Tag: karthik mahesh

  • ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ

    ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ರಿ-ರಿಲೀಸ್ ಆಗಿದೆ. ಈ ಹಿನ್ನೆಲೆ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ‘ಅಪ್ಪು’ ಚಿತ್ರವನ್ನು ರಕ್ಷಿತಾ (Rakshita) ವೀಕ್ಷಿಸಿದ್ದಾರೆ. ಇದನ್ನೂ ಓದಿ:ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್

    ಇದೇ ಮಾ.17ರಂದು ಪುನೀತ್ ಹುಟ್ಟುಹಬ್ಬವಾಗಿದ್ದು, ಮೂರು ದಿನ ಮುಂಚಿತವಾಗಿ ‘ಅಪ್ಪು’ ಚಿತ್ರ ಮರು ಬಿಡುಗಡೆ ಆಗಿದೆ. ಅಭಿಮಾನಿಗಳೊಂದಿಗೆ ರಕ್ಷಿತಾ ‘ಅಪ್ಪು’ ಚಿತ್ರ ನೋಡಿ ರಂಜಿಸಿದ್ದಾರೆ. ಈ ವೇಳೆ, ಅರಸು, ಆಕಾಶ್ ಚಿತ್ರಗಳ ನಿರ್ದೇಶಕ ಮಹೇಶ್ ಬಾಬು ಕೂಡ ಸಾಥ್ ನೀಡಿದ್ದಾರೆ.

    ‘ಬಿಗ್ ಬಾಸ್’ ಸ್ಪರ್ಧಿಗಳಾದ ಕಿಶನ್, ರಕ್ಷಕ್ ಬುಲೆಟ್, ಕಾರ್ತಿಕ್ ಮಹೇಶ್ (Karthik Mahesh), ನಮ್ರತಾ ಗೌಡ (Namratha Gowda) ಕೂಡ ‘ಅಪ್ಪು’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮತ್ತೊಮ್ಮೆ ಪುನೀತ್ ಸಿನಿಮಾ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಪ್ಪು ಎಂಟ್ರಿಗೆ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಎಂಜಾಯ್ ಮಾಡಿದ್ದಾರೆ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ‘ಬಿಗ್ ಬಾಸ್’ ಕಾರ್ತಿಕ್ ಮಹೇಶ್ ಹೊಸ ಸಿನಿಮಾಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ‘ಬಿಗ್ ಬಾಸ್’ ಕಾರ್ತಿಕ್ ಮಹೇಶ್ ಹೊಸ ಸಿನಿಮಾಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್

    ನ್ನಡ ಚಿತ್ರರಂಗಕ್ಕೆ ಸದಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಆಶಯದೊಂದಿಗೆ ಬೆಂಗಳೂರಿನ ಉದ್ಯಮಿಯಾಗಿ ಅರವಿಂದ್ ವೆಂಕಟೇಶ್ ರೆಡ್ಡಿ ತಮ್ಮದೇ AVR ENTERTAINER ಎಂಬ ಬ್ಯಾನರ್ ಪ್ರಾರಂಭಿಸಿದ್ದಾರೆ. ಈ ಬ್ಯಾನರ್ ನಡಿ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಘೋಷಣೆ ಮಾಡಲಾಗಿದೆ. ಈ ಸಂಸ್ಥೆಯ ನಿರ್ಮಾಣದ ಚೊಚ್ಚಲ ಚಿತ್ರಕ್ಕೆ ಸಿಂಪಲ್ ಸುನಿ (Simple Suni) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:ಮಹಾ ಕುಂಭಮೇಳದಲ್ಲಿ ಭಾಗಿಯಾದ ‘ಕೆಜಿಎಫ್ 2’ ಕ್ವೀನ್‌

    ಕನ್ನಡ ಚಿತ್ರರಂಗದ ಭರವಸೆ ನಿರ್ದೇಶಕರಾಗಿರುವ ಸಿಂಪಲ್ ಸುನಿ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದಲ್ಲಿ ‘ರಿಚಿ ರಿಚ್’ (Richie Rich) ಎಂಬ ಟೈಟಲ್ ಸಿನಿಮಾ ಘೋಷಣೆಯಾಗಿದೆ. ಸುನಿ ಸಾರಥ್ಯದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಕಾರ್ತಿಕ್ ಮಹೇಶ್ (Karthik Mahesh) ಹೀರೋ ಆಗಿ ಆಯ್ಕೆಯಾಗಿದ್ದಾರೆ. ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾರ್ತಿಕ್ ನಟಿಸುತ್ತಿದ್ದಾರೆ. ಫನ್, ಫ್ಯಾಮಿಲಿ ಜೊತೆಗೆ ಎಮೋಷನಲ್ ಅಂಶಗಳನ್ನು ಬ್ಲೆಂಡ್ ಮಾಡಿ ಕಥೆಯನ್ನು ಸುನಿ ಕಟ್ಟಿಕೊಟ್ಟಿದ್ದಾರೆ. ‘ರಿಚಿ ರಿಚ್’ ಸಿನಿಮಾಗೆ ವೀರ್ ಸಮರ್ಥ್ ಸಂಗೀತ ನಿರ್ದೇಶನ, ಅಭಿಲಾಷ್ ಕಳತ್ತಿ ಛಾಯಾಗ್ರಹಣವಿರಲಿದೆ.

    AVR ENTERTAINER ಬ್ಯಾನರ್ ನಡಿ ಬರ್ತಿರುವ ಎರಡನೇ ಸಿನಿಮಾಗೆ ಸುಜಯ್ ಶಾಸ್ತ್ರಿ ನಿರ್ದೇಶಕರು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರಗಳನ್ನು ನಿರ್ದೇಶಿಸಿರುವ ಸುಜಯ್ ಈ ಬಾರಿ ಕ್ರೀಡಾ ಕಥೆಯನ್ನು ಹರವಿಡೋದಿಕ್ಕೆ ಹೊರಟಿದ್ದಾರೆ. ಪುಟ್ಭಲ್ ಕಥಾಹಂದರಯುಳ್ಳ ಈ ಚಿತ್ರದ ನಾಯಕ ಯಾರು? ಅನ್ನೋದನ್ನು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ಟೀಂ ರೆಡಿ ಇದೆ. ಕೋಚ್ ಯಾರು ಅನ್ನೋದನ್ನು ಸ್ಪಲ್ಪ ದಿನದಲ್ಲೇ ಹೇಳೋದಾಗಿ ಚಿತ್ರತಂಡ ತಿಳಿಸಿದೆ. ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಾಣದ ಈ ಎರಡು ಚಿತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

  • BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ ಕನ್ನಡ 11’ರ ಕಾರ್ಯಕ್ರಮಕ್ಕೆ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧನರಾಜ್ ಅವರು ರಜತ್‌ರನ್ನು ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರೂ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಗೆ ಆಗಮಿಸಿ ನಾಮಿನೇಷನ್ ಪಾಸ್ ಟಾಸ್ಕ್ ಮಾಡಿಸಿದರು. ಇದೀಗ ಇಂದಿನ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಆಗಮಿಸಿದ್ದಾರೆ. ಈ ವೇಳೆ ನಾಮಿನೇಷನ್ ಪ್ರಕ್ರಿಯೆ ಜರುಗಿದ್ದು, ಧನರಾಜ್ ಈ ಹಿಂದಿನ ಟಾಸ್ಕ್‌ ಕಾರಣ ಕೊಟ್ಟು ನಾಮಿನೇಟ್ ಮಾಡಿರೋದು ಕೋಪ ತರಿಸಿದೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್‌ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ

    ನನ್ನ ಹತ್ರ ಹೀಗೆಲ್ಲಾ ಆಟ ಆಡಬೇಡ. ನಿನಗೆ ಮಗು ಅಂತ ಹೇಳೋದು ಇದೇ ಕಾರಣಕ್ಕೆ ಎಂದು ಧನರಾಜ್‌ಗೆ ರಜತ್ ಟೀಕಿಸಿದ್ದಾರೆ. ಏ ಪಾಪು ಎನ್ನುತ್ತಾರೆ. ಅದಕ್ಕೆ ಅಂಕಲ್ ಅಂಕಲ್ ಎನ್ನುತ್ತಾ ಧನರಾಜ್ ತಿರುಗೇಟು ನೀಡಿದ್ದಾರೆ. ಮೈ ಮುಟ್ಟಿ ರಜತ್‌ನ್ನು ಮಾತನಾಡಿಸುತ್ತಾರೆ. ಈ ವೇಳೆ, ಇಬ್ಬರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಜಗಳ ತಪ್ಪಿಸಲು ಉಗ್ರಂ ಮಂಜು ಮಧ್ಯೆಕ್ಕೆ ಹೋಗಿದ್ದಾರೆ. ಆ ನಂತರ ಎನ್ ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

    ಮನೆಗೆ ಗೆಸ್ಟ್ ಆಗಿ ಬಂದಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಯಾವ ಟಾಸ್ಕ್ ಮಾಡಿಸುತ್ತಾರೆ. ಎನೆಲ್ಲಾ ತಿರುವು ಸಿಗಲಿದೆ ಎಂಬುದು ಕಾದುನೋಡಬೇಕಿದೆ.

  • ಸುದೀಪ್ ತಾಯಿ ಅಂತಿಮ ದರ್ಶನದಲ್ಲಿ ಭಾಗಿಯಾದ ‘ಬಿಗ್ ಬಾಸ್’ ಸ್ಪರ್ಧಿಗಳು

    ಸುದೀಪ್ ತಾಯಿ ಅಂತಿಮ ದರ್ಶನದಲ್ಲಿ ಭಾಗಿಯಾದ ‘ಬಿಗ್ ಬಾಸ್’ ಸ್ಪರ್ಧಿಗಳು

    ಸ್ಯಾಂಡಲ್‌ವುಡ್ ನಟ ಸುದೀಪ್ (Sudeep) ಅವರ ತಾಯಿಯ (Mother) ಅಂತಿಮ ದರ್ಶನ ಪಡೆಯಲು ಜೆಪಿ ನಗರದ ನಟನ ನಿವಾಸಕ್ಕೆ ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿಗಳು ಭೇಟಿ ನೀಡಿದ್ದಾರೆ. ಇದನ್ನೂ ಓದಿ:ಸರೋಜಕ್ಕ ಸಾಕ್ಷಾತ್ ಅನ್ನಪೂರ್ಣೇಶ್ವರಿ ಆಗಿದ್ದರು: ನಟ ಸುದೀಪ್ ತಾಯಿ ನಿಧನಕ್ಕೆ ಬೊಮ್ಮಾಯಿ ಸಂತಾಪ

    ಸುದೀಪ್ ತಾಯಿಯ ನಿಧನ ಸುದ್ದಿ ತಿಳಿಯುತ್ತಿದ್ದಂತೆ ನಟನ ಮನೆಗೆ ತೆರಳಿ ‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh), ವಿನಯ್ ಗೌಡ (Vinay Gowda), ಸಿರಿ, ತುಕಾಲಿ ಸಂತೋಷ್ ಸರೋಜಾ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅದಷ್ಟೇ ಅಲ್ಲ, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಆರ್ಯವರ್ಧನ್ ಗುರೂಜಿ, ರಂಜಿತ್ ಕೂಡ ಆಗಮಿಸಿದ್ದಾರೆ.

    ಅಂದಹಾಗೆ, ನ್ಯುಮೋನಿಯದಿಂದ ಬಳಲುತ್ತಿದ್ದ ಸುದೀಪ್ ತಾಯಿ ಇಂದು (ಅ.20) ಬೆಳಗ್ಗೆ ವಿಧಿವಶರಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಇನ್ನೂ ಇಂದು ಸಂಜೆ 7 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಸುದೀಪ್ ತಾಯಿಯ ಅಂತ್ಯಕ್ರಿಯೆ ನಡೆಯಲಿದೆ.

  • ಕೊನೆಗೂ ಕಾರ್ತಿಕ್ ಮಹೇಶ್ ಮನೆಗೆ ಬಂತು ಬಿಗ್ ಬಾಸ್ ಶೋನಲ್ಲಿ ಗೆದ್ದ ಕಾರು

    ಕೊನೆಗೂ ಕಾರ್ತಿಕ್ ಮಹೇಶ್ ಮನೆಗೆ ಬಂತು ಬಿಗ್ ಬಾಸ್ ಶೋನಲ್ಲಿ ಗೆದ್ದ ಕಾರು

    ‘ಬಿಗ್ ಬಾಸ್ ಕನ್ನಡ 10′ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಬಿಗ್ ಬಾಸ್ ಕನ್ನಡ 10 ಶೋ ಮುಗಿದು 7 ತಿಂಗಳ ನಂತರ ದೊಡ್ಮನೆ ಆಟದಲ್ಲಿ ಗೆದ್ದ ಕಾರು ಈಗ ಸಿಕ್ಕಿದೆ. ಈ ಕುರಿತು ನಟ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಬಿಗ್ ಬಾಸ್‌ನಲ್ಲಿ ಗೆದ್ದ ಸ್ಪರ್ಧಿಗೆ 50 ಲಕ್ಷ ರೂ. ನಗದು, ವಿನ್ನರ್ ಟ್ರೋಫಿಯನ್ನು ನೀಡಿದ್ದರು. ಇದರ ಜೊತೆಗೆ ಮಾರುತಿ ಸುಜುಕಿ ಬ್ರೇಝಾ ಕಾರು ಮತ್ತು ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿನ್ನರ್‌ಗೆ ನೀಡೋದಾಗಿ ಘೋಷಿಸಿದ್ದರು. ಇದೀಗ ಕೊಟ್ಟ ಮಾತಿನಂತೆ ಇಂದು (ಆ.28) ಬಿಗ್ ಬಾಸ್ ತಂಡವು ಕಾರ್ತಿಕ್‌ಗೆ ಮಾರುತಿ ಸುಜುಕಿ ಬ್ರೇಝಾ ಕಾರನ್ನು ಹಸ್ತಾಂತರಿಸಿದ್ದಾರೆ.

    ಮಾರುತಿ ಸುಜುಕಿ ಬ್ರೇಝಾ ಕಾರಿನ ಕುರಿತು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಅಂತು ಇಂತು ಬಂತು ಬಿಗ್ ಬಾಸ್ ಕಾರು’ ಎಂದು ಕಾರ್ತಿಕ್ ಬರೆದುಕೊಂಡಿದ್ದಾರೆ. ಕಾರು ಬಂದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಶಾರುಖ್ ಆಯ್ತು ಸಲ್ಮಾನ್ ಖಾನ್ ಜೊತೆ ಅಟ್ಲಿ ಹೊಸ ಸಿನಿಮಾ

    ಇನ್ನೂ ಸಾಮಾನ್ಯವಾಗಿ ಹೊಸ ಮಾರುತಿ ಸುಜುಕಿ ಬ್ರೇಝಾ ಕಾರು ಬುಕ್ ಮಾಡಿದ ಮೇಲೆ ಡೆಲಿವೆರಿ ಮಾಡೋಕೆ 6-7 ತಿಂಗಳು ಬೇಕಾಗುತ್ತದೆ. ಹಾಗಾಗಿ ಕಾರ್ತಿಕ್‌ಗೆ ಕಾರು ತಡವಾಗಿ ಸಿಕ್ಕಿದೆ. ಇನ್ನೂ ಸಿನಿಮಾ ವಿಚಾರಕ್ಕೆ ಬರೋದಾದ್ರೆ ‘ರಾಮರಸ’ ಚಿತ್ರದಲ್ಲಿ ಕಾರ್ತಿಕ್ ನಾಯಕನಾಗಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಹಲವು ಪ್ರಾಜೆಕ್ಟ್‌ಗಳಿವೆ.

  • ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ರಾಖಿ ಹಬ್ಬ ಆಚರಿಸಿದ ಸ್ಯಾಂಡಲ್‌ವುಡ್‌ ಸ್ಟಾರ್ಸ್

    ಹೋದರ ಮತ್ತು ಸಹೋದರಿಯರ ಬಂಧವನ್ನು ಸಾರುವ ರಕ್ಷಾ ಬಂಧನವನ್ನು (Raksha Bandhan 2024) ಸಿನಿಮಾ ತಾರೆಯರು ಕೂಡ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಯಶ್, ನಟಿ ರಾಗಿಣಿ, ಡಾಲಿ ಧನಂಜಯ ಸೇರಿದಂತೆ ಅನೇಕರು ಸೆಲೆಬ್ರೆಟ್ ಮಾಡಿದ್ದಾರೆ.

    ಪ್ರತಿ ವರ್ಷದಂತೆ ಈ ವರ್ಷವು ಕೂಡ ತಪ್ಪದೇ ರಾಖಿ ಹಬ್ಬವನ್ನು ಆಚರಿಸಿದ್ದಾರೆ. ಸಹೋದರಿ ನಂದಿನಿ ಅವರು ಅಣ್ಣ ಯಶ್‌ಗೆ (Yash) ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಅದಷ್ಟೇ ಅಲ್ಲ, ಯಶ್ ಮಕ್ಕಳು ಕೂಡ ರಕ್ಷಾ ಬಂಧನ ಸೆಲೆಬ್ರೆಟ್ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನು ನಟಿ ರಾಧಿಕಾ ಹಂಚಿಕೊಂಡಿದ್ದಾರೆ.

    ಸಂಗೀತಾ ಶೃಂಗೇರಿ (Sangeetha Sringeri) ಅವರು ಅಣ್ಣ ಸಂತೋಷ್ ಮತ್ತು ಅತ್ತಿಗೆ ಇಬ್ಬರಿಗೂ ರಾಖಿ ಕಟ್ಟಿ ಆರತಿ ಬೆಳಗಿದ್ದಾರೆ. ಇದನ್ನೂ ಓದಿ:ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ

    ಮುಂಬೈಗೆ ತೆರಳಿ ಸಹೋದರ ರುದ್ರಾಕ್ಷಗೆ ರಾಖಿ ಕಟ್ಟಿ ರಾಗಿಣಿ (Ragini Dwivedi) ಸಂಭ್ರಮಿಸಿದ್ದಾರೆ. ನಿನ್ನ ಮೇಲಿನ ನನ್ನ ಪ್ರೀತಿಯನ್ನು, ನಿನ್ನ ಬಗೆಗಿನ ನನ್ನ ಕಾಳಜಿಯನ್ನು, ನಿನಗಾಗಿ ನನ್ನ ರಕ್ಷಣೆಯನ್ನು, ನಿನ್ನನ್ನು ನನ್ನ ಜೀವನದಲ್ಲಿ ನನ್ನ ಸಹೋದರನಾಗಿ ಪಡೆದಿದ್ದಕ್ಕಾಗಿ ನನ್ನ ಶಾಶ್ವತ ಕೃತಜ್ಞತೆಯನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ವಯಸ್ಸಿನಲ್ಲಿ ನನಗಿಂತ ಚಿಕ್ಕವರಾಗಿರಬಹುದು. ಆದರೆ ಜೀವನದ ಪ್ರತಿ ಹಂತದಲ್ಲೂ ನೀವು ನನ್ನ ಶಕ್ತಿಯಾಗಿದ್ದೀರಿ, ನನಗೆ ಮಾರ್ಗದರ್ಶನ ನೀಡುವ ಶಕ್ತಿಯ ದಿಂಬು. ನಾನು ನಿನ್ನನ್ನು ಜಗತ್ತಿಗಿಂತ ಹೆಚ್ಚು ಪ್ರೀತಿಸುತ್ತೇನೆ ಎಂದು ಸಹೋದರನ ಜೊತೆಗಿನ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)

    ಸದಾ ನಗುತಿರು, ನಿನ್ನ ನಗುವೇ ನನಗೆ ಶ್ರೀರಕ್ಷೆ. ರಕ್ಷಾ ಬಂಧನದ ಶುಭಾಶಯಗಳು ಪುಟ್ಟಮ್ಮ ಎಂದು ಕಾರ್ತಿಕ್ ಮಹೇಶ್ (Karthik Mahesh) ತಂಗಿ ಜೊತೆಗಿನ ಫೋಟೋ ಶೇರ್ ಮಾಡಿ ಶುಭಕೋರಿದ್ದಾರೆ.

    ಇನ್ನೂ ‘ಕೋಟಿ’ ಸಿನಿಮಾದಲ್ಲಿ ಡಾಲಿ ಧನಂಜಯಗೆ (Daali Dhananjay) ತಂಗಿಯಾಗಿದ್ದ ನಟಿಸಿದ್ದ ಪೂಜಾ ಪ್ರಕಾಶ್‌ ಅವರು ಇದೀಗ ಡಾಲಿಗೆ ರಾಖಿ ಕಟ್ಟಿ ಹಬ್ಬದ ಆಚರಿಸಿದ್ದಾರೆ. ಅಕ್ಕ ತಂಗಿಯ ರಕ್ಷೆ ಎಂದು ಡಾಲಿ ಅಡಿಬರಹ ನೀಡಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

  • ‘ಧ್ರುವತಾರೆ’ ಸಿನಿಮಾದಲ್ಲಿ ವಿಲನ್‌ ಆದ ಕಾರ್ತಿಕ್ ಮಹೇಶ್

    ‘ಧ್ರುವತಾರೆ’ ಸಿನಿಮಾದಲ್ಲಿ ವಿಲನ್‌ ಆದ ಕಾರ್ತಿಕ್ ಮಹೇಶ್

    ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಮಹೇಶ್ (Karthika Mahesh) ಬಿಗ್ ಬಾಸ್ ಶೋ ಬಳಿಕ ‘ರಾಮರಸ’ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಬೆನ್ನಲ್ಲೇ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಹೊಸ ಸಿನಿಮಾದಲ್ಲಿ ವಿಲನ್ ಆಗಿ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಗೋಲ್ಡನ್ ಆಫರ್ ಕೈಚೆಲ್ಲಿದ ರಶ್ಮಿಕಾ ಮಂದಣ್ಣ

    ಪ್ರತೀಕ್ ನಟನೆಯ ‘ಧ್ರುವತಾರೆ’ (Dhruvataare) ಸಿನಿಮಾದಲ್ಲಿ ಕಾರ್ತಿಕ್ ಮಹೇಶ್‌ಗೆ ಉತ್ತಮ ಪಾತ್ರ ಸಿಕ್ಕಿದೆ. ವಿಲನ್ ಆಗಿ ನಟಿಸುತ್ತಿದ್ದರೂ ಕೂಡ ನಟನೆಗೆ ಸ್ಕೋಪ್ ಇರುವ ಪಾತ್ರ ಇದಾಗಿದೆ.

    ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪ್ರತೀಕ್ ಮತ್ತು ಮೌಲ್ಯ ದಂಪತಿ ಈಗ ಬೆಳ್ಳಿಪರದೆಯಲ್ಲೂ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಯುವನಟ ಪ್ರತೀಕ್ ಅವರೇ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

    ಬೆಂಗಳೂರು ಮತ್ತು ಸಕಲೇಶಪುರಲ್ಲಿ 70 ದಿನಗಳ ಶೂಟಿಂಗ್ ನೆರವೇರಿದ್ದು, ಸಿನಿಮಾದ ಮೊದಲ ಪೋಸ್ಟರ್ ಕೂಡ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಕಾರ್ತಿಕ್ ಸಿನಿಮಾದಲ್ಲಿ ವಿಲನ್ ಆಗಿ ನಟಿಸ್ತಾರೆ ಅಂತ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್‌ ಕಾಲೆಳೆದ ಕಿಚ್ಚ

    ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲಿ ಹೀರೋ ಹುಟ್ಟುತ್ತಾರೆ ಅದೇ ತಲೆನೋವು- ಕಾರ್ತಿಕ್‌ ಕಾಲೆಳೆದ ಕಿಚ್ಚ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಇದೀಗ ‘ರಾಮರಸ’ (Ramarasa Film) ಸಿನಿಮಾದ ಮೂಲಕ ಹೀರೋ ಆಗಿ ಬರುತ್ತಿದ್ದಾರೆ. ಇದೀಗ ಕಾರ್ತಿಕ್ ನಟನೆಯ ‘ರಾಮರಸ’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಈ ವೇಳೆ, ಬಿಗ್‌ ಬಾಸ್‌ ಪ್ರತಿ ಸೀಸನ್‌ನಲ್ಲೂ ಹೀರೋ ಹುಟ್ಟುತ್ತಾರೆ. ಅದೇ ನಮಗೆ ತಲೆ ನೋವು ಎಂದು ಕಾರ್ತಿಕ್‌ ಕಾಲೆಳೆದಿದ್ದಾರೆ ಸುದೀಪ್.‌

    ಗುರುರಾಜ್ ದೇಶಪಾಂಡೆ ನಿರ್ಮಾಣ ಮತ್ತು ಗಿರಿರಾಜ್ ನಿರ್ದೇಶನದ ‘ರಾಮರಸ’ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾರ್ತಿಕ್ ಮಹೇಶ್ ನಟಿಸಿದ್ದಾರೆ. ಸಿನಿಮಾದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಸುದೀಪ್ (Kiccha Sudeep) ಆಗಮಿಸಿ, ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಪೋಸ್ಟರ್ ಮಾಡಿದ ರೀತಿಗೆ ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ:‘ಪುಷ್ಪ 2’ ಜಾಗಕ್ಕೆ ‘ಡಬಲ್‌ ಇಸ್ಮಾರ್ಟ್‌’ ಎಂಟ್ರಿ- ರಿಲೀಸ್ ಡೇಟ್ ಫಿಕ್ಸ್

    ಈ ವೇಳೆ, ಬಿಗ್ ಬಾಸ್‌ನಲ್ಲಿ ಆಡಿದ ರೀತಿಗೆ ಕಾರ್ತಿಕ್‌ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಬಳಿಕ ಪ್ರತಿ ಸೀಸನ್‌ನಲ್ಲಿಯೂ ಹೀರೋ ಹುಟ್ಕೊತಾರೆಕ ಅದೇ ನಮ್ಮ ತಲೆನೋವು ಎಂದು ಕಾರ್ತಿಕ್‌ಗೆ ಸುದೀಪ್ ಕಾಲೆಳೆದಿದ್ದಾರೆ. ಇನ್ನೂ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ನಮ್ಮವ್ರ ಥರ ಇರುತ್ತಾರೆ. ಆದರೆ ನಮ್ಮವರಲ್ಲ. ಬಿಗ್ ಬಾಸ್ ಗೆಲ್ಲೋದು ಇದೆಯಲ್ವಾ ಬಹಳ ಕಷ್ಟ. ಆದರೆ ಗೆದ್ಮೇಲೆ ಜೀವನ ರೂಪಿಸಿಕೊಳ್ಳುವುದು ಕಮ್ಮಿ ಎಂದು ಮಾತನಾಡಿದ್ದಾರೆ.

    ಕಾರ್ತಿಕ್ ತುಂಬಾ ಸ್ಮಾರ್ಟ್ ಹುಡುಗ. ಕರೆಕ್ಟ್ ಟೈಮ್‌ನಲ್ಲಿ ಕರೆಕ್ಟ್ ಜಾಗದಲ್ಲಿ ಕಾರ್ತಿಕ್ ಇದ್ದಾರೆ. ಹೀರೋ ಫಸ್ಟ್ ಹೀರೋ ಆಗೋದನ್ನು ನಿಲ್ಲಿಸಬೇಕು. ಆಗ ಅವರು ಹೀರೋ ಆಗೋದು ಎಂದು ಕಾರ್ತಿಕ್‌ಗೆ ಸುದೀಪ್ ಸಲಹೆ ನೀಡಿದ್ದಾರೆ. ಬಳಿಕ ಕಾರ್ತಿಕ್ ನಟನೆಯ `ರಾಮರಸ’ ಚಿತ್ರಕ್ಕೆ ಸುದೀಪ್ ವಿಶ್‌ ಮಾಡಿದ್ದಾರೆ.

  • ವೋಟ್ ಮಾಡಿದ ಸ್ಯಾಂಡಲ್‌ವುಡ್ ನಟರು

    ವೋಟ್ ಮಾಡಿದ ಸ್ಯಾಂಡಲ್‌ವುಡ್ ನಟರು

    ಲೋಕಸಭಾ ಚುನಾವಣೆಯ ಮತದಾನ (Lok Sabha Election 2024) ಪ್ರಕ್ರಿಯೆಯಲ್ಲಿ ಭಾಗಿಯಾಗಿ ಸ್ಯಾಂಡಲ್‌ವುಡ್ ನಟರು (Sandalwood Actors) ವೋಟ್ ಮಾಡಿದ್ದಾರೆ. ಒಂದೊಂದು ಮತ ಕೂಡ ಅದೆಷ್ಟು ಮುಖ್ಯ ಎಂಬುದನ್ನು ಕಲಾವಿದರು ತಿಳಿಸಿದ್ದಾರೆ. ಹಾಗಾದ್ರೆ ಯಾರು ಎಲ್ಲಿ ವೋಟ್ ಮಾಡಿದ್ದಾರೆ ಇಲ್ಲಿದೆ ಮಾಹಿತಿ.

    ರಿಯಲ್ ಸ್ಟಾರ್ ಉಪೇಂದ್ರ ಕತ್ರಿಗುಪ್ಪೆ ಬಿಟಿಎಲ್ ವಿದ್ಯಾವಾಹಿನಿ ಶಾಲೆಯಲ್ಲಿ ವೋಟ್ ಮಾಡಿದ್ದಾರೆ. ಮತ ಹಾಕಿದರೆ ತುಂಬಾ ಒಳ್ಳೆಯದು. ಯಾಕೆಂದರೆ ನಾವು ರಾಜರ ರೀತಿ ಫೀಲ್ ಮಾಡುವ ದಿನವಿದು. ಈ ಒಂದು ದಿನ ಆಲಸ್ಯ ಬೇಡ ಎಂದು ಉಪೇಂದ್ರ ಯೂತ್ಸ್‌ಗೆ ಮನವಿ ಮಾಡಿದ್ದಾರೆ.

    ನವರಸ ನಾಯಕ ಜಗ್ಗೇಶ್ ತಮ್ಮ ಕುಟುಂಬದ ಜೊತೆ ಮಲ್ಲೇಶ್ವರಂನಲ್ಲಿ ಮತದಾನ ಮಾಡಿದ್ದಾರೆ. ಜಗ್ಗೇಶ್ ವೋಟ್ ಮಾಡಿದ ಬಳಿಕ ಮತದಾನ ಶ್ರೇಷ್ಠದಾನ ಎಂದು ಮಾತನಾಡಿದ್ದಾರೆ.

     

    View this post on Instagram

     

    A post shared by Hariprriya Simha (@iamhariprriya)

    ನಟ ವಸಿಷ್ಠ ಸಿಂಹ ಕನ್ನಡ ಮತ್ತು ಪರಭಾಷಾ ಸಿನಿಮಾಗಳ ಶೂಟಿಂಗ್ ಬಿಡುವು ಮಾಡಿಕೊಂಡು ಚಿಕ್ಕಲಸಂದ್ರ ಬೆನಕ ಸ್ಕೂಲ್‌ನಲ್ಲಿ ಮತದಾನ ಮಾಡಿದ್ದಾರೆ.

    ಕಿಚ್ಚ ಸುದೀಪ್ ತಮ್ಮ ಮಗಳು ಸಾನ್ವಿ ಜೊತೆ ಜೆಪಿ ನಗರದಲ್ಲಿ ಮತದಾನ ಮಾಡಿದ ಬಳಿಕ ತಪ್ಪದೇ ವೋಟ್ ಮಾಡಬೇಕು ಎಂದಿದ್ದಾರೆ.

    ಧ್ರುವ ಸರ್ಜಾ ಪತ್ನಿ ಪ್ರೇರಣಾ ಜೊತೆಗೆ ಆಗಮಿಸಿ ತ್ಯಾಗರಾಜನಗರದಲ್ಲಿ ಮತದಾನ ಮಾಡಿದ್ದಾರೆ. ಮುಂದೆ ಯಾರ ಸರ್ಕಾರ ಬರುತ್ತದೆ ಎಂದು ನೋಡೋಣ. ನನ್ನ ಕನಸಿನ ಭಾರತ ಹೇಗಿರಬೇಕು ಎಂದು ಹೇಳಿದರೆ ಕಾಂಟ್ರವರ್ಸಿ ಆಗುತ್ತದೆ. ಹಾಗಾಗಿ ಅದರ ಬಗ್ಗೆ ಮಾತನಾಡೋದು ಬೇಡ. ಜೈ ಶ್ರೀರಾಮ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಮಾತನಾಡಿದ್ದಾರೆ.

    ರಮೇಶ್ ಅರವಿಂದ್ ಪದ್ಮನಾಭನಗರದಲ್ಲಿ ಮತದಾನ ಮಾಡಿದ ಬಳಿಕ ಗೆಲುವು- ಸೋಲು ಸೆಕೆಂಡರಿ, ಇದು ಸಾಮಾಜಿಕ ಜವಾಬ್ದಾರಿ. ಒಂದು ಕುಟುಂಬ ವೋಟ್ ಮಾಡದಿದ್ರೆ ತುಂಬಾ ವ್ಯತ್ಯಾಸವಾಗುತ್ತದೆ ಎಂದಿದ್ದಾರೆ.

    ‘ಬಿಗ್ ಬಾಸ್ ಕನ್ನಡ 10’ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಮೈಸೂರಿನ ಶಾರದದೇವಿ ನಗರದ ಶಾಲೆಯೊಂದರಲ್ಲಿ ಮತದಾನ ಮಾಡಿದ್ದಾರೆ.

    ಸ್ಯಾಂಡಲ್‌ವುಡ್ ನಟ ಶರಣ್ ತಮ್ಮ ಪತ್ನಿ ಜೊತೆ ಹೊಸಕೆರೆಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ.

  • Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    Max: ಸಿನಿಮಾ ಸೆಟ್‌ನಲ್ಲಿ ಸುದೀಪ್‌ರನ್ನು ಭೇಟಿಯಾದ ಕಾರ್ತಿಕ್ ಮಹೇಶ್

    ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ (Bigg Boss Kannada 10) ಕಾರ್ತಿಕ್ ಮಹೇಶ್ (Karthik Mahesh) ಇದೀಗ ಕಿಚ್ಚ ಸುದೀಪ್‌ರನ್ನು ಭೇಟಿಯಾಗಿದ್ದಾರೆ. ಚೆನ್ನೈನಲ್ಲಿ ನಡೆಯುತ್ತಿರುವ ಸುದೀಪ್ ನಟನೆಯ ‘ಮ್ಯಾಕ್ಸ್’ (Max Film) ಸಿನಿಮಾ ಸೆಟ್‌ಗೆ ಕಾರ್ತಿಕ್ ಆಗಮಿಸಿದ್ದು, ಕಿಚ್ಚನ ಜೊತೆಯಿರುವ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.

    ದೊಡ್ಮನೆ ಆಟ ಮುಗಿದ ಮೇಲೆ ಸುದೀಪ್‌ರನ್ನು ಕಾರ್ತಿಕ್ ಮಹೇಶ್ ಭೇಟಿಯಾಗಿರಲಿಲ್ಲ. ಬಹುದಿನಗಳ ನಂತರ ಚೆನ್ನೈ ಮಹಾಬಲಿಪುರಂನಲ್ಲಿ ಸುದೀಪ್‌ರನ್ನು ಭೇಟಿಯಾಗಿ ಕೆಲ ಕಾಲ ಸಮಯ ಕಳೆದಿದ್ದಾರೆ. ‘ಮ್ಯಾಕ್ಸಿಮಮ್ ಲವ್’ ಎಂದು ಅಡಿಬರಹ ನೀಡಿ ಕಿಚ್ಚನ ಜೊತೆಗಿನ ಫೋಟೋ ಶೇರ್ ಮಾಡಿ ಕಾರ್ತಿಕ್ ಮಹೇಶ್ ಸಂಭ್ರಮಿಸಿದ್ದಾರೆ.

     

    View this post on Instagram

     

    A post shared by Karthik Mahesh (@karthi_mahesh)


    ಕಣ್ಣಿಗೆ ಸ್ಟೈಲೀಶ್ ಸನ್‌ಗ್ಲಾಸ್ ತೊಟ್ಟು ಸುದೀಪ್ ಸಖತ್ ಸ್ಮಾರ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಲುಕ್ ಲೀಕ್ ಆಗದೇ ಇರುವ ಹಾಗೇ ಎಚ್ಚರ ಕೂಡ ವಹಿಸಿದ್ದಾರೆ. ಇದನ್ನೂ ಓದಿ:ಚುನಾವಣೆ ಪ್ರಚಾರ ವೇಳೆ ‘ಡೆವಿಲ್’ ಡೈಲಾಗ್ ಹೊಡೆದ ದರ್ಶನ್

    ‘ವಿಕ್ರಾಂತ್‌ರೋಣ’ ಚಿತ್ರದ ನಂತರ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.