Tag: karthik mahesh

  • ಹಾರ್ಟ್‌ಗೆ ನಿಧಾನವಾಗಿ ಚುಚ್ಚು, ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ- ಕಾರ್ತಿಕ್‌ ವಿರುದ್ಧ ತನಿಷಾ ಕಿಡಿ

    ಹಾರ್ಟ್‌ಗೆ ನಿಧಾನವಾಗಿ ಚುಚ್ಚು, ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ- ಕಾರ್ತಿಕ್‌ ವಿರುದ್ಧ ತನಿಷಾ ಕಿಡಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಇದೀಗ ಅಸಲಿ ಆಟ ಶುರುವಾಗಿದೆ. ಫ್ರೆಂಡ್ಸ್ ಆಗಿ ಜೊತೆಯಾಗಿದ್ದ ತನಿಷಾ- ಕಾರ್ತಿಕ್ (Karthik Mahesh) ನಡುವೆ ಮನಸ್ತಾಪ ಆಗಿದೆ. ಇದೀಗ ತನಿಷಾ ಎದೆಗೆ ಕಾರ್ತಿಕ್ ಚೂರಿ ಹಾಕಿದ್ದಾರೆ. ಕಾರ್ತಿಕ್ ನಡೆಗೆ ತನಿಷಾ ಕಣ್ಣೀರಿಟ್ಟಿದ್ದಾರೆ.

    ಚೆನ್ನಾಗಿದ್ದ ತನಿಷಾ- ಕಾರ್ತಿಕ್ ನಡುವೆ ಬಿರುಕು ಮೂಡಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ತನಿಷಾ ಎದೆಗೆ ಕಾರ್ತಿಕ್ ಚೂರಿ ಹಾಕಿದ್ದಾರೆ. ತನಿಷಾ ನಂಬಿಕೆಗೂ ಕಾರ್ತಿಕ್ ನಡೆಯಿಂದ ಪೆಟ್ಟು ಬಿದ್ದಿದೆ. ಫ್ರೆಂಡ್‌ಶಿಪ್ ಕಾರ್ಡ್ ನೀಡುವಾಗ ಕಾರ್ತಿಕ್ ಅವರ ಲೋಟವನ್ನೂ ತನಿಷಾ ತೊಳದು ಕೊಡುತ್ತಾರೆ ಎಂಬಿತ್ಯಾದಿ ಆರೋಪಗಳು ವಿನಯ್ ಕಡೆಯಿಂದ ಬಂದವು. ಈ ಆರೋಪವನ್ನು ಕಾರ್ತಿಕ್ ಒಪ್ಪಿಲ್ಲ. ಸ್ನೇಹ ಬೇರೆ, ಆಟ ಬೇರೆ ಎಂದು ಸಹಸ್ಪರ್ಧಿಗಳಿಗೆ ತೋರಿಸಲು ಹೋಗಿ ತನಿಷಾ ಮನಸ್ಸಿಗೆ ಕಾರ್ತಿಕ್ ಘಾಸಿ ಮಾಡಿದ್ದಾರೆ.

    ಇದಾದ ನಂತರ ಬಿಗ್ ಬಾಸ್ ಆದೇಶದಂತೆ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಎಲ್ಲರೂ ಒಂದು ಥರ್ಮಕೋಲ್ ಹಾರ್ಟ್ ಹಿಡಿದು ನಿಲ್ಲುತ್ತಾರೆ. ನಾಮಿನೇಟ್ ಮಾಡುವಾಗ ಆ ಹಾರ್ಟ್‌ಗೆ ಚಾಕುವಿನಿಂದ ಚುಚ್ಚಬೇಕು. ಕಾರ್ತಿಕ್ ಅವರು ತನಿಷಾನ ನಾಮಿನೇಟ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದರು. ಕಾರ್ತಿಕ್ (Karthik) ತಮ್ಮ ಹೆಸರನ್ನು ತೆಗೆದುಕೊಂಡಿದ್ದು ನೋಡಿ ಎಲ್ಲರಿಗೂ ಶಾಕ್ ಆಯಿತು. ತನಿಷಾ ಕಣ್ಣಲ್ಲಿ ನೀರು ತುಂಬಿತ್ತು. ಹಾರ್ಟ್‌ಗೆ ನಿಧಾನವಾಗಿ ಚುಚ್ಚು. ಈಗಾಗಲೇ ಡೀಪ್ ಆಗಿ ಚಾಕು ಹೋಗಿದೆ ಎಂದು ತನಿಷಾ ಸಿಟ್ಟಿನಿಂದಲೇ ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ:ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ ಮೇಘಾ ಶೆಟ್ಟಿ

    ಬಿಗ್ ಮನೆಗೆ ಬರುವ ಮುನ್ನವೇ ಮೊದಲಿನಿಂದಲೂ ಇಬ್ಬರೂ ಪರಿಚಿತರು. ಇದೀಗ ದೊಡ್ಮನೆಯಲ್ಲಿ ಕಾರ್ತಿಕ್-ತನಿಷಾ ಕಷ್ಟಗಳನ್ನು ಶೇರ್ ಮಾಡಿಕೊಳ್ಳುತ್ತಾ ಬರುತ್ತಿದ್ದಾರೆ. ಹಾಗಿದ್ದರೂ ಕಾರ್ತಿಕ್ ತಮ್ಮ ಹೆಸರನ್ನು ತೆಗೆದುಕೊಂಡಿದ್ದು, ತನಿಷಾಗೆ ಬೇಸರ ಮೂಡಿಸಿದೆ. ಈ ವಾರ ತನಿಷಾಗೆ ಬಿದ್ದಿದ್ದು ಒಂದೇ ವೋಟ್ ಆಗಿತ್ತು. ಅದೂ ಕಾರ್ತಿಕ್‌ ಕಡೆಯಿಂದ ಆಗಿತ್ತು. ಈ ಪ್ರಕ್ರಿಯೆಯಲ್ಲಿ ಅವರು ವೋಟ್ ಮಾಡದೇ ಇದ್ದಿದ್ದರೆ ತನಿಷಾ ಸೇವ್ ಆಗುತ್ತಿದ್ದರು.

    ಈ ಬಗ್ಗೆ ವಿನಯ್, ನಮ್ರತಾ (Namratha Gowda) ಹಾಗೂ ಸಂಗೀತಾ ಚರ್ಚೆ ಮಾಡಿದ್ದಾರೆ. ನಾವು ಫ್ರೆಂಡ್‌ಶಿಪ್ ಕಾರ್ಡ್ ಎಂದು ಹೇಳಿದ್ದಕ್ಕೆ ಕಾರ್ತಿಕ್ ಈ ರೀತಿ ಮಾಡಿದ್ದಾರೆ. ಆರೋಪ ಸುಳ್ಳು ಎಂಬುದನ್ನು ತೋರಿಸುವುದು ಅವರ ಉದ್ದೇಶ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಕಾರ್ತಿಕ್ ವಿರುದ್ಧ ಕಿಡಿಕಾರಿದ ಬೆಂಕಿ ತನಿಷಾ

    ಕಾರ್ತಿಕ್ ವಿರುದ್ಧ ಕಿಡಿಕಾರಿದ ಬೆಂಕಿ ತನಿಷಾ

    ಬಿಗ್‌ಬಾಸ್ ಮನೆಯಲ್ಲಿ (Bigg Boss House) ದಿನದಿಂದ ದಿನಕ್ಕೆ ಸ್ಪರ್ಧೆ ಕಠಿಣವಾಗುತ್ತಿದೆ. ಟಾಸ್ಕ್‌ಗಳ ಸ್ವರೂಪ ಬದಲಾಗುತ್ತಿದೆ. ಹಾಗೆಯೇ ಸ್ಪರ್ಧಿಗಳ ಮನಸ್ಥಿತಿ ಮನೆಯ ಪರಿಸ್ಥಿತಿಯೂ ಬದಲಾಗುತ್ತಿದೆ. ಈ ವಾರದ ಅಂತ್ಯ ಸಮೀಪಿಸುತ್ತಿದ್ದಂತೆಯೇ ಮತ್ತೆ ಕ್ಯಾಪ್ಟನ್ಸಿಗಾಗಿ ಜಿದ್ದಾಜಿದ್ದಿ ಶುರುವಾಗಿದೆ. ಕ್ಯಾಪ್ಟನ್ ಆಗಿರೋ ತನಿಷಾ ವಿರುದ್ಧ ತುಕಾಲಿ ಸಂತೂ, ಕಾರ್ತಿಕ್ ತಿರುಗಿ ಬಿದ್ದಿದ್ದಾರೆ.

    ಬಿಗ್‌ ಬಾಸ್ ಮನೆಯ ಸದಸ್ಯರಲ್ಲಿ ಯಾರು ಕ್ಯಾಪ್ಟನ್ಸಿ ಓಟದಿಂದ ಹೊರಗೆ ಇರಬೇಕು ಎಂದು ಮನೆಯ ಸದಸ್ಯರು ನಿರ್ಧರಿಸಬೇಕು ಎಂದು ಹೇಳಿದ್ದಾರೆ. ನಮ್ರತಾ ಅವರು, ವರ್ತೂರು ಸಂತೋಷ್ ಅವರನ್ನು ನಾಮಿನೇಟ್ ಮಾಡಿದರು. ತನಿಷಾ, ಮೈಕಲ್ ಹೆಸರು ಹೇಳಿದರು. ಮೈಕಲ್ ಮತ್ತು ತುಕಾಲಿ ಸಂತೋಷ್ ಅವರು ತನಿಷಾ ಕುಪ್ಪಂಡ ಅವರ ಹೆಸರು ಹೇಳಿದರು. ಇದನ್ನೂ ಓದಿ:ನನ್ನ ಪತ್ನಿ ನಿಮ್ಮಂತೆಯೇ ಇರಬೇಕು ಎಂದ ಅಭಿಮಾನಿಗೆ ರಶ್ಮಿಕಾ ಏನಂದ್ರು ಗೊತ್ತಾ?

    ಅದಕ್ಕಿಂತ ಹೆಚ್ಚಾಗಿ, ಕಾರ್ತೀಕ್ (Karthik Mahesh) ಅವರು ಕ್ಯಾಪ್ಟನ್ ಆಗಿ ಕೆಲವು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಎಡವಿದರು ಎಂದು ತನಿಷಾ (Tanisha Kuppanda) ಬಗ್ಗೆ ಹೇಳಿದ್ದಾರೆ. ಇದನ್ನು ಕೇಳಿ ತನಿಷಾ ಕೂಡ ಗರಂ ಆಗಿದ್ದಾರೆ. ಒಟ್ಟಾರೆ ಕ್ಯಾಪ್ಟನ್ಸಿ ಓಟದಿಂದ ಈ ವಾರ ಹೊರಗೆ ಬೀಳುವವರು ಯಾರು? ಯಾರು ಉಳಿದುಕೊಳ್ಳುತ್ತಾರೆ? ಕೊನೆಗೆ ಯಾರು ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೆ.

    100 ದಿನಗಳಿದ್ದ ಆಟ ಈಗ 2 ವಾರಗಳ ಕಾಲ ಮುಂದಕ್ಕೆ ಹೋಗಿದೆ. ಸಿರಿ (Siri) ಎಲಿಮಿನೇಷನ್ ನಂತರ 9 ಜನ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಯಾರಿಗೆ ಈ ವಾರ ಆಟ ಅಂತ್ಯವಾಗಲಿದೆ ಎಂದು ಕಾಯಬೇಕಿದೆ.

  • ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

    ಕಳಪೆ ಎಂದು ಜೈಲಿಗಟ್ಟಿದ ವಿನಯ್‌ ಮುಂದೆಯೇ ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡ ಕಾರ್ತಿಕ್‌

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮೋಸ ಮಾಡಿ ಕ್ಯಾಪ್ಟನ್ ಪಟ್ಟ ಏರೋದ್ದಕ್ಕೂ ಒಗ್ಗಟ್ಟಿದೆ. ಕಳಪೆ ಹಣೆಪಟ್ಟಿ ಕೊಟ್ಟು ಸ್ಪರ್ಧಿಯನ್ನ ಜೈಲಿಗೆ ಕಳುಹಿಸೋದ್ದಕ್ಕೂ ಒಗ್ಗಟ್ಟಿದೆ. ಇದೀಗ ವಿನಯ್ ತಾಳಕ್ಕೆ ಕುಣಿದು ಕಳಪೆ ಎಂದು ಜೈಲಿಗಟ್ಟಿದ ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ವಾರದ ಆಟ, ಅವಮಾನ, ಹಠ ಇವೆಲ್ಲವೂ ಗಮನಿಸಿ ಈ ಬಾರಿ ಸುದೀಪ್, ಕಾರ್ತಿಕ್‌ಗೆ (Karthik Mahesh) ಭೇಷ್ ಎಂದಿದ್ದಾರೆ. ಕಾರ್ತಿಕ್‌ಗೆ ಕಿಚ್ಚನ ಚಪ್ಪಾಳೆ (Kichchana Chappale) ಸಿಕ್ಕಿದೆ. ಇದನ್ನೂ ಓದಿ:ಮಾನವೀಯತೆ ಮರೆತ ಸ್ಪರ್ಧಿಗಳು- ಸಂಗೀತಾ ಸಹೋದರ ಬೇಸರ

    ಈ ವಾರವಿಡೀ ಮನೆಯಲ್ಲಿ ಸ್ಪರ್ಧಿಗಳ ಜಗಳ, ರಂಪಾಟ ಇತ್ತು. ಇದರ ನಡುವೆ ಟಾಸ್ಕ್‌ನಲ್ಲಿ ಚಪ್ಪಲಿ ಎಸೆದರು ಎಂಬ ಕಾರಣಕ್ಕೆ, ಟಾಯ್ಲೆಟ್ ವಿಚಾರ & ಮೈಮ್‌ನಿಂದಾಗಿ ಕಾರ್ತಿಕ್ ಕಳಪೆ ಕೊಟ್ಟು ಜೈಲಿಗಟ್ಟಿದ್ದರು ವಿನಯ್ & ಟೀಮ್. ಇದೀಗ ಅದೇ ಕಾರ್ತಿಕ್‌ಗೆ ಸುದೀಪ್ (Sudeep) ತಮ್ಮ ಮೆಚ್ಚುಗೆಯ ಚಪ್ಪಾಳೆ ತಟ್ಟಿದ್ದಾರೆ. ಕಿಚ್ಚನ ಚಪ್ಪಾಳೆ ಪಡೆದ ಕಾರ್ತಿಕ್ ಭಾವುಕರಾಗಿ ಗಳಗಳನೇ ಅತ್ತಿದ್ದಾರೆ.

    ಕಾರ್ತಿಕ್ ಟಾಯ್ಲೆಟ್ ವಿಚಾರವಾಗಿ ಪವಿ ಪೂವಪ್ಪ, ವಿನಯ್ (Vinay), ಸ್ನೇಹಿತ್ ಹಾಗೂ ನಮ್ರತಾ (Namratha Gowda) ಬೇಡದ ವಿಚಾರವನ್ನ ಒತ್ತಿ ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್ ಪಂಚಾಯತಿ ನಡೆಸಿದರು. ಏನೂ ನಡೆಯದ ಸನ್ನಿವೇಶವನ್ನ ಇಟ್ಟುಕೊಂಡು ಮತ್ತೆ ಮತ್ತೆ ಪವಿ ಬಳಿ ಮಾತನಾಡಿ, ಏನೋ ಒಂದು ಅವರ ತಲೆಯಲ್ಲಿ ಕೂತುಕೊಳ್ಳುವ ಹಾಗೆ ಮಾಡಿ ಒಬ್ಬ ವ್ಯಕ್ತಿ ಕಳಪೆಗೆ ಹೋದಾಗ ಅದು ಚೆನ್ನಾಗಿ ಕಾಣಿಸಲ್ಲ ಎಂದು ಕಾರ್ತಿಕ್ ಟಾಯ್ಲೆಟ್ ಮ್ಯಾಟರ್‌ಗೆ ವಿನಯ್-ನಮ್ರತಾ ತಂಡಕ್ಕೆ ಕ್ಲಾಸ್ ತೆಗೆದುಕೊಂಡರು.

    ಅವಮಾನದ ನಡುವೆ ಆಡಿ ಸ್ವಾಭಿಮಾನ ಬಿಟ್ಟುಕೊಡದೆ, ಹಠದಿಂದ ಆಟ ಆಡಿ, ಬಹಳಷ್ಟು ನೋಡಿದ ನಂತರ ನನಗೆ ಅನಿಸಿದ್ದು ಈ ವಾರದ ಕಿಚ್ಚನ ಚಪ್ಪಾಳೆ ಕಾರ್ತಿಕ್‌ಗೆ ಎಂದು ಹೇಳುತ್ತಾರೆ ಮೆಚ್ಚುಗೆ ಚಪ್ಪಾಳೆ ನೀಡಿದ್ದರು ಕಿಚ್ಚ. ಈ ವೇಳೆ, ಕಣ್ಣಿಗೆ ಪೆಟ್ಟಾಗಿದ್ದರೂ, ಸಂಗೀತಾ ಹಾಗೂ ಪ್ರತಾಪ್ ಕೂಡ ಎದ್ದು ನಿಂತು ಸಂತಸದಿಂದ ಕಾರ್ತಿಕ್‌ಗೆ ಚಪ್ಪಾಳೆ ತಟ್ಟಿದ್ದಾರೆ.

    8 ವಾರದಿಂದ ಅನಿಸುತ್ತಿತ್ತು ಇದಕ್ಕಾಗಿ ಕೊರಗುತ್ತಿದ್ದೆ. ಯಾಕೆ ಬರುತ್ತಿಲ್ಲ? ಎಲ್ಲಾದರೂ ಮಿಸ್ ಆಗ್ತಿದ್ಯಾ ಅಂತ. ಇದು ನನಗೆ ತುಂಬಾ ಮುಖ್ಯ ಸರ್. ಥ್ಯಾಂಕ್ಯು ಸರ್ ಎಂದು ಕಾರ್ತಿಕ್ ಭಾವುಕರಾದರು. ವಾಲ್ ಆಫ್ ಮೊಮೆಂಟ್‌ನಲ್ಲಿ ಹಾಕಲು ಕಾರ್ತಿಕ್‌ಗೆ ತಾವು ಜೈಲಿನಲ್ಲಿದ್ದ ಫೋಟೋವನ್ನೇ ಬಿಗ್ ಬಾಸ್ ಕಳುಹಿಸಿದ್ದರು.

  • Bigg Boss: ಅವಳು ಯಾವ ಸೀಮೆ ರಾಣಿ- ಸಂಗೀತಾ ವಿರುದ್ಧ ಸಿಡಿದೆದ್ದ ನಮ್ರತಾ

    Bigg Boss: ಅವಳು ಯಾವ ಸೀಮೆ ರಾಣಿ- ಸಂಗೀತಾ ವಿರುದ್ಧ ಸಿಡಿದೆದ್ದ ನಮ್ರತಾ

    ಬಿಗ್ ಬಾಸ್ ಮನೆ (Bigg Boss Kannada 10) ಇದೀಗ ಅಲ್ಲೋಲ ಕಲ್ಲೋಲ ಆಗಿದೆ. ಕಾರ್ತಿಕ್ ಮತ್ತು ವಿನಯ್ ಜಟಾಪಟಿಗೆ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ಗುಡುಗಿದ್ದಾರೆ. ಈ ವೇಳೆ, ಎದುರಾಳಿ ತಂಡದ ಸಂಗೀತಾ ಮೇಲೆ ನಮ್ರತಾ (Namratha Gowda) ತಿರುಗಿಬಿದ್ದಿದ್ದಾರೆ. ಅವಳು ಯಾವ ಸೀಮೆ ರಾಣಿ ಎಂದು ನಮ್ರತಾ ಕಿಡಿಕಾರಿದ್ದಾರೆ.

    ವಿನಯ್ ರಾಕ್ಷಸನಾದ್ಮೇಲೆ ಇಬ್ಬರ ನಡುವಿನ ಜಗಳ ಬೇರೆಯದ್ದೇ ಹಂತ ತಲುಪಿದೆ. ಕಾರ್ತಿಕ್ ಮುಖಕ್ಕೆ ಚಪಾತಿ ಹಿಟ್ಟಿನಿಂದ ವಿನಯ್ ಜೋರಾಗಿ ಬೀಸಿದರು. ಇದು ದೈಹಿಕ ದೌರ್ಜನ್ಯ ಅಂತ ಕಾರ್ತಿಕ್ ಹೇಳುತ್ತಿದ್ದರೂ, ವಿನಯ್ ನಿಲ್ಲಿಸಲಿಲ್ಲ. ಸಿಟ್ಟಿನಿಂದ ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಜೋರಾಗಿ ಬೀಸಿದರು. ಆಗ ಚಪ್ಪಲಿ ಬೌನ್ಸ್ ಆಗಿ ವಿನಯ್‌ಗೆ ತಾಕಿತು. ಪರಿಣಾಮ, ವಿನಯ್ ದೊಡ್ಡ ರಂಪ ಮಾಡಿದರು.

    ನನಗೆ ಚಪ್ಪಲಿಯಲ್ಲಿ ಹೊಡಿತೀಯಾ? ಇವನ ಹತ್ತಿರ ಚಪ್ಪಲಿಯಲ್ಲಿ ಹೊಡೆಸಿಕೊಂಡು ನಾನಿಲ್ಲಿ ಇರಬೇಕಾ? ನಾನಿಲ್ಲಿ ಇರೋಲ್ಲ. ಆಚೆ ಹೋಗ್ಬೇಕು ಎಂದು ವಿನಯ್ ಕಿರುಚಾಡಿದರು. ಸಿಟ್ಟಿನಲ್ಲಿ ನೆಲಕ್ಕೆ ಕಾರ್ತಿಕ್ ಚಪ್ಪಲಿ ಎಸೆದಾಗ. ಅದು ಬೌನ್ಸ್ ಆಗಿ ವಿನಯ್‌ಗೆ ತಾಗಿತು. ಆಗ ವಿನಯ್ ದೊಡ್ಡ ರಂಪಾಟ ಮಾಡಿದರು. ಕಾರ್ತಿಕ್ ನನಗೆ ಚಪ್ಪಲಿಯಲ್ಲಿ ಹೊಡೆದ. ನಾನು ಇಲ್ಲಿ ಇರಲ್ಲ. ನನಗೆ ಮರ್ಯಾದೆ ಇಲ್ವಾ? ಅಂತೆಲ್ಲಾ ಕೂಗಾಡಿ ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ವಿನಯ್ ಮುಂದಾಗಿದ್ದರು.

    ಈ ವೇಳೆ, ನಮ್ರತಾ ತಮ್ಮ ತಂಡದ ವಿನಯ್ ಪರ ವಹಿಸಿದ್ದರು. ಎದುರಾಳಿ ತಂಡದವರು ನಮ್ಮ ಮಾತು ಕೇಳುತ್ತಿಲ್ಲ. ಅದಕ್ಕೆಲ್ಲಾ ಕಾರಣ ಅವರ ತಂಡದ ಕ್ಯಾಪ್ಟನ್ ಸಂಗೀತಾ (Sangeetha Sringeri) ಎಂದು ಗುಡುಗಿದ್ದರು. ಅವಳು ಯಾವ ಸೀಮೆ ರಾಣಿ ಗುರು? ಸಂಗೀತಾನ ಯಾರು ರಾಣಿ ಮಾಡಿದ್ದರು. ಅವಿನಾಶ್ ನಿಮಗೆ ತಲೆಯಲ್ಲಿ ಬುದ್ಧಿ ಇಲ್ವಾ? ಸಿಂಗಲ್ ಆಗಿ ತಾನೇ ಆಟ ಆಡೋಕೆ ಬಂದಿದ್ದೀರಾ ತಾನೇ ಎಂದು ನಮ್ರತಾ ಕೇಳುತ್ತಾರೆ. ಅವಳು ಯಾರು ನಿಮಗೆ ಹೇಳೋಕೆ? ಎನ್ನುತ್ತಾರೆ. ಕಾರ್ತಿಕ್ ಕಡೆಯಿಂದ ಚಪ್ಪಲಿ ಏಟು ಬಿದ್ದಿದೆ ಅಂತ ವಿನಯ್ ಪರ ನಮ್ರತಾ ನಿಂತಿದ್ದಾರೆ. ಎದುರಾಳಿ ತಂಡದ ನಡೆಗೆ ನಮ್ರತಾ ಸಿಡಿದೆದ್ದಿದ್ದಾರೆ. ಇದನ್ನೂ ಓದಿ:Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ- ಕಾರ್ತಿಕ್ ಪರ‌ ನಿಂತ ಮೈಕಲ್

    ನಾವು ಸೇವಕರಾ, ಗಂಧರ್ವರಾ ನಾವು ಗುಲಾಮರಲ್ಲ. ನಾವ್ಯಾಕೆ ಶಿಕ್ಷೆ ತಗೊಳ್ಬೇಕು ಸ್ಮಾರ್ಟ್ ಆಗಿ ಆಡೋಣ. ಸ್ವಿಮ್ಮಿಂಗ್ ಪೂಲ್ ಹತ್ತಿರ ಕರ್ಕೊಂಡ್ ಹೋಗಿ ನೀರು ಹಾಕ್ತೀವಿ ಅಂದ್ರೆ ನಾವಿದನ್ನ ಒಪ್ಪುವುದಿಲ್ಲ ಅಂತ್ಹೇಳಿ ಎಂದು ತಂಡಕ್ಕೆ ಸಂಗೀತಾ ಹೇಳಿದರು. ಆಗ, ನಾವು ನಿರಾಕರಿಸುವಂತಿಲ್ಲ. ಆದರೆ ಒಡೆಯನ ಕರೆದು ಹೇಳಬೇಕು ಎಂದರು ತನಿಷಾ. ಬೇಡಿಕೆಯನ್ನ ಪೂರೈಸುತ್ತೇವೆ. ಆದರೆ, ದೈಹಿಕವಾಗಿ ಶಿಕ್ಷಿಸುವ ಹಕ್ಕು ಅವರಿಗೆ ಇಲ್ಲ ಅಷ್ಟೇ ಎಂದರು ಕಾರ್ತಿಕ್. ಈ ಮೂಲಕ ಸ್ಮಾರ್ಟ್ ಆಗಿ ಸಂಗೀತಾ ಟೀಮ್ ಆಟ ಆಡಿದ್ದರು. ಕಾದು ನೋಡೋಣ ವಾರಾಂತ್ಯದಲ್ಲಿ ಸುದೀಪ್‌ ಯಾವ ತಂಡಕ್ಕೆ ಯಾವ ಕ್ಲಾಸ್‌ ತೆಗೆದುಕೊಳ್ಳುತ್ತಾರೆ ಅಂತ. ಯಾವುದು ಸರಿ? ಯಾವುದು ತಪ್ಪು? ಕಿಚ್ಚನ ನಿಲುವೇನು ಎಂದು ತಿಳಿಯಲಿದೆ.

  • Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ-  ಕಾರ್ತಿಕ್ ಪರ‌ ನಿಂತ ಮೈಕಲ್

    Bigg Boss: ವಿನಯ್‌ಗೆ ಚಪ್ಪಲಿ ಏಟು ಬಿದ್ದಿಲ್ಲ- ಕಾರ್ತಿಕ್ ಪರ‌ ನಿಂತ ಮೈಕಲ್

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಈ ವಾರ ಮಹಾಯುದ್ಧವೇ ನಡೆದಿದೆ. ವಿನಯ್ (Vinay Gowda) ಮತ್ತು ಕಾರ್ತಿಕ್ (Karthik Mahesh) ಜಗಳ ಮೀತಿ ಮೀರಿದೆ. ಇದೀಗ ಕಾರ್ತಿಕ್ ತನಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ, ನಾನು ಈ ಮನೆಯಲ್ಲಿ ಇರಬೇಕಾ? ಎಂದು ವಿನಯ್ ಗುಡುಗಿದ್ದಾರೆ. ಕಾರ್ತಿಕ್ ಯಾವ ತಪ್ಪು ಮಾಡಿಲ್ಲ, ಚಪ್ಪಲಿ ಏಟು ಬಿದ್ದಿಲ್ಲ ಎಂದು ಮೈಕಲ್ ಎದುರಾಳಿ ಪರ ವಹಿಸಿದ್ದಾರೆ. ಮೈಕಲ್ ನಡೆ ಇದೀಗ ವಿನಯ್ ಕೆಂಗಣ್ಣಿಗೆ ಗುರಿಯಾಗಿದೆ.

    ಈ ವಾರ ಬಿಗ್ ಬಾಸ್ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳಾಗಿ ಮಾಡಿದ್ದು, ಕಾರ್ತಿಕ್ ಮತ್ತು ವಿನಯ್ ಬೇರೆ ಬೇರೆ ತಂಡದಲ್ಲಿ ಇದ್ದರು. ರಾಕ್ಷಸ ತಂಡದ ವಿನಯ್, ಗಂಧರ್ವ ತಂಡದ ಕಾರ್ತಿಕ್‌ಗೆ ಟಾಸ್ಕ್ ಕೊಡುವಾಗ ಜಟಾಪಟಿ ಶುರುವಾಗಿದೆ. ವಿನಯ್ & ಟೀಮ್ ಈ ಟಾಸ್ಕ್ನ ಪರ್ಸನಲ್ ದ್ವೇಷಕ್ಕೆ ಬಳಸಿಕೊಂಡು ಕಾರ್ತಿಕ್‌ಗೆ ಟಾರ್ಗೆಟ್ ಮಾಡಿದ್ದಾರೆ. ಮುಖಕ್ಕೆ ನೊರೆ ಹಾಕಿದ್ದು, ಚಪಾತಿ ಹಿಟ್ಟಿನಲ್ಲಿ ಮುಖಕ್ಕೆ ಹೊಡೆದಿರೋದು ಹೀಗೆ ನಾನಾ ರೀತಿಯಲ್ಲಿ ಕಾರ್ತಿಕ್‌ಗೆ ಟಾರ್ಚರ್ ಕೊಟ್ಟಿದ್ದಾರೆ ವಿನಯ್.

    ಸಂಗೀತಾ- ಕಾರ್ತಿಕ್ ಟೀಮ್ ಕೂಡ ಸ್ಮಾರ್ಟ್ ಆಗಿ ಆಟ ಆಡಿಸಿ, ಎದುರಾಳಿ ತಂಡಕ್ಕೆ ಹತಾಶರಾಗುವಂತೆ ಮಾಡಿದ್ದಾರೆ. ಹೀಗೆ ಟಾಸ್ಕ್ ಕೊಡುವಾಗ ‘ಹೇ ಬಾರೋ ಲೋ ಗುಲಾಮ’ ಎಂದು ಕಾರ್ತಿಕ್‌ಗೆ ಕಿರಿಕಿರಿ ಮಾಡಿದ್ದಾರೆ ವಿನಯ್. ಚಪಾತಿ ಹಿಟ್ಟಿನಲ್ಲಿ ಕಾರ್ತಿಕ್ ಮುಖಕ್ಕೆ ಹೊಡೆದು ಇನ್‌ಸಲ್ಟ್ ಮಾಡಿದ ಮೇಲೆ ಇಬ್ಬರ ನಡುವೆಯೂ ವಾಕ್ಸಮರ ನಡೆದಿದೆ. ಆಗ ಕಾರ್ತಿಕ್ ಕೋಪಕ್ಕೆ ಚಪ್ಪಲಿ ತೆಗೆದು ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ವಿನಯ್‌ಗೆ ತಾಗಿದೆ. ನನಗೆ ಚಪ್ಪಲಿಯಲ್ಲಿ ಕಾರ್ತಿಕ್ ಹೊಡೆದ ಅಂತ ವಿನಯ್ ರಂಪಾಟ ಮಾಡಿದ್ದಾರೆ.

    ಆಗ ಮೈಕಲ್, ಕಾರ್ತಿಕ್ ಚಪ್ಪಲಿಯನ್ನ ನೆಲಕ್ಕೆ ಹೊಡೆದಿದ್ದಾರೆ. ಅದು ಬೌನ್ಸ್ ಆಗಿ ನಿಮಗೆ ಬಿದ್ದಿದೆ ಅಷ್ಟೇ. ಇದರಲ್ಲಿ ಕಾರ್ತಿಕ್ ಏನೂ ತಪ್ಪು ಮಾಡಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಮೈಕಲ್ ಈ ಮಾತು ವಿನಯ್‌ಗೆ ಮತ್ತಷ್ಟು ಸಿಟ್ಟು ತರಿಸಿದೆ. ಇದನ್ನೂ ಓದಿ:‘ಟಾಕ್ಸಿಕ್’ ಚಿತ್ರದ ಮೂಲಕ ನಿರ್ಮಾಪಕ ಆದ ಯಶ್

    ಮೈಕಲ್ ಯಾವಾಗಲೂ ತಪ್ಪನ್ನು ತಪ್ಪು ಎನ್ನುತ್ತಾರೆ. ಅದು ತಮ್ಮ ತಂಡದವರೇ ಆಗಲಿ, ಎದುರಾಳಿ ತಂಡವೇ ಆಗಿರಲಿ. ಸರಿ ಎಲ್ಲಿದ್ಯೋ ಅಲ್ಲಿ ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರೆ. ವಿನಯ್ ಮುಂದೆಯೇ ಕಾರ್ತಿಕ್ ಪರ ತಮ್ಮ ತಂಡದ ಮೈಕಲ್ (Michael Ajay) ಮಾತನಾಡಿರೋದು ಬೇಸರ ಮೂಡಿಸಿದೆ.

  • Bigg Boss: ವಿನಯ್‌ ಕೊಂಕು ಮಾತಿಗೆ ಸಿಡಿದೆದ್ದ ಕಾರ್ತಿಕ್‌

    Bigg Boss: ವಿನಯ್‌ ಕೊಂಕು ಮಾತಿಗೆ ಸಿಡಿದೆದ್ದ ಕಾರ್ತಿಕ್‌

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮತ್ತೆ ಕಾರ್ತಿಕ್- ವಿನಯ್ ಜಗಳ ಮೀತಿ ಮೀರಿದೆ. ಒಬ್ಬರಿಗೊಬ್ಬರು ತಗಡು ಎಂಬ ಪದ ಬಳಸಿ ನಿಂದಿಸಿದ್ದಾರೆ. ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಆಟ ಆಡುತ್ತೀಯಾ ಎಂದೆಲ್ಲಾ ಪದ ಬಳಸಿದ್ದಾರೆ ಎಂದು ಕಾರ್ತಿಕ್ (Karthik Mahesh) ವಿರುದ್ಧ ವಿನಯ್ (Vinay Gowda) ಸಿಡಿದೆದ್ದಿದ್ದಾರೆ. ವಿನಯ್‌ ಕೊಂಕು ಮಾತಿಗೆ ಕಾರ್ತಿಕ್‌ ತಿರುಗೇಟು ನೀಡಿದ್ದಾರೆ.

    ಬಿಗ್ ಬಾಸ್ ಈ ಬಾರಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳನ್ನಾಗಿ ಆಟ ಆಡಿಸುತ್ತಿದ್ದರು. ಟಾಸ್ಕ್‌ವೊಂದರಲ್ಲಿ ಕುರ್ಚಿ ಮೇಲೆ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಗಂಧರ್ವರನ್ನು ಎಬ್ಬಿಸಲು ರಾಕ್ಷಸರ ತಂಡದವರು ನೀರನ್ನು ಎರಚುತ್ತಿದ್ದರು. ಈ ವೇಳೆ ಕಾರ್ತಿಕ್‌ನ ವಿನಯ್ ಕೆಣಕಿದರು. ಪದೇ ಪದೇ ಕೆಣಕುತ್ತಿದ್ದ ವಿನಯ್, ಕಾರ್ತಿಕ್ ಅವರನ್ನ ತಗಡು ಎಂದರು. ಅದನ್ನ ಕೇಳಿಸಿಕೊಂಡು ಕಾರ್ತಿಕ್ ರೊಚ್ಚಿಗೆದ್ದರು. ಈ ವೇಳೆ ವಿನಯ್ – ಕಾರ್ತಿಕ್ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಇದನ್ನೂ ಓದಿ:ಧರ್ಮಕ್ಕಾಗಿ 4 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ ‘ಬಿಗ್ ಬಾಸ್’ ಜೋಡಿ

    ಟಾಸ್ಕ್ ನಡೆಯುತ್ತಿದ್ದಾಗ, ಇಬ್ಬರನ್ನು ಕುರ್ಚಿಯಿಂದ ಎಬ್ಬಿಸಬೇಕು ಎಂದಾಗ. ವರ್ತೂರು ಸಂತೋಷ್ ಹಾಗೂ ಪವಿ ಅವರನ್ನ ರಾಕ್ಷಸರ ತಂಡ ಹೆಚ್ಚು ಟಾರ್ಗೆಟ್ ಮಾಡಿತು. ತುಕಾಲಿ ಸಂತು ಹಾಗೂ ಮೈಕಲ್ ಕಡೆ ಹೆಚ್ಚು ಗಮನ ಕೊಡಲಿಲ್ಲ. ಕಾರ್ತಿಕ್ ಹಾಗೂ ಸಂಗೀತಾ (Sangeetha) ನೀರು ಎರಚುತ್ತಿದ್ದಾಗ, ಕರೆಕ್ಟ್ ಆಗಿದೆ ಜೋಡಿ ಎಂದು ವಿನಯ್ ಟಾಂಟ್ ಕೊಡುತ್ತಿದ್ದರು. ಕುರ್ಚಿ ಮೇಲಿಂದ ವರ್ತೂರು ಸಂತೋಷ್ ಎದ್ದರು. ಆಗ, ಪವಿ ಪೂವಪ್ಪ ಅವರನ್ನ ರಾಕ್ಷಸರ ತಂಡ ಹೆಚ್ಚು ಟಾರ್ಗೆಟ್ ಮಾಡಿತು. ಈ ವೇಳೆ, ವಿನಯ್ ಕೊಂಕು ಮಾತನಾಡಿದರು. ಅಲ್ಲಿಂದ ಜಗಳ ತಾರಕಕ್ಕೇರಿತು. ಹುಡುಗಿಯನ್ನ ಕಳುಹಿಸಿಬಿಟ್ಟು ಅಲ್ಲಿ ಗಂಡಸು ಅಂತ ಚಪ್ಪಾಳೆ ತಟ್ಟಿಕೊಂಡು ಕೂತವ್ನೆ ಎಂದು ವಿನಯ್‌ ವಿರುದ್ಧ ಕಾರ್ತಿಕ್‌ ಗುಡುಗಿದ್ದರು.

    ಬಳಿಕ ಕಾರ್ತಿಕ್ – ವಿನಯ್ ಮಾತಿನ ಚಕಮಕಿ ಜೋರಾಯಿತು. ಕಾರ್ತಿಕ್ ಕೆಟ್ಟ ಪದ ಬಳಸಿದ್ದಾರೆ ಅಂತ ವಿನಯ್ ಗುಡುಗಿದ್ದರು. ಕೆಟ್ಟ ಪದ ಬಳಕೆ ಮಾಡಿಲ್ಲ ಅದೆಷ್ಟೇ ಹೇಳಿದ್ದರೂ ವಿನಯ್ ಕ್ಯಾರೆ ಎನ್ನಲಿಲ್ಲ. ಪದೇ ಪದೇ ತಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವಿನಯ್ ವಿರುದ್ಧ ನೊಂದ ಕಾರ್ತಿಕ್ ಕಣ್ಣೀರು ಸುರಿಸಿದರು. ನಾನು ಅಂತಹ ಮಾತನ್ನ ಆಡಿದ್ದರೆ ಬಿಗ್ ಬಾಸ್‌ನಿಂದ ಹೊರಗೆ ಹೋಗುತ್ತೇನೆ ಎಂದು ಕಾರ್ತಿಕ್ ಭಾವುಕರಾಗಿದ್ದರು.

  • Bigg Boss: ಆಟ ಆಡೋಕೆ ಲಾಯಕ್ಕಿಲ್ಲ- ಸ್ನೇಹಿತ್‌ಗೆ ಕಾರ್ತಿಕ್ ಧಮಕಿ

    Bigg Boss: ಆಟ ಆಡೋಕೆ ಲಾಯಕ್ಕಿಲ್ಲ- ಸ್ನೇಹಿತ್‌ಗೆ ಕಾರ್ತಿಕ್ ಧಮಕಿ

    ಬಿಗ್‌ಬಾಸ್ ಆಟ (Bigg Boss Kannada 10) ಇದೀಗ 60ನೇ ದಿನಕ್ಕೆ ಮುನ್ನುಗ್ಗುತ್ತಿದೆ. ಈ ವಾರ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳನ್ನಾಗಿ ಮಾಡಿ ಹೊಸ ಬಗೆಯ ಟಾಸ್ಕ್ ವೊಂದನ್ನ ಕೊಟ್ಟಿದ್ದಾರೆ. ಈ ವೇಳೆ, ಸಂಗೀತಾ, ವಿನಯ್, ನಮ್ರತಾ, ಕಾರ್ತಿಕ್ ನಡುವೆ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದ್ದರು. ಕ್ಯಾಪ್ಟನ್ ಸ್ನೇಹಿತ್ ಸೈಲೆಂಟ್ ಆಗಿದ್ದರು. ಸ್ನೇಹಿತ್ ನಡೆಗೆ ಸಂಗೀತಾ ಟೀಮ್ ಕ್ಯಾಕರಿಸಿ ಉಗಿದಿದ್ದಾರೆ.

    ಗಂಧರ್ವರು ಟೀಮ್ ಗೆ ವರ್ತೂರು ಸಂತೋಷ್ ಕ್ಯಾಪ್ಟನ್ ಆಗಿದ್ರೆ, ರಾಕ್ಷಸರು ಟೀಮ್ ಸಂಗೀತಾ ಕ್ಯಾಪ್ಟನ್ ಆಗಿದ್ದಾರೆ. ಈ ವೇಳೆ ಎರಡು ತಂಡದ ನಡುವೆ ಮಾರಾಮಾರಿ ನಡೆದಿದೆ. ಚಟುವಟಿಕೆ ವೇಳೆ ವಿನಯ್ – ಕಾರ್ತಿಕ್ (Karthik Mahesh) ಮಧ್ಯೆ ತಳ್ಳಾಟ, ನೂಕಾಟ ನಡೆಯಿತು. ಇತ್ತ ನಮ್ರತಾ ಹಾಗೂ ಸಂಗೀತಾ ಮಧ್ಯೆಯೂ ಫಿಸಿಕಲ್ ಅಟ್ಯಾಕ್ ಆಯ್ತು. ಇಷ್ಟೆಲ್ಲಾ ನಡೆಯುತ್ತಿದ್ದರೂ, ಕ್ಯಾಪ್ಟನ್ ಆಗಿ ಬಿಗ್ ಬಾಸ್ ಲೋಕದ ಒಡೆಯನಾಗಿ ಸ್ನೇಹಿತ್ ಸುಮ್ಮನೆ ನೋಡಿಕೊಂಡು ನಿಂತಿದ್ದರು. ಜಗಳ ನಿಲ್ಲಿಸಲು ಸ್ನೇಹಿತ್ (Snehith Gowda) ಪ್ರಯತ್ನಿಸಲೇ ಇಲ್ಲ.‌ ಇದನ್ನೂ ಓದಿ:‘ಆಸೆ’ ಧಾರಾವಾಹಿ ನಿರ್ಮಾಣ ಮಾಡಿದ ನಟ ರಮೇಶ್ ಅರವಿಂದ್

    ಎರಡು ತಂಡದ ಕೂಡ ಹೊಡೆದಾಡುವ ಹಂತಕ್ಕೆ ಹೋದರೂ ಏನೂ ಮಾತನಾಡದೇ ಜಗಳ ನೋಡುತ್ತಾ ನಿಂತಿದ್ದಾರೆ. ಈ ವೇಳೆ ತನಿಷಾ, ಆಟ ಫಿಸಿಕಲ್ ಆಗುತ್ತಿದೆ ಆ್ಯಕ್ಷನ್ ತಗೋಳಿ ಎಂದು ಸ್ನೇಹಿತ್‌ಗೆ ಮನವಿ ಮಾಡಿದರೂ ಕ್ಯಾರೆ ಎನ್ನದೇ ನಿಂತಿದ್ದರು. ಆಗ ಕಾರ್ತಿಕ್ ಮಹೇಶ್, ಆಟ ಆಡೋಕೆ ಲಾಯಕ್ಕಿಲ್ಲ ನೀ ಹೊರಡು ಎಂದು ಸ್ನೇಹಿತ್‌ಗೆ ಧಮಕಿ ಹಾಕಿದ್ದಾರೆ.

    ಫಿಸಿಕಲ್ ಅಟ್ಯಾಕ್ ಹೆಚ್ಚಾಗಿದ್ರಿಂದ ಆಟವನ್ನ ಸ್ವತಃ ಬಿಗ್ ಬಾಸ್ ನಿಲ್ಲಿಸಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳದ ಸ್ನೇಹಿತ್‌ಗೆ ಸಂಗೀತಾ & ಟೀಮ್ ಕಟುವಾಗಿ ಟೀಕಿಸಿದ್ದಾರೆ. ನೀವು ಯಾವ ಸೀಮೆ ಕ್ಯಾಪ್ಟನ್ ಅಂತ ಛೀಮಾರಿ ಹಾಕಿದ್ದಾರೆ.

    ಸ್ನೇಹಿತ್ ಕ್ಯಾಪ್ಟನ್ ಆಗಿದ್ರೂ ವಿನಯ್ ಮತ್ತು ನಮ್ರತಾ (Namratha Gowda) ಚೇಲನಾಗಿ ಆಟ ಆಡೋದನ್ನ ಬಿಟ್ಟಿಲ್ಲ ಎಂದೂ ಟೀಮ್ ಕ್ರಿಯೇಟ್ ಮಾಡುವಾಗಲೇ ಸ್ನೇಹಿತ್ ವಿರುದ್ದ ಸಂಗೀತ ಸಿಡಿದೆದಿದ್ದರು. ಈ ವಾರಾಂತ್ಯದಲ್ಲಿ ಸುದೀಪ್ ಬೆಂಡೆತ್ತೋಕೆ ಸರಿಯಾದ ಟಾಪಿಕ್ ಸಿಕ್ಕಿದೆ. ಈ ಮೂಲಕ ಸ್ನೇಹಿತ್ ತಮ್ಮ ಗುಂಡಿ ತಾವೇ ತೊಡಿಕೊಂಡಿದ್ದಾರೆ. ಎಲ್ಲದ್ದಕ್ಕೂ ಕಿಚ್ಚನ ಪಂಚಾಯಿತಿಯಲ್ಕಿ ಉತ್ತರ ಸಿಗಲಿದೆ.

  • ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

    ಕಾರ್ತಿಕ್‌ಗೆ ಗುನ್ನ ಕೊಟ್ಟ ಡ್ರೋನ್‌ಗೆ ‘ಬಿಗ್ ಬಾಸ್’ ತಿರುಮಂತ್ರ

    ಬಿಗ್ ಬಾಸ್ ಮನೆಯ (Bigg Boss Kannada 10)  ಗೇಮ್ ಮಾಸ್ಟರ್ ಡ್ರೋನ್ ಪ್ರತಾಪ್ (Drone Prathap) ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಏಡವಿದ್ದಾರೆ. ಕಾರ್ತಿಕ್‌ಗೆ (Karthik Mahesh) ಗುನ್ನ ಕೊಟ್ಟಿದ್ದಕ್ಕೆ ಬಿಗ್ ಬಾಸ್ ಇದೀಗ ಉಲ್ಟಾ ಹೊಡೆದಿದ್ದಾರೆ. ಪ್ರತಾಪ್ ಆಡಿದ ಆಟಕ್ಕೆ ಕರ್ಮ ರಿಟರ್ನ್ಸ್ ಎಂಬಂತೆ ಆಗಿದೆ.

    ಪ್ರತಿ ವಾರದಂತೆ ಈ ವಾರವೂ ಕೂಡ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದರು. ‘ಮಣ್ಣಿನ ಮಕ್ಕಳು’ ತಂಡಕ್ಕೆ ಡ್ರೋನ್ ಕ್ಯಾಪ್ಟನ್ ಆದರೆ ‘ವಿಕ್ರಾಂತ್’ ತಂಡಕ್ಕೆ ಮೈಕಲ್ ಕ್ಯಾಪ್ಟನ್ ಆಗಿದ್ದರು. ಪ್ರತಾಪ್ ಅವರ ತಂಡ ಸೇರಿದ್ದರು ಕಾರ್ತಿಕ್. ಆದರೆ, ದುರ್ಬಲ ಸದಸ್ಯರೊಬ್ಬರನ್ನ ತಂಡದಿಂದ ಹೊರಗೆ ತಳ್ಳಬೇಕಾದ ಪರಿಸ್ಥಿತಿ ಬಂದಾಗ ಕಾರ್ತಿಕ್ ಅವರನ್ನ ಡ್ರೋನ್ ಪ್ರತಾಪ್ ಹೊರಗಿಟ್ಟರು. ಆ ಮೂಲಕ ಕ್ಯಾಪ್ಟೆನ್ಸಿ ಓಟದಿಂದ ಕಾರ್ತಿಕ್ ಹೊರಬಿದ್ದರು. ಇದನ್ನೂ ಓದಿ:ಮಾಡೆಲ್ ಜೊತೆ ಮದುವೆಯಾದ ಬಾಲಿವುಡ್ ನಟ ರಣ್ ದೀಪ್ ಹೂಡಾ

    ವಾರದ ಎಲ್ಲಾ ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್ ನೇತೃತ್ವದ ತಂಡ ಸೋಲು ಅನುಭವಿಸಿದೆ. ಹೀಗಾಗಿ, ಡ್ರೋನ್ ಪ್ರತಾಪ್ ನೇತೃತ್ವದ ಸಂಪೂರ್ಣ ತಂಡ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬಿದ್ದಿದೆ. ಮೈಕಲ್ ಟೀಮ್ ಗೆದ್ದಿದೆ. ಎಲ್ಲಾ ಚಟುವಟಿಕೆಗಳಿಗೂ ಉಸ್ತುವಾರಿ ಆಗಿದ್ದ ಕಾರ್ತಿಕ್ ಮಹೇಶ್‌ಗೆ ಬಿಗ್ ಬಾಸ್ (Bigg Boss) ವಿಶೇಷ ಅವಕಾಶ ನೀಡಿದರು.

    ಉಸ್ತುವಾರಿ ಕೆಲಸವನ್ನ ಕಾರ್ತಿಕ್ ಉತ್ತಮವಾಗಿ ನಿಭಾಯಿಸಿದರು ಎಂದು ಇತರೆ ಸ್ಪರ್ಧಿಗಳಿಂದ ಮೆಜಾರಿಟಿ ವೋಟ್ ಬಿದ್ದಿದ್ರಿಂದ ಕ್ಯಾಪ್ಟೆನ್ಸಿ ಓಟಕ್ಕೆ ಕಾರ್ತಿಕ್ ವಾಪಸ್ ಬಂದಿದ್ದಾರೆ. ಯಾವ ಕೈಯಲ್ಲಿ ಕಾರ್ತಿಕ್ ಫೋಟೋಗೆ ಡ್ರೋನ್ ಪ್ರತಾಪ್ x ಚಿಹ್ನೆ ಹಾಕಿದ್ರೋ, ಅದೇ ಕೈಯಲ್ಲಿ ಕಾರ್ತಿಕ್ ಫೋಟೋದಿಂದ x ಚಿಹ್ನೆಯನ್ನ ಬಿಗ್ ಬಾಸ್ ವಾಪಸ್ ತೆಗೆಸಿದ್ದಾರೆ. ಅದನ್ನ ಕಂಡ ಸಂಗೀತಾ ಕರ್ಮ ಅನ್ನೋದು ಇದಕ್ಕೇನಾ ಎಂದು ಮಾತನಾಡಿದ್ದಾರೆ.

    ಯಾರು ಕಡೆಯಿಂದ ಕ್ಯಾಪ್ಟೆನ್ಸಿಗೆ ಹೊರದಬ್ಬಿದ್ರೋ ಅವರ ಕಡೆಯಿಂದಲೇ ಕಾರ್ತಿಕ್ ಫೋಟೋ ಮೇಲಿರುವ x ಮಾರ್ಕ್ ತೆಗೆಸಿದ್ದಾರೆ ಬಿಗ್ ಬಾಸ್. ಪ್ರತಾಪ್ ಕೈಯಿಂದಲೇ ಈ ಕೆಲಸ ಮಾಡಿಸಿದ್ದಾರೆ. ಉಸ್ತುವಾರಿಯೇ ಕಾರ್ತಿಕ್ ಗೆದ್ದು ಕ್ಯಾಪ್ಟೆನ್ಸಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಮೈಕಲ್ ಟೀಮ್ ಜೊತೆ ಕಾರ್ತಿಕ್ ಸೆಣಸಾಡಬೇಕಿದೆ. ವಿಶೇಷ ಏನೆಂದರೆ, ಈ ಬಾರಿ ಕ್ಯಾಪ್ಟನ್ ಆದರೆ ಎರಡು ಪಟ್ಟು ಹೆಚ್ಚಿನ ಅಧಿಕಾರ ಇರಲಿದೆ. ಹಾಗಾಗಿಯೇ ಅಸಲಿ ಆಟ ಈಗ ಶುರುವಾಗಿದೆ. ಯಾರು ಗೆಲ್ತಾರೆ, ಕಾಯಬೇಕಿದೆ.

  • Bigg Boss: ನೊಂದವರ ಗುಂಪಿಗೆ ಅಧ್ಯಕ್ಷ ಯಾರು ಗೊತ್ತಾ?

    Bigg Boss: ನೊಂದವರ ಗುಂಪಿಗೆ ಅಧ್ಯಕ್ಷ ಯಾರು ಗೊತ್ತಾ?

    ಬಿಗ್ ಬಾಸ್ ಮನೆಯ (Bigg Boss Kannada) ಆಟ ಈಗಾಗಲೇ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಗ್ರೂಪಿಸಂ, ಟೀಮ್‌ಗಳಾಗಿ ವಿಂಗಡಣೆ ಆಗಿದೆ. ವಿನಯ್, ಕಾರ್ತಿಕ್, ನೊಂದವರ ಗುಂಪು ಎಂದೆಲ್ಲಾ ತಂಡಗಳಾಗಿದೆ. ನೊಂದವರು ಎಂದು ಹೇಳಿಕೊಂಡು ಓಡಾಡುವ ತುಕಾಲಿಗೆ ಸುದೀಪ್, ನೊಂದವರ ಸಂಘದಲ್ಲಿ ಯಾರಿಗೆ ಯಾವ ಸ್ಥಾನ ಕೊಡುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ದೊಡ್ಮನೆ ವಾತಾವರಣ ಸಂಪೂರ್ಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಈಗ ರಿಯಲ್ ಗೇಮ್ ಶುರುವಾಗಿದೆ. ಆಗಾಗ ತುಕಾಲಿ ಸಂತೂ, ತಮಗೆ ಟಾಸ್ಕ್ ಆಡಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಮೂಲೆಗುಂಪು ಮಾಡ್ತಾರೆ ಎಂದೆಲ್ಲಾ ಕುಟುಕಿದ್ದಾರೆ. ನೊಂದವರು ನಾವು ಎಂದೆಲ್ಲಾ ಅವರು ಮಾತನಾಡಿದ್ದಾರೆ. ಇದು ಕಿಚ್ಚನ ಗಮನಕ್ಕೂ ಬಂದಿದ್ದು, ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿದ್ದಾರೆ. ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿ ಅವರನ್ನು ಕಿಚಾಯಿಸಿದ್ದಾರೆ.

    ನೊಂದವರ ಗುಂಪಿನ ಸಂಘದಲ್ಲಿ ಯಾರ್ಯಾರಿಗೆ ಯಾವ ಸ್ಥಾನವನ್ನ ನೀಡುತ್ತೀರಾ ಎಂದು ತುಕಾಲಿ ಸಂತೋಷ್ ರವರನ್ನು ಕಿಚ್ಚ ಸುದೀಪ್ (Sudeep) ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಕಾರ್ತಿಕ್ ಹಾಗೂ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಅವರಿಗೆ ಇಂತಹ ಸ್ಥಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮನೆಯ ಸದಸ್ಯರಿಗೆ ಬ್ಯಾಡ್ಜ್ ಕೂಡ ಬಂದಿದೆ ಅದನ್ನು ತುಕಾಲಿಯವರಿಗೆ ಹಾಕಲು ಸುದೀಪ್ ಹೇಳಿದ್ದಾರೆ.

    ದೊಡ್ಮನೆಯಲ್ಲಿ ನೊಂದವರ ಸಂಘವನ್ನು ಉದ್ಘಾಟನೆ ಮಾಡಿದ್ದಾರೆ. ತುಕಾಲಿ ಸಂತೋಷ್ ನೊಂದವರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಯಾವಾಗಲೂ ತುಕಾಲಿ ಸಂತೋಷ್ ವಿನಯ್ ಏನಾದರೂ ಮಾತನಾಡಿದರೆ ನಾವು ನೊಂದವರು ನಮ್ಮ ಕಷ್ಟವನ್ನು ಕೇಳಲು ಯಾರು ಇಲ್ಲ ಎಂಬ ಮಾತನ್ನು ಬಳಕೆ ಮಾಡುತ್ತಿದ್ದರು. ಅದಕ್ಕೆ ಇಂದು ನೊಂದವರ ಸಂಘ ಎಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಇನ್ನು ತುಕಾಲಿ ಸಂತೋಷ ತಮ್ಮ ಸಂಘದ ಬಗ್ಗೆ ಮಾತನಾಡಿದ್ದು ಸಂಘಕ್ಕೆ ಅಧ್ಯಕ್ಷರನ್ನಾಗಿ ಕಾರ್ತಿಕ್ ಅವರನ್ನ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

    ಕಾರ್ತಿಕ್ (Karthik Mahesh) ತುಂಬಾ ನೊಂದು ಬೆಂದಿದ್ದಾರೆ. ಅದಕ್ಕೆ ಅವರನ್ನೇ ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತಾ ಇದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದೆ ತಡ ಸಂಗೀತಾ ಮುಖಭಾವವೇ ಚೇಂಜ್ ಆಗಿ ಹೋಗಿದೆ. ಇನ್ನು ಉಪಾಧ್ಯಕ್ಷರನ್ನಾಗಿ ವರ್ತೂರು ಸಂತೋಷ್ ಅವರನ್ನ ಮಾಡಲಾಗಿದೆ. ಇದಕ್ಕೆ ತುಕಾಲಿ ಕೊಟ್ಟ ರೀಸನ್ ಮಾತ್ರ ಎಲ್ಲರ ಮುಖದಲ್ಲೂ ನಗು ತರಿಸಿದೆ. ವರ್ತೂರು ಸಂತೋಷ್ ಮಾತನಾಡುತ್ತಾ ಇದ್ದರು ಅದು ಅಳುವ ರೀತಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ನೊಂದವರ ಸಂಘದವರು ಬಿದ್ದು ಬಿದ್ದು ನಕ್ಕರೆ ವಿರೋಧಿ ಗುಂಪಿನವರು ಮಾತ್ರ ಏನು ರಿಯಾಕ್ಟ್ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.

  • Bigg Boss: ಅವಕಾಶವಾದಿ ಎಂದು ಸಂಗೀತಾಗೆ ಕುಟುಕಿದ ಮೈಕಲ್‌

    Bigg Boss: ಅವಕಾಶವಾದಿ ಎಂದು ಸಂಗೀತಾಗೆ ಕುಟುಕಿದ ಮೈಕಲ್‌

    ದೊಡ್ಮನೆಯ ಮನೆಯ (Bigg Boss Kannada 10) ಆಟ ರಂಗೇರಿದೆ. ಗೆಲ್ಲೋದ್ದಕ್ಕೆ ಏನು ಮಾಡೋಕು ಸೈ ಅಂತ ಸ್ಪರ್ಧಿಗಳು ರೆಡಿಯಾಗಿದ್ದಾರೆ. ಇದೀಗ ತನಿಷಾ ಬಳಿಕ ಮೈಕಲ್, ಕೂಡ ಸಂಗೀತಾ ಸಮಯ ಸಾಧಕಿ, ಅವಕಾಶವಾದಿ ಎಂದು ಕಿಡಿಕಾರಿದ್ದಾರೆ. ಸಂಗೀತಾ ಆಟಕ್ಕೆ ಮೈಕಲ್ ಫುಲ್ ರಾಂಗ್ ಆಗಿದ್ದಾರೆ.

    ಈಗಾಗಲೇ ಎರಡು ತಂಡಗಳಾಗಿ ವಿಂಗಡಿಸಿರೋ ಬಿಗ್ ಬಾಸ್. ಈ ಬಾರಿ ಗಜಕೇಸರಿ ಮತ್ತು ಸಂಪತ್ತಿಗೆ ಸವಾಲ್ ಎರಡು ತಂಡದ ಜಟಾಪಟಿ ಜೋರಾಗಿದ್ದು, ಗಜಕೇಸರಿ ತಂಡದ ಲೀಡರ್ ಸಂಗೀತಾ ಟೀಮ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹೂವುವನ್ನ ಎದುರಾಳಿ ತಂಡದಿಂದ ರಕ್ಷಿಸುವ ಟಾಸ್ಕ್‌ನಲ್ಲಿ ಸಂಗೀತಾ ಟೀಮ್ ಯಡವಟ್ಟು ಮಾಡಿದೆ. ಈ ವೇಳೆ, ತುಕಾಲಿ ಕಾಲಿಗೆ ಪೆಟ್ಟಾಗಿದೆ. ಇದನ್ನೂ ಓದಿ:ಸಂಗೀತಾ ಜೊತೆ ನಮ್ರತಾ ಫ್ರೆಂಡ್‌ಶಿಪ್-‌ ಸ್ನೇಹಿತ್‌ ಕಿಡಿ

    ಸಂಗೀತಾ ಸಮಯ ಸಾಧಕಿ (Opportunist) ಅಂತ ಹಿಂದೊಮ್ಮೆ ತನಿಷಾ ಕುಟುಕಿದ್ದರು. ವರ್ತೂರು ಸಂತೋಷ್‌ಗೆ 34 ಲಕ್ಷಕ್ಕೂ ಅಧಿಕ ವೋಟ್ಸ್ ಬಿದ್ದಿದೆ ಅಂತ ಬಹಿರಂಗವಾದ್ಮೇಲೆ,ಅವರ ಜೊತೆಗೆ ಸಂಗೀತಾ ಕ್ಲೋಸ್‌ ಆಗಿದ್ದನ್ನ ಕಂಡು ಸಂಗೀತಾ ಅವಕಾಶವಾದಿ ಎಂದು ಮೈಕಲ್ ಅಭಿಪ್ರಾಯ ಪಟ್ಟಿದ್ದರು. ಇದೀಗ ಚಟುವಟಿಕೆಯೊಂದರಲ್ಲಿ ಸಂಗೀತಾ ನಡೆದುಕೊಂಡ ರೀತಿ ಕಂಡು ಮೈಕಲ್ ಗುಡುಗಿದ್ದಾರೆ. ಸಂಗೀತಾ (Sangeetha Sringeri) ಅವಕಾಶವಾದಿ, ಸಮಯ ಸಾಧಕಿ ಅಂತ ಮೈಕಲ್‌ ಸಾರಿ ಸಾರಿ ಹೇಳಿದ್ದಾರೆ.

    ಟಾಸ್ಕ್ ಮಧ್ಯೆ ತುಕಾಲಿ ಸಂತು ಅವರಿಗೆ ಬಿತ್ತು. ಈ ವೇಳೆ ಚಟುವಟಿಕೆಯನ್ನ ಹೋಲ್ಡ್ ಮಾಡಲಾಯಿತು. ಇದೇ ಸಮಯವನ್ನ ಬಳಸಿಕೊಂಡ ಸಂಗೀತಾ ಹೂಗಳು ಹಾಗೂ ಹೂಕಡ್ಡಿಯನ್ನ ತೆಗೆದುಕೊಂಡರು. ಅದನ್ನ ಗಮನಿಸಿ ಮೈಕಲ್ ಖಡಕ್ ಆಗಿ ಮಾತನಾಡಿದ್ದಾರೆ. ಈ ತರಹ ಆಟ ಆಡುವವರನ್ನ ನಾನು ನನ್ನ ಜೀವನದಲ್ಲಿಯೇ ಕಂಡಿಲ್ಲ ಎಂದು ಮೈಕಲ್ (Michael) ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಆಟದ ರೇಸ್‌ನಲ್ಲಿ ಮುಂದೆ ಇರುವ ಸಂಪತ್ತಿಗೆ ಸವಾಲ್ ಟೀಮ್ ಎದುರು ಗಜಕೇಸರಿ ತಂಡ ಗೆದ್ದು ಬೀಗುತ್ತಾ? ಸೋಲಿನ ಸುಳಿಯಲ್ಲಿರುವ ಮೈಕಲ್ ಟೀಮ್ ಗೆಲ್ಲುತ್ತಾ ಎಂದು ಕಾಯಬೇಕಿದೆ.