Tag: karthik mahesh

  • ಅನ್ನಕ್ಕಾಗಿ ಕಾರ್ತಿಕ್‌ ಕೂಗಾಟ- ಗಳಗಳನೇ ಅತ್ತ ಸಂಗೀತಾ

    ಅನ್ನಕ್ಕಾಗಿ ಕಾರ್ತಿಕ್‌ ಕೂಗಾಟ- ಗಳಗಳನೇ ಅತ್ತ ಸಂಗೀತಾ

    ದೊಡ್ಮನೆಯಲ್ಲಿ ಸಂಗೀತಾ-ಕಾರ್ತಿಕ್ (Karthik Mahesh) ದೂರಾ ಆಗಿದ್ದಾರೆ. ಒಬ್ಬರ ಮೇಲೆ ಒಬ್ಬರು ಜಿದ್ದು ಸಾಧಿಸುತ್ತಿದ್ದಾರೆ. ಅದು ನೋಡೋರ ಪ್ರೇಕ್ಷಕರ ಕಣ್ಣಿಗೂ ಎದ್ದು ಕಾಣ್ತಿದೆ. ತುತ್ತು ಅನ್ನಕ್ಕೂ ಜಗಳ ಆಡಿದ್ದಾರೆ. ಕಾರ್ತಿಕ್ ಮಾತಿನಿಂದ ‘ಚಾರ್ಲಿ’ ಬೆಡಗಿ ಸಂಗೀತಾ (Sangeetha Sringeri) ಗಳಗಳನೆ ಅತ್ತಿದ್ದಾರೆ. ಕಾರ್ತಿಕ್ ಅಂದ ಆ ಮಾತಿನಿಂದ ನಟಿ ಕಣ್ಣೀರಿಟ್ಟಿದ್ದಾರೆ.

    ಬಿಗ್‌ ಬಾಸ್‌ ಮನೆಯಲ್ಲಿ ಅನ್ನದ ವಿಚಾರಕ್ಕೆ ಕೂಗಾಡಿದ್ದಾರೆ. ಟಾಸ್ಕ್ ಮಧ್ಯೆ ‘ಬಿಗ್ ಬಾಸ್’ (Bigg Boss) ವಿರಾಮ ಘೋಷಿಸಿದರು. ಈ ವೇಳೆ ಊಟ ಮಾಡುವ ಸಂದರ್ಭದಲ್ಲಿ ಎಲ್ಲರೂ ನೋಡಿ ಬಡಿಸಿಕೊಳ್ಳಿ ಅಂತ ಸಿರಿ ಹೇಳುತ್ತಲೇ ಇದ್ದರು. ಆದರೆ, ಸ್ನೇಹಿತ್ ಕೊಂಚ ಜಾಸ್ತಿ ಅನ್ನ ಬಡಿಸಿಕೊಂಡರು. ಎಲ್ಲರಿಗೂ ಅನ್ನ ಸಾಲಲ್ಲ ಅಂತ ಗಮನಿಸಿದ ಕ್ಯಾಪ್ಟನ್ ಕಾರ್ತಿಕ್ ಎಲ್ಲರ ಮೇಲೆ ಕೂಗಾಡಿದರು. ಇದನ್ನೂ ಓದಿ:ಸುದೀಪ್ ನಟನೆಯ ‘ಮ್ಯಾಕ್ಸ್’ ಹುಡುಗೀರು

    ಕಾರ್ತಿಕ್ ಕೂಗಾಡಿದ್ದು ಸ್ನೇಹಿತ್ ಕುರಿತಾಗಿ. ಆದರೆ, ಸ್ನೇಹಿತ್ (Snehith Gowda) ಹೆಸರನ್ನ ಕಾರ್ತಿಕ್ ಹೇಳಲಿಲ್ಲ. ಇತ್ತ ಸಂಗೀತಾ ಅದನ್ನ ಪರ್ಸನಲ್ ಆಗಿ ತಗೊಂಡು ತನಗೆ ಕಾರ್ತಿಕ್ ಹೇಳಿದ್ರೂ ಎಂದು ಭಾವಿಸಿ ಗಳಗಳನೆ ಕಣ್ಣೀರು ಸುರಿಸಿದರು. ಕಾರ್ತಿಕ್ ಕೂಗಾಡಿದ್ದಕ್ಕೆ ಗಳಗಳನೆ ಅತ್ತು ಸಂಗೀತಾ ಗೋಳಾಡಿದರು.

    ಸಂಗೀತಾಗೆ ನಮ್ರತಾ, ವಿನಯ್ ಯಾರು ಏನೇ ಹೇಳಿದರೂ ಊಟ ಮಾಡದೇ ಕಣ್ಣೀರು ಸುರಿಸಿದ್ದರು. ಎಲ್ಲರೂ ಕೆಲಸ ಮಾಡೋದು ಊಟಕ್ಕಾಗಿಯೇ ಊಟ ಮಾಡುವಾಗ ಕಾರ್ತಿಕ್ ಹೀಗೆ ಮಾತನಾಡಬಾರದಿತ್ತು ಎಂದು ನಟಿ ಭಾವುಕರಾಗಿದ್ದಾರೆ. ಇತ್ತ ನಾನು ಹೇಳಿದ್ದು ಸಂಗೀತಾಗೆ ಅಲ್ಲ, ಅದಕ್ಕೆ ಅತ್ರೆ ನಾನೇನು ಮಾಡೋಕೆ ಆಗಲ್ಲ ಅಂತ ಕಾರ್ತಿಕ್ ಖಡಕ್ ಆಗಿ ಮಾತನಾಡಿದ್ದಾರೆ.

    ವಿನಯ್ & ಗ್ಯಾಂಗ್ ಊಟ ತಿನ್ನಿಸುವ ಪ್ರಯತ್ನ ಮಾಡಿದ್ರು. ಒಟ್ನಲ್ಲಿ ಚೆನ್ನಾಗಿದ್ದ ಕಾರ್ತಿಕ್ – ಸಂಗೀತಾ ನಡುವೆ ಬಿರುಕಾಗಿದೆ. ವೈಯಕ್ತಿಕ ಸಮಸ್ಯೆಗಳು ಆಟದ ವಿಚಾರದಲ್ಲೂ ಎದ್ದು ಕಾಣ್ತಿದೆ. ಕಳೆದ ವಾರದ ಸಂಗೀತಾ, ತನಿಷಾ, ಕಾರ್ತಿಕ್ ಜಗಳ ಇನ್ನೂ ಮುಂದುವರೆದಿದೆ. ಇಬ್ಬರ ಕೋಲ್ಡ್ ವಾರ್ ನಡುವೆ ಬಿಗ್ ಬಾಸ್ ಟಾಸ್ಕ್‌ ವಾರ್‌ನ ಮೂವರು ಗೆಲ್ಲಲೇಬೇಕು ಅಂತ ಪಣ ತೊಟ್ಟಿದ್ದಾರೆ.

    ಕಿಚ್ಚನ ಕಳೆದ ವಾರದ ಪಾಠಕ್ಕೆ ಮಣಿಯದ ಸಂಗೀತಾ ನಡೆಗೆ ಫ್ಯಾನ್ಸ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತುಕಾಲಿ, ಕಾರ್ತಿಕ್ ಗೆ ತಲೆ ಬೊಳಿಸಿದ ವಿಚಾರ, ಸಂಗೀತಾ ನಡೆ ಇವೆಲ್ಲವೂ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ. ಲವ್ ಬರ್ಡ್ಸ್‌ ಆಗಿದ್ದ ಈ ಜೋಡಿ ಮತ್ತೆ ಒಂದಾಗ್ತಾರಾ ಕಾಯಬೇಕಿದೆ.

  • Bigg Boss: ಲವ್‌ ಯೂ ಎಂದ ಸಂಗೀತಾ- ನಾಚಿ ನೀರಾದ ಕಾರ್ತಿಕ್‌

    Bigg Boss: ಲವ್‌ ಯೂ ಎಂದ ಸಂಗೀತಾ- ನಾಚಿ ನೀರಾದ ಕಾರ್ತಿಕ್‌

    ಬಿಗ್ ಬಾಸ್ (Bigg Boss Kannada 10) ಈಗ ಟಿಆರ್‌ಪಿಯಲ್ಲಿ ನಂಬರ್ ಒನ್ ಆಗಿ ಮುನ್ನುಗ್ಗುತ್ತಿದೆ. ದೊಡ್ಮನೆ ಆಟಕ್ಕೆ ಜನ ಕೂಡ ಸೈ ಎಂದು ಚಪ್ಪಾಳೆ ಹೊಡೆಯುತ್ತಿದ್ದಾರೆ. ಹೀಗಿರುವಾಗ ಬಿಗ್ ಬಾಸ್‌ನ ಸೆಂಟರ್ ಆಫ್ ಅಟ್ರಾಕ್ಷನ್ ಸಂಗೀತಾ- ಕಾರ್ತಿಕ್ (Karthik Mahesh) ಜೋಡಿ ಲವ್ವಿ ಡವ್ವಿ ಕೂಡ ಸಖತ್ ಮೋಡಿ ಮಾಡ್ತಿದೆ. ಇದೀಗ ಸಂಗೀತಾಗೆ ಕ್ಯಾಪ್ಟನ್ ಕಾರ್ತಿಕ್ ಕ್ಯೂಟ್ ಆಗಿರೋ ಶಿಕ್ಷೆಯೊಂದನ್ನ ಕೊಟ್ಟಿದ್ದಾರೆ. ಕಾರ್ತಿಕ್‌ಗೆ ಲವ್ ಯೂ ಅಂತ ಹೇಳೋದೇ ಸಂಗೀತಾ ಶಿಕ್ಷೆಯಾಗಿದೆ.

    ದೊಡ್ಮನೆಯ ಲವ್ ಬರ್ಡ್ಸ್ ಸಂಗೀತಾ- ಕಾರ್ತಿಕ್ ಸದಾ ಒಂದಲ್ಲಾ ಒಂದು ವಿಚಾರವಾಗಿ ಹೈಲೆಟ್ ಆಗುತ್ತಲೇ ಇರುತ್ತಾರೆ. ಕಳೆದ ಮೂರು ದಿನಗಳಿಂದ ಕಾರ್ತಿಕ್, ಸಂಗೀತಾ, ತನಿಷಾ ನಡುವೆ ಹೈವೋಲ್ಟೇಜ್ ಜಗಳದ ನಂತರ ಕಾರ್ತಿಕ್-ಸಂಗೀತಾ ನಡುವೆ ಕ್ಯೂಟ್ ಪ್ರಪೋಸಲ್ ನಡೆದಿದೆ. ಹೇಗೆ ಅಂತೀರಾ. ಇಲ್ಲಿದೆ ಮಾಹಿತಿ.

    ನಿನ್ನೆ ಎಪಿಸೋಡ್‌ನಲ್ಲಿ ತುಕಾಲಿ ಸಂತೂ 3 ಬಾರಿ ಮೈಕ್ ಹಾಕೋದನ್ನ ಮರೆತಿದ್ದಾರೆ. ಅದಕ್ಕೆ ಬಿಗ್ ಬಾಸ್ ಕೂಡ ಆದೇಶಿಸಿ, ತುಕಾಲಿ ನಿಮ್ಮ ಮೈಕ್‌ನ ಸರಿಯಾಗಿ ಧರಿಸಿ ಎಂದು ಆರ್ಡರ್ ಮಾಡಿದ್ದಾರೆ. ಇದನ್ನ ಕೇಳಿರೋ ಕ್ಯಾಪ್ಟನ್ ಕಾರ್ತಿಕ್ ತುಕಾಲಿಗೆ ಶಿಕ್ಷೆಯೊಂದನ್ನ ನೀಡಿದ್ದಾರೆ. ನೀವೂ ಎಲ್ಲಿ ಹೇಗೆ ನಡೆಯಿರಿ, ಹೆಜ್ಜೆ ನಮಸ್ಕಾರ ಹಾಕಿಯೇ ನಡೆಯಬೇಕು ಎಂದು ಕ್ಯಾಪ್ಟನ್‌ ಕಾರ್ತಿಕ್‌ ಆದೇಶ ನೀಡಿದ್ದರು. ಇದನ್ನೂ ಓದಿ:ವರ್ಷ ಜೊತೆಗಿನ ಬ್ರೇಕಪ್ ಬೆನ್ನಲ್ಲೇ ಹೀರೋ ಆದ ವರುಣ್ ಆರಾಧ್ಯ

    ಇದೀಗ ಇದೇ ತಪ್ಪನ್ನ ಸಂಗೀತಾ ಶೃಂಗೇರಿ (Sangeetha Karthik) ಕೂಡ ಮಾಡಿದ್ದಾರೆ. ಮನೆಯಲ್ಲಿ ಸರಿಯಾಗಿ ಮೈಕ್ ಧರಿಸದೇ ಇರೋದ್ದಕ್ಕೆ ಬಿಗ್ ಬಾಸ್ ಸಂಗೀತಾಗೂ ಆದೇಶ ನೀಡಿದ್ದಾರೆ. ಅದಕ್ಕೆ ಕಾರ್ತಿಕ್ ಏನು ಶಿಕ್ಷೆ ನೀಡಬೋದು ಎಂದು ಕಾಯುತ್ತಿದ್ದ ಮನೆಮಂದಿಗೆ ಕಾರ್ತಿಕ್ ನಡೆ ಅಚ್ಚರಿ ಮೂಡಿಸಿದೆ. ಸಂಗೀತಾ ಏನೇ ಮಾತನಾಡಿದ್ರು, ಐ ಲವ್ ಯೂ ಕ್ಯಾಪ್ಟನ್ ಎಂದು ಹೇಳಿಯೇ ಮಾತನಾಡಬೇಕು ಎಂದು ಕಾರ್ತಿಕ್‌ ಆರ್ಡರ್‌ ಮಾಡಿದ್ದಾರೆ.

    ಕಾರ್ತಿಕ್ ಮಾತಿಗೆ ಮನೆಮಂದಿ, ಇದು ಯಾವ ರೀತಿಯ ಶಿಕ್ಷೆ ಎಂದು ಆಡಿಕೊಂಡರು. ಹೀಗೆ ಶಿಕ್ಷೆ ಕೋಡೋದ್ದಕ್ಕೆ ನಾಚಿಕೆ ಆಗಲ್ವಾ ಅಂತ ಕಾರ್ತಿಕ್‌ಗೆ ಚಾರ್ಲಿ ನಟಿ ಕಾಲೆಳೆದರು. ಸಿರಿ- ಭಾಗ್ಯಶ್ರೀ ಕೂಡ ಸ್ವಾಮಿ ಕಾರ್ಯ ಸ್ವಕಾರ್ಯ ಕೆಲಸ ಮಾಡ್ತಿದ್ದೀರಾ ಅಂತ ಹೇಳಿ ಟಾಂಗ್ ಕೊಟ್ಟರು. ಎಲ್ಲರೂ ಆಡಿಕೊಳ್ಳೋದನ್ನ ನೋಡಿ ಸರಿ ಶಿಕ್ಷೆ ಜೇಂಜ್ ಮಾಡ್ತೀನಿ. ಯೋಚಿಸಿ ಹೇಳ್ತೀನಿ ಅಂತ ಕಾರ್ತಿಕ್ ಸುಮ್ಮನಾದರು.

    ಇದೀಗ ಸಂಗೀತಾ ಲವ್ ಯೂ ಎಂದು ಹೇಳಿರೋ ಮಾತು ಮುಂದಿನ ದಿನಗಳಲ್ಲಿ  ನಿಜವಾಗುತ್ತಾ? ಬಿಗ್ ಬಾಸ್ ಆಟ ಮುಗಿದ ಮೇಲೂ ಲವ್ ಬರ್ಡ್ಸ್ ಆಗಿ ಉಳಿಯುತ್ತಾರಾ? ಪ್ರೀತಿ, ಪ್ರೇಮ, ಸಲುಗೆ ಮುಂದಿನ ಹಂತಕ್ಕೆ ಹೋಗುತ್ತಾ ಕಾಯಬೇಕಿದೆ.

  • ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ- ಸಂಗೀತಾಗೆ ರೇಗಿಸಿದ ಕಾರ್ತಿಕ್‌

    ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ- ಸಂಗೀತಾಗೆ ರೇಗಿಸಿದ ಕಾರ್ತಿಕ್‌

    ಬಿಗ್‌ ಬಾಸ್‌ ಮನೆಯ (Bigg Boss House) ಚೆಂದದ ಜೋಡಿ ಅಂದರೆ ಸಂಗೀತಾ ಮತ್ತು ಕಾರ್ತಿಕ್. ಮನೆಯೊಳಗೂ ಮನೆಹೊರಗೂ ಈ ಜೋಡಿ ಸಖತ್ ಹೈಪ್ ಕ್ರಿಯೆಟ್ ಮಾಡಿದೆ. ಇದೀಗ ಬಿಗ್ ಮನೆಯಲ್ಲಿ ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್ ಕರೆದಿದ್ದಾರೆ. ನನ್ನ ರಕ್ತಹೀರಿಕೊಂಡು ಬಿಟ್ಟಿದ್ದಾರೆ ಎಂದು ಸಂಗೀತಾಗೆ ರೇಗಿಸಿದ್ದಾರೆ ಕಾರ್ತಿಕ್.‌

    ಸಂಗೀತಾ ಮತ್ತು ಕಾರ್ತಿಕ್ ಅದ್ಯಾವಾಗ ಜಗಳ ಮಾಡಿಕೊಳ್ಳುತ್ತಾರೆ. ಅದ್ಯಾವಾಗ ಒಂದಾಗುತ್ತಾರೆ. ಮನೆಯೊಳಗೆ ಇರುವವರಿಗೂ ಪ್ರೇಕ್ಷಕರಿಗೂ ಇಬ್ಬರಿಗೂ ಅಚ್ಚರಿ ಮೂಡಿಸಿದೆ. ಟಾಸ್ಕ್‌ವೊಂದರಲ್ಲಿ ಒಬ್ಬರನೊಬ್ಬರು ಸೇಫ್ ಮಾಡಿಲ್ಲ ಎಂಬ ವಿಚಾರಕ್ಕೆ ಕಾರ್ತಿಕ್- ಸಂಗೀತಾ (Sangeetha Sringeri) ಇಬ್ಬರೂ ಸೂರು ಕಿತ್ತು ಹೋಗುವ ಹಾಗೆ ಜಗಳವಾಡಿದ್ದಾರೆ. ಇದರ ನಡುವೆ ಗಾಳಿಯಲ್ಲಿ ಗುಂಡು ಎಂಬಂತೆ ಇಬ್ಬರೂ ಇನ್ ಡೈರೆಕ್ಟ್ ಆಗಿ ಮಾತನಾಡಲು ಶುರುಮಾಡಿದ್ದಾರೆ.

    ಕಾರ್ತಿಕ್ (Karthik Mahesh) ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವಾಗ ಕೈಗೆ ಕೊಂಚ ಚಾಕು ತಾಗಿ ಗೆರೆ ಬಿದ್ದಿದೆ. ಬ್ಯಾಂಡೇಜ್ ಬೇಕಾ ಅಂತ ನಮ್ರತಾ ಕೇಳುತ್ತಾರೆ. ಆಗ ರಕ್ತ ಬರುತ್ತಿಲ್ಲ, ರಕ್ತ ಹೀರಿಕೊಳ್ಳುವವರೆಲ್ಲಾ ಆಗಲೇ ರಕ್ತ ಹೀರಿಕೊಂಡು ಬಿಟ್ಟಿದ್ದಾರೆ. ರಕ್ತಪಿಪಾಸುಗಳು ಎಂದು ಸಂಗೀತಾಗೆ ಉರಿಸಿದ್ದಾರೆ ಕಾರ್ತಿಕ್.

    ರಾಕ್ಷಸರು ಈಗಾಗಲೇ ರಕ್ತ ಹೀರಿಕೊಂಡು ಬಿಟ್ಟಿದ್ದಾರೆ. ರಕ್ತ ಬರುತ್ತಿಲ್ಲ ಎಂದು ನಗುತ್ತಲೇ ಸಂಗೀತಾಗೆ ಕಾಲೆಳೆದಿದ್ದಾರೆ ಕಾರ್ತಿಕ್. ಆದರೆ ಸಂಗೀತಾ ಏನೂ ಪ್ರತಿಕ್ರಿಯೆ ನೀಡದೇ ಸುಮ್ಮನೆ ಅಡುಗೆ ಮಾಡುವತ್ತ ಗಮನ ನೀಡಿದ್ದಾರೆ. ಇದನ್ನೂ ಓದಿ:ರಾಜಕಾರಣಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ

    ಸಂಗೀತಾಗೆ ರಕ್ತಪಿಪಾಸು ಎಂದು ಕಾರ್ತಿಕ್‌ ಹೇಳಿರೋದನ್ನ ಕೇಳಿ, ಸಂಗೀತಾ ಪರ ವಿನಯ್ ಮಾತನಾಡಿದ್ದಾರೆ.  ಯಾಕೆ ಈಗ ಊಟ ಮಾಡ್ತೀದ್ದೀರಾ ಎಂದ ವಿನಯ್‌ಗೆ ಮಧ್ಯಾಹ್ನ ಊಟ ಮಾಡಿರಲಿಲ್ಲ. ಆಗ ಹೊಟ್ಟೆ ತುಂಬಿ ಹೋಗಿತ್ತು. ಈಗ ಹಸಿಯುತ್ತಿದೆ ಎಂದು ರಿಪ್ಲೈ ನೀಡಿದ್ದರು. ನನಗೆ ಹೇಳಿದ್ರೆ ನಾನೇ ನಿಮಗೆ ತಿನ್ನಿಸುತ್ತಿದ್ದೆ ಸಂಗೀತಾ ಎಂದು ಕಾರ್ತಿಕ್‌ಗೆ ಟಾಂಗ್ ಕೊಟ್ಟಿದ್ದಾರೆ ವಿನಯ್. ಒಟ್ನಲ್ಲಿ ಸಂಗೀತಾ ಜೊತೆ ವಿನಯ್‌ ಮಾತನಾಡುತ್ತ ಕಾರ್ತಿಕ್‌ಗೆ ಚಮಕ್‌ ಕೊಟ್ಟಿದ್ದಾರೆ.‌

  • Bigg Boss ಮನೆ ಹೊರಗಿನ ಕಾರ್ತಿಕ್‌ ಲವ್‌ ಬಗ್ಗೆ ಬಾಯ್ಬಿಟ್ಟ ಸ್ನೇಹಿತ್-‌ ಸಂಗೀತಾ ಕಥೆ?

    Bigg Boss ಮನೆ ಹೊರಗಿನ ಕಾರ್ತಿಕ್‌ ಲವ್‌ ಬಗ್ಗೆ ಬಾಯ್ಬಿಟ್ಟ ಸ್ನೇಹಿತ್-‌ ಸಂಗೀತಾ ಕಥೆ?

    ದೊಡ್ಮನೆಯ ಆಟ ಈಗ 5ನೇ ವಾರಕ್ಕೆ ಕಾಲಿಟ್ಟಿದೆ. ಬಿಗ್ ಬಾಸ್ ಮನೆಯ (Bigg Boss Kannada 10) ಅಸಲಿ ಆಟ ಈಗ ಶುರುವಾಗಿದೆ. ಆಟ ಆಡೋ ನೆಪದಲ್ಲಿ ಸ್ಪರ್ಧಿಗಳು ಮಾತು ಹೊರಬಂದಿದೆ. ಅದರಲ್ಲೂ ಹೀಯಾಳಿಸುವ ಭರದಲ್ಲಿ ಬಿಗ್ ಬಾಸ್ ಮನೆ ಹೊರಗಿನ ಕಾರ್ತಿಕ್ ಲವ್ ಬಗ್ಗೆ ಸ್ನೇಹಿತ್ ಬಾಯ್ಬಿಟ್ಟಿದ್ದಾರೆ.

    ಎದರಾಳಿಯ ತಂಡಕ್ಕೆ ಕೋಪ ತರಿಸಿ, ಅವರು ರೂಲ್ಸ್ ಬ್ರೇಕ್ ಮಾಡುವಂತೆ ಮಾಡಬೇಕು. ಈ ಟಾಸ್ಕ್‌ನಲ್ಲಿ ವೈಯಕ್ತಿಕ ವಿಚಾರವೊಂದು ಹೊರಗೆ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ಈಗಾಗಲೇ ಸಂಗೀತಾ ಹಾಗೂ ಕಾರ್ತಿಕ್ ಪ್ರೇಮಿಗಳ ರೀತಿ ನಡೆದುಕೊಳ್ಳುತ್ತಿದ್ದಾರೆ. ಆದರೆ, ಇದು ಬಿಗ್ ಬಾಸ್‌ಗೆ ಮಾತ್ರ ಸೀಮಿತವಾಗಿದೆಯಾ ಎಂಬ ಅನುಮಾನ ಈಗ ಪ್ರೇಕ್ಷಕರಲ್ಲಿ ಮೂಡಿದೆ. ಆ ಅನುಮಾನ ಮೂಡುವುದಕ್ಕೆ ಕಾರಣ ಸ್ನೇಹಿತ್ ಹೇಳಿದ ಆ ಒಂದು ಮಾತು. ಎದುರಾಳಿ ತಂಡಕ್ಕೆ ಕೋಪ ತರಿಸಬೇಕು ಎಂಬ ಟಾಸ್ಕ್‌ನಲ್ಲಿ ಸ್ನೇಹಿತ್, ಕಾರ್ತಿಕ್ ಬಳಿ ಆತನ ರಿಯಲ್‌ ಲೈಫ್‌ ಹುಡುಗಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಜೊತೆ ಲುಂಗಿ ಡ್ಯಾನ್ಸ್‌ ಮಾಡಲಿದ್ದಾರೆ ಡ್ಯಾನ್ಸ್‌ ಕ್ವೀನ್‌ ಶ್ರೀಲೀಲಾ

    ಹೊರಗೊಬ್ಬಳು ಹುಡುಗಿ ನಿನಗೋಸ್ಕರ ಹರಕೆ ಕಟ್ಟಿಕೊಂಡು ನೀನು ಬಿಗ್ ಬಾಸ್ ಬರಲಿ ಅಂತ ಪ್ರಾರ್ಥನೆ ಮಾಡಿದ್ರೆ, ಅಂತಹ ಹುಡುಗಿಯ ಹಾರ್ಟ್ ಬ್ರೇಕ್ ಮಾಡಿ. ಇಲ್ಲಿ ಅದು ಯಾವೋಳೋ ಕ್ರಶ್ ಅಂತೆ, ಯಾವೋಳೋ ಕ್ರ‍್ಯಾಶ್ ಆದವಳನ್ನ ಇಟ್ಟುಕೊಂಡು ಓಡಾಡುತ್ತಿದ್ದೀಯಲ್ಲ ನೀನು ನಮಗೆ ಲವ್ ಪಾಠ ಮಾಡುತ್ತಿದ್ದೀಯಾ ಎಂದು ಸ್ನೇಹಿತ್ ವೈಯಕ್ತಿಕ ವಿಚಾರ ಎಳೆದು ಕಾರ್ತಿಕ್ ಗೆ‌ (Karthik Mahesh) ತಿವಿದಿದ್ದಾರೆ. ಸಂಗೀತಾ (Sangeetha Sringeri) ಬಗ್ಗೆ ಮಾತನಾಡಿ ಸ್ನೇಹಿತ್‌ (Snehith Gowda) ಕಿಡಿಕಾರಿದ್ದಾರೆ.

    ಸ್ನೇಹಿತ್ ಈ ನಡೆ ಕಾರ್ತಿಕ್‌ಗೆ ಹರ್ಟ್ ಮಾಡಿದೆ. ನಾನು ಒಳಗಿನ ವಿಚಾರ ಅಷ್ಟೇ ಮಾತನಾಡಿದ್ದು. ತೆಗೆದರೆ ಸಾವಿರ ತೆಗೆಯಬಹುದಿತ್ತು ಎಂದು ಕಾರ್ತಿಕ್ ಹೇಳಿದಾಗ, ಕ್ಷಮೆ ಇರಲಿ, ಫ್ಲೋನಲ್ಲಿ ಬಂದು ಬಿಡ್ತು ಅಂತ ಸ್ನೇಹಿತ್ ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಬೇಸರ ವ್ಯಕ್ತ ಪಡಿಸಿದ ದೀಪಿಕಾ ದಾಸ್

    ಮನೆಯ ಹೊರಗೆ ಕಾರ್ತಿಕ್ ಗೆ ಲವ್ ಇರೋದು ಈಗ ಬೆಳಕಿಗೆ ಬಂದಿದೆ. ಹಾಗಾದ್ರೆ ಪ್ರೇಮಿಗಳಾಗಿ ಹೈಲೆಟ್ ಆಗುತ್ತಿರುವ ಸಂಗೀತಾ ಶೃಂಗೇರಿ ಕಥೆಯೇನು. ಪ್ರೇಕ್ಷಕರ ಕಣ್ಣಿಗೆ ಬೀಳಲು ಹೀಗೆ ಮಾಡ್ತೀದ್ದಾರಾ? ಬಿಗ್ ಬಾಸ್ ಮನೆಗಷ್ಟೇ ಕಾರ್ತಿಕ್- ಸಂಗೀತಾ ಪ್ರೀತಿ ಸೀಮಿತನಾ? ಹೀಗೆ ಹತ್ತು ಹಲವು ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡಿದೆ. ಉತ್ತರಕ್ಕಾಗಿ ಮುಂದಿನ ದಿನಗಳವರೆಗೂ ಕಾಯಬೇಕಿದೆ.

  • Bigg Boss: ಕಾರ್ತಿಕ್‌ಗೆ ಟಿಶ್ಯೂ ಪೇಪರ್‌ ಎಂದ ವರ್ತೂರು ಸಂತೋಷ್

    Bigg Boss: ಕಾರ್ತಿಕ್‌ಗೆ ಟಿಶ್ಯೂ ಪೇಪರ್‌ ಎಂದ ವರ್ತೂರು ಸಂತೋಷ್

    ಬಿಗ್ ಬಾಸ್ ಮನೆಯ (Bigg Boss Kannada) ಆಟ 5ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ಕಾರ್ತಿಕ್ (Karthik Mahesh) ಮತ್ತು ಸಂಗೀತಾ (Sangeetha) ನಡುವೆ ಬಿರುಕು ಮೂಡಿದೆ. ಈ ಬೆನ್ನಲ್ಲೇ ಇಬ್ಬರ ಬಗ್ಗೆ ವರ್ತೂರು ಸಂತೋಷ್ (Varthur Santhosh) ಕಾಮೆಂಟ್‌ವೊಂದನ್ನ ಮಾಡಿದ್ದಾರೆ. ಸಂಗೀತಾಗೆ ಕಾರ್ತಿಕ್ ಟಿಶ್ಯೂ ಪೇಪರ್ ಇದ್ದಂತೆ ಎಂದು ಸಂತೋಷ್ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:Bigg Boss: ನಮ್ರತಾಗೆ ರೊಮ್ಯಾನ್ಸ್‌ ಬಗ್ಗೆ ಸ್ನೇಹಿತ್‌ ಸ್ಪೆಷಲ್‌ ಕ್ಲಾಸ್

    ಬಿಗ್ ಮನೆಯ ಪ್ರೇಮ ಪಕ್ಷಿಗಳಾಗಿ ಹೈಲೆಟ್ ಆಗಿದ್ದ ಸಂಗೀತಾ-ಕಾರ್ತಿಕ್ ಜೋಡಿ ಈಗ ನಾ ದೂರ ನೀ ತೀರ ಎನ್ನುತ್ತಿದ್ದಾರೆ. ಇಬ್ಬರ ನಡುವೆ ಭಿನ್ನಭಿಪ್ರಾಯ ಮೂಡಿದೆ. ಹೀಗಿರುವಾಗ ಈ ತಂಡದಲ್ಲಿ ನಾನು ಇರೋಲ್ಲ, ವಿನಯ್ ಟೀಮ್‌ಗೆ ಹೋಗ್ತೀನಿ ಎಂದು ಸಂಗೀತಾ ಪಟ್ಟು ಹಿಡಿದಿರೋ ಬೆನ್ನಲ್ಲೇ ವರ್ತೂರು ಸಂತೋಷ್ ಅವರು ಸಂಗೀತಾ ಬಗ್ಗೆ ಡ್ಯಾಮೆಜಿಂಗ್ ಸ್ಟೇಟ್‌ಮೆಂಟ್‌ವೊಂದನ್ನ ಕೊಟ್ಟಿದ್ದಾರೆ.

    ಸಂಗೀತಾ ಬಳಸಿ ಬೀಸಾಕುವ ಟಿಶ್ಯೂ ಪೇಪರ್ ಈ ಕಾರ್ತಿಕ್ ಎಂದು ಖಡಕ್ ಆಗಿ ತುಕಾಲಿ ಸಂತೂಗೆ ವರ್ತೂರು ಸಂತೋಷ್ ಹೇಳಿದ್ದಾರೆ. ಸಂಗೀತಾ ಸ್ಟ್ರಾಂಗ್ ಪ್ಲೇಯರ್, ಚೆನ್ನಾಗಿ ಆಡುತ್ತಾರೆ. ಆದರೆ ಕಾರ್ತೀಕ್ ಅವರಿಗೆ ಟಿಶ್ಯೂ ಪೇಪರ್ ಇದ್ದ ಹಾಗೆ ಎಂದಿದ್ದಾರೆ. ಅವರ ಮಾತಿಗೆ ತುಕಾಲಿ ಸಂತೂ ಕೂಡ ನಗುವಿನ ಮೂಲಕ ಸಮ್ಮತಿ ಸೂಚಿಸಿದ್ದಾರೆ.

    ಒಟ್ನಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಮನೆಮಂದಿಯ ಬಾಯಿಗೆ ಸಂಗೀತಾ ಮತ್ತು ಕಾರ್ತಿಕ್ ಜೋಡಿ ಆಹಾರವಾಗುತ್ತಿದ್ದಾರೆ. ವೈಯಕ್ತಿಕ ವಿಚಾರಗಳು ಮನೆಯ ಆಟಕ್ಕೆ ದಾಳವಾಗಿ ಕೆಲವರು ಬಳಸಿಕೊಳ್ಳುತ್ತಿದ್ದಾರೆ. ಈ ಹಾವು ಏಣಿ ಆಟದ ನಡುವೆ ಯಾರು ಗೆಲ್ಲುತ್ತಾರೆ ಕಾದುನೋಡಬೇಕಿದೆ.

  • Bigg Boss: ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ- ಕಾರ್ತಿಕ್‌ಗೆ ತನಿಷಾ ಎಚ್ಚರಿಕೆ

    Bigg Boss: ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ- ಕಾರ್ತಿಕ್‌ಗೆ ತನಿಷಾ ಎಚ್ಚರಿಕೆ

    ಬಿಗ್ ಬಾಸ್ ಮನೆಯಲ್ಲಿ (Bigg Boss House 10) ಪ್ರತಿ ಬಾರಿಯಂತೆ ಈ ಸಲ ಕೂಡ ಲವ್ ಸ್ಟೋರಿಗಳ ಹಾವಳಿ ಜೋರಾಗಿದೆ. ಅದರಲ್ಲಿ ಸಂಗೀತಾ- ಕಾರ್ತಿಕ್ ಒಡನಾಟ ಹೈಲೆಟ್ ಆಗಿದೆ. ಇದೀಗ ‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಕಾರ್ತಿಕ್‌ಗೆ ಕಿವಿಮಾತೊಂದನ್ನ ತನಿಷಾ ಹೇಳಿದ್ದಾರೆ. ಕಾರ್ತಿಕ್‌ಗೆ ನಮ್ಮ ಹುಡುಗಿ ನಿನ್ನ ಲವ್‌ನಲ್ಲಿ ಬೀಳಲ್ಲ, ವ್ಯರ್ಥ ಪ್ರಯತ್ನ ಅಂತ ತನಿಷಾ ಎಚ್ಚರಿಕೆ ನೀಡಿದ್ದಾರೆ.‌

    ವೀಕೆಂಡ್ ಮಾತುಕತೆಯಲ್ಲಿ ಸುದೀಪ್, ಸಹಸ್ಪರ್ಧಿಗೆ ಬಲೂನ್ ಹೊಡೆದು ತಮ್ಮ ಅನಿಸಿಕೆಯನ್ನ ಹೇಳುವ ಅವಕಾಶ ಪ್ರತಿಯೊಬ್ಬರಿಗೂ ನೀಡಿದ್ದರು. ಆಗ ಎಲ್ಲರಂತೆ ತನಿಷಾ (Tanisha) ಕೂಡ, ಕಾರ್ತಿಕ್ (Karthik Mahesh) ಕುರಿತು ಮಾತನಾಡಿದ್ದಾರೆ. ನಿನ್ನ ನಿರ್ಧಾರಗಳೆಲ್ಲವೂ ಯಾವಾಗಲೂ ಸರಿ ಅಂದುಕೊಳ್ಳುತ್ತಿಯಾ ಆದರೆ ಅದು ಸುಳ್ಳು ಎಂದು ಬಲೂನ್ ಬ್ಲ್ಯಾಸ್ಟ್ ಮಾಡಿದ್ದಾರೆ. ಬಳಿಕ ನಮ್ಮ ಹುಡುಗಿ ಸಂಗೀತಾ ನಿನ್ನ ಲವ್‌ನಲ್ಲಿ ಬೀಳಲ್ಲ. ಅದು ನಿಮ್ಮ ಪ್ರಯತ್ನ ವ್ಯರ್ಥ ಎಂದಿದ್ದಾರೆ. ಇದನ್ನೂ ಓದಿ:ಒಟಿಟಿಗೆ ಬಂತು ‘ಲಿಯೋ’: ಹೊಸ ಸಿನಿಮಾದಲ್ಲಿ ವಿಜಯ್ ಬ್ಯೂಸಿ

    ಇನ್ನೂ ಬಿಗ್ ಬಾಸ್ ಮನೆಯಲ್ಲಿ (Bigg Boss House) ಪರಿಚಯವಾದ ಸಹೋದರಿಯರ ಜೊತೆ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ಅದರಲ್ಲೂ ಸಂಗೀತಾ (Sangeetha Sringeri) ಜೊತೆಗಿನ ಪ್ರತಾಪ್ ಡ್ಯಾನ್ಸ್ ನೋಡಿ ಕಾರ್ತಿಕ್ ನೋಟ ಬೇರೇ ತರಹನೇ ಇತ್ತು. ಶಾಕ್ ಆಗಿ ಇಬ್ಬರೂ ಡ್ಯಾನ್ಸ್ ನೋಡುತ್ತಿದ್ದರು. ಕಾರ್ತಿಕ್ ನಡೆಗೆ ಸುದೀಪ್ ಸೇರಿದಂತೆ ಸಹಸ್ಪರ್ಧಿಗಳು ಕೂಡ ಕಾಲೆಳೆದಿದ್ದಾರೆ.

    ಬಿಗ್ ಮನೆಗೆ ಕಾಲಿಟ್ಟ ಕೆಲವೇ ದಿನಕ್ಕೆ ಇಶಾನಿ ನನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಘೋಷಿಸಿದ್ದರು. ಸಂಗೀತಾ-ಕಾರ್ತಿಕ್ ನಡುವೆ ಗೆಳೆತನವಿದೆ. ಆದರೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದ್ಯಾ? ಮುಂದಿನ ದಿನಗಳಲ್ಲಿ ಮೈಕಲ್ ಅವರಂತೆಯೇ ಬ್ರೇಕಿಂಗ್ ನ್ಯೂಸ್ ಕೊಡುತ್ತಾರಾ ಕಾಯಬೇಕಿದೆ.

  • Bigg Boss ಮನೆಯಲ್ಲಿ ಟ್ರಯಾಂಗಲ್‌ ಲವ್‌ ಸ್ಟೋರಿ

    Bigg Boss ಮನೆಯಲ್ಲಿ ಟ್ರಯಾಂಗಲ್‌ ಲವ್‌ ಸ್ಟೋರಿ

    ದೊಡ್ಮನೆಯಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿದಿರೋದು ಏನೆಂದರೆ ಯಾರು ಯಾರನ್ನ ಲವ್ ಮಾಡ್ತಿದ್ದಾರೆ ಎಂಬುದೇ ನೋಡುಗರಿಗೂ ಕನ್ಫೂಸ್ ಆಗ್ತಿದೆ. ಸಂಗೀತಾ(Sangeetha Sringeri) ಜೊತೆಯಿದ್ದ ಕಾರ್ತಿಕ್ ಈಗ ನಮ್ರತಾ (Namratha Gowda) ಹಿಂದೆ ಸುತ್ತುತ್ತಿದ್ದಾರೆ. ಎರಡು ದೋಣಿ ಮೇಲೆ ಕಾರ್ತಿಕ್ ಪಯಣಿಸುತ್ತಿದ್ದಾರೆ. ಮಾತಿನ ಭರದಲ್ಲಿ ಸಂಗೀತಾ ಕೆಮಿಸ್ಟ್ರಿ, ನಮ್ರತಾ ಮ್ಯಾತಮೆಟಿಕ್ಸ್ ಎಂದು ಕಾರ್ತಿಕ್ (Karthik Mahesh) ಮುಗುಳು ನಗೆ ಬೀರಿದ್ದಾರೆ. ಮೂವರ ನಡುವೆ ಏನಾದರೂ ಟ್ರಯಾಂಗಲ್‌ ಲವ್‌ ಕಹಾನಿ ನಡೀತಿದ್ಯಾ ಅಂತ ಪ್ರೇಕ್ಷಕರು ಊಹೆ ಮಾಡ್ತಿದ್ದಾರೆ.

    ಹೌದು.. ಬಿಗ್ ಬಾಸ್ ಮನೆಗೆ(Bigg Boss) ಕಾಲಿಟ್ಟ ದಿನದಿಂದ ಚಾರ್ಲಿ ಸುಂದರಿ ಮೇಲೆ ಕಾರ್ತಿಕ್‌ಗೆ ಪ್ಯಾರ್ ಆಗಿತ್ತು. ಈಗ ಸಂಗೀತಾ ಜೊತೆಯಲ್ಲಿರುವಾಗಲೇ ನಮ್ರತಾ ಹಿಂದೆ ಕಾರ್ತಿಕ್ ಓಡಾಟ ಜೋರಾಗಿದೆ. ಇಂದು ಡ್ರೋನ್ ಬಳಿ ಕಾರ್ತಿಕ್ ಮಾತನಾಡುವಾಗ ಸಂಗೀತಾ ನನಗೆ ಕೆಮಿಸ್ಟ್ರಿ ಇದ್ದ ಹಾಗೆ, ನಮ್ರತಾ ಮ್ಯಾತಮೆಟಿಕ್ಸ್ ಇದ್ದಂತೆ ಎಂದು ನಮ್ರತಾ ಮುಂದೆಯೇ ಮಾತನಾಡಿದ್ದಾರೆ.

    ನಾನು ಮ್ಯಾತಮೆಟಿಕ್ಸ್ ಆ ಎಂದು ನಮ್ರತಾ ಹುಸಿಮುನಿಸು ತೋರಿಸುತ್ತಾ ಹೋಗಿದ್ದಾರೆ. ನಮ್ರತಾರನ್ನ ಸಮಾಧಾನಿಸಲು ಕಾರ್ತಿಕ್ ಅವರ ಹಿಂದೆ ಹಿಂದೆ ಸುತ್ತಿದ್ದಾರೆ. ಇತ್ತ ನಮ್ರತಾಗೆ ಕಾಳು ಹಾಕ್ತಿದ್ದ ಸ್ನೇಹಿತ್ ಕೂಡ ಕಾರ್ತಿಕ್ ಕಳ್ಳಾಟ ನೋಡಿ ಗುಪ್ ಚುಪ್ ಆಗಿ ಬಿಟ್ಟಿದ್ದಾರೆ. ಇದನ್ನೂ ಓದಿ:Salaar: ಪ್ರಭಾಸ್, ಪ್ರಶಾಂತ್ ನೀಲ್ ಪಡೆ ಸೇರಿಕೊಂಡ ವಸಿಷ್ಠ ಸಿಂಹ

    ಮನೆಮಂದಿಗೂ, ಪ್ರೇಕ್ಷಕರಿಗೂ ಸಂಗೀತಾ, ಕಾರ್ತಿಕ್, ನಮ್ರತಾ ಈ ಮೂವರ ಕಥೆ ಏನಪ್ಪಾ ಅಂತಾ ಬಾಯಿ ಮೇಲೆ ಬೆರಳು ಇಟ್ಕೋಂಡಿದ್ದಾರೆ. ಇನ್ನೂ 10 ಸೀಸನ್ ಬಂದ್ರೂ ಕೂಡ ದಿವ್ಯಾ ಉರುಡುಗ ಮತ್ತು ಅರವಿಂದ್ ಹಾಗೇ ಚೆಂದದ ಜೋಡಿ ಸಿಗೋದಿಲ್ಲ ಬಿಡಿ ಅಂತ ಫ್ಯಾನ್ಸ್ ಮಾತನಾಡಿಕೊಳ್ತಿದ್ದಾರೆ. ಅವರನ್ನ ಬಿಟ್, ಇವರನ್ನ ಬಿಟ್ ಇನ್ನೂ ಯಾರೋ ಅನ್ನೋ ಇವರ ಪ್ರೇಮ್ ಕಹಾನಿಗೆ ಹೊಸ ಟ್ವಿಸ್ಟ್ ಸಿಗುತ್ತಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರ್ತಿಕ್‌ಗೆ ‘ಬಳೆಗಳ ರಾಜ’ ಎಂದು ಟೀಕಿಸಿದ ವಿನಯ್ ಗೌಡ

    ಕಾರ್ತಿಕ್‌ಗೆ ‘ಬಳೆಗಳ ರಾಜ’ ಎಂದು ಟೀಕಿಸಿದ ವಿನಯ್ ಗೌಡ

    ಬಿಗ್ ಬಾಸ್ ಮನೆಯ (Bigg Boss Kannada 10) ಆಟ ಈಗ ರೋಚಕ ತಿರುವುಗಳನ್ನ ಪಡೆದುಕೊಂಡಿದೆ. ಸದಾ ಒಂದಲ್ಲಾ ಒಂದು ವಿಚಾರಕ್ಕೆ ಕಿರಿಕ್ ಮಾಡುತ್ತಲೇ ಇದ್ದಾರೆ ವಿನಯ್. ಈಗ ಕಾರ್ತಿಕ್‌ಗೆ ‘ಬಳೆಗಳ ರಾಜ’ ಎಂದು ವಿನಯ್ (Vinay Gowda) ಟಾಂಗ್ ಕೊಟ್ಟಿದ್ದಾರೆ. ಅವರ ಈ ನಡೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

    ನಾಮೀನೇಟ್ ಮಾಡಿದ್ರು ಎಂಬ ಕಾರಣಕ್ಕೆ ಕಾರ್ತಿಕ್ (Karthik Mahesh) ವಿರುದ್ಧ ವಿನಯ್ ಕಿಡಿಕಾರಿದ್ದಾರೆ. ನನ್ನ ಹೆಂಡ್ತಿಗೆ ಹೇಳಿ ಕಾರ್ತಿಕ್‌ಗೆ ಬಳೆ ಕೊಡಿಸಬೇಕು ಅಂತ ವಿನಯ್ ಗೌಡ ಅವರು ಈಶಾನಿ, ಮೈಕಲ್ ಮುಂದೆ ಹೇಳಿದ್ದರು.

    ಸಂಗೀತಾ, ತನಿಷಾ ಕುಪ್ಪಂಡ, ನಮ್ರತಾ ಗೌಡ ಜೊತೆ ಕಾರ್ತಿಕ್ ಆತ್ಮೀಯತೆಯಿಂದ ಇದ್ದಾರೆ. ಸಂಗೀತಾ ಜೊತೆ ಕಾರ್ತಿಕ್ ಸಮಯ ಕಳೆಯುತ್ತಿರೋದರಿಂದ ವಿನಯ್ ಗೌಡ ಅವರು ಪದೇ ಪದೇ ಬಳೆ ಎನ್ನುವ ಪದವನ್ನು ಬಳಸುತ್ತಿದ್ದಾರೆ. ಇದರ ಬಗ್ಗೆ ವಿನಯ್ ಅವರೇ ಉತ್ತರ ಕೊಡಬೇಕಿದೆ. ಕಾರ್ತಿಕ್ ಅವರಿಗೆ ವಿನಯ್ ಗೌಡ ಅವರು ‘ಬಳೆಗಳ ರಾಜ’ ಅಂತ ಹೆಸರು ಇಟ್ಟಿದ್ದಾರೆ. ಇದನ್ನೂ ಓದಿ:ನಟ ದರ್ಶನ್ ವಿರುದ್ಧ ಎಫ್‌ಐಆರ್ ದಾಖಲು

    ಪದೇ ಪದೇ ಪ್ರತಾಪ್- ಕಾರ್ತಿಕ್‌ಗೆ ಹೀಗೆ ವಿನಯ್ ಟೀಕೆ ಮಾಡ್ತಿರೋದು ಪ್ರೇಕ್ಷಕರಿಗೆ ಇಷ್ಟವಾಗುತ್ತಿಲ್ಲ. ಅವರ ಈ ನಡೆಯನ್ನ ಅನೇಕರು ಖಂಡಿಸುತ್ತಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ವಿನಯ್ ಮ್ಯಾಟರ್‌ಗೆ ಸುದೀಪ್ ಅದ್ಯಾವಾಗ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅಂತ ಕಾಯ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss: ಲವ್‌ ಸ್ಟೋರಿ ಬಗ್ಗೆ ಬಾಯ್ಬಿಟ್ಟ ‘ಚಾರ್ಲಿ’ ಬೆಡಗಿ

    Bigg Boss: ಲವ್‌ ಸ್ಟೋರಿ ಬಗ್ಗೆ ಬಾಯ್ಬಿಟ್ಟ ‘ಚಾರ್ಲಿ’ ಬೆಡಗಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಸಂಗೀತಾ- ಕಾರ್ತಿಕ್ (Karthik Mahesh) ನಾವಿಬ್ಬರೂ ಫ್ರೆಂಡ್ಸ್ ಅಂತಲೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಇವರಿಬ್ಬರ ಲವ್ವಿ-ಡವ್ವಿ ನೋಡಿದ್ರೆ ದೊಡ್ಮನೆಯಲ್ಲಿ ಎಲ್ಲರಿಗೂ ಇಬ್ಬರ ನಡುವೆ ಏನೋ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಅಂತಲೇ ಭಾವಿಸಿದ್ದಾರೆ. ಈ ನಡುವೆ ಭಾಗ್ಯಶ್ರೀ ಅವರು ಸಂಗೀತಾಗೆ ಮದುವೆ ಪ್ಲ್ಯಾನ್ ಏನಿದೆ ಅಂತ ಕೇಳಿದ್ದಾರೆ.

    ದೊಡ್ಮನೆಗೆ ‘ಚಾರ್ಲಿ’ ನಟಿ ಎಂಟ್ರಿ ಕೊಟ್ಟ ಮೇಲೆ ಕ್ರಶ್ ಕ್ವೀನ್ ಆಗಿ ಹೈಲೆಟ್ ಆಗಿದ್ದಾರೆ. ಮನೆಯೊಳಗೆ, ಮನೆ ಹೊರಗೆ ಎರಡು ಕಡೆ ನಟಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಭಾಗ್ಯಶ್ರೀ ಅವರಿಗೆ ಮನೆ ಹೊರಗಿನ ಬಾಯ್‌ಫ್ರೆಂಡ್ ಬಗ್ಗೆ ಸಂಗೀತಾ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಮದುವೆ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ನಿಮಗೆ ಯಾರಾದರೂ ಪ್ರಪೋಸ್ ಮಾಡಿಲ್ಲವೇ ಫ್ರೆಂಡ್‌ಶಿಪ್ ಆದ ಕೂಡಲೇ ಮದುವೆಗೆ ಒಪ್ಪುತ್ತೀರಾ? ಅಂತ ಭಾಗ್ಯಶ್ರೀ (Bhagyashree) ಅವರು ಸಂಗೀತಾಗೆ (Sangeetha Sringeri) ಕೇಳಿದ್ದಾರೆ.

    ಆಗ ಸಂಗೀತಾ, ನನಗೆ ಕೆಲವರು ಇಷ್ಟ ಆಗಿದ್ದಾರೆ. ಆದರೆ ಡೀಪ್ ಆಗಿ ಕನೆಕ್ಟ್ ಆಗಿಲ್ಲ. ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಆದರೆ ಅವರೆಲ್ಲ ಬೇರೆ ಯಾರಿಗೋ ಪ್ರೇಮ ನಿವೇದನೆ ಮಾಡಿರಬಹುದು ಅಂತ ಅನಿಸತ್ತೆ. ಅವರಿಗೆ ಪ್ರೀತಿ ಇದ್ದರೆ ಪರಸ್ಪರ ಗೊತ್ತಾಗತ್ತೆ. ನಾನು ಮದುವೆ ಆಗಲ್ಲ. ನನಗೆ ಮೊದಲು ಫ್ರೆಂಡ್‌ಶಿಪ್ ವರ್ಕ್ ಆಗಬೇಕು. ಬಾಂಡಿಂಗ್ ವರ್ಕ್ ಆಗಬೇಕು. ಆ ಮೇಲೆ ಮದುವೆ (Wedding) ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

    ಈ ಕಡೆ, ಸಂಗೀತಾ ದೀದಿ ಅವರಿಗೆ ನಾನು ಹುಡುಗನನ್ನು ನೋಡಿದ್ದೀನಿ, ಮದುವೆ ಮಾಡಲಾ ಅಂತ ಕಾರ್ತಿಕ್ ಅವರಿಗೆ ಪ್ರತಾಪ್ ಪ್ರಶ್ನೆ ಮಾಡಿದ್ದರು. ಆಗ ಸಂಗೀತಾ ಅವರು ನನಗೆ ಬೆಸ್ಟ್ ಫ್ರೆಂಡ್ಸ್, ನನ್ನ ಕಡೆಯಿಂದ ಏನೂ ಇಲ್ಲ. ಫ್ರೆಂಡ್ ಆಗಿ ಅವಳು ನನಗೆ ಇಷ್ಟ ಎಂದು ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:15ನೇ ವರ್ಷಕ್ಕೆ ಕಾಲಿಟ್ಟ ದರ್ಶನ್ ಪುತ್ರ: ವಿಭಿನ್ನವಾಗಿ ವಿಶ್ ಮಾಡಿದ ವಿಜಯಲಕ್ಷ್ಮಿ

    ಇನ್ನು ಸಂಗೀತಾ ಅವರು ಬಿಗ್ ಬಾಸ್ ಮನೆಯಲ್ಲಿರುವ ವಸ್ತುವೊಂದರ ಮೇಲೆ ಪಾರ್ಟನರ್ ಬಗ್ಗೆ ಬರೆದಿದ್ದರಂತೆ. ಇದು ಕಾರ್ತಿಕ್ ಕಣ್ಣಿಗೆ ಬಿದ್ದಿದೆ. ಆಗ ಸಂಗೀತಾ ಅವರು ಪಾರ್ಟನರ್ ಬಗ್ಗೆ ಮಾತನಾಡಿದ್ದಾರೆ. ವೈ ಅಂತ ಸಂಗೀತಾ ಅವರು ಬರೆದಿದ್ದಾರಂತೆ. ನಾನು ಬರೆದಿಲ್ಲ ಅಂತ ಸಂಗೀತಾ ಹೇಳುತ್ತಿದ್ದರು. ಆದರೂ ಕಾರ್ತಿಕ್ ಅವರು ಪ್ರಶ್ನೆ ಮಾಡಿದಾಗ ಸಂಗೀತಾ ಅವರು ಒಬ್ಬ ಹುಡುಗ ಒಬ್ಬ ಹುಡುಗಿ ಹತ್ತಿರ ಮಾತ್ರ ಒಪನ್ ಅಪ್ ಆಗೋಕೆ ಸಾಧ್ಯ. ಹುಡುಗನ ಆ ಆಂಗಲ್‌ನ್ನು ಯಾರೂ ನೋಡಿರಲ್ಲ. ಹುಡುಗನ ಮುಗ್ಧ ಭಾವ ಆ ಹುಡುಗಿ ಬಿಟ್ಟರೆ ಬೇರೆ ಯಾರ ಜೊತೆಯೂ ಇರಲ್ಲ ಎಂದು ಹೇಳಿದ್ದಾರೆ.

    ನಮ್ಮಿಬ್ಬರ ನಡುವೆ ಏನಿಲ್ಲ ಎಂದೂ ಹೇಳಿದ್ದರೂ ಕೂಡ ಸಂಗೀತಾ ಪರ ಕಾರ್ತಿಕ್ ನಿಲ್ಲೋದು. ಕಾರ್ತಿಕ್ ಕಷ್ಟಕ್ಕೆ ‘ಚಾರ್ಲಿ’ ನಟಿ ಜೊತೆಯಾಗೋದು ನೋಡಿದ್ರೆ, ಅರವಿಂದ್-ದಿವ್ಯಾ ಉರುಡುಗ (Divya Uruduga) ನಂತರ ಇವರಿಬ್ಬರು ಕೂಡ ರಿಯಲ್ ಜೋಡಿಯಾಗೋದು ಗ್ಯಾರಂಟಿ ಅಂತ ಹೇಳ್ತಿದ್ದಾರೆ ನೆಟ್ಟಿಗರು. ಈ ಎಲ್ಲಾ ಪ್ರಶ್ನೆಗಳಿಗೂ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅದ್ದೂರಿಯಾಗಿ ನೆರವೇರಿತು ಕಾರ್ತಿಕ್ ತಂಗಿ ತೇಜಸ್ವಿನಿ ಸೀಮಂತ

    ಅದ್ದೂರಿಯಾಗಿ ನೆರವೇರಿತು ಕಾರ್ತಿಕ್ ತಂಗಿ ತೇಜಸ್ವಿನಿ ಸೀಮಂತ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಹೈಲೆಟ್ ಆಗ್ತಿದ್ದಾರೆ. ಟಾಸ್ಕ್, ಮನರಂಜನೆ, ಸಂಗೀತಾ (Sangeetha) ಜೊತೆಗಿನ ಸ್ನೇಹ ಈ ಎಲ್ಲದರ ವಿಚಾರವಾಗಿ ಅವರು ಗಮನ ಸೆಳೆಯುತ್ತಿದ್ದಾರೆ. ಇದೀಗ ಕಾರ್ತಿಕ್ ಅನುಪಸ್ಥಿತಿಯಲ್ಲಿ ಅವರ ತಂಗಿಯ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಸಾಮಾಜಿಕ ಜಾಲತಾಣದಲ್ಲಿ ಸೀಮಂತ ಶಾಸ್ತ್ರದ ಫೋಟೋಗಳು ಗಮನ ಸೆಳೆಯುತ್ತಿವೆ. ಇದನ್ನೂ ಓದಿ:‘ನೆಲ್ಸನ್’ ಟೀಸರ್ ರಿಲೀಸ್ ಮಾಡಿದ ರಿಯಲ್ ಸ್ಟಾರ್ ಉಪೇಂದ್ರ

    ‘ಕಾರ್ತಿಕ್ ತಂಗಿ ಮತ್ತು ಅಮ್ಮ. ಕಾರ್ತಿಕ್ ತಂಗಿ ಸೀಮಂತ ಕಾರ್ಯಕ್ರಮದ ಛಾಯಾಚಿತ್ರ. ಆದರೆ ಕಾರ್ತಿಕ್ ಅವರು ಮಿಸ್ಸಿಂಗ್.. ಕಾರ್ತಿಕ್ ಅವರ ಪರವಾಗಿ ಅವರ ತಂಗಿಗೆ ನಾವೆಲ್ಲರೂ ಶುಭ ಹಾರೈಸೋಣ’ ಎಂದು ಕಾರ್ತಿಕ್ ಮಹೇಶ್ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಆಗಿದೆ. ಅನೇಕರು ಕಾರ್ತಿಕ್ ಸಹೋದರಿ ತೇಜಸ್ವಿನಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಬಿಗ್ ಬಾಸ್ ವೇದಿಕೆಗೆ ಕಾಲಿಟ್ಟ ದಿನವೇ ಕಾರ್ತಿಕ್, ತಮ್ಮ ಗರ್ಭಿಣಿ ತಂಗಿಯ ಬಗ್ಗೆ ಹೇಳಿಕೊಂಡಿದ್ದರು. ಪ್ರಥಮ್ ಬಂದಾಗಲೂ ನನ್ನ ತಂಗಿಯ ಬಗ್ಗೆ ವಿಚಾರಿಸಿ ಎಂದು ಹೇಳಿ ಕಳುಹಿಸಿದ್ದರು. ಸಾಕಷ್ಟು ಬಾರಿ  ತಂಗಿಯ ಜೊತೆಗಿನ ಒಡನಾಟದ ಬಗ್ಗೆ ಹಂಚಿಕೊಂಡಿದ್ದರು.

    ಬಿಗ್ ಬಾಸ್ ಮನೆಯ ಆಟ ಈಗ 3 ವಾರಗಳನ್ನ ಪೂರೈಸಿದೆ. ಈಗಾಗಲೇ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಈ ವಾರ ಯಾರಿಗೆ ದೊಡ್ಮನೆಯ ಆಟ ಅಂತ್ಯವಾಗಲಿದೆ ಎಂದು ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]