Tag: karthik mahesh

  • ‌’ಬಿಗ್‌ ಬಾಸ್‌’ ವಿನ್ನರ್ ಕಾರ್ತಿಕ್ ಮಹೇಶ್ ಮನೆಯಲ್ಲಿ ಪೂಜೆ

    ‌’ಬಿಗ್‌ ಬಾಸ್‌’ ವಿನ್ನರ್ ಕಾರ್ತಿಕ್ ಮಹೇಶ್ ಮನೆಯಲ್ಲಿ ಪೂಜೆ

    ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ವಿನ್ನರ್ ಆದ್ಮೇಲೆ ಕಾರ್ತಿಕ್ ಮಹೇಶ್ (Karthik Mahesh) ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳು, ಹೊಸ ಬ್ರ್ಯಾಂಡ್ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಕಾರ್ತಿಕ್ ಮಹೇಶ್ ಮನೆಯಲ್ಲಿ ಪೂಜೆ ಜರುಗಿದೆ. ಇದನ್ನೂ ಓದಿ:ಒಟಿಟಿಗೆ ಬರಲು ರೆಡಿ ಆಯಿತು ವಿಶ್ವಕ್ ಸೇನ್ ನಟನೆಯ ‘ಗಾಮಿ’ ಸಿನಿಮಾ

    ಕಾರ್ತಿಕ್ ಮನೆಯಲ್ಲಿ ಹೋಮ ನೆರವೇರಿಸುತ್ತಿರುವ ವೇಳೆ, ಅಗ್ನಿಯಲ್ಲಿ ಆಂಜನೇಯ ರೂಪ ಕಂಡಿದೆ ಎಂದು ಅಭಿಮಾನಿಗಳು ನಟನ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಪಟ್ಟ ಗೆದ್ದ ಮೇಲೆ ಕಾರ್ತಿಕ್‌ಗೆ ಬೇಡಿಕೆ ಹೆಚ್ಚಾಗಿದೆ. ಕೆಲಸದಿಂದ ಬ್ರೇಕ್ ಸಿಗುತ್ತಿದ್ದಂತೆ ಮನೆಯಲ್ಲಿ ಹೋಮ ಮಾಡಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಬಿಗ್ ಬಾಸ್ ಬಳಿಕ ‘ಒಂದು ಸರಳ ಪ್ರೇಮ ಕಥೆ’ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಹೊಸ ಬಗೆಯ ಕಥೆಯನ್ನು ಕೇಳುತ್ತಿದ್ದಾರೆ. ಪರಭಾಷೆಗಳಿಂದಲೂ ಅವಕಾಶಗಳು ಅರಸಿ ಬರುತ್ತಿವೆ.

    ಇನ್ನೂ ಚಿಕ್ಕವಯಸ್ಸಿನಿಂದಲೂ ನನ್ನ ತಾಯಿ ತುಂಬಾ ಕಷ್ಟ ಪಟ್ಟಿದ್ದಾರೆ. ಅವರಿಗೊಂದು ಪುಟ್ಟ ಮನೆ ಕಟ್ಟಿಸಿಕೊಡಬೇಕು ಅಂತ ‘ಬಿಗ್ ಬಾಸ್’ ಮನೆಯಲ್ಲಿದ್ದಾಗ ಕಾರ್ತಿಕ್ ತಮ್ಮ ಆಸೆಯನ್ನ ಹೊರಹಾಕಿದ್ದರು. ಅದಕ್ಕಾಗಿ ಈಗ ತಯಾರಿ ಕೂಡ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಮಾಹಿತಿ ಸಿಗಲಿದೆ.

  • ‘ಜಾಕಿ’ ಚಿತ್ರದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿದ ಕಾರ್ತಿಕ್ ಮಹೇಶ್‌, ಕಿಶನ್

    ‘ಜಾಕಿ’ ಚಿತ್ರದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿದ ಕಾರ್ತಿಕ್ ಮಹೇಶ್‌, ಕಿಶನ್

    ರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರ ಹುಟ್ಟುಹಬ್ಬಕ್ಕೆ ಇದೀಗ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh), ಕಿಶನ್ (Kishen Bilagali) ವಿಶೇಷವಾಗಿ ಶುಭಕೋರಿದ್ದಾರೆ. ‘ಜಾಕಿ’ ಸಿನಿಮಾದ ಹಾಡಿಗೆ ಸ್ಟೈಲೀಶ್ ಆಗಿ ಹೆಜ್ಜೆ ಹಾಕಿ ಪ್ರೀತಿಯ ಅಪ್ಪುಗೆ ಶುಭಹಾರೈಸಿದ್ದಾರೆ.

    ದೊಡ್ಮನೆ ಆಟ ಗೆದ್ದ ಮೇಲೆ ಕಾರ್ತಿಕ್ ಮಹೇಶ್ ಅವರು ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಜೊತೆ ಸೇರಿ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಮೊದಲೇ ಇಬ್ಬರು ಸೂಪರ್ ಡ್ಯಾನ್ಸರ್ಸ್‌, ಅಪ್ಪು ಸಾಂಗ್ ಹಾಕಿದ ಮೇಲೆ ಕೇಳಬೇಕೆ. ಮಸ್ತ್ ಆಗಿ ಡ್ಯಾನ್ಸ್ ಮಾಡುವ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಕಾರ್ತಿಕ್ ಮಹೇಶ್- ಕಿಶನ್ ಇಬ್ಬರೂ ಸೂಟು ಬೂಟು ಧರಿಸಿ, ಜಾಕಿ ಹಾಡಿಗೆ ಸಖತ್ ಸ್ಟೈಲೀಶ್ ಆಗಿ ಹೆಜ್ಜೆ ಹಾಕುವ ಮೂಲಕ ಅಪ್ಪುಗೆ ಅರ್ಪಣೆ ಮಾಡಿದ್ದಾರೆ. ಇದನ್ನೂ ಓದಿ:ಅಪ್ಪು ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಮನವಿ ಮಾಡಿದ ರಾಘಣ್ಣ

    ಸರಳತೆಯ ಸಾಮ್ರಾಟ, ನಗುವಿನ ಒಡೆಯ, ಪ್ರೀತಿಗೆ ಪರಮಾತ್ಮ, ಬದುಕಿಗೆ ಸ್ಪೂರ್ತಿ ನಮ್ಮ ಪವರ್ ಸ್ಟಾರ್. ಹುಟ್ಟುಹಬ್ಬದ ಶುಭಾಶಯಗಳು ಎಂದು ವಿಡಿಯೋ ಶೇರ್ ಮಾಡುವಾಗ ಕಾರ್ತಿಕ್ ಅಡಿಬರಹ ನೀಡಿದ್ದಾರೆ.

    ಇನ್ನೂ ಬಿಗ್ ಬಾಸ್ (Bigg Boss Kannada 10) ನಮ್ರತಾ ಗೌಡ (Namratha Gowda) ಅವರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಇನ್ಮುಂದೆ ಪ್ರತಿ ವರ್ಷ ಈ ಕಾರ್ಯ ಮಾಡುವುದಾಗಿ ನಟಿ ತಿಳಿಸಿದ್ದಾರೆ.

  • ‘ನನ್ನಮ್ಮ ಸೂಪರ್ ಸ್ಟಾರ್-3’ನಲ್ಲಿ ತನಿಷಾ ಕುಪ್ಪಂಡ

    ‘ನನ್ನಮ್ಮ ಸೂಪರ್ ಸ್ಟಾರ್-3’ನಲ್ಲಿ ತನಿಷಾ ಕುಪ್ಪಂಡ

    ‘ಬಿಗ್ ಬಾಸ್’ (Bigg Boss Kannada 10) ಬೆಡಗಿ ತನಿಷಾ ಕುಪ್ಪಂಡ (Tanisha Kuppanda) ದೊಡ್ಮನೆ ಆಟ ಮುಗಿದ ಮೇಲೆ ಸಖತ್ ಬ್ಯುಸಿಯಾಗಿದ್ದಾರೆ. ನಟನೆ, ಉದ್ಯಮ ಕ್ಷೇತ್ರಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಸದ್ಯ ‘ನನ್ನಮ್ಮ ಸೂಪರ್ ಸ್ಟಾರ್-3’ರಲ್ಲಿ (Nanamma Super Star 3) ತನಿಷಾ ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನಿಶ್ಚಿತಾರ್ಥ ಸಂಭ್ರಮದಲ್ಲಿ ಕೌಸ್ತುಭ ಮಣಿ

    ಸಿನಿಮಾ ಕೆಲಸ, ಪೇಡ್ ಪ್ರಮೋಷನ್, ಹೋಟೆಲ್ ಬ್ಯುಸಿನೆಸ್ ಎಂದು ಸದಾ ಬ್ಯುಸಿಯಾಗಿರುವ ನಟಿ ಈಗ ‘ನನ್ನಮ್ಮ ಸೂಪರ್ ಸ್ಟಾರ್’-3 ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದು, ಮಕ್ಕಳ ಜೊತೆ ಬೆರೆತು ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ, ಶೋನಲ್ಲಿ ತನಿಷಾ ಅಡುಗೆ ಕೂಡ ಮಾಡಿದ್ದಾರೆ. ಬಳಿಕ ಹಿರಿಯ ನಟಿ ತಾರಾ, ಮತ್ತು ಅನುಪ್ರಭಾಕರ್ ಜೊತೆ ಫೋಟೋ ಕ್ಕಿಕ್ಕಿಸಿಕೊಂಡು ನಟಿ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Tanisha Kuppanda (@tanishakuppanda)

    ಇತ್ತೀಚೆಗೆ ತನಿಷಾ ಮತ್ತು ಕಾರ್ತಿಕ್ (Karthik Mahesh) ಸಿನಿಮಾ ಮಾಡುವ ಕುರಿತಂತೆ ಮಾತನಾಡಿದ್ದರು. ಈ ಕುರಿತು ಸ್ವತಃ ತನಿಷಾ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ನಮ್ಮದೇ ಬ್ಯಾನರ್‌ನಲ್ಲಿ ಪುಟ್ಟ ಪ್ರಾಜೆಕ್ಟ್‌ವೊಂದನ್ನು ಮಾಡಲು ಹೊರಟ್ಟಿದ್ದೇನೆ. ಕಾರ್ತಿಕ್ ಅವರ ಕಾಲ್‌ಶೀಟ್ ಕೇಳಿದ್ದೇವೆ ಎಂದಿದ್ದರು. ಇದನ್ನೂ ಓದಿ:ಟ್ಯಾಂಕರ್ ಮೂಲಕ ಉಚಿತ ನೀರು ಕೊಟ್ಟ ನಟ ಧ್ರುವ ಸರ್ಜಾ

    ಸಿನಿಮಾ ಯಾವುದು, ಏನು ಎನ್ನುವುದರ ಕುರಿತು ತನಿಷಾ ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೆ ಕಾರ್ತಿಕ್ ಅವರು ಬಿಡುವು ಮಾಡಿಕೊಂಡು, ಕಥೆ ಕೇಳಬೇಕು ಎಂದಷ್ಟೇ ತಿಳಿಸಿದ್ದರು. ಬಿಗ್ ಬಾಸ್ ಮುಗಿದ ನಂತರ ಬಹುತೇಕ ಸ್ಪರ್ಧಿಗಳು ಕಾರ್ಯಕ್ರಮಗಳಲ್ಲಿ ಬಿಜಿ ಆಗಿದ್ದಾರೆ. ಅದರಂತೆ ಕಾರ್ತಿಕ್ ಮತ್ತು ತನಿಷಾ ಒಟ್ಟಾಗಿಯೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದಾರೆ.

    ಕಾರ್ತಿಕ್ ಈ ಸೀಸನ್‌ನಲ್ಲಿ ವಿನ್ ಆದರೆ, ತನಿಷಾ ಕುಪ್ಪಂಡ ಬೆಂಕಿ ಅಂತಾನೇ ಫೇಮಸ್ ಆದವರು. ಬಿಗ್ ಬಾಸ್ ಮನೆಯಲ್ಲಿದ್ದಾಗ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಜೋಡಿ ತೆರೆಯ ಮೇಲೆ ಬರಲಿ ಎನ್ನುವುದು ಹಲವರ ಆಸೆ ಕೂಡ ಇದೆ.

  • ಅಭಿಮಾನಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್-ನಮ್ರತಾ

    ಅಭಿಮಾನಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ ಖ್ಯಾತಿಯ ಕಾರ್ತಿಕ್-ನಮ್ರತಾ

    ಬಿಗ್ ಬಾಸ್ (Bigg Boss) ಮನೆಯಲ್ಲಿ ಸಂಗೀತಾ ದೂರವಾದ ನಂತರ ಕಾರ್ತಿಕ್ ಮಹೇಶ್ (Karthik Mahesh) ಅವರಿಗೆ ಹತ್ತಿರವಾದವರು ನಮ್ರತಾ (Namratha Gowda). ಈ ಜೋಡಿಯ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ಇರುವತನಕ ಹಾಗೆಯೇ ಇತ್ತು. ಬಿಗ್ ಬಾಸ್ ಮನೆಯಿಂದ ಆಚೆ ಬಂದ ಮೇಲೂ ಅದು ಮುಂದುವರೆದಿದೆ.

    ಸ್ನೇಹಿತ್ ನಿಂದ ನಮ್ರತಾ ದೂರವಾದ ನಂತರ ಕಾರ್ತಿಕ್ ಸ್ನೇಹ ನಮ್ರತಾಗೆ ಸಿಕ್ಕಿತ್ತು. ಹಾಗಾಗಿ ಈ ಜೋಡಿಯನ್ನು ಲವ್ ಬರ್ಡ್ಸ್ ಅಂತೆಲ್ಲ ಅಭಿಮಾನಿಗಳು ಕರೆದರು. ಅದರಲ್ಲೂ ಇತ್ತೀಚೆಗೆ ಕಾರ್ತಿಕ್ ಮದುವೆ ಬಗ್ಗೆ ಅವರ ತಾಯಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿರೋದ್ರಿಂದ ಎಲ್ಲೆಲ್ಲೂ ಕಾರ್ತಿಕ್ ಮದುವೆ ವಿಚಾರ ಚರ್ಚೆಯಾಗುತ್ತಿದೆ.

    ನಿನ್ನೆಯಷ್ಟೇ ನಮ್ರತಾ ಮತ್ತು ಕಾರ್ತಿಕ್ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸೇಲ್ ಆದವು. ಅದರಲ್ಲೂ ಇಬ್ಬರೂ ಮದುವೆ (Marriage) ಗೆಟಪ್ ನಲ್ಲಿ ಇರುವುದರಿಂದ ಈ ಜೋಡಿ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ ಎಂದೂ ಸುದ್ದಿ ಆಗಿತ್ತು.

    ನಮ್ರತಾ ಮತ್ತು ಕಾರ್ತಿಕ್ ಪಕ್ಕಾ ಸಂಪ್ರದಾಯಿಕ ಉಡುಪು, ಮದುವೆ ಗೆಟಪ್, ಫೋಟೋಗೆ ಪೋಸ್ ಕೊಟ್ಟಿರುವ ರೀತಿ ಒಂದು ರೀತಿಯಲ್ಲಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಹಾಗಾಗಿ ಕೆಲವರು ಅದೇ ಶಾಕ್ ನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಗೆ ಶುಭಾಶಯ ಎಂದೆಲ್ಲ ಪೋಸ್ಟ್ ಮಾಡಿದ್ದರು.

     

    ಅಸಲಿಯ ಕಥೆಯೇ ಬೇರೆ ಆಗಿತ್ತು. ಆಭರಣ ಜಾಹೀರಾತುವೊಂದಕ್ಕೆ ಈ ಜೋಡಿ ಪೋಸ್ ನೀಡಿದ್ದಾರೆ. ಆ ಜಾಹೀರಾತಿಗಾಗಿ ಈ ಫೋಟೋ ಶೂಟ್ ನಡೆದಿದೆ. ನಂತರ ಕಾರ್ತಿಕ್ ಈ ಕುರಿತಂತೆ ಸ್ಪಷ್ಟನೆ ನೀಡಿ, ಅಭಿಮಾನಿಗಳ ನಿಟ್ಟುಸಿರಿಗೆ ಕಾರಣರಾಗಿದ್ದಾರೆ.

  • ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಚಿತ್ರ ಪ್ರದರ್ಶನ

    ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪವನ್ ಒಡೆಯರ್ ಚಿತ್ರ ಪ್ರದರ್ಶನ

    ವನ್ ಒಡೆಯರ್ (Pavan Wadeyar) ನಿರ್ಮಾಣದ ಮೊದಲ ಸಿನಿಮಾ ‘ಡೊಳ್ಳು’ (Dollu) ಈಗಾಗಲೇ ಪ್ರಪಂಚ ಪರ್ಯಟನೆ ಮಾಡಿ ಬಂದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ  ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಈ ಚಿತ್ರ ಮತ್ತೊಂದು ಅಂತರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ.

    ಡೊಳ್ಳು ಸಿನಿಮಾ ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಆಸ್ಕರ್ ಗೆದ್ದಿರುವ ಎಸ್. ಎಸ್. ರಾಜಮೌಳಿಯವರ RRR, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತಾನಜಿ ಚಿತ್ರಗಳ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಡೊಳ್ಳು ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಖುಷಿ ಜೊತೆಗೆ ಹೆಮ್ಮೆಯ ವಿಷಯ.

    ಡೊಳ್ಳು ಸಿನಿಮಾ ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತಮುತ್ತ ಹಾಗೂ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿ ಇರಿಸಿ ಹೆಣೆದ ಕಥೆ ಇದಾಗಿದೆ. ಸಾಗರ್ ಪುರಾಣಿಕ್ (Sagar Puranik) ನಿರ್ದೇಶನ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್ (Karthik Mahesh), ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

    ಸ್ಯಾಂಡಲ್ವುಡ್ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

    ಪ್ರತಿಭಾವಂತ ನಿರ್ದೇಶಕರಾಗಿರುವ ಪವನ್ ಒಡೆಯರ್, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಆರಂಭಿಸಿದ್ದು, ನಿರ್ಮಾಣ ಮಾಡಿದ ಮೊದಲ ಚಿತ್ರದ ಮೂಲಕವೇ ಸಂಚಲನ ಸೃಷ್ಟಿಸಿದ್ದಾರೆ.

  • ಸಂಗೀತಾ ಹೆಸರು ಹೇಳಿ ಕಾರ್ತಿಕ್ ಕಾಲೆಳೆದ ಸಪ್ತಮಿ

    ಸಂಗೀತಾ ಹೆಸರು ಹೇಳಿ ಕಾರ್ತಿಕ್ ಕಾಲೆಳೆದ ಸಪ್ತಮಿ

    ಬಿಗ್ ಬಾಸ್ (Bigg Boss Kannada 10) ವಿನ್ನರ್ ಪಟ್ಟ ಗೆದ್ದಿರೋ ಕಾರ್ತಿಕ್ ಮಹೇಶ್ (Karthik  Mahesh) ಅವರು ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಾರ್ತಿಕ್ ಎಲ್ಲೇ ಹೋದರೂ ಈಗ ಸಂಗೀತಾ (Sangeetha Sringeri) ಅಥವಾ ನಮ್ರತಾ ಹೆಸರು ಹೇಳಿ ಅಭಿಮಾನಿಗಳು ರೇಗಿಸುತ್ತಿರುತ್ತಾರೆ. ಅಂತಹದ್ದೇ ಪ್ರಸಂಗವೊಂದು ಕಾರ್ಯಕ್ರಮವೊಂದರಲ್ಲಿ ನಡೆದಿದೆ. ಆದರೆ ಈ ಬಾರಿ ಸಂಗೀತಾ ಹೆಸರು ಹೇಳಿ ಕಾರ್ತಿಕ್‌ಗೆ ಸಪ್ತಮಿ ಗೌಡ ಕ್ವಾಟ್ಲೆ ಕೊಟ್ಟಿದ್ದಾರೆ.

    ಬಿಗ್ ಬಾಸ್ ಶೋ ಮುಗಿದಿದ್ದರೂ ಸ್ಪರ್ಧಿಗಳ ಹವಾ ಕಮ್ಮಿಯಾಗಿಲ್ಲ. ಪ್ರತಿಯೊಬ್ಬರಿಗೂ ದೊಡ್ಡಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಇದೀಗ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ತಿಕ್ ಮಹೇಶ್ ಮತ್ತು ‘ಕಾಂತಾರ’ ನಟಿ ಸಪ್ತಮಿ ಗೌಡ (Sapthami Gowda) ಬಂದಿದ್ದರು.

    ಕಾರ್ತಿಕ್ ವೇದಿಕೆಯಲ್ಲಿ ಮೈಕ್ ಹಿಡಿದು ಮಾತನಾಡುತ್ತಿದ್ದಂತೆ ಸಂಗೀತಾ ಎಂದು ಫ್ಯಾನ್ಸ್ ಕೂಗಲು ಶುರು ಮಾಡಿದ್ದಾರೆ. ಆಗ ಕಾರ್ತಿಕ್ ಕೇಳಿದರೂ ಕೇಳದಂತೆ ವರ್ತಿಸಿದ್ದಾರೆ. ಈ ವೇಳೆ ಸಪ್ತಮಿ, ಶಿಳ್ಳೆ ಮತ್ತು ಚಪ್ಪಾಳೆ ಜೊತೆ ರಾಗ, ತಾಳ, ಸಂಗೀತದ ಬಗ್ಗೆ ಫ್ಯಾನ್ಸ್ ಕೇಳ್ತಿದ್ದಾರೆ ಅಂತ ಪರೋಕ್ಷವಾಗಿ ಕಾರ್ತಿಕ್ ಕಾಲೆಳೆದಿದ್ದಾರೆ. ಹೂಂ ನೀವು ಒಬ್ಬರು ಕಮ್ಮಿ ಇದ್ರಿ ಅಂತ ಸಪ್ತಮಿ ಮಾತಿಗೆ ಕಾರ್ತಿಕ್ ನಕ್ಕಿದ್ದಾರೆ.

     

    View this post on Instagram

     

    A post shared by Husen SRK (@husen_srk45)

    ಬಳಿಕ ‘ಬಿಗ್ ಬಾಸ್’ ಮುಗಿಯಿತು ಹೀಗೆ ಹೇಳೋದನ್ನು ಬಿಡಿ ಎಂದು ಕಾರ್ತಿಕ್ ಮನವಿ ಮಾಡಿದ್ದಾರೆ. ಕಾರ್ತಿಕ್ ಮಾತಿಗೆ ಅಭಿಮಾನಿಗಳು ಸುಮ್ಮನಾಗಿದ್ದಾರೆ. ಇದನ್ನೂ ಓದಿ:ಬೆಂಗಳೂರಿನ ರಸ್ತೆಬದಿಯಲ್ಲಿ ತಿಂಡಿ ಸವಿದ ಕಾರ್ತಿಕ್ ಆರ್ಯನ್

    ಇತ್ತೀಚೆಗೆ ವಿನಯ್ ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕಥೆ’ ಚಿತ್ರದಲ್ಲಿ ಕಾರ್ತಿಕ್ ನಟಿಸಿದ್ದರು. ಬಿಗ್ ಬಾಸ್ ನಂತರ ಸಾಕಷ್ಟು ಆಫರ್ಸ್ ಕಾರ್ತಿಕ್ ಕಡೆ ಅರಸಿ ಬರುತ್ತಿವೆ. ಉತ್ತಮ ಕಥೆಯೊಂದಿಗೆ ಕಾರ್ತಿಕ್ ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಳ್ತಾರೆ.

    ಕಾರ್ತಿಕ್ ಕಾಲ್‌ಶೀಟ್ ಕೊಟ್ಟರೆ ಸಿನಿಮಾ ನಿರ್ಮಾಣ ಮಾಡೋದಾಗಿ ಇತ್ತೀಚೆಗಷ್ಟೇ ತನಿಷಾ ಕುಪ್ಪಂಡ ಹೇಳಿದ್ದಾರೆ. ತನಿಷಾ ಮಾತಿಗೆ ಕಾರ್ತಿಕ್ ಕೂಡ ಓಕೆ ಎಂದಿದ್ದಾರೆ.

  • Bigg Boss: ಅದೃಷ್ಟ ತಂದ ತಂಗಿ ಮಗನನ್ನು ಮುದ್ದಾಡಿದ ಕಾರ್ತಿಕ್ ಮಹೇಶ್

    Bigg Boss: ಅದೃಷ್ಟ ತಂದ ತಂಗಿ ಮಗನನ್ನು ಮುದ್ದಾಡಿದ ಕಾರ್ತಿಕ್ ಮಹೇಶ್

    ‘ಬಿಗ್ ಬಾಸ್ ಸೀಸನ್ 10’ರ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ಇಷ್ಟು ದಿನ ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಡುವು ಮಾಡಿಕೊಂಡು ಅಳಿಮಯ್ಯನ ಜೊತೆಗೆ ಕಾರ್ತಿಕ್ ಸಮಯ ಕಳೆದಿದ್ದಾರೆ. ತಂಗಿ ಮಗನನ್ನು ಹಿಡಿದು ಮುದ್ದಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಜೊತೆಯಿರುವ ಕಾರ್ತಿಕ್ ಫೋಟೋ ಹಂಚಿಕೊಂಡಿದ್ದಾರೆ.

    ಇಷ್ಟು ದಿನ ಕಾರ್ತಿಕ್, ಬಿಗ್ ಬಾಸ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದರು. ಹಲವು ಸಂದರ್ಶನ ಮತ್ತು ಅಭಿಮಾನಿಗಳನ್ನು ಭೇಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಈಗ ಕಾರ್ತಿಕ್, ತಾಯಿಯ ತವರು ಮನೆಗೆ ಭೇಟಿ ನೀಡಿದ್ದಾರೆ. ಕಾರ್ತಿಕ್ ಅವರ ತಾಯಿ ಮೀನಾಕ್ಷಿ ತವರೂರು ಚಾಮರಾಜನಗರ. ಕಾರ್ತಿಕ್ ಮತ್ತು ಸಹೋದರಿ ಹುಟ್ಟಿ, ಬೆಳೆದಿದ್ದು ಅಲ್ಲೇ. ಇದೀಗ ಕಾರ್ತಿಕ್ ತಂಗಿಯ ಬಾಣಂತನ ಕೂಡ ಚಾಮರಾಜನಗರದಲ್ಲೇ ಆಗುತ್ತಿದೆ.

    ಇದೀಗ ತಂಗಿ ಹಾಗೂ ಅಳಿಮಯ್ಯನ ನೋಡಲು ಚಾಮರಾಜನಗರಕ್ಕೆ ಕಾರ್ತಿಕ್ ಭೇಟಿ ಕೊಟ್ಟಿದ್ದಾರೆ. ತಮ್ಮ ಅಳಿಮಯ್ಯನನ್ನ ಅಪ್ಪಿ ಮುದ್ದಾಡಿದ್ದಾರೆ. ಕಾರ್ತಿಕ್ ತಂಗಿ ಮಗುಗೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಅಳಿಮಯ್ಯನನ್ನ ‘ಸಿಂಬಾ’ (Simba) ಅಂತ ಕರೆಯುತ್ತಿದ್ದಾರೆ. ಇದನ್ನೂ ಓದಿ:ಥ್ರಿಲ್ ಕೊಟ್ಟ ‘ಸಾರಾಂಶ’ ಪಾತ್ರ: ನಟ ದೀಪಿಕ್ ಸುಬ್ರಮಣ್ಯ

     

    View this post on Instagram

     

    A post shared by Karthik Mahesh (@karthi_mahesh)

    ಕಾರ್ತಿಕ್ ಬಿಗ್ ಬಾಸ್‌ಗೆ (Bigg Boss Kannada 10) ಹೋಗುವ ಸಮಯದಲ್ಲಿ ತಂಗಿ ತುಂಬು ಗರ್ಭೀಣಿಯಾಗಿದ್ದರು. ಮನೆಗೆ ಮುದ್ದಾದ ಗಂಡು ಮಗನ ಆಗಮನವಾಗಿದೆ. ಬಿಗ್ ಬಾಸ್ ಮನೆಯಲ್ಲಿರುವಾಗ ಕಾರ್ತಿಕ್ ತಂಗಿ ಚಿಂತೆಯಲ್ಲೇ ಇದ್ದರು. ಹಾಗಾಗಿ ಶೋ ಮುಗಿದ ಬಳಿಕ ತಂಗಿ ಮತ್ತು ಮಗುವಿನ ಜೊತೆ ಸಮಯ ಕಳೆದಿದ್ದಾರೆ. ಸಾಕಷ್ಟು ಸಂದರ್ಶನಗಳಲ್ಲಿ ಕಾರ್ತಿಕ್‌, ನನ್ನ ಪಾಲಿಗೆ ತಂಗಿ ಮಗ ಲಕ್ಕಿ ಚಾರ್ಮ್‌ ಎಂದು ಮಾತನಾಡಿದ್ದರು.

    ಬಿಗ್ ಬಾಸ್ ಶೋ ಬಳಿಕ ಕಾರ್ತಿಕ್‌ಗೆ ಹಲವು ಸಿನಿಮಾಗಳ ಆಫರ್ ಅರಸಿ ಬರುತ್ತಿದೆ. ಉತ್ತಮ ಸಿನಿಮಾಗಳ ಮೂಲಕ ರಂಜಿಸಲು ಕಾರ್ತಿಕ್ ನಿರ್ಧರಿಸಿದ್ದಾರೆ.

  • ಬಿಗ್‌ಬಾಸ್ ಸ್ಕ್ರಿಪ್ಟೆಡ್ ಶೋ ಅಲ್ಲ, ಒಂದು ವ್ಯಕ್ತಿತ್ವದ ಆಟ: ಕಾರ್ತಿಕ್ ಮಹೇಶ್

    ಬಿಗ್‌ಬಾಸ್ ಸ್ಕ್ರಿಪ್ಟೆಡ್ ಶೋ ಅಲ್ಲ, ಒಂದು ವ್ಯಕ್ತಿತ್ವದ ಆಟ: ಕಾರ್ತಿಕ್ ಮಹೇಶ್

    ಚಾಮರಾಜನಗರ: ಬಿಗ್‌ಬಾಸ್‌ (Bigg Boss 10) ಸ್ಕ್ರಿಪ್ಟೆಡ್ ಶೋ ಅಲ್ಲ, ಒಂದು ವ್ಯಕ್ತಿತ್ವದ ಆಟ ಎಂದು ಬಿಗ್‌ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ (Karthik Mahesh) ತಿಳಿಸಿದ್ದಾರೆ.

    ಇಂದು (ಫೆ.3) ಚಾಮರಾಜನಗರಕ್ಕೆ (Chamarajanagar) ಭೇಟಿ ನೀಡಿದ ಅವರು, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೆ ತೆರಳಿ ಸಿದ್ದಬಸವರಾಜಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಸಂಘ ಸಂಸ್ಥೆ ಹಾಗೂ ಅಭಿಮಾನಿಗಳು ಕಾರ್ತಿಕ್‌ಗೆ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕಾರ್ತಿಕ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕ, ಯುವತಿಯರು ಮುಗಿಬಿದ್ದರು. ಇದನ್ನೂ ಓದಿ: ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾಗೆ ಮೈಸೂರಿನಲ್ಲಿ ಚಾಲನೆ

    ಬಳಿಕ ಮಾತನಾಡಿದ ಕಾರ್ತಿಕ್, ನಾನು ಹುಟ್ಟಿದ್ದು ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಬಾಲ್ಯ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ಇಲ್ಲಿಗೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಗೆಲುವು ನನ್ನ ಕುಟುಂಬ ಹಾಗು ಅಭಿಮಾನಿಗಳಿಂದ ಸಾಧ್ಯವಾಗಿದ್ದು, ಹುಟ್ಟೂರು ಹಾಗೂ ಬೆಳೆದು ಬಂದ ದಾರಿ ಎಂದಿಗೂ ಮರೆಯಬಾರದು. ಬಿಗ್‌ಬಾಸ್ ಗೆದ್ದ ನಂತರ ಒಳ್ಳೆಯ ಆಫರ್‌ಗಳು ಬರುತ್ತಿವೆ. ಮುಂದೆ ದೊಡ್ಡ ಹೆಜ್ಜೆಯಿಡುವ ಯೋಚನೆಯಿದೆ ಎಂದರು. ಇದನ್ನೂ ಓದಿ: ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ

    ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರೋದು ಖುಷಿಯಾಗಿದೆ. ಅದಕ್ಕೆ ಅವರು ಆರ್ಹರಾಗಿದ್ದಾರೆ. ವಿನಯ್ ನನ್ನ ಜೊತೆಗೆ ಫೈನಲ್‌ನಲ್ಲಿ ಇರ್ತಾರೆ ಎಂಬ ಆಸೆಯಿತ್ತು. ಆದರೆ ಅವರು ಫೈನಲ್‌ಗೆ ಬರಲಿಲ್ಲ. ಆ ಬಗ್ಗೆ ಬೇಜಾರಿಲ್ಲ. ಜನರು ವೋಟ್ ಹಾಕಿದ್ರಿಂದ ಡ್ರೋನ್ ಪ್ರತಾಪ್ ರನ್ನರ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪೂನಂ ಅರೆಸ್ಟ್ ಮಾಡಿ: ‘ಬಾಯ್ಕಾಟ್‌ ಪಾಂಡೆ’ ಟ್ರೆಂಡ್ ಶುರು

    ಸಂಗೀತಾ ಶೃಂಗೇರಿ ಜೊತೆಗೆ ಸ್ನೇಹ ಮುಂದುವರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಗ್‌ಬಾಸ್‌ನಲ್ಲಿ ನಡೆದಿದ್ದು ಗೇಮ್‌ಗೋಸ್ಕರ. ಹೊರಗಡೆ ಬಂದ ಬಳಿಕ ಮುಖಾಮುಖಿ ಭೇಟಿಯಾಗಿಲ್ಲ. ಅವಕಾಶ ಸಿಕ್ಕಿದ್ರೆ ಅವರ ಜೊತೆ ಮಾತನಾಡುತ್ತೇನೆ. ಯಾರ ಮೇಲೆ ದ್ವೇಷ ಕಟ್ಟಿಕೊಂಡು ಏನಾಗಬೇಕು ಎಂದರು. ಇನ್ನು ನಮ್ರತಾ ಜೊತೆಗೆ ನೆಗೆಟಿವ್ ಟ್ರೋಲ್ ವಿಚಾರದ ಬಗ್ಗೆ ಮಾತನಾಡಿ, ನಂಗೆನೂ ಅದು ನೆಗೆಟಿವ್ ಅನ್ಸಲ್ಲ. ಮಾತಾಡುವವರಿಗೆ ಹೊಟ್ಟೆ ತುಂಬೋದಾದ್ರೆ ಮಾತನಾಡಿಕೊಳ್ಳಲಿ. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ ಎಂದರು. ಇದನ್ನೂ ಓದಿ: ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್

  • Bigg Boss: ಅಭಿಮಾನಿಗಳಿಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ವಿಶೇಷ ಮನವಿ

    Bigg Boss: ಅಭಿಮಾನಿಗಳಿಗೆ ಬಿಗ್ ಬಾಸ್ ವಿನ್ನರ್ ಕಾರ್ತಿಕ್ ವಿಶೇಷ ಮನವಿ

    ‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಅವರು ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ದೊಡ್ಮನೆ ಆಟ ಗೆದ್ದ ಮೇಲೆ ಕಾರ್ತಿಕ್ ಸಖತ್ ಬ್ಯುಸಿಯಾಗಿದ್ದಾರೆ. ಇದರ ನಡುವೆ ಅಭಿಮಾನಿಗಳ ಬೇಡಿಕೆಗೆ ಕಾರ್ತಿಕ್ ಕೋರಿಕೆಯೊಂದನ್ನು ಮಾಡಿದ್ದಾರೆ. ಇದನ್ನೂ ಓದಿ:ಸುದೀಪ್ ಚಿತ್ರರಂಗಕ್ಕೆ ಬಂದು 28 ವರ್ಷ: ಹಳೆ ದಿನಗಳ ನೆನೆದ ಕಿಚ್ಚ

    ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಿನಿಂದ ಕಂಟಿನ್ಯೂ ಆಗಿ ಕರೆ ಬರುತ್ತಲೇ ಇದೆ. ಬೆಳಿಗ್ಗೆಯಿಂದ ರಾತ್ರಿಯವರೆಗೂ ಇಂಟರ್‌ವ್ಯೂ ಅಟೆಂಡ್ ಮಾಡುತ್ತಲೇ ಇದ್ದೇನೆ. ಇದರ ನಡುವೆ ಪ್ರೀತಿಯ ಅಭಿಮಾನಿಗಳಲ್ಲಿ ಒಂದು ಕೋರಿಕೆ ಯಾರೆಲ್ಲಾ ಶುಭ ಕೋರಲು ನನಗೆ ಕರೆ ಮಾಡ್ತಿದ್ದೀರಾ ಹಾಗೂ ಮೆಸೇಜ್ ಮಾಡುತ್ತಿದ್ದೀರಾ ಎಲ್ಲರ ಮೆಸೇಜ್ ನೋಡ್ತಿದ್ದೇನೆ. ಆದರೇ ತುಂಬಾ ಮೆಸೇಜ್ ಮತ್ತು ಕರೆ ಬರುತ್ತಿರುವ ಕಾರಣಕ್ಕೆ ಎಲ್ಲರಿಗೂ ಉತ್ತರಿಸಲು ಆಗುತ್ತಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಆದರೆ ನನ್ನ ಗೆಲುವನ್ನು ಅಭಿಮಾನಿಗಳಿಗೆ ಅರ್ಪಿಸಲು ಇಷ್ಟಪಡುತ್ತೇನೆ. ನಾನು ಒಳಗಡೆ ಹೊಡೆದಾಡುತ್ತಿದ್ದರೆ, ನೀವು ಹೊರಗೆ ಕಷ್ಟಪಡ್ತೀದ್ದೀರಿ. ಎರಡ್ಮೂರು ದಿನಗಳ ನಂತರ ಎಲ್ಲರಿಗೂ ಪರ್ಸನಲ್ ಆಗಿ ಸಿಗುತ್ತೇನೆ. ಫ್ಯಾನ್ಸ್ ಮೀಟ್ ಅಂತಲೇ ಮಾಡುತ್ತೀನಿ. ನನ್ನ ಧನ್ಯವಾದಗಳನ್ನು ನಿಮಗೆ ಅರ್ಪಿಸುತ್ತೇನೆ. ಎಲ್ಲದಕ್ಕೂ ಸ್ವಲ್ಪ ಸಮಯ ನೀಡಿ ಎಂದು ಮನವಿ ಮಾಡಿದ್ದಾರೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಎಂದೆಂದೂ ಚಿರಋಣಿ. ಶುಭ ಕೋರಿದ ಎಲ್ಲಾ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದು ಕಾರ್ತಿಕ್ ಮಹೇಶ್ ಮನವಿ ಮಾಡಿದ್ದಾರೆ.

    ಕಾರ್ತಿಕ್ ಮಹೇಶ್ ವಿನ್ನರ್ ಆಗಿದ್ದರೆ, ಮೊದಲ ರನ್ನರ್ ಅಪ್ ಡ್ರೋನ್ ಪ್ರತಾಪ್ (Drone Prathap) ಹೊರಹೊಮ್ಮಿದ್ದರು. ಅಂದಹಾಗೆ ಕಾರ್ತಿಕ್‌ಗೆ 3 ಕೋಟಿಯಷ್ಟು ವೋಟ್ ಬಂದಿತ್ತು.

  • Bigg Boss: ಕಾರ್ತಿಕ್‌ಗೆ ಠಕ್ಕರ್ ಕೊಟ್ರು ಕೂಡ ವಿನಯ್ ಮುಗ್ಗರಿಸಿದ್ದು ಹೇಗೆ?

    Bigg Boss: ಕಾರ್ತಿಕ್‌ಗೆ ಠಕ್ಕರ್ ಕೊಟ್ರು ಕೂಡ ವಿನಯ್ ಮುಗ್ಗರಿಸಿದ್ದು ಹೇಗೆ?

    ಬಿಗ್ ಬಾಸ್ ಕನ್ನಡ 10ನೇ (Bigg Boss Kannada 10) ಸೀಸನ್ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ (Vinay Gowda) ಅವರು ಹೊರಹೊಮ್ಮಿದ್ದಾರೆ. ಎಲಿಮಿನೇಷನ್ ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವಿನಯ್ ಕೂತಿದ್ದರು. ತಿರುಗುಣಿ ತಿರುಗುತ್ತಿದ್ದ ಹಾಗೆಯೇ ಮೂವರ ಉಸಿರೂ ಅಷ್ಟೇ ಏರಿಳಿಯುತ್ತಿತ್ತು. ಎಲ್ಲ ಸ್ಪರ್ಧಿಗಳು ಕಣ್ಣು ಮುಚ್ಚಿ ಪ್ರಾರ್ಥಿಸುತ್ತಿದ್ದರು. ಕೊನೆಗೂ ವಿನಯ್ ಎದುರಿಗೆ ಬಂದಾಗ ಮನೆಯ ಬಾಗಿಲು ತೆರೆದುಕೊಂಡಿತು. ವಿನಯ್ ಮನೆಯಿಂದ ಹೊರಬಂದರು. ಮೊದಲ ದಿನದಿಂದಲೂ ಕಾರ್ತಿಕ್‌ಗೆ ಠಕ್ಕರ್ ಕೊಡುತ್ತಾ ಬಂದಿದ್ದ ವಿನಯ್ ಫಿನಾಲೆಯಲ್ಲಿ ಮುಗ್ಗರಿಸಿದ್ದು ಹೇಗೆ? ಇಲ್ಲಿದೆ ಮಾಹಿತಿ.

    ಮೂರನೇ ರನ್ನರ್ ಅಪ್ ಆಗಿರುವ ವಿನಯ್ ಗೌಡ ಅವರು ಈ ಸೀಸನ್‌ನಲ್ಲಿ ಮೂಡಿಸಿರುವ ಹೆಜ್ಜೆ ಗುರುತು ಸಣ್ಣದೇನಲ್ಲ. ಅದು ಅಳಿಸಲಾಗದಂಥ ಛಾಪು. ದೊಡ್ಮನೆಯ ಸ್ಪರ್ಧಿಗಳ ಕಣ್ಣಲ್ಲಿ ಹೀರೊ ಆಗಲು ಬರುವವರು ಸಾಕಷ್ಟಿದ್ದಾರೆ. ಆದರೆ ನಾನು ವಿಲನ್ ಆಗಲು ಬಂದಿದ್ದೇನೆ ಎಂದು ಹೇಳಿಕೊಂಡೇ ಬಂದವರು ಬಹುಶಃ ಒಬ್ಬರೇ! ಅವರು ವಿನಯ್ ಗೌಡ. ಈ ಸೀಸನ್‌ನಲ್ಲಿ ನಡೆದ ಅತಿ ದೊಡ್ಡ ಗಲಾಟೆಗಳನ್ನು ಪಟ್ಟಿಮಾಡಿದಾರೆ ಅದರ ಕೇಂದ್ರದಲ್ಲಿ ವಿನಯ್ ಕಾಣಿಸುತ್ತಾರೆ. ಈ ಮನೆಯಲ್ಲಿ ಅತಿ ಹೆಚ್ಚು ಜನರ ಜೊತೆ ಸ್ನೇಹ ಸಂಬಂಧ ಕಾಪಾಡಿಕೊಂಡವರ ಪಟ್ಟಿಯನ್ನು ತಯಾರಿಸಿದರೆ ಅದರ ಕೇಂದ್ರದಲ್ಲಿಯೂ ವಿನಯ್ ಇರುತ್ತಾರೆ. ಇದನ್ನೂ ಓದಿ:‘ನಗುವಿನ ಹೂಗಳ ಮೇಲೆ’ ಚಿತ್ರದ ಟ್ರೈಲರ್ ಔಟ್- ಚಿತ್ರತಂಡಕ್ಕೆ ಎ.ಹರ್ಷ ಸಾಥ್

    ಫಿನಾಲೆಗೆ ಎರಡೇ ದಿನಕ್ಕೆ ಮುಂಚಿತವಾಗಿ ಬಿಗ್ ಬಾಸ್ ಮನೆಯಲ್ಲಿ ಜ್ಞಾಪಕ ಚಿತ್ರಶಾಲೆಯನ್ನು ತೆರೆಯಲಾಗಿತ್ತು. ಅಂದರೆ ಗೋಡೆಯ ಮೇಲೆ ಈ ಸೀಸನ್ ಅತಿಮುಖ್ಯ ಘಟ್ಟಗಳ ಛಾಯಾಚಿತ್ರವನ್ನು ಇರಿಸಿ, ಸದಸ್ಯರಿಗೆ ಆ ಗಳಿಗೆಗಳನ್ನು ನೆನಪಿಸಿಕೊಳ್ಳಲು ಕೇಳಲಾಗಿತ್ತು. ಅದರಲ್ಲಿ ಕಾರ್ತಿಕ್ ಅವರು ವಿನಯ್ ಅವರಿಗೆ ಆಡಿದ ಮಾತು, ನೀನು ಇಷ್ಟೊಂದು ಪರೀಕ್ಷೆಗಳನ್ನು ಒಡ್ಡದಿದ್ದರೆ, ನಾನು ಈವತ್ತು ಈ ಜಾಗದಲ್ಲಿ ನಿಲ್ಲುತ್ತಿರಲಿಲ್ಲ. ಸಂಗೀತಾ ಆಡಿದ ಮಾತು, ಈ ಮನೆಯಲ್ಲಿ ನೀವಿಲ್ಲದೆ ನಾನಿಲ್ಲ. ನಾನಿಲ್ಲದೆ ನೀವಿಲ್ಲ. ಪ್ರಮುಖ ಪ್ರತಿಸ್ಫರ್ಧಿಗಳ ಬಾಯಿಂದ ಬಂದ ಈ ಮಾತುಗಳೇ ವಿನಯ್ ಗೌಡ ಅವರ ಸ್ಥಾನ ಎಂಥದ್ದು ಎಂಬುದನ್ನು ತಿಳಿಸುವಂತಿದೆ. ಬರೀ ಏರಿಳಿತಗಳಷ್ಟೇ ಅಲ್ಲ, ನಾಟಕೀಯ ತಿರುವುಗಳನ್ನೂ ಒಳಗೊಂಡಿರುವ ವಿನಯ್ ಅವರ ಜರ್ನಿಯ ಪ್ರಮುಖ ಘಟ್ಟವನ್ನು ಜಿಯೊ ಸಿನಿಮಾ ನಿಮ್ಮ ಮುಂದೆ ತೆರೆದಿಡುತ್ತಿದೆ.

    ಟಾಸ್ಕ್‌ನಲ್ಲಿ ಸಾಟಿಯಿಲ್ಲ:
    ಬಿಗ್‌ ಬಾಸ್ ಮನೆಯ ಟಾಸ್ಕ್‌ಗಳ ವಿಷಯ ಬಂದರೆ ವಿನಯ್ ಮೂಡಿಸಿದ ಛಾಪು ಯಾರೂ ಅಳಿಸುವಂಥದ್ದಲ್ಲ. ಗುಂಪುಗಳಲ್ಲಿ ಆಡುವಾಗಲೂ, ವೈಯಕ್ತಿಕ ಆಟದಲ್ಲಿಯೂ ವಿನಯ್ ಎರಡು ಹೆಜ್ಜೆ ಮುಂದೇ ಇರುತ್ತಿದ್ದರು. ಆಟದಲ್ಲಿ ಅವರ ಅಗ್ರೆಶನ್ ಮನೆಯೊಳಗೆ ಮೂಡಿಸಿದ ಕಂಪನಗಳಿಗೆ ಲೆಕ್ಕವಿಲ್ಲ. ಎರಡನೇ ವಾರದಲ್ಲಿ ಹಳ್ಳಿಮನೆ ಟಾಸ್ಕ್ನಲ್ಲಿ ನಮ್ರತಾ ನಾಯಕಿಯಾಗಿದ್ದ ಉಗ್ರಂ ತಂಡ, ತನಿಷಾ ನೇತೃತ್ವದ ತಂಡವನ್ನು ಸೋಲಿಸುವಲ್ಲಿ ವಿನಯ್ ಅವರ ಪಾತ್ರ ಹಿರಿದಾದದ್ದು. ಕುಸ್ತಿಯ ಕಣದಲ್ಲಿ ವಿನಯ್ ಮತ್ತು ಮೈಕಲ್ ಎದುರಾಬದಿರಾದಾಗ ಮೈಕಲ್ ಗೆಲುವನ್ನು ನೆಚ್ಚಿಕೊಂಡವರೇ ಹೆಚ್ಚು. ಆದರೆ ಗೆದ್ದಿದ್ದು ಮಾತ್ರ ವಿನಯ್. ಇದು ಗುಂಪಿನಲ್ಲಿ ಅವರ ಆಟದ ಸಾಮರ್ಥ್ಯವನ್ನು ಸಾಬೀತುಗೊಳಿಸಿದರೆ, ನಾಲ್ಕನೇ ವಾರದಲ್ಲಿ ತುಕಾಲಿ ಸಂತೋಷ್ ಅವರನ್ನು ಹಿಂದಿಕ್ಕಿ ನಾಯಕನಾಗಿ ಆಯ್ಕೆಯಾಗಿದ್ದು ಅವರ ವೈಯಕ್ತಿಕ ಆಟದ ಸಾಮರ್ಥ್ಯವನ್ನು ಸಾಬೀತುಗೊಳಿಸುವಂತಿತ್ತು.

    ವಿವಾದಗಳ ಸರಮಾಲೆ:
    ವಿಲನ್ ಆಗಲು ಬಯಸುತ್ತೇನೆ ಎಂದು ಒಳಗೆ ಹೋದ ವಿನಯ್ ಮನೆಯೊಳಗಿನ ಹಲವು ಸ್ಪರ್ಧಿಗಳ ಪಾಲಿಗೆ ಅಕ್ಷರಶಃ ವಿಲನ್ ಆದರು. ಹಲವರು ಇವರನ್ನುಎದುರು ಹಾಕಿಕೊಂಡು ಹೀರೊ ಆಗಲು ಯತ್ನಿಸಿದ್ದೂ ಇದೆ. ಕೋಪ, ಅಗ್ರೆಶನ್, ಮುನ್ನುಗ್ಗುವ ಛಲ ಆ ಒತ್ತಡದಲ್ಲಿ ಬಂದ ಮಾತುಗಳಿಂದ ಬಂದ ಮಾತುಗಳು, ಆಡಿದ ವರ್ತನೆಗಳಿಂದ ಮನೆಯ ಹೊರಗೂ ‘ವಿಲನ್’ ಆಗಿ ಕಾಣಿಸಿದ್ದೂ ಇದೆ. ವಿವಾದಗಳ ಸರಪಳಿ ಬಿಗ್‌ಬಾಸ್ ಜರ್ನಿಯುದ್ಧಕ್ಕೂ ಅವರನ್ನು ಸುತ್ತಿಕೊಳ್ಳುತ್ತಲೇ ಇತ್ತು. ಅದು ಕೆಲವೊಮ್ಮೆ ಅತಿರೇಕಕ್ಕೂ ಹೋಗಿತ್ತು. ಮೊದಲು ಸಂಗೀತಾ ಜೊತೆಗೆ, ಕಾರ್ತಿಕ್ ಜೊತೆಗೆ, ನಂತರದ ದಿನಗಳಲ್ಲಿ ಪ್ರತಾಪ್ ಜೊತೆಗೆ ಅವರ ಮಾತಿನ ಚಕಮಕಿ ನಡೆಯುತ್ತಲೇ ಇತ್ತು.

    ಹೂವುಗಳನ್ನು ಕಾಪಾಡಿಸಿಕೊಳ್ಳುವ ಟಾಸ್ಕ್‌ನಲ್ಲಿಯೂ ವಿನಯ್ ಅವರ ಆಕ್ರಮಣಕಾರಿ ಆಟ ಜಗಳಕ್ಕೆ ಕಾರಣವಾಗಿತ್ತು. ಇದೇ ಪರಿಸ್ಥಿತಿ ಬಟ್ಟೆಗಳನ್ನು ಒಗೆದು ಹಾಕುವ ಕಲೆ ಒಳ್ಳೆಯದಲ್ಲ ಟಾಸ್ಕ್‌ನಲ್ಲಿಯೂ ಉಂಟಾಗಿತ್ತು. ಅಲ್ಲಿ ಅವಿನಾಶ್ ಮತ್ತು ವಿನಯ್ ಮಧ್ಯೆ ನಡೆದ ಘರ್ಷಣೆ, ವಿನಯ್ ಮತ್ತು ಕಾರ್ತಿಕ್ ನಡುವೆ ನಡೆದ ಘರ್ಷಣೆ ಸಾಕಷ್ಟು ಜಗಳ ಹುಟ್ಟಿಸಿತ್ತು. ರಕ್ಕಸರು ಮತ್ತು ಗಂಧರ್ವರ ಟಾಸ್ಕ್‌ನಲ್ಲಿ ವಿನಯ್ ರಾಕ್ಷಸರಾಗಿದ್ದಾಗ ಕಾರ್ತಿಕ್ ಜೊತೆಗೆ ನಡೆದುಕೊಂಡ ರೀತಿ ವಿವಾದವನ್ನೇ ಸೃಷ್ಟಿಸಿತ್ತು. ಹಿಟ್ಟನ್ನು ತೆಗೆದುಕೊಂಡು ವಿನಯ್, ಕಾರ್ತಿಕ್ ಮುಖಕ್ಕೆ ಹೊಡೆದಿದ್ದರು. ಹಾಗೆಯೇ ಕಾರ್ತಿಕ್ ನೆಲಕ್ಕೆಸೆದ ಚಪ್ಪಲಿ ವಿನಯ್ ಅವರಿಗೆ ಹೋಗಿ ಬಡಿದಿತ್ತು. ಇದರಿಂದ ಸಿಟ್ಟಿಗೆದ್ದ ವಿನಯ್, ಮನೆಬಿಟ್ಟು ಹೋಗುತ್ತೇನೆ ಎಂದು ಹೇಳಿ ಬಿಗ್‌ಬಾಸ್ ಮುಖ್ಯದ್ವಾರವನ್ನು ತಟ್ಟಿದ್ದರು.

    ಸಂಗೀತಾ-ವಿನಯ್ ಮುಖಾಮುಖಿ:
    ಈ ಸೀಸನ್‌ನಲ್ಲಿ ವಿನಯ್ ಗೌಡ ಮತ್ತು ಸಂಗೀತಾ ನಡುವಿನ ಸಂಬಂಧದ ಏರಿಳಿತದ ಗ್ರಾಫ್ ತುಂಬ ಕುತೂಹಲಕಾರಿಯಾಗಿದ್ದು. ಈ ಮೊದಲೇ ಧಾರಾವಾಹಿಯೊಂದರಲ್ಲಿ ಸುಧೀರ್ಘ ಅವಧಿಗೆ ತೆರೆಯನ್ನು ಹಂಚಿಕೊಂಡಿದ್ದ ವಿನಯ್ ಮತ್ತು ಸಂಗೀತಾ ಮತ್ತೆ ಬಿಗ್‌ಬಾಸ್ ಮನೆಯೊಳಗೆ ಭೇಟಿಯಾದಾಗ ಖುಷಿಯಿಂದಲೇ ತಬ್ಬಿಕೊಂಡಿದ್ದರು. ಆದರೆ ಈ ಖುಷಿ ತುಂಬ ಕಾಲ ಉಳಿಯಲಿಲ್ಲ. ಅಸಮರ್ಥರ ಗುಂಪಿನಿಂದ ಬಂದಿರುವ ಸಂಗೀತ ಸೋಪಾ ಮೇಲೆ ಕೂಡಬಾರದು ಎಂದು ವಿನಯ್ ಹೇಳಿದ್ದನ್ನು ಸಂಗೀತಾ ಲೆಕ್ಕಿಸದೇ ಹೋಗಿದ್ದು ಅವರಿಬ್ಬರ ನಡುವೆ ಮೊದಲ ಕಿಡಿ ಹೊತ್ತಿಕೊಳ್ಳಲು ಕಾರಣವಾಯ್ತು. ನಂತರ ಇದು ನಾಮಿನೇಷನ್‌ನಲ್ಲಿಯೂ ಇನ್ನಷ್ಟು ಜೋರಾಗಿ ಉರಿಯಿತು. ಅಲ್ಲಿಂದ ಮುಂದೆ ಅಸಮರ್ಥರು ಸಮರ್ಥರಾದ ನಂತರವೂ ಮನೆ ಎರಡು ಗುಂಪುಗಳಲ್ಲಿ ವಿಂಗಡಿಸಿಹೋಗಿತ್ತು. ಒಂದು ಗುಂಪಿನಲ್ಲಿ ಸಂಗೀತಾ ಮತ್ತು ಕಾರ್ತೀಕ್ ಇದ್ದರೆ, ಇನ್ನೊಂದು ಗುಂಪಿನಲ್ಲಿ ವಿನಯ್ ಇದ್ದರು.

    ಮೊದಲೇ ವಾರವೇ ಕಿಡಿಯಾಗಿ ಸಿಡಿದಿದ್ದ ಸಂಗೀತಾ-ವಿನಯ್ ನಡುವಿನ ಅಸಮಧಾನ ಕಿಚ್ಚಾಗಿ ಧಗಧಗಿಸಿದ್ದು ಎರಡನೇ ವಾರದ ಹಳ್ಳಿ ಟಾಸ್ಕ್‌ನಲ್ಲಿ. ಎರಡು ಕುಟುಂಬಗಳಾಗಿ ಆಡುವಾಗ ಒಂದು ಗುಂಪಿಗೆ ವಿನಯ್ ಮತ್ತೊಂದು ಗುಂಪಿಗೆ ಸಂಗೀತಾ ನೇತೃತ್ವ ವಹಿಸಿದ್ದರು. ಒಬ್ಬರು ತಯಾರಿಸಿದ ಸಾಮಗ್ರಿಗಳನ್ನು ಇನ್ನೊಬ್ಬರು ಹಾಳುಗೆಡವುವ ಚಟುವಟಿಕೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಮಾತಿನ ಬಾಣಗಳು ಎರಡೂ ಕಡೆಗಳಿಂದ ಹಾರಿದವು. ಆ ಹೊತ್ತಿನಲ್ಲಿ ವಿನಯ್ ‘ನಾವೇನೂ ಕೈಗೆ ಬಳೆ ತೊಟ್ಕೊಂಡಿಲ್ಲ’ ಎಂದು ಆಡಿದ ಮಾತು ಸಂಗೀತಾ ಅವರನ್ನು ಸಿಟ್ಟಿಗೆಬ್ಬಿಸಿತ್ತು. ಅದೇ ಹಟದಲ್ಲಿ ಅವರು ಇಡೀ ಟಾಸ್ಕ್ ಅನ್ನು ಕೈತುಂಬ ಬಳೆ ತೊಟ್ಟುಕೊಂಡೇ ಆಡಿದ್ದರು. ಅಲ್ಲದೆ ವಿನಯ್ ಜತೆಗೆ ಜಗಳವಾದಾಗಲೆಲ್ಲ ‘ನಾನು ಬಳೆ ತೊಟ್ಕೊಂಡಿದೀನಿ’ ಎಂದು ಎತ್ತಿತೋರಿಸಿದ್ದರು.

    ಈ ಬಳೆಯ ವಿವಾದ ಮನೆಯ ಹೊರಗೂ ಸಾಕಷ್ಟು ಸದ್ದು ಮಾಡಿತ್ತು. ಅಷ್ಟೇ ಅಲ್ಲ, ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿಯಲ್ಲಿಯೂ ಈ ವಿಷಯ ಚರ್ಚೆಗೊಳಗಾಗಿತ್ತು. ಸುದೀಪ್ ಅವರು ಆ ವಾರದ ಕಿಚ್ಚನ ಚಪ್ಪಾಳೆಯನ್ನು ‘ಬಳೆ’ಗೇ ಕೊಟ್ಟಿದ್ದರು. ಇದು ಸೋಷಿಯಲ್ ಮೀಡಿಯಾಗಳಲ್ಲಿ ಟ್ರೆಂಡ್ ಆಗಿತ್ತು. ಕೆಲವು ವಾರಗಳ ನಂತರ ಸಂಗೀತಾ, ತಮ್ಮ ಕಂಪರ್ಟ್ ಜೋನನ್ನು ಬಿಡಲು ನಿರ್ಧರಿಸಿ ವಿನಯ್ ತಂಡ ಸೇರಿಕೊಂಡರು. ಆಗ ವಿನಯ್ ಜೊತೆಗೆ ಚೆನ್ನಾಗಿಯೇ ಇದ್ದರು. ಆದರೆ ಮುಂದೆ ಅವರ ತಂಡದಿಂದ ಹೊರಬಿದ್ದಾಗ ಸಂಗೀತಾ ಜೊತೆಗಿನ ಘರ್ಷಣೆ ಮತ್ತೆ ಮುಂದುವರಿದಿತ್ತು.

    ಮುಂದೆ ರಕ್ಕಸರು, ಗಂಧರ್ವರು ಟಾಸ್ಕ್‌ನಲ್ಲಿಯೂ ವಿನಯ್ ಸಂಗೀತಾ ನಡುವೆ ಘರ್ಷಣೆ ಉಂಟಾಗಿತ್ತು. ಹೀಗೆ ಪದೇ ಪದೇ ಜಗಳವಾಡಿಕೊಳ್ಳುತ್ತಲೇ ಇದ್ದ ವಿನಯ್ ಮತ್ತು ಸಂಗೀತ ಯಾವತ್ತೂ ಸರಿಹೋಗುವುದಿಲ್ಲವೇನೋ ಅನಿಸುವಂತಿತ್ತು. ಆದರೆ ಶೈನ್ ಮತ್ತು ಶುಭಾ ಮನೆಯೊಳಗೆ ಬಂದಹೋದ ಮೇಲೆ ವಿನಯ್ ಬದಲಾದರು. ಅವರ ಅಗ್ರೆಶನ್ ಗಮನಾರ್ಹವಾಗಿ ಕಡಿಮೆಯಾಯಿತು. ಸಂಗೀತಾ ಜೊತೆಗಿನ ಸಂಬಂಧವೂ ಸಾಕಷ್ಟು ಸುಧಾರಿಸಿತು.ಕಳೆದ ಕೆಲವು ವಾರಗಳಲ್ಲಿ ಅವರಿಬ್ಬರೂ ಉತ್ತಮ ಸ್ನೇಹಿತರು ಎನ್ನುವಷ್ಟು ಹತ್ತಿರವಾಗಿದ್ದಾರೆ. ಪರಸ್ಪರ ಬೆನ್ನು ತಟ್ಟಿಕೊಂಡಿದ್ದಾರೆ.

    ಭಾವುಕ-ಸ್ನೇಹಪರ ವಿನಯ್:

    ವಿನಯ್ ಅವರ ಅಗ್ರೆಶನ್ ‘ವಿಲನ್’ ಮುಖದ ಹಿಂದೆ ಒಬ್ಬ ಸ್ನೇಹಪರ ವ್ಯಕ್ತಿಯಿದ್ದಾನೆ. ಪ್ರೀತಿಗೆ ಕರಗುವ, ಸ್ನೇಹಕ್ಕೆ ನಿಲ್ಲುವ ಮಗುಮನಸ್ಸಿನ ಮುಗ್ಧನಿದ್ದಾನೆ ಎಂಬುದೂ ಬಿಗ್ ಬಾಸ್ ಮನೆಯೊಳಗೆ ಹಲವು ಸಲ ಸಾಬೀತಾಗಿದೆ. ಹೆಂಡತಿ ಮತ್ತು ಮಗುವನ್ನು ನೆನೆಸಿಕೊಂಡಾಗೆಲ್ಲ ವಿನಯ್ ಕಣ್ಣುಗಳಲ್ಲಿ ನೀರು ಒಸರಿದೆ. ವೈಲ್ಡ್ ಕಾರ್ಡ ಎಂಟ್ರಿಯಲ್ಲಿ ಬಂದ ಪವಿ, ಹೊರಗೆ ನಿಮ್ಮ ಹೆಂಡತಿ, ಮಗ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದ್ದು ಕೇಳಿ ವಿನಯ್ ಬಾತ್‌ರೂಮಿನಲ್ಲಿ ಹೋಗಿ ಬಿಕ್ಕಿಬಿಕ್ಕಿ ಅತ್ತಿದ್ದರು.

    ಅದರಾಚೆಗೆ ಅವರು ಎಂದಿಗೂ ತಮ್ಮ ಸ್ನೇಹಿತರನ್ನು ಬಿಟ್ಟುಕೊಟ್ಟಿಲ್ಲ. ಮನೆಯೊಳಗೇ ಗೆಳೆಯರಾದ ಮೈಕಲ್, ನಮ್ರತಾ, ಸ್ನೇಹಿತ್, ರಕ್ಷಕ್ ಇವರಾರೂ ವಿನಯ್ ಬಗ್ಗೆ ಯಾವತ್ತೂ ಕೆಟ್ಟ ಮಾತುಗಳಾಡಿಲ್ಲ. ಕೆಲವೇ ದಿನಗಳ ಕಾಲ ಮನೆಯೊಳಗಿದ್ದು ವಿನಯ್ ಜೊತೆಗೆ ಒಡನಾಡಿದ ಪವಿ ಕೂಡ, ‘ವಿನಯ್ ಹೊರಗೆ ಕಂಡ ಹಾಗೆ ಇಲ್ಲ. ಅವರು ತುಂಬ ಒಳ್ಳೆಯವರು’ ಎಂದೇ ಹೇಳಿದ್ದರು. ನಮ್ರತಾ, ‘ನನಗೊಬ್ಬ ಅಣ್ಣ ಇಲ್ಲ ಎಂಬ ಕೊರತೆಯನ್ನು ವಿನಯ್ ನೀಗಿಸಿದ್ದಾರೆ’ ಎಂದು ಹೇಳಿದ್ದಾರೆ. ಮೈಕಲ್, ‘ವಿನಯ್ ನನ್ ಪ್ರೀತಿಯ ಮಗ’ ಎಂದು ಹೇಳಿ ಹೊರಗೆ ಹೋಗುವಾಗ ವಿಶೇಷಾಧಿಕಾರವನ್ನು ವಿನಯ್ ಅವರಿಗೇ ಕೊಟ್ಟು ಹೋಗಿದ್ದರು. ಸ್ನೇಹಿತ್ ಮರಳಿ ಮನೆಗೆ ಬಂದಾಗ ವಿನಯ್ ಗೆಲ್ಲಲೆಂದು ಪೂಜೆ ಮಾಡಿಸಿಕೊಂಡು ಬಂದ ತಾಯತ ಕೊಟ್ಟಿದ್ದರು.

    ‘ಬೃಂದಾವನ’ ಧಾರಾವಾಹಿ ತಂಡ ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾಗ ತಮ್ಮ ಮಗನನ್ನು ನೆನಪಿಸಿಕೊಂಡು ವಿನಯ್ ಕಣ್ಣೀರಾಗಿದ್ದರು. ವಿನಯ್ ಪತ್ನಿ ಅಕ್ಷತಾ ಬಿಗ್‌ಬಾಸ್ ಮನೆಗೆ ಭೇಟಿ ಕೊಟ್ಟಾಗ ವಿನಯ್ ಅಕ್ಷರಶಃ ಮಗುವಿನಂತಾಗಿಬಿಟ್ಟಿದ್ದರು. ಅವರ ಮಗನನ್ನು ಕಂಡು ಖುಷಿಯಿಂದ ಕುಣಿದಾಡಿದ್ದರು. ತಾವು ಅಕ್ಷತಾ ಅವರನ್ನು ನೋಡಿದ್ದು, ಮೆಚ್ಚಿದ್ದನ್ನು ನೆನಪಿಸಿಕೊಂಡು ಇಬ್ಬರೂ ಭಾವುಕರಾಗಿದ್ದರು.

    ಈ ಸೀಸನ್‌ನಲ್ಲಿ ಅರ್ಧದಾರಿಯನ್ನು ವಿಲನ್ ಆಗಿಯೇ ಕ್ರಮಿಸಿರುವ ವಿನಯ್ ಕೊನೆಯ ದಿನಗಳಲ್ಲಿ ಸಂಪೂರ್ಣ ಬದಲಾಗಿಬಿಟ್ಟಿದ್ದರು. ಮನಸಲ್ಲಿನ ಎಲ್ಲ ಕಹಿಗಳನ್ನೂ ಹೊರಹಾಕಿ ಎಲ್ಲರ ಕಡೆಗೂ ಸ್ನೇಹದ ಹಸ್ತ ಚಾಚಿದ್ದರು. ಯಾವತ್ತೂ ಇವರ ಜೊತೆ ಸ್ನೇಹ ಬಯಸುವುದಿಲ್ಲ ಎಂದು ಉರಿದುಕೊಂಡು ಹೇಳಿದ್ದ ಸಂಗೀತಾ ಅವರ ಕಡೆಗೂ ಸ್ನೇಹದ ಹಸ್ತ ಚಾಚಿದ್ದರು. ನಿಮ್ಮ ಆಸೆ ಏನು ಹೇಳಿ ಎಂಬ ಬಿಗ್ ಬಾಸ್ ಪ್ರಶ್ನೆಗೆ, ಮನೆಯ ಎಲ್ಲ ಸದಸ್ಯರೂ ಒಟ್ಟಿಗೇ ಕೂತು ಡಿನ್ನರ್ ಮಾಡಬೇಕು ಎಂದು ಹೇಳಿದ್ದರು.

    ಬಿಗ್ ಬಾಸ್ ಈ ಸೀಸನ್‌ನ ಆರಂಭದಲ್ಲಿದ್ದ ಕೋಪಿಷ್ಠ ವಿಲನ್ ವಿನಯ್ ಮಾಯವಾಗಿ ಪ್ರಬುದ್ಧ, ಸ್ನೇಹಪರ, ಮೃದು ಹೃದಯಿ, ಭಾವುಕ ಹೀರೋ ವಿನಯ್ ಜನರ ಮನಸಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ. ವಿಲನ್ ಟು ಹೀರೋ ಎಂದು ವಿನಯ್ ಅವರ ಈ ಜರ್ನಿಯನ್ನು ನಿಸ್ಸಂಶಯವಾಗಿ ಕರೆಯಬಹುದು. ಕಾರ್ತಿಕ್‌ಗೆ ಠಕ್ಕರ್ ಕೊಟ್ರು ಕೂಡ ವೋಟಿಂಗ್ ವಿಚಾರ, ಟಾಸ್ಕ್ ಸೇರಿದಂತೆ ಹಲವು ಕಡೆ ವಿನಯ್ ಎಡವಿದ್ದಾರೆ. ಆದರೆ ಗೆಲುವಿಗೆ ವಿನಯ್‌ಗೆ ಜಸ್ಟ್ ಮಿಸ್ ಆಗಿದೆ.