಷೆಗೆ ಅರ್ಹ ಅಂತ ವಿನಯ್ & ಟೀಂ ಒಮ್ಮತ ನಿರ್ಧಾರದಿಂದ ಹೇಳಿದ್ದರು.

    ಮೊದಲ ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ನೇತೃತ್ವದ ಮಾಣಿಕ್ಯ ತಂಡ ಸೋಲು ಅನುಭವಿಸಿತು. ಪರಿಣಾಮ, ಒಬ್ಬರು ಶಿಕ್ಷೆ ಅನುಭವಿಸಬೇಕಿತ್ತು. ಶಿಕ್ಷೆಯಾಗಿ ಸಂಗೀತಾ ಶೃಂಗೇರಿ ಸಗಣಿ ಸ್ನಾನ ಮಾಡಬೇಕಿತ್ತು. ತಪ್ಪು ಮಾಡದೇ ಇದ್ದರೂ, ಶಿಕ್ಷೆ ಪಡೆದ ಕಾರಣಕ್ಕೆ ಸಂಗೀತಾ ಶೃಂಗೇರಿ ಬೇಸರಗೊಂಡರು. ಇದು ಅನ್‌ಫೇರ್. ಇಲ್ಲಿರೋಕೆ ನನಗೆ ಇಷ್ಟವಾಗುತ್ತಿಲ್ಲ ಎಂದು ತಮ್ಮಲ್ಲಿನ ಅಸಮಾಧಾನವನ್ನ ಸಂಗೀತಾ ಶೃಂಗೇರಿ ಹೊರಹಾಕಿದರು. ಇದನ್ನೂ ಓದಿ:ಫೋನ್ ತಂದುಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ ಊರ್ವಶಿ

    ವಿನಯ್ (Vinay Gowda) ತಂಡದ ನಡೆಗೆ ಸಂಗೀತಾ ಕಣ್ಣೀರಿಟ್ಟರು. ನನ್ನನ್ನು ಪದೇ ಪದೇ ಟಾರ್ಗೆಟ್ ಮಾಡ್ತಿದ್ದಾರೆ ಅದ್ಯಾಕೆ ಅಂತಾ ಭಾವುಕರಾದರು. ಸಂಗೀತಾ ಅಳುವಾಗ ಕಾರ್ತಿಕ್ ಸಮಾಧಾನ ಮಾಡಿದರು. ಬಳಿಕ ಬಿಗ್ ಬಾಸ್ ಆದೇಶದಂತೆ ಸಂಗೀತಾ ಸಗಣಿ ನೀರನ್ನ ಮನೆಮಂದಿ ಎರಚಿದರು. ಸಂಗೀತಾಗೆ ಸಗಣಿ ಹಾಕುವಾಗ ಕಾರ್ತಿಕ್ ಕೂಡ ಭಾವುಕರಾದರು.

    ಬೇಸರದಲ್ಲಿದ್ದ ಸಂಗೀತಾಗೆ ಕಾರ್ತಿಕ್ ಕಾಲೆಳೆದಿದ್ದಾರೆ. ಸಗಣಿ ಹಾಕಿದಾಗಲೂ ಚೆನ್ನಾಗಿ ಕಾಣಿಸುತ್ತಿದ್ರಿ? ಅದು ಹೇಗೆ ಅಂತಾ ಕಾರ್ತಿಕ್ ಹೊಗಳಿದ್ದಾರೆ. ಸಂಗೀತಾ ಅವರನ್ನು ತಬ್ಬಿ ಸಮಾಧಾನ ಮಾಡಿದ್ದಾರೆ. ಈ ಮೂಲಕ ನೋವಿನಲ್ಲಿದ್ದ ಸಂಗೀತಾಗೆ ಕಾರ್ತಿಕ್ ಜೊತೆಯಾಗಿದ್ದಾರೆ. ಇಬ್ಬರ ಸ್ನೇಹ ಸಲುಗೆ ಅಭಿಮಾನಿಗಳು ಮೋಡಿ ಮಾಡ್ತಿದೆ. ಇವರಿಬ್ಬರು ಮುಂದಿನ ದಿನಗಳಲ್ಲಿ ಜೋಡಿ ಹಕ್ಕಿ ಆಗೋದ್ರಲ್ಲಿ ಡೌಂಟೆಯಿಲ್ಲ ಅಂತಿದ್ದಾರೆ ಫ್ಯಾನ್ಸ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]