Tag: karthik mahesh

  • ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

    ಹಿಂದಿ ‘ಬಿಗ್ ಬಾಸ್ 17’ರ ವಿನ್ನರ್ ಆದ ಮುನಾವರ್ ಫಾರೂಕಿ

    ಕಿರುತೆರೆಯ ಕನ್ನಡದ ‘ಬಿಗ್ ಬಾಸ್ ಕನ್ನಡ 10’ರಲ್ಲಿ ಕಾರ್ತಿಕ್ ಮಹೇಶ್ (Karthik Mahesh) ಗೆದ್ದಿದ್ದಾರೆ. ಅದರಂತೆ ಹಿಂದಿ ‘ಬಿಗ್ ಬಾಸ್ 17’ರಲ್ಲಿ ಮುನಾವರ್ ಫಾರೂಕಿ (Munawar Faruqui) ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ವಿನ್ನರ್ ಹೆಸರನ್ನು ಅನೌನ್ಸ್ ಮಾಡಿದ್ದಾರೆ.

    ‘ಬಿಗ್ ಬಾಸ್’ ವಿನ್ನರ್ ಮುನಾವರ್ ಫಾರೂಕಿಗೆ 50 ಲಕ್ಷ ಮೊತ್ತ, ಮತ್ತು ಕಾರನ್ನು ಬಹುಮಾನವಾಗಿ ನೀಡಲಾಗಿದೆ. ಈ ಹಿಂದೆ ಕಂಗನಾ ನಡೆಸಿಕೊಂಡು ಬಂದಿದ್ದ ಲಾಕಪ್ ರಿಯಾಲಿಟಿ ಶೋನ ಟ್ರೋಫಿ ಮುನಾವರ್ ಗೆದ್ದುಕೊಂಡಿದ್ದರು. ಇದನ್ನೂ ಓದಿ:ಮುತ್ತಣ್ಣನ ಮಗನಾಗಿ ಬಂದ ಪ್ರಣಮ್ ದೇವರಾಜ್- ‘S/o ಮುತ್ತಣ್ಣ’ ಫಸ್ಟ್ ಲುಕ್ ಔಟ್‌

    ಹಿಂದಿ ಬಿಗ್ ಬಾಸ್‌ನಲ್ಲಿ ಅಭಿಷೇಕ್ ಕುಮಾರ್ ಮೊದಲ ರನ್ನರ್ ಅಪ್, ನಟಿ ಅಂಕಿತಾ ಲೋಖಂಡೆ 2ನೇ ರನ್ನರ್ ಅಪ್, ಅರುಣ್ ಮಾಶೆಟ್ಟಿ ಅವರು 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

    ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಜನಪ್ರಿಯತೆ ಗಳಿಸಿರುವ ಮುನಾವರ್, ತಮ್ಮ ಹಾಸ್ಯದಿಂದಲೇ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.

  • Bigg Boss: ‘ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಆಗಿ ಗೆದ್ದು ಬೀಗಿದ ಕಾರ್ತಿಕ್

    Bigg Boss: ‘ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಆಗಿ ಗೆದ್ದು ಬೀಗಿದ ಕಾರ್ತಿಕ್

    ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ (Karthik Mahesh) ಅವರು ಹೊರಹೊಮ್ಮಿದ್ದಾರೆ. ಪ್ರತಾಪ್, ಸಂಗೀತಾ ಶೃಂಗೇರಿ ಠಕ್ಕರ್ ಕೊಟ್ಟು ಕಾರ್ತಿಕ್ ಮಹೇಶ್ ಈ ಸೀಸನ್‌ನ ವಿನ್ನರ್ ಆಗಿದ್ದಾರೆ. ಇದನ್ನೂ ಓದಿ:ನನ್ನ ಮಗನನ್ನು ವಾಪಸ್ಸು ಕೊಟ್ಟಿದ್ದೀರಿ: ಡ್ರೋನ್ ತಾಯಿ ಕಣ್ಣೀರು

    ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಾರ್ತಿಕ್ ಮಹೇಶ್ ಅವರು ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ (Sangeetha) ಮತ್ತು ನಮ್ರತಾ (Namratha) ಗೌಡ ಜೊತೆಗಿನ ಸ್ನೇಹ ವಿಚಾರವಾಗಿ ಕಾರ್ತಿಕ್ ಸಖತ್ ಹೈಲೆಟ್ ಆಗಿದ್ದರು.

    ವಿನಯ್‌ಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಕಾರ್ತಿಕ್ ಠಕ್ಕರ್ ಕೊಟ್ಟಿದ್ದರು. ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಹೈಲೆಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಗೆದ್ದು ಬೀಗಿದ್ದಾರೆ.

    ಕಡೆಯದಾಗಿ ಸಂಗೀತಾ, ಪ್ರತಾಪ್ (Drone Prathap) ಜೊತೆ ಕಾರ್ತಿಕ್‌ಗೆ ಪೈಪೋಟಿ ಇತ್ತು. ಈಗ ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆಗಿ ಸಂಭ್ರಮಿಸಿದ್ದಾರೆ.

  • Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    Bigg Boss: 5 ಫೈನಲಿಸ್ಟ್‌ಗಳ ನಡುವೆ ಟಫ್ ಫೈಟ್- ಯಾರಿಗೆ ಸಿಗಲಿದೆ ಗೆಲುವು?

    ಅಂತೂ ಇಂತೂ ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ (Bigg Boss Kannada 10) ತೆರೆ ಬೀಳುವ ಸಮಯ ಬಂದಿದೆ. ದೊಡ್ಮನೆಯ ವಿನ್ನರ್ ಯಾರಾಗಬಹುದು ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಅದಕ್ಕೆ ಉತ್ತರ, ಇಂದು (ಜ.28) ರಾತ್ರಿ ಬಿಗ್ ಬಾಸ್ ಫಿನಾಲೆ ಎಪಿಸೋಡ್‌ನಲ್ಲಿ ಸಿಗಲಿದೆ. ತುಕಾಲಿ ಸಂತು ನಂತರ ಇನ್ನೂಳಿದ 5 ಫೈನಲಿಸ್ಟ್‌ಗಳ ನಡುವೆ ಗೆಲುವಿಗಾಗಿ ಟಫ್ ಫೈಟ್ ಶುರುವಾಗಿದೆ.

    ಈ ಬಾರಿ 6 ಜನ ಸ್ಪರ್ಧಿಗಳು ಫೈನಲಿಸ್ಟ್‌ಗಳಾಗಿ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು. ಇದು ಸುದೀಪ್ ಅವರು ಸ್ಪರ್ಧಿಗಳಿಗೆ ನೀಡಿದ ಉಡುಗೊರೆಯಾಗಿತ್ತು. ನಿನ್ನೆ ಎಪಿಸೋಡ್‌ನಲ್ಲಿ (ಜ.27) 6ನೇ ರನ್ನರ್ ಅಪ್ ಆಗಿ ತುಕಾಲಿ ಸಂತೋಷ್ ಹೊರಬಂದಿದ್ದಾರೆ. ಇದನ್ನೂ ಓದಿ:ಇಂದು ಹಾಸ್ಯನಟ ನಾಗಭೂಷಣ್ ಮದುವೆ

    ಸದ್ಯ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್ ಮಹೇಶ್ (Karthik Mahesh), ಸಂಗೀತಾ (Sangeetha), ಡ್ರೋನ್ ಪ್ರತಾಪ್, ವಿನಯ್, ವರ್ತೂರು ಸಂತೋಷ್ ಇದ್ದಾರೆ. ಈ 5 ಸ್ಪರ್ಧಿಗಳಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.‌ ಇದನ್ನೂ ಓದಿ:ಹನುಮಾನ್ ಶಕ್ತಿಗೆ ಬಾಕ್ಸ್ ಆಫೀಸ್ ಉಡೀಸ್: 14 ದಿನಕ್ಕೆ 250 ಕೋಟಿ ಲೆಕ್ಕ

    5 ಜನ ಸ್ಪರ್ಧಿಗಳು ಸ್ಟ್ರಾಂಗ್ ಇದ್ದಾರೆ. ಮೈಂಡ್ ಗೇಮ್, ಜನ ಬಲ, ಟಾಸ್ಕ್ ಅಂತ ಬಂದಾಗ ಠಕ್ಕರ್ ಕೊಡುವ ಗುಣ ಎಲ್ಲವೂ ಇದೆ. ಹೀಗಿರುವಾಗ ಯಾರಿಗೆ ಗೆಲುವಿನ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಅಭಿಮಾನಿಗಳ ಯಕ್ಷ ಪ್ರಶ್ನೆಯಾಗಿದೆ.

    ಈ ಸೀಸನ್‌ನಲ್ಲಿರೋ ಎಕೈಕ ಮಹಿಳಾ ಸ್ಪರ್ಧಿ ಎಂದರೆ ಅದು ಸಂಗೀತಾ ಶೃಂಗೇರಿ. ಮೊದಲ ದಿನದಿಂದಲೂ ಟಫ್ ಫೈಟ್ ನೀಡುತ್ತಲೇ ಬಂದಿದ್ದಾರೆ. ವಿನಯ್, ಕಾರ್ತಿಕ್ ಏನು ಕಮ್ಮಿಯಿಲ್ಲ. ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬರುವ ಸ್ಪರ್ಧಿಗಳು. ವರ್ತೂರು ಸಂತೋಷ್, ಪ್ರತಾಪ್ ಸೈಲೆಂಟ್ ಆಗಿದ್ರು ಕೂಡ ಸಮಯ ಬಂದಾಗ ವೈಲೆಂಟ್ ಆಗಿ ಆಟ ಆಡಿದ್ದು ಇದೆ. ಹಾಗಾಗಿ ವಿನ್ನರ್ ಘೋಷಣೆಗೆ ಬಿಗ್ ಬಾಸ್ ಫಿನಾಲೆ ಎಪಿಸೋಡ್ ಪ್ರಸಾರ ಆಗುವವರೆಗೂ ಕಾಯಬೇಕಿದೆ.

  • ಕಾರ್ತಿಕ್ ವಿನ್ನರ್ ಎನ್ನುವ ಸುಳಿವು ಬಿಟ್ಟು ಕೊಟ್ರಾ ಸುದೀಪ್?

    ಕಾರ್ತಿಕ್ ವಿನ್ನರ್ ಎನ್ನುವ ಸುಳಿವು ಬಿಟ್ಟು ಕೊಟ್ರಾ ಸುದೀಪ್?

    ಬಿಗ್ ಬಾಸ್ ಮನೆಯ ಆಟಕ್ಕೆ (Bigg Boss Kannada 10) ಅಂತಿಮ ಪರದೆ ಎಳೆಯುವ ಸಮಯ ಬಂದಿದೆ. ಇದೀಗ ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ಸುದೀಪ್ ಮಾತನಾಡುವಾಗ ಕಾರ್ತಿಕ್ ಮಹೇಶ್ (Karthik Mahesh) ವಿನ್ನರ್ ಎನ್ನುವ ಸುಳಿವು ನೀಡಿದ್ರಾ ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡಿದೆ. ಇದನ್ನೂ ಓದಿ:ಸೈನಿಕನಾದ ಅಕ್ಷಯ್ ಕುಮಾರ್: ಬಡೇ ಮಿಯಾ ಚೋಟೆ ಮಿಯಾ ಟೀಸರ್ ರಿಲೀಸ್

    ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಕಾರ್ತಿಕ್ ವಿನ್ನರ್ ಎಂದೇ ಹರಿದಾಡುತ್ತಿದೆ. ಅದಕ್ಕೆ ಪೂರಕವಾಗಿ ಸುದೀಪ್ ಅವರು ಕಾರ್ತಿಕ್ ಮಾತನಾಡುವ ರೀತಿ ನೋಡಿ ವಿನ್ನರ್ ಯಾರು ಎಂದು ಸುಳಿವು ನೀಡಿದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಕಾರ್ತಿಕ್ ಮಹೇಶ್ ಕೂಡ ದೊಡ್ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿ. ವಿನಯ್, ಸಂಗೀತಾರಂತಹ ಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು ಆಟವಾಡಿದ್ದಾರೆ. ಇದೀಗ ಕಾರ್ತಿಕ್ ಮಹೇಶ್ ಬಗ್ಗೆ ಹೊರಗಡೆ ಒಳ್ಳೆ ಹೆಸರೂ ಇದೆ. ಜನರ ಕೂಡ ಕಾರ್ತಿಕ್ ವಿನ್ನರ್ ಅಂತಲೇ ಹೇಳುತ್ತಿದ್ದಾರೆ. ಈ ಒಂದು ವಿಚಾರವನ್ನ ಸುದೀಪ್ ಇಲ್ಲಿ ಕಾರ್ತಿಕ್‌ಗೆ ಹೇಳಿದ್ರು. ಆಗ ಕಣ್ಣೀರು ಹಾಕಿದ ಕಾರ್ತಿಕ್ ಧನ್ಯವಾದ ಹೇಳಿದ್ರು. ನನ್ನ ಅಭಿನಯದ ಮೂಲಕವೇ ಎಲ್ಲರಿಗೂ ಉತ್ತರವನ್ನೂ ಕೊಡುತ್ತೇನೆ ಅಂತಲೂ ಕಾರ್ತಿಕ್ ಮಹೇಶ್ ಹೇಳಿದ್ದರು.

    ಕಾರ್ತಿಕ್ ಮಹೇಶ್ ಅವರೇ ಅಳಬೇಡಿ, ಕೂಲ್ ಆಗಿಯೇ ಇದ್ದು ಬಿಡಿ. ಹೊರಗಡೆ ಬಂದ್ಮೇಲೆ ಜನರು ನಿಮಗೆ ತೋರಿದ ಪ್ರೀತಿಯನ್ನ ಸ್ವೀಕರಿಸಿ, ಹಾಗೇನೆ ಎಂಜಾಯ್ ಮಾಡಿ, ಪಾರ್ಟಿ ಮಾಡಿ ಅಂತಲೇ ಹೇಳಿದ್ರು. ಅಂದ್ರೆ ಈ ಮಾತಿನಿಂದ ಕಾರ್ತಿಕ್ ಗೆಲ್ತಾರೆ ಅಂತಲೇ ಸುದೀಪ್ ಹೇಳಿದ್ರಾ? ಅನ್ನೋ ಡೌಟ್ ಕೂಡ ಮೂಡಿದೆ.

  • Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    Bigg Boss Kannada 10: ಫಿನಾಲೆಗೆ ಕೌಂಟ್‌ಡೌನ್, ಯಾರಾಗ್ತಾರೆ ‘ಬಿಗ್ ಬಾಸ್’ ವಿನ್ನರ್?

    ‘ಬಿಗ್ ಬಾಸ್ ಸೀಸನ್ 10′ (Bigg Boss Kannada 10) ರಿಯಾಲಿಟಿ ಶೋ ಮುಗಿಯಲು ದಿನಗಣನೆ ಶುರುವಾಗಿದೆ. ಸ್ಪರ್ಧಿಗಳೆಲ್ಲರೂ ಎಲಿಮಿನೇಟ್ ಆಗಿ ಈಗ 6 ಸ್ಪರ್ಧಿಗಳು ಫಿನಾಲೆ ವೇದಿಕೆಗೆ ತಲುಪಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

    ಫಿನಾಲೆ ದಿನ ಅಂತಿಮವಾಗಿ ಇಬ್ಬರು ಸ್ಪರ್ಧಿಗಳು ಸುದೀಪ್ ಜೊತೆ ಇರಲಿದ್ದಾರೆ. ಅವರಲ್ಲಿ ಒಬ್ಬರಿಗೆ ಮಾತ್ರ ಬಿಗ್ ಬಾಸ್ ವಿನ್ನರ್ ಪಟ್ಟ ಸಿಗಲಿದೆ. ಇದೀಗ ಅಂತಿಮವಾಗಿ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ (Drone Prathap), ವಿನಯ್, ಕಾರ್ತಿಕ್, ತುಕಾಲಿ ಸಂತೂ, ವರ್ತೂರು ಸಂತೋಷ್ (Varthur Santhosh) ಫಿನಾಲೆಗೆ ಎಂಟ್ರಿ ಪಡೆದಿದ್ದಾರೆ.

    ಇದರ ಮಧ್ಯೆ ಒಬ್ಬರ ಎಲಿಮಿನೇಷನ್ ಈ ವಾರದ ಮಧ್ಯೆ ನಡೆಯಲಿದೆ ಎಂದು ಹೇಳಲಾಗಿತ್ತು. ಅದು ಫಿನಾಲೆ ದಿನವೇ ತಿಳಿಯಲಿದೆ ಎನ್ನಲಾಗುತ್ತಿದೆ. ಸದ್ಯ ಉಳಿದುಕೊಂಡಿರುವ 6 ಜನ ಸ್ಪರ್ಧಿಗಳಲ್ಲಿ ಸಖತ್ ಪೈಪೋಟಿ ಇದೆ. ಇದನ್ನೂ ಓದಿ:ಸ್ನೇಹಿತ್ ಜೊತೆ ಫ್ರೆಂಡ್‌ಶಿಪ್ ಕಂಟಿನ್ಯೂ ಮಾಡ್ತಾರಾ? ನಮ್ರತಾ ಸ್ಪಷ್ಟನೆ

    ಈ ಹಿಂದಿನ ಸೀಸನ್‌ನಲ್ಲಿ ಹಿರಿಯ ನಟಿ ಶೃತಿ ವಿನ್ನರ್ ಆಗಿದ್ದರು. ಈ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿ ಸಂಗೀತಾ ಶೃಂಗೇರಿ (Sangeetha Sringeri) ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಅವರೇ ವಿನ್ನರ್ ಆಗುವ ಸಾಧ್ಯತೆಯಿದೆ ಎಂದು ಅಭಿಮಾನಿಗಳು ಲೆಕ್ಕಾಚಾರವಾಗಿದೆ. ಉಳಿದುಕೊಂಡಿರುವ ಪ್ರತಿ ಸ್ಪರ್ಧಿಗಳು ಕೂಡ ಟಫ್ ಫೈಟ್ ಕೊಡುತ್ತಿದ್ದಾರೆ.

    ಬಿಗ್ ಬಾಸ್ ಕನ್ನಡ 10 ಫಿನಾಲೆ ಇದೇ ಜನವರಿ 27, 28ರಂದು ನಡೆಯಲಿದೆ. ಅಂದು ಬಿಗ್ ಬಾಸ್ ವಿನ್ನರ್ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

  • ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ- ಗುಡುಗಿದ ಸಂಗೀತಾ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಪ್ರೇಮಿಗಳಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಬದ್ಧ ವೈರಿಗಳಾಗಿದ್ದಾರೆ. ಸಾಕಷ್ಟು ಬಾರಿ ಕಾರ್ತಿಕ್ ನನ್ನ ಸ್ನೇಹ ಬಳಸಿಕೊಂಡರು ಎಂದು ಸಂಗೀತಾ ಆರೋಪಿಸಿದ್ದರು. ಈಗ ಕಾರ್ತಿಕ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮ್ಮ ಲೈಫ್‌ಗೆ ನಾನೇ ಶನಿ ಆಗ್ತೀನಿ ಎಂದು ಕಾರ್ತಿಕ್‌ಗೆ ನೇರವಾಗಿ ಸಂಗೀತಾ (Sangeetha Sringeri) ಮಾತನಾಡಿದ್ದಾರೆ.

    ದೊಡ್ಮನೆ ಆಟ ಮುಗಿಯಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಇದರ ನಡುವೆ ‘ಬಿಗ್ ಬಾಸ್’ ಮನೆಮಂದಿಗೆ ಪ್ರಕ್ರಿಯೆಯೊಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ಫೋಟೋ ಹಾಕಿ ಬಾಕ್ಸಿಂಗ್ ಮಾಡೋದು. ತಮ್ಮ ಅನಿಸಿಕೆಗಳನ್ನು ಹೇಳಿ ಸ್ಪರ್ಧಿಗಳ ಫೋಟೋಗೆ ಪಂಚ್ ಕೊಡುವ ಅವಕಾಶ ‘ಬಿಗ್ ಬಾಸ್’ ನೀಡಿದ್ದಾರೆ. ಇದನ್ನೂ ಓದಿ:‘ಲವ್ ರೀಸೆಟ್’ ಅಂತಿದ್ದಾರೆ ನಟಿ ಸಂಜನಾ ಬುರ್ಲಿ

    ಇನ್ನೂ ಈ ಹಿಂದೆ ಸಂಗೀತಾರನ್ನು ಶನಿ ಎಂದು ಕರೆದು ಕಾರ್ತಿಕ್ ನೇರವಾಗಿ ಸಂಗೀತಾ ಕೆಂಗಣ್ಣಿಗೆ ಗುರಿಯಾಗಿದ್ದರು. ಇದನ್ನು ಕೇಳಿ ಸಂಗೀತಾ ಸಿಟ್ಟಾಗಿದ್ದರು. ಈಗ ಅವರು ಕಾರ್ತಿಕ್ ಮೇಲಿರುವ ಕೋಪವನ್ನು ತೀರಿಸಿಕೊಂಡಿದ್ದಾರೆ. ಬಾಕ್ಸಿಂಗ್ ಗ್ಲೌಸ್ ಹಾಕಿ ಸ್ಪರ್ಧಿಗಳ ಭಾವಚಿತ್ರಕ್ಕೆ ಗುದ್ದೋಕೆ ಅವಕಾಶವನ್ನು ಉಪಯೋಗಿಸಿಕೊಂಡಿದ್ದಾರೆ. ಆಗ ಸಂಗೀತಾ ಅವರು ಕಾರ್ತಿಕ್ ಬಗ್ಗೆ ಇರೋ ಕೋಪ ತೀರಿಸಿಕೊಂಡರು. ಕಾರ್ತಿಕ್ ಎಲ್ಲರನ್ನೂ ಬಳಸಿಕೊಳ್ಳುತ್ತಾರೆ ಎಂಬ ಆರೋಪವನ್ನು ಮಾಡಿದರು. ಜೊತೆಗೆ ನಾನು ನಿಮ್ಮ ಬಾಳಲ್ಲಿ ಶನಿ ಆಗಿದ್ದೀನಿ, ಮುಂದೆಯೂ ಆಗಿರುತ್ತೇನೆ ಎಂದು ತಿರುಗೇಟು ನೀಡಿದ್ದರು.

    ಮುಂದಿನ ಸರದಿ ಕಾರ್ತಿಕ್‌ಗೆ (Karthik Mahesh) ಕೂಡ ಬಂದಿದೆ. ಆಗ ಸಂಗೀತಾ ಫೋಟೋ ಹಾಕಿ ಬಾಕ್ಸಿಂಗ್ ಮಾಡಿದ್ದಾರೆ. ಸಂಗೀತಾ ಮೇಡಂ ಇಲ್ಲಿಗೆ ನಾನು ಫ್ರೆಂಡ್‌ಶಿಪ್ ಮಾಡುವುದಕ್ಕೆ ಬಂದಿಲ್ಲ. ಟ್ರೋಫಿ ಗೆದ್ದು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವುದು ಅಂತ ಹೇಳಿ ಸಂಗೀತಾ ಫೋಟೋಗೆ ಅಷ್ಟೇ ಆಕ್ರೋಶದಿಂದ ಗುದ್ದಿದ್ದಾರೆ.

  • ಮುನಿಸು ಮರೆತು ಮತ್ತೆ ಒಂದಾದ ಕಾರ್ತಿಕ್, ಸಂಗೀತಾ

    ಮುನಿಸು ಮರೆತು ಮತ್ತೆ ಒಂದಾದ ಕಾರ್ತಿಕ್, ಸಂಗೀತಾ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಕಾರ್ತಿಕ್ ಮತ್ತು ಸಂಗೀತಾ ಜೋಡಿಯಾಗಿ ಹೈಲೆಟ್ ಆಗಿದ್ದರು. ಕಾರ್ತಿಕ್ (Karthik Mahesh) ಜೊತೆ ಬ್ರೇಕಪ್ ಮಾಡಿಕೊಂಡಿದ್ದ ಸಂಗೀತಾ ಇದೀಗ ಮುನಿಸು ಮರೆತು ಒಂದಾಗಿದ್ದಾರೆ. ಸಂಕ್ರಾಂತಿ ಹಬ್ಬದಂದು ಮತ್ತೆ ಕಾರ್ತಿಕ್- ಸಂಗೀತಾ (Sangeetha Sringeri) ನಡುವೆ ಸ್ನೇಹ ಚಿಗುರಿದೆ.

    ಚೆನ್ನಾಗಿದ್ದ ಜೋಡಿ ಕಾರ್ತಿಕ್- ಸಂಗೀತಾ ದೂರ ದೂರ ಆಗಿದ್ದರು. ಮತ್ತೆ ಒಂದಾಗೋದೇ ಇಲ್ವೇನೋ ಅನ್ನುವಷ್ಟರ ಮಟ್ಟಿಗೆ ಜಗಳ ಆಡಿಕೊಂಡಿದ್ದರು. ಈಗ ಸಂಕ್ರಾಂತಿ ಹಬ್ಬದಂದು ಈ ಜೋಡಿ ಸ್ನೇಹಕ್ಕೆ ಬೆಲೆ ಕೊಟ್ಟು ಒಂದಾಗಿದ್ದಾರೆ. ‘ಬಿಗ್ ಬಾಸ್’ ಸಂಕ್ರಾಂತಿ ದಿನದಂದು, ನೀವು ನಿಮ್ಮ ಯಾವ ಒಂದು ಗುಣವನ್ನು ಬಿಡುತ್ತೀರಿ, ಯಾವ ಗುಣವನ್ನು ಇಲ್ಲಿಂದ ನಿಮ್ಮಲ್ಲಿ ಅಳವಡಿಸಿಕೊಳ್ಳುತ್ತೀರಿ ಹಾಗೂ ಯಾರೊಟ್ಟಿಗೆ ದ್ವೇಷವನ್ನು ಬಿಟ್ಟು ಸ್ನೇಹವನ್ನು ಬೆಳೆಸುತ್ತೀರಿ ಎಂದು ಸೂಚಿಸಿ ಆ ವ್ಯಕ್ತಿಯನ್ನು ಕರೆದು ಎಳ್ಳು ಬೆಲ್ಲ ನೀಡಿ ಎಂದು ಆದೇಶ ನೀಡಿದ್ದರು. ಇದನ್ನೂ ಓದಿ:ಯುವ ಪ್ರತಿಭೆ ವಿನಯ್- ದಿಶಾ ರಮೇಶ್ ನಟನೆಯ ‘ದಿ’ ಸಿನಿಮಾದ ಸಾಂಗ್‌ ಔಟ್

    ಆಗ ಕಾರ್ತಿಕ್, ಇಲ್ಲಿ ನನ್ನ ಮುಂಗೋಪವನ್ನ ಬಿಡುತ್ತೇನೆ. ಯಾಕಂದ್ರೆ, ನಾನು ಬಹಳ ಬೇಗ ರಿಯಾಕ್ಟ್ ಮಾಡಿಬಿಡುತ್ತೇನೆ. ಆಮೇಲೆ ಕೊರಗೋದು ನಿಜ. ಸಂಗೀತಾ ಜೊತೆಗೆ ನಾನು ಎಷ್ಟೋ ವಿಷಯಗಳಲ್ಲಿ ಓವರ್ ಆಗಿ ರಿಯಾಕ್ಟ್ ಮಾಡಿ, ಕೋಪದಿಂದ ಮಾತಾಡಿದ್ದೇನೆ ಎಂದರು. ಬಳಿಕ ಸಂಗೀತಾರನ್ನು (Sangeetha) ಕರೆದು ಅವರಿಗೆ ಎಳ್ಳು-ಬೆಲ್ಲವನ್ನ ಕಾರ್ತಿಕ್ ತಿನ್ನಿಸಿದರು. ನನಗೆ ಇಲ್ಲಿ ಸಿಕ್ಕಿದ ಒಳ್ಳೆಯ ಫ್ರೆಂಡ್ ಸಂಗೀತಾ. ಈ ಸಂಕ್ರಾಂತಿ ಹಬ್ಬದಿಂದ ನಿಮಗೆ ಒಳ್ಳೆಯದಾಗಲಿ ಅಂತ ಹಾರೈಸುತ್ತೇನೆ ಎಂದರು.

    ಅದಾದ ಬಳಿಕ ಸಂಗೀತಾ, ನನಗೆ ಒಬ್ಬರನ್ನ ಬೇಗ ಕ್ಷಮಿಸೋಕೆ ಆಗಲ್ಲ. ಒಬ್ಬ ವ್ಯಕ್ತಿಯ ಮೇಲೆ ತುಂಬಾ ನಂಬಿಕೆ ಇಡುತ್ತೇನೆ. ಆ ನಂಬಿಕೆಗೆ ಹರ್ಟ್ ಮಾಡಿದರೆ ಮಾತ್ರ ನನಗೆ ಕ್ಷಮಿಸೋಕೆ ಆಗಲ್ಲ. ನಾನು ನಂಬಿಕೆಯಿಟ್ಟ ಇಬ್ಬರು ವ್ಯಕ್ತಿಗಳು ತನಿಷಾ ಮತ್ತು ಕಾರ್ತಿಕ್. ಒಂದು ಆಯ್ಕೆಯಲ್ಲಿ ತಪ್ಪಾದಾಗ, ಅವರಿಗೆ ಬೇಜಾರು ಮಾಡಿದೆ. ಅದು ನನ್ನ ಕೆಟ್ಟ ಗುಣ. ಇಲ್ಲಿಂದ ನಾನು ತಾಳ್ಮೆಯನ್ನ ಕಲಿಯುತ್ತೇನೆ ಎಂದು ಸಂಗೀತಾ ಮಾತನಾಡಿದರು.

    ಕೆಲವು ಬಾರಿ ಫ್ರೆಂಡ್ಸ್ ಬಿಟ್ಟು ನಾನು ಬೇರೆಯವರೊಂದಿಗೆ ಇದ್ದದ್ದು, ಅವರವರ ದೃಷ್ಟಿಕೋನ ಅರ್ಥ ಮಾಡಿಕೊಳ್ಳೋಕೆ. ಆಗ ಅವರು ಒಳ್ಳೆಯವರಾಗಿಯೇ ಕಂಡಿದ್ದಾರೆ ಎಂದರು ಸಂಗೀತಾ. ನಾನು ಅಹಂ ಬಿಡೋಕೆ ನಾನು ಕಲಿಯುತ್ತೇನೆ. ಇಬ್ಬರು ಹೀರೋಗಳು ವಿನಯ್ ಮತ್ತು ಕಾರ್ತಿಕ್. ವಿನಯ್‌ಗೆ ನಾನು ಹೋಗೋ, ಬಾರೋ ಅಂದಿದ್ದೇನೆ. ಅದರ ಬಗ್ಗೆ ನನಗೆ ಪಶ್ಚಾತ್ತಾಪ ಇದೆ ಎಂದು ಸಂಗೀತಾ ವಿನಯ್‌ಗೆ (Vinay Gowda) ಕ್ಷಮೆ ಕೇಳಿದ್ದರು. ಬಳಿಕ ಕಾರ್ತಿಕ್‌ನ ಯಾವತ್ತೂ ಕ್ಷಮಿಸೋದಿಲ್ಲ ಅಂದುಕೊಂಡಿದ್ದೆ. ಅದಕ್ಕೆ ಸುಮಾರು ಕಾರಣಗಳಿವೆ. ನಾನು ತುಂಬಾ ನಂಬಿದ್ದೆ. ಸಾರಿ ಹೇಳಿದ್ಮೇಲೂ ಮತ್ತೆ ಮಾಡೋದಿದೆ ಅಲ್ಲ ಅದನ್ನ ನಂಬೋಕೆ ಆಗಲ್ಲ. ಕ್ಷಮಿಸಿ, ಮುಂದೆ ಸಾಗಬೇಕು ಅಂತ ಇಲ್ಲಿ ಕಲಿತಿದ್ದೇನೆ ಎಂದು ಹೇಳುತ್ತಾ ಕಾರ್ತಿಕ್‌ಗೆ ಸಂಗೀತಾ ಎಳ್ಳು-ಬೆಲ್ಲ ತಿನ್ನಿಸಿದ್ದಾರೆ.

    ಸಂಕ್ರಾಂತಿ ಹಬ್ಬದಂದು ಸಂಗೀತಾ ನಡೆ ನೋಡಿ, ಮನೆಮಂದಿ ಅಚ್ಚರಿಗೊಂಡಿದ್ದಾರೆ. ಸಂಗೀತಾ ಮಾತೆಲ್ಲವೂ ಸ್ವತಃ ಕಾರ್ತಿಕ್‌ಗೆ ಅಚ್ಚರಿ ಮೂಡಿಸಿದೆ. ಅದೇನೇ ಇರಲಿ ಸಂಗೀತಾ- ಕಾರ್ತಿಕ್ ಜೊತೆಯಾಗಿರಲಿ ಎಂದು ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

    ‘ಶನಿ’ ಕಂಟಕ‌ ವರ್ತೂರು ಸಂತೋಷ್ ತಲೆಗೆ ಕಟ್ಟಿದ ಕಾರ್ತಿಕ್‌- ಚಳಿ ಬಿಡಿಸಿದ ಸುದೀಪ್

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಶನಿ ಎಂದಿದ್ಯಾರು ಎಂಬ ಟಾಪಿಕ್‌ಗೆ ಇದೀಗ ತೆರೆಬಿದ್ದಿದೆ. ಆದರೆ ಕಾರ್ತಿಕ್‌ಗೆ ಮಾತ್ರ ಶನಿ ಕಾಟ ತಪ್ಪಿಲ್ಲ. ಅದ್ಯಾವ ಘಳಿಗೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನವಗ್ರಹಗಳ ಬಗ್ಗೆ ಚರ್ಚೆ ಹಾಗೂ ಈ ಮನೆಯ ಶನಿ ಯಾರು? ಎಂಬ ಪ್ರಶ್ನೆಯನ್ನ ಕಾರ್ತಿಕ್ ಕೇಳಿದ್ರೋ ಆಗ್ಲಿಂದ ಅವರ ಮೇಲೆ ಶನಿಯ ವಕ್ರದೃಷ್ಟಿ ಬಿದ್ದುಬಿಟ್ಟಿದೆ. ಕಳೆದ ವಾರಾಂತ್ಯದಲ್ಲಿ ಶನಿ ಟಾಪಿಕ್ ಯೆಸ್/ ನೋ ರೌಂಡ್‌ನಲ್ಲಿ ಬಂದಿತ್ತು. ಈ ವೀಕೆಂಡ್‌ನಲ್ಲಿ ಅದೇ ಟಾಪಿಕ್ ಮತ್ತೆ ಚರ್ಚೆಯಾಗಿದೆ. ತನ್ನ ತಪ್ಪನ್ನು ವರ್ತೂರು ಸಂತೋಷ್‌ ತಲೆಗೆ ಕಟ್ಟಲು ಹೋದ ಕಾರ್ತಿಕ್‌ಗೆ ಕಿಚ್ಚ ಕಿವಿಹಿಂಡಿದ್ದಾರೆ.

    ಈ ಮನೆಯ ಶನಿ ಸಂಗೀತಾ (Sangeetha Sringeri) ಅಂತ ಹೇಳಿದ್ದು ವರ್ತೂರು ಸಂತೋಷ್. ನಾನಲ್ಲ ಎಂದು ಕಾರ್ತಿಕ್ (Karthik Mahesh) ವಾದಿಸಿದ್ದರು. ಸರಿಯಾಗಿ ನೆನಪಿಲ್ಲ ಅಂತಲೂ ಹೇಳಿದ್ದರು. ಹೀಗಿರುವಾಗಲೇ, ನೀವು ಹೇಳಿದ್ರಿ ಕಾರ್ತಿಕ್ ಅಂತ  ಸುದೀಪ್ ನೇರವಾಗಿ ಮಾತಿನ ಬಾಣ ಬೀಸಿದರು.ಇದನ್ನೂ ಓದಿ:Bigg Boss- ಅಭಿಮಾನಿಗಳಿಗೆ ಆಘಾತ; ವರ್ತೂರು ಔಟ್

    ಕಿಚ್ಚನ ಪಂಚಾಯಿತಿಯಲ್ಲಿ ಶನಿ ಟಾಪಿಕ್ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಸುದೀಪ್, ವರ್ತೂರು ಅವರೇ.. ಕಾರ್ತಿಕ್ ಅವರನ್ನ ನಾಮಿನೇಟ್ ಮಾಡ್ತೀರಿ. ಅದಕ್ಕೆ ನೀವು ಕೊಟ್ಟ ಕಾರಣ ಯಾರಿಗೂ ಅರ್ಥ ಆಗುತ್ತಿಲ್ಲ. ವಿವರಿಸಿ ಎಂದು ಸುದೀಪ್ ಕೇಳುತ್ತಾರೆ. ಆಗ ಕಾರ್ತಿಕ್, ಸಂಗೀತಾಗೆ ಶನಿ ಎಂದಿರುವ ಬಗ್ಗೆ ವರ್ತೂರು ಸಂತೋಷ್‌ (Varthur Santhosh) ಕ್ಲ್ಯಾರಿಟಿ ಕೊಡುತ್ತಾರೆ. ಆಗ ಕಾರ್ತಿಕ್ ತಾವು ಹೇಳಲೇ ಇಲ್ಲ ಅಂತ ವಾದಿಸುತ್ತಾರೆ.

    ನೀವು ಹೇಳಿದ್ರಿ ಕಾರ್ತಿಕ್. ಕೆಲವು ಬಾರಿ ಮರೆತಿರಬಹುದು. ವರ್ತೂರು ಸಂತೋಷ್ ಅವರಲ್ಲಿ ಒಳ್ಳೆಯ ಸ್ಪರ್ಧಿ ಕೂಡ ಇದ್ದಾರೆ. ಅವರ ಬಗ್ಗೆ ತಮಾಷೆ ಮಾಡಬಹುದು. ಆದರೆ, ಅವರಲ್ಲಿ ಮುಗ್ಧತೆ ಇದೆ. ಮಾಡಿದ್ದನ್ನ ಒಪ್ಪಿಕೊಳ್ಳುವ ಮುಗ್ಧತೆ ಅವರಲ್ಲಿದೆ. ಇವತ್ತು ಅವರ ಮೇಲೆ ಅಪವಾದ ಹಾಕುತ್ತಿದ್ದರೆ, ನಾನು ಸುಮ್ಮನೆ ಇರೋಕೆ ಆಗಲ್ಲ. ಸಾಮಾನ್ಯವಾಗಿ ನಾನು ಯಾವುದಕ್ಕೂ ಇಂಟರ್‌ಫಿಯರ್ ಆಗಲ್ಲ. ನೀವು ಹೇಳಿದ್ರಿ, ಹೇಳಿಲ್ಲ ಅಂತ ನಾನು ಮಾತಾಡಿಲ್ಲ. ಇವತ್ತು ಹೇಳ್ತಿದ್ದೀನಿ. ಯಾಕಂದ್ರೆ, ಆ ಮನುಷ್ಯನಲ್ಲಿ ಇನ್ನೊಸೆನ್ಸ್ ಇದೆ. ಅದನ್ನ ಅಪ್ರೀಷಿಯೇಟ್ ಮಾಡ್ತೀನಿ. ಕಿಚನ್‌ನಲ್ಲಿ ನೀವು ಆ ಮಾತನ್ನ ಹೇಳಿದ್ದು ಸತ್ಯ ಎಂದು ಸುದೀಪ್‌ ಸ್ಪಷ್ಟನೆ ನೀಡಿದ್ದಾರೆ.

    ಮನೆ ಎಂದ ಮೇಲೆ ತಮಾಷೆ ನಡೆಯಬಹುದು. ಅವತ್ತು ಅವರು ಬೇರೆ ಮಾತಾಡ್ತಾ ಇದ್ದರು. ಹೇಳಿದ್ದುಂಟು. ಆದರೆ, ಈ ಲೈನ್ ಹೇಳಿದ್ದು ನೀವು. ಅವರಲ್ಲ. ಇದನ್ನ ಬಹಿರಂಗವಾಗಿ ನಾನು ಹೇಳ್ತಿರೋದು ನಿಮ್ಮನ್ನ ಡಿಮೋಟಿವೇಟ್ ಮಾಡೋಕಲ್ಲ. ಹಾಗಂತ ಇನ್ನೊಬ್ಬ ವ್ಯಕ್ತಿ ವ್ಯಕ್ತಿತ್ವದಲ್ಲಿ ಕೆಳಗೆ ಹೋಗೋದನ್ನು ಬಿಡಲು ಸಾಧ್ಯವಿಲ್ಲ. ನನ್ನ ಉಪಸ್ಥಿತಿಯಲ್ಲಿ ಇನ್ನೊಬ್ಬ ವ್ಯಕ್ತಿ ಮೇಲೆ ಅಪವಾದ ಬಂದಾಗ ಇಟ್ ಮ್ಯಾಟರ್ಸ್. ನಿಮ್ಮನ್ನ ಅಪರಾಧಿ ಸ್ಥಾನಲ್ಲಿ ಕೂರಿಸಬೇಕು ಅಂತಲ್ಲ. ಇನ್ನೊಬ್ಬರ ಮೇಲೆ ಆರೋಪ ಮಾಡಿದಾಗ ನಾನು ಮಧ್ಯೆ ಬರಬೇಕಾಗುತ್ತದೆ ಎಂದು ಸುದೀಪ್ ಮಾತನಾಡಿದ್ದಾರೆ. ಬಳಿಕ ಕಾರ್ತಿಕ್‌ ಕ್ಷಮೆಯಾಚಿಸಿದ್ದಾರೆ.

  • ಸಂಗೀತಾ ಯೋಗ್ಯತೆ ಬಗ್ಗೆ ಮಾತನಾಡಿದ ಕಾರ್ತಿಕ್‌ಗೆ ಕಿವಿಹಿಂಡಿದ ವಿನಯ್‌

    ಸಂಗೀತಾ ಯೋಗ್ಯತೆ ಬಗ್ಗೆ ಮಾತನಾಡಿದ ಕಾರ್ತಿಕ್‌ಗೆ ಕಿವಿಹಿಂಡಿದ ವಿನಯ್‌

    ಬಿಗ್ ಬಾಸ್ ಮನೆಯ ಪ್ರೇಮ ಪಕ್ಷಿಗಳು ಕಾರ್ತಿಕ್ (Karthik Mahesh) ಮತ್ತು ಸಂಗೀತಾ (Sangeetha Sringeri) ದೂರವಾಗಿ ಹಲವು ದಿನಗಳು ಕಳೆದಿದೆ. ಜೊತೆಯಾಗಿ ಶತ್ರುಗಳಿಗೆ ಠಕ್ಕರ್ ಕೊಡುತ್ತಿದ್ದ ಈ ಜೋಡಿ ದೂರ ದೂರ ಆಗಿದ್ದಾರೆ. ಇಬ್ಬರೂ ಶತ್ರುಗಳಾಗಿ ಜಗಳ ಆಡೋಕೆ ಟೊಂಕ ಕಟ್ಟಿ ನಿಂತಿದ್ದಾರೆ. ಇದೀಗ ಸಂಗೀತಾಗೆ ವುಮೆನ್ ಕಾರ್ಡ್ ಪ್ಲೇ ಮಾಡುತ್ತಿದ್ದೀಯಾ ಎಂದು ಕಾರ್ತಿಕ್ ಗುಡುಗಿದ್ದಾರೆ. ಇದನ್ನೂ ಓದಿ:ನಟ ‘ದರ್ಶನ್’ಗೆ ಟಾರ್ಗೆಟ್ ಮಾಡಲಾಗ್ತಿದೆ : ರಾಕ್ ಲೈನ್ ಕಿಡಿಕಿಡಿ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಟಿಕೆಟ್ ಟು ಫಿನಾಲೆ ಟಾಸ್ಕ್ ಚಾಲ್ತಿಯಲ್ಲಿದೆ. ಇದರಲ್ಲಿ ಗೆದ್ದು ಅತೀ ಹೆಚ್ಚು ಪಾಯಿಂಟ್ ಗಳಿಸುವ ಒಬ್ಬ ಸ್ಪರ್ಧಿ ಮುಂದಿನ ವಾರದ ನಾಮಿನೇಷನ್‌ನಲ್ಲಿ ಸೇಫ್ ಆಗಲಿದ್ದಾರೆ. ಆ ಮೂಲಕ ಫಿನಾಲೆ ವಾರಕ್ಕೆ ನೇರವಾಗಿ ಕಾಲಿಡಲಿದ್ದಾರೆ. ಕಾರ್ತಿಕ್ ಪ್ರಬಲ ಸ್ಪರ್ಧಿ ಎಂಬ ಕಾರಣಕ್ಕೆ ಏನೋ, ಅವರನ್ನ ಟಾಸ್ಕ್‌ಗಳಿಗೆ ನಮ್ರತಾ(Namratha Gowda), ವರ್ತೂರು ಸಂತೋಷ್, ಡ್ರೋನ್ ಪ್ರತಾಪ್ ಆಯ್ಕೆ ಮಾಡಿರಲಿಲ್ಲ.

    ಕಾರ್ತಿಕ್ ಅವರನ್ನ ತನಿಷಾ (Tanisha) ಆಯ್ಕೆ ಮಾಡಿದ್ದರು. ಆದರೆ ಕಾರ್ತಿಕ್‌ನ ಹೊರದಬ್ಬಿ ಆ ಜಾಗಕ್ಕೆ ವರ್ತೂರು ಸಂತೋಷ್ ಬಂದರು. ಕಾರ್ತಿಕ್‌ಗೆ ವಿನಯ್ ಕೂಡ ಅವಕಾಶ ಕೊಟ್ಟಿದ್ದರು. ಆದರೆ, ಕಾರ್ತಿಕ್‌ನ ಸಂಗೀತಾ ಹೊರಗಿಟ್ಟು, ಆ ಜಾಗಕ್ಕೆ ಸಂಗೀತಾ ಬಂದು ಟಾಸ್ಕ್ ಆಡಿದರು.

    ಕಾರ್ತಿಕ್ ಟಾಸ್ಕ್ ಆಡೋದು ತಮಗೆ ಇಷ್ಟವಿಲ್ಲ ಎಂದು ಸಂಗೀತಾ ಹೇಳಿದ್ದರು. ಇದರಿಂದ ಕಾರ್ತಿಕ್‌ಗೆ ಸಿಟ್ಟು ತರಿಸಿತ್ತು. ಆಟದ ವೇಳೆ ಸಂಗೀತಾಗೆ ಪೆಟ್ಟು ಬಿದ್ದಿತ್ತು. ಹೀಗಾಗಿ, ದಿ ಗರ್ಲ್ ಹು ಗೆಟ್ಸ್ ಇನ್ ಜುರ್ಡ್ ಇನ್ ಎವರಿಥಿಂಗ್ ಅಂತ ಸಂಗೀತಾ ಹೇಳಿದರು. ಆಗ, ವುಮನ್ ಕಾರ್ಡ್ ಎಂದರು ಕಾರ್ತಿಕ್. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ನಿಮ್ಮ ವ್ಯಕ್ತಿತ್ವ ಏನು ತೋರಿಸುತ್ತದೆ ಎಂದು ಸಂಗೀತಾ ಹೇಳಿದಾಗ ರೊಚ್ಚಿಗೆದ್ದ ಕಾರ್ತಿಕ್, ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡುವ ಯೋಗ್ಯತೆ, ಅರ್ಹತೆ ನಿನಗೆ ಇಲ್ಲ ಎಂದು ಗುಡುಗಿದ್ದರು.

    ಇಬ್ಬರ ಜಗಳದ ಮಧ್ಯೆ ವಿನಯ್ ಬೆಳೆ ಬೆಳೆಯಿಸುವ ಕೆಲಸ ಮಾಡಿದ್ದಾರೆ. ನನಗೆ ಎಲ್ಲರೂ ಕೆಟ್ಟ ಪದ ಉಪಯೋಗಸಬೇಡ ಅಂತ ಹೇಳ್ತೀರಾ ಈಗ ನೀವೇನು ಮಾಡ್ತಿದ್ದೀರಾ? ಯೋಗ್ಯತೆ ಬಗ್ಗೆ ಯಾಕೆ ಮಾತನಾಡಿದೆ ಎಂದು ಸಂಗೀತಾ ಪರ ವಿನಯ್ ಬ್ಯಾಟ್ ಬೀಸಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಒಂದು ಸಮಯದಲ್ಲಿ ಹಾವು ಮತ್ತು ಮುಂಗುಸಿಯಂತೆ ವಿನಯ್ ಮತ್ತು ಸಂಗೀತಾ ಕಿತ್ತಾಡುತ್ತಿದ್ದರು. ಈಗ ಇಬ್ಬರೂ ಒಂದಾಗಿರೋದು ಸ್ಪರ್ಧಿಗಳಿಗೆ ಅಚ್ಚರಿ ಮೂಡಿಸಿದೆ.

  • ಕೆಟ್ಟದಾಗಿ ಟ್ರೋಲ್ ಮಾಡಿದ್ದಕ್ಕೆ ನಮ್ರತಾ ಪರ ಸ್ನೇಹಿತ್ ಮನವಿ

    ಕೆಟ್ಟದಾಗಿ ಟ್ರೋಲ್ ಮಾಡಿದ್ದಕ್ಕೆ ನಮ್ರತಾ ಪರ ಸ್ನೇಹಿತ್ ಮನವಿ

    ಬಿಗ್ ಬಾಸ್ (Bigg Boss Kannada 10) ಮನೆಯಲ್ಲಿ ಇದ್ದಾಗ ಸ್ನೇಹಿತ್ (Snehith Gowda) ಮತ್ತು ನಮ್ರತಾ (Namratha Gowda) ಆತ್ಮೀಯರಾಗಿದ್ದರು. ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದಿತ್ತು. ಸಾಕಷ್ಟು ಬಾರಿ ನಮ್ರತಾಗೆ ಸ್ನೇಹಿತ್ ಗೌಡ ಪ್ರೇಮ ನಿವೇದನೆ ಮಾಡಿದ್ದರು. ಆದರೆ ಎಂದಿಗೂ ಸ್ನೇಹಿತ್ ಪ್ರಪೋಸಲ್‌ಗೆ ನಮ್ರತಾ ಒಪ್ಪಿಗೆ ನೀಡಿರಲಿಲ್ಲ. ಇದೀಗ ಕಾರ್ತಿಕ್ ಜೊತೆ ಒಡನಾಟ ಹೊಂದಿರೋ ನಮ್ರತಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ. ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟು ಕಾರ್ತಿಕ್ (Karthik Mahesh) ಜೊತೆ ಸ್ನೇಹ ಬೆಳೆಸಿದ್ದಾರೆ ಎಂದೇ ಸುದ್ದಿಯಾಗುತ್ತಿದೆ. ಸ್ನೇಹಿತ್ ಇದೀಗ ನಮ್ರತಾ ಪರವಾಗಿ ಮನವಿವೊಂದನ್ನ ಮಾಡಿದ್ದಾರೆ.

    ದೊಡ್ಮನೆಯಲ್ಲಿ ಲವ್ ಬರ್ಡ್ಸ್ ಆಗಿದ್ದ ಸ್ನೇಹಿತ್- ನಮ್ರತಾ ಜೋಡಿ ಅಭಿಮಾನಿಗಳ ಫೇವರೇಟ್ ಆಗಿದ್ದರು. ಸ್ನೇಹಿತ್ ಎಲಿಮಿನೇಷನ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಅತ್ತಿದ್ದರು. ಸ್ನೇಹಿತ್‌ನ ಮಿಸ್ ಮಾಡಿಕೊಳ್ತಿದ್ದೀನಿ ಅಂತ ಅವರ ಕಪ್ ಮತ್ತು ಫೋಟೋವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇಷ್ಟೇಲ್ಲಾ ಮಾಡಿರೋ ನಮ್ರತಾ, ಸ್ನೇಹಿತ್ ಲವ್ ಇದೆ ಅಂತಲೇ ಫ್ಯಾನ್ಸ್ ಭಾವಿಸಿದ್ದರು. ಈಗ ಕಾರ್ತಿಕ್ ಜೊತೆ ಹೊಸ ಲವ್ ಸ್ಟೋರಿ ಶುರು ಆಗಿರೋ ಕಾರಣ, ಸ್ನೇಹಿತ್‌ಗೆ ನಮ್ರತಾ ಕೈ ಕೊಟ್ಟಿದ್ದಾರೆ ಅಂತಲೇ ಟ್ರೋಲ್ ಆಗ್ತಿದ್ದಾರೆ. ಅದಕ್ಕಾಗಿ ಸ್ನೇಹಿತ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕ್ಲ್ಯಾರಿಟಿ ಕೊಟ್ಟಿದ್ದಾರೆ.

     

    View this post on Instagram

     

    A post shared by S Snehith (@snehithgowda)

    ನಮ್ರತಾ ನನಗೆ ಮೋಸ ಮಾಡಿದರು ಎಂಬ ಮಾತುಗಳು ಹೇಳುವುದನ್ನು ದಯವಿಟ್ಟು ನಿಲ್ಲಿಸಿ. ನಮ್ರತಾ ಎಂದಿಗೂ ನಿಮ್ಮ ಮೇಲೆ ನನಗೆ ಪ್ರೀತಿ ಎಂದು ನನಗೆ ಹೇಳಿರಲಿಲ್ಲ. ಅವರ ಮೇಲಿರೋ ನನ್ನ ಪ್ರೀತಿ ಒನ್ ಸೈಡೆಡ್ ಅಷ್ಟೆ. ನೀವೇನು ಈಗ ನಮ್ರತಾ ಬಗ್ಗೆ ಟ್ರೋಲ್, ಮೀಮ್‌ಗಳನ್ನು ಮಾಡುತ್ತಿದ್ದೀರೋ ಇದರಿಂದ ಅವರ ಕುಟುಂಬದವರಿಗೆ ಮಾತ್ರವಲ್ಲದೆ ನನಗೂ ಬೇಸರ ತರಿಸಿದೆ. ಈ ಮೀಮ್‌ಗಳನ್ನು, ಟ್ರೋಲ್‌ಗಳಿಂದ ಒಬ್ಬರ ವ್ಯಕ್ತಿತ್ವಕ್ಕೆ ಧಕ್ಕೆ ಆಗುತ್ತಿದೆ ಅದು ಆಗಬಾರದು ಎಂದು ಸ್ನೇಹಿತ್ ಮನವಿ ಮಾಡಿದ್ದಾರೆ. ಇದನ್ನೂ ಓದಿ:ಆಶಿಕಾಗೆ ಮನೆ ಊಟ ಕಳುಹಿಸುತ್ತಿದ್ದ ನಾಗಾರ್ಜುನ- ನಟಿ ಭಾವುಕ

    ನನ್ನ- ನಮ್ರತಾ ನಡುವೆ ಏನೇ ನಡೆದಿದ್ದರೂ, ಆ ಮನೆಯಲ್ಲಿ ನಮ್ರತಾ ನನ್ನ ಮೊದಲ ಗೆಳತಿ. ನಮ್ರತಾ ನನಗೆ ಸದಾ ಬೆಂಬಲ, ಸಹಾಯ ಮಾಡಿದ್ದಾರೆ. ಹಸಿದಾಗ ಊಟ ಕೊಟ್ಟಿದ್ದಾರೆ, ಪ್ರೊಟೀನ್ ಕೊಟ್ಟಿದ್ದಾರೆ. ಅದೆಲ್ಲ ಏನೂ ಬದಲಾಗುವುದಿಲ್ಲ. ನನ್ನ, ವಿನಯ್- ನಮ್ರತಾ ಮಧ್ಯೆ ಇದ್ದಿದ್ದ ಗೆಳೆತನ ಅವರು ಮನೆಯಿಂದ ಹೊರಗೆ ಬಂದ ಬಳಿಕವೂ ಮುಂದುವರೆಯಲಿದೆ. ಆದರೆ ಈಗ ನಮ್ರತಾ ವ್ಯಕ್ತಿತ್ವದ ಬಗ್ಗೆ ಮಾಡುತ್ತಿರುವ ಟ್ರೋಲ್, ಮೀಮ್‌ಗಳನ್ನು ನಿಲ್ಲಿಸಿ, ಇದು ನನ್ನ ಕಡೆಯಿಂದ ಎಲ್ಲರಿಗೂ ಮನವಿ ಎಂದು ಸ್ನೇಹಿತ್ ಕೇಳಿಕೊಂಡಿದ್ದಾರೆ.